ಕನ್ನಡಿಗ

ಕನ್ನಡಿಗ ಸಾಮಾನ್ಯ ಬಳಕೆಯಲ್ಲಿ ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ವ್ಯಕ್ತಿ[೨]. ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದದಿದ್ದರೂ ಕರ್ನಾಟಕದಲ್ಲಿಯೆ ಹುಟ್ಟಿ ಬೆಳೆದವರು ಅಥವಾ ಕರ್ನಾಟಕಕ್ಕೆ ಬೇರೆ ಕಡೆಯಿಂದ ವಲಸೆ ಬಂದು ಇಲ್ಲೆಯೆ ಬೇರೂರಿ ಸ್ವಾಭಾವಿಕ ನಿವಾಸಿಗಳಾಗಿರುವರನ್ನೂ ಕೂಡ ಕನ್ನಡಿಗರೆಂದು ಕರೆಯಲಾಗುತ್ತದೆ. ಸರೋಜಿನಿ ಮಹಿಷಿ ವರದಿಯೆಂತೆ ೧೫ವರ್ಷ ಕರ್ನಾಟಕದಲ್ಲಿ ನೆಲಸಿ, ಕನ್ನಡ ಭಾಷೆಯಲ್ಲಿ ವ್ಯವಹರಿಸಬಲ್ಲ ಮತ್ತು ಅನಕ್ಷರಸ್ಥರಲ್ಲದ ಪಕ್ಷದಲ್ಲಿ ಕನ್ನಡವನ್ನು ಓದಿ ಬರೆಯಬಲ್ಲವರನ್ನು ಕನ್ನಡಿಗರೆಂದು ಪರಿಗಣಿಸಬಹುದು. ಕನ್ನಡ ನಾಡು ಮತ್ತು ನುಡಿಯನ್ನು ತನ್ನದೆಂದು ತಿಳಿದಿರುವವರೆಲ್ಲ ಕನ್ನಡಿಗರು ಎಂಬ ವಿಚಾರ ಕೂಡ ಇದೆ. ಕನ್ನಡಿಗರು ಪ್ರಮುಖವಾಗಿ ತಮ್ಮ ನಾಡಾದ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವರು (ಸುಮಾರು ೭೦%). ಗೋವಾ, ಮಹಾರಾಷ್ಟ್ರ, ತಮಿಳು ನಾಡು ಹಾಗು ಇತರ ನೆರೆ ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಕನ್ನಡಿಗರ ಜನಸಂಖ್ಯೆ ಕಾಣಸಿಗುವುದು. ಅಮೇರಿಕಾ ಮತ್ತು ಯುರೋಪಿನ ದೇಶಗಳಲ್ಲಿ (ಮುಖ್ಯವಾಗಿ ಇಂಗ್ಲೆಂಡಿನಲ್ಲಿ) ಗಮನೀಯ ಸಂಖ್ಯೆಯಲ್ಲಿ ಕನ್ನಡಿಗರು ನೆಲಸಿರುವರು.

ಕನ್ನಡಿಗರು
ಕನ್ನಡದ ಧ್ವಜ
ಒಟ್ಟು ಜನಸಂಖ್ಯೆ
37,924,011 (2001)[೧]
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
 ಭಾರತ37,924,011[೧]
ಭಾಷೆಗಳು
ಕನ್ನಡ
ಧರ್ಮ
ಹಿಂದು
ಸಂಬಂಧಿತ ಜನಾಂಗೀಯ ಗುಂಪುಗಳು
ದ್ರಾವಿಡ ಭಾಷೆಗಳು  · ತುಳುವರು  · ಕೊಂಕಣಿ  · ಕೊಡವರು

ಇತಿಹಾಸ

ಕಲೆ

ಸಂಸ್ಕೃತಿ

ಉಲ್ಲೇಖ