ಕಾಡ್ ಮೀನು

ಕಾಡ್ ಮೀನು ಗ್ಯಾಡಿಡೀ ಕುಟುಂಬಕ್ಕೆ ಸೇರಿದ ಗೇಡಸ್ ಎಂಬ ವೈಜ್ಞಾನಿಕ ನಾಮದ ಮೀನುಗಳಿಗೆ ಇರುವ ಸಾಮಾನ್ಯವಾದ ಹೆಸರು. ಇದರಲ್ಲಿ ಸುಮಾರು ೩೦ ಪ್ರಭೇದಗಳಿವೆ.

ಆಟ್ಲಾಂಟಿಕ್ ಕಾಡ್ ಮೀನು

ಪ್ರಮುಖ ಪಂಗಡಗಳು

ಇದರಲ್ಲಿ ಮೂರು ಮುಖ್ಯ ಪಂಗಡಗಳನ್ನು ಗುರುತಿಸಿದ್ದಾರೆ.ಅವುಗಳ ಹೆಸರು ಮತ್ತು ಲಕ್ಷಣಗಳು ಕೆಳಗಿನಂತಿವೆ.


"ಗೇಡಸ್" ಬಣದ ಪ್ರಮುಖ ಪ್ರಭೇದಗಳು:
ಸಾಮಾನ್ಯ ನಾಮವೈಜ್ಞಾನಿಕ ನಾಮಗರಿಷ್ಠ
ಉದ್ದ
ಸಾಮಾನ್ಯ
ಉದ್ದ
ಗರಿಷ್ಠ
ಭಾರ
ಗರಿಷ್ಠ
ಪ್ರಾಯ
Trophic
level
Fish
Base
FAOITISIUCN status
ಅಟ್ಲಾಂಟಿಕ್ ಕಾಡ್ ಮೀನುಗೇಡಸ್ ಮಾರ್‍ಹುವ Linnaeus, 1758200 cm100 cm96.0 kg25 years4.4[೧][೨][೩] Vulnerable[೪]
ಪೆಸಿಫಿಕ್ ಕಾಡ್ ಮೀನುಗೇಡಸ್ ಮಾಕ್ರೋಫಲಸ್ Tilesius, 1810119 cmcm22.7 kg18 years4.0[೫][೬][೭]Not assessed
ಗ್ರೀನ್‍ಲ್ಯಾಂಡ್ ಕಾಡ್ ಮೀನುಗೇಡಸ್ ಒಗಾಕ್ Richardson, 183677.0 cmcmkg12 years3.6[೮][೯][೧೦]Not assessed

ಭೌಗೋಳಿಕ ಹಂಚಿಕೆ

ಆಟ್ಲಾಂಟಿಕ್ ಕಾಡ್ ಮೀನುಗಳು ಉತ್ತರ ಅಟ್ಲಾಂಟಿಕ್ ಪ್ರದೇಶದ ಆಳ ಸಾಗರಗಳಲ್ಲಿ ಹೆಚ್ಚಿನ ಶೀತ ನೀರಿನಲ್ಲಿ ವಾಸಿಸುತ್ತವೆ. ಪೆಸಿಫಿಕ್ ಕಾಡ್ ಮೀನುಗಳು ಪೂರ್ವ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಸಂತಾನೋತ್ಪತ್ತಿ

ಅಟ್ಲಾಂಟಿಕ್ ಕಾಡ್ ಮೀನುಗಳು ಸುಮಾರು ೬೬೦ ಆಡಿ ಆಳ ಸಮುದ್ರದಲ್ಲಿ ಒಂದು ನಿರ್ದಿಷ್ಟ ಮೈದಾನದಲ್ಲಿ ಜನವರಿಯಿಂದ ಎಪ್ರಿಲ್ ತಿಂಗಳ ನಡುವೆ ಮೊಟ್ಟೆ ಇಡುತ್ತವೆ.೪ ಡಿಗ್ರಿಯಿಂದ ೬ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವು ಇದಕ್ಕೆ ಸೂಕ್ತವಾಗಿದೆ.

ಆಹಾರವಾಗಿ

The ಆಟ್ಲಾಂಟಿಕ್ ಕಾಡ್ ಮೀನು, ಗೇಡಸ್ ಮಾರ್‍ಹುವ

ಕಾಡ್ ಮೀನುಗಳು ಒಂದು ಉತ್ತಮ ಆಹಾರವಾಗಿದೆ.ಬಿಳಿಯ ಮೃದುವಾದ ಮಾಂಸ ಮತ್ತು ಸೌಮ್ಯ ಪರಿಮಳವನ್ನು ಹೊಂದಿದೆ.ಇದರ ಯಕೃತ್ತಿನಿಂದ ಪಡೆಯುವ ಕಾಡ್ ಲಿವರ್ ಎಣ್ಣೆಯು ವಿಟಮಿನ್ ಎ, ವಿಟಮಿನ್ ಡಿ ಮತ್ತು ವಿಟಮಿನ್ ಇ ಮತ್ತು ಇತರ ಕೆಲವು ಪೋಷಕಾಂಶಗಳ ಆಗರವಾಗಿದೆ.

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು