ಭಿತ್ತಿಚಿತ್ರ

ಭಿತ್ತಿಚಿತ್ರ ಎಂದರೆ ಗೋಡೆ, ಛಾವಣಿ ಅಥವಾ ಇತರ ಶಾಶ್ವತ ಮೇಲ್ಮೈಗಳ ಮೇಲೆ ನೇರವಾಗಿ ಬಿಡಿಸಿದ ಅಥವಾ ಲೇಪಿಸಿದ ಒಂದು ಬಗೆಯ ಕಲಾಕೃತಿ. ಭಿತ್ತಿ ಚಿತ್ರಕಲೆಯ ಒಂದು ವಿಶಿಷ್ಟ ಲಕ್ಷಣವೆಂದರೆ ನಿರ್ದಿಷ್ಟ ಸ್ಥಳದ ವಾಸ್ತುಶಾಸ್ತ್ರೀಯ ಘಟಕಗಳನ್ನು ಚಿತ್ರದಲ್ಲಿ ಸಮರಸವಾಗಿ ಒಳಗೂಡಿಸಲಾಗುತ್ತದೆ.

ಛಾವಣಿ ವರ್ಣಚಿತ್ರ

ಕೆಲವು ಭಿತ್ತಿ ವರ್ಣಚಿತ್ರಗಳನ್ನು ಭಾರಿ ತಟ್ಟುಗಳ ಮೇಲೆ ಬಿಡಿಸಿ, ನಂತರ ಗೋಡೆಗೆ ಲಗತ್ತಿಸಲಾಗುತ್ತದೆ. ಆದರೆ ಈ ತಂತ್ರವು ೧೯ನೇ ಶತಮಾನದ ಕೊನೆಯ ವರ್ಷಗಳಿಂದ ಸಾಮಾನ್ಯ ಬಳಕೆಯಲ್ಲಿದೆ.[೧]

ವಿಭಿನ್ನ ಭಿತ್ತಿಚಿತ್ರಕಾರರು ತಮ್ಮ ಆಯ್ದ ಮಾಧ್ಯಮ ಹಾಗೂ ಅನ್ವಯದಲ್ಲಿ ನಿಪುಣರಾಗುವ ಸಾಧ್ಯತೆಯಿರುತ್ತದೆ. ಇವುಗಳಲ್ಲಿ ಕುಂಚ, ಉರುಳೆ ಅಥವಾ ಗಾಳಿ ಕುಂಚ/ವಾಯುದ್ರವಗಳಿಂದ ಲೇಪಿಸಿದ ತೈಲವರ್ಣಗಳು, ಇಮಲ್ಶನ್ ಅಥವಾ ಅಕ್ರಿಲಿಕ್ ವರ್ಣಗಳು ಸೇರಿವೆ. ಗಿರಾಕಿಗಳು ಹಲವುವೇಳೆ ನಿರ್ದಿಷ್ಟ ಶೈಲಿಯನ್ನು ಕೇಳುತ್ತಾರೆ ಮತ್ತು ಕಲಾವಿದನು ಸೂಕ್ತವಾದ ತಂತ್ರಕ್ಕೆ ಹೊಂದಾಣಿಕೆ ಮಾಡಬಹುದು.[೨]

ಉಲ್ಲೇಖಗಳು