ಸೀತಾ ರಾಮ

ಸೀತಾ ರಾಮ ಝೀ ಕನ್ನಡದಲ್ಲಿ ಪ್ರಸಾರವಾಗುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ː30ಕ್ಕೆ ಪ್ರಸಾರಗೊಳ್ಳುತ್ತಿದೆ. ಇದು 2023ರ ಜುಲೈ 17ಕ್ಕೆ ಪ್ರಥಮ ಪ್ರಸಾರಗೊಂಡಿತು.[೧][೨] ಈ ಕಾರ್ಯಕ್ರಮವು ಝೀ ಮರಾಠಿ ಭಾಷೆಯ ಮಾಜಿ ತುಜಿ ರೇಶಿಮಗತ್ ಧಾರಾವಾಹಿಯ ಅಧಿಕೃತ ರಿಮೇಕ್ ಆಗಿದೆ.[೩][೪] ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮತ್ತು ರಿತು ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.[೫][೬]

ಸೀತಾ ರಾಮ
ಪ್ರೋಮಶನಲ್ ಟೈಟಲ್ ಕಾರ್ಡ್
ಶೈಲಿಮನೋರಂಜನೆ
ನಿರ್ದೇಶಕರುಸ್ವಪ್ನ ಕೃಷ್ಣಾ
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸರಣಿಗಳು1
ನಿರ್ಮಾಣ
ಕ್ಯಾಮೆರಾ ಏರ್ಪಾಡುಮಲ್ಟಿ ಕ್ಯಾಮೆರಾ
ಸಮಯ22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ17 ಜುಲೈ 2023 – ಪ್ರಸ್ತುತ

ಕಥಾ ಹಂದರ

ಕಥೆಯು ಸಿಂಗಲ್ ಮದರ್ ಸೀತಾ, ಅವಳ ಮಗಳು ಸಿಹಿ ಮತ್ತು ಅಗರ್ಭ ಶ್ರೀಮಂತ ರಾಮ್ ದೇಸಾಯಿ ನಡುವಿನ ಸಂಬಂಧವನ್ನು ತೋರಿಸುತ್ತದೆ. ಕಥೆಯು ಈ ಮೂವರ ಮಧ್ಯೆ ಸುತ್ತುತ್ತಾ ಇರುತ್ತದೆ.

ಸಿಹಿ ಎನ್ನುವ ಪುಟ್ಟ ಮಗಳ ಜೊತೆ ಸೀತಾ ಬದುಕುತ್ತಿದ್ದಾಳೆ. ಅವಳ ಗಂಡ ಯಾರು ಎಂದು ಯಾರಿಗು ಗೊತ್ತಿಲ್ಲ. ರಾಮ್ ಆಫೀಸ್‌ನಲ್ಲಿ ಸೀತಾ ಕೆಲಸ ಮಾಡುತ್ತಿದ್ದಾಳೆ. ರಾಮ್ ತನ್ನ ಬಾಸ್ ಎನ್ನೋದು ಸೀತಾ ಸೇರಿ ಅಲ್ಲಿರುವ ಯಾರಿಗೂ ಗೊತ್ತಿಲ್ಲ. ಆಫೀಸ್‌ನಲ್ಲಿ ನಡೆಯುತ್ತಿರುವ ಮೋಸವನ್ನು ಕಂಡು ಹಿಡಿಯಲು ರಾಮ್ ತಾನೊಬ್ಬ ಸಾಮಾನ್ಯ ಉದ್ಯೋಗಿ ಎಂಬ ಪೋಷಾಕು ತೊಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ಸಿಹಿಯಿಂದ ರಾಮ್ ಹಾಗು ಸ್ನೇಹಾ ಮಧ್ಯೆ ಪ್ರೀತಿ ಹುಟ್ಟತ್ತಾ ಎನ್ನುವುದೇ ಕಥೆಯಾಗಿದೆ. [೭]

ಪಾತ್ರವರ್ಗ

  • ವೈಷ್ಣವಿ ಗೌಡ[೮] : ಸೀತಾ ಪಾತ್ರದಲ್ಲಿ, ನಾಯಕಿಯಾಗಿ. ಸಿಹಿಯ ಅಮ್ಮನಾಗಿ.
  • ಗಗನ್ ಚಿನ್ನಪ್ಪ[೯]: ಶ್ರೀರಾಮ್ ದೇಸಾಯಿ ಪಾತ್ರದಲ್ಲಿ, ನಾಯಕನಾಗಿ.
  • ರಿತ್ತು ಸಿಂಗ್: ಸಿಹಿಯಾಗಿ, ಸೀತಾಳ ಮಗಳಾಗಿ.
  • ಪೂಜಾ ಲೋಕೇಶ್: ಭಾರ್ಗವಿ ದೇಸಾಯಿ ಪಾತ್ರದಲ್ಲಿ, ಖಳನಾಯಕಿಯಾಗಿ.
  • ಮುಖ್ಯಮಂತ್ರಿ ಚಂದ್ರು (ಸೂರಿಯಾ): ಸೂರ್ಯಪ್ರಕಾಶ್ ದೇಸಾಯಿ ಪಾತ್ರದಲ್ಲಿ. ರಾಮ್ ತಾತಾನಾಗಿ.
  • ಅಶೋಕ್ ಶರ್ಮಾ: ಅಶೋಕ್ ಪಾತ್ರದಲ್ಲಿ, ರಾಮ್ ಸ್ನೇಹಿತನಾಗಿ.
  • ಮೇಘನಾ ಶಂಕರಪ್ಪ: ಪ್ರಿಯಾ ಪಾತ್ರದಲ್ಲಿ, ಸೀತಾ ಸ್ನೇಹಿತೆಯಾಗಿ

ರೂಪಾಂತರಗಳು

ಭಾಷೆ.ಶೀರ್ಷಿಕೆಮೂಲ ಬಿಡುಗಡೆವಾಹಿನಿ(ಗಳು)ಕೊನೆಯ ಪ್ರಸಾರಟಿಪ್ಪಣಿಗಳು
ಮರಾಠಿ ಮಾಜಿ ತುಜಿ ರೇಶಿಮಗತ್



माझी तुझी रेशीमगाठ
23 ಆಗಸ್ಟ್ 2021ಝೀ ಮರಾಠಿ22 ಜನವರಿ 2023ಮೂಲ
ಕನ್ನಡಸೀತಾ ರಾಮ



Seetha Raama
17 ಜುಲೈ 2023ಝೀ ಕನ್ನಡಪ್ರಸಾರವಾಗುತ್ತಿದೆರೀಮೆಕ್
ಒಡಿಯಾಶ್ರೀ
ଶ୍ରୀ
22 ಜನವರಿ 2024ಝೀ ಸಾರ್ಥಕ್

ಉಲ್ಲೇಖಗಳು

ಬಾಹ್ಯ ಕೊಂಡಿಗಳು