ತತ್ವಜ್ಞಾನಿ

ತತ್ವಜ್ಞಾನಿ (ದಾರ್ಶನಿಕ) ಎಂದರೆ ತತ್ತ್ವಶಾಸ್ತ್ರವನ್ನು ಅಭ್ಯಾಸಮಾಡುವ ವ್ಯಕ್ತಿ.

ಆಧುನಿಕ ಅರ್ಥದಲ್ಲಿ, ತತ್ವಜ್ಞಾನಿಯು ತತ್ತ್ವಶಾಸ್ತ್ರದ ಒಂದು ಅಥವಾ ಹೆಚ್ಚು ಶಾಖೆಗಳಲ್ಲಿ ಕೊಡುಗೆ ನೀಡಿರುವ ಬುದ್ಧಿಜೀವಿ, ಉದಾಹರಣೆಗೆ ಸೌಂದರ್ಯಶಾಸ್ತ್ರ, ನೀತಿಶಾಸ್ತ್ರ, ಜ್ಞಾನಮೀಮಾಂಸೆ, ತರ್ಕಶಾಸ್ತ್ರ, ತತ್ವಮೀಮಾಂಸೆ, ಸಾಮಾಜಿಕ ಸಿದ್ಧಾಂತ, ಮತ್ತು ರಾಜಕೀಯ ತತ್ತ್ವಶಾಸ್ತ್ರ. ತತ್ವಜ್ಞಾನಿಯು ಮಾನವಶಾಸ್ತ್ರಗಳು ಅಥವಾ ಶತಮಾನಗಳಿಂದ ನೈಜ ತತ್ತ್ವಶಾಸ್ತ್ರದಿಂದ ಬೇರ್ಪಟ್ಟಿರುವ ಇತರ ವಿಜ್ಞಾನಗಳಲ್ಲಿ ಕೆಲಸ ಮಾಡಿರುವ ವ್ಯಕ್ತಿಯೂ ಆಗಿರಬಹುದು, ಉದಾಹರಣೆಗೆ ಕಲೆಗಳು, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನಶ್ಶಾಸ್ತ್ರ, ಭಾಷಾ ವಿಜ್ಞಾನ, ಮಾನವಶಾಸ್ತ್ರ, ದೇವತಾಶಾಸ್ತ್ರ, ಮತ್ತು ರಾಜನೀತಿ.[೧]

ಉಲ್ಲೇಖಗಳು