ಖಗೋಳ ಮಾನ

ಖಗೋಳ ಮಾನ (AU ಅಥವಾ au ಅಥವಾ ಖ.ಮಾ.) - ಒಂದು ಉದ್ದದ ಅಳತೆಯಾಗಿದ್ದು, ಇದು ಸುಮಾರು ಭೂಮಿ ಮತ್ತು ಸೂರ್ಯರ ನಡುವಿನ ದೂರಕ್ಕೆ ಸಮನಾಗಿದೆ. ಪ್ರಸ್ತುತದಲ್ಲಿ ಒಪ್ಪಿಗೆಯಲ್ಲಿರುವ ಖ.ಮಾ.ದ ಮೌಲ್ಯವು ೧೪೯ ೫೯೭ ೮೭೦ ೬೯೧ ± ೩೦ ಮೀಟರ್‌ಗಳು (ಸುಮಾರು ೧೫ ಕೋಟಿ ಕಿ.ಮೀ. ಅಥವಾ ೯.೩ ಕೋಟಿ ಮೈಲಿಗಳು).

ಉದಾಹರಣೆಗಳು

ಕೆಳಗಿನ ದೂರಗಳು ಅಂದಾಜಿನ ಸರಾಸರಿ ದೂರಗಳು. ಖಗೋಳಕಾಯಗಳ ನಡುವಿನ ದೂರವು ಅವುಗಳ ಕಕ್ಷೆ ಮತ್ತಿತರ ಅಂಶಗಳ ಕಾರಣದಿಂದ, ಸಮಯದೊಂದಿಗೆ ಬದಲಾಗುತ್ತದೆ ಎಂಬುದನ್ನು ಇಲ್ಲಿ ಗಮನದಲ್ಲಿಡಬೇಕು

  • ಭೂಮಿಯು ಸೂರ್ಯನಿಂದ ೧.೦೦ ± ೦.೦೨ ಖ.ಮಾ. ದೂರದಲ್ಲಿದೆ.
  • ಚಂದ್ರವು ಭೂಮಿಯಿಂದ ೦.೦೦೨೬ ± ೦.೦೦೦೧ ಖ.ಮಾ. ದೂರದಲ್ಲಿದೆ.
  • ಮಂಗಳ ಗ್ರಹವು ಸೂರ್ಯನಿಂದ ೧.೫೨ ± ೦.೧೪ ಖ.ಮಾ. ದೂರದಲ್ಲಿದೆ.
  • ಗುರು ಗ್ರಹವು ಸೂರ್ಯನಿಂದ ೫.೨೦ ± ೦.೦೫ ಖ.ಮಾ. ದೂರದಲ್ಲಿದೆ.
  • ಪ್ಲುಟೊ ಸೂರ್ಯನಿಂದ ೩೯.೫ ± ೯.೮ ಖ.ಮಾ. ದೂರದಲ್ಲಿದೆ.
  • ಕೈಪರ್ ಪಟ್ಟಿಯು ಸುಮಾರು ೩೫ ಖ.ಮಾ. ದೂರದಲ್ಲಿ ಆರಂಭವಾಗುತ್ತದೆ
  • ೪೫ ಖ.ಮಾ. - ಚದರಿದ ತಟ್ಟೆಯ ಪ್ರಾರಂಭ (ಇದರಲ್ಲಿ ೧೦ ಖ.ಮಾ. ಕೈಪರ್ ಪಟ್ಟಿಯ ಮೇಲೆ ಚಾಚಿದೆ)
  • ೫೦-೫೫ ಖ.ಮಾ. - ಕೈಪರ್ ಪಟ್ಟಿಯ ಕೊನೆ
  • ೯೦೩೭೭ ಸೆಡ್ನಾದ ಕಕ್ಷೆಯು ಸೂರ್ಯನಿಂದ ೭೬-೯೪೨ ಖ.ಮಾ. ದೂರಗಳ ವ್ಯಾಪ್ತಿಯಲ್ಲಿದೆ; ೨೦೦೬ರ ಪ್ರಕಾರ ಸೆಡ್ನಾ ಸೂರ್ಯನಿಂದ ೯೦ ಖ.ಮಾ. ದೂರದಲ್ಲಿದೆ.
  • ೯೪ ಖ.ಮಾ.: ಸೌರ ಮಾರುತ/ಅಂತರನಾಕ್ಷತ್ರಿಕ ಮಾರುತ/ಅಂತರ ನಾಕ್ಷತ್ರಿಕ ಮಾಧ್ಯಮಗಳ ನಡುವೆ ಆಘಾತ ತರಂಗ
  • ಆಗಸ್ಟ್ ೨೦೦೬ರ ಪ್ರಕಾರ, ಸೂರ್ಯನಿಂದ ೧೦೦ ಖ.ಮಾ. ದೂರದಲ್ಲಿರುವ ವಾಯೇಜರ್ ೧ ಗಗನ ನೌಕೆಯು ಅತಿ ದೂರದಲ್ಲಿರುವ ಮಾನವ ನಿರ್ಮಿತ ವಸ್ತುವಾಗಿದೆ.
  • ೧೦೦ ಖ.ಮಾ.: ಸೌರವೇಷ್ಟನ
  • ೧೦೦-೧೫೦ ಖ.ಮಾ.: ಚದರಿದ ತಟ್ಟೆಯ ಕೊನೆ
  • ೫೦೦-೩೦೦೦ ಖ.ಮಾ.: ಹಿಲ್ಸ್ ಮೋಡ/"ಒಳ ಊರ್ಟ್ ಮೋಡಗಳ ಪ್ರಾರಂಭ
  • ೨೦,೦೦೦ ಖ.ಮಾ: ಹಿಲ್ಸ್ ಮೋಡ/"ಒಳ ಊರ್ಟ್ ಮೋಡ"ಗಳ ಕೊನೆ, ಮತ್ತು "ಹೊರ ಊರ್ಟ್ ಮೋಡ"ದ ಪ್ರಾರಂಭ
  • ೫೦,೦೦೦ ಖ.ಮಾ.: "ಹೊರ ಊರ್ಟ್ ಮೋಡ"ದ ಹೊರ ಸೀಮೆಯ ಅಂದಾಜು ದೂರ (೧.೦ LY)
  • ೧೦೦,೦೦೦ ಖ.ಮಾ.: "ಹೊರ ಊರ್ಟ್ ಮೋಡ"ದ ಹೊರ ಸೀಮೆಯ ಅತಿ ಹೆಚ್ಚಿನ ಸಂಭಾವ್ಯ ದೂರ (೧.೬ LY).
  • ೧೨೫,೦೦೦ ಖ.ಮಾ.: ಸೂರ್ಯನ ಗುರುತ್ವ ಕ್ಷೇತ್ರದ ಪ್ರಭಾವದ ವ್ಯಾಪ್ತಿಯ ಕೊನೆ (ಹಿಲ್/ರೋಶೆ ಗೋಳ). ಇದರಾಚೆಗಿರುವುದು ಅಂತರನಾಕ್ಷತ್ರಿಕ ಆಕಾಶ
  • ಪ್ರಾಕ್ಸಿಮಾ ಸಂಟಾರಿಯು (ಅತಿ ಹತ್ತಿರದ ನಕ್ಷತ್ರ) ಸೂರ್ಯನಿಂದ ~೨೬೮ ೦೦೦ ಖ.ಮಾ. ದೂರದಲ್ಲಿದೆ.
  • ಬೆಟಲ್‌ಗೀಸ್ ನಕ್ಷತ್ರದ ಸರಾಸರಿ ವ್ಯಾಸ ೨.೫೭ ಖ.ಮಾ..
  • ಸೂರ್ಯನಿಂದ ಕ್ಷೀರಪಥದ ಕೇಂದ್ರಕ್ಕಿರುವ ದೂರವು ಸುಮಾರು ೧.೭×೧೦ ಖ.ಮಾ.

ಕೆಲವು ಪರಿವರ್ತನಾ ಅಪವರ್ತನಗಳು:

  • ೧ ಖ.ಮಾ. = ೧೪೯ ೫೯೭ ೮೭೦.೬೯೧ ± ೦.೦೩೦ ಕಿ.ಮೀ. ≈ ೯೨ ೯೫೫ ೮೦೭ ಮೈಲಿಗಳು ≈ ೮.೩೧೭ ಜ್ಯೋತಿ ನಿಮಿಷಗಳು ≈ ೪೯೯ ಜ್ಯೋತಿ ಕ್ಷಣಗಳು
  • ೧ ಜ್ಯೋತಿಕ್ಷಣ ≈ ೦.೦೦೨ ಖ.ಮಾ.
  • ೧ ಗಿಗಾ ಮೀಟರ್ ≈ ೦.೦೦೭ ಖ.ಮಾ.
  • ೧ ಜ್ಯೋತಿನಿಮಿಷ ≈ ೦.೧೨೦ ಖ.ಮಾ.
  • ೧ ಮೈಕ್ರೊ ಪಾರ್ಸೆಕ್ ≈ ೦.೨೦೬ ಖ.ಮಾ.
  • ೧ ಟೆರಾ ಮೀಟರ್ ≈ ೬.೬೮೫ ಖ.ಮಾ.
  • ೧ ಜ್ಯೋತಿಘಂಟೆ ≈ ೭.೨೧೪ ಖ.ಮಾ.
  • ೧ ಜ್ಯೋತಿದಿನ ≈ ೧೭೩.೨೬೩ ಖ.ಮಾ.
  • ೧ ಮಿಲಿ ಪಾರ್ಸೆಕ್ ≈ ೨೦೬.೨೬೫ ಖ.ಮಾ.
  • ೧ ಜ್ಯೋತಿಸಪ್ತಾಹ ≈ ೧೨೧೨.೮೪ ಖ.ಮಾ.
  • ೧ ಜ್ಯೋತಿರ್ಮಾಸ ≈ ೫೧೯೭.೯ ಖ.ಮಾ.
  • ಜ್ಯೋತಿರ್ವರ್ಷ ≈ ೬೩,೨೪೧ ಖ.ಮಾ.
  • ಪಾರ್ಸೆಕ್ ≈ ೨೦೬,೨೬೫ ಖ.ಮಾ.

ಇವನ್ನೂ ನೋಡಿ

ಉಲ್ಲೇಖಗಳು