ಬಿಎಂಡಬ್ಲ್ಯೂ

ಕಾರ್ ಕಂಪನಿ

Bayerische Motoren Werke AG (BMW )(ಆಂಗ್ಲ:Bavarian Motor Works)೧೯೧೬ರಲ್ಲಿ ಸ್ಥಾಪನೆಗೊಂಡ [೩] ಜರ್ಮನಿಯ ಆಟೋಮೊಬೈಲ್(=ಸ್ವಯಂಚಾಲಿತ)‌, ಮೋಟಾರ್‌ ಸೈಕಲ್‌ ಮತ್ತು ಎಂಜಿನ್‌ ತಯಾರಿಸುವ ಸಂಸ್ಥೆ. BMW MINI ಬ್ರ್ಯಾಂಡ್‌ ಕಾರುಗಳನ್ನು ತಯಾರಿಸುತ್ತಿದ್ದು, ಇದು ರೋಲ್ಸ್‌-ರಾಯ್ಸ್‌ ಮೋಟರ್‌ ಕಾರ್ಸ್‌ನ ಮಾತೃ ಸಂಸ್ಥೆ. BMW ತನ್ನ ಸಮರ್ಥ ಕಾರ್ಯ ನಿರ್ವಹಣೆಯಿಂದಲೂ, ವಿಲಾಸೀ ವೈಭವದಿಂದಲೂ ಜನಪ್ರಿಯವಾಗಿದೆ.

Bayerische Motoren Werke (BMW) AG
ಸಂಸ್ಥೆಯ ಪ್ರಕಾರAktiengesellschaft (FWB: BMW)
ಸ್ಥಾಪನೆ೧೯೧೬
ಸಂಸ್ಥಾಪಕ(ರು)Franz Josef Popp
ಮುಖ್ಯ ಕಾರ್ಯಾಲಯMunich, ಜರ್ಮನಿ
ಪ್ರಮುಖ ವ್ಯಕ್ತಿ(ಗಳು)Norbert Reithofer (CEO[೧] and Chairman of Board of Management)
Joachim Milberg (Chairman of Supervisory Board)
ಉದ್ಯಮAutomotive industry
ಉತ್ಪನ್ನAutomobiles, motorcycles, bicycles
ಆದಾಯ€೫೩.೨೦ billion (೨೦೦೮)[೨]
ಆದಾಯ(ಕರ/ತೆರಿಗೆಗೆ ಮುನ್ನ) €೯೨೧ million (೨೦೦೮)[೨]
ನಿವ್ವಳ ಆದಾಯ €೩೨೪ million (೨೦೦೮)[೨]
ಉದ್ಯೋಗಿಗಳು೧೦೦,೦೪೦ (೨೦೦೮)[೨]
ಉಪಸಂಸ್ಥೆಗಳುRolls-Royce Motor Cars
ಜಾಲತಾಣbmw.com

ಸಂಸ್ಥೆಯ ಇತಿಹಾಸ

ಜರ್ಮನಿಯ ಮುನಿಚ್‌ನಲ್ಲಿರುವ BMW ಕೇಂದ್ರ ಕಛೇರಿ

ಒಂದನೇ ಮಹಾಯುದ್ಧದ ನಂತರ ವರ್ಸೈಲ್ಸ್‌ ಅರ್ಮಿಸ್ಟೈಸ್‌ ಟ್ರೀಟಿ (=ವರ್ಸೈಲ್ಸ್‌ ಕದನ ವಿರಾಮ ಒಪ್ಪಂದ)ದ ನಿಯಮಗಳಿಂದಾಗಿ ವಿಮಾನ (ಎಂಜಿನ್‌) ಉತ್ಪಾದನೆ ನಿಲ್ಲಿಸುವಂತೆ BMW ಮೇಲೆ ಒತ್ತಡ ಹೇರಲಾಯಿತು.[೪] ಒಪ್ಪಂದದ ನಿಬಂಧನೆಗಳನ್ನು ತೆರವುಗೊಳಿಸುತ್ತಿದ್ದಂತೆ, ಕ್ರಮೇಣ ಸಂಸ್ಥೆಯು ೧೯೨೩ರಲ್ಲಿ ಮೋಟಾರ್‌ ಸೈಕಲ್‌ ತಯಾರಿಕೆ ಪ್ರಾರಂಭಿಸಿತು.[೫] ನಂತರ ೧೯೨೮-೨೯ರಲ್ಲಿ ಆಟೋಮೊಬೈಲ್‌ಗಳ ಉತ್ಪಾದನೆಯಲ್ಲೂ ತೊಡಗಿಕೊಂಡಿತು.BMW ವೃತ್ತಾಕಾರದ ನೀಲಿ ಮತ್ತು ಬಿಳಿ BMW ಲಾಂಛನ ಅಥವಾ ದುಂಡುಬಿಲ್ಲೆಯು ವಿಮಾನ ಪ್ರೋಪೆಲರ್‌ನ ಚಲನೆಯ ಮಾದರಿಯಂತೆ ರಚಿಸಿತು. ಇದು ನೀಲಿ ಆಕಾಶ ಮತ್ತು ವಿಮಾನದ ಬಿಳಿ ರೆಕ್ಕೆಯ ದ್ಯೋತಕ. ಇದನ್ನು ರಚಿಸಿದ ಹನ್ನೆರಡು ವರ್ಷಗಳ ನಂತರ, ಅಂದರೆ ೧೯೨೯ರಲ್ಲಿ BMW ತನ್ನ ಲಾಂಛನ ಎಂದು ಅಂಗೀಕರಿಸಿತು.[೬][೭] BMW ಸಂಸ್ಥೆಯು ರಾಪ್‌ ಮೋಟರೆನ್ವೆರ್ಕ್‌ ಸಂಸ್ಥೆಯಿಂದ ಬೆಳವಣಿಗೆ ಹೊಂದಿತ್ತು. ಆ ಸಂಸ್ಥೆಯ ವೃತ್ತಾಕಾರದ ಲಾಂಛನವು ವಿಕಸನಗೊಂಡು, BMW ಲಾಂಛನವನ್ನು ರಚನೆಯಾಯಿತು. ಈ ದುಂಡುಬಿಲ್ಲೆಯಾಕಾರದ BMW ಲಾಂಛನವು ಬವರಿಯಾ ದೇಶದ ಬಾವುಟದ ನೀಲಿ ಮತ್ತು ಬಿಳಿ ಬಣ್ಣವನ್ನು ಹಿಮ್ಮೊಗವಾಗಿ ತಿರುಗಿಸಿದರೆ ಕಾಣಿಸುವ ವರ್ಣ ಶೈಲಿಯನ್ನು ಹೋಲುತ್ತಿತ್ತು.BMWನ ಮೊದಲ ಪೂರ್ಣಪ್ರಮಾಣದ ವಿಮಾನ ಎಂಜಿನ್‌ BMW IIIa ಆಗಿದ್ದು, ಇದು ೧೯೧೮ರ ದ್ರವದ ಮೂಲಕ ತಂಪುಗೊಳಿಸಬಹುದಾದ (cooled) ಆರು ಪಿಸ್ಟನ್‌ಗಳನ್ನೂ ಎಂಜಿನ್‌ ಅನ್ನೂ ಒಳಗೊಂಡಿದೆ. ಇದು ಹೆಚ್ಚು ಎತ್ತರದ ಹಾರಾಟದಲ್ಲಿನ ದಕ್ಷತೆಗೆ ಸೂಕ್ತವಾಗಿದೆ.[ಸೂಕ್ತ ಉಲ್ಲೇಖನ ಬೇಕು] ೧೯೩೦ನೇ ದಶಕದಲ್ಲಿ ಜರ್ಮನ್‌ ಸೇನೆಯ ಶಸ್ತ್ರ ವರ್ಧನೆಗಾಗಿ, ಸಂಸ್ಥೆಯು ಜರ್ಮನಿಯ ವಾಯುಪಡೆ ಲಫ್ಟ್‌ವಫ್ಫೆಗಾಗಿ ವಿಮಾನ ಎಂಜಿನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. BMW 132 ಮತ್ತು BMW 801 ಗಾಳಿಯಿಂದ ತಂಪಾಗಬಲ್ಲಂಥ ರೇಡಿಯಲ್‌ ಎಂಜಿನ್‌ಗಳು, ಮತ್ತು ಹೀನ್‌ಕೆಲ್‌ ಹೆ 162 ಸಲಮಂದರ್‌ "ತುರ್ತು ನಿರ್ವಹಣಾ ವಿಮಾನ"ದ ಚಿಕ್ಕ, ೧೯೪೪-೪೫-ಅವಧಿಯ ಜೆಟ್ ಎಂಜಿನ್‌ನ ಸಾಮರ್ಥ್ಯ ಪಡೆದ ಮೊದಲ BMW 003 ಅಕ್ಷೀಯ-ಚಲನೆಯ ಟರ್ಬೊಜೆಟ್‍ ಎಂಜಿನ್ ಸಂಸ್ಥೆಯ WWII ಎಂಜಿನ್‌ ವಿನ್ಯಾಸಗಳಲ್ಲಿ ಪ್ರಮುಖವಾದವು. ವಿಶ್ವದ ಮೊದಲ ಜೆಟ್‌ ಫೈಟರ್‌ ವಿಮಾನ Messerschmitt Me ೨೬೨ರ, A-೧b ಆವೃತ್ತಿಯಲ್ಲಿ BMW ೦೦೩ ಜೆಟ್‌ ಎಂಜಿನ್‌ ಅನ್ನು ಪರೀಕ್ಷಿಸಲಾಯಿತು. ಆದರೆ BMW ಎಂಜಿನ್‌ಗಳು ಮೇಲಕ್ಕೆ ಹಾರಲು ವಿಫಲವಾದವು.[೮] ಇದು Junkers ಎಂಜಿನ್‌ಗಳ ಪರೀಕ್ಷೆ ಯಶಸ್ವಿಯಾಗುವರೆಗೆ, ಜೆಟ್‌ ಫೈಟರ್‌ ವಿಮಾನ ಕಾರ್ಯಯೋಜನೆಗೆ ಪ್ರಮುಖ ಸಮಸ್ಯೆಯಾಗಿತ್ತು.[೯][೧೦]೧೯೫೯ರ ಅವಧಿಯಲ್ಲಿ BMW ಅಟೋಮೋಟೀವ್‌ ವಿಭಾಗವು ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿತ್ತು.[೧೧] ಈ ವಿಭಾಗವನ್ನು ಸ್ಥಗಿತಗೊಳಿಸಬೇಕೇ ಅಥವಾ ಮುಂದುವರಿಸಬೇಕೇ ಎನ್ನುವ ನಿರ್ಧಾರವನ್ನು ಕೈಗೊಳ್ಳಲು ಷೇರುದಾರರ ಸಭೆಯು ಕರೆಯಲಾಗಿತ್ತು. ಹಿಂದೆ ವಿಮಾನ ತಯಾರಿಸುತ್ತಿದ್ದ ಜರ್ಮನಿಯ Messerschmitt ಮತ್ತು Heinkelನಂಥ ಸಂಸ್ಥೆಗಳು ಕಾರು ಉತ್ಪಾದನಾ ಕ್ಷೇತ್ರದಲ್ಲಿ ಯಶಸ್ವಿಯಾಗಿರುವುದನ್ನು ಗಮನಿಸಿದ BMW, ನಂತರ ಆಟೋಮೋಟಿವ್‌ ವಿಭಾಗದ ಕಾರ್ಯಾಚರಣೆಯನ್ನು ಮುಂದುವರಿಸಲು ನಿರ್ಧರಿಸಿತು. ಇಟಲಿಯ ಇಸೊ ಇಸೆಟ್ಟಾವನ್ನು ಉತ್ಪಾದಿಸುವ ಹಕ್ಕುಗಳನ್ನು ಖರೀದಿಸಿತು. ಆ ಚಿಕ್ಕ ಕಾರುಗಳಿಗೆ BMW ತನ್ನ ಸುಧಾರಿತ ಮೋಟಾರ್‌ ಸೈಕಲ್‌ ಎಂಜಿನ್‌ ಅನ್ನು ಅಳವಡಿಸಿತು. ಇದರಿಂದಾಗಿ ಕ್ರಮೇಣವಾಗಿ ಯಶಸ್ವಿಯಾಗಿದ್ದಲ್ಲದೆ, ಪುನಃ ಲಾಭದತ್ತ ಮುಖ ಮಾಡಲು ಸಂಸ್ಥೆಗೆ ಸಾಧ್ಯವಾಯಿತು. ೧೯೫೯ರಿಂದ BMW ಅಕ್ಟೀಂಗೆಸೆಲ್‌ಶಾಫ್ಟ್‌ದ ಬಹುಪಾಲು ಷೇರುಗಳು ಕ್ವಾಂಡ್ಟ್‌ ಸಮೂಹದ ಒಡೆತನದಲ್ಲಿತ್ತು. ಅದು ಸಂಸ್ಥೆಯ ೪೬%ನಷ್ಟು ಷೇರನ್ನು ಹೊಂದಿತ್ತು. ಉಳಿದ ಷೇರು ಸಾರ್ವಜನಿಕರಲ್ಲಿತ್ತು.೧೯೯೨ರಲ್ಲಿ ಕ್ಯಾಲಿಫೋರ್ನಿಯಾದ ಕೈಗಾರಿಕಾ ವಿನ್ಯಾಸ ಸ್ಟುಡಿಯೊ ಡಿಸೈನ್‌ವರ್ಕ್ಸ್‌USAನ ಬಹುಭಾಗದ ಷೇರನ್ನು BMW ಸ್ವಾಧೀನಪಡಿಸಿಕೊಂಡಿತು. ನಂತರ ೧೯೯೫ರಲ್ಲಿ ಪೂರ್ಣಪ್ರಮಾಣದಲ್ಲಿ ಸಂಸ್ಥೆಯ ಷೇರುಗಳನ್ನು ಖರೀದಿಸಿತು. ೧೯೯೪ರಲ್ಲಿ BMW ಸಂಸ್ಥೆಯು ಬ್ರಿಟಿಷ್‌ ರೋವರ್ ಸಮೂಹವನ್ನು[೧೨] ಖರೀದಿಸಿತು (ಆ ಅವಧಿಯಲ್ಲಿ ಸಂಸ್ಥೆಯು ರೋವರ್‌, ಲ್ಯಾಂಡ್‌ ರೋವರ್‌ ಮತ್ತು ಆಸ್ಟಿನ್‌ ಮತ್ತು ಮೊರಿಸ್‌ದಂತಹ ಈಗ ಚಾಲ್ತಿಯಲ್ಲಿಲ್ಲದ ಬ್ರ್ಯಾಂಡ್‌ನ ಹಕ್ಕಗಳು ಸೇರಿದಂತೆ MG ಬ್ರ್ಯಾಂಡ್‌ಗಳನ್ನು ಒಳಗೊಂಡಿತ್ತು), ಮತ್ತು ಆ ಸಂಸ್ಥೆಯನ್ನು ಆರು ವರ್ಷಗಳ ಕಾಲ ನಡೆಸಿತು. ವರ್ಷ ೨೦೦೦ದ ಹೊತ್ತಿಗೆ, ರೋವರ್‌ ಭಾರಿ ಪ್ರಮಾಣದ ನಷ್ಟ ಅನುಭವಿಸಿತು. ಹಾಗಾಗಿ BMW ಸಂಸ್ಥೆಯು ರೋವರ್ ಸಮೂಹವನ್ನು ಮಾರಾಟ ಮಾಡಲು ನಿರ್ಣಯಿಸಿತು. MG ಮತ್ತು ರೋವರ್‌ ಬ್ರ್ಯಾಂಡ್‌ಗಳನ್ನು MG ರೋವರ್‌ ಹೆಸರಿನಲ್ಲಿ ಫೀನಿಕ್ಸ್‌ ಸಮೂಹಕ್ಕೆ ಮಾರಾಟ ಮಾಡಿತು. ಹಾಗೇಯೆ ಲ್ಯಾಂಡ್‌ ರೋವರ್‌ ಅನ್ನು ಫೋರ್ಡ್‌ ಸಂಸ್ಥೆಯು ಖರೀದಿಸಿತು. ೨೦೦೧ರಲ್ಲಿ ಬಿಡುಗಡೆ ಮಾಡಿದ ಹೊಸ MINIಯನ್ನು ತಯಾರಿಸುವ ಹಕ್ಕನ್ನು BMW ತನ್ನಲ್ಲೇ ಉಳಿಸಿಕೊಂಡಿತು.ಸುಮಾರು ಹದಿನೇಳು ವರ್ಷಗಳಷ್ಟು ಸೇವೆ ಸಲ್ಲಿಸಿದ ನಂತರ, ೨೦೦೯ರ ಫೆಬ್ರುವರಿಯಲ್ಲಿ ಮುಖ್ಯ ವಿನ್ಯಾಸಗಾರ ಕ್ರಿಸ್‌ ಬ್ಯಾಂಗಲ್‌ ತಾನು BMW ಸಂಸ್ಥೆಯಿಂದ ಹೊರನಡೆಯುದಾಗಿ ತಿಳಿಸಿದರು. ಅವರ ಸ್ಥಾನಕ್ಕೆ ಅಡ್ರೀಯನ್‌ ವಾನ್‌ ಹೂಯ್ಡೊಂಕ್‌ ನೇಮಕಗೊಂಡರು. ಇವರು ಬ್ಯಾಂಗಲ್‌ರ ಬಲಗೈ ಬಂಟರಾಗಿ ದುಡಿದಿದ್ದರು. ೨೦೦೨ರ ಸರಣಿ-೭ ಮತ್ತು ೨೦೦೨ರ Z೪ನಂತಹ ತಮ್ಮ ಪ್ರಾರಂಭಿಕ ವಿನ್ಯಾಸಗಳಿಂದಾಗಿ ಬ್ಯಾಂಗಲ್‌ ಖ್ಯಾತರು (ಅಥವಾ ಕುಖ್ಯಾತರು)ಆಗಿದ್ದರು. ೨೦೦೭ರ ಜುಲೈಯಲ್ಲಿ, ತಯಾರಿಕಾ ಹಕ್ಕುಗಳು ಹಸ್‌ಕ್ವಾರ್ನಾ ಮೋಟಾರ್‌ಸೈಕಲ್ಸ್‌ ಅನ್ನು ವರದಿಯಾದ ಪ್ರಕಾರ ೯೩ ದಶಲಕ್ಷ ಯುರೊಗಳಿಗೆ BMW ಖರೀದಿಸಿತು. BMW ಮೋಟರ್‌ರಾಡ್‌ ಹಸ್‌ಕ್ವಾರ್ನಾ ಮೋಟಾರ್‌ಸೈಕಲ್ಸ್‌ ಅನ್ನು ಪ್ರತ್ಯೇಕ ಉದ್ಯಮವನ್ನಾಗಿ ಕಾರ್ಯಾಚರಣೆ ಮುಂದುವರಿಸಲು ಯೋಜನೆ ಮಾಡಿತು. ಎಲ್ಲಾ ಅಭಿವೃದ್ಧಿ, ಮಾರಾಟ ಮತ್ತು ಉತ್ಪಾದನೆ ಚಟುವಟಿಕೆಗಳು ಸೇರಿದಂತೆ ಪ್ರಸ್ತುತ ಕಾರ್ಯಪಡೆಯನ್ನು ಸಂಸ್ಥೆಯ ಪ್ರಸ್ತುತ ಕಾರ್ಯಾಗಾರವನ್ನು ವರೆಸ್‌ನಲ್ಲಿ ಉಳಿಸಿಕೊಳ್ಳಲಾಯಿತು.

ನಾಜಿ ಸಂಪರ್ಕ

ಯುದ್ಧವಾಗಿ ೧೫ ವರ್ಷಗಳು ಕಳೆದ ನಂತರ BMWಯ ಬಹುಪಾಲು ಷೇರನ್ನು ಗುಂದರ್ ಕ್ವಾಂಡ್ಟ್‌ರ ಕುಟುಂಬವು ಹೊಂದಿತ್ತು. ೧೯೩೩ರಿಂದ ಗುಂದರ್ ಕ್ವಾಂಡ್ಟ್‌ ನಾಜಿ ಪಕ್ಷದ ಸದಸ್ಯರಾಗಿದ್ದರು. ಚುನಾವಣೆಯಲ್ಲಿ ಹಿಟ್ಲರ್‌ ಗೆದ್ದ ನಂತರ, ಕ್ವಾಂಡ್ಟ್‌ರನ್ನು ಶಸ್ತ್ರಾಸ್ತ್ರಗಳ ಅರ್ಥವ್ಯವಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಈ ಪದವಿಯನ್ನು ನಾಜಿ ಯುದ್ಧ ಸಂದರ್ಭದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕೈಗಾರಿಕೋದ್ಯಮಿಗಳಿಗೆ ನೀಡುತ್ತಿದ್ದರು. ಕ್ವಾಂಡ್ಟ್‌ರ ಕೈಗಾರಿಕೆಗಳು ನಾಜಿ ಸೈನಿಕರಿಗೆ ಯುದ್ಧೋಪರಕಣ, ಬಂದೂಕುಗಳು, ಫಿರಂಗಿ ಮತ್ತು ಫಿರಂಗಿದಳವನ್ನು ಒದಗಿಸುತ್ತಿತ್ತು. ಅವರು ತಮ್ಮ ಕೆಲವು ಕಾರ್ಖಾನೆಗಳಲ್ಲಿ ಸೆರೆ ಶಿಬಿರಗಳಲ್ಲಿರುವ ಗುಲಾಮರನ್ನು ದುಡಿಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗಿದೆ.[೧೩] ಕ್ವಾಂಡ್ಟ್‌ರ ಮೊದಲ ಪತ್ನಿ ಮಗ್ದಾ. ನಂತರ ಮಗ್ದಾ ನಾಜಿ ಪ್ರಚಾರಕ ಮುಖಂಡ ಜೋಸೆಫ್‌ ಜೀಯೊಬಲ್ಸ್‌ರನ್ನು ಮದುವೆಯಾದರು.[೧೪]ಕ್ವಾಂಡ್ಟ್‌ ಗುಲಾಮರನ್ನು ಬಳಸಿಕೊಂಡಿದ್ದು ಮಾತ್ರವಲ್ಲದೆ, ಯುದ್ಧದ ನಂತರದ ಪುನರ್ನಿರ್ಮಾಣ ಕಾರ್ಯದಿಂದಲೂ ಸಹ ಹಿಂದೆ ಸರಿದರು ಎಂದು ೨೦೦೭ರಲ್ಲಿ ಜರ್ಮನ್‌ TVಯಲ್ಲಿ ಪ್ರಸಾರವಾದ ಸಾಕ್ಷ್ಯಚಿತ್ರವು ಬಿಂಬಿಸಿದೆ. ಸಾಕ್ಷ್ಯಚಿತ್ರದಲ್ಲಿ BMW ಸಂಸ್ಥೆಯ ಮೇಲೆ ದೋಷಾರೋಪಣೆ ಮಾಡಲಾಗಿಲ್ಲ ಮತ್ತು ಸಂಸ್ಥೆಯು ಕ್ವಾಂಡ್ಟ್‌ರ ಬಗ್ಗೆ ಏನೂ ಟೀಕೆ ಮಾಡಲಿಲ್ಲ. ಆದರೆ ಕೆಲವು ಸ್ವತಂತ್ರ ಸಂಶೋಧನಾ ಯೋಜನೆಗಳ ಮೂಲಕ ಅದರ ಸಮರ ಸಮಯದ ಇತಿಹಾಸವನ್ನು ಪ್ರಸ್ತುತ ಪಡಿಸಿತು.[೧೩] ನಾಜಿ ಆಳ್ವಿಕೆಯ ಮೊದಲು ಮತ್ತು ಮೂರನೇ ಜರ್ಮನ್‌ ಸಾಮ್ರಾಜ್ಯದ ಆಳ್ವಿಕೆಯ ಅವಧಿಯಲ್ಲಿ ಕುಟುಂಬವು ಹೊಂದಿತ್ತೆನ್ನಲಾದ ನಾಜಿ ಸಂಬಂಧದ ಬಗ್ಗೆ ಸಂಶೋಧನಾ ಯೋಜಯೊಂದಕ್ಕೆ ನಿಧಿಯನ್ನು ಸ್ಥಾಪಿಸುವುದೆಂದು ಪಣ ತೊಡುವ ಮೂಲಕ ಕ್ವಾಂಡ್ಟ್‌ ಕುಟುಂಬವು ಪ್ರತಿಕ್ರಿಯಿಸಿತು.[೧೫]ಡೆನ್ಮಾರ್ಕ್‌ನ ಹಿಂದಿನ ಸ್ವಾತಂತ್ರ್ಯ ಹೋರಾಟಗಾರ ಕಾರ್ಲ್‌ ಅಡೊಲ್ಫ್‌ ಸೋರೆನ್‌ಸೆನ್‌ರಿಗೆ (b. ca. ೧೯೨೭) ಕ್ವಾಂಡ್ಟ್‌ ಕುಟುಂಬವನ್ನು ಭೇಟಿಯಾಗಿ, ಸಂಭನೀಯ ಪರಿಹಾರ ಪಡೆಯಿರಿ ಎಂದು ಕೇಳಿಕೊಳ್ಳಲಾಗಿತ್ತಾದರೂ ಸಹ ತುಂಬಾ ತಡವಾಯಿತೆಂದು ಕುಟುಂಬವನ್ನು ಭೇಟಿಯಾಗಲು ಪುನಃ ಪುನಃ ಅವರು ನಿರಾಕರಿಸಿದರು. ಗಂಡಾಂತರಕಾರೀ ರಸಾಯನಿಕಗಳ ದುಃಪರಿಣಾಮಕ್ಕೆ ಎದೆಯೊಡ್ಡಿ ಕೆಲಸ ಮಾಡಲು ೧೭ ವರ್ಷದ ಬಾಲಕ ಕಾರ್ಲ್‌ ಮತ್ತು ಇತರ ೩೯ ಮಂದಿಯ ನಿಗ್ರಹ ದಳವನ್ನು ಜರ್ಮನಿಗೆ ಕಳುಹಿಸಲಾಯಿತು.ಇಂಥ ಸನ್ನಿವೇಶದಲ್ಲಿ ದುಡಿದ ಈ ತಂಡದ ಅನೇಕರು ಕೆಲವೇ ತಿಂಗಳಲ್ಲಿ ಸಾವಿಗೀಡಾದರು, ಕೇವಲ ನಾಲ್ವರು ಮಾತ್ರ ಬದುಕುಳಿದರು(೨೦೦೯ರ ಮೇ ತಿಂಗಳ ಅಂಕಿಅಂಶದಂತೆ).[೧೬]

ಉತ್ಪಾದನೆ

೨೦೦೬ರಲ್ಲಿ, ತಯಾರಾದ ಚತುಷ್ಚಕ್ರ ವಾಹನದ ಸಂಖ್ಯೆ ೧,೩೬೬,೮೩೮;ಇದು ೫ ದೇಶಗಳಲ್ಲಿ ಉತ್ಪಾದಿತವಾದುದರ ಒಟ್ಟು ಮೊತ್ತ.[೧೭]

ದೇಶಉತ್ಪಾದಕರುಕಾರುಗಳು (೨೦೦೬)ಮಾದರಿಗಳು
ಜರ್ಮನಿBMW೯೦೫,೦೫೭ಇತರೆ:
ಯುನೈಟೆಡ್ ಕಿಂಗ್‍ಡಮ್Mini೧೮೭,೪೫೪ಎಲ್ಲಾ ಮಿನಿಗಳು
ರೋಲ್ಸ್‌-ರಾಯ್ಸ್‌೬೭ಎಲ್ಲಾ ರೋಲ್ಸ್‌-ರಾಯ್ಸ್‌
ಆಸ್ಟ್ರಿಯಾBMW೧೧೪,೩೦೬BMW X೩
ಯುಎಸ್‍ಎBMW೧೦೫,೧೭೨BMW X೫, X೬
ದಕ್ಷಿಣ ಆಫ್ರಿಕಾBMW೫೪,೭೮೨BMW ಸರಣಿ-೩
ಒಟ್ಟು೧,೩೬೬,೮೩೮

ಮೋಟಾರ್‌ ಸೈಕಲ್ಸ್‌

ದಿ R32.ಮೊದಲ BMW ಮೋಟಾರ್‌ ಸೈಕಲ್‌

ಮೋಟಾರ್‌ ಸೈಕಲ್‌ ಎಂಜಿನ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿದ BMW ಮೊದಲನೇ ಮಹಾಯುದ್ಧದ ನಂತರ ಮೋಟಾರ್‌ ಸೈಕಲ್‌ಗಳ ಉತ್ಪಾದನೆಯಲ್ಲಿ ತೊಡಗಿತು. ಸಂಸ್ಥೆಯ ಮೋಟಾರ್‌ ಸೈಕಲ್‌ ಬ್ರ್ಯಾಂಡ್‌ BMW ಮೋಟರ್‌ರಾಡ್‌ ಎಂದು ಹೆಸರಿಸಲಾಗಿದೆ. ಹೆಲಿಯೊಸ್‌ ಮತ್ತು ಫ್ಲಿಂಕ್‌ ವಿಫಲವಾದ ನಂತರ, ೧೯೨೩ರಲ್ಲಿ "R32" ಮೊದಲ ಯಶಸ್ವಿ ಮೋಟಾರ್‌ ಸೈಕಲ್‌ ಆಗಿತ್ತು. ಈ ಮೋಟಾರ್‌ ಸೈಕಲ್‌ "ಬಾಕ್ಸರ್‌" ಜಂಟಿ ಎಂಜಿನ್‌ ಹೊಂದಿದ್ದು, ಈ ಎಂಜಿನ್‌ ಯಂತ್ರದ ಎಲ್ಲಾ ಕಡೆಯಿಂದಲೂ ಗಾಳಿ ಹರಿಯುವಂತೆ ಮಾಡುವ ಮುಂಚಾಚಿದ ಸಿಲಿಂಡರ್ ಅನ್ನು ಒಳಗೊಂಡಿದೆ. ಏಕ ಸಿಲಿಂಡರ್‌ ಮಾದರಿಗಳನ್ನು ಹೊರತುಪಡಿಸಿ (ಇದು ಮೂಲತಃ ಅದೇ ಮಾದರಿಯಾಗಿದೆ), ೧೯೮೦ರ ದಶಕದ ಮೊದಲು ಉತ್ಪಾದಿಸಿದ ತಮ್ಮ ಎಲ್ಲಾ ಮೋಟಾರ್‌ ಸೈಕಲ್‌ಗಳಲ್ಲಿ ಈ ವಿಭಿನ್ನ ವಿನ್ಯಾಸ ರಚನೆಯನ್ನು ಬಳಸಿಕೊಂಡಿದ್ದರು. ಇಂದಿಗೂ ಸಹ ಹಲವು BMW ವಾಹನಗಳನ್ನು ಇದೇ ವಿನ್ಯಾಸದಲ್ಲಿ ಉತ್ಪಾದಿಸಲಾಗುವುದು. ಇದನ್ನು R ಸರಣಿ ಎಂದು ಹೆಸರಿಸಲಾಗಿದೆ.

1939ರಲ್ಲಿ BMW ರೌಂಡೆಲ್‌(=ದುಂಡುಬಿಲ್ಲೆ)

ಎರಡನೇ ಮಹಾಯುದ್ಧದ ಸಮಯದಲ್ಲಿ, BMW ಸೈಡ್‌ಕಾರ್‍‌ (=ವಿಹಾರದ ವಾಹನ) ಅನ್ನು ಸೇರಿಸಲ್ಪಟ್ಟ BMW R75 ಮೋಟಾರ್‌ ಸೈಕಲ್‌ನ್ನು ತಯಾರಿಸಿತು. ಇದು ಜೂಂದಪ್‌ KS೭೫೦ಯ ಪ್ರಮುಖ ವಿನ್ಯಾಸದ ಪಡಿಯಚ್ಚು. ಇದರ ಸೈಡ್‌ಕಾರ್‌ ಚಕ್ರಗನ್ನೂ ಮೋಟರ್‌ ನೆರವಿನ ಚಾಲನೆಗೆ ಒಳಪಡಿಸಲಾಯಿತು. ಹಲವಾರು ವಿಧದಲ್ಲಿ ಜೀಪ್‌ನ ವೈಶಿಷ್ಟ್ಯವನ್ನು ಹೋಲುವ ಈ ವಾಹನವು ಹಳ್ಳಿಗಾಡಿನ ಪ್ರದೇಶದಲ್ಲಿ ಓಡಿಸಲು ಸಮರ್ಥವಾಗಿದೆ.

೧೯೮೩ರಲ್ಲಿ K ಸರಣಿಯು ಮಾರುಕಟ್ಟೆಗೆ ಬಿಡುಗಡೆಯಾಯಿತು. ಇದು ಶಾಫ್ಟ್‌ (=ಚಾಲಕ ದಂಡವನ್ನುರುಳಿಸಿ ಯಂತ್ರಕ್ಕೆ ಬಲ ವರ್ಗಾಯಿಸುವುದು) ನೆರವಿನ ಚಾಲನೆ ಹೊಂದಿದೆ. ಆದರೆ ನೀರಿನಿಂದ ತಂಪುಗೊಳಿಸಿದ ಮತ್ತು ಮುಂದಿನಿಂದ ಹಿಂದಿನವರೆಗೂ ಒಂದೇ ಸಾಲಿನಲ್ಲಿ ಮೂರು ಅಥವಾ ನಾಲ್ಕು ಸಿಲಿಂಡರ್‌ಗಳನ್ನು ಹೊಂದಿದೆ. ಕೆಲವೇ ದಿನಗಳ ನಂತರ, BMW ಏಕ ಮತ್ತು ಸಮಾಂತರ ಎರಡು ರೋಟ್ಯಾಕ್ಸ್‌ ಎಂಜಿನ್‌ಗಳನ್ನು ಹೊಂದಿರುವ ಆದ್ಯಂತ ರಹಿತ ಸರಪಳಿ ಚಾಲಿತವಾದ F ಮತ್ತು G ಸರಣಿಯ ಉತ್ಪಾದನೆಯನ್ನು ಪ್ರಾರಂಭಿಸಿತು.೧೯೯೦ ದಶಕದ ಮೊದಲು, BMW ಏರ್‌ಹೆಡ್‌ ಬಾಕ್ಸರ್‌ ಎಂಜಿನ್‌ ಅನ್ನು ಪರಿಷ್ಕರಿಸಿತು. ಈ ಮಾದರಿಯು ಆಯಿಲ್‌ಹೆಡ್‌ ಎಂದು ಕರೆಯಲ್ಪಟ್ಟಿತು. ೨೦೦೨ರಲ್ಲಿ ಆಯಿಲ್‌ಹೆಡ್‌ ಎಂಜಿನ್‌ ಪ್ರತಿ ಸಿಲಿಂಡರ್‌ಗೆ ಎರಡು ಸ್ಪಾರ್ಕ್‌ಪ್ಲಗ್‌ನ್ನು ಹೊಂದಿತ್ತು. ೨೦೦೪ರಲ್ಲಿ ಹಿಂದಿನ R1150GSನ ೮೫ hp (೬೩ kW) ಹೋಲಿಸಿದಾಗ ೧೧೭೦ ccಗೆ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು R1200GSಗೆ ಅಭಿವೃದ್ದಿಪಡಿಸಿದ ೧೦೦ hp (೭೫ kW) ಕಾರ್ಯದಕ್ಷತೆ ಹೆಚ್ಚಿಸಲು ಸಮತೋಲನದ ಸಾಮರ್ಥ್ಯ ನಿರ್ವಹಣೆಗಾಗಿ ಅಂತರ್ನಿರ್ಮಿತ ಶಾಫ್ಟ್‌ನ್ನು ಅಳವಡಿಸಿದರು. ಆಯಿಲ್‌ಹೆಡ್‌ ಮತ್ತು ಹೆಕ್ಸ್‌ಹೆಡ್‌ ಎಂಜಿನ್‌ಗಳ ಶಕ್ತಿಯುತ ವಿವಿಧ ರೂಪಾಂತರಗಳು R೧೧೦೦S ಮತ್ತು R೧೨೦೦Sನಲ್ಲಿ 98 hp (73 kW) 122 hp (91 kW) ಲಭ್ಯವಿದೆ.

BMW K1200GT

೨೦೦೪ರಲ್ಲಿ BMW ಹೊಸ K೧೨೦೦S ಕ್ರೀಡಾ ಬೈಕ್‌ನ್ನು ಪರಿಚಯಿಸಿತು. ಇದು BMW ತಯಾರಿಸಿದ ಅತ್ಯುತ್ತಮ ಬೈಕ್ ಆಗಿದೆ. ಇದರ ಎಂಜಿನ್‌ ಶಕ್ತಿಯುತವಾಗಿದ್ದು (ವಿಲಿಯಮ್ಸ್‌ F೧ ತಂಡದೊಂದಿಗೆ ಸಂಸ್ಥೆಯ ಒಂದು ಘಟಕ ಸೇರಿ ರಚಿಸಿದ ಎಂಜಿನ್‌167 hp (125 kW) ಆಗಿದೆ), ಹಿಂದಿನ K ಮಾದರಿಗಳಿಗಿಂತ ಹಗುರವಾಗಿದೆ. ಹೊಂಡಾ, ಕವಾಸಕಿ, ಯಮಾಹಾ ಮತ್ತು ಸುಜುಕಿಯಂತಹ ಕ್ರೀಡಾ ಯಂತ್ರ ತಯಾರಿಕಾ ಸಂಸ್ಥೆಗಳ ಸ್ಪರ್ಧೆಯನ್ನು ಎದುರಿಸಲು ಇದು BMW ಮಾಡಿದ ಇತ್ತೀಚಿನ ಪ್ರಯತ್ನ. ಮುಂದಿನ ಮತ್ತು ಹಿಂದಿನ ಅಕ್ಷಾಧಾರ (ಅಕ್ಷಾಧಾರ) ಮತ್ತು BMW ಡ್ಯುಯೊಲವರ್‌ ಎಂದು ಕರೆಯುವ ಹೋಸಾಕ್‌ ಮಾದರಿಯ ಮುಂದಿನ ಫೋರ್ಕ್‌ ಸೇರಿದಂತೆ BMW ಹಲವಾರು ಎಲೆಕ್ಟ್ರಾನಿಕ್‌ ಆಗಿ ಹೊಂದಾಣಿಕೆ ಮಾಡಬಹುದಾದ ಅಪೂರ್ವ ಅನ್ವೇಷಣೆಯನ್ನು BMW ನಡೆಸಿತು. ೧೯೮೦ರ ದಶಕದ ಕೊನೆಯಲ್ಲಿ BMW ಮೊದಲ ಬಾರಿಗೆ ಮೋಟಾರ್‌ ಸೈಕಲ್‌ಗಳಲ್ಲಿ ಆಂಟಿ-ಲಾಕ್‌ ಬ್ರೇಕ್‌ಗಳನ್ನು(=ಬ್ರೇಕ್‌ ಹಾಕದೇ ವಾಹನ ನಿಲ್ಲುವಂತೆ ಮಾಡುವ ವ್ಯವಸ್ಥೆ) ಪರಿಚಯಿಸಿತು. ೨೦೦೬ರಲ್ಲಿ ಆಂಟಿ-ಲಾಕ್‌ ಬ್ರೇಕ್‌ಗಳನ್ನು ಉತ್ಪಾದಿಸಲಾಯಿತು ಮತ್ತು ನಂತರ ೨೦೦೭ರಲ್ಲಿ BMW ಮೋಟಾರ್‌ ಸೈಕಲ್‌ಗಳಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ಆಯ ತಪ್ಪದಂತೆ ಸ್ಥಿರತೆ ಯಂತ್ರಿಸುವ ಮತ್ತು ಜಾರಿಕೆ ನಿಗ್ರಹಿಸುವ ಎಲೆಕ್ಟ್ರಾನಿಕ್‌ ತಂತ್ರಜ್ಞಾನವನ್ನು ಪರಿಚಯಿಸಿತು.ಒಂದರೊಳಕ್ಕೊಂದನ್ನು ತೂರಿಸುವಂಥ ಮುಂದಿನ ಅಕ್ಷಾಧಾರವನ್ನು ಉತ್ಪಾದಿಸುವ ಮೂಲಕ BMW ಮೋಟಾರ್‌ ಸೈಕಲ್‌ನ ಅಕ್ಷಾಧಾರದ ವಿನ್ಯಾಸದಲ್ಲಿ ಹೊಸತನವನ್ನು ಇತರ ತಯಾರಕರು ಉತ್ಪಾದಿಸುವ ಬಹಳ ಹಿಂದೆಯೇ ತಂದಿದೆ. ಅವರು ನಂತರ ಎರ್ಲ್ಸ್‌ ಫೋರ್ಕ್‌, ತೂಗಾಡುವ ಫೋರ್ಕ್‌ನಿಂದ (೧೯೫೫ಯಿಂದ ೧೯೬೯ವರೆಗೆ) ಮುಂದಿನ ಅಕ್ಷಾಧಾರ ಮಾದರಿಗೆ ಬದಲಾಯಿಸಿದರು. ಬಹುಪಾಲು ಆಧುನಿಕ BMWಗಳು ಸೂಕ್ತವಾದ ಹಿಂದಿನ ಸ್ವಿಂಗಾರ್ಮ್‌, ಹಿಂದೆ ಒಂದೇ ಕಡೆ ಸ್ವಿಂಗಾರ್ಮ್‌ ಅನ್ನು ಹೊಂದಿರುವುದು (ಸಾಮಾನ್ಯ ತೂಗಾಡುವ ಫೋರ್ಕ್‌ಗಳಿಗೆ ಹೋಲಿಸಿದರೆ, ಮತ್ತು ತಪ್ಪಾಗಿ ಇದನ್ನು ತೂಗಾಡುವ ಕೈ ಎಂದು ಕರೆಯುವರು).ಕೆಲವು BMWಗಳು ೧೯೯೦ರ ದಶಕದ ಮೊದಲು ಬಳಸುತ್ತಿದ್ದ ಇನ್ನೊಂದು ವ್ಯಾಪಾರ ಮುದ್ರೆಯನ್ನು ಹೊಂದಿರುವ ಮುಂದಿನ ಅಕ್ಷಾಧಾರ ವಿನ್ಯಾಸ ಟೆಲಿಲಿವರ್‌ ಅನ್ನು ಬಳಸಲು ಪ್ರಾರಂಭಿಸಿದ್ದವು. ಅರ್ಲ್ಸ್‌ ಫೋರ್ಕ್‌ನಂತೆ, ಟೆಲಿಲಿವರ್‌ ಬ್ರೇಕ್‌ ಹಾಕುವಾಗ ವೇಗದ ಹೆಚ್ಚಳವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ.

ಸ್ವಯಂಚಾಲಿತ ಯಂತ್ರ(=ಆಟೋಮೊಬೈಲ್‌)

ನ್ಯೂ ಕ್ಲಾಸ್‌

ನ್ಯೂ ಕ್ಲಾಸ್‌ (ಜರ್ಮನ್‌: ನ್ಯೂ ಕ್ಲಾಸೆ ) ಸೆಡಾನ್‌ಗಳು (=ನಾಲ್ವರು ಕೂಡಬಹುದಾದ ಮುಚ್ಚಿಗೆ ವಾಹನ) ಮತ್ತು ಕೂಪೆಗಳು (=ಇಬ್ಬರು ಕೂಡಬಹುದಾದ ಮುಚ್ಚಿಗೆ ವಾಹನ) ಎರಡರ ವೈಶಿಷ್ಟ್ಯಗಳನ್ನು ಹೊಂದಿರುವ ಮಧ್ಯಮ ಗಾತ್ರದ ಮಾದರಿಯಾಗಿದ್ದು, ೧೯೬೨ರಲ್ಲಿ ೧೫೦೦ ಮಾದರಿಯೊಂದಿಗೆ ಪ್ರಾರಂಭವಾದ ಇದು, ೧೯೭೭ರಲ್ಲಿ ಕೊನೆಯ ೨೦೦೨ರ ಮಾದರಿಯವರೆಗೂ ಮುಂದುವರಿಯಿತು. [[ಸಂಪೂರ್ಣ ಸ್ವತಂತ್ರ ಅಕ್ಷಾಧಾರ, ಮುಂದೆ ಮ್ಯಾಕ್‌ಫೆರ್ಸನ್‌ ಸ್ಟ್ರಟ್‌ಗಳು ಮತ್ತು ಮುಂದಿನ ಡಿಸ್ಕ್‌ ಬ್ರೇಕ್‌ಗಳನ್ನು ಒಳಗೊಂಡಂಥ ನಾಲ್ಕು-ಸಿಲಿಂಡರ್‌|ಸಂಪೂರ್ಣ ಸ್ವತಂತ್ರ ಅಕ್ಷಾಧಾರ, ಮುಂದೆ ಮ್ಯಾಕ್‌ಫೆರ್ಸನ್‌ ಸ್ಟ್ರಟ್‌ಗಳು ಮತ್ತು ಮುಂದಿನ ಡಿಸ್ಕ್‌ ಬ್ರೇಕ್‌ಗಳನ್ನು ಒಳಗೊಂಡಂಥ ನಾಲ್ಕು-ಸಿಲಿಂಡರ್‌]] M10 ಎಂಜಿನ್‌ ಅನ್ನು ಹೊಂದಿರುವ ನ್ಯೂ ಕ್ಲಾಸ್‌ ಮಾದರಿ ವಾಹನಗಳನ್ನು BMW ಉತ್ಪಾದಿಸಿತು. ಆರಂಭದಲ್ಲಿ ನಾಲ್ಕು ಬಾಗಿಲಿನ ಸೆಡಾನ್‌ಗಳು ಮತ್ತು ಎರಡು ಬಾಗಿಲಿನ ಕೂಪೆಗಳನ್ನು ಒಳಗೊಂಡಿರುವ ನ್ಯೂ ಕ್ಲಾಸ್‌ ಸರಣಿಯು, ೧೯೬೬ರಲ್ಲಿ ೦೨ ಸರಣಿ ೧೬೦೦ ಮತ್ತು ೨೦೦೨ ಮಾದರಿಗಳನ್ನು ಎರಡು ಬಾಗಿಲಿನ ಕ್ರೀಡಾ ಸೆಡಾನ್‌ಗಳಿಗೆ ವಿಸ್ತರಿಸಲಾಯಿತು.ಪವರ್‌ಟ್ರೈನ್‌ ಬಿಟ್ಟು ಉಳಿದ ಯಾವುದೇ ಚಿಕ್ಕ ಕಾರುಗಳ ಸಾಮಾನ್ಯ ಅಂಶಗಳಿಗಿಂತಲೂ ವಿಭಿನ್ನವಾಗಿದ್ದು,ಈ ಕ್ರೀಡಾ ವಾಹನಗಳು, ವಾಹನೋತ್ಸಾಹಿಗಳ ಗಮನ ಸೆಳೆಯಿತು ಮತ್ತು BMW ಒಂದು ಅಂತಾರಾಷ್ಟ್ರೀಯ ಬ್ರ್ಯಾಂಡ್‌ ಆಗಿ ಬೆಳೆಯಲು ಕಾರಣವಾಯಿತು. ಹೆಸರಾಂತ BMW ಸರಣಿ 3ರ ಹಿಂದಿನ ಮಾದರಿಗಳ ಜನಪ್ರಿಯತೆ ಮತ್ತು ಎರಡು ಬಾಗಿಲುಗಳನ್ನು ಹೊಂದಿರುವ ಕಾರುಗಳ ಯಶಸ್ಸು ಕಾರು ತಯಾರಕರ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆವ ಮೂಲಕ, ಸಂಸ್ಥೆಯ ಭವಿಷ್ಯ ಗಟ್ಟಿಗೊಂಡಿತು. ೧೯೭೨ರಲ್ಲಿ "೦"ಯಲ್ಲಿ ಕೊನೆಗೊಳ್ಳುವ ನಾಲ್ಕು ಬಾಗಿಲಿನ ನ್ಯೂ ಕ್ಲಾಸ್‌ ಸರಣಿಯ ಸ್ಥಾನವನ್ನು ಅದಕ್ಕಿಂತಲೂ ಗಾತ್ರದಲ್ಲಿ ಹಿರಿಯದಾದ BMW ಸರಣಿ 5 ಪಡೆದುಕೊಂಡಿತು. ದುಬಾರಿ ೨೦೦೦C ಮತ್ತು ೨೦೦೦CS ಕೂಪೆಗಳ ಸ್ಥಾನವನ್ನು, ೧೯೬೯ರಲ್ಲಿ ೨೮೦೦CS ಮಾದರಿಯೊಂದಿಗೆ ಪರಿಚಯಿಸಲಾದಆರು-ಸಿಲಿಂಡರ್‌ಗಳನ್ನುಳ್ಳ BMW E9 ಆಕ್ರಮಿಸಿಕೊಂಡಿತು. ಎರಡು ಬಾಗಿಲಿನ ೧೬೦೦ ಕಾರಿನ ಉತ್ಪಾದನೆಯನ್ನು ೧೯೭೫ರಲ್ಲಿ ನಿಲ್ಲಿಸಲಾಯಿತು, ೧೯೭೫ರಲ್ಲಿ ೨೦೦೨ ಸ್ಥಾನವನ್ನು ೩೨೦i ಆಕ್ರಮಿಸಿತು.

ಚಾಲ್ತಿಯಲ್ಲಿರುವ ಮಾದರಿಗಳು

BMW ಸರಣಿ 3(E90)

೨೦೦೪ರಲ್ಲಿ ಸರಣಿ 1ಯನ್ನು ಪ್ರಾರಂಭಿಸಲಾಯಿತು. ಇದು BMWನ ಅತಿ ಚಿಕ್ಕ ಕಾರು ಆಗಿದ್ದು, ಇದು ಕೂಪೆ/ಕನ್ವರ್ಟಿಬಲ್‌ (E೮೨/E೮೮) ಮತ್ತು ಜಾರುಬಾಗಿಲು (E೮೧/E೮೭) ಮಾದರಿಗಳಲ್ಲಿ ದೊರೆಯುತ್ತಿತ್ತು. ಮಧ್ಯಮ ಗಾತ್ರದ ದುಬಾರಿ ಕಾರು ಆಗಿರುವ ಸರಣಿ-3 ಅನ್ನು ಮಾದರಿ ರಚನೆಯಾದ ವರ್ಷ ೧೯೭೫ರಿಂದ ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಇದು ಐದನೇ ಪೀಳಿಗೆಯ (E90) ಮಾದರಿಯಾಗಿದೆ; ಕ್ರೀಡಾ ಸೆಡಾನ್‌ (E೯೦), ಸ್ಟೇಶನ್‌ ವೇಗನ್‌ (E೯೧), ಕೂಪೆ (E೯೨) ಮತ್ತು ಕನ್ವರ್ಟಿಬಲ್‌ (E೯೩) ಮಾದರಿಗಳನ್ನು ಇದು ಒಳಗೊಂಡಿದೆ. ಮೊದಲನೇ ಪಿಳಿಗೆಯ ಕಾರುಗಳ ನಂತರ, ಸರಣಿ ೩ನ್ನು ಮಾನದಂಡ/ಮೈಲಿಗಲ್ಲಿನಂತೆ ಪರಿಗಣಿಸಲಾಗುವುದು, ಮತ್ತು BMW ಕಾರಿನ ಗುಣಮಟ್ಟದ ಮಟ್ಟಕ್ಕೆ ಎಷ್ಟು ಸನಿಹದಲ್ಲಿ ನಾವಿದ್ದೇವೆ ಎಂದು ಸ್ಪರ್ಧಿಗಳು ಚಿಂತಿಸುತ್ತಿದ್ದರು. ಕೆಲವು ದೇಶಗಳಲ್ಲಿ BMW ಕಾರುಗಳು ಅಗ್ಗದ ಕಾರಿನ ಮಾದರಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಅವುಗಳಲ್ಲಿ ಪ್ರಮುಖವಾಗಿ UKಯಲ್ಲಿ ಫೋರ್ಡ್‌ ಮೊಂಡಿಯೊಗಿಂತ ಹೆಚ್ಚು ಮಾರಾಟವಾಗಿದೆ. ಇದು BMW ಜಾಗತಿಕ ಕಾರುಗಳ ಮಾರಾಟದಲ್ಲಿ ಬಹುಪಾಲನ್ನು ಹೊಂದಲು ಕಾರಣವಾಯಿತು. ಸರಣಿ-5 ಮದ್ಯಮ ಗಾತ್ರದ ದುಬಾರಿ ಕಾರುಆಗಿದ್ದು, ಸೆಡಾನ್‌ (E೬೦) ಮತ್ತು ಸ್ಟೇಷನ್ ವೇಗಾನ್‌ (E೬೧) ಮಾದರಿಗಳಲ್ಲಿ ದೊರೆಯುವುದು. ೨೦೧೦ರಲ್ಲಿ ಸರಣಿ 5 ಗ್ರ್ಯಾನ್‌ ಟ್ಯುರಿಸ್ಮೊ (F೦೭) ಉತ್ಪಾದನೆಯು ಪ್ರಾರಂಭವಾಗಲಿದೆ. ಸ್ಟೇಷನ್‌ ವೇಗಾನ್‌ ಮತ್ತು ಕ್ರಾಸ್‌ಓವರ್‌ SUV ನಡುವೆ ಇದು ಇನ್ನೊಂದು ವಿಭಾಗವನ್ನು ಸೃಷ್ಟಿಸುವುದು.[೧೮]

BMW ಸರಣಿ 7(F01)

ಸರಣಿ 7 ಪೂರ್ಣಪ್ರಮಾಣದ ಆಧಿಪತ್ಯ ಸಾಧಿಸಿದ BMW ಸೆಡಾನ್‌ ವಾಹನ ಎನಿಸಿದೆ. iDrive ವ್ಯವಸ್ಥೆಯನ್ನೂ ಒಳಗೊಂಡಂತೆ ವಿವಾದಾತ್ಮಕವಾದ ಹಲವಾರು ನಾವೀನ್ಯತೆಗಳನ್ನು BMW ಸರಣಿ ೭ರಲ್ಲಿ ಮೊದಲ ಬಾರಿಗೆ ಪರಿಚಯಿಸಿತು. ಜಲಜನಕವನ್ನು ಆಂತರಿಕವಾಗಿ ದಹಿಸುವ ವಿಶ್ವದ ಮೊದಲ ಎಂಜಿನ್‌ನನ್ನು ಸರಣಿ ೭ರ ವಾಹನದಲ್ಲಿ ಅಳವಡಿಸಲಾಗಿತ್ತು.ಇಂಧನವನ್ನಾಗಿ ದ್ರವ ರೂಪೀ ಹೈಡ್ರೋಜನ್‌(=ಜಲಜನಕ)ಅನ್ನು ಪೂರೈಸಲಾದ ಈ ಎಂಜಿನ್‌ ಉರಿದ ಮೇಲೆ ಕೇವಲ ಶುದ್ಧ ನೀರಿನ ಹಬೆಯನ್ನು ಹೊರಸೂಸುವುದು. ಇತ್ತೀಚಿನ ಪೀಳಿಗೆ ಕಾರನ್ನು (F೦೧) ಪ್ರಥಮ ಬಾರಿಗೆ ೨೦೦೯ರಲ್ಲಿ ಪರಿಚಯಿಸಲಾಯಿತು. BMWನ ಸರಣಿ ೫ರ ಕಾರ್ಯನಿರ್ವಹಣೆ ಆಧಾರವನ್ನಾಗಿ ನೋಡಿದರೆ, ಸರಣಿ 6 ಆರಾಮವಾಗಿ ಚಲಿಸುವ ಸುಖಕರವಾದ ಕ್ರೀಡಾ ಕೂಪೆ/ಕನ್ವರ್ಟಿಬಲ್‌ (E೬೩/E೬೪) ಕಾರು. Z3, Z4 (E೮೫) ಮಾದರಿಗಳ ನಂತರ ಬಂದಿರುವ ೨-ಆಸನಗಳನ್ನು ಹೊಂದಿರುವ ರೋಡ್‌ಸ್ಟರ್‌ ಮತ್ತು ಕೂಪೆಯು ೨೦೦೨ರಿಂದ ಇಲ್ಲಿಯ ತನಕ ಮಾರಾಟವಾಗುತ್ತಿದೆ.

BMW X3 SUV (E83)

BMWನ ಮೊದಲ ಕ್ರಾಸ್‌ಒವರ್‌ SUV (BMW ನಿರ್ಮಿಸಿದ SAV ಅಥವಾ "ಕ್ರೀಡೋದ್ದೇಶದ ವಾಹನ" ಎಂದು ಕರೆಯಲಾಗುವ) X3 (E೮೩) ಅನ್ನು ೨೦೦೩ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. E೪೬/೧೬ ಸರಣಿ ೩ರ ಕಾರ್ಯಾಚರಣೆಯನ್ನು ಆಧರಿಸಿ ಇದನ್ನು ತಯಾರಿಸಲಾಗಿದೆ. ಇದು BMWನ xDrive ಎಲ್ಲಾ ಚಕ್ರಗಳೂ ಚಾಲನಾ ವ್ಯವಸ್ಥೆಯನ್ನು ಒಳಗೊಂಡಿರುವುದರಿಂದ ಯುರೋಪ್‌ನ ಹಳ್ಳಿಗಾಡಿನ ರಸ್ತೆಗಳಲ್ಲಿ ಚಲಿಸುವ ವಾಹನವನ್ನಾಗಿ ಮಾರುಕಟ್ಟೆಗೆ ಒದಗಿಸಲಾಯಿತು. BMW ಎಲ್ಲಾ ಚಕ್ರ ಚಾಲನೆಯ X5 (E೭೦) ಮುಧ್ಯಮ ಗಾತ್ರದ ಸುಖಕರ SUV (SAV) ಅನ್ನು ೨೦೦೦ರಿಂದಲೂ ಮಾರಾಟ ಮಾಡುತ್ತಿದೆ. ೪ ಆಸನಗಳನ್ನು ಹೊಂದಿರುವ ಕ್ರಾಸ್‌ಒವರ್‌ SUV ಅನ್ನು BMW ೨೦೦೭ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿತು. BMW X6 ಅನ್ನು "ಕ್ರೀಡೋದ್ದೇಶದ ಕೂಪೆ"ಯಂತೆ (SAC) ಮಾರಾಟ ಮಾಡಿತು. ಮುಂಬರುವ X1 ಮಾದರಿಗೂ BMW ತನ್ನ ಕ್ರೀಡೋದ್ದೇಶದ ಸರಣಿ ಮಾದರಿಯನ್ನು ವಿಸ್ತರಿಸಿತು.

BMW M ಮಾದರಿಗಳು

BMW M3 ಕೂಪೆ (E92)

ಸರಣಿ ೩ರನ್ನು ಆಧರಿಸಿದ M3 ಮಾದರಿಯು BMWಗೆ ಸಂಪೂರ್ಣ ಹೊಸದಾಗಿರುವ ರೇಸ್‌ಗೆ ತಯಾರಾಗಿರುವ ವಾಹನ ಉತ್ಪಾದನೆಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಮತ್ತು ಪ್ರಶಸ್ತಿಗಳನ್ನು ಗಳಿಸಿದ ಎಂಜಿನ್‌ಗಳಿಂದಾಗಿ ಮತ್ತು ವಿಶಿಷ್ಟ ರಚನೆಯಿಂದಾಗಿ M೩ ಪ್ರಾರಂಭದಿಂದಲೂ ಉತ್ತಮವಾಗಿ ಮಾರಾಟವಾಗುತ್ತಿತ್ತು. ಅತ್ಯಂತ ಹೊಸ V೮-ಸಾಮರ್ಥ್ಯ ಹೊಂದಿದ ತಂತ್ರಜ್ಞಾನವು ಯುರೋಪ್‌ನಲ್ಲಿ ೨೦೦೭ರ ಶರತ್ಕಾಲದಲ್ಲಿ ಲಭ್ಯವಾಗಿದ್ದು, ನಂತರ ಈ ತಂತ್ರಜ್ಞಾನವನ್ನು ೨೦೦೮ರ ಎರಡನೇ ತ್ರೈಮಾಸಿಕದಲ್ಲಿ U.S.ನಲ್ಲಿ ಕೂಪೆಯಾಗಿ (E೯೨), ನಂತರ ಕ್ಯಾಬ್ರಿಯೊಲೆಟ್‌ (E೯೩) ಮತ್ತು ಸೆಡಾನ್‌ನ (E೯೦) ವಿವಿಧ ಪ್ರಕಾರಗಳಲ್ಲಿ ಬಳಸಿಕೊಳ್ಳಲಾಯಿತು. ಸರಣಿ ೫ ಅನ್ನು ಆಧರಿಸಿದ M5 ಮಾದರಿಯು E೬೦ ಸರಣಿ ೫ರ M ವಿಭಾಗದ V೧೦-ಸಾಮರ್ಥ್ಯ ಹೊಂದಿದ ಆವೃತ್ತಿಯಾಗಿದೆ.[೧೯] ಡ್ರೈವ್‌ಟ್ರೈನ್‌ M೫ನ ಮಾದರಿಯದ್ದಾದ M6, ಸರಣಿ ೬ರ M ವಿಭಾಗದ ಆವೃತ್ತಿ. Z೪ M, ಅಥವಾ M ಕೂಪೆ/M ರೋಡ್‌ಸ್ಟರ್‌ Z೪ನ M ವಿಭಾಗದ ಆವೃತ್ತಿಯಾಗಿದೆ. X5M X೫ನ M ವಿಭಾಗದ ಆವೃತ್ತಿಯಾಗಿದೆ ಮತ್ತು X6M X೬ನ M ವಿಭಾಗದ ಇನ್ನೊಂದು ಆವೃತ್ತಿ. X೫M ಮತ್ತು X೬M ಎರಡೂ ಮಾದರಿಗಳು V೮ ಅವಳಿ ಸ್ಕ್ರೋಲ್‌ ಅವಳಿ ಟರ್ಬೊವನ್ನು ಒಳಗೊಂಡಿವೆ.

ಮೋಟರ್‌ಸ್ಪೋರ್ಟ್

BMW ಸೋಬರ್‌ F1 ತಂಡದ ಲಾಂಛನ.
[47]ಫಾರ್ಮುಲಾ ಒನ್‌ ಅನ್ನು ಪರಿಪೂರ್ಣ ತಂಡವಾಗಿ BMW ಮೊದಲ ಬಾರಿಗೆ ಪ್ರವೇಶಿಸಿತು.

BMW ಮೊಟ್ಟ ಮೊದಲ ಮೋಟಾರ್‌ ಸೈಕಲ್‌ ಉದಯವಾದಾಗಿನಿಂದಲೂ ಮೋಟಾರ್‌ಸ್ಪೋರ್ಟ್‌ ಚಟುವಟಿಕೆಯಲ್ಲಿ ತೊಡಗಿಕೊಂಡೇ ಇದೆ.

ಪ್ರಾಯೋಜಕತ್ವ

  • ಫಾರ್ಮುಲಾ BMW - ಕಿರಿಯರ ರೇಸಿಂಗ್‌ ಫಾರ್ಮುಲಾ ವರ್ಗ.
  • ಕುಂಹೊ BMW ಚ್ಯಾಂಪಿಯನ್‌ಶಿಪ್‌ - ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ BMWಗಾಗಿಯೇ ನಡೆಯುವ ಚ್ಯಾಂಪಿಯನ್‌ಶಿಪ್‌ .

ಮೋಟಾರ್ ಸೈಕಲ್

  • ಐಲ್‌ ಆಫ್‌ ಮ್ಯಾನ್‌ TT- ೧೯೩೯ರಲ್ಲಿ ಜಾರ್ಜ್‌ ಮೀಯರ್‌ ಒಡನೆ BMW ಐಲ್‌ ಆಪ್‌ ಮ್ಯಾನ್‌ TT ರೇಸ್‌ ಅನ್ನು ಗೆದ್ದ ಮೊದಲ ವಿದೇಶಿ ಉತ್ಪಾದಕ ಸಂಸ್ಥೆಯಾಯಿತು
  • ಡಾಕರ್‌ ರ‌್ಯಾಲಿ- BMW ಮೋಟಾರ್‌ ಸೈಕಲ್ಸ್‌ ಡಾಕರ್‌ ರ‌್ಯಾಲಿಯನ್ನು ಒಟ್ಟು ಆರು ಬಾರಿ ಗೆದ್ದಿತ್ತು- ೧೯೮೧, ೧೯೮೩, ೧೯೮೪, ೧೯೮೫, ೧೯೯೯, ಮತ್ತು ೨೦೦೦ರಲ್ಲಿ .
  • ಸೂಪರ್‌ಬೈಕ್‌ ವರ್ಲ್ಡ್‌ ಚ್ಯಾಂಪಿಯನ್‌ಶಿಪ್‌- ೨೦೦೯ರಲ್ಲಿ BMW ತನ್ನೆಲ್ಲಾ ಹೊಸ ಸುಪರ್‌ಬೈಕ್‌ BMW S1000RRನೊಂದಿಗೆ ಪ್ರೀಮಿಯರ್‌ ರೋಡ್‌ ರೇಸಿಂಗ್‌ಗೆ ಮರಳಿತ್ತು.

ಫಾರ್ಮುಲಾ ಒನ್‌

ಫಾರ್ಮುಲಾ ಒನ್‌ನಲ್ಲಿ ಅನೇಕ ಬಾರಿ ಯಶಸ್ಸನ್ನು ಗಳಿಸಿದ ಇತಿಹಾಸ BMWಗೆ ಇದೆ. BMW ಸಮರ್ಥ ಇಂಜಿನ್‌ ಹೊಂದಿದ ಕಾರುಗಳು ೨೦ ರೇಸುಗಳನ್ನು ಗೆದ್ದಿದ್ದವು.೨೦೦೬ರಲ್ಲಿ BMW ಸೋಬರ್‌ ತಂಡವನ್ನು ಖರೀದಿಸಿ, ಫಾರ್ಮುಲಾ ಒನ್‌ ನಿರ್ಮಾಣಕ್ಕೆ ಆಋಂಭಿಸಿತು. ೨೦೦೭ ಮತ್ತು ೨೦೦೮ರಲ್ಲಿ ಕೆಲ ಮಟ್ಟಿನ ಯಶಸ್ಸನ್ನು ಅನುಭವಿಸಿತು. BMW ಸೋಬರ್‌ F೧ ತಂಡವು ರಾಬರ್ಟ್‌ ಕ್ಯುಬಿಕಾಚಾಲನೆ ಮಾಡುವುದರೊಂದಿಗೆ ಕೆನಡಾದ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಯಶ ಗಳಿಸಿದ್ದು ಇತ್ತೀಚೆಗೆ ಅಂದರೆ, ೨೦೦೮ರ ಜೂನ್‌ ೮ರಲ್ಲಿ. ಈ ಕೆಳಗಿನವು ತಂಡದ ಸಾಧನೆಗಳು:

  • ಡ್ರೈವರ್‌ ಚ್ಯಾಂಪಿಯನ್‌ಶಿಪ್‌: ೧ (೧೯೮೩)
  • ಕಂಸ್ಟ್ರಕ್ಟರ್‌ ಚ್ಯಾಂಪಿಯನ್‌ಶಿಪ್‌: ೦ (ದ್ವಿತೀಯ ಸ್ಥಾನ ೨೦೦೨, ೨೦೦೩, ೨೦೦೭)
  • ಗ್ರ್ಯಾಂಡ್‌ ಪ್ರಿಕ್ಸ್‌ ವಿನ್ಸ್‌: ೨೦
  • ಪೋಡಿಯಮ್‌ ಪೂರ್ಣಗೊಳಿಸುವಿಕೆ: ೭೬
  • ಪೋಲ್‌ ಸ್ಥಾನ: ೩೩
  • ಅತಿ ವೇಗದ ಲ್ಯಾಪ್ಸ್‌: ೩೩

ವಿಲಿಯಮ್ಸ್‌, ಬೆನೆಟನ್‌, ಬ್ರಾಬಮ್‌ ಮತ್ತು ಆರೋಸ್‌ಗೆ BMW ಎಂಜಿನ್‌ ಪೂರೈಕೆದಾರ ಸಂಸ್ಥೆಯಾಗಿತ್ತು. ಜೆನ್ಸನ್‌ ಬಟನ್‌, ಜಾನ್‌ ಪಬ್ಲೊ ಮೊಂಟೊಯಾ ಮತ್ತು ಸಬಾಸ್ಟಿಯನ್‌ ವೆಟ್ಟೆಲ್‌ BMWಯೊಂದಿಗೆ ತಮ್ಮ ಫಾರ್ಮುಲಾ ಒನ್‌ ವೃತ್ತಿ ಜೀವನವನ್ನು ಪ್ರಾರಂಭಿಸಿದ ಪ್ರಮುಖ ಚಾಲಕರು.೨೦೦೯ ಅವಧಿಯ ಕೊನೆಯಲ್ಲಿ ಫಾರ್ಮುಲಾ ಒನ್‌ನಿಂದ ತನ್ನ ತಂಡವನ್ನು ಹಿಂದೆಗೆದುಕೊಳ್ಳುವುದಾಗಿ ೨೦೦೯ರ ಜುಲೈನಲ್ಲಿ BMW ಪ್ರಕಟಿಸಿತು.[೨೦]

ಕ್ರೀಡಾ ಕಾರು

  • ಲೆ ಮ್ಯಾನ್ಸ್‌ 24 ಅವರ್ಸ್‌ - ವಿಲಿಯಮ್ಸ್‌ ಗ್ರ್ಯಾಂಡ್‌ ಪ್ರಿಕ್ಸ್‌ ಎಂಜಿನಿಯರಿಂಗ್‌ ವಿನ್ಯಾಸಗೊಳಿಸಿದ BMW V12 LMR ಕಾರಿನೊಂದಿಗೆ ಲೆ ಮ್ಯಾನ್ಸ್‌ನಲ್ಲಿ ೧೯೯೯ರಲ್ಲಿ BMW ಗೆಲುವು ಸಾಧಿಸಿತು. ಹಾಗೇಯೆ 1995 ಆವೃತ್ತಿಯ BMW-ಎಂಜಿನ್‌ ಹೊಂದಿದ ಮ್ಯಾಕ್‌ಲೇರನ್‌ F1 GTR ರೇಸ್‌ ಕಾರಿನೊಂದಿಗೆ ಕೊಕುಸೈ ಕೈಹತ್ಸು ರೇಸಿಂಗ್‌ ತಂಡವು ಗೆದ್ದುಕೊಂಡಿತು.
  • ನೂರ್ಬರ್‌ಗ್ರಿಂಗ್‌ - BMW 24 ಅವರ್ಸ್‌ ನರ್ಬರ್‌ಗ್ರಿಂಗ್‌ ಅನ್ನು ೧೮ ಬಾರಿ ಗೆದ್ದಿತ್ತು ಮತ್ತು 1000 ಕಿ.ಮೀನ ನೂರ್ಬರ್‌ಗ್ರಿಂಗ್‌ ಅನ್ನು ಎರಡು ಬಾರಿ (೧೯೭೬ ಮತ್ತು ೧೯೮೧) ಗೆದ್ದಿತ್ತು.
  • 24 ಅವರ್ಸ್‌ ಆಫ್‌ ಡೇಟೋನಾ- BMW ಒಂದು ಬಾರಿ ಗೆದ್ದಿತ್ತು (೧೯೭೬)
  • ಸ್ಪಾ 24 ಅವರ್ಸ್-‌ BMW ೨೧ ಬಾರಿ ಜಯ ಸಾಧಿಸಿತ್ತು.
  • ಮ್ಯಾಕ್‌ಲೇರನ್‌ F೧ GTR - BMW ವಿನ್ಯಾಸಗೊಳಿಸಿದ ಎಂಜಿನ್‌ ಅನ್ನು ಹೊಂದಿರುವ ೧೯೯೦ ದಶಕದ ಮಧ್ಯ ಭಾಗದಲ್ಲಿ ಯಶಸ್ವಿ GT ರೇಸಿಂಗ್‌ ಕಾರ್‌ ಆಗಿತ್ತು. ೧೯೯೫ ಮತ್ತು ೧೯೯೬ರಲ್ಲಿ BMW BPR ಗ್ಲೋಬಲ್‌ GT ಸರಣಿ ಮತ್ತು 1995ರಲ್ಲಿ 24 ಅವರ್ಸ್‌ ಆಫ್‌ ಲೆ ಮ್ಯಾನ್ಸ್‌ ಅನ್ನು ಗೆದ್ದಿತ್ತು.

ಪ್ರವಾಸಿ ಕಾರುಗಳು

ಪ್ರವಾಸಿ ಕಾರು ರೇಸಿಂಗ್‌ನಲ್ಲಿ BMWಗೆ ಹಲವಾರು ಯಶಸ್ಸು ದಾಖಲಿಸಿದೆ ಇತಿಹಾಸವಿದೆ.

  • ಯುರೋಪಿಯನ್‌ ಟೂರಿಂಗ್ ಕಾರ್‌ ಚ್ಯಾಂಪಿಯನ್‌ಶಿಪ್‌ (ETCC) - ೧೯೬೮ರಿಂದ BMW ಹಲವು ತಯಾರಕರ ಮತ್ತು ತಂಡದ ಪ್ರಶಸ್ತಿಗಳು ಒಳಗೊಂಡಂತೆ ೨೪ ಚಾಲಕರ ಚ್ಯಾಂಪಿಯನ್‌ಶಿಪ್‌[ಸೂಕ್ತ ಉಲ್ಲೇಖನ ಬೇಕು]ಗಳನ್ನು ಗೆದ್ದಿತು.
  • ವರ್ಲ್ಡ್‌ ಟೂರಿಂಗ್‌ ಕಾರ್ ಚ್ಯಾಂಪಿಯನ್‌ಶಿಪ್‌ (WTCC) - BMW ಚಾಲಕರ ಚ್ಯಾಂಪಿಯನ್‌ಶಿಪ್‌ ಅನ್ನು ನಾಲ್ಕು ಬಾರಿ, ಅಂದರೆ (1987, 2005, 2006 ಮತ್ತು 2007) ಹಾಗೂ ತಯಾರಕರು ಪ್ರಶಸ್ತಿಗಳನ್ನು (೨೦೦೫–೨೦೦೭) ಮೂರು ಬಾರಿ ಗೆದ್ದಿತು.
  • DTM (ಡಾಶ್‌ ಟೂರ್‌ವೇಗನ್‌ ಮಿಯಿಸ್ಟರ್‌ಷೆಫ್ಟ್‌) - BMW ಕಾರುಗಳನ್ನು ಚಲಾಯಿಸುವ DTM ಚಾಲಕರ ಚ್ಯಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದವರಲ್ಲಿ ಈ ಕೆಳಗಿನವರು BMW ಕಾರುಗಳನ್ನು ಚಲಾಯಿಸಿದ್ದರು:
    • ೧೯೮೯: ರಾಬರ್ಟ್‌ ರವಾಗ್ಲಿಯಾ, BMW M೩
    • ೧೯೮೭: ಎರಿಕ್‌ ವಾನ್‌ ಡೆರ್‌ ಪೋಲೆ, BMW M೩
  • ೧೯೭೮ರಲ್ಲಿ ಹರಾಲ್ಡ್‌ ಎರ್‌ಟ್ಲ್‌ರು BMW 320i ಟರ್ಬೊ ಕಾರಿನಲ್ಲಿ DRM ಅನ್ನು (ಡಾಶ್‌ ರೆನ್‌ಸ್ಪೋರ್ಟ್ಸ್‌ ಮಿಸ್ಟರ್‌ಷೆಫ್ಟ್‌) ಗೆದ್ದರು.
  • ಬ್ರಿಟಿಷ್‌ ಟೂರಿಂಗ್‌ ಕಾರ್ ಚ್ಯಾಂಪಿಯನ್‌ಶಿಪ್‌ (BTCC) - ೧೯೮೮, ೧೯೯೧ ೧೯೯೨ ಮತ್ತು ೧೯೯೩ರಲ್ಲಿ BMW ಡ್ರೈವರ್ಸ್‌ ಚ್ಯಾಂಪಿಯನ್‌ಶಿಪ್‌ ಅನ್ನು ಗೆದ್ದಿತು ಮತ್ತು ೧೯೯೧ ಮತ್ತು ೧೯೯೩ರಲ್ಲಿ ಮ್ಯಾನುಪ್ಯಾಕ್ಚರರ್ಸ್‌ ಚ್ಯಾಂಪಿಯನ್‌ಶಿಪ್‌ ಅನ್ನು ಗೆದ್ದಿತು.
  • ಜಪಾನೀಸ್‌ ಟೂರಿಂಗ್‌ ಕಾರ್‌ ಚ್ಯಾಂಪಿಯನ್‌ಶಿಪ್‌ (JTCC) - BMW (ಶ್ನಿಟ್ಜರ್‌) ಯುರೋಪ್‌‌ನಿಂದ ಜಪಾನಿಗೆ ಬಂದು JTCC ಅನ್ನು ಪೂರ್ಣಗೊಳಿಸಿದರು ಮತ್ತು ೧೯೯೫ರಲ್ಲಿ ಚ್ಯಾಂಪಿಯನ್‌ಶಿಪ್‌ ಅನ್ನು ಗೆದ್ದರು.
  • ಮಿಲ್ಲೆ ಮಿಗ್ಲಿಯಾ - ೧೯೪೦ರಲ್ಲಿ 328 ಪ್ರವಾಸಿ ಕೂಪೆಗಳೊಂದಿಗೆ BMW ಮಿಲ್ಲೆ ಮಿಗ್ಲಿಯಾ ಅನ್ನು ಗೆದ್ದಿತು. ೧೯೩೮ರಲ್ಲಿ ೩೨೮ ಕ್ರೀಡಾ ಕಾರುಗಳು ಉತ್ತಮ ವಿಜಯವನ್ನು ಸಾಧಿಸಿದರು.

ರ‌್ಯಾಲಿ

  • RAC ರ‌್ಯಾಲಿ - ೧೯೩೯ರಲ್ಲಿ 328 ಕ್ರೀಡಾ ಕಾರುಗಳು ಇದನ್ನು ಗೆದ್ದಿದ್ದವು.
  • ಪ್ಯಾರಿಸ್‌ ಡಕರ್‌ ರ‌್ಯಾಲಿ - BMW ಮೋಟಾರ್‌ ಸೈಕಲ್ಸ್‌ ೬ ಬಾರಿ ಗೆಲವು ಸಾಧಿಸಿತು.
  • ಟೂರ್‌ ಡೆ ಕೋರ್ಸ್‌ - ೧೯೮೭ರಲ್ಲಿ ಈ ಸ್ಪರ್ಧೆಯಲ್ಲಿ BMW M3 - E30 ಗೆಲುವು ಸಾಧಿಸಿತ್ತು

ಪರಿಸರ ಸಂರಕ್ಷಣೆಯ ದಾಖಲೆ

ಸಂಸ್ಥೆಯು U.S. ಪರಿಸರ ಸಂರಕ್ಷಣಾ ಸಂಸ್ಥೆಯ (EPA) ನ್ಯಾಶನಲ್‌ ಎನ್‌ವೈರ್ನಮೆಂಟಲ್‌ ಅಚೀವ್‌ಮೆಂಟ್‌ ಟ್ರ್ಯಾಕ್‌ನ ಪ್ರಮುಖ ಸದಸ್ಯ ಸಂಸ್ಥೆಯಾಗಿದೆ. EPAಯು ಸಂಸ್ಥೆಗಳ ಪರಿಸರ ಉಸ್ತುವಾರಿ ಮತ್ತು ದಕ್ಷತೆಗಾಗಿ ಮಾನ್ಯತೆ ನೀಡುತ್ತದೆ. BMWನ ಸೌತ್‌ ಕ್ಯಾರೊಲಿನಾ ಎನ್ವೈರ್ನಮೆಂಟಲ್‌ ಎಕ್ಸಲೆನ್ಸ್‌ ಪ್ರೋಗ್ರಾಮ್‌ನ ಸದಸ್ಯ ಸಂಸ್ಥೆಯಾಗಿದೆ ಮತ್ತು ಈ ಸಂಸ್ಥೆಯ ಹೆಸರು ಡೌವ್‌ಜೋನ್ಸ್‌ ಸಮರ್ಥನೀಯ ಸಮೂಹ ಸೂಚಿಕೆಯ ಪರಿಸರ ಸ್ನೇಹಿ ಸಂಸ್ಥೆಗಳ ಪಟ್ಟಿಯಲ್ಲಿದೆ.[೨೧]ಪರಿಸರದ ಮೇಲೆ ಸಂಸ್ಥೆಯಿಂದಾಗುವ ದುಃಪ್ರಭಾವವನ್ನು ತಗ್ಗಿಸಲು BMW ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ಸಂಸ್ಥೆಯು ಈಗಿರುವ ಕಾರಿನ ಮಾದರಿಗಳ ದಕ್ಷತೆಯನ್ನು ಇನ್ನಷ್ಟು ಸುಧಾರಿಸಿ, ಹಾಗೆಯೇ ಮುಂಬರುವ ವಾಹನಗಳಿಗೆ ಪರಿಸರ ಸ್ನೇಹಿ ಇಂಧನವನ್ನು ಅಭಿವೃದ್ಧಿಪಡಿಸುವ ಮೂಲಕ ಪರಿಸರ ಮಾಲಿನ್ಯದ ಮೇಲೆ ಅಲ್ಪ ಪ್ರಮಾಣದ ಪ್ರಬಾವ ಬೀರಬಲ್ಲ ಕಾರುಗಳ ವಿನ್ಯಾಸ ರಚನೆಗೆ ಪ್ರಯತ್ನಿಸುತ್ತಿದೆ. ಸಂಸ್ಥೆಯು ಈ ಕೆಳಗಿನ ಸಾಧ್ಯತೆಗಳನ್ನು ಪರೀಕ್ಷಿಸುತ್ತಿದೆ: ವಿದ್ಯುತ್ ಶಕ್ತಿ, ಹೈಬ್ರಿಡ್ ಶಕ್ತಿ (ಇಂಧನ ದಹಿಸುವಿಕೆ, ಎಂಜಿನ್‌ಗಳು ಮತ್ತು ವಿದ್ಯುತ್ ಮೋಟರ್‌ಗಳು) ಜಲಜನಕ ಎಂಜಿನ್‌ಗಳು.[೨೨]EU೫/೬ರ ಹೊಗೆ ಉಗುಳುವಿಕೆಯ ಪ್ರಮಾಣದ ಅನ್ವಯ BMW ೪೯ ಮಾದರಿಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಸುಮಾರು ೨೦ ಮಾದರಿಗಳು ೧೪೦ ಗ್ರಾಮ್‌/ಕಿಮೀಗಿಂತ ಕಡಿಮೆ CO೨ ಅನ್ನು ಉಗುಳುತ್ತವೆ. ಹಾಗಾಗಿ ಇದನ್ನು ಕನಿಷ್ಠ ತೆರಿಗೆ ಸಮೂಹಕ್ಕೆ ಸೇರಿಸಲಾಗಿದೆ. ಇದು ಮುಂದೆ ಕೆಲವು ಯುರೋಪಿನ ದೇಶಗಳು ನೀಡುವ ಪರಿಸರ ಬೋನಸ್‌ ಅನ್ನು ಪಡೆಯಬಹುದಾಗಿದೆ.ಸಂಸ್ಥೆಗಳ ಮಟ್ಟದಲ್ಲಿ, BMW ೧೬೦ ಗ್ರಾಂ CO೨/ಕಿಮೀನ ಸರಾಸರಿಯ ಮಟ್ಟದೊಂದಿಗೆ ಅರ್ಧ ಲೀಟರ್‌ಗಿಂತಲೂ ಹೆಚ್ಚು ಇಂಧನವನ್ನು ಹೆಚ್ಚು ಉತ್ತಮವಾಗಿ ಬಳಸುವುದರೊಂದಿಗೆ ತನ್ನ ಪ್ರಮುಖ ಸ್ಪರ್ಧಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಇಂಧನವನ್ನು ಬಳಸಿತು.[ಸೂಕ್ತ ಉಲ್ಲೇಖನ ಬೇಕು] BMWಗೆ ನಿಟಕ ಸ್ಪರ್ಧೆಯಲ್ಲಿರುವ ಸಂಸ್ಥೆಯು[clarification needed] BMWಯ ೧೬ ಗ್ರಾಮ್‌ಗಳ CO೨ ಉಗುಳುವಿಕೆ ಮಟ್ಟಕಿಂತ ಹೆಚ್ಚಿದ್ದು. ಇದರ ಮಾದರಿಗಳು ೨೮ ಗ್ರಾಮ್‌ಗಳಷ್ಟು ಹೆಚ್ಚಿನ ಉಗುಳುವಿಕೆ ಮಟ್ಟವನ್ನು ಹೊಂದಿದ್ದು, ಅದು BMWನ ಒಂದು ಲೀಟರ್ ಡೀಸಲ್‌ ಉಗುಳುವಿಕೆ ಪ್ರಮಾಣಕ್ಕೆ ಸಮನಾಗಿರುವುದು.[ಸೂಕ್ತ ಉಲ್ಲೇಖನ ಬೇಕು] ೨೦೦೬ ಮತ್ತು ೨೦೦೮ರ ಮಧ್ಯದ ಅವಧಿಯಲ್ಲಿ, BMW ಸುಮಾರು ೧೬%ನಷ್ಟು ಇಂಧನ ಬಳಕೆಯನ್ನು ಕಡಿಮೆ ಮಾಡಿತು. ಆ ವಲಯದಲ್ಲಿರುವ ಸ್ಪರ್ಧಿಗಳ ಮಟ್ಟಕ್ಕಿಂತ ಇಂಧನ ಎರಡು ಪಟ್ಟು ತಗ್ಗಿತು. BMW ವಾಹನಗಳಲ್ಲಿನ ಇಂಜಿನ್‌ಗಳ ಕಾರ್ಯ ಕ್ಷಮತೆ ಮಿಕ್ಕ ಸ್ಪರ್ಧಿ ಸಂಸ್ಥೆಗಳ ವಾಹನಗಳ ಸರಾಸರಿಗಿಂತ ಈಗಲೂ ಅಧಿಕವಾಗಿದೆ.[ಸೂಕ್ತ ಉಲ್ಲೇಖನ ಬೇಕು]ಇದೇನೇ ಇರಲಿ, BMW ಕೆಲವು ಟೀಕೆಗಳನ್ನು ಎದುರಿಸುತ್ತಲೇ ಇದೆ. ವಿಶೇಷವಾಗಿ BMW ಹೈಡ್ರೋಜನ್‌ ೭ ಸಂಬಂಧಿಸಿದಂತೆ ಸೋಗಿನ ಪರಿಸರ ಸ್ನೇಹಿ(=ಗ್ರೀನ್‌ವಾಷ್‌) ಎಂಬ ಆರೋಪವನ್ನೂ BMW ಹೊರಿಸಲಾಗಿದೆ. ಜಲಜನಕ ಇಂಧನ ಉತ್ಪಾದಿಸುವ ಸಂದರ್ಭದಲ್ಲಿ ಅದು ಹೊರಹಾಕುವ ತ್ಯಾಜ್ಯಹೊಗೆಯುಗುಳುವ ಹಿಂಗೊಳವೆಯಲ್ಲಿ ಉಗುಳುವ ಹೊಗೆಯ ಪ್ರಮಾಣಕ್ಕಿಂತ ಹೆಚ್ಚಾಗಿರುವುದು ಮತ್ತು ಹೈಡ್ರೋಜನ್‌ ೭ ಕಾರಿನಿಂದಾಗುವ ಮಾಲಿನ್ಯವನ್ನು ತಪ್ಪಿಸಲು ಕೈಗೊಳ್ಳ ಬೇಕಾದ ತುರ್ತು, ಪ್ರಾಯೋಗಿಕ ಪರಿಹಾರಗಳ ಹಾದಿಯನ್ನು ತಪ್ಪಿಸುತ್ತದೆ ಎಂಬ ಕೆಲವು ಟೀಕೆಗಳಿವೆ.

ಬೈಸಿಕಲ್‌ಗಳು

BMW ಆನ್‌ಲೈನ್ ಮೂಲಕ ಮತ್ತು ವಿತರಕರ ಮೂಲಕ ಅತ್ಯಾಧುನಿಕ ಸೈಕಲ್ಲುಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದೆ. ಮಕ್ಕಳ ಬೈಕ್‌ನಿಂದ EUR ೪,೪೯೯ನ ಎಂಡ್ಯುರೊ ಬೈಕ್‌ ವರೆಗಿನ ವಿವಿಧ ಶ್ರೇಣಿಯ ಬೈಸಿಕಲ್‌ಗಳನ್ನು ಹೊಂದಿದೆ.[೨೩] ಕ್ರೂಸ್‌ ಬೈಕ್ ಮತ್ತು ಮಕ್ಕಳ ಬೈಕ್‌ ಮಾದರಿಗಳು ಮಾತ್ರ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮಾರಾಟಕ್ಕೆ ಲಭ್ಯ.

BMWನ ಅಶಿಷ್ಟ ಭಾಷೆ

ಬೀಮರ್‌ , ಬಿಯಮರ್‌‌ , ಬಿಮ್ಮರ್‌ ಮತ್ತು ಬೀ-ಎಮ್‌ [೨೪][೨೫]-ಇವು ಇಂಗ್ಲಿಷ್ನ ಅಶಿಷ್ಟ ಪದಗಳನ್ನು BMWನ ಎಲ್ಲಾ ರೀತಿಯ ಕಾರುಗಳು ಮತ್ತು ಮೋಟಾರ್‌ ಸೈಕಲ್‌ಗಳಿಗೆ ಬಳಸಲಾಗುವುದು‌.[೨೬][೨೭]"ನಿಜವಾದ ಕ್ರೀಡಾ ಪ್ರೇಮಿ"ಯ [೨೮] ಮತ್ತು "ಆರಂಭವಾಗದಿ"ರುವುದನ್ನು ತಪ್ಪಿಸುವ ಪ್ರಕಾರದಲ್ಲಿ BMW ಮೋಟಾರ್‌ ಸೈಕಲ್ಸ್‌ ಅನ್ನು ವಿವರಿಸಲು ಬೀಮರ್‌ ಪದವನ್ನೂ, BMW ಕಾರುಗಳನ್ನು[೨೯][೩೦][೩೧] ವಿವರಿಸುವುದಕ್ಕಾಗಿ ಬಿಮ್ಮರ್‌ ಪದವನ್ನೂ ಮಾತ್ರ ಬಳಸುವ ಮೂಲಕ ವರ್ಗೀಕರಣ ಮಾಡಬೇಕೆಂದು USನಲ್ಲಿ ತಜ್ಞರು ನೋವಿನಿಂದಲೇ ಶಿಫಾರಸು ಮಾಡಿದರು. ಕೆನಡಾದ ಗ್ಲೋಬ್ ಮತ್ತು ಮೇಲ್‌ ಬಿಮ್ಮರ್‌ನ್ನು ಬಳಸಲು ಆಯ್ಕೆಮಾಡಿಕೊಂಡು, ಅದನ್ನು "ಯುಪ್ಪೀ ಅಬೊಮಿನೇಷನ್‌" ಎಂದು ಕರೆದರು.[೩೨] ಟ್ಯಾಕೋಮಾ ನ್ಯೂಸ್‌ ಟ್ರಿಬ್ಯುನ್‌ ಪ್ರಕಾರ ಇದು "ಅಟೋ ದಿಗ್ಗಜ"ರು ಮಾಡಿದ ವ್ಯತ್ಯಾಸವನ್ನು ವಿವರಿಸಲು ಟಂಕಿಸಿದ ಪದವಾಗಿದೆ.[೩೩] ತಪ್ಪಾದ ಪರಿಭಾಷೆಯನ್ನು ಬಳಸುವುದರಿಂದ BMW ಅಭಿಮಾನಿಗಳ ಮನಸ್ಸಿಗೆ ನೋವನ್ನುಂಟು ಮಾಡುವುದು.[೩೪][೩೫][೩೬] Google searchನಲ್ಲಿ ಬೀಮರ್‌ಗಿಂತ ಬಿಮರ್ ಪದವು ೧೦ ಪಟ್ಟು ಹೆಚ್ಚು ಫಲಿತಾಂಶವನ್ನು ನೀಡಿದ್ದರಿಂದ ದೊರೆತ ಪರಿಹಾರದಿಂದ ಬ್ಯುಸಿನೆಸ್‌ ವೀಕ್‌ನ ಸಂಪಾದಕರು ತೃಪ್ತರಾದರು.[೩೭]ಮೋಟಾರ್‌ ಸೈಕಲ್‌ ಮಾದರಿ BSAಯನ್ನು ಕೆಲವೊಮ್ಮೆ ಬೀಜರ್ ಎಂದು ಉಚ್ಛರಿಸುವರು.[೩೮][೩೯] BMW ಮಾದರಿಯ ಆದ್ಯಕ್ಷರವನ್ನು ಜರ್ಮನ್‌ನಲ್ಲಿ ಹೇಳಲಾಗುತ್ತಿತ್ತು.[beː ɛm ˈveː][೪೦] ಮಾದರಿ ಸರಣಿಗಳನ್ನು ಈ ರೀತಿ ಉಲ್ಲೇಖಿಸಲಾಗಿದೆ:"Einser"(ಸರಣಿ ೧ಕ್ಕೆ "One-er"),"Dreier" (ಸರಣಿ ೩ಕ್ಕೆ "Three-er"), "Fünfer" (ಸರಣಿ ೫ಕ್ಕೆ "Five-er"), "Sechser" (ಸರಣಿ ೬ಕ್ಕೆ "Six-er"), "Siebener" (ಸರಣಿ ೭ಕ್ಕೆ "Seven-er" ). ಇವುಗಳು ನಿಜಕ್ಕೂ ಅಶಿಷ್ಟ ಪರಿಭಾಷೆಯೇನಲ್ಲ. ಆದರೆ ಸಾಮಾನ್ಯವಾಗಿ ಅಂತಹ ಅಕ್ಷರಗಳನ್ನು ಮತ್ತು ಸಂಖ್ಯೆಗಳನ್ನು ಜರ್ಮನ್‌ ಭಾಷೆಯಲ್ಲಿ ಉಚ್ಚರಿಸಲಾಗುವುದು.

BMW ನಾಮಕರಣ ಪದ್ಧತಿ

BMW ವಾಹನಗಳು ನಿರ್ದಿಷ್ಟ ಮಾದರಿಯ ನಾಮಕರಣ ವ್ಯವಸ್ಥೆಯನ್ನು ಅನುಸರಿಸುತ್ತದೆ.ಸಾಮಾನ್ಯವಾಗಿ ಅದು ೧ ಅಥವಾ ೨ ಅಕ್ಷರಗಳನ್ನು ೩ ಅಂಕೆಯ ಸಂಖ್ಯೆ ಹಿಂಬಾಲಿಸುತ್ತದೆ. ಮೊದಲ ಸಂಖ್ಯೆಯು ಸರಣಿ ಸಂಖ್ಯೆಯನ್ನು ಪ್ರತಿನಿಧಿಸುವುದು. ಘನ ಸೆಂಟಿಮೀಟರ್‌ಗಳಲ್ಲಿರುವ ಎಂಜಿನ್‌ ಸ್ಥಾನಪಲ್ಲಟನ ಪ್ರಮಾಣವನ್ನು ೧೦೦ರಿಂದ ಭಾಗಿಸಿದಾಗ ಬರುವ ಸಂಖ್ಯೆಯು(ಭಾಗಲಬ್ಧ) ನಂತರದ ಎರಡು ಸಂಖ್ಯೆಗಳಾಗಿರುವುದು.[೪೧] ಮೋಟಾರ್‌ ಸೈಕಲ್‌ಗಳಾದ BMW ಮೋಟರ್‌ರಾಡ್‌ಗೂ ಸಹ ಅವರುಇದೇ ಮಾದರಿಯ ನಾಮಕರಣ ಪದ್ಧತಿ ಬಳಸಿದರು.ಸಂಯುಕ್ತ ಮಾದರಿಯ ಅಕ್ಷರಗಳ ವ್ಯವಸ್ಥೆಯನ್ನು ಬಳಸಲಾಗುವುದು. ಅವು ಈ ಕೆಳಗಿನಂತಿವೆ:

  • A = ಸ್ವಯಂಚಾಲಿತ ರವಾನೆ
  • C = E೪೬ ಮಾದರಿಯ ಕೂಪೆ
  • c = ಕ್ಯಾಬ್ರಿಯೊಲೆಟ್‌
  • d = ಡೀಸಲ್‌
  • e = ಈಟಾ (ಪರಿಣಾಮಕಾರಿ ಅರ್ಥ ವ್ಯವಸ್ಥೆ, ಗ್ರೀಕ್ ಅಕ್ಷರ 'η'ನಿಂದ ಬಂದಿದೆ)
  • g = ಸಂಕುಚಿತ ನೈಸರ್ಗಿಕ ಅನಿಲ/CNG
  • h = ಜಲಜನಕ
  • i = ಒಳನುಗ್ಗಿಸಿದ-ಇಂಧನ
  • L = ದೊಡ್ಡ ಗಾತ್ರದ ಚಕ್ರ
  • s = ಕ್ರೀಡಾ, E೩೬ ಮಾದರಿಯಲ್ಲಿ†† "೨ dr"ನಂತೆ ಕೂಡ
  • sDrive = ಹಿಂಚಕ್ರದ ಚಲನೆ
  • T = ಪ್ರವಾಸಿ (ವೇಗಾನ್‌/ಎಸ್ಟೇಟ್‌)
  • Ti = ಹ್ಯಾಚ್‌ಬ್ಯಾಕ್‌
  • x / xDrive = BMW xDrive ಎಲ್ಲಾ ಚಕ್ರದ ಚಾಲನೆ

ಹೆಸರಿಡುವ ಸಾಂಪ್ರದಾಯಿಕ ಪದ್ಧತಿಯ ಪ್ರಕಾರ "td" ಎಂದರೆ "ಟರ್ಬೊ ಡೀಸಲ್‌" ಎಂದು ಪ್ರತಿನಿಧಿಸುತ್ತದೆಯೇ ಹೊರತು ಡೀಸಲ್‌ ಹ್ಯಾಚ್‌ಬ್ಯಾಕ್‌ ಅಥವಾ ಪ್ರವಾಸಿ ಮಾದರಿ(೫೨೪td, ೫೨೫td)ಎಂದಲ್ಲ.†† ಕ್ರೀಡಾ ಮಾದರಿಯ ಆಸನಗಳು, ವಾಹನದ ಜಿಗಿತ ತಡೆ ಸಾಧನ, ವಾಯುಬಲದ ಬಾಡಿ ಕಿಟ್‌ (body kit), ಸುಧಾರಿತ ಚಕ್ರಗಳು, ಇತ್ಯಾದಿಗಳನ್ನು ಒಳಗೊಂಡಿರುವುದು.ದೊಡ್ಡ ಗಾತ್ರದ ಚಕ್ರ ಮತ್ತು ೬.೦ ಲೀಟರ್‌ಗಳಷ್ಟು ಇಂಧನ ಪಲ್ಲಟನದ BMW ೭೬೦Li ಇಂಧನ ಒಳನುಗ್ಗಿಸುವ ಸರಣಿ ೭ ಇದಕ್ಕೊಂದು ಉದಾಹರಣೆ.ಆದರೂ ಕೆಲವೊಂದು ಈ ನಿಯಮದಿಂದ ಹೊರತಾಗಿವೆ.[೪೨] BMW ೧೨೫i/೧೨೮i ೩.೦ ನೈಸರ್ಗಿಕವಾಗಿ ಇಂಧನ ಹೀರುವ ಎಂಜಿನ್ ಆಗಿದ್ದು‌, ಇದು ೨೫೦೦cc ಅಥವಾ ೨೮೦೦cc ಎಂಜಿನ್‌ ಅಲ್ಲದಿದ್ದರೂ ಸಹ, ನಂಬಿಸುವುದಕ್ಕಾಗಿ ಸರಣಿ ಹೆಸರಿನ ಸಂಖ್ಯೆಯಲ್ಲಿ ಒಂದನ್ನು ಸೇರಿಸಲಾಗಿದೆ. ೨೦೦೭ BMW ೩೨೮iಯು ಸರಣಿ ೩ವು ೩.೦ ಲೀಟರ್‌ ಎಂಜಿನ್‌ ಅನ್ನು ಹೊಂದಿದೆ. E೩೬ ಮತ್ತು E೪೬ ೩೨೩i ಮತ್ತು E೩೯ ೫೨೩i ೨.೫ ಲೀಟರ್‌ ಎಂಜಿನ್‌ಗಳನ್ನು ಹೊಂದಿತ್ತು. ೯೨-೯೫ ಮಾದರಿಗಳಲ್ಲಿ ಬಳಸಲಾದ ೧.೮L (M42) ಎಂಜಿನ್‌ಗೆ ಪ್ರತಿಯಾಗಿ ೧೯೯೬ ನಂತರ ತಯಾರಿಸಲಾದ E೩೬ ೩೧೮i ೧.೯L ಎಂಜಿನ್‌ (M44) ಹೊಂದಿವೆ. ೨೦೦೭ BMW ೩೩೫i ಸಹ ೩.೦ ಲೀಟರ್‌ ಎಂಜಿನ್‌ ಅನ್ನು ಹೊಂದಿದೆ. ಆದರೂ ಟರ್ಬೊಛಾರ್ಜ್ಡ್-ಜೋಡಿ‌‌ ಆಗಿದ್ದು, ಇದು ನಾಮಕರಣ ವ್ಯವಸ್ಥೆಯಿಂದ ಗುರುತಿಸಲ್ಪಟ್ಟಿಲ್ಲ.ಮೋಟಾರ್‌ಸ್ಪೋರ್ಟ್‌ಗಾಗಿರುವ 'M' ಅಕ್ಷರವು ನಿರ್ದಿಷ್ಟ ಸರಣಿಯ ಸಾಮರ್ಥ್ಯದ ಉತ್ಕೃಷ್ಟತೆಯ ಮಾದರಿಯಯನ್ನು ಗುರುತಿಸುತ್ತದೆ. (ಉದಾ. M೩, M೫, M೬, ಇತ್ಯಾದಿ). ಉದಾಹರಣೆಗೆ: M೬, ಸರಣಿ ೬ರ ಅತಿ ಹೆಚ್ಚು ಕಾರ್ಯ ದಕ್ಷತೆಯುಳ್ಳ ವಾಹನವಾಗಿದೆ. ಆದರೂ 'M' ಕಾರುಗಳನ್ನು ಅವುಗಳ ಸರಣಿಗಳ ಆಧಾರದ ಮೇಲೆ ವಿಂಗಡಿಸಬೇಕು. ಸಾಮಾನ್ಯವಾಗಿ 'M' ಕಾರುಗಳನ್ನು ತಮ್ಮದೇ ಆದ ಸರಣಿಯ ತಂಡದಂತೆ ಒಟ್ಟಾಗಿ ಕಾಣಬಹುದು.'L' ಸರಣಿ ಸಂಖ್ಯೆಯ ಸ್ಥಾನವನ್ನು ಆಕ್ರಮಿಸಿದಾಗ (ಉದಾ. L೬, L೭, ಇತ್ಯಾದಿ),ಈ ವೈಭವೋಪೇತ ವಾಹನವು , ಚರ್ಮವನ್ನು ಬಳಸಿ ಮಾಡಲಾದ ವಿಶೇಷ ಒಳಾಂಗಣ ಉಪಕರಣಗಳನ್ನು ಒಳಗೊಂಡಿತ್ತು. L೭ ಮಾದರಿಯು E೨೩ ಮತ್ತು E೩೮ ಮಾದರಿಗಳನ್ನು ಆಧರಿಸಿದೆ ಮತ್ತು L೬ ಮಾದರಿಯು E೨೪ ಮಾದರಿಯನ್ನು ಆಧರಿಸಿದೆ.'X' ಅನ್ನು ದೊಡ್ಡಕ್ಷರದಿಂದ ಆರಂಭವಾಗಿ ಅದರ ಮುಂದೆ ಸಖ್ಯೆಯು ತನ್ನ ಸರಣಿ ಸಂಖ್ಯೆಯ (ಉದಾ: X೩, X೫, ಇತ್ಯಾದಿ) ಸ್ಥಾನವನ್ನು ಆಕ್ರಮಿಸಿಕೊಂಡಾಗ, ಅದು BMWನ xDrive ವೈಶಿಷ್ಟ್ಯವನ್ನು ಒಳಗೊಂಡಿರುವ BMWನ ಕ್ರೀಡೋದ್ದೇಶದ ವಾಹನಗಳನ್ನು (SAV) ಪ್ರತಿನಿಧಿಸುವುದು.'Z' ಸರಣಿ ಸಂಖ್ಯೆಯು ಎರಡು ಆಸನದ ರೋಡ್‌ಸ್ಟರ್‌ (e.g. Z೧, Z೩, Z೪, etc) ಸರಣಿಯನ್ನು ಪ್ರತಿನಿಧಿಸುವುದು. 'Z' ಮಾದರಿಗಳ 'M' ರೂಪಾಂತರಗಳು ಯಾವ ದೇಶದಲ್ಲಿ ಮಾರಾಟವಾಗುತ್ತವೆ ಎನ್ನುವುದನ್ನು ಆಧರಿಸಿ 'M' ಅನ್ನು ಪೂರ್ವ ಪ್ರತ್ಯಯವಾಗಿ ಅಥವಾ ಉತ್ತರ ಪ್ರತ್ಯಯವಾಗಿ ಸೇರಿಸಲಾಗುವುದು (ಉದಾ. ' 'Z೪ M' ಅನ್ನು ಕೆನಡಾದಲ್ಲಿ 'M ರೋಡ್‌ಸ್ಟರ್‌' ಎಂದು ಕರೆಯುವರು).ಹಿಂದಿನ X & Z ವಾಹನಗಳು ಎಂಜಿನ್‌ ಸ್ಥಳಾಂತರ ಸಂಖ್ಯೆ (ಲೀಟರ್‌ಗಳಲ್ಲಿ ಸೂಚಿಸಿದಂತೆ) ನಂತರ 'i' ಅಥವಾ 'si' ಅನ್ನು ಹೊಂದಿರುವುದು. ಈಗ ವಾಹನದ ಎಂಜಿನ್‌ ಅನ್ನು ಅಸ್ಪಷ್ಟವಾಗಿ ಪ್ರತಿನಿಧಿಸುವ ಎರಡು ಸಂಖ್ಯೆಯ ನಂತರ 'sDrive' ಅಥವಾ 'xDrive' ಅನ್ನು (ಅನುಕ್ರಮವಾಗಿ ಹಿಂದಿನ ಅಥವಾ ಎಲ್ಲಾ ಚಕ್ರದ ಚಾಲನೆಗೊಳಪಟ್ಟಿದೆ ಎನ್ನುವ ಸರಳಾರ್ಥ) ಬಳಸುವ ಮೂಲಕ BMW X & Z ವಾಹನಗಳ[೪೩] ನಾಮಕರಣ ಪದ್ಧತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಮಾಣೀಕರಿಸಿತು (ಉದಾ. Z೪ sDrive೩೫iವು ೩.೦L ಜಂಟಿ-ಟರ್ಬೊ ಇಂಧನ ಒಳನುಗ್ಗಿಸಿದ ಎಂಜಿನ್‌ನೊಂದಿಗೆ ಹಿಂಬದಿ ಚಕ್ರ ಚಾಲನೆಯ Z೪ ರೋಡ್‌ಸ್ಟರ್‌ ಅನ್ನು ಒಳಗೊಂಡಿದೆ).

ಸಮುದಾಯ

ಡುಸೆಲ್‌ಡೊರ್ಫ್‌ನಲ್ಲಿ BMW ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ

೨೦೦೧ರ ಬೇಸಿಗೆಯಿಂದ ೨೦೦೫ರ ಅಕ್ಟೋಬರ್‌ವರೆಗೆ ವಿಪರೀತವಾಗಿ ಚಾಲನೆ ಮಾಡುವ ಕ್ರೀಡಾ ಮಾದರಿಯ ಕಾರುಗಳ ವೀಡಿಯೊಗಳನ್ನು BMW "BMW Films". Archived from the original on 2007-09-27. ತನ್ನ ಜಾಲತಾಣದಲ್ಲಿ ಪ್ರಕಟಿಸಿತು. ಈ ವೀಡಿಯೊಗಳು ಕ್ರೀಡಾಭಿಮಾನಿಗಳ ಸಮುದಾಯದಲ್ಲಿ ಇಂದಿಗೂ ಜನಪ್ರಿಯವಾಗಿದ್ದು, ಇದು ಆನ್‌ಲೈನ್ ಜಾಹೀರಾತು ಕಾರ್ಯಾಚರಣೆಯಲ್ಲಿ ಹೊಸ ತಿರುವನ್ನು ಪಡೆಯಿತು. ೧೯೯೯ರಿಂದ ನಡೆಯುವ CAಯ ಸ್ಯಾಂಟ ಬಾರ್ಬರದಲ್ಲಿ ನಡೆಯುವ ಬಿಮ್ಮರ್‌ಫೆಸ್ಟ್‌ವರ್ಷೋತ್ಸವದಲ್ಲಿ ಪಾಲ್ಗೊಳ್ಳಲು BMWನ ಅಭಿಮಾನಿಗಳು ಬರುವರು. ಇದು U.S.ನಲ್ಲಿ ಜನರು ಒಟ್ಟಾಗಿ ಸೇರುವ ಅತಿ ದೊಡ್ಡ ಬ್ರ್ಯಾಂಡ್‌ ‌ಕಾರ್ಯಕ್ರಮಗಳಲ್ಲಿ ಒಂದು.೨೦೦೬ರಲ್ಲಿ ಸುಮಾರು ೩,೦೦೦ ಜನರು ಪಾಲ್ಗೊಂಡಿದ್ದು, ಸುಮಾರು ೧,೦೦೦ BMW ಕಾರುಗಳು ಪ್ರದರ್ಶನದಲ್ಲಿದ್ದವು. ೨೦೦೭ರಲ್ಲಿ ಈ ಕಾರ್ಯಕ್ರಮವನ್ನು ಮೇ ೫ರಂದು ಆಯೋಜಿಸಲಾಗಿತ್ತು.

ಕಲೆ

1975ರಲ್ಲಿ BMW 3.0CSL ಕಾರಿಗೆ ಅಲೆಕ್ಸಾಂಡರ್ ಕ್ಯಾಲ್ಡರ್‌ ಬಣ್ಣವನ್ನು ಹಚ್ಚಿದರು.

ಕಾರುಗಳ ತಯಾರಿಕೆಯಲ್ಲಿ ಕಾರು ಉತ್ಪಾದಕರು ವಿನ್ಯಾಸಗಾರರ ಸೇವೆಯನ್ನು ಪಡೆಯುವರು.ಆದರೆ ಕಲೆಗೆ ಬೆಂಬಲ ನೀಡಿದೆ ಮತ್ತು ಕಲಾ ಕ್ಷೇತ್ರಕ್ಕೆ ತನ್ನ ಅಸಾಧಾರಣ ಸೇವೆಯನ್ನು ಸಲ್ಲಿಸಿದೆ ಎಂಬ ಮಾನ್ಯತೆ ಗಳಿಸುವತ್ತ BMW ಶ್ರಮಿಸಿದೆ;ಇದು ಮೋಟಾರ್‌ ವಾಹನ ವಿನ್ಯಾಸವನ್ನೂ ಮೀರಿ ಕಲೆಯತ್ತ ಸಾಗಿದೆ. BMWನ ಕಾರುಗಳಿಗೆ ಮಾರುಕಟ್ಟೆ ಒದಗಿಸುವಿಕೆ ಮತ್ತು ಬ್ರ್ಯಾಂಡಿಂಗ್‌ ಕಾರ್ಯಾಚರಣೆಗಳಲ್ಲಿ ಈ ಪ್ರಯತ್ನಗಳನ್ನು ಬಳಸಿಕೊಳ್ಳಲಾಯಿತು.[೪೪] ೧೯೭೨ರಲ್ಲಿ ಯುರೋಪಿನ ಪ್ರಸಿದ್ಧ ಕಟ್ಟಡಗಳಲ್ಲಿ ಒಂದಾಗಿರುವ ಸಂಸ್ಥೆಯ ಪ್ರಧಾನ ಕಛೇರಿಯ ಕಟ್ಟಡವನ್ನು ಕರ್ಲ್‌ ಶ್ವಾಂಜರ್‌ ವಿನ್ಯಾಸಗೊಳಿಸಿದ್ದಾರೆ.[೪೫] ಕಲಾಕಾರ ಗೆರ್ಹಾರ್ಡ್‌ ರಿಚ್ಟರ್‌ ಕಟ್ಟಡದ ಪ್ರವೇಶ ಮಂಟಪವನ್ನು ತನ್ನ ಕೆಂಪು, ಹಳದಿ, ನೀಲಿ ಸರಣಿಯ ವರ್ಣಚಿತ್ರವನ್ನು ರಚಿಸಿದರು.[೪೬][೪೭] ೧೯೭೫ರಲ್ಲಿ 24 ಅವರ್ಸ್‌ ಆಫ್‌ ಲೆ ಮಾನ್ಸ್‌ನಲ್ಲಿ ಹರ್ವೆ ಪೋಲೈನ್‌ ಓಡಿಸಿದ 3.0CSL ಕಾರಿಗೆ ಬಣ್ಣ ಬಳಿಯಲು ಅಲೆಕ್ಸಾಂಡರ್ ಕ್ಯಾಲ್ಡರ್‌ರನ್ನು ನೇಮಿಸಲಾಯಿತು. ಇದರಿಂದಾಗಿ ಡೇವಿಡ್‌ ಹಾಕ್ನಿ, ಜೆನ್ನಿ ಹೋಲ್ಜರ್‌, ರಾಯ್‌ ಲಿಚನ್‌ಸ್ಟೈನ್‌ ಮತ್ತು ಇತರ ಕಲಾಕಾರರಿಂದ ವಿನ್ಯಾಸಗೊಳಿಸಿದ BMW ಆರ್ಟ್‌ ಕಾರ್ಸ್‌(=ಕಲಾತ್ಮಕ ಕಾರುಗಳು ಬಿಡುಗಡೆಗೊಂಡವು. ಪ್ರಸ್ತುತ ಕಲಾ ಕಾರುಗಳು ೧೬ನೇ ಶ್ರೇಯಾಂಕದಲ್ಲಿದ್ದು, ಇವುಗಳನ್ನು ಲೋವ್ರೆ, ಬೈಲ್ಬಯೊದ ಗುಗೆನ್ಹೀಮ್‌ ವಸ್ತುಸಂಗ್ರಹಾಲಯ‌ದಲ್ಲಿ ಮತ್ತು ೨೦೦೯ರಲ್ಲಿ ಲಾಸ್ ಎಂಜೆಲ್ಸ್‌ ಕಂಟ್ರಿ ಮ್ಯುಸಿಯಮ್‌ ಆಫ್‌ ಆರ್ಟ್‌ ಮತ್ತು ನ್ಯೂಯಾರ್ಕ್‌ನ ಗ್ರ್ಯಾಂಡ್‌ ಸೆಂಟ್ರಲ್‌ ಟರ್ಮಿನಲ್‌ನಲ್ಲಿ ಪ್ರದರ್ಶಿಸಲಾಯಿತು.[೪೫] BMW ೧೯೯೮ರಲ್ಲಿ ಒಲೊಮನ್‌ ಆರ್‌. ಗುಜೆನ್ಹೀಮ್‌ ವಸ್ತುಸಂಗ್ರಹಾಲಯ ಮತ್ತು ಇತರ ಗುಗೆನ್ಹೀಮ್‌ ವಸ್ತುಸಂಗ್ರಹಾಲಯಗಳಲ್ಲಿ ನಡೆದ ದಿ ಆರ್ಟ್‌ ಆಫ್‌ ದಿ ಮೋಟಾರ್‌ ಸೈಕಲ್ಸ್‌ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕ ಸಂಸ್ಥೆಯಾಗಿತ್ತು. ಹೀಗಾಗಿ BMW ಮತ್ತು ಗುಗೆನ್ಹೀಮ್‌ ನಡುವಿನ ಹಣಕಾಸು ಸಂಬಂಧದ ಕುರಿತು ಹಲವಾರು ತಿಂಗಳ ಕಾಲ ಅನೇಕ ವಲಯಗಳಲ್ಲಿ ಖಂಡನೆಗೆ ಒಳಗಾಯಿತು.

೨೦೦೬ "BMW ಸಾಮರ್ಥ್ಯದ ಸರಣಿ"ಗೆ ಕಪ್ಪು ಕಾರನ್ನು ಖರೀದಿಸುವವರನ್ನು ಆಕರ್ಷಿಸಲು ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿತು. ಅದರಲ್ಲಿ ಜಾಜ್‌ ಸಂಗೀತಗಾರ ಮೈಕ್‌ ಫಿಲಿಪ್ಸ್‌ರ ಸಂಗೀತ ಮತ್ತು "BMW Blackfilms.com ಚಲನಚಿತ್ರ ಸರಣಿ"ಯ ಬ್ಲಾಕ್‌ ಚಿತ್ರನಿರ್ಮಾಪಕರ ದೃಶ್ಯ ತುಣುಕುಗಳನ್ನು ಒಳಗೊಂಡಿರುವ "BMW ಪಾಪ್‌-ಜಾಜ್‌ ಲೈವ್‌ ಸರಣಿ"ಯನ್ನು ಪ್ರದರ್ಶಿಸಲಾಯಿತು.[೪೮]

ಸಾಗರೋತ್ತರ ಅಂಗಸಂಸ್ಥೆಗಳು

ದಕ್ಷಿಣ ಆಫ್ರಿಕಾ

ಪ್ರೆಟೋರಿಯಾ ಹತ್ತಿರದ ರೋಸಲಿನ್‌ನಲ್ಲಿರುವ ಪ್ರಯಿಟರ್‌ ಮೊಂಟೀರ್ಡರ್‌ ಘಟಕವನ್ನು ಪ್ರಾರಂಭಿಸುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ BMW ಜೋಡಣಾ ಕಾರ್ಯವನ್ನು ೧೯೭೦ ರಿಂದಲೂ ಮಾಡಲಾಗುತ್ತಿದೆ. ೧೯೭೩ರಲ್ಲಿ BMW ಪ್ರಯಿಟರ್‌ ಮೊಂಟೀರ್ಡರ್‌ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿತು. ನಂತರ ಅದು BMW ದಕ್ಷಿಣ ಆಫ್ರಿಕಾ ಎಂದಾಯಿತು. ಇದು BMW ಜರ್ಮನಿಯ ಹೊರಗೆ ಸಂಪೂರ್ಣ ಮಾಲೀಕತ್ವವನ್ನು ಹೊಂದಿದ ಮೊದಲ ಅಂಗ ಸಂಸ್ಥೆಯಾಗಿದೆ. BMW ಸರಣಿ 3ಕ್ಕೆ ೬-ಸಿಲಿಂಡರ್‌, ೩.೨ ಲೀಟರ್‌ ಎಂಜಿನ್‌ ಅನ್ನು ಒಳಗೊಂಡ BMW ೩೩೩i,[೪೯] ಅಲ್ಪಿನಾ ೨.೭ ಲೀಟರ್‌ ಎಂಜಿನ್‌ ಅನ್ನು ಒಳಗೊಂಡಿರುವ BMW ೩೨೫ ಮತ್ತು BMW M1ನ ಎಂಜಿನ್‌ ಅನ್ನು ಬಳಸಿದ E23 M೭೪೫iಗಳು ದಕ್ಷಿಣ ಆಫ್ರಿಕಾದ ಮಾರುಕಟ್ಟೆಗೆ BMW ತಯಾರಿಸಿದ ಮೂರು ಅನನ್ಯ ಕ್ರೀಡೋದ್ದೇಶದ ಮಾದರಿಗಳಾಗಿವೆ.೧೯೮೦ರ ದಶಕದಲ್ಲಿ ದೇಶದಿಂದ ಹೊರನಡೆದ ಫೋರ್ಡ್‌ ಮತ್ತು GMನಂತಹ U.S. ತಯಾರಕರಿಗಿಂತಲೂ ವಿಭಿನ್ನವಾದ BMW ದಕ್ಷಿಣ ಆಫ್ರಿಕಾದಲ್ಲಿ ತನ್ನ ಸಂಪೂರ್ಣ ಮಾಲೀಕತ್ವದಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಿತು.೧೯೯೪ರಲ್ಲಿ ವರ್ಣಭೇದ ನೀತಿಯ ಅಂತ್ಯ ಮತ್ತು ಆಮದು ಸುಂಕ ಕಡಿಮೆಯಾದ ನಂತರ, BMW ಸೌತ್‌ ಆಫ್ರಿಕಾ, ವಿದೇಶಿ ಮಾರುಕಟ್ಟೆಗಾಗಿ ಸರಣಿ ೩ರ ಉತ್ಪಾದನೆಯಲ್ಲಿ ಹೆಚ್ಚಿನ ಗಮನವನ್ನು ಕೇಂದ್ರಿಕರಿಸುವ ಉದ್ದೇಶದಿಂದ ಸರಣಿ ೫ ಮತ್ತು ಸರಣಿ ೭ ಮಾದರಿಯ ಸ್ಥಳೀಯ ಉತ್ಪಾದನೆಯನ್ನು ನಿಲ್ಲಿಸಿತು. ಈಗ ದಕ್ಷಿಣ ಆಫ್ರಿಕಾದಲ್ಲಿ ಉತ್ಪಾದಿಸಿದ BMW ಕಾರುಗಳನ್ನು ಜಪಾನ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಯುನೈಟೆಡ್‌ ಕಿಂಗ್‌ಡಮ್‌, ಸಿಂಗಾಪೂರ್‌ ಮತ್ತು ಹಾಂಗ್ ಕಾಂಗ್‌, ಆಫ್ರಿಕಾದ ಸಹರಾ ಮರುಭೂಮಿ ಪ್ರದೇಶ ಸೇರಿದಂತೆ ಬಲಗೈ ಚಾಲನೆಯ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ. ೧೯೯೭ರಿಂದ BMW ಸೌತ್‌ ಆಫ್ರಿಕಾವು ತೈವಾನ್‌, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಇರಾನ್‌, ದಕ್ಷಿಣ ಅಮೆರಿಕಾ ದೇಶಗಳಿಗೆ ರಫ್ತು ಮಾಡಲು ಎಡಗೈ ಚಾಲನೆಯ ವಾಹನಗಳನ್ನು ತಯಾರಿಸುತ್ತಿದೆ.ದಕ್ಷಿಣ ಆಫ್ರಿಕಾದಲ್ಲಿ ತಯಾರಾಗುವ BMW ಕಾರುಗಳು "NC೦"ಯಿಂದ ಪ್ರಾರಂಭವಾಗುವ VIN ಸಂಖ್ಯೆಯನ್ನು ಹೊಂದಿವೆ.

ಅಮೆರಿಕಾ ಸಂಯುಕ್ತ ಸಂಸ್ಥಾನ

ಚಿತ್ರ:BMWZentrum.jpg
ಸ್ಪಾರ್ಟನ್‌ಬರ್ಗ್‌ನಲ್ಲಿರುವ BMW ಕಾರ್ಖಾನೆ

BMW ಮ್ಯಾನುಫ್ಯಾಕ್ಚರಿಂಗ್‌ ಕಂ ಯು USAಯ ಸ್ಪಾರ್ಟನ್‌ಬರ್ಗ್‌ನ ಸೌತ್‌ ಕ್ಯಾಲಿಫೋರ್ನಿಯಾದಲ್ಲಿ X5 ಮತ್ತು ಇತ್ತೀಚೆಗೆ X೬ನ್ನು ಉತ್ಪಾದಿಸುತ್ತಿದೆ[[.|.[೫೦]]] ೨೦೦೯–೨೦೧೦ರಲ್ಲಿ ಸ್ಪಾರ್ಟನ್‌ಬರ್ಗ್‌ನಲ್ಲಿ ಚಿಕ್ಕದಾದ X೩ಯ ಉತ್ಪಾದನೆಯನ್ನು ಪ್ರಾರಂಭಿಸಲು ವ್ಯವಸ್ಥೆಮಾಡಲಾಗಿದೆ.ಸ್ಪಾರ್ಟನ್‌ಬರ್ಗ್‌ನಲ್ಲಿ BMWನ VIN ಸಂಖ್ಯೆಯೊಂದಿಗೆ ಪ್ರಾರಂಭವಾಗುವ "೪US" ಉತ್ಪಾದಿಸಲ್ಪಟ್ಟವು.

ಭಾರತ

BMW ಇಂಡಿಯಾ ೨೦೦೬ರಲ್ಲಿ ಗುರ್‌ಗಾಂವ್‌ನಲ್ಲಿ (ರಾಷ್ಟ್ರೀಯ ರಾಜಧಾನಿ ವಲಯ) ತನ್ನ ಮಾರಾಟ ಅಂಗ ಸಂಸ್ಥೆಯನ್ನು ಸ್ಥಾಪಿಸಿತು. ೨೦೦೭ರ ಪೂರ್ವಾರ್ಧದಲ್ಲಿ ಚೆನ್ನೈಯಲ್ಲಿ BMW ಸರಣಿ ೩ ಮತ್ತು ೫ರ ಅತ್ಯಾಧುನಿಕ ಜೋಡಣಾ ಘಟಕವನ್ನು ಪ್ರಾರಂಭಿಸಿತು. ಒಂದು ಶತಕೋಟಿ ಭಾರತದ ರೂಪಾಯಿಗಿಂತಲೂ ಹೆಚ್ಚು ಆರಂಭಿಕ ಹೂಡಿಕೆಯೊಂದಿಗೆ ೨೦೦೬ರ ಜನವರಿಯಲ್ಲಿ ಘಟಕದ ನಿರ್ಮಾಣ ಪ್ರಾರಂಭವಾಯಿತು. ೨೦೦೭ರ ಮೊದಲ ತ್ರೈಮಾಸಿಕದಲ್ಲಿ ಘಟಕವು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. BMW ಸರಣಿ 3 ಮತ್ತು BMW ಸರಣಿ 5ರ ವಿವಿಧ ಮಾದರಿಗಳನ್ನು ಉತ್ಪಾದಿಸಿತು.[೫೧]

ಚೀನಾ

ಈಶಾನ್ಯ ಚೀನಾದ ಶೆಂಯಾಂಗ್‌ನಲ್ಲಿ BMW ಬ್ರಿಲಿಯನ್ಸ್‌ ಚೀನಾ ಆಟೊಮೊಟಿವ್‌ ಸಹಯೋಗದೊಂದಿಗೆ ೨೦೦೪ರ ಮೇನಲ್ಲಿ ಒಂದು ಉತ್ಪಾದನಾ ಘಟಕವನ್ನು ತೆರೆಯಿತು.[೫೨] ಉತ್ಪಾದನಾ ಘಟಕವು ಸರಣಿ ೩ ಮತ್ತು ೫ ಅನ್ನು ವಾರ್ಷಿಕವಾಗಿ ೩೦,೦೦೦ ಉತ್ಪಾದಿಸಬಹುದೆಂದು ನಿರೀಕ್ಷಿಸಲಾಗಿದೆ. ಸರಣಿ ೧ ಅನ್ನು ಉತ್ಪಾದಿಸುವುದಕ್ಕಾಗಿ ೨ನೇ ಉತ್ಪಾದನಾ ಘಟಕವನ್ನು ಚೀನಾದಲ್ಲಿ ಆರಂಭಿಸಲು BMW ಯೋಜಿಸುತ್ತಿದೆ.[೫೩]

ಕೆನಡಾ

೨೦೦೮ರ ಅಕ್ಟೋಬರ್‌ನಲ್ಲಿ ಮೀಡಿಯಾಕೋರ್ಪ್‌ ಕೆನಡಾ Inc.ರವರು ಆಯೋಜಿಸಿದ ಸಮೀಕ್ಷೆಯಲ್ಲಿ BMW ಸಮೂಹ ಕೆನಡಾವು ಗ್ರೇಟರ್‌ ಟೊರೊಂಟೊ'ಸ್‌ ಟಾಪ್‌ ಎಂಪ್ಲಾಯರ್ಸ್‌ ಎಂಬ ಬಿರುದನ್ನು ಪಡೆದಿತ್ತು. ಇದನ್ನು ಟೊರೊಂಟೊ ಸ್ಟಾರ್‌ ವೃತ್ತಪತ್ರಿಕೆ ಪ್ರಕಟಿಸಿತ್ತು.[೫೪]

ಆಸ್ಟ್ರಿಯಾ

BMW X೩ ಅನ್ನು ಮಾಗ್ನಾ ಸ್ಟೇಯ್ರ್‌ ತಯಾರಿಸಿದೆ. ಗ್ರಾಜ್‌ನಲ್ಲಿರುವ ಇದು ಕೆನಡಾ ಸಂಸ್ಥೆಯ ಅಂಗಸಂಸ್ಥೆಯಾಗಿದೆ. BMWಯಿಂದ ಆಸ್ಟ್ರಿಯಾ ಪರವಾನಗಿಯನ್ನು ಪಡೆದಿದೆ.

ಸಂಬಂಧಿಸಿದ ಸಂಸ್ಥೆಗಳು

ಕೆನಡಾದ ಮೋಂಕ್ಟಾನ್‌ನಲ್ಲಿರುವ BMW MINI ಸಂಯುಕ್ತ ವಿತರಣೆ
  • AC ಶ್ನಿಟ್ಜರ್‌: BMW ವಾಹನಗಳಲ್ಲಿ ವಿಶೇಷ ಅನುಭವವಿರುವ ಕಾರ್ಯನಿರ್ವಹಣಾ ಸಂಸ್ಥೆ.
  • ಎಲ್ಪಿನಾ: ತನ್ನದೇ ಆದ ಹಕ್ಕುಗಳಿಂದ ಮೋಟರ್‌ ತಯಾರಿಸುವವರಾಗಿದ್ದು, BMW ಕಾರುಗಳನ್ನು ಆಧರಿಸಿ, ವಾಹನಗಳನ್ನು ತಯಾರಿಸುವರು.
  • ಅಟೋಮೊಬೈಲ್‌ವೆರ್ಕ್‌ ಏಸೆನಚ್‌
  • ಬ್ರೆಯ್ಟನ್‌: BMW ಕಾರುಗಳಲ್ಲಿ ವಿಶೇಷ ಅನುಭವವಿರುವ ಕಾರ್ಯನಿರ್ವಹಣಾ ತಯಾರಕರು.
  • ಡೈನಾನ್‌ ಕಾರುಗಳು: BMW ಮತ್ತು ಚಿಕ್ಕ ಕಾರುಗಳಲ್ಲಿ ವಿಶೇಷ ಅನುಭವವಿರುವ ಕಾರ್ಯನಿರ್ವಹಣಾ ಸಂಸ್ಥೆ
  • G-ಪವರ್‌: BMW ವಾಹನಗಳಲ್ಲಿ ವಿಶೇಷ ಅನುಭವವಿರುವ ಕಾರ್ಯನಿರ್ವಹಣಾ ಸಂಸ್ಥೆ.
  • ಗ್ಲಾಸ್‌
  • ಹಮನ್ನ್‌ ಮೋಟಾರ್‌ಸ್ಪೋರ್ಟ್‌: BMW ಕಾರುಗಳನ್ನು ಆಧರಿಸಿದ ವಾಹನಗಳನ್ನು ತಯಾರಿಸುವ ಮೋಟಾರ್ ವಿನ್ಯಾಸ ಮತ್ತು ಕಾರ್ಯನಿರ್ವಹಣಾ ವಿಶೇಷತಜ್ಞ.
  • ಹರ್ಟಜ್‌: BMW, MINI ಮತ್ತು ರೇಂಜ್‌ ರೋವರ್‌ ಕಾರುಗಳಲ್ಲಿ ವಿಶೇಷ ಅನುಭವವಿರುವ ಕಾರ್ಯನಿರ್ವಹಣಾ ಸಂಸ್ಥೆ.
  • ಹಸ್‌ಕ್ವಾರ್ನಾ ಮೋಟಾರ್‌ ಸೈಕಲ್ಸ್‌
  • ಲ್ಯಾಂಡ್‌ ರೋವರ್‌: ಫೋರ್ಡ್‌ಗೆ ಮಾರಾಟ ಮಾಡಲಾಗಿತ್ತು, ಈಗ ಇಇದನ್ನು ಭಾರತದ ಆಟೋ ತಯಾರಕ ಟಾಟಾ ಸಂಸ್ಥೆ ಖರೀದಿಸಿದೆ; ಪ್ರಸ್ತುತ ಮಾದರಿ ರೇಂಜ್‌ ರೋವರ್‌ ಅನ್ನು BMWನ ಮಾಲೀಕತ್ವ ಅವಧಿಯಲ್ಲಿ ಅಭಿವೃದ್ದಿಪಡಿಸಲಾಗಿದ್ದು, ಇತ್ತೀಚಿನವರೆಗೆ ಇದಕ್ಕೆ ೪.೪ L V8 ಪೆಟ್ರೋಲ್‌ (ಗ್ಯಾಸೋಲಿನ್‌) ಎಂಜಿನ್‌ ಮತ್ತು BMW ೩.೦ L I೬ ಡೀಸಲ್‌ ಎಂಜಿನ್‌ ಅನ್ನು ಅಳವಡಿಸಲಾಗಿತ್ತು.
  • MINI: ಚಿಕ್ಕ ಜಾರು ಗಾಡಿ; ಮೂಲ ಮಿನಿಯಿಂದ ಪ್ರೇರೆಪಿತಗೊಂಡಿದೆ.
  • MK-ಮೋಟಾರ್‌ಸ್ಪೋರ್ಟ್‌: BMW ಕಾರುಗಳಲ್ಲಿ ವಿಶೇಷ ಅನುಭವವಿರುವ ಕಾರ್ಯನಿರ್ವಹಣಾ ಸಂಸ್ಥೆ.
  • ರೇಸಿಂಗ್‌ ಡೈನಾಮಿಕ್ಸ್‌: BMW ಸಮೂಹದ ವಾಹನಗಳಲ್ಲಿ ವಿಶೇಷ ಅನುಭವವಿರುವ ಕಾರ್ಯನಿರ್ವಹಣಾ ಸಂಸ್ಥೆ ಮತ್ತು ಮೋಟರ್‌ ತಯಾರಕರು.
  • ರೋಲ್ಸ್‌-ರಾಯ್ಸ್‌ ಮೋಟರ್ ಕಾರ್ಸ್‌ ಲಿಮಿಟೆಡ್‌
  • ರೋವರ್‌: ಇದು ೧೯೯೪ರಿಂದ ೨೦೦೦ವರೆಗೆ BMW ಒಡೆತನದಲ್ಲಿತ್ತು. ಅದನ್ನು ಮಾರಾಟ ಮಾಡಿದ ನಂತರವೂ BMW ಮಿನಿಯ ಹಕ್ಕುಗಳನ್ನು ಉಳಿಸಿಕೊಂಡಿತು (MG ರೋವರ್ ಗ್ರೂಪ್‌ ನೋಡಿ).

ಇದನ್ನೂ ಗಮನಿಸಿ

  • BMW ಸೆಂಟ್ರಲ್‌ ಬ್ಯುಲ್ಡಿಂಗ್‌
  • BMW ಕ್ಲೀನ್‌ಎನರ್ಜಿ
  • BMW ಚಲನಚಿತ್ರಗಳು
  • BMW ಪ್ರಧಾನ ಕಛೇರಿಗಳು
  • ಐಡ್ರೈವ್‌
  • ಮೋಟಾರ್‌ಸ್ಪೋರ್ಟ್‌ನಲ್ಲಿ BMW
  • BMW ಮೋಟರ್‌ರಾಡ್‌
  • BMW ಇತಿಹಾಸ
  • BMW ಮೋಟಾರ್‌ ಸೈಕಲ್‌ಗಳ ಇತಿಹಾಸ
  • BMW ಎಂಜಿನ್‌ಗಳ ಪಟ್ಟಿ
  • ಸ್ಟ್ರೀಟ್‌ಕಾರ್ವರ್‌ BMW ಸ್ಟ್ರೀಟ್ ಕಾರ್ವರ್ ಸ್ಕೇಟ್‌ಬೋರ್ಡ್‌ಗಳು

ಆಕರಗಳು

ಬಾಹ್ಯ ಕೊಂಡಿಗಳು