ಗೂಗಲ್ ಡೂಡಲ್

ಗೂಗಲ್ ಡೂಡಲ್ ಎಂಬುದು ರಜಾದಿನಗಳು, ಘಟನೆಗಳು, ಸಾಧನೆಗಳು ಮತ್ತು ಜನರ ಬಗೆಗಿನ ವಿಚಾರಗಳನ್ನು ಆಧರಿಸಿ ಆಚರಿಸಲು ಉದ್ದೇಶಿಸಿರುವ ಗೂಗಲ್‍ನ ಮುಖಪುಟ. ಇದನ್ನು ಗಮನಿಸಿಕೊಂಡು ಗೂಗಲ್ ಲೋಗೋದ ವಿಶೇಷತೆಯನ್ನು, ತಾತ್ಕಾಲಿಕ ಬದಲಾವಣೆಗಳನ್ನು ಮಾಹಿತಿಯಾಗಿ ತಯಾರಿಸುವುದು. ಕೆಲವು ಸಂದರ್ಭಗಳಲ್ಲಿ ಸರ್ವರ್ಗಳು ಕುಸಿದಲ್ಲಿ ಅದರ ಅನುಪಸ್ಥಿತಿಯಲ್ಲಿ ಬಳಕೆದಾರರಿಗೆ ತಿಳಿಸಲು ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದರು. ೧೯೯೮ರಲ್ಲಿ ಬರ್ನಿಂಗ್ ಮ್ಯಾನ್ ಫೆಸ್ಟಿವಲ್ನ ಗೌರವಾರ್ಥವಾಗಿ ಮೊದಲ ಗೂಗಲ್ ಡೂಡಲ್ ರಚಿಸಲಾಯಿತು. ಡೂಡ್ಲರ್ಸ್ ಎಂದು ಕರೆಯಲ್ಪಡುವ ನೌಕರರ ತಂಡವು ಡೂಡಲ್ಗಳನ್ನು ಸಂಘಟಿಸಿ ಪ್ರಕಟಿಸುತ್ತದೆ.[೧][೨]

ಆಗಸ್ಟ್ 30, 1998 ರಂದು ಬಳಸಲಾದ ಬರ್ನಿಂಗ್ ಮ್ಯಾನ್ ಅನ್ನು ಆಚರಿಸುವ ಮೊಟ್ಟಮೊದಲ ಗೂಗಲ್ ಡೂಡಲ್.

 

ಹಿನ್ನಲೆ

ಆರಂಭದಲ್ಲಿ, ಡೂಡಲ್ಸ್ ಆನಿಮೇಟೆಡ್ ಅಥವಾ ಹೈಪರ್ಲಿಂಕ್ಡ್ ಆಗಿರಲಿಲ್ಲ-ಅದು ವಿಷಯವನ್ನು ವಿವರಿಸುವ ಅಥವಾ ರಜಾದಿನದ ಶುಭಾಶಯವನ್ನು ವ್ಯಕ್ತಪಡಿಸುವ ಹೊವೆರ್ ಟೆಕ್ಸ್ಟ್ ನೊಂದಿಗೆ ಸರಳವಾದ ಚಿತ್ರಗಳಿದ್ದವು. 2010 ರ ಆರಂಭದ ವೇಳೆಗೆ ಡ್ಯೂಡಲ್ಸ್ ಆವರ್ತನ ಮತ್ತು ಸಂಕೀರ್ಣತೆ ಎರಡರಲ್ಲೂ ಹೆಚ್ಚಾಯಿತು ಮತ್ತು 2010 ರ ಜನವರಿಯಲ್ಲಿ ಸರ್ ಐಸಾಕ್ ನ್ಯೂಟನ್ರನ್ನು[೩] ಗೌರವಿಸುವ ಮೊದಲ ಅನಿಮೇಟೆಡ್ ಡೂಡ್ಲ್ ಅನ್ನು ಪ್ರಕಟಿಸಲಾಯಿತು.ಗೂಗಲ್ ಅದರ ಮುಖಪುಟಗಳಲ್ಲಿ 2,000 ಕ್ಕಿಂತ ಹೆಚ್ಚು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಡೂಡಲ್ಗಳನ್ನು ಪ್ರಕಟಿಸಿದೆ. , ಇದರಲ್ಲಿ ಅತಿಥಿ ಕಲಾವಿದರು, ಸಂಗೀತಗಾರರು ಮತ್ತು ವ್ಯಕ್ತಿಗಳನ್ನು ಒಳಗೊಂಡಿದೆ .[೪][೫]

ಡೂಡ್ಲರ್ಸ್

Artist and "Doodler" Jennifer Hom has designed many Doodles throughout the years[೬]

ಗೂಗಲ್ ಡೂಡಲ್ಸ್ ವಿನ್ಯಾಸಗೊಳಿಸಿದ ಚಿತ್ರಕಾರರು, ಎಂಜಿನಿಯರ್ಗಳು ಮತ್ತು ಕಲಾವಿದರನ್ನು "ಡೂಡ್ಲರ್ಸ್" ಎಂದು ಕರೆಯಲಾಗುತ್ತದೆ. ಇವರಲ್ಲಿ ಡೂಡಲರ್ಗಳು ಎಕುವಾ ಹೋಮ್ಸ್, ಜೆನ್ನಿಫರ್ ಹೋಮ್ ಮತ್ತು ಡೆನ್ನಿಸ್ ಹ್ವಾಂಗ್ರಂತಹ ಪ್ರಮುಖರಾಗಿದ್ದಾರೆ.[೭] [೮][೯]

ಸಾಮಾನ್ಯ ವಿಷಯಗಳು

1998 ರಲ್ಲಿ ಡೂಡಲ್ನೊಂದಿಗೆ ಥ್ಯಾಂಕ್ಸ್ಗಿವಿಂಗ್ ರಜಾದಿನವನ್ನು ಗೂಗಲ್ ಮೊದಲು ಆಚರಿಸಿತು . ರಜಾದಿನಗಳು, ಘಟನೆಗಳು ಮತ್ತು ಇತರ ಆಚರಣೆಗಳಿಗಾಗಿ ಅನೇಕ ಡೂಡಲ್ಗಳು ಈ ಕೆಳಗಿನವುಗಳನ್ನು ಒಳಗೊಂಡಂತೆ ವಾರ್ಷಿಕ ಆಧಾರದ ಮೇಲೆ ಪುನರಾವರ್ತಿಸಿವೆ:

ಬಾಹ್ಯ ಕೊಂಡಿಗಳು

ಉಲ್ಲೇಖಗಳು