ಒಲಂಪಿಕ್ ಕ್ರೀಡಾಕೂಟ

ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ. ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು. ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮೂಲ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ನಂತರ ಕ್ರಿ.ಶ. ೩೯೩ರವರೆಗೆ ಇದು ಮುಂದುವರೆಯಿತು. ಕಾರಣಾಂತರಗಳಿಂದ ನಿಂತುಹೋದ ಈ ಕ್ರೀಡಾಕೂಟವನ್ನು ಮತ್ತೆ ಪುನರಾರಂಭಿಸುವುದರಲ್ಲಿ ಆಸಕ್ತಿ ತೋರಿದವನು ಗ್ರೀಸ್ ದೇಶದ ಕವಿ ಹಾಗೂ ಪತ್ರಿಕಾ ಸಂಪಾದಕನಾಗಿದ್ದ ಪನಾಜಿಯೋಟಿಸ್ ಸೌಟ್ಸಾಸ್ ಎಂಬವನು. ಮುಂದೆ ೧೮೫೯ರಲ್ಲಿ ಇವಾಂಜೆಲಾಸ್ ಝಪ್ಪಾಸ್ ಎಂಬುವವನು ನವೀನಕಾಲದ ಪ್ರಪ್ರಥಮ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ ವನ್ನು ಪ್ರಾಯೋಜಿಸಿದನು. ೧೮೯೪ರಲ್ಲಿ ಫ್ರಾನ್ಸ್ ದೇಶದ ಗಣ್ಯನಾದ ಬ್ಯಾರನ್ ಪಿಯರಿ ದ ಕೂಬರ್ತಿಯು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದನು. ಈ ಸಂಸ್ಥೆಯ ವತಿಯಿಂದ ಮೊದಲನೆಯ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸಲಾಯಿತು.https://www.penn.museum/sites/olympics/olympicorigins.shtml ಅಂದು ಕೆಲವೇ ರಾಷ್ಟ್ರಗಳು ಪಾಲ್ಗೊಂಡಿದ್ದ ಒಲಿಂಪಿಕ್ ಕ್ರೀಡಾಕೂಟ ಇಂದು ಹೆಚ್ಚೊಕಡಿಮೆ ವಿಶ್ವದ ಎಲ್ಲಾ ದೇಶಗಳೂ ಭಾಗವಹಿಸುವಷ್ಟರ ಮಟ್ಟಿಗೆ ಅಗಾಧವಾಗಿ ಬೆಳೆದಿದೆ. ಉಪಗ್ರಹ ಸಂಪರ್ಕದ ವ್ಯವಸ್ಥೆಯಿಂದಾಗಿ ಜಗತ್ತಿನ ಮೂಲೆಮೂಲೆಗಳಿಗೂ ಈ ಕೂಟದ ನೇರಪ್ರಸಾರ ಸಾಧ್ಯವಾಗಿದ್ದು ಒಲಿಂಪಿಕ್ ಕ್ರೀಡಾಕೂಟ ಇಂದು ಅಪಾರಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದೆ. ಅತ್ಯಂತ ಇತ್ತೀಚಿನ ಬೇಸಗೆಯ ಒಲಿಂಪಿಕ್ ಕ್ರೀಡಾಕೂಟ ೨೦೧೨ರಲ್ಲಿ ಲಂಡನ್ ನಗರದಲ್ಲಿ ಹಾಗೂ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟ ೨೦೧೦ರಲ್ಲಿ ಕೆನಡಾ ದ ವೆನ್‌ಕೂವರ್ ನಗರದಲ್ಲಿ ಆಯೂಜಿಸಲ್ಪಟ್ಟಿದ್ದವು. ಮುಂದಿನ ಬೇಸಗೆ ಕ್ರೀಡಾಕೂಟ ೨೦೧೬ ರಲ್ಲಿ ಬ್ರೆಜಿಲ್ ದೇಶದ ರಿಯೊ ಡಿ ಜನೈರೊ ನಲ್ಲಿ ನಡೆಯಲಿದೆ. ಮುಂದಿನ ಚಳಿಗಾಲದ ಕ್ರೀಡಾಕೂಟ ರಷ್ಯಾ ದೇಶದ ಸೋಚಿ ಯಲ್ಲಿ ೨೦೧೪ ರಲ್ಲಿ ನಡೆಯಲಿದೆ.

ಪ್ರಪಂಚದ ಐದು ಖಂಡಗಳನ್ನು ಬಿಂಬಿಸುವ ಒಲಂಪಿಕ್ ಚಕ್ರಗಳು
AñuEventuSee
Xuegos Olímpicos de Branu
1896I ediciónAtenesGrecia
1900II ediciónParísFrancia
1904III ediciónSaint LouisEstaos Xuníos d'América
1906Xuegos IntercalaosAtenesGrecia
1908IV ediciónLondresReinu Xuníu
1912V ediciónEstocolmuSuecia
1916VI ediciónBerlínAlemaña
Suspendíos pola Primer Guerra MundialAñuEventuSee
1920VII ediciónAmberesBélxicaXuegos Olímpicos d'Iviernu
1924VIII ediciónParísFrancia1924I ediciónChamonix Francia
1928IX ediciónÁmsterdamPaíses Baxos1928II ediciónSankt Moritz Suiza
1932X ediciónLos AngelesEstaos Xuníos d'América1932III ediciónLake Placid Estaos Xuníos d'América
1936XI ediciónBerlínAlemaña1936IV ediciónGarmisch-Partenkirchen Alemaña
1940XII ediciónḤélsinkiFinlandia1940V ediciónGarmisch-Partenkirchen Alemaña
Suspendíos pola Segunda Guerra Mundial
1944XIII ediciónLondresReinu Xuníu1944VI ediciónCortina d'Ampezzo Italia
Suspendíos pola Segunda Guerra Mundial
1948XIV ediciónLondresReinu Xuníu1948VII ediciónSankt Moritz Suiza
1952XV ediciónḤélsinkiFinlandia1952VIII ediciónOslu Noruega
1956XVI ediciónMelbourneAustralia1956IX ediciónCortina d'Ampezzo Italia
1960XVII ediciónRomaItalia1960X ediciónSquaw Valley Estaos Xuníos d'América
1964XVIII ediciónTokiuXapón1964XI ediciónInnsbruck Austria
1968XIX ediciónCiudá de MéxicuMéxicu1968XII ediciónGrenoble Francia
1972XX ediciónMúnichAlemaña1972XIII ediciónSapporo Xapón
1976XXI ediciónMontréalCanadá1976XIV ediciónInnsbruck Austria
1980XXII ediciónMoscúXRSS1980XV ediciónLake Placid Estaos Xuníos d'América
1984XXIII ediciónLos AngelesEstaos Xuníos d'América1984XVI ediciónSarayevu Bosnia y Herzegovina
1988XXIV ediciónSeúlCorea del Sur1988XVII ediciónCalgary Canadá
1992XXV ediciónBarcelonaEspaña1992XVIII ediciónAlbertville Francia
1996XXVI ediciónAtlantaEstaos Xuníos d'América1994XIX ediciónLillehammer Noruega
2000XXVII ediciónSydneyAustralia1998XX ediciónNagano Xapón
2004XXVIII ediciónAtenesGrecia2002XXI ediciónSalt Lake City Estaos Xuníos d'América
2008XXIX ediciónBeixínChina2006XXII ediciónTorino Italia
2012XXX ediciónLondresReinu Xuníu2010XXIII ediciónVancouver Canadá
2016XXXI ediciónRio de JaneiroBrasil2014XXIV ediciónSochi Rusia
2020XXXII ediciónTokiuXapón

ಪ್ರಾಚೀನ ಒಲಿಂಪಿಕ್ಸ್

ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಹಲವಷ್ಟು ದಂತಕಥೆಗಳು ಹಾಗೂ ಊಹಾಪೋಹಗಳಿವೆ. ಇವುಗಳ ಪೈಕಿ ಅತಿ ಜನಪ್ರಿಯವಾದ ಕತೆಯೊಂದರ ಪ್ರಕಾರ - ಹೆರಾಕ್ಲಿಸ್ ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಸೃಷ್ಟಿಕರ್ತನು[೧]. ಇವನು ತನ್ನ ತಂದೆ ಸ್ಯೂಸ್ ನ ಗೌರವಾರ್ಥವಾಗಿ ೧೨ ಕ್ರೀಡಾಂಗಣಗಳನ್ನು ನಿರ್ಮಿಸಿ ಕೂಟವನ್ನು ನಡೆಸಿದನು. ಈ ಕತೆಯ ಪ್ರಕಾರ ಈತನು ನೇರದಾರಿಯಲ್ಲಿ ೪೦೦ ಬಾರಿ ದಾಪುಗಾಲನ್ನಿಟ್ಟು ಕ್ರಮಿಸಿ ಆ ದೂರವನ್ನು ಒಂದು ಸ್ಟೇಡಿಯಸ್ ಎಂದು ಕರೆದನು. ಈ ದೂರವನ್ನೇ ರೋಮನ್ನರು ಸ್ಟೇಡಿಯಮ್ ಹಾಗೂ ಆಂಗ್ಲರು ಸ್ಟೇಜ್ ಎಂದು ಹೆಸರಿಸಿದರು. ಇಂದು ಕೂಡಾ ಆಧುನಿಕ ಕ್ರೀಡಾಂಗಣದ ಟ್ರ್ಯಾಕ್ ನ ಸುತ್ತಳತೆ ೪೦೦ ಮೀ. ಇರುವುದು. ಕ್ರಿ. ಪೂ. ೭೭೬ರ ಮೊದಲನೆಯ ಕ್ರೀಡಾಕೂಟದ ನಂತರ ಗ್ರೀಸ್ ದೇಶದಲ್ಲಿ ಒಲಿಂಪಿಕ್ಸ್ ಜನಪ್ರಿಯತೆ ಹೆಚ್ಚಿಸಿಕೊಂಡು ಕ್ರಿ.ಪೂ. ೬ ನೆಯ ಹಾಗೂ ೫ನೆಯ ಶತಮಾನದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿದ್ದಿತು. ಮೊದಲಿಗೆ ಕೆಲವೇ ಕ್ರೀಡೆಗಳನ್ನೊಳಗೊಂಡು ಒಂದು ದಿನದಲ್ಲಿಯೇ ಮುಗಿಯುತ್ತಿದ್ದ ಕೂಟವು ಮುಂದೆ ೨೦ರಷ್ಟು ಸ್ಪರ್ಧೆಗಳೊಂದಿಗೆ ಹಲವು ದಿನಗಳವರೆಗೆ ನಡೆಯುತ್ತಿತ್ತು. ಕ್ರೀಡೆಗಳಲ್ಲಿ ವಿಜಯ ಸಾಧಿಸಿದ ಸ್ಪರ್ಧಾಳುಗಳನ್ನು ನಾಡು ಅತ್ಯಭಿಮಾನ ಹಾಗೂ ಆದರದಿಂದ ಕಾಣುತ್ತಿತ್ತು. ಕವನಗಳ ಮತ್ತು ಪ್ರತಿಮೆಗಳ ಮೂಲಕ ಇವರನ್ನು ಅಮರರನ್ನಾಗಿಸಲಾಗುತ್ತಿತ್ತು. ಕ್ರಿ.ಪೂ. ೬ನೆಯ ಶತಮಾನದಲ್ಲಿದ್ದ ಮಿಲೋ ಎಂಬ ಕುಸ್ತಿಪಟುವು ಸತತ ೬ ಒಲಿಂಪಿಕ್ ಕ್ರೀಡಾಕೂಟ ಗಳಲ್ಲಿ ವಿಜಯ ಸಾಧಿಸಿದ್ದನು. ಈ ದಾಖಲೆಯನ್ನು ಇಂದಿನವರೆಗೂ ಸರಿಗಟ್ಟಲಾಗಿಲ್ಲ. ಗ್ರೀಸ್ ದೇಶದ ಮೇಲೆ ರೋಮನ್ನರ ಅಧಿಪತ್ಯವುಂಟಾದ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಕ್ರಮೇಣ ಅವನತಿಯತ್ತ ಸಾಗಲಾರಂಭಿಸಿತು. ಕ್ರಿಶ್ಚಿಯನ್ ಧರ್ಮವು ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಲ್ಪಟ್ಟ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಆ ಧರ್ಮದ ನಡವಳಿಕೆಗಳಿಗೆ ಅನುಗುಣವಾಗಿಲ್ಲವೆಂದು ಪರಿಗಣಿಸಲ್ಪಟ್ಟಿತು. ತರುವಾಯ ಕ್ರಿ.ಶ. ೩೯೩ರಲ್ಲಿ ರೋಮನ್ ಸಮ್ರಾಟ ಮೊದಲನೆಯ ಥಿಯೋಡೋರಸ್ ಒಲಿಂಪಿಕ್ ಕ್ರೀಡಾಕೂಟವನ್ನು ಧರ್ಮಬಾಹಿರವೆಂದು ಘೋಷಿಸಿದನು. ಹೀಗೆ ಸುಮಾರು ೧೦೦೦ ವರ್ಷಗಳ ಪರಂಪರೆಯೊಂದು ಕೊನೆಗೊಂಡಿತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕೇವಲ ಯುವಕರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದಿತು. ಕ್ರೀಡಾಕೂಟವು ಮಾನವಶರೀರದ ಸಾಧನೆಯ ದ್ಯೋತಕವೆಂದು ಪರಿಗಣಿಸಲಾಗುತ್ತಿದ್ದುದರಿಂದ ಸ್ಪರ್ಧಾಳುಗಳು ನಗ್ನರಾಗಿಯೇ ಪಾಲ್ಗೊಳ್ಳುತ್ತಿದ್ದರು. ವಿಜಯೀ ಸ್ಪರ್ಧಾಳುಗಳಿಗೆ ಆಲಿವ್ ಎಲೆಗಳಿಂದ ಮಾಡಿದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಒಲಿಂಪಿಕ್ ಜ್ಯೋತಿಯಾಗಲೀ ಒಲಿಂಪಿಕ್ ವರ್ತುಲಗಳಾಗಲೀ ಬಳಕೆಯಲ್ಲಿರಲಿಲ್ಲ. ಇವು ಮುಂದೆ ಆಧುನಿಕ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಸೇರಿಕೊಂಡವು.

ಪುನರುತ್ಥಾನ

ಓರ್ವ ಸಿರಿವಂತ ಗ್ರೀಕ್ ದಾನಿ ಇವಾಂಜೆಲಾಸ್ ಝಪ್ಪಾಸನು ಪ್ರಥಮ ಆಧುನಿಕ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದನು. ೧೮೭೦ ಹಾಗೂ ೧೮೭೫ರಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಿಗೆ ಬಳಸಲಾದ ಪಾನ್ ಅಥೀನಿಯನ್ ಕ್ರೀಡಾಂಗಣವನ್ನು ಈತನು ದುರಸ್ತಿಗೊಳಿಸಿದನು. ಅಲದೆ ಒಲಿಂಪಿಕ್ ಗ್ರಾಮವೊಂದನ್ನು ಸಹ ಇವನು ವ್ಯವಸ್ಥೆಗೊಳಿಸಿದನು. ಮುಂದೆ ಬ್ಯಾರನ್ ಪಿಯರಿ ದ ಕೂಬರ್ತಿಯು ೧೮೯೪ರಲ್ಲಿ ಪ್ಯಾರಿಸ್ ನಗರದಲ್ಲಿ ಜರಗಿದ ಸಮಾವೇಶವೊಂದರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಪುನರಾರಂಭಿಸುವುದರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮುಂದಿಕ್ಕಿದನು. ಈ ಸಮಾವೇಶದ ಕೊನೆಯಲ್ಲಿ ಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು. ಇದನ್ನು ಆಯೋಜಿಸುವುದರ ಸಲುವಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಲಾಯಿತು. ಗ್ರೀಸ್ ದೇಶದ ಡಿಮೆಟ್ರಿಯಸ್ ವಿಕೆಲಾಸ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊಟ್ಟಮೊದಲ ಅಧ್ಯಕ್ಷನಾದನು. ಹೀಗೆ ಪ್ರಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟ ಅಥೆನ್ಸ್ ನಗರದ ಪಾನ್ ಅಥೀನಿಯನ್ ಕ್ರೀಡಾಂಗಣದಲ್ಲಿ ೧೮೯೬ರಲ್ಲಿ ನಡೆಯಿತು. ಈ ಕೂಟದಲ್ಲಿ ಕೇವಲ ೧೪ ದೇಶಗಳ ೨೪೧ ಪುರುಷ ಕ್ರೀಡಾಳುಗಳು ಮಾತ್ರ ಪಾಲ್ಗೊಂಡಿದ್ದರು. ಆದರೆ ಆ ಕಾಲದ ಮಟ್ಟಿಗೆ ಇದು ಜಗತ್ತಿನ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರೀಡಾಕೂಟವೆಂದು ಪರಿಗಣಿಸಲ್ಪಟ್ಟಿತ್ತು. ನಾಲ್ಕು ವರ್ಷಗಳ ನಂತರ ೧೯೦೦ರಲ್ಲಿ ಪ್ಯಾರಿಸ್ ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಹಿಳಾ ಕ್ರೀಡಾಪಟುಗಳೂ ಪಾಲ್ಗೊಂಡರು. ಹೀಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಒಲಿಂಪಿಕ್ ಕ್ರೀಡಾಕೂಟ ೨೦೦೪ರಲ್ಲಿ ಅಥೆನ್ಸ್ ನಲ್ಲಿ ನಡೆದ ಕೂಟದಲ್ಲಿ ೨೦೨ ರಾಷ್ಟ್ರಗಳ ಸುಮಾರು ೧೧೦೦೦ ಕ್ರೀಡಾಳುಗಳು ಪಾಲ್ಗೊಳ್ಳುವ ಮಟ್ಟಿಗೆ ಬೆಳೆಯಿತು.

ಬಹಿಷ್ಕಾರಗಳು

ಖೇದದ ಸಂಗತಿಯೆಂದರೆ ಮಾನವಭ್ರಾತೃವ್ಯದ ಸಂಕೇತವಾದ ಒಲಿಂಪಿಕ್ ಕ್ರೀಡಾಕೂಟಗಳು ಕೂಡಾ ರಾಜಕೀಯದಿಂದ ಹೊರಗುಳಿಯಲಿಲ್ಲ. ವಿವಿಧ ರಾಜಕೀಯ ಕಾರಣಗಳಿಂದಾಗಿ ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ನಾನಾ ದೇಶಗಳಿಂದ ಬಹಿಷ್ಕರಿಸಲ್ಪಟ್ಟವು. ೧೯೫೬ರ ಮೆಲ್ಬರ್ನ್ ಕೂಟ , ೧೯೭೨ರ ಮ್ಯೂನಿಖ್ ಕೂಟ , ೧೯೭೬ರ ಮಾಂಟ್ರಿಯಲ್ ಕ್ರೀಡಾಕೂಟ, ೧೯೮೦ರ ಮಾಸ್ಕೋ ಕೂಟ ಮತ್ತು ೧೯೮೪ರ ಲಾಸ್ ಎಂಜಲಿಸ್ ಒಲಿಂಪಿಕ್ ಕ್ರೀಡಾಕೂಟಗಳು ಈ ರೀತಿಯ ಬಹಿಷ್ಕಾರದ ಕಹಿಯನ್ನು ಅನುಭವಿಸಿದವು.

ಉದ್ದೀಪನವಸ್ತುಗಳ ದುರುಪಯೋಗ

ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಜಯ ಸಾಧಿಸುವುದು ಒಂದು ಭಾರೀ ಪ್ರತಿಷ್ಠೆಯ ಸಂಗತಿ. ಹೀಗಾಗಿ ನಾನಾ ದೇಶಗಳ ಹಲವಷ್ಟು ಕ್ರೀಡಾಳುಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆಲ್ಲಲು ಅಡ್ಡದಾರಿಗಳನ್ನು ಬಳಸುವರು. ಇವುಗಳಲ್ಲಿ ಉದ್ದೀಪನವಸ್ತುಗಳ ಬಳಕೆ ಇಂದು ಒಲಿಂಪಿಕ್ಸ್ ಗೆ ಒಂದು ದೊಡ್ಡ ಸವಾಲೆನಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಉದ್ದೀಪನವಸ್ತುಗಳ ಬಳಕೆ ನಡೆಯುತ್ತಲೇ ಇದೆ. ೧೯೮೮ರ ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕೆನಡದ ಬೆನ್ ಜಾನ್ಸನ್ ಪುರುಷರ ೧೦೦ ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಸ್ವರ್ಣಪದಕವನ್ನು ಗೆದ್ದನು. ನಂತರ ಈತನು ಉದ್ದೀಪನವಸ್ತುಗಳನ್ನು ಬಳಸಿದುದು ಪರೀಕ್ಷೆಯಲ್ಲಿ ಸ್ಥಾಪಿತವಾಗಿ ಆತನ ಸ್ವರ್ಣಪದಕವನ್ನು ಹಿಂಪಡೆದುಕೊಂಡು ಆತನನ್ನು ಕ್ರೀಡಾಸ್ಪರ್ಧೆಗಳಿಂದ ನಿಷೇಧಿಸಲಾಯಿತು. ವಿಷಾದದ ಸಂಗತಿಯೆಂದರೆ ಭಾರತದ ಕ್ರೀಡಾಪಟುಗಳೂ ಈ ವಿಷಯದಲ್ಲಿ ಶುದ್ಧರಾಗಿಲ್ಲದಿರುವುದು.

ಹಿಂಸಾಚಾರಗಳು

ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ಹಿಂಸಾಚಾರವನ್ನು ಕಂಡಿವೆ. ಅಮಾನವೀಯ ಘಟನೆಯೊಂದು ೧೯೭೨ರ ಮ್ಯೂನಿಖ್ ಕ್ರೀಡಾಕೂಟದಲ್ಲಿ ಸಂಭವಿಸಿತು. ಇಸ್ರೇಲ್ ದೇಶದ ೧೧ ಕ್ರೀಡಾಳುಗಳನ್ನು ಪ್ಯಾಲೆಸ್ಟಿನ್ ಉಗ್ರಗಾಮಿಗಳು ಒತ್ತೆಯಾಳುಗಳಾಗಿರಿಸಿಕೊಂಡರು. ಇವರನ್ನು ಬಿಡಿಸಿಕೊಳ್ಳಲು ನಡೆಸಲಾದ ವಿಫಲ ಕಾರ್ಯಾಚರಣೆಯಲ್ಲಿ ೯ ಮಂದಿ ಕ್ರೀಡಾಳುಗಳೂ ಸೇರಿದಂತೆ ಒಟ್ಟು ೧೫ ಮಂದಿ ಸಾವನ್ನಪ್ಪಿದರು. ೧೯೯೬ರ ಅಟ್ಲಾಂಟ ಕೂಟದಲ್ಲಿ ಸಂಭವಿಸಿದ ಬಾಂಬ್ ಸ್ಫೋಟವೊಂದರಲ್ಲಿ ಇಬ್ಬರು ಮರಣಿಸಿದರು.

ಟೀಕೆಗಳು

ಗಮನಿಸಬೇಕಾದ ಸಂಗತಿಯೆಂದರೆ ಈವರೆವಿಗೆನ ಹೆಚ್ಚಿನ ಒಲಿಂಪಿಕ್ ಕ್ರೀಡಾಕೂಟಗಳು ಉತ್ತರ ಅಮೆರಿಕ ಅಥವಾ ಯುರೋಪ್ ನಲ್ಲಿಯೇ ಆಯೋಜಿಸಲ್ಪಟ್ಟಿವೆ. ಕೇವಲ ಕೆಲವು ಬಾರಿ ಮಾತ್ರ ವಿಶ್ವದ ಇತರ ಭಾಗಗಳಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸುವ ಅವಕಾಶ ಒದಗಿದೆ. ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡಗಳಲ್ಲಿ ಇದುವರೆಗೆ ಒಂದು ಬಾರಿಯೂ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸಲಾಗಿಲ್ಲ. ಹೀಗಾಗಿ ಒಲಿಂಪಿಕ್ ಕ್ರೀಡಾಕೂಟಗಳು ಕೇವಲ ಉಳ್ಳವರ ಪ್ರತಿಷ್ಠೆ ಮೆರೆಸುವ ಸಲುವಾಗಿಯೇ ಇವೆ ಎಂಬ ಟೀಕೆ ಸಾಕಷ್ಟು ವ್ಯಾಪಕವಾಗಿದೆ.

ಒಲಿಂಪಿಕ್ ಧ್ವಜ

ಒಂದಕ್ಕೊಂದು ಹೆಣೆದುಕೊಂಡಿರುವ ಐದು ವರ್ತುಲಗಳು ಒಲಿಂಪಿಕ್ ಚಿಹ್ನೆ. ಈ ಐದು ವರ್ತುಲಗಳು ಪ್ರಪಂಚದ ಐದು ಜನವಸತಿಯುಳ್ಳ ಭೂಖಂಡಗಳನ್ನು ಪ್ರತಿನಿಧಿಸುತ್ತವೆ. ( ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದಾಗಿ ಪರಿಗಣಿಸಲಾಗಿದೆ). ಶ್ವೇತವರ್ಣದ ಒಲಿಂಪಿಕ್ ಧ್ವಜದಲ್ಲಿ ಈ ೫ ವರ್ತುಲಗಳು ೫ ವರ್ಣಗಳಲ್ಲಿ ಗೋಚರಿಸುತ್ತವೆ. ಕೆಂಪು,ನೀಲಿ,ಹಸಿರು,ಹಳದಿ ಹಾಗೂ ಕಪ್ಪು ಇವೇ ಆ ಐದು ವರ್ಣಗಳು.https://www.quora.com/What-do-the-colors-on-the-Olympics-symbol-mean ಅತಿ ವಿಶಿಷ್ಟ ಸಂಗತಿಯೆಂದರೆ ವಿಶ್ವದ ಪ್ರತಿಯೊಂದು ರಾ9ಷ್ಟ್ರದ ಧ್ವಜದಲ್ಲಿ ಈ ಆರು ವರ್ಣಗಳಲ್ಲಿ ( ಮೇಲಿನ ೫ ಮತ್ತು ಧ್ವಜದ ಬಿಳಿ ವರ್ಣ) ಕನಿಷ್ಠ ಒಂದಾದರೂ ಇದ್ದೇ ಇದೆ.

ಒಲಿಂಪಿಕ್ ಧ್ಯೇಯ

ಲ್ಯಾಟಿನ್ ಭಾಷೆಯ " ಸಿಟಿಯಸ್ , ಆಲ್ಟಿಯಸ್ , ಫೋರ್ಟಿಯಸ್ " ಅಂದರೆ "ಕ್ಷಿಪ್ರವಾಗಿ , ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ. ಮೊದಮೊದಲು ಸ್ಪರ್ಧೆಗಳು ಓಟ, ಜಿಗಿತ ಮತ್ತು ಭಾರ ಎತ್ತುವಿಕೆ ಅಥವಾ ಭಾರ ಎಸೆಯುವಿಕೆಗೇ ಸೀಮಿತವಾಗಿದ್ದುದರಿಂದ ಈ ಧ್ಯೇಯ ರಚಿತವಾಯಿತು. ಕೂಬರ್ತಿಯ ಪ್ರಕಾರ " ಹೇಗೆ ಜೀವನದಲ್ಲಿ ಹೋರಾಡುವುದು ಮುಖ್ಯವೇ ಹೊರತು ಜಯಿಸುವುದಲ್ಲವೋ ಹಾಗೆಯೇ ಒಲಿಂಪಿಕ್ಸ್ ನ ಅತಿಮುಖ್ಯ ಸಂಗತಿಯೆಂದರೆ ಪಾಲ್ಗೊಳ್ಳುವುದೇ ವಿನಹ ಗೆಲ್ಲುವುದಲ್ಲ. ಅವಶ್ಯ ವಿಚಾರವೆಂದರೆ ಉತ್ತಮವಾಗಿ ಹೋರಾಡುವುದು. ವಿಜಯ ಸಾಧಿಸುವುದೇ ಗುರಿ ಅಲ್ಲ."

ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರಗಳು

ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರಗಳು[೨]
ವರ್ಷಬೇಸಿಗೆಯ ಕೂಟಗಳುಚಳಿಗಾಲದ ಕೂಟಗಳುಯುವ ಒಲಂಪಿಕ್ ಕೂಟಗಳು
ಒಲಿಂಪಿಕ್ ಕ್ರೀಡಾಕೂಟಅತೀಥೆಯ ನಗರ#ಅತೀಥೆಯ ನಗರ#ಅತೀಥೆಯ ನಗರ
1896I ಅಥೆನ್ಸ್, ಗ್ರೀಸ್
1900II ಪ್ಯಾರಿಸ್, ಫ್ರಾನ್ಸ್
1904III ಸೇಂಟ್ ಲೂಯಿಸ್, ಯು ಎಸ್ ಎ[೩]
1906III[೪] ಅಥೆನ್ಸ್, ಗ್ರೀಸ್
1908IV ಲಂಡನ್, ಯುನೈಟೆಡ್ ಕಿಂಗ್‌ಡಂ
1912V ಸ್ಟಾಖೋಂ, ಸ್ವೀಡನ್
1916VI ಬರ್ಲಿನ್, ಜರ್ಮನಿ
Cancelled due to World War I
1920VII ಎಂಟ್ವರ್ಪ್, ಬೆಲ್ಜಿಯಂ
1924VIII ಪ್ಯಾರಿಸ್, ಫ್ರಾನ್ಸ್I ಚಾಮೋನಿಕ್ಸ್, ಫ್ರಾನ್ಸ್
1928IX ಆಂಸ್ಟರ್ಡ್ಯಾಂ, ನೆದರ್ಲೆಂಡ್ಸ್II ಸೈಂಟ್ ಮೋರ್ಟಿಜ್, ಸ್ವಿಟ್ಜರ್ಲೆಂಡ್
1932X ಲಾಸ್ ಏಂಜೆಲ್ಸ್, , ಯು ಎಸ್ ಎIII ಲೇಕ್ ಪ್ಲಾಸಿಡ್, ಯು ಎಸ್ ಎ
1936XI ಬರ್ಲಿನ್, ಜರ್ಮನಿIV Garmisch-Partenkirchen, ಜರ್ಮನಿ
1940XII ಟೋಕ್ಯೊ, ಜಪಾನ್
ಹೆಲ್ಸಿಂಕಿ, ಫಿನ್ ಲ್ಯಾಂಡ್ →
Cancelled due to World War II
V ಸಪ್ಪೋರೊ, ಜಪಾನ್
ಸೈಂಟ್ ಮೋರ್ಟಿಜ್, ಸ್ವಿಟ್ಜರ್ಲೆಂಡ್ →
Garmisch-Partenkirchen, ಜರ್ಮನಿ
ಎರಡನೆ ಮಹಾಯುದ್ಧದಿಂದಾಗಿ ರದ್ದು
1944XIII ಲಂಡನ್, ಯುನೈಟೆಡ್ ಕಿಂಗ್‌ಡಂ
Cancelled due to World War II
V Cortina d'Ampezzo, ಇಟಲಿ
Cancelled due to World War II
1948XIV ಲಂಡನ್, ಯುನೈಟೆಡ್ ಕಿಂಗ್‌ಡಂV ಸೈಂಟ್ ಮೋರ್ಟಿಜ್, ಸ್ವಿಟ್ಜೆರ್ಲೆಂಡ್
1952XV ಹೆಲ್ಸಿನ್ಕಿ, ಫಿನ್ಲೆಂಡ್VI ಓಸ್ಲೊ, ನಾರ್ವೆ
1956XVI ಮೆಲ್ಬೋರ್ನ್, ಆಸ್ಟ್ರೇಲಿಯ +
ಸ್ಟಾಕ್ ಹೋಂ, ಸ್ವೀಡನ್[೫]
VII ಕೊರ್ಟಿನ ಡಿ' ಅಮ್ ಪೆಜ್ಜೊ, ಇಟಲಿ
1960XVII ರೋಮ್, ಇಟಲಿVIII ಸ್ಕ್ವಾ ವ್ಯಾಲಿ, ಅಮೇರಿಕ ಸಂಯುಕ್ತ ಸಂಸ್ಥಾನ
1964XVIII ಟೋಕ್ಯೊ, ಜಪಾನ್IX ಇನ್ಸ್ ಬ್ರೂಕ್, ಆಸ್ಟ್ರೀಯ
1968XIX ಮೆಕ್ಸಿಕೊ ನಗರ, ಮೆಕ್ಸಿಕೊX ಗ್ರೆನೊಬಲ್, ಫ್ರಾನ್ಸ್
1972XX ಮ್ಯೂನಿಕ್, ಪಶ್ಚಿಮ ಜರ್ಮನಿXI ಸಪ್ಪೊರೊ, ಜಪಾನ್
1976XXI ಮಾಂಟ್ರಿಯಲ್l, ಕೆನಡXII ಡೆನ್ವರ್, ಯು ಎಸ್ ಎ
ಇನ್ಸ್‌ಬ್ರುಕ್, ಆಸ್ಟ್ರಿಯ
1980XXII ಮಾಸ್ಕೊ, ಸೋವಿಯೆಟ್ ಒಕ್ಕೂಟXIII ಲೇಕ್ ಪ್ಲಾಸಿಡ್, ಯು ಎಸ್ ಎ
1984XXIII ಲಾಸ್ ಏಂಜಲೀಸ್, ಯು ಎಸ್ ಎXIV ಸಾರಯೇವೋ, ಯುಗೊಸ್ಲಾವಿಯ
1988XXIV ಸಿಯೋಲ್, ದಕ್ಷಿಣ ಕೊರಿಯXV ಕ್ಯಾಲ್ ಗರಿ, ಕೆನಡ
1992XXV ಬಾರ್ಸಿಲೋನ, ಸ್ಪೇನ್XVI ಅಲ್ಬರ್ಟ್ ವಿಲ್ಲೆ, ಫ್ರಾನ್ಸ್
1994XVII ಲಿಲ್ಲ್‌ಹ್ಯಾಮರ್, ನಾರ್ವೆ
1996XXVI ಅಟ್ಲಾಂಟ, ಯು ಎಸ್ ಎ
1998XVIII ನಗಾನೊ, ಜಪಾನ್
2000XXVII ಸಿಡ್ನಿ, ಆಸ್ಟ್ರೇಲಿಯ
2002XIX ಸಾಲ್ಟ್ ಲೇಕ್ ಸಿಟಿ, ಯು ಎಸ್ ಎ
2004XXVIII ಅಥೆನ್ಸ್, ಗ್ರೀಸ್
2006XX ಟ್ಯೂರಿನ್, ಇಟಲಿ
2008XXIX ಬೀಜಿಂಗ್, ಚೀನಾ[೬][೭]
2010XXI ವೆನ್‌ಕೂವರ್, ಕೆನಡI (Summer) ಸಿಂಗಾಪುರ
2012XXX ಲಂಡನ್, ಯುನೈಟೆಡ್ ಕಿಂಗ್ ಡಂI (Winter) ಇನ್ಸ್‌ಬ್ರುಕ್, ಆಸ್ಟ್ರಿಯ
2014XXII ಸೋಚಿ, ರಷ್ಯಾII (Summer)To be determined
2016XXXI ರಿಯೊ ಡಿ ಜೆನೆರೋ, ಬ್ರೆಜಿಲ್II (Winter)To be determined
2018XXIIITo be determined
2020XXXIITo be determined

ಗಮನಿಸಿ : ಈ ಪಟ್ಟಿಯು ಅಪೂರ್ಣ, ಮುಂದೆ ಇದನ್ನು ಸರಿಪಡಿಸಲಾಗುವುದು

ಒಲಿಂಪಿಕ್ ಜ್ಯೋತಿ

ಈಚಿನ ವರ್ಷಗಳಲ್ಲಿ ಒಲಿಂಪಿಕ್ ಜ್ಯೋತಿಯ ಶ್ರೇಷ್ಠ ಪರಂಪರೆಯೊಂದು ಆರಂಭವಾಗಿದೆ. ಪ್ರತಿ ಒಲಿಂಪಿಕ್ ಕ್ರೀಡಾಕೂಟದ ಕೆಲ ಸಮಯದ ಮುನ್ನ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮಸೂರ ಮತ್ತು ಸೂರ್ಯಕಿರಣಗಳ ಸಹಾಯದಿಂದ ದೊಂದಿಯೊಂದನ್ನು ಹಚ್ಚಲಾಗುವುದು. ಇದೇ ಒಲಿಂಪಿಕ್ ಜ್ಯೋತಿ. ಈ ಒಲಿಂಪಿಕ್ ಜ್ಯೋತಿಯನ್ನು ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರದವರೆಗೆ ಭೂಮಿಯ ಬಹುತೇಕ ರಾಷ್ಟ್ರಗಳ ಮೂಲಕ ಹಾಯಿಸಿ ಕೊಂಡೊಯ್ಯಲಾಗುವುದು. ಪ್ರತಿ ರಾಷ್ಟ್ರದ ಮೂಲಕ ಹಾದುಹೋಗುವಾಗ ಆಯಾ ದೇಶದ ಪ್ರಮುಖ ಕ್ರೀಡಾಪಟುಗಳು ಮತ್ತು ಇತರ ಗಣ್ಯರು ರಿಲೇ ಓಟದ ಮೂಲಕ ಜ್ಯೋತಿಯನ್ನು ಸಾಗಿಸುವರು. ಇದರಲ್ಲಿ ಪಾಲ್ಗೊಳ್ಳುವುದು ಒಂದು ಗೌರವದ ಹಾಗೂ ಪ್ರತಿಷ್ಠೆಯ ಸಂಗತಿ. ನಂತರ ಕೂಟದ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಕ್ರೀಡಾಂಗಣದಲ್ಲಿ ಒಂದು ದೊಡ್ಡ ಜ್ಯೋತಿಯನ್ನು ಬೆಳಗಲು ಈ ದೊಂದಿಯನ್ನು ಬಳಸಲಾಗುವುದು. ಈ ಮುಖ್ಯ ಜ್ಯೋತಿಯು ಕ್ರೀಡಾಕೂಟವು ಮುಗಿಯವರೆಗೂ ಅವಿರತವಾಗಿ ಬೆಳಗುತ್ತಲೇ ಇರುವುದು. ಒಲಿಂಪಿಕ್ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಇದನ್ನು ನಂದಿಸಲಾಗುವುದು.

ಸರ್ವ ಶ್ರೇಷ್ಠ ಪ್ರದರ್ಷನ

The IOC does not keep an official record of individual medal counts, though unofficial medal tallies abound. These provide one method of determining the most successful Olympic athletes of the modern era. Below are the top ten individual medal winners of the modern Olympics (the gender of the athlete is denoted in the "Sport" column):

ಕ್ರೀಡಾಪಟುರಾಷ್ಟ್ರಕ್ರೀಡೆಒಲಿಂಪಿಕ್ ಬಂಗಾರ ಬೆಳ್ಳಿ ಕಂಚುಒಟ್ಟ
Michael Phelps  ಅಮೇರಿಕ ಸಂಯುಕ್ತ ಸಂಸ್ಥಾನSwimming (m)2000–2008140216
Larissa Latynina  ಸೋವಿಯತ್ ಒಕ್ಕೂಟGymnastics (f)1956–196495418
Paavo Nurmi  FinlandAthletics (m)1920–192893012
Mark Spitz  ಅಮೇರಿಕ ಸಂಯುಕ್ತ ಸಂಸ್ಥಾನSwimming (m)1968–197291111
Carl Lewis  ಅಮೇರಿಕ ಸಂಯುಕ್ತ ಸಂಸ್ಥಾನAthletics (m)1984–199691010
Bjørn Dæhlie  ನಾರ್ವೇCross-country skiing (m)1992–199884012
Birgit Fischer  ಪೂರ್ವ ಜರ್ಮನಿ
 Germany
Canoeing (flatwater) (f)1980–200484012
Sawao Kato  ಜಪಾನ್Gymnastics (m)1968–197683112
Jenny Thompson  ಅಮೇರಿಕ ಸಂಯುಕ್ತ ಸಂಸ್ಥಾನSwimming (f)1992–200483112
Matt Biondi  ಅಮೇರಿಕ ಸಂಯುಕ್ತ ಸಂಸ್ಥಾನSwimming (m)1984–199282111

ಇದನ್ನೂ ನೋಡಿ

ಉಲ್ಲೇಖ