ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಕಸ್ಟಮ್ಸ್ ಮತ್ತು ವಲಸೆ ಸೌಲಭ್ಯಗಳನ್ನು ಒದಗಿಸುವ ವಿಮಾನ ನಿಲ್ದಾಣವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಡೊಮೆಸ್ಟಿಕ್ ನಿಲ್ದಾಣಗಳಿಗಿಂತ ದೊಡ್ಡವಾಗಿರುತ್ತವೆ ,ಮತ್ತು ಅಂತಾರಾಷ್ಟ್ರೀಯ ಮತ್ತು ಖಂಡಾಂತರ ಪ್ರಯಾಣಕ್ಕೆ ಬಳಸುವ ಭಾರವಾದ ವಿಮಾನಕ್ಕೆ ಬೇಕಾಗುವ ಉದ್ದವಾದ ಓಡುದಾರಿಗಳನ್ನು ಹೊಂದಿರುತ್ತದೆ . ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಸಾಮಾನ್ಯವಾಗಿ ಡೊಮೆಸ್ಟಿಕ್ ಪ್ರಯಾಣ ಸೌಲಭ್ಯಗಳನ್ನು ಒದಗಿಸುತ್ತದೆ.

ಸ್ಯಾನ್ ಫ್ರಾನ್ಸಿಸ್ಕೋ ಅಂತರರಾಷ್ಟ್ರೀಯ ವಿಮಾನನಿಲ್ದಾಣ ರಾತ್ರಿ ನಿಲುಗಡೆ ವಿಮಾನಗಳು

ಇತಿಹಾಸ

ಕ್ವಾಂಟಾಸ್ ಎಂಪಾಯರ್ ಏರ್ವೇಸ್ ಇಂಟರ್ನ್ಯಾಷನಲ್ ಹಾರುವ ರೋಸ್ ಬೇ, ಸಿಡ್ನಿ (c.1939)

ಆಗಸ್ಟ್ 1919 ರಲ್ಲಿ, ಹೌನ್ಸ್ಲೋನಲ್ಲಿ ಹೀತ್ ಏರೋಡ್ರೋಮ್, ಲಂಡನ್, ಇಂಗ್ಲೆಂಡ್ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಸೇವೆಗಳನ್ನು ಒದಗಿಸಿದ ಮೊದಲ ವಿಮಾನ ನಿಲ್ದಾಣವಾಗಿತ್ತು ಮತ್ತು 1928 ರಲ್ಲಿ ಅಮೆರಿಕದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಿಸಬೇ-ಡೋಗ್ಲಾಸ್ , ಅರಿಜೋನಾದಲ್ಲಿ ಆರಂಭವಾಯಿತು .[೧] ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನಗ ಳಿಗಿಂತ ಮೊದಲು ವಾಯುನೆಲೆ ಅಥವಾ ಏರೋಡ್ರೋಮ್ ಇದ್ದವು .

ಕಸ್ಟಮ್ಸ್ ಮತ್ತು ವಲಸೆ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶ ಕಸ್ಟಮ್ಸ್ ಮತ್ತು ವಲಸೆ ಸೌಲಭ್ಯಗಳನ್ನು ಹೊಂದಿರುತ್ತವೆ.ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಉನ್ನತ ಮಟ್ಟದ ಭೌತಿಕ ಭದ್ರತೆ ಇರುತ್ತದೆ.[೨]

ಸೇವೆಗಳು ಮತ್ತು ಸೌಲಭ್ಯಗಲು

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಾರ್ವಜನಿಕ ಶೌಚಾಲಯಗಳು,ಪ್ರಯಾಣಿಕರ ಕಾಯುವ ಕೊಠಡಿ ,ಊಟದ ಮತ್ತು ಶಾಪಿಂಗ್ ಚಿಲ್ಲರೆ ಅಂಗಡಿಗಳು,ಸುಂಕಮಾಫಿ ಮಳಿಗೆಗಳು ,ವೈ-ಫೈ ಸೇವೆ,ಕರೆನ್ಸಿ ವಿನಿಮಯ, ಪ್ರವಾಸೋದ್ಯಮ ಸಲಹೆ ಕಚೇರಿಗಳು, ವಿಮಾನ ಸೇವೆಯ ಲಭ್ಯತೆ ಡೆಸ್ಕ್ ,ಹೋಟೆಲುಗಳು,ನಿದ್ರೆ ಮತ್ತು ವಿಶ್ರಾಂತಿ ಕೊಠಡಿ ಸೌಲಭ್ಯವನ್ನು ಒದಗಿಸುತ್ತದೆ

ಉಲ್ಲೇಖಗಳು