ಚಿತ್ರಾವತಿ ನದಿ

ಚಿತ್ರಾವತಿ ನದಿ' ದಕ್ಷಿಣ ಭಾರತದ ಅಂತರ್ರಾಜ್ಯ ನದಿಯಾಗಿದ್ದು ಇದು ಪೆನ್ನಾರ್ ನದಿಯ ಉಪನದಿಯಾಗಿದೆ.ಕರ್ನಾಟಕದಲ್ಲಿ ಹುಟ್ಟಿ , ಅದು ಆಂಧ್ರಪ್ರದೇಶದ ಕಡೆಗೆ ಹರಿಯುತ್ತದೆ ಮತ್ತು ಅದರ ಜಲಾನಯನ ಪ್ರದೇಶ 5,900 km2. ವಿಸ್ತೀರ್ಣವಿದೆ.ಪುಟ್ಟಪರ್ತಿ ಯಾತ್ರಾಸ್ಥಳವು ಈ ನದಿಯ ದಡದಲ್ಲಿದೆ.

ಚಿತ್ರಾವತಿ ನದಿ ಪುಟ್ಟಪರ್ತಿ

ಹರಿವು

ಚಿತ್ರಾವತಿ ನದಿ ಚಿಕ್ಕಬಳ್ಳಾಪುರದಲ್ಲಿ ಹುಟ್ಟುತ್ತದೆ ಮತ್ತು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲಕ ಆಂಧ್ರಪ್ರದೇಶದ ಅನಂತಪುರ ಮತ್ತು ಕುಡ್ಡಪಾ ಜಿಲ್ಲೆಗಳ ಮೂಲಕ ಪೆನ್ನಾರ್ಗೆ ಸೇರುತ್ತದೆ. ಚಿತ್ರಾವತಿ ನದಿ ಜಲಾನಯನ ಪ್ರದೇಶ 5,908 ಕಿ.ಮಿ 2 ವಿಸ್ತೀರ್ಣವಿದೆ.ಬಾಗೇಪಲ್ಲಿ, ಹಿಂದೂಪುರ್, ಬುಕ್ಕಪಟ್ನಮ್, ಧರ್ಮವರಮ್, ತಡಿಪತ್ರಿ ಮತ್ತು ಕದಿರಿ ಇವುಗಳಲ್ಲಿ ಹರಿಯುತ್ತದೆ. ನದಿಯು ಕಡಪ ಜಿಲ್ಲೆಯ ಗಂಡಿಕೋಟಾದಲ್ಲಿ ಪೆನ್ನಾರ್ ಸೇರುತ್ತದೆ, ಅಲ್ಲಿ ಆಂಧ್ರಪ್ರದೇಶ ಸರ್ಕಾರವು ಗಂಡಿಕೋಟ ನೀರಾವರಿ ಯೋಜನೆಯನ್ನು ಜಲಯಾಗ್ನಾಮ್ ಯೋಜನೆಯ ಭಾಗವಾಗಿ ಕೈಗೊಳ್ಳುತ್ತಿದೆ. ಚಿತ್ರಾವತಿ ಮಳೆಗಾಲದ ನಂತರವು ಹರಿಯುವ ನದಿಯಾಗಿದೆ.ಪಪಾಗ್ನಿ ಜೊತೆಗೆ, ಇದು ಮಧ್ಯ ಪೆನ್ನಾರ್ ಉಪ-ಬೇಸಿನ್ ನ ಭಾಗವಾಗಿದೆ ಮತ್ತು ಪೆನ್ನಾರ್ನ ಬಲ ದಂಡೆ ಉಪನದಿಯಾಗಿದೆ. [೧] .[೨][೩][೪][೫][೬][೭]

ಚಿತ್ರಾವತಿ ನದಿ

ಪರಗೊಡು ಯೋಜನೆ

ಜಿಲ್ಲೆಯಲ್ಲಿ ಇರುವ ವಿವಿಧ ಏತ  ನೀರಾವರಿ ಯೋಜನೆಗಳಿಗೆ ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದೆಂದು ವಾದಿಸುವ ಆಂಧ್ರ ಪ್ರದೇಶದ ರಾಜಕಾರಣಿಗಳು ಕರ್ನಾಟಕ ಸರ್ಕಾರದ ಪರಗೊಡುನಲ್ಲಿ ಅಣೆಕಟ್ಟನ್ನು ನಿರ್ಮಿಸುವ ಪ್ರಸ್ತಾಪವನ್ನು ವಿರೋಧಿಸಿದ್ದಾರೆ.[೬][೮][೯]

ಪರಿಸರ ಸಮಸ್ಯೆಗಳು

ಮರಳು ಗಣಿಗಾರಿಕೆ, ಅದರಲ್ಲಿ ಹೆಚ್ಚಿನವು ಕಾನೂನುಬಾಹಿರವಾಗಿದ್ದು, ಚಿತ್ರಾವತಿ ಜಲಾನಯನ ಪ್ರದೇಶದಲ್ಲಿ ಅತಿರೇಕವಾಗಿದೆ ಮತ್ತು ಇದರಿಂದಾಗಿ ಈ ಪ್ರದೇಶದ ಅಂತರ್ಜಲ ಸಂಪನ್ಮೂಲಗಳ ತೀವ್ರ ಕುಸಿತಕ್ಕೆ ಕಾರಣವಾಗಿದೆ..[೧೦]

ಧಾರ್ಮಿಕ ಪ್ರಾಮುಖ್ಯತೆ

ಚಿತ್ರಾವತಿ ನದಿಯನ್ನು ದೇವ ಕನ್ಯಾ ಎಂದೂ ಕರೆಯಲ್ಪಡುತ್ತದೆ ಮತ್ತು ಇದು ಪುಟ್ಟಪರ್ತಿ ಯಾತ್ರಾ ಸ್ಥಳದಿಂದ ಹರಿಯುತ್ತದೆ.[೧][೧೧]

ಉಲ್ಲೇಖಗಳು