ಅದಿರು

ಅದಿರು ಲೋಹಗಳನ್ನು ಒಳಗೊಂಡಂತೆ ಪ್ರಮುಖ ಮೂಲಧಾತುಗಳಿರುವ ಸಾಕಷ್ಟು ಖನಿಜಗಳನ್ನು ಹೊಂದಿರುವ ಒಂದು ಬಗೆಯ ಬಂಡೆ. ಅದಿರಿನಿಂದ ಖನಿಜಗಳನ್ನು ಮಿತವ್ಯಯವಾಗಿ ಹೊರತೆಗೆಯಬಹುದು.[೧] ಅದಿರುಗಳನ್ನು ಗಣಿಗಾರಿಕೆ ಮೂಲಕ ಭೂಮಿಯಿಂದ ಹೊರತೆಗೆಯಲಾಗುತ್ತದೆ; ಅವನ್ನು ನಂತರ ಸಂಸ್ಕರಿಸಿ (ಹಲವುವೇಳೆ ಸ್ಮೆಲ್ಟಿಂಗ್ ಮೂಲಕ) ಅಮೂಲ್ಯ ಮೂಲಧಾತು, ಅಥವಾ ಮೂಲಧಾತುಗಳನ್ನು ಹೊರತೆಗೆಯಲಾಗುತ್ತದೆ.

ಕಬ್ಬಿಣದ ಅದಿರು (ಪಟ್ಟಿಗಳುಳ್ಳ ಕಬ್ಬಿಣ ರಚನೆ)

ಅದಿರು ಖನಿಜ, ಅಥವಾ ಲೋಹದ ದರ್ಜೆ ಅಥವಾ ಸಂಗ್ರಹರಾಶಿ, ಜೊತೆಗೆ ಅದು ದೊರಕುವ ರೂಪವು ನೇರವಾಗಿ ಅದಿರಿನ ಗಣಿಗಾರಿಕೆಗೆ ಸಂಬಂಧಿಸಿದ ವೆಚ್ಚಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ, ಯಾವ ಅದಿರನ್ನು ಸಂಸ್ಕರಿಸಬಹುದು ಮತ್ತು ಗಣಿಗಾರಿಕೆಗೆ ಯೋಗ್ಯವಾಗದಿರಲು ಯಾವ ಅದಿರಿನ ದರ್ಜೆ ಬಹಳ ಕೆಳಗಿನದು ಎಂಬುದನ್ನು ನಿರ್ಧರಿಸಲು ಹೊರತೆಗೆಯುವಿಕೆಯ ವೆಚ್ಚವನ್ನು ಬಂಡೆಯಲ್ಲಿರುವ ಲೋಹದ ಮೌಲ್ಯದೊಡನೆ ತೂಗಬೇಕು. ಲೋಹ ಅದಿರುಗಳು ಸಾಮಾನ್ಯವಾಗಿ ಆಕ್ಸೈಡ್‍ಗಳು, ಸಲ್ಫೈಡ್‍ಗಳು, ಸಿಲಿಕೇಟ್‍ಗಳು, ಭೂಮಿಯ ಹೊರಪದರದಲ್ಲಿ ಸಾಧಾರಣವಾಗಿ ಒಂದೆಡೆ ದೊರಕದ ಅಸಂಯೋಜಿತ ಲೋಹಗಳು (ಉದಾ. ಅಸಂಯೋಜಿತ ತಾಮ್ರ), ಅಥವಾ ಚಿನ್ನದಂತಹ ಶ್ರೇಷ್ಠ ಲೋಹಗಳು (ಸಾಮಾನ್ಯವಾಗಿ ಸಂಯುಕ್ತಗಳನ್ನು ರಚಿಸದ) ಆಗಿರುತ್ತವೆ. ಅದಿರು ಕಾಯಗಳು ವಿವಿಧ ಭೂವೈಜ್ಞಾನಿಕ ಪ್ರಕ್ರಿಯೆಗಳಿಂದ ರೂಪಗೊಳ್ಳುತ್ತವೆ. ಅದಿರು ರಚಿಸುವಿಕೆಯ ಪ್ರಕ್ರಿಯೆಯನ್ನು ಅದಿರು ಉತ್ಪತ್ತಿ ಎಂದು ಕರೆಯಲಾಗುತ್ತದೆ.

ಅದಿರು ನಿಕ್ಷೇಪವು ಅದಿರಿನ ಶೇಖರಣೆ. ಇದು ಖನಿಜ ಸಂಪನ್ಮೂಲ ವರ್ಗೀಕರಣ ಮಾನದಂಡದಿಂದ ವ್ಯಾಖ್ಯಾನಿಸಿದಂತೆ ಒಂದು ಖನಿಜ ಸಂಪನ್ಮೂಲದಿಂದ ಭಿನ್ನವಾಗಿದೆ. ಅದಿರು ನಿಕ್ಷೇಪವು ಒಂದು ನಿರ್ದಿಷ್ಟ ಅದಿರು ಪ್ರಕಾರದ ದೊರಕುವಿಕೆ. ಬಹುತೇಕ ಅದಿರು ನಿಕ್ಷೇಪಗಳನ್ನು ಅವುಗಳ ನೆಲೆಗಳ ಪ್ರಕಾರ (ಉದಾ. ವಿಟ್ಸ್‌ವಾಟರ್‍ಸ್ರ್ಯಾಂಡ್, ದಕ್ಷಿಣ ಆಫ್ರಿಕಾ), ಅಥವಾ ಒಬ್ಬ ಪರಿಶೋಧಕನ ಹೆಸರಿನಿಂದ (ಕಂಬಾಲ್ಡಾ ನಿಕಲ್ ಅದಿರು ನಿಕ್ಷೇಪಗಳು), ಅಥವಾ ಯಾವುದೋ ಹುಚ್ಚಾಟಿಕೆಯಿಂದ, ಐತಿಹಾಸಿಕ ವ್ಯಕ್ತಿ, ಪ್ರಮುಖ ವ್ಯಕ್ತಿಯಿಂದ, ಪುರಾಣದಿಂದ (ಫೀನಿಕ್ಸ್, ಕ್ರ್ಯಾಕನ್ ಇತ್ಯಾದಿ) ಅಥವಾ ಅದನ್ನು ಕಂಡುಹಿಡಿದ ಸಂಪನ್ಮೂಲ ಕಂಪನಿಯ ಸಂಕೇತ ನಾಮದಿಂದ (ಉದಾ. ಮೌಂಟ್ ಕೀತ್ ನಿಕೆಲ್‍ಗೆ ಎಮ್‍ಕೆಡಿ-5) ಹೆಸರಿಸಲಾಗುತ್ತದೆ.

ಉಲ್ಲೇಖಗಳು