ಶ್ರೀ ಜೈಮಾತಾ ಕಂಬೈನ್ಸ್

ಶ್ರೀ ಜೈಮಾತಾ ಕಂಬೈನ್ಸ್ ಒಂದು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಣ ಸಂಸ್ಥೆ ಆಗಿದೆ. 2003 ರಲ್ಲಿ ಸಿನಿಮಾ ನಿರ್ಮಾಣವನ್ನು ಪ್ರಾರಂಭ ಮಾಡಿತು ಮತ್ತು ಕಂಪನಿಯು 2010 ರಲ್ಲಿ ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿತು. ಪ್ರಕಾಶ್ ಜಯರಾಮ್ ಅವರು ತಮ್ಮ ತಾಯಿ ಶ್ರೀಮತಿ ಜೆ.ಜಯಮ್ಮ ಅವರೊಂದಿಗೆ ಶ್ರೀ ಜೈಮಾತಾ ಕಂಬೈನ್ಸ್ ಅನ್ನು ಪ್ರಾರಂಭಿಸಿದರು.

ಶ್ರೀ ಜೈಮಾತಾ ಕಂಬೈನ್ಸ್
ಸಂಸ್ಥೆಯ ಪ್ರಕಾರಖಾಸಗಿ
ಜಾತಿಮನೋರಂಜನೆ
ಸ್ಥಾಪನೆ2003
ಸಂಸ್ಥಾಪಕ(ರು)ಪ್ರಕಾಶ್ ಜಯರಾಮ್ & ಜೆ.ಜಯಮ್ಮ
ಮುಖ್ಯ ಕಾರ್ಯಾಲಯಬೆಂಗಳೂರು, ಭಾರತ
ಉದ್ಯಮನಿರ್ಮಾಣ
ಉತ್ಪನ್ನಚಲನಚಿತ್ರಗಳು
ಧಾರಾವಾಹಿಗಳು
ಸೇವೆಗಳುಚಲನಚಿತ್ರ ನಿರ್ಮಾಣ
ಧಾರಾವಾಹಿ ನಿರ್ಮಾಣ
ಜಾಲತಾಣwww.shrijaimathacombines.com


ಸ್ಥಾಪನೆ

ಶ್ರೀ ಜಯಮಾತಾ ಕಂಬೈನ್ಸ್ 2003 ರಲ್ಲಿ ಚಲನಚಿತ್ರಗಳನ್ನು ನಿರ್ಮಾಣ ಮಾಡಲು ಪ್ರಾರಂಭ ಮಾಡಿತು. ಸಂಸ್ಥೆಯು 2010 ರಲ್ಲಿ ದೂರದರ್ಶನದಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿತು.

ಪ್ರಕಾಶ್ ಜಯರಾಮ್ 80 ಮತ್ತು 90 ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ ಸಿ.ಜಯರಾಮ್ ಅವರ ಪುತ್ರರಾಗಿದ್ದರು. ಲಂಡನ್ನಿಂದ ಎಂಬಿಎ ಪದವಿ ಪಡೆದು, ಕಾರ್ಪೊರೇಟ್ ಜಗತ್ತಿನಲ್ಲಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದ ಪ್ರಕಾಶ್ ಜಯರಾಮ್ ಅವರು ತಮ್ಮ ತಾಯಿ ಶ್ರೀಮತಿ ಜೆ ಜಯಮ್ಮ ಅವರೊಂದಿಗೆ ಶ್ರೀ ಜೈಮಾತಾ ಕಂಬೈನ್ಸ್ ಅನ್ನು ಪ್ರಾರಂಭಿಸಿದರು. ಅವರು ಆರಂಭದಲ್ಲಿ ಖುಷಿ ಚಿತ್ರವನ್ನು ನಿರ್ಮಿಸಲು ಹೊರಟರು, ಆದರೆ ಅಂತಿಮವಾಗಿ ಅದನ್ನು ಅವರೇ ನಿರ್ದೇಶಿಸಿದರು. ಖುಷಿ ಚಲನಚಿತ್ರವನ್ನು ಭರ್ಜರಿ ಯಶಸ್ಸನ್ನು ಕಂಡಿತು ಮತ್ತು ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರೈಸಿತು.

ರಿಷಿ, ಮಿಲನ, ವಂಶಿ ಮತ್ತು ತಾರಕ್ ಚಿತ್ರಗಳೊಂದಿಗೆ ಯಶಸ್ಸು ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ಮುಂದುವರಿಯಿತು. ಮಿಲನ ಸುಮಾರು ೪೫೦ ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಲಕುಮಿ ಧಾರಾವಾಹಿ ಮೂಲಕ ದೂರದರ್ಶನ ನಿರ್ಮಾಣಕ್ಕೆ ಈ ಸಂಸ್ಥೆಯು ಕಾಲ್ಟಿತ್ತು.

ಕಂಪೆನಿಯ ಇತಿಹಾಸ

ಈ ಕಂಪನಿಯು ಶ್ರೀ ಸಿ.ಜಯರಾಮ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ಸಪ್ತಸ್ವರ ಮೂವಿ ಮೇಕರ್ಸ್ ನ ವಿಸ್ತರಣೆಯಾಗಿದೆ. ಅವರು ಈ ಕೆಳಗಿನ ಚಿತ್ರಗಳನ್ನು ನಿರ್ಮಿಸಿದ್ದಾರೆ.

ವರ್ಷಚಲನಚಿತ್ರ(ಗಳು)ಕಲಾವಿದರುಇತರೆ ಟಿಪ್ಪಣಿಗಳು
1977ಪಾವನ ಗಂಗಾಶ್ರೀನಾಥ್, ಅಶೋಕ್ ಮತ್ತು ಆರತಿ
1977ಗಲಾಟೆ ಸಂಸಾರರಜನಿಕಾಂತ್, ವಿಷ್ಣುವರ್ಧನ್ ಮತ್ತು ಮಂಜುಳಾ
1979ನಾ ನಿನ್ನ ಬಿಡಲಾರೆಆನಂತ್ ನಾಗ್ ಮತ್ತು ಲಕ್ಷ್ಮೀ
1980ಆಟೋ ರಾಜಶಂಕರ್ ನಾಗ್, ಗಾಯತ್ರಿ ಮತ್ತು ತೂಗುದೀಪ ಶ್ರೀನಿವಾಸ್
1981ಅನುಪಮಅನಂತ್ ನಾಗ್ ಮತ್ತು ಮಾಧವಿ
1983ಕಾಮನಬಿಲ್ಲುಡಾ.ರಾಜ್‌ಕುಮಾರ್ ಮತ್ತು ಸರಿತಾ
1984ರಾಮಪುರದ ರಾವಣಅನಂತ್ ನಾಗ್ ಮತ್ತು ಗೀತಾ
?ರುದ್ರ ತಾಂಡವಬಾಲರಾಜ್

ನಿರ್ಮಾಣದ ಚಲನಚಿತ್ರಗಳು

ಕೀಲಿ
ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷಚಲನಚಿತ್ರ(ಗಳು)ನಿರ್ದೇಶಕಕಲಾವಿದರುಇತರೆ ಟಿಪ್ಪಣಿಗಳುRef.
2003ಖು‍ಷಿವಿಜಯ ರಾಘವೇಂದ್ರ, ಸಿಂಧೂ ಮೆನನ್
2005ರಿಷಿಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ ಮತ್ತು ರಾಧಿಕಾ ಕುಮಾರಸ್ವಾಮಿ
2007ಮಿಲನಪುನೀತ್ ರಾಜ್‌ಕುಮಾರ್ ಮತ್ತು ಪಾರ್ವತಿ
2009ಗೋಕುಲಯಶ್, ವಿಜಯ್ ರಾಘವೇಂದ್ರ ಮತ್ತು ಪೂಜಾ ಗಾಂಧಿ
2017ತಾರಕ್ದರ್ಶನ್ ತೂಗುದೀಪ್ ಶ್ರೀನಿವಾಸ್, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ ಮತ್ತು ದೇವರಾಜ್[೧]

ನಿರ್ಮಾಣದ ಧಾರಾವಾಹಿಗಳು

ಕೀಲಿ
ಇನ್ನೂ ಪ್ರಸಾರವಾಗದ ಧಾರಾವಾಹಿಗಳನ್ನುಸೂಚಿಸುತ್ತದೆ
ವರ್ಷಧಾರಾವಾಹಿ(ಗಳು)ನಿರ್ದೇಶಕಕಲಾವಿದರುವಾಹಿನಿಇತರೆ ಟಿಪ್ಪಣಿಗಳುRef.
2010-2012ಲಕುಮಿಸುವರ್ಣ
2010-2011ಬೊಂಬೆವಾಟವಯ್ಯಸುವರ್ಣ[೨]
2012-2013ಚುಕ್ಕಿಸುವರ್ಣ[೩]
ಕನಕಝೀ ಕನ್ನಡ
2013-2020ಲಕ್ಷ್ಮೀ ಬಾರಮ್ಮಕಲರ್ಸ್ ಕನ್ನಡ (ಈ ಟಿವಿ ಕನ್ನಡ)[೪] [೫]
2014ಕುಲವಧುಕಲರ್ಸ್ ಕನ್ನಡ (ಈ-ಟಿವಿ ಕನ್ನಡ)
2019-2022ನಮ್ಮನೇ ಯುವರಾಣಿಕಲರ್ಸ್ ಕನ್ನಡ
2020 - 2023ಕನ್ನಡತಿರಂಜನಿ ರಾಘವನ್, ಕಿರಣ್ ರಾಜ್, ಸಾರಾ ಅಣ್ಣಯ್ಯ ಮತ್ತು ಚಿತ್ತಕಲಾ ಬಿರದಾರ್ಕಲರ್ಸ್ ಕನ್ನಡ[೬]
2021 - 2022ದೊರೆಸಾನಿಕಲರ್ಸ್ ಕನ್ನಡ
2022 - ಪ್ರಸ್ತುತಭಾಗ್ಯಲಕ್ಷ್ಮೀಸುಷ್ಮಾ ಕೆ. ರಾವ್, ಪದ್ಮಜಾ ರಾವ್ ಮತ್ತು ಸುದರ್ಶನ್ ರಂಗ ಪ್ರಸಾದ್ಕಲರ್ಸ್ ಕನ್ನಡ[೭] [೮] [೯]
2023 - ಪ್ರಸ್ತುತಲಕ್ಷ್ಮೀ ಬಾರಮ್ಮ ೨ಕಲರ್ಸ್ ಕನ್ನಡ
2023 - ಪ್ರಸ್ತುತನಮ್ಮ ಲಚ್ಚಿವಿಜಯ್ ಸೂರ್ಯ, ನೇಹಾ ಗೌಡಸ್ಟಾರ್ ಸುವರ್ಣ
2024

ಲಕ್ಷ್ಮೀ ಟಿಫಿನ್ ರೂಮ್

ಸ್ಟಾರ್ ಸುವರ್ಣ[೧೦]

ಪ್ರಶಸ್ತಿಗಳು

  • ರಿಷಿ 2004-05: ಅತ್ಯುತ್ತಮ ನಿರ್ದೇಶಕ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಧ್ವನಿ ರೆಕಾರ್ಡಿಂಗ್.
  • ಮಿಲನಾ 2007: ಫಿಲ್ಮ್ ಫೇರ್ ಪ್ರಶಸ್ತಿಗಳು ದಕ್ಷಿಣ - ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಿನ್ನೆಲೆ ಗಾಯಕ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ.
  • ತಾರಕ್: ಫಿಲ್ಮ್ಫೇರ್ ಪ್ರಶಸ್ತಿಗಳು(2018) - ಅತ್ಯುತ್ತಮ ನಟ

ಸಾಧನೆಗಳು

  • ಲಕ್ಷ್ಮೀ ಬಾರಮ್ಮ ಧಾರಾವಾಹಿ ಏಳು ವರ್ಷಗಳ ಪ್ರಸಾರವಾಗಿತ್ತು.
  • ಕುಲವಧು ಐದು ವರ್ಷಗಳ ಪ್ರಸಾರವಾಗಿತ್ತು

ಉಲ್ಲೇಖಗಳು

ಬಾಹ್ಯಕೊಂಡಿಗಳು