ಮಂಡಿ

ಮಂಡಿಯು ತೊಡೆಯನ್ನು ಕಾಲಿನ ಜೊತೆ ಸೇರಿಸುತ್ತದೆ ಮತ್ತು ಎರಡು ಕೀಲುಗಳನ್ನು ಹೊಂದಿದೆ: ಫೀಮರ್ ಹಾಗೂ ಜಂಘಾಸ್ಥಿ ನಡುವೆ ಒಂದು, ಮತ್ತು ಫ಼ೀಮರ್ ಹಾಗೂ ಮಂಡಿಚಿಪ್ಪು ನಡುವೆ ಒಂದು.[೧] ಇದು ಮಾನವ ದೇಹದಲ್ಲಿನ ಅತ್ಯಂತ ದೊಡ್ಡ ಕೀಲಾಗಿದೆ. ಮಂಡಿಯು ಒಂದು ಮಾರ್ಪಡಿಸಲ್ಪಟ್ಟ ತಿರುಗಣೆ ಕೀಲಾಗಿದೆ, ಮತ್ತು ಬಾಗುವಿಕೆ ಹಾಗೂ ಚಾಚುವಿಕೆ ಜೊತೆಗೆ ಸ್ವಲ್ಪ ಆಂತರಿಕ ಹಾಗೂ ಬಾಹ್ಯ ತಿರುಗುವಿಕೆಯನ್ನು ಅನುಮತಿಸುತ್ತದೆ. ಮೊಣಕಾಲು ಗಾಯಕ್ಕೆ ಮತ್ತು ಅಸ್ಥಿಸಂಧಿವಾತದ ಬೆಳವಣಿಗೆಗೆ ಒಳಗಾಗಬಹುದು.

ಬಲಗಡೆಯಿಂದ ಬಲಮಂಡಿಯನ್ನು ನೋಡಿದಾಗ

ಮಂಡಿಯು ದೇಹದಲ್ಲಿನ ಅತ್ಯಂತ ಪ್ರಮುಖ ಕೀಲುಗಳಲ್ಲಿ ಒಂದಾಗಿದೆ. ಇದು ಸಮತಲ (ಓಟ ಹಾಗೂ ನಡಿಗೆ) ಮತ್ತು ಲಂಬ (ಜಿಗಿತ) ದಿಕ್ಕುಗಳಲ್ಲಿ ದೇಹದ ತೂಕವನ್ನು ಹೊರುವುದಕ್ಕೆ ಸಂಬಂಧಿಸಿದ ಚಲನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹುಟ್ಟಿದಾಗ, ಮಂಡಿಚಿಪ್ಪು ಕೇವಲ ಮೃದ್ವಸ್ಥಿಯಿಂದ ರೂಪುಗೊಂಡಿರುತ್ತದೆ, ಮತ್ತು ಇದು ಮೂರು ಮತ್ತು ಐದು ವರ್ಷ ವಯಸ್ಸಿನ ನಡುವೆ ಎಲುಬಾಗುತ್ತದೆ. ಇದು ಮಾನವ ದೇಹದಲ್ಲಿನ ಅತ್ಯಂತ ದೊಡ್ಡ ತಿಲಾಸ್ಥಿಯಾಗಿರುವುದರಿಂದ, ಅಸ್ಥೀಭವನ ಪ್ರಕ್ರಿಯೆಯು ಗಣನೀಯವಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.[೨]

ಮಂಡಿಯ ಮೃದ್ವಸ್ಥಿಯು ಮೂಳೆಯನ್ನು ರಕ್ಷಿಸುವ ಒಂದು ತೆಳುವಾದ, ಹಿಗ್ಗುವಂಥ ಅಂಗಾಂಶವಾಗಿದೆ  ಮತ್ತು ಕೀಲಿನ ಮೇಲ್ಮೈಗಳು ಒಂದರ ಮೇಲೊಂದು ಸುಲಭವಾಗಿ ಜಾರಬಲ್ಲವು ಎಂಬುದನ್ನು ನಿರ್ದಿಷ್ಟಪಡಿಸುತ್ತದೆ. ಮೃದ್ವಸ್ಥಿಯು ಮಂಡಿಯ ಸುಲಭ ಚಲನೆಯನ್ನು ಖಾತ್ರಿಗೊಳಿಸುತ್ತದೆ. ಮಂಡಿಗಳಲ್ಲಿ ಕೀಲು ಮೃದ್ವಸ್ಥಿಯ ಎರಡು ವಿಧಗಳಿವೆ: ನಾರುಳ್ಳ ಮೃದ್ವಸ್ಥಿ ಮತ್ತು ಕಾಚಸದೃಶ ಮೃದ್ವಸ್ಥಿ. ನಾರುಳ್ಳ ಮೃದ್ವಸ್ಥಿಯು ಕರ್ಷಕ ಶಕ್ತಿಯನ್ನು ಹೊಂದಿದೆ ಮತ್ತು ಒತ್ತಡವನ್ನು ಪ್ರತಿರೋಧಿಸಲಬಲ್ಲದು. ಕಾಚಸದೃಶ ಮೃದ್ವಸ್ಥಿಯು ಮೇಲ್ಮೈಯನ್ನು ಆವರಿಸುತ್ತದೆ ಮತ್ತು ಇದರ ಉದ್ದಕ್ಕೂ ಕೀಲುಗಳ ಚಲಿಸುತ್ತವೆ. ಮೃದ್ವಸ್ಥಿಯು ವರ್ಷಗಳು ಕಳೆದಂತೆ ಸವೆಯುತ್ತದೆ. ಮೃದ್ವಸ್ಥಿಯು ಸ್ವ-ಪುನಃಸ್ಥಾಪನೆಯ ಬಹಳ ಸೀಮಿತ ಸಾಮರ್ಥ್ಯ ಹೊಂದಿದೆ.

ಉಲ್ಲೇಖಗಳು