ಪ್ರೌಢಶಾಲೆ

ಪ್ರೌಢಶಾಲೆಯು ಪ್ರೌಢಶಿಕ್ಷಣವನ್ನು ಒದಗಿಸುವ ಸಂಸ್ಥೆ ಮತ್ತು ಅದು ನಡೆಯುವ ಕಟ್ಟಡವೂ ಆಗಿದೆ. ಕೆಲವು ಪ್ರೌಢಶಾಲೆಗಳು ಕೆಳ ಪ್ರೌಢಶಿಕ್ಷಣ ಮತ್ತು ಮೇಲ್ ಪ್ರೌಢಶಿಕ್ಷಣ ಎರಡನ್ನೂ ಒದಗಿಸುತ್ತವೆ, ಆದರೆ ಇವನ್ನು ಪ್ರತ್ಯೇಕ ಶಾಲೆಗಳಲ್ಲೂ ಒದಗಿಸಬಹುದು, ಅಮೇರಿಕದ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿರುವಂತೆ.

ಪ್ರೌಢಶಾಲೆಗಳು ಸಾಮಾನ್ಯವಾಗಿ ಪ್ರಾಥಮಿಕ ಶಾಲೆಗಳನ್ನು ಅನುಸರಿಸುತ್ತವೆ ಮತ್ತು ವೃತ್ತಿಪರ ಅಥವಾ ತೃತೀಯಕ ಶಿಕ್ಷಣಕ್ಕೆ ತಯಾರು ಮಾಡುತ್ತವೆ. ಬಹುತೇಕ ದೇಶಗಳಲ್ಲಿ ೧೬ ವರ್ಷ ವಯಸ್ಸಿನವರೆಗೆ ವಿದ್ಯಾರ್ಥಿಗಳಿಗೆ ಹಾಜರಿ ಕಡ್ಡಾಯವಾಗಿರುತ್ತದೆ. ಸಂಸ್ಥೆಗಳು, ಕಟ್ಟಡಗಳು ಮತ್ತು ಶಬ್ದಾವಳಿಯು ಪ್ರತಿ ದೇಶಕ್ಕೆ ಹೆಚ್ಚುಕಡಿಮೆ ಅನನ್ಯವಾಗಿರುತ್ತವೆ.[೧][೨]

ಪ್ರತಿ ದೇಶವು ಭಿನ್ನವಾದ ಶಿಕ್ಷಣ ವ್ಯವಸ್ಥೆ ಮತ್ತು ಆದ್ಯತೆಗಳನ್ನು ಹೊಂದಿರುತ್ತದೆ.[೩] ಶಾಲೆಗಳು ವಿದ್ಯಾರ್ಥಿಗಳು, ಸಿಬ್ಬಂದಿ, ಸಂಗ್ರಹ, ಯಾಂತ್ರಿಕ ಹಾಗೂ ವಿದ್ಯುತ್ ವ್ಯವಸ್ಥೆಗಳು, ಸಹಾಯಕ ಸಿಬ್ಬಂದಿ, ಹೆಚ್ಚುವರಿ ಸಿಬ್ಬಂದಿ ಮತ್ತು ಆಡಳಿತಕ್ಕೆ ಸ್ಥಳ ಒದಗಿಸಕೊಡಬೇಕಾಗುತ್ತದೆ. ಅಗತ್ಯವಾದ ಕೋಣೆಗಳ ಸಂಖ್ಯೆಯನ್ನು ಶಾಲೆಯ ನಿರೀಕ್ಷಿತ ಪಟ್ಟಿ ಮತ್ತು ಬೇಕಾದ ಪ್ರದೇಶದಿಂದ ನಿರ್ಧರಿಸಬಹುದು.

ಉಲ್ಲೇಖಗಳು