ಯಾರ್ಕ್‌ಷೈರ್

ಯಾರ್ಕ್‌ಷೈರ್ /[unsupported input]ˈjɔrkʃər/ ಉತ್ತರ ಇಂಗ್ಲೆಂಡ್‌ನ ಐತಿಹಾಸಿಕ ಕೌಂಟಿಯಾಗಿದ್ದು, ಯುನೈಟೆಡ್ ಕಿಂಗ್ಡಮ್‌ನಲ್ಲಿ ಅತೀ ದೊಡ್ಡದಾಗಿದೆ.[೨] ಇತರ ಇಂಗ್ಲೀಷ್ ಕೌಂಟಿಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಾಗಿರುವುದರಿಂದ, ಅದರ ಕಾರ್ಯನಿರ್ವಹಣೆಗಳನ್ನು ಉಪವಿಭಾಗಗಳು ಕಾಲಾವಧಿಯಲ್ಲಿ ಕೈಗೊಳ್ಳುತ್ತವೆ. ಅವು ಕೂಡ ಆವರ್ತಕ ಸುಧಾರಣೆಗೆ ಒಳಗಾಗುತ್ತವೆ. ಈ ಬದಲಾವಣೆಗಳ ಉದ್ದಕ್ಕೂ, ಯಾರ್ಕ್‌ಷೈರ್ ಬೌಗೋಳಿಕ ಪ್ರದೇಶ ಮತ್ತು ಸಾಂಸ್ಕೃತಿಕ ಸ್ಥಳವಾಗಿ ಮಾನ್ಯತೆ ಪಡೆಯುವುದನ್ನು ಮುಂದುವರಿಸಿದೆ.[೩][೪] ಯಾರ್ಕ್‌ಷೈರ್ ಹೆಸರು ಯುನೈಟೆಡ್ ಕಿಂಗ್ಡಮ್‌ನಾದ್ಯಂತ ಪರಿಚಿತವಾಗಿದ್ದು, ಈ ಹೆಸರು ಚೆನ್ನಾಗಿ ಅರ್ಥವಾಗುತ್ತದೆ. ಮಾಧ್ಯಮ ಮತ್ತು ಮಿಲಿಟರಿಯಲ್ಲಿ ಸಮಾನ ಬಳಕೆಯಲ್ಲಿದ್ದು,[೫] ನಾಗರಿಕ ಆಡಳಿತದ ಪ್ರಸಕ್ತ ಪ್ರದೇಶಗಳ ಹೆಸರುಗಳಾದ ಯಾರ್ಕ್‌ಷೈರ್ ಮತ್ತು ಹಂಬರ್ ಹಾಗೂ ವೆಸ್ಟ್ ಯಾರ್ಕ್‌ಷೈರ್‌ನಲ್ಲಿ ಕೂಡ ಕಾಣಿಸಿಕೊಂಡಿದೆ.

Yorkshire
Flag of Yorkshire
Flag of Yorkshire
Yorkshire in England
Yorkshire within England, showing ancient extent
Area
 - ೧೮೩೧3,669,510 acres (14,850 km2)[೧]
 - ೧೯೦೧3,883,979 acres (15,718 km2)[೧]
 - ೧೯೯೧2,941,247 acres (11,903 km2)[೧]
Population
 - ೧೮೩೧1,371,359[೧]
 - ೧೯೦೧೩,೫೧೨,೮೩೮[೧]
 - ೧೯೯೧೩,೯೭೮,೪೮೪[೧]
Density
 - ೧೮೩೧೦.೩೭/acre
 - ೧೯೦೧೦.೯/acre
 - ೧೯೯೧೧.೩೫/acre
History
 - OriginKingdom of Jórvík
 - CreatedIn antiquity
 - Succeeded byVarious
Chapman codeYKS
 - HQYork
Subdivisions
 - TypeRidings
 - Units1 North • 2 West • 3 East
Ridings of Yorkshire

ಯಾರ್ಕ್‌ಷೈರ್‌ನ ಐತಿಹಾಸಿಕ ಕೌಂಟಿಯ ಗಡಿಗಳೊಳಗೆ, ಇಂಗ್ಲೆಂಡ್‌ನಲ್ಲಿ ಅತ್ಯಂತ ಹಸಿರಿನಿಂದ ಕೂಡಿದ್ದು ಎಂದು ಪರಿಗಣಿಸಲಾದ ಪ್ರದೇಶಗಳಿವೆ. ಯಾರ್ಕ್‌ಷೈರ್ ಡೇಲ್ಸ್ ಮತ್ತು ನಾರ್ತ್ ಯಾರ್ಕ್ ಮೂರ್ಸ್‌ನ ನಾಶವಾಗಿರದ ಹಳ್ಳಿಗಾಡಿನ ವಿಸ್ತಾರ ಪ್ರದೇಶಗಳು ಮತ್ತು ಕೆಲವು ಪ್ರಮುಖ ನಗರಗಳ ತೆರೆದ ನೋಟದ ಕಾರಣದಿಂದ ಅತ್ಯಂತ ಹಸಿರಾಗಿ ಕಂಡುಬಂದಿದೆ.[೬][೭] ಯಾರ್ಕ್‌ಷೈರ್ ಕೆಲವುಬಾರಿ ಗಾಡ್ಸ್ ಓನ್ ಕಂಟ್ರಿ ಎಂಬ ಉಪನಾಮವನ್ನು ಪಡೆದಿದೆ.[೪][೮] ಯಾರ್ಕ್‌ಷೈರ್ ಲಾಂಛನವು ಇಂಗ್ಲೀಷ್ ರಾಯಲ್ ಹೌಸ್ ಆಫ್ ಯಾರ್ಕ್‌ನ ಬಿಳಿಯ ಗುಲಾಬಿಯಾಗಿದೆ ಮತ್ತು ಯಾರ್ಕ್‌‌ಷೈರ್ ಪ್ರತಿನಿಧಿಸುವ ಅತ್ಯಂತ ಸಾಮಾನ್ಯವಾಗಿ ಬಳಸುವ ಧ್ವಜವು ದಟ್ಟ ನೀಲಿ ಹಿನ್ನೆಲೆಯಲ್ಲಿರುವ ಬಿಳಿಯ ಗುಲಾಬಿಯಾಗಿದೆ.[೯] ವರ್ಷಗಳ ಬಳಕೆ ನಂತರ ೨೦೦೮ರ ಜುಲೈ ೨೯ರಂದು ಫ್ಲ್ಯಾಗ್ ಇನ್‌ಸ್ಟಿಟ್ಯೂಟ್ ಮಾನ್ಯತೆ ನೀಡಿತು.[೧೦] ಆಗಸ್ಟ್ ೧ರಂದು ನಡೆಯುವ ಯಾರ್ಕ್‌ಷೈರ್ ದಿನವು ಸಾಮಾನ್ಯ ಯಾರ್ಕ್‌ಷೈರ್ ಸಂಸ್ಕೃತಿಯ ಆಚರಣೆಯಾಗಿದ್ದು, ಅದರ ಇತಿಹಾಸದಿಂದ ಸ್ವಯಂ ಆಡುಭಾಷೆಯ ವ್ಯಾಪ್ತಿಯನ್ನು ಒಳಗೊಂಡಿದೆ.[೧೧]

ಸ್ಥಳನಾಮ ಅಧ್ಯಯನ

ಯಾರ್ಕ್‌ಷೈರ್ ಕೌಂಟಿಯು ಯಾರ್ಕ್(ಉಚ್ಚರಿತ)ನಗರದ ಷೈರ್(ಕೌಂಟಿಯ ಆಡಳಿತ ಪ್ರದೇಶ) ಅಥವಾ ಯಾರ್ಕ್`ಸ್ ಷೈರ್ ಆಗಿರುವುದರಿಂದ ಕೌಂಟಿ ಆಫ್ ಯಾರ್ಕ್‌ಷೈರ್ ಹಾಗೆ ಹೆಸರನ್ನು ಪಡೆದಿದೆ.locally /ˈjɔːk/  ( listen) "ಯಾರ್ಕ್" ನಗರದ ವೈಕಿಂಗ್ ಹೆಸರು ಜಾರ್ವಿಕ್‌ನಿಂದ ಬಂದಿದೆ. "ಷೈರ್" ಹಳೆಯ ಇಂಗ್ಲೀಷ್ ಸ್ಕರ್‌ನಿಂದ ಹುಟ್ಟಿಕೊಂಡಿದ್ದು, ಷಿಯರ್‌ಗೆ ಸಂಬಂಧಿಸಿದ್ದೆಂದು ಕಾಣುತ್ತದೆ. ಏಕೆಂದರೆ ಷಿಯರ್ ಭೂಮಿಯ ವಿಭಾಗವಾಗಿದೆ. "ಷೈರ್" ಉತ್ತರ ಪ್ರತ್ಯಯವನ್ನು ಸ್ಥಳೀಯವಾಗಿ "ಷರ್" ಎಂದು ಉಚ್ಚರಿಸಲಾಗುತ್ತದೆ. /-ʃər/ಅಥವಾ ಸಾಂದರ್ಭಿಕವಾಗಿ /-ʃɪər/"ಷಿಯರ್‌"ನ ಸಮಾನೋಚ್ಚಾರಣ ಪದದಂತೆ ಉಚ್ಚರಿಸಲಾಗುತ್ತದೆ.[೧೨]

ಇತಿಹಾಸ

ಸೆಲ್ಟಿಕ್ ಬುಡಕಟ್ಟುಗಳು

ಯಾರ್ಕ್‌ಷೈರ್ ಮುಂಚಿನ ನಿವಾಸಿಗಳು ಸೆಲ್ಟ್‌ಗಳಾಗಿದ್ದು, ಅವರು ಎರಡು ಪ್ರತ್ಯೇಕ ಬುಡಕಟ್ಟುಗಳಾದ ಬ್ರಿಗಾಂಟೆಸ್ ಮತ್ತು ಪಾರಿಸಿ ರಚಿಸಿದ್ದಾರೆ. ನಂತರ ಸಂಪೂರ್ಣ ನಾರ್ತ್ ರೈಡಿಂಗ್ ಆಫ್ ಯಾರ್ಕ್‌ಷೈರ್ ಮತ್ತು ವೆಸ್ಟ್ ರೈಡಿಂಗ್ ಆಫ್ ಯಾರ್ಕ್‌ಷೈರ್‌ ಆಗಿರುವ ಪ್ರದೇಶವನ್ನು ಬ್ರಿಗಾಂಟೆಸ್ ನಿಯಂತ್ರಿಸುತ್ತಿದ್ದರು. ಬುಡಕಟ್ಟು ಬಹುತೇಕ ಉತ್ತರ ಇಂಗ್ಲೆಂಡ್ ಮತ್ತು ಇಂಗ್ಲೆಂಡ್‌ನ ಯಾವುದೇ ಸೆಲ್ಟಿಕ್ ಬುಡಕಟ್ಟಿಗಿಂತ ಹೆಚ್ಚಿನ ಪ್ರದೇಶವನ್ನು ನಿಯಂತ್ರಿಸಿತು.[೧೩] ಅವರ ಒಳನಾಡಾಗಿ ಯಾರ್ಕ್‌ಷೈರ್ ಪ್ರದೇಶವಿರುವುದಕ್ಕೆ ಇಸುರಿಯಂ ಬ್ರಿಗಾಂಟಂ (ಈಗ ಆಲ್ಡ್‌ಬರೊ ಎಂದು ಹೆಸರಾಗಿದೆ)ರೋಮನ್ ಆಳ್ವಿಕೆಯಲ್ಲಿ ಅವರ ಸಿವಿಟಾಸ್ ‌ನ ರಾಜಧಾನಿ ಪಟ್ಟಣವಾಗಿದ್ದು ಸಾಕ್ಷ್ಯ ಒದಗಿಸುತ್ತದೆ. ಜಿಯೋಗ್ರಾಫಿಯಾ ದಲ್ಲಿ ಕ್ಲಾಡಿಯಸ್ ತೊಲೆಮಾಸ್ ವರ್ಣಿಸಿದ ಒಂಬತ್ತು ಬ್ರಿಗಾಂಟಿಯನ್ ಪೊಲೈಸ್ ‌ನಲ್ಲಿ ಆರು ಐತಿಹಾಸಿಕ ಕೌಂಟಿಯಲ್ಲಿರುತ್ತದೆ.[೧೪][೧೫] ಈಸ್ಟ್ ರೈಡಿಂಗ್ ಆಫ್ ಯಾರ್ಕ್‌ಷೈರ್ ಪ್ರದೇಶವನ್ನು ನಿಯಂತ್ರಿಸುವ ಪ್ಯಾರಿಸಿ, ಲುಟೇಶಿಯ ಪ್ಯಾರಿಸಿಯೋರಂ , ಗಾಲ್‌(ಈಗ ಫ್ರಾನ್ಸ್‌ನ ಪ್ಯಾರಿಸ್ ಎಂದು ಪರಿಚಿತವಾಗಿದೆ)ನ ಪ್ಯಾರಿಸಿಗೆ ಸಂಬಂಧ ಹೊಂದಿರಬಹುದು.[೧೬] ಅವರ ರಾಜಧಾನಿಯು ಪೆಟುಯಾರಿಯದಲ್ಲಿದ್ದು, ಹಂಬರ್ ಅಳಿವೆಗೆ ಸಮೀಪದಲ್ಲಿದೆ. ಬ್ರಿಟನ್ ವಿರುದ್ಧ ರೋಮನ್ ವಿಜಯವು ೪೩ನೇ AD ಯಲ್ಲಿ ಆರಂಭವಾಯಿತು. ಆದಾಗ್ಯೂ,ಬ್ರಿಗಾಂಟೆಸ್ ವಿಸ್ತರಿತ ಅವಧಿವರೆಗೆ ರೋಮ್‌ನ ಅಧೀನ ರಾಜ್ಯವಾಗಿ ಅವರ ಪ್ರಭುತ್ವದ ನಿಯಂತ್ರಣದಲ್ಲಿ ಉಳಿದಿತ್ತು. ಬ್ರಿಗಾಂಟಿನ್ ರಾಣಿ ಕಾರ್ಟಿಮಂಡುವ ಮತ್ತು ಅವಳ ಪತಿ ವೆನುಷಿಯಸ್ ಆಳ್ವಿಕೆ ನಡೆಸುತ್ತಿದ್ದರು. ಆರಂಭಿಕವಾಗಿ, ಈ ಪರಿಸ್ಥಿತಿಯು ರೋಮನ್ನರು ಮತ್ತು ಬ್ರಿಗಾಂಟೆಸ್ ಇಬ್ಬರಿಗೂ ಹೊಂದಿಕೆಯಾಗಿದ್ದು, ಬ್ರಿಗಾಂಟೆಸ್ ಬ್ರಿಟನ್‌ನ ಅತ್ಯಂತ ಮಿಲಿಟರಿ ಬುಡಕಟ್ಟು ಜನಾಂಗವೆಂದು ಹೆಸರಾಗಿದೆ.[೧೭]

ರೋಮನ್ ಯಾರ್ಕ್‌ಷೈರ್

ಯಾರ್ಕ್ ಮಿನ್‌ಸ್ಟರ್ ಹೊರಗೆ ಕಾನ್‌ಸ್ಟಾಂಟೈನ್ I ಪ್ರತಿಮೆ

ರಾಣಿ ಕಾರ್ಟಿಮಾಂಡುವಾ ತನ್ನ ಪತಿ ವೆನುಷಿಯಸ್‌ನ ರಕ್ಷಾಕವಚ ಧಾರಕ ವೆಲ್ಲೊಕ್ಯಾಟಸ್‌‌ಗಾಗಿ ಪತಿಯನ್ನು ಅಗಲಿದಳು. ಇದು ಘಟನೆಗಳ ಸರಪಣಿಗೆ ದಾರಿಕಲ್ಪಿಸಿ, ಯಾರ್ಕ್‌ಷೈರ್ ಪ್ರದೇಶದ ನಿಯಂತ್ರಣವನ್ನು ಬದಲಿಸಿತು. ರೋಮನ್ನರ ಜತೆ ಉತ್ತಮ ಸಂಬಂಧದ ಕಾರಣದಿಂದಾಗಿ ಕಾರ್ಟಿಮಂಡುವಾಗೆ ರಾಜಪ್ರಭುತ್ವದ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು. ಆದಾಗ್ಯೂ, ಅವಳ ಮಾಜಿ ಪತಿ ಅವಳ ವಿರುದ್ಧ ಮತ್ತು ರೋಮನ್ ಮಿತ್ರಕೂಟಗಳ ವಿರುದ್ಧ ಬಂಡಾಯ ರೂಪಿಸಿದ.[೧೮] ಎರಡನೇ ಪ್ರಯತ್ನದಲ್ಲಿ, ವೆನುಷಿಯಸ್ ರಾಜಪ್ರಭುತ್ವವನ್ನು ವಶಪಡಿಸಿಕೊಂಡ. ಆದರೆ ರೋಮನ್ನರು ಜನರಲ್ ಪೆಟಿಲ್ಲಿಯಸ್ ಸೆರಿಯಾಲಿಸ್ ನೇತೃತ್ವದಲ್ಲಿ ಕ್ರಿ.ಶ. ೭೧ ರಲ್ಲಿ ಬ್ರಿಗಾಂಟೆಸ್‌‌ ಜಯಿಸಿದರು.[೧೯]

ರೋಮನ್ ಆಳ್ವಿಕೆಯಲ್ಲಿ, ಪ್ರದೇಶದ ಹೆಚ್ಚಿನ ವೈಲಕ್ಷ್ಯಣ್ಯ ಮುಂದುವರಿಯಿತು. ಎಬೋರಾಕಂನ ಗೋಡೆಗಳ ನಗರ(ಈಗ ಯಾರ್ಕ್ ಎಂದು ಹೆಸರಾಗಿದೆ)ಈಗ ಬ್ರಿಟಾನಿಯ ಇನ್ಫೀರಿಯರ್ ರಾಜಧಾನಿ ಮತ್ತು ಸರ್ವ ರೋಮನ್ ಬ್ರಿಟನ್ ಜಂಟಿ ರಾಜಧಾನಿಯಾಗಿ ಹೆಸರಾಗಿದೆ.[೨೦] ಚಕ್ರವರ್ತಿ ಸೆಪ್ಟಿಮಸ್ ಸೆವೆರಸ್ ಸಾವಿಗೆ ಮುನ್ನ, ಎರಡು ವರ್ಷಗಳ ಅವಧಿಯಲ್ಲಿ ರೋಮನ್ ಸಾಮ್ರಾಜ್ಯವನ್ನು ಎಬೋರಾಕಂನಿಂದ ಅವನು ಆಳ್ವಿಕೆ ನಡೆಸುತ್ತಿದ್ದ.[೨೧]

ಇನ್ನೊಬ್ಬ ಚಕ್ರವರ್ತಿ ಕಾನ್‌ಸ್ಟಾನ್‌ಷಿಯಸ್ ಕ್ಲೋರಸ್ ಯಾರ್ಕ್‌ಷೈರ್‌ಗೆ ಭೇಟಿಯ ಕಾಲದಲ್ಲಿ ಕ್ರಿ.ಶ. ೩೦೬ ರಲ್ಲಿ ನಿಧನನಾದ. ಇದರಿಂದ ಅವನ ಪುತ್ರ ಕಾನ್‌ಸ್ಟಾನ್‌ಟೈನ್ ದಿ ಗ್ರೇಟ್ ನಗರದಲ್ಲಿ ಚಕ್ರವರ್ತಿ ಎಂದು ಘೋಷಿಸಿಕೊಂಡ. ಕ್ರೈಸ್ತ ಧರ್ಮಕ್ಕೆ ಅವನ ಕೊಡುಗೆಗಳಿಂದ ಖ್ಯಾತಿ ಗಳಿಸಿದ.[೨೨] ೫ನೇ ಶತಮಾದ ಪೂರ್ವದಲ್ಲಿ ಕೊನೆಯ ಸಕ್ರಿಯ ರೋಮನ್ ಪಡೆಗಳ ಹಿಂದೆಗೆತದಿಂದ ರೋಮನ್ ಆಳ್ವಿಕೆ ಅಂತ್ಯಗೊಂಡಿತು. ಈ ಹಂತದಲ್ಲಿ, ಸಾಮ್ರಾಜ್ಯವು ಭಾರೀ ಕುಸಿತವನ್ನು ಅನುಭವಿಸಿತು.[೨೧]

ಎರಡನೇ ಸೆಲ್ಟಿಕ್ ಅವಧಿ ಮತ್ತು ಏಂಜಲ್ಸ್

ರೋಮನ್ನರು ಬಿಟ್ಟುಹೋದ ನಂತರ, ಸಣ್ಣ ಸೆಲ್ಟಿಕ್ ಪ್ರಭುತ್ವಗಳು ಯಾರ್ಕ್‌ಷೈರ್‌ನಲ್ಲಿ ಎದ್ದುನಿಂತವು; ಯಾರ್ಕ್ ಸುತ್ತ ಎಬ್ರಾಕ್ ಪ್ರಭುತ್ವ ಮತ್ತು ವೆಸ್ಟ್ ಯಾರ್ಕ್‌ಷೈರ್‌‌ನಲ್ಲಿ ಎಲ್ಮೆಟ್ ಪ್ರಭುತ್ವ ಗಮನಾರ್ಹವಾಗಿದೆ.[೨೩][೨೪] ಎಲ್ಮೆಟ್ ನಾರ್ತಂಬ್ರಿಯನ್ ಏಂಜಲ್ಸ್‌ನಿಂದ ೭ನೇ ಶತಮಾನದ ಪೂರ್ವದವರೆಗೆ ಸ್ವತಂತ್ರವಾಗಿ ಉಳಿಯಿತು. ನಾರ್ತ್‌ಅಂಬ್ರಿಯದ ಎಡ್ವಿನ್ ರಾಜ ಕೊನೆಯ ರಾಜ ಸರ್ಟಿಕ್‌ನನ್ನು ಉಚ್ಚಾಟಿಸಿ, ಪ್ರದೇಶವನ್ನು ಸೇರಿಸಿಕೊಂಡ. ಮಹಾನ್ ವಿಸ್ತರಣೆಯಲ್ಲಿ, ನಾರ್ತ್‌ಅಂಬ್ರಿಯ ಐರಿಷ್ ಸಮುದ್ರದಿಂದ ಉತ್ತರ ಸಮುದ್ರವರೆಗೆ ವಿಸ್ತರಿಸಿತು. ದಕ್ಷಿಣ ಯಾರ್ಕ್‌ಷೈರ್‌ನಲ್ಲಿ ಎಡಿನ್‌ಬರ್ಗ್‌ನಿಂದ ಹಲ್ಲಾಮ್‌ಷೈರ್‌ವರೆಗೆ ವಿಸ್ತರಿಸಿತು.[೨೫]

ಜಾರ್ವಿಕ್ ಪ್ರಭುತ್ವ

ಎರಿಕ್ ಬ್ರಡೇಕ್ಸ್ ಆಳ್ವಿಕೆಯ ನಾಣ್ಯ

ಡ್ಯಾನಿಷ್ ವೈಕಿಂಗ್‌ರ ಸೇನೆ, ಅದರ ಶತ್ರುಗಳು ಉಲ್ಲೇಖಿಸುವ ಗ್ರೇಟ್ ಹೆಥೆನ್ ಸೇನೆ,[೨೬] ಕ್ರಿ.ಶ.೮೬೬ರಲ್ಲಿ ನಾರ್ಥಂಬ್ರಿಯ ಪ್ರದೇಶದ ಮೇಲೆ ಆಕ್ರಮಣ ಮಾಡಿತು. ಡೇನರು ಜಯಗಳಿಸಿದರು ಮತ್ತು ಈಗಿನ ಆಧುನಿಕ ದಿನದ ಯಾರ್ಕ್ ಎಂದು ಊಹಿಸಿದರು ಮತ್ತು ಅದಕ್ಕೆ ಜಾರ್ವಿಕ್ ಎಂದು ಮರುನಾಮಕರಣ ಮಾಡಿದರು. ಅದೇ ಹೆಸರಿನಲ್ಲಿ ಹೊಸ ಡ್ಯಾನಿಷ್ ರಾಜಪ್ರಭುತ್ವದ ರಾಜಧಾನಿ ನಗರವನ್ನಾಗಿಸಿದರು. ದಕ್ಷಿಣ ನಾರ್ಥಂಬ್ರಿಯದ ಬಹುತೇಕ ಪ್ರದೇಶವು ಈ ರಾಜಪ್ರಭುತ್ವದ ವ್ಯಾಪ್ತಿಯಲ್ಲಿತ್ತು. ಇದು ಸರಿಸುಮಾರು ಮತ್ತಷ್ಟು ಪಶ್ಚಿಮಕ್ಕೆ ವಿಸ್ತರಣೆಯಾಗುವ ಯಾರ್ಕ್‌ಷೈರ್ ಗಡಿಗಳಿಗೆ ಸಮನಾಗಿದೆ.[೨೭]

ಡೇನರು ಇಂಗ್ಲೆಂಡ್‌ನ ಮತ್ತಷ್ಟು ಪ್ರದೇಶವನ್ನು ಗೆದ್ದರು. ಇದು ನಂತರ ಡೇನ್‌ಲಾ ಎಂದು ಹೆಸರಾಯಿತು. ಆದರೆ ಬಹುತೇಕ ಡೇನ್‌ಲಾ ಈಗಲೂ ಇಂಗ್ಲೀಷ್ ನೆಲವಾಗಿದ್ದು, ವೈಕಿಂಗ್ ಅಧಿಪತಿಗಳಿಗೆ ಶರಣಾಗಿದ್ದರೂ, ಇದು ಜಾರ್ವಿಕ್ ಪ್ರಭುತ್ವದಲ್ಲಿತ್ತು. ಮುಖ್ಯನಾಡು ಬ್ರಿಟನ್‌ನಲ್ಲಿ ಎಂದಿಗೂ ಸ್ಥಾಪನೆಯಾಗಿರದ ನಿಜವಾದ ಏಕೈಕ ವೈಕಿಂಗ್ ಪ್ರದೇಶವಾಗಿತ್ತು. ವೈಕಿಂಗ್ ರಾಷ್ಟ್ರಗಳ ವ್ಯಾಪಾರ ಜಾಲದ ಅನುಕೂಲ ಪಡೆದು ರಾಜಪ್ರಭುತ್ವವು ಸಮೃದ್ಧಿ ಹೊಂದಿತು ಮತ್ತು ಬ್ರಿಟಿಷ್ ದ್ವೀಪಗಳು, ವಾಯವ್ಯ ಯುರೋಪ್, ಮೆಡಿಟರೇನಿಯನ್ ಮತ್ತು ಮಧ್ಯಪ್ರಾಚ್ಯದ ಜತೆ ವಾಣಿಜ್ಯ ಸಂಬಂಧಗಳನ್ನು ಸ್ಥಾಪಿಸಿತು.[೨೮]

೮೭೫ರಲ್ಲಿ ಡೇನ್ ಹಾಫ್‌ಡನ್ ರಗ್ನಾರ್‌ಸನ್ ಅವರು ಸ್ಥಾಪಿಸಿದ,[೨೯] ಬಹುತೇಕ ಡ್ಯಾನಿಷ್ ರಾಜರು ಆಳಿದ, ಡ್ಯಾನಿಷ್ ವೈಕಿಂಗ್ ಕುಟುಂಬಗಳು ಮತ್ತು ತರುವಾಯದ ಪೀಳಿಗೆಗಳ ಜನಸಂಖ್ಯೆಯುಳ್ಳ ರಾಜಪ್ರಭುತ್ವದ ನಾಯಕತ್ವವು ಅದರ ಅವನತಿ ಕಾಲದಲ್ಲಿ ನಾರ್ವೇಯನ್ನರ ಕೈಗೆ ಹಸ್ತಾಂತರವಾಯಿತು.[೨೯] ಜಾರ್ವಿಕ್‌ನ ಕೊನೆಯ ಸ್ವತಂತ್ರ ವೈಕಿಂಗ್ ರಾಜನಾಗಿದ್ದ ನಾರ್ವೆಯ ಮಾಜಿ ರಾಜ ಎರಿಕ್ ಬ್ಲಡೇಕ್ಸ್ ವಿಶೇಷವಾಗಿ ಇತಿಹಾಸದಲ್ಲಿ ಗಮನಾರ್ಹ ವ್ಯಕ್ತಿಯಾಗಿದ್ದ. ನಾಯಕತ್ವದತ್ತ ಅವನ ರಕ್ತಪಿಪಾಸೆಯ ನಿಲುವು ನಂತರದ ವರ್ಷಗಳಲ್ಲಿ ಡ್ಯಾನಿಷ್ ನಿವಾಸಿಗಳು ಇಂಗ್ಲೀಷ್ ಸಾರ್ವಬೌಮತ್ವವನ್ನು ಸ್ವೀಕರಿಬೇಕೆಂದು ಮನದಟ್ಟಾಗಲು ಆಂಶಿಕವಾಗಿ ಕಾರಣವಾಯಿತು.[೩೦]

ಸುಮಾರು ೧೦೦ ವರ್ಷಗಳ ಲವಲವಿಕೆಯ ಅಸ್ತಿತ್ವದ ನಂತರ ಜಾರ್ವಿಕ್ ರಾಜಪ್ರಭುತ್ವ ಅಂತ್ಯಗೊಂಡಿತು. ವೆಸೆಕ್ಸ್ ರಾಜಪ್ರಭುತ್ವ ಈಗ ಉಚ್ಚ ಹಂತದಲ್ಲಿತ್ತು ಮತ್ತು ಉತ್ತರದಲ್ಲಿ ಅದರ ಪ್ರಾಬಲ್ಯವನ್ನು ಸ್ಥಾಪಿಸಿ, ನಾರ್ಥಂಬ್ರಿಯದಲ್ಲಿ ಪುನಃ ಯಾರ್ಕ್‌ಷೈರ್‌ನ್ನು ಉಳಿಸಿತು. ಇದು ಪ್ರತ್ಯೇಕ ರಾಜಪ್ರಭುತ್ವಕ್ಕೆ ಬದಲಾಗಿ ಬಹುತೇಕ ಸ್ವತಂತ್ರ ಅರ್ಲ್ ಆಧಿಪತ್ಯವಾಗಿ ಕೆಲವು ಪ್ರಮಾಣದ ಸ್ವಾಯತ್ತೆಯನ್ನು ಉಳಿಸಿಕೊಂಡಿತು. ವೆಸೆಕ್ಸ್ ಇಂಗ್ಲೆಂಡ್ ರಾಜರು ಯಾರ್ಕ್‌ಷೈರ್ ನಾರ್ಸ್ ಸಂಪ್ರದಾಯಗಳನ್ನು ಗೌರವಿಸಿದ ಖ್ಯಾತಿ ಪಡೆದರು ಮತ್ತು ಕಾನೂನು ನಿರ್ವಹಣೆಯನ್ನು ಸ್ಥಳೀಯ ಶ್ರೀಮಂತ ವರ್ಗದ ಕೈಯಲ್ಲಿ ಉಳಿಸಿದರು.[೩೧]

ನಾರ್ಮನ್ ವಿಜಯ

ಯಾರ್ಕ್ ಮಿನ್‌ಸ್ಟರ್, ಪಶ್ಚಿಮದ ಎತ್ತರಿಸಿಕೆ

ಕ್ರಿ.ಶ.೧೦೬೬ರಲ್ಲಿ ಬ್ಯಾಟಲ್ ಆಫ್ ಹೇಸ್ಟಿಂಗ್ಸ್‌ಗೆ ದಾರಿ ಕಲ್ಪಿಸಿದ ತಕ್ಷಣದ ವಾರಗಳಲ್ಲಿ, ಇಂಗ್ಲೆಂಡ್‌ನ ಹೆರಾಲ್ಡ್ II ಯಾರ್ಕ್‌ಷೈರ್ ಘಟನೆಗಳಿಂದ ದುಗುಡಗೊಂಡರು. ಅವರ ಸೋದರ ಟಾಸ್ಟಿಗ್ ಮತ್ತು ನಾರ್ವೆ ರಾಜ ಹೆರಾಲ್ಡ್ ಹಾರ್ಡ್‌ರಾಡಾ ಫಲ್ಫೋರ್ಡ್ ಕದನದಲ್ಲಿ ವಿಜಯ ಗಳಿಸಿ ಉತ್ತರದಲ್ಲಿ ಯಾರ್ಕ್‌ಷೈರ್ ಸ್ವಾಧೀನಕ್ಕೆ ಯತ್ನಿಸಿದರು. ಇಂಗ್ಲೆಂಡ್ ರಾಜ ಉತ್ತರಕ್ಕೆ ದಂಡಯಾತ್ರೆ ಹೊರಟ ಮತ್ತು ಬ್ಯಾಟಲ್ ಆಫ್ ಸ್ಟಾಮ್‌ಪೋರ್ಡ್ ಬ್ರಿಜ್‌ನಲ್ಲಿ ಎರಡು ಸೇನೆಗಳು ಸಂಧಿಸಿದವು. ಟೋಸ್ಟಿಗ್ ಮತ್ತು ಹಾರ್ಡ್‌ರಾಡಾ ಇಬ್ಬರನ್ನೂ ಹತ್ಯೆ ಮಾಡಲಾಯಿತು ಮತ್ತು ಅವರ ಸೇನೆಯು ನಿರ್ಣಾಯಕವಾಗಿ ಸೋಲಪ್ಪಿತು. ಆದಾಗ್ಯೂ, ಹೆರಾಲ್ಡ್ ಗಾಡ್‌ವಿನ್ಸನ್ ವಿಲಿಯಂ ದಿ ಕನ್ಕ್ವೈರರ್ ಬೀಡುಬಿಟ್ಟಿರುವ ದಕ್ಷಿಣಕ್ಕೆ ತನ್ನ ಸೇನೆಯನ್ನು ತಕ್ಷಣವೇ ಪುನಃ ತರಬೇಕಾಯಿತು. ಹೇಸ್ಟಿಂಗ್ಸ್‌ನಲ್ಲಿ ರಾಜನು ಸೋಲಪ್ಪಿದ ಮತ್ತು ಇದು ಇಂಗ್ಲೆಂಡ್ ಮೇಲೆ ನಾರ್ಮನ್ ಜಯಕ್ಕೆ ದಾರಿಕಲ್ಪಿಸಿತು.

12ನೇ ಶತಮಾನದ ಸಿಸ್ಟರ್‌ಸಿಯಾನ್ ಅಬ್ಬೆ (ಫೌಂಟನ್ಸ್ ಅಬ್ಬೆ, ಸ್ಟಡ್ಲಿ ರಾಯಲ್ ಪಾರ್ಕ್).

ಉತ್ತರದ ಜನರು ಕ್ರಿ.ಶ.೧೦೬೯ರ ಸೆಪ್ಟೆಂಬರ್‌ನಲ್ಲಿ ಡೆನ್ಮಾರ್ಕ್‌ನ ಸ್ವೇನ್ II ನನ್ನು ಸೇರಿಸಿಕೊಂಡು ನಾರ್ಮನ್ಸ್ ವಿರುದ್ಧ ಬಂಡಾಯವೆದ್ದರು. ಅವರ ಯಾರ್ಕ್ ವಾಪಸು ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ನಾರ್ಮನ್ನರು ಅದನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುವ ಮುಂಚೆಯೇ ನಾರ್ಮನ್ನರು ಅದನ್ನು ಸುಟ್ಟುಹಾಕಿದರು.[೩೨] ನಂತರದ ಘಟನೆಯು ವಿಲಿಯಂ ಆದೇಶಿಸಿದ ಹ್ಯಾರಿಯಿಂಗ್ ಆಫ್ ದಿ ನಾರ್ತ್ ಆಗಿತ್ತು. ಯಾರ್ಕ್‌ನಿಂದ ಡರ್‌ಹ್ಯಾಂವರೆಗೆ ಬೆಳೆಗಳು, ಸಾಕುಪ್ರಾಣಿಗಳು ಮತ್ತು ಕೃಷಿ ಸಾಮಗ್ರಿಗಳನ್ನು ನಾಶಮಾಡಲಾಯಿತು. ಪಟ್ಟಣಗಳ ನಡುವೆ ಅನೇಕ ಗ್ರಾಮಗಳನ್ನು ಸುಡಲಾಯಿತು ಮತ್ತು ಸ್ಥಳೀಯ ಉತ್ತರವಾಸಿಗಳನ್ನು ಮನಬಂದಂತೆ ಹತ್ಯೆಮಾಡಲಾಯಿತು.[೩೩] ನಂತರದ ಚಳಿಗಾಲದಲ್ಲಿ, ಕುಟುಂಬಗಳು ಹಸಿವಿನಿಂದ ಸತ್ತವು ಮತ್ತು ಚಳಿ ಮತ್ತು ಹಸಿವಿನಿಂದಾಗಿ ಸಾವಿರಾರು ರೈತರು ಸಾವಪ್ಪಿದರು. ಉತ್ತರದಿಂದ ೧೦೦,೦೦೦ಕ್ಕಿಂತ ಹೆಚ್ಚು ಜನರು ಹಸಿವಿನಿಂದ ಸತ್ತಿದ್ದಾರೆಂದು ಆರ್ಡರಿಕ್ ವಿಟಾಲಿಸ್ ಅಂದಾಜು ಮಾಡಿದ್ದಾರೆ.[೩೪]

ನಂತರದ ಶತಮಾನಗಳಲ್ಲಿ ಅನೇಕ ಅಬ್ಬೆ ಮತ್ತು ಪ್ರಯರಿಗಳನ್ನು ಯಾರ್ಕ್‌ಷೈರ್‌ನಲ್ಲಿ ನಿರ್ಮಿಸಲಾಯಿತು. ನಾರ್ಮನ್ ಭೂಮಾಲೀಕರು ಅವರ ಆದಾಯಗಳನ್ನು ಹೆಚ್ಚಿಸಲು ಆಸಕ್ತರಾಗಿದ್ದರು ಮತ್ತು ಬಾರ್ನ್ಸ್‌ಲೇ, ಡಾನ್‌ಕಾಸ್ಟರ್, ಹಲ್,ಲೀಡ್ಸ್, ಸ್ಕಾರ್‌ಬರೊ, ಶೆಫೀಲ್ಡ್ ಮತ್ತಿತರ ಹೊಸ ಪಟ್ಟಣಗಳನ್ನು ಸ್ಥಾಪಿಸಿದರು. ವಿಜಯಕ್ಕೆ ಮುಂಚೆ ಸ್ಥಾಪಿಸಿದ ಪಟ್ಟಣಗಳಲ್ಲಿ, ಬ್ರಿಡ್ಲಿಂಗ್‌ಟನ್, ಪಾಕ್ಲಿಂಗ್‌ಟನ್ ಮತ್ತು ಯಾರ್ಕ್ ಪ್ರಮುಖ ಮಟ್ಟದಲ್ಲಿ ಮುಂದುವರಿಯಿತು.[೩೫] ೧೩೧೫ ಮತ್ತು ೧೩೨೨ರ ವರ್ಷಗಳಲ್ಲಿ ಮಹಾ ಬರಗಾಲಕ್ಕೆ ತುತ್ತಾಗುವ ಮುನ್ನ, ಯಾರ್ಕ್‌ಷೈರ್ ಜನಸಂಖ್ಯೆಯು ವೃದ್ಧಿಯಾಯಿತು.[೩೫]

೧೨ನೇ ಶತಮಾನದ ಪೂರ್ವದಲ್ಲಿ, ಯಾರ್ಕ್‌ಷೈರ್ ಜನರು ಸ್ಕಾಟರ ಜತೆ ನಾರ್ತಲರ್‌ಟನ್‌ನಲ್ಲಿ ಬ್ಯಾಟಲ್ ಆಫ್ ದಿ ಸ್ಟಾಂಡರ್ಡ್‌ನೊಂದಿಗೆ ಹೋರಾಡಬೇಕಾಯಿತು. ಥರ್‌ಸ್ಟಾನ್ ಆಫ್ ಯಾರ್ಕ್ ಆರ್ಕ್‌ಬಿಷಪ್ ನೇತೃತ್ವದಲ್ಲಿ ಇಂಗ್ಲೆಂಡ್ ಪ್ರಭುತ್ವವನ್ನು ಪ್ರತಿನಿಧಿಸಿದ ಯಾರ್ಕ್‌ಷೈರ್ ಸೈನಿಕರು ಹೆಚ್ಚು ಅಸಂಖ್ಯಾತರಾಗಿದ್ದ ಸ್ಕಾಟರನ್ನು ಸೋಲಿಸಿದರು.[೩೬]

ಬ್ಲ್ಯಾಕ್ ಡೆತ್(ಪ್ಲೇಗ್) ೧೩೪೯ರಲ್ಲಿ ಯಾರ್ಕ್‌ಷೈರ್ ತಲುಪಿತು ಮತ್ತು ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗವನ್ನು ಬಲಿತೆಗೆದುಕೊಂಡಿತು.[೩೫]

ವಾರ್ಸ್‌ ಆಫ್‌ ದಿ ರೋಸಸ್

ಯಾರ್ಕಿಸ್ಟ್ ರಾಜ ರಿಚರ್ಡ್ III ಮಿಡ್ಲ್‌ಹ್ಯಾಂ‌ನಲ್ಲಿ ಬೆಳೆದರು.[೩೭]

ರಾಜ ರಿಚರ್ಡ್ II ೧೩೯೯ರಲ್ಲಿ ಪದಚ್ಯುತರಾದಾಗ, ರಾಜಮನೆತನದ ಹೌಸ್ ಆಫ್ ಪ್ಲಂಟಾಜೆನೆಟ್‌ನ ಎರಡು ಶಾಖೆಗಳಾದ ಹೌಸ್ ಆಫ್ ಯಾರ್ಕ್ ಮತ್ತು ಹೌಸ್ ಆಫ್ ಲಂಕಾಸ್ಟರ್ ನಡುವೆ ವಿರೋಧ ಹೊಮ್ಮಲಾರಂಭಿಸಿತು. ಅಂತರ್ಯುದ್ಧಗಳ ಸರಣಿಯಲ್ಲಿ ಎರಡು ಹೌಸ್‌ಗಳು ಇಂಗ್ಲೆಂಡ್ ಸಿಂಹಾಸನಕ್ಕಾಗಿ ಹೋರಾಡಿದವು. ಇದನ್ನು ಸಾಮಾನ್ಯವಾಗಿ ವಾರ್ಸ್ ಆಫ್ ರೋಸಸ್ ಎನ್ನಲಾಗುತ್ತದೆ. ಯಾರ್ಕ್‌ಷೈರ್‌ನಲ್ಲಿ ಕೆಲವು ಯುದ್ಧಗಳು ನಡೆದವು. ಉದಾಹರಣೆಗೆ ವೇಕ್‌ಫೀಲ್ಡ್ ಮತ್ತು ಟೌಟನ್. ಕೊನೆಯದನ್ನು ಇಂಗ್ಲೀಷ್ ನೆಲದಲ್ಲಿ ಹೋರಾಡಿದ ರಕ್ತಮಯ ಕದನವೆಂದು ಹೆಸರಾಗಿದೆ.[೩೮]ರಿಚರ್ಡ್ III ಕೊನೆಯ ಯಾರ್ಕಿಸ್ಟ್ ರಾಜನಾಗಿದ್ದ.

ಹೌಸ್ ಆಫ್ ಲಂಕಾಸ್ಟರ್‌ನ ಹೆನ್ರಿ ಟ್ಯುಡರ್ ಬಾಸ್ವರ್ಥ್ ಫೀಲ್ಡ್ ಯುದ್ಧದಲ್ಲಿ ರಿಚರ್ಡ್‌ನನ್ನು ಸೋಲಿಸಿ ಹತ್ಯೆಮಾಡಿದ. ಅವನು ನಂತರ ರಾಜ ಹೆನ್ರಿ VII ಎಂದು ಹೆಸರು ಪಡೆದ ಮತ್ತು ಯಾರ್ಕಿಸ್ಟ್ ಎಡ್ವರ್ಡ್ IV ನ ಪುತ್ರಿ ಎಲಿಜಬೆತ್ ಆಫ್ ಯಾರ್ಕ್‌‌ಳನ್ನು ಮದುವೆಯಾಗಿ ಯುದ್ಧಗಳು ಅಂತ್ಯಗೊಂಡವು.[೩೯] ಬಿಳಿಯ ಮತ್ತು ಕೆಂಪು ಬಣ್ಣದ ಎರಡು ಗುಲಾಬಿಗಳು, ಕ್ರಮವಾಗಿ ಯಾರ್ಕ್ ಮತ್ತು ಲಂಕಾಸ್ಟರ್ ಹೌಸ್‌ಗಳ ಲಾಂಛನಗಳಾಗಿದ್ದು, ಜತೆ ಸೇರಿ ಇಂಗ್ಲೆಂಡ್‌‌ನ ಟ್ಯೂಡರ್ ರೋಸ್ ರಚನೆಯಾಯಿತು.[a][೪೦]ಯಾರ್ಕ್ ಮತ್ತು ಲಂಕಾಸ್ಟರ್ ರಾಯಲ್ ಹೌಸ್‌ಗಳ ನಡುವೆ ವೈರತ್ವವು ಯಾರ್ಕ್‌ಷೈರ್ ಮತ್ತು ಲಂಕಾಷೈರ್ ಕೌಂಟಿಗಳ ನಡುವೆ ವೈರತ್ವವಾಗಿ ಜನಪ್ರಿಯ ಸಂಸ್ಕೃತಿಗೆ ವರ್ಗಾವಣೆಯಾಯಿತು. ಇದು ನಿರ್ದಿಷ್ಟವಾಗಿ ಕ್ರೀಡೆಯಲ್ಲಿ ಬಿಂಬಿತವಾಯಿತು. ಉದಾಹರಣೆಗೆ, ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ ರೋಸಸ್ ಪಂದ್ಯ ಅಥವಾ ಯಾರ್ಕ್ ಮತ್ತು ಲಂಕಾಸ್ಟರ್ ವಿಶ್ವವಿದ್ಯಾನಿಲಯಗಳ ನಡುವೆ ರೋಸಸ್ ಪಂದ್ಯಾವಳಿಯಲ್ಲಿ ಬಿಂಬಿತವಾಯಿತು.

ಸಂತರು, ಅಂತರ್ಯುದ್ಧ ಮತ್ತು ಜವಳಿ ಕೈಗಾರಿಕೆ

ಕೈಗಾರಿಕೆ ಕ್ರಾಂತಿಯು ಕೈಗಾರೀಕೃತ ಯಾರ್ಕ್‌ಷೈರ್‌ನಲ್ಲಿ ಕೊಳೆಗೇರಿಗಳ ನಿರ್ಮಾಣಕ್ಕೆ ದಾರಿಕಲ್ಪಿಸಿತು. ಉದಾ ವೆದರ್‌ಬಿಯಲ್ಲಿರುವ ನಿರ್ಮಾಣಗಳು.

ಹಳೆಯ ಮಾರುಕಟ್ಟೆ ಪಟ್ಟಣಗಳಲ್ಲಿ ಕೇಂದ್ರೀಕೃತವಾಗಿದ್ದ ಮುಂಚಿನ ಗೃಹಕೈಗಾರಿಕೆಯಾಗಿದ್ದ ಉಣ್ಣೆ ಜವಳಿ ಕೈಗಾರಿಕೆಯು ವೆಸ್ಟ್ ರೈಡಿಂಗ್‌ಗೆ ಸ್ಥಳಾಂತರವಾಯಿತು. ಅಲ್ಲಿ ಉದಯೋನ್ಮುಖ ಉದ್ಯಮಿಗಳು ಗಿರಣಿಗಳನ್ನು ಸ್ಥಾಪಿಸಿ, ಪೆನ್ನಿನೆಸ್‍‌ನಿಂದ ಹರಿಯುತ್ತಿದ್ದ ನದಿಗಳು ಮತ್ತು ತೊರೆಗಳನ್ನು ಚಾಲಕಶಕ್ತಿಯಾಗಿ ಬಳಸಿಕೊಂಡು ಅದರಿಂದ ಲಭ್ಯವಾದ ನೀರಿನ ಶಕ್ತಿಯ ಅನುಕೂಲವನ್ನು ಪಡೆದರು. ಸಾಮಾನ್ಯವಾಗಿ ಅಭಿವೃದ್ಧಿಯಾಗುತ್ತಿರುವ ಜವಳಿ ಕೈಗಾರಿಕೆಯು ವೇಕ್‌ಫೀಲ್ಡ್ ಮತ್ತು ಹ್ಯಾಲಿಫ್ಯಾಕ್ಸ್ ಬೆಳವಣಿಗೆಗೆ ನೆರವಾಯಿತು.[೪೧]

ಇಂಗ್ಲೀಷ್ ರಿಫಾರ್ಮೇಷನ್ ಹೆನ್ರಿ VIIIಆಳ್ವಿಕೆಯಲ್ಲಿ ಆರಂಭವಾಯಿತು ಮತ್ತು ೧೫೩೬ರಲ್ಲಿ ಕ್ರೈಸ್ತ ಸನ್ಯಾಸಿಗಳ ನಿವಾಸಗಳ ವಿಸರ್ಜನೆಯಿಂದ ಪ್ರತಿಭಟನಾರ್ಥವಾಗಿ ಯಾರ್ಕ್‌ಷೈರ್‌ನಲ್ಲಿ ಪಿಲಿಗ್ರಿಮೇಜ್ ಆಫ್ ಗ್ರೇಸ್ ಎಂದು ಹೆಸರಾದ ಜನಪ್ರಿಯ ದಂಗೆಗೆ ದಾರಿಕಲ್ಪಿಸಿತು. ಯಾರ್ಕ್‌ಷೈರ್‌ನ ಕೆಲವು ಕ್ಯಾಥೋಲಿಕ್ಕರ ತಂಡ ತಮ್ಮ ಧರ್ಮಾಚರಣೆಯನ್ನು ಮುಂದುವರಿಸಿದರು.ಅವರಲ್ಲಿ ಸಿಕ್ಕಿಬಿದ್ದವರನ್ನು ಎಲಿಜಬೆತ್ I ಆಳ್ವಿಕೆಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.ಅವರಲ್ಲಿ ಒಬ್ಬರು ಯಾರ್ಕ್ ಮಹಿಳೆ ಮಾರ್ಗರೇಟ್ ಕ್ಲಿಥೇರೊ ಆಗಿದ್ದು,ನಂತರ ಸಂತರೆಂದು ಘೋಷಿಸಲಾಯಿತು.[೪೨]

೧೬೪೪ರ ಮಾರ್ಸ್‌ಟನ್ ಮೂರ್ ಯುದ್ಧ

೧೬೪೨ರಲ್ಲಿ ರಾಜ ಮತ್ತು ಸಂಸತ್ತಿನ ನಡುವೆ ಆರಂಭವಾದ ಇಂಗ್ಲೀಷ್ ಅಂತರ್ಯುದ್ಧದ ಸಂದರ್ಭದಲ್ಲಿ, ಯಾರ್ಕ್‌ಷೈರ್ ಒಡೆದ ನಿಷ್ಠೆಗಳನ್ನು ಹೊಂದಿತ್ತು. ಹೋರಾಟ ಆರಂಭಕ್ಕೆ ಕೆಲವು ತಿಂಗಳ ಮುನ್ನ ರಾಜನು ಹಲ್ ನಗರಕ್ಕೆ ಆಗಮಿಸಿದಾಗ ಹಲ್ ನಗರವು ನಗರದ ಬಾಗಿಲನ್ನು ರಾಜನಿಗೆ ಮುಚ್ಚಿತು. ಆದರೆ ವಿಶೇಷವಾಗಿ ನಾರ್ತ್ ರೈಡಿಂಗ್ ಆಫ್ ಯಾರ್ಕ್‌ಷೈರ್ ಪ್ರಬಲವಾದ ರಾಜಪ್ರಭುತ್ವವಾದಿ ಆಗಿತ್ತು.[೪೩][೪೪] ರಾಜಪ್ರಭುತ್ವವಾದಿಗಳಿಗೆ ಯಾರ್ಕ್ ನೆಲೆಯಾಗಿತ್ತು. ಅಲ್ಲಿಂದ ಅವರು ಲೀಡ್ಸ್ ಮತ್ತು ವೇಕ್‌ಫೀಲ್ಡ್‌ನ್ನು ವಶಕ್ಕೆ ತೆಗೆದುಕೊಂಡರು. ಕೆಲವು ತಿಂಗಳ ನಂತರ ಅದನ್ನು ಮರುವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು. ರಾಜಪ್ರಭುತ್ವವಾದಿಗಳು ಬ್ಯಾಟಲ್ ಆಫ್ ಅಡ್ವಾಲ್ಟನ್ ಮೂರ್‌ನಲ್ಲಿ ಜಯಗಳಿಸಿದರು. ಅದರ ಅರ್ಥವೇನೆಂದರೆ ಅವರು ಯಾರ್ಕ್‌ಷೈರ್ ನಿಯಂತ್ರಿಸಿದರು(ಹಲ್ ಹೊರತುಪಡಿಸಿ). ಹಲ್‌ನಲ್ಲಿರುವ ಅವರ ನೆಲೆಯಿಂದ ಸಂಸದೀಯರು("ರೌಂಡ್‌‍ಹೆಡ್ಸ್")ಮರುಹೋರಾಟ ನಡೆಸಿ, ಯಾರ್ಕ್‌ಷೈರ್‌ನ ಒಂದೊಂದೇ ಪಟ್ಟಣವನ್ನು ಮರುವಶಕ್ಕೆ ತೆಗೆದುಕೊಂಡು, ಮಾರ್ಸ್‌ಟನ್ ಮೂರ್ ಯುದ್ಧದಲ್ಲಿ ಜಯಗಳಿಸಿದರು. ಇದರ ಜತೆಗೆ ಇಡೀ ನಾರ್ತ್ ಆಫ್ ಇಂಗ್ಲೆಂಡ್ ಮೇಲೆ ನಿಯಂತ್ರಣ ಸಾಧಿಸಿದರು.[೪೫]

೧೬ ಮತ್ತು ೧೭ನೇ ಶತಮಾನಗಳಲ್ಲಿ ಲೀಡ್ಸ್ ಮತ್ತು ಇತರೆ ಉಣ್ಣೆ ಕೈಗಾರಿಕೆ ಕೇಂದ್ರಿತ ಪಟ್ಟಣಗಳು ಹಡರ್ಸ್‌ಫೀಲ್ಡ್, ಹಲ್ ಮತ್ತು ಶೆಫೀಲ್ಡ್ ಜತೆ ಬೆಳೆಯಲಾರಂಭಿದವು ಮತ್ತು ವೆಸ್ಟ್ ರೈಡಿಂಗ್ ಆಫ್ ಯಾರ್ಕ್‌ಷೈರ್‌ನಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮೊದಲಿಗೆ ಪ್ರಾಮುಖ್ಯತೆ ಗಳಿಸಿತು.[೪೬] ಕಾಲುವೆಗಳು ಮತ್ತು ಸುಂಕದ ಕಟ್ಟೆ ರಸ್ತೆಗಳನ್ನು ೧೮ನೇ ಶತಮಾನದಲ್ಲಿ ಪರಿಚಯಿಸಲಾಯಿತು. ನಂತರ ಶತಮಾನದಲ್ಲಿ ಖನಿಜ ನೀರಿನಲ್ಲಿ ಗುಣಪಡಿಸುವ ಲಕ್ಷಣಗಳಿವೆ ಎಂದು ಜನರು ನಂಬಿದ್ದರಿಂದ ಹ್ಯಾರೋಗೇಟ್ ಮತ್ತು ಸ್ಕಾರ್‌ಬರೊ‌ನ ಸ್ನಾನದ ಸ್ಥಳದ ಪಟ್ಟಣಗಳು ಕೂಡ ಅಭಿವೃದ್ಧಿಯಾದವು.[೪೭]

ಇಂದಿನ ಯಾರ್ಕ್‌ಷೈರ್

ಲಿಸ್ಟರ್'ಸ್ ಮಿಲ್, ಮ್ಯಾನ್ನಿಂಗ್‌ಹ್ಯಾಂ, ಬ್ರಾಡ್‌ಫೋರ್ಡ್.
ಸಾಲ್ಟೇರ್‌ನ ಟಿಟುಸ್ ಸಾಲ್ಟ್'ಸ್ ಗಿರಣಿ. ಬ್ರಾಡ್‌ಪೋರ್ಡ್ UNESCO ವಿಶ್ವ ಪರಂಪರೆಯ ಸ್ಥಳ.

೧೯ನೇ ಶತಮಾನದಲ್ಲಿ ಯಾರ್ಕ್‌ಷೈರ್ ನಿರಂತರ ಬೆಳವಣಿಗೆಯನ್ನು ಕಂಡಿತು. ಜನಸಂಖ್ಯೆ ಬೆಳೆಯುವುದರೊಂದಿಗೆ, ಕಲ್ಲಿದ್ದಲು, ಜವಳಿ ಮತ್ತು ಉಕ್ಕು(ವಿಶೇಷವಾಗಿ ಶೆಫೀಲ್ಡ್‌ನಲ್ಲಿ)ಮುಂತಾದ ಪ್ರಮುಖ ಕೈಗಾರಿಕೆಗಳೊಂದಿಗೆ ಕೈಗಾರಿಕಾ ಕ್ರಾಂತಿ ಮುಂದುವರಿಯಿತು. ಆದಾಗ್ಯೂ, ಕೈಗಾರಿಕೆ ವೃದ್ಧಿಯ ನಡುವೆ, ಕಿಕ್ಕಿರಿದ ಜನರಿಂದ ಕೈಗಾರಿಕೆ ಪಟ್ಟಣಗಳಲ್ಲಿ ಜೀವನ ಪರಿಸ್ಥಿತಿಗಳು ಕುಸಿದವು. ಇದರಿಂದ ೧೮೩೨ ಮತ್ತು ೧೮೪೮ರಲ್ಲಿ ಕಾಲರಾದ ಅವಧಿಗಳನ್ನು ಕಂಡಿತು.[೪೮] ಅದೃಷ್ಟವಶಾತ್ ಕೌಂಟಿಗೆ ಶತಮಾನದ ಕೊನೆಯಲ್ಲಿ ಆಧುನಿಕ ಚರಂಡಿಗಳು ಮತ್ತು ನೀರಿನ ಪೂರೈಕೆ‌ಗಳನ್ನು ಆರಂಭಿಸುವ ಮೂಲಕ ಮುನ್ನಡೆಗಳನ್ನು ಸಾಧಿಸಲಾಯಿತು. ಅನೇಕ ಯಾರ್ಕ್‌ಷೈರ್ ರೈಲ್ವೆ ಜಾಲಗಳನ್ನು ಪ್ರಾರಂಭಿಸಲಾಯಿತು. ರೈಲ್ವೆಗಳು ದೇಶಾದ್ಯಂತ ವಿಸ್ತರಣೆಯಾಗಿ ದೂರದ ಪ್ರದೇಶಗಳಿಗೂ ತಲುಪಿತು.[೪೯] ಮೂರು ರೈಡಿಂಗ್‌ಗಳಿಗಾಗಿ(ವಿಭಾಗಗಳಿಗಾಗಿ)ಕೌಂಟಿ ಕೌನ್ಸಿಲ್‌ಗಳನ್ನು ಸೃಷ್ಟಿಸಲಾಯಿತು. ಆದರೆ ಅವರ ನಿಯಂತ್ರಣದ ಪ್ರದೇಶವು ದೊಡ್ಡ ಪಟ್ಟಣಗಳನ್ನು ಒಳಗೊಂಡಿರಲಿಲ್ಲ. ಅವು ಕೌಂಟಿ ಬರೋಗಳಾದವು ಮತ್ತು ಬೆಳೆಯುವ ಜನಸಂಖ್ಯೆಯ ದೊಡ್ಡ ಭಾಗ ಅವುಗಳಲ್ಲಿ ಒಳಗೊಂಡಿತ್ತು.[೫೦]

ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಯಾರ್ಕ್‌ಷೈರ್ RAF ಬಾಂಬರ್ ಕಮಾಂಡ್‌ಗೆ ಮುಖ್ಯ ನೆಲೆಯಾಯಿತು ಮತ್ತು ಕೌಂಟಿಯನ್ನು ಯುದ್ಧದ ಪ್ರಮುಖ ಸ್ಥಾನಕ್ಕೆ ತಂದು ನಿಲ್ಲಿಸಿತು.[೫೧] ೧೯೭೦ರ ದಶಕದಲ್ಲಿ ಪ್ರಮುಖ ಸ್ಥಳೀಯ ಸರ್ಕಾರದ ಸುಧಾರಣೆಗಳು ಯುನೈಟೆಡ್ ಕಿಂಗ್ಡಮ್ಶ್ರಬ್ರಿಟನ್)‌ನಾದ್ಯಂತ ನಡೆಯಿತು. ಕೆಲವು ಬದಲಾವಣೆಗಳು ಜನಪ್ರಿಯವಾಗಿರಲಿಲ್ಲ[೫೨] ಮತ್ತು ವಿವಾದಾತ್ಮಕವಾಗಿ ಯಾರ್ಕ್‌ಷೈರ್ ಮತ್ತು ಅದರ ವಿಭಾಗಗಳು[೫೩] ಸ್ಥಳೀಯ ಸರ್ಕಾರದ ಕಾಯ್ದೆ ೧೯೭೨ರ ಭಾಗವಾಗಿ ೧೯೭೪ರಲ್ಲಿ ಸ್ಥಾನಮಾನವನ್ನು ಕಳೆದುಕೊಂಡಿತು.[೫೪] ಹಂಬರ್‌ಸೈಡ್ ರದ್ದುಮಾಡುವುದರೊಂದಿಗೆ ೧೯೯೬ರಲ್ಲಿ ತಗ್ಗಿದ ಗಡಿಗಳೊಂದಿಗೆ ಈಸ್ಟ್ ರೈಡಿಂಗ್‌ನ್ನು ಸಕ್ರಿಯಗೊಳಿಸಲಾಯಿತು. ಸ್ವಲ್ಪ ಭಿನ್ನ ಗಡಿಗಳೊಂದಿಗೆ, ಸರ್ಕಾರಿ ಕಚೇರಿ ಅಸ್ತಿತ್ವವು ಪ್ರಸಕ್ತ ಯಾರ್ಕ್‌ಷೈರ್ ಬಹುತೇಕ ಪ್ರದೇಶವನ್ನು ಹೊಂದಿದ್ದು, ಇಂಗ್ಲೆಂಡ್‌ನ ಯಾರ್ಕ್‌ಷೈರ್ ಮತ್ತು ಹಂಬರ್ ಪ್ರದೇಶವಾಗಿದೆ.[೫೩] ಈ ಪ್ರದೇಶವು ಲಿಂಕನ್‌ಷೈರ್ ಉತ್ತರ ಭಾಗವನ್ನು ಒಳಗೊಂಡಿದೆ. ಆದರೆ ಸ್ಯಾಡಲ್‌ವರ್ತ್(ಈಗ ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿದೆ), ಬೌಲ್ಯಾಂಡ್ ಅರಣ್ಯ(ಲಂಕಾಷೈರ್), ಸೆಡ್‌ಬರ್ಗ್ ಮತ್ತು ಡೆಂಟ್‌(ಕಂಬ್ರಿಯ), ಅಪ್ಪರ್ ಟೀಸ್‌ಡೇಲ್(ಕೌಂಟಿ ಡರ್ಹಾಮ್) ಮತ್ತು ಮಿಡಲ್ಸ್‌ಬರೊ ಮತ್ತು ರೆಡ್‌ಕಾರ್ ಹಾಗೂ ಕ್ಲೀವ್‌ಲ್ಯಾಂಡ್‌ ಈ ಪ್ರದೇಶದಿಂದ ಹೊರತಾಗಿದೆ.[೫೨]

ಭೌಗೋಳಿಕತೆ

ನೈಸರ್ಗಿಕ ಮತ್ತು ಬೌಗೋಳಿಕ

ಮುಖ್ಯ ಲೇಖನಗಳು: ಯಾರ್ಕ್‌ಷೈರ್ ಬೌಗೋಳಿಕತೆ ಮತ್ತು ಯಾರ್ಕ್‌ಷೈರ್‌ನಲ್ಲಿ ಸ್ಥಳಗಳ ಪಟ್ಟಿ‌
ಯಾರ್ಕ್‌ಷೈರ್ ಬೌಗೋಳಿಕತೆ

ಐತಿಹಾಸಿಕವಾಗಿ, ಯಾರ್ಕ್‌ಷೈರ್ ಉತ್ತರ ಗಡಿಯಲ್ಲಿ ಟೀಸ್ ನದಿ, ಪೂರ್ವ ಗಡಿಯಲ್ಲಿ ನಾರ್ತ್ ಸೀ ತೀರ ಮತ್ತು ದಕ್ಷಿಣ ಗಡಿಯಲ್ಲಿ ಹಂಬರ್ ಎಸ್ಟುಯರಿ ಮತ್ತು ಡಾನ್ ನದಿ ಹಾಗು ಶೀಫ್ ನದಿಗಳಿವೆ. ಪಶ್ಚಿಮ ಗಡಿಯು ಪೆನ್ನೈನ್ ಬೆಟ್ಟಗಳ ಪಶ್ಚಿಮ ಇಳಿಜಾರುಗಳಲ್ಲಿ ಸುತ್ತಿಬಳಸಿ ಸಾಗಿ ಪುನಃ ಟೀಸ್ ನದಿಯನ್ನು ಸಂಧಿಸುತ್ತದೆ.[೫೫] ಕೌಂಟಿ ಡರ್ಹಾಮ್, ಲಿಂಕನ್‌ಷೈರ್, ನಾಟಿಂಗ್‌‌ಹ್ಯಾಮ್ ಷೈರ್, ಡರ್ಬಿಷೈರ್, ಚೆಷೈರ್, ಲಂಕಾಷೈರ್ ಮತ್ತು ವೆಸ್ಟ್‌ಮಾರ್ಲ್ಯಾಂಡ್ರೂಪದಲ್ಲಿ ಅನೇಕ ಇತರೆ ಐತಿಹಾಸಿಕ ಕೌಂಟಿಗಳು ಇದರ ಗಡಿಯಲ್ಲಿವೆ.[೫೬] ಯಾರ್ಕ್‌ಷೈರ್‌ನಲ್ಲಿ ಪ್ರಮುಖ ಸ್ಥಳಾಕೃತಿ ವಿವರಣೆ ಪ್ರದೇಶಗಳು ಮತ್ತು ಅವು ರಚನೆಯಾದ ಬೌಗೋಳಿಕ ಅವಧಿ ನಡುವೆ ಅತೀ ಸಮೀಪದ ಸಂಬಂಧವಿದೆ.[೫೫] ಪಶ್ಚಿಮದಲ್ಲಿ ಬೆಟ್ಟಗಳ ಪೆನ್ನಿ ಸರಣಿಯು ಕಾರ್ಬನಿಫೆರಲ್ ಮೂಲವಾಗಿದ್ದು, ಮಧ್ಯ ಕಣಿವೆ ಪರ್ಮೊ- ಟ್ರಿಯಾಸಿಕ್. ಕೌಂಟಿಯ ಈಶಾನ್ಯದಲ್ಲಿರುವ ನಾರ್ತ್ ಯಾರ್ಕ್ ಮೂರ್ಸ್ ಜುರಾಸಿಕ್ ಯುಗಕ್ಕೆ ಸೇರಿದ್ದು, ಆಗ್ನೇಯಕ್ಕಿರುವ ಯಾರ್ಕ್‌ಷೈರ್ ವಲ್ಡ್ಸ್ ಕ್ರಿಟೇಷಿಯ ಅವಧಿಯ ಸೀಮೆಸುಣ್ಣ ಪದರದ ಒಳಪ್ರದೇಶವನ್ನು ಹೊಂದಿದೆ.[೫೫]

ಯಾರ್ಕ್‌ಷೈರ್‌ನ ಮುಖ್ಯ ನದಿಗಳು

ಯಾರ್ಕ್‌ಷೈರ್ ಅನೇಕ ನದಿಗಳಿಂದ ನೀರು ನಿರ್ಗಮನ ಕಾಲುವೆ ವ್ಯವಸ್ಥೆ ಹೊಂದಿದೆ. ಪಶ್ಚಿಮ ಮತ್ತು ಕೇಂದ್ರ ಯಾರ್ಕ್‌ಷೈರ್‌ನಲ್ಲಿ ಅನೇಕ ನದಿಗಳು ಔಸ್ ನದಿಗೆ ತಮ್ಮ ನೀರನ್ನು ಬರಿದುಮಾಡುತ್ತವೆ. ಆ ನದಿಯು ಹಂಬರ್ ಅಳಿವೆ ಮೂಲಕ ನಾರ್ತ್ ಸೀಯನ್ನು ತಲುಪುತ್ತದೆ.[೫೭] ಔಸ್ ವ್ಯವಸ್ಥೆಯಲ್ಲಿ ಅತ್ಯಂತ ಉತ್ತರಕ್ಕಿರುವ ನದಿಗಳಲ್ಲಿ ಸ್ವೇಲ್ ನದಿಯು ರಿಚ್ಮಂಡ್ ಮೂಲಕ ಹಾದುಹೋಗುವ ಮುನ್ನ ಮೌಬ್ರೆ ಕಣಿವೆಯಲ್ಲಿ ಸುತ್ತುಬಳಸಿ ಸಾಗಿ ಸ್ವೇಲ್‌ಡೇಲ್‌ ಕಣಿವೆಯನ್ನು ಬರಿದುಮಾಡುತ್ತದೆ. ನಂತರ ವೆನ್ಸಲೆ‌ಡೇಲ್‌ನ್ನು ಬರಿದು ಮಾಡುವುದು ಯೂರ್ ನದಿಯಾಗಿದೆ. ಇದು ಬರೋಬ್ರಿಜ್ ಪೂರ್ವದಲ್ಲಿ ಸ್ವೇಲ್ ನದಿಯನ್ನು ಕೂಡುತ್ತದೆ. ನಿಡ್ ನದಿ ಯಾರ್ಕ್‌ಷೈರ್ ಡೇಲ್ಸ್ ರಾಷ್ಟ್ರೀಯ ಉದ್ಯಾನದ ತುದಿಯಲ್ಲಿ ಜನಿಸಿ ಯಾರ್ಕ್ ಕಣಿವೆಯನ್ನು ತಲುಪುವ ಮುನ್ನ ನಿಡ್ಡರ್‌ಡೇಲ್‌ನಲ್ಲಿ ಹರಿಯುತ್ತದೆ.[೫೭]

ಔಸ್ ಗಿಲ್ ಬೆಕ್‌ನಲ್ಲಿ ಯೂರ್ ಜತೆ ಸಂಗಮದ ನಂತರ ನದಿಗೆ ಔಸ್ ಎಂದು ಹೆಸರಿಡಲಾಯಿತು. ವಾರ್ಫ್‌ಡೇಲ್ ಬರಿದುಮಾಡುವ ವಾರ್ಫ್ ನದಿಯು ಕಾವುಡ್‌ನ ಔಸ್‌ನ ಪ್ರವಾಹಕ್ಕೆ ಎದುರಾಗಿ ಹರಿಯುವ ನೀರನ್ನು ಕೂಡುತ್ತದೆ.[೫೭] ನದಿಗಳಾದ ಏರ್ ಮತ್ತು ಕಾಲ್ಡರ್ ಔಸ್ ನದಿಗೆ ದಕ್ಷಿಣದ ಕೊಡುಗೆಗಳಾಗಿದ್ದು, ಅತ್ಯಂತ ದಕ್ಷಿಣದ ಯಾರ್ಕ್‌ಷೈರ್ ಉಪನದಿಯು ಡಾನ್ ನದಿಯಾಗಿದ್ದು, ಅದು ಉತ್ತರಕ್ಕೆ ಹರಿದು ಗೂಲ್‌ನಲ್ಲಿ ಮುಖ್ಯ ನದಿಯನ್ನು ಸೇರುತ್ತದೆ. ಕೌಂಟಿಯ ದೂರದ ಉತ್ತರದಲ್ಲಿ ಟೀಸ್ ನದಿ ಟೀಸ್‌ಡೇಲ್ ಮೂಲಕ ಪೂರ್ವಕ್ಕೆ ಹರಿದು ಮಿಡಲ್ಸ್‌ಬ್ರೋನ ನಾರ್ತ್ ಸೀ ಪ್ರವಾಹದ ದಿಕ್ಕಿನಲ್ಲಿ ತನ್ನ ನೀರನ್ನು ಬರಿದುಮಾಡುತ್ತದೆ. ಸಣ್ಣ ಎಸ್ಕ್ ನದಿಯು ಪಶ್ಚಿಮದಿಂದ ಪೂರ್ವಕ್ಕೆ ನಾರ್ತ್ ಯಾರ್ಕ್‌ ಮೂರ್ಸ್‌ನ ಉತ್ತರದ ಪಾದಕ್ಕೆ ಹರಿದು ಸಮುದ್ರವನ್ನು ವಿಟ್‌ಬೈನಲ್ಲಿ ಸೇರುತ್ತದೆ.[೫೭] ಡೆರ್ವೆಂಟ್ ನದಿಯು ನಾರ್ತ್ ಯಾರ್ಕ್ ಮೂರ್ಸ್‌ನಲ್ಲಿ ಹುಟ್ಟಿ ದಕ್ಷಿಣಕ್ಕೆ ನಂತರ ಉತ್ತರಾಭಿಮುಖವಾಗಿ ಪಿಕರಿಂಗ್ ಕಣಿವೆಯ ಮೂಲಕ ಹರಿದು ನಂತರ ದಕ್ಷಿಣಕ್ಕೆ ತಿರುಗಿ ಯಾರ್ಕ್ ಕಣಿವೆಯ ಪೂರ್ವ ಭಾಗವನ್ನು ಬರಿದುಮಾಡುತ್ತದೆ. ಬಾರ್ಮ್‌ಬಿ ಆನ್ ದಿ ಮಾರ್ಷ್‌ನಲ್ಲಿ ಔಸ್ ನದಿಗೆ ಅದು ಬರಿದಾಗುತ್ತದೆ.[೫೭] ಯಾರ್ಕ್‌ಷೈರ್ ವಲ್ಡ್ಸ್ ಪೂರ್ವದಲ್ಲಿ ಹಲ್ ನದಿಯು ದಕ್ಷಿಣಾಭಿಮುಖವಾಗಿ ಹರಿದು ಕಿಂಗ್‌ಸ್ಟನ್ ಅಪಾನ್ ಹಲ್‌ನಲ್ಲಿ ಹಂಬರ್ ಅಳಿವೆಯನ್ನು ಸೇರುತ್ತದೆ. ಪಶ್ಚಿಮ ಪೆನ್ನೈನ್ಸ್‌‌ಗೆ ರಿಬ್ಬಲ್ ನದಿ ಕೊಡುಗೆ ಸಲ್ಲಿಸುತ್ತದೆ. ಇದು ಪಶ್ಚಿಮಾಭಿಮುಖವಾಗಿ ಐರಿಷ್ ಸಮುದ್ರಕ್ಕೆ ಲಿಥಾಂ ಸೇಂಟ್ ಆನ್ನೆಸ್‌ಗೆ ಸಮೀಪ ಬರಿದಾಗುತ್ತದೆ.[೫೭]

ನೈಸರ್ಗಿಕ ಪ್ರದೇಶಗಳು

ನಿಡ್ಡರ್‌ಡೇಲ್, ಯಾರ್ಕ್‌ಷೈರ್ ಡೇಲ್ಸ್

ಯಾರ್ಕ್‌ಷೈರ್ ಹಳ್ಳಿಗಾಡು ಗಾಡ್ಸ್ ಓನ್ ಕೌಂಟಿ ಎಂಬ ಸಾಮಾನ್ಯ ಉಪನಾಮವನ್ನು ಹೊಂದಿದೆ.[೪][೮] ಇತ್ತೀಚಿನ ದಿನಗಳಲ್ಲಿ ದಿ ಗಾರ್ಡಿಯನ್ ಪ್ರಕಾರ, ನಾರ್ತ್ ಯಾರ್ಕ್‌ಷೈರ್ ಕೆಂಟ್‌ನ್ನು ಸ್ಥಾನಪಲ್ಲಟ ಮಾಡಿ ಗಾರ್ಡನ್ ಆಫ್ ಇಂಗ್ಲೆಂಡ್ ಬಿರುದನ್ನು ಪಡೆದಿದೆ.[೫೮] ಯಾರ್ಕ್‌ಷೈರ್ ನಾರ್ತ್ ಯಾರ್ಕ್ ಮೂರ್ಸ್ ಮತ್ತು ಯಾರ್ಕ್‌ಷೈರ್ ಡೇಲ್ಸ್, ನ್ಯಾಷನಲ್ ಪಾರ್ಕ್ಸ್ ಹಾಗೂ ಪೀಕ್ ಡಿಸ್ಟ್ರಿಕ್ಟ್ ನ್ಯಾಷನಲ್ ಪಾರ್ಕ್‌ ಭಾಗವನ್ನು ಒಳಗೊಂಡಿದೆ. ನಿಡ್ಡರ್‌ಡೇಲ್ ಮತ್ತು ಹೊವಾರ್ಡಿಯನ್ ಹಿಲ್ಸ್ ನಿಯುಕ್ತ ಮಹೋನ್ನತ ನಿಸರ್ಗ ಸೌಂದರ್ಯದ ಪ್ರದೇಶಗಳಾಗಿವೆ.[೫೯] ಸ್ಪರ್ನ್ ಪಾಯಿಂಟ್, ಪ್ಲಾಂಬರೊ ಹೆಡ್ ಮತ್ತು ತೀರಪ್ರದೇಶದ ನಾರ್ತ್ ಯಾರ್ಕ್ ಮೂರ್ಸ್ ನಿಯುಕ್ತ ಹೆರಿಟೇಜ್ ಕೋಸ್ಟ್ ಪ್ರದೇಶಗಳಾಗಿದ್ದು,[೬೦] ರಮಣೀಯ ನೋಟಗಳಿಗೆ ವಿಟ್ಬಿಯ ಜೆಟ್ಪ್ರಪಾತಗಳು ಮುಂತಾದ ಕಡಿದಾದ ಪ್ರಪಾತಕೋಡುಗಲ್ಲಿನ ಇಳಿಜಾರು ಭಾಗ)ಗಳೊಂದಿಗೆ ಹೆಸರಾಗಿದೆ.[೬೧] ,[೬೧] ಫೈಲಿಯಲ್ಲಿರುವ ಸುಣ್ಣದ ಕಲ್ಲಿನ ಪ್ರಪಾತಗಳು ಮತ್ತು ಪ್ಲಾಂಬರೊಹೆಡ್‌ನ ಸೀಮೆಸುಣ್ಣದ ಪ್ರಪಾತಗಳು[೬೨][೬೩] ಮೂರ್ ಹೌಸ್-ಅಪ್ಪರ್ ಟೀಸ್‌ಡೇಲ್, ಅದರಲ್ಲಿ ಬಹುತೇಕ ಮುಂಚಿನ ನಾರ್ತ್ ರೈಡಿಂಗ್ ಆಫ್ ಯಾರ್ಕ್‌ಷೈರ್‌ನ ಭಾಗವಾಗಿದ್ದು, ಇಂಗ್ಲೆಂಡ್‌ನ ಅತೀದೊಡ್ಡ ರಾಷ್ಟ್ರೀಯ ನೈಸರ್ಗಿಕ ಮೀಸಲುಗಳಲ್ಲಿ ಒಂದಾಗಿದೆ.[೬೪]

The ಪಕ್ಷಿಗಳ ರಕ್ಷಣೆಯ ರಾಯಲ್ ಸೊಸೈಟಿಯುಬೆಂಪ್ಟನ್ ಪ್ರಪಾತಗಳಲ್ಲಿರುವ ರಕ್ಷಿತ ಮೀಸಲು ಪ್ರದೇಶ , ನಾರ್ದನ್ ಗ್ಯಾನೆಟ್ಅಟ್ಲಾಂಟಿಕ್ ಪಫಿನ್ ಮತ್ತುರಾಜೋರ್‌ಬಿಲ್ ಮುಂತಾದ ತೀರಪ್ರದೇಶದ ವನ್ಯಜೀವಿಗಳನ್ನು ನಿರ್ವಹಿಸುತ್ತದೆ.[೬೫] ಸ್ಪರ್ನ್ ಪಾಯಿಂಟ್ 3 miles (4.8 km) ಉದ್ದದ ಮರಳಿನದಿಬ್ಬವಾಗಿದೆ. ಇದು ರಾಷ್ಟ್ರೀಯ ನಿಸರ್ಗ ಮೀಸಲು ಪ್ರದೇಶವಾಗಿದ್ದು ಯಾರ್ಕ್‌ಷೈರ್ ವನ್ಯಜೀವಿ ಟ್ರಸ್ಟ್ ಇದರ ಮಾಲೀಕತ್ವ ಹೊಂದಿದೆ. ಇದು ಚಕ್ರೀಯ ನಿಸರ್ಗಕ್ಕೆ ಹೆಸರಾಗಿದ್ದು, ದಿಬ್ಬವು ನಾಶವಾಗಿ ಅಂದಾಜು ಪ್ರತೀ ೨೫೦ ವರ್ಷಗಳಲ್ಲಿ ಮರುಸೃಷ್ಟಿಯಾಗುತ್ತದೆ.[೬೬] ಯಾರ್ಕ್‌ಷೈರ್‌ನಲ್ಲಿ ಮರಳಿನ ಸಮುದ್ರತೀರಗಳೊಂದಿಗೆ ಸಮುದ್ರಬದಿಯ ವಿಹಾರಧಾಮಗಳಿವೆ. ಸ್ಕಾರ್‌ಬರೋ ಬ್ರಿಟನ್ನಿನ ಅತೀ ಹಳೆದ ಸಮುದ್ರಬದಿಯ ವಿಹಾರಧಾಮವಾಗಿದ್ದು, ೧೭ನೇ ಶತಮಾನದ ಸ್ಪಾ ಟೌನ್ಯುಗಕ್ಕೆ ಸೇರಿದೆ,[೬೭] ವಿಟ್‌ಬಿ ಪ್ರವಾಸಿಗಳಿಂದ ತುಂಬಿದ ಬಂದರಿನೊಂದಿಗೆ ಯುನೈಟೆಡ್ ಕಿಂಗ್ಡಂನ ಅತ್ಯಂತ ಉತ್ತಮ ಸಮುದ್ರತೀರ ಎಂದು ಆಯ್ಕೆ ಮಾಡಲಾಗಿದೆ.[೬೮]

ಆರ್ಥಿಕ ಸ್ಥಿತಿ

ಬ್ರಿಜ್‌ವಾಟರ್ ಪ್ಲೇಸ್,ಲೀಡ್ಸ್ ಬೆಳೆಯುತ್ತಿರುವ ಆರ್ಥಿಕ ಪ್ರಾಮುಖ್ಯತೆಯ ಸಂಕೇತ

ಯಾರ್ಕ್‌ಷೈರ್ ಬಹುಮಟ್ಟಿಗೆ ಮಿಶ್ರಿತ ಆರ್ಥಿಕತೆಯನ್ನು ಹೊಂದಿದೆ. ಲೀಡ್ಸ್ ನಗರವು ಯಾರ್ಕ್‌ಷೈರ್‌ನ ಅತ್ಯಂತ ದೊಡ್ಡ ನಗರ ಮತ್ತು ವ್ಯಾಪಾರ ಮತ್ತು ವಾಣಿಜ್ಯದ ಮುಖ್ಯ ಕೇಂದ್ರವಾಗಿದೆ. ಲೀಡ್ಸ್ ಯುನೈಟೆಡ್ ಕಿಂಗ್ಡಂನ ಅತೀ ದೊಡ್ಡ ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿದೆ. ಲೀಡ್ಸ್‌ನ ಸಾಂಪ್ರದಾಯಿಕ ಕೈಗಾರಿಕೆಗಳು ನಗರದ ದಕ್ಷಿಣದಿಂದ ಪೂರ್ವದವರೆಗೆ ಸೇವಾಧಾರಿತ ಕೈಗಾರಿಕೆಗಳು ಮತ್ತು ಜವಳಿ ತಯಾರಿಕೆ ಮತ್ತು ಕಲ್ಲಿದ್ದಲು ಗಣಿಗಾರಿಕೆ ನಡುವೆ ಮಿಶ್ರಣವಾಗಿದೆ. ಶೆಫೀಲ್ಡ್ ಸಾಂಪ್ರದಾಯಿಕವಾಗಿ ಕಲ್ಲಿದ್ದಲು ಗಣಿಗಾರಿಕೆ ಮತ್ತು ಉಕ್ಕಿನ ಕೈಗಾರಿಕೆ ಮುಂತಾದ ಭಾರೀ ಕೈಗಾರಿಕೆ ಉತ್ಪಾದನೆಯನ್ನು ಹೊಂದಿದೆ. ಇಂತಹ ಕೈಗಾರಿಕೆಗಳ ಅವನತಿಯಿಂದ ಷೆಫೀಲ್ಡ್ ಬೆಳೆಯುವ ಚಿಲ್ಲರೆ ವ್ಯಾಪಾರ ಒಳಗೊಂಡಂತೆ ತೃತೀಯ ಶ್ರೇಣಿಯ ಮತ್ತು ಆಡಳಿತಾತ್ಮಕ ಉದ್ಯಮಗಳನ್ನು ವಿಶೇಷವಾಗಿ ಮೆಡೋವಾಲ್ ಅಭಿವೃದ್ಧಿಯೊಂದಿಗೆ ಆಕರ್ಷಿಸಿದೆ. ಆದಾಗ್ಯೂ, ವಿಲ್ಸ್ಟ್ ಶೆಫೀಲ್ಡ್ ಭಾರೀ ಕೈಗಾರಿಕೆಯು ಪ್ರದೇಶವನ್ನು ಕುಂಠಿತಗೊಳಿಸಿದರೂ ವಿಶೇಷಜ್ಞ ಎಂಜಿನಿಯರಿಂಗ್‌ನ ವಿಶ್ವವಿಖ್ಯಾತ ಕೇಂದ್ರ ಎಂದು ಮರುಅಸ್ತಿತ್ವ ಪಡೆಯಿತು. ವೆಲ್ಡಿಂಗ್ ಇನ್ಸ್‌ಟಿಟ್ಯೂಟ್ , ಬೋಯಿಂಗ್ ಸಹಭಾಗಿತ್ವದ ಅಡ್ವಾನ್ಸ್ಡ್ ಮೆಟೀರಿಯಲ್ಸ್ ರಿಸರ್ಚ್ ಸೆಂಟರ್ ಸೇರಿದಂತೆ ಉನ್ನತ ತಂತ್ರಜ್ಞಾನದ ಸೌಲಭ್ಯಗಳ ಗುಂಪು ಎಲ್ಲವೂ ಪ್ರದೇಶಗಳ ವೈಲಕ್ಷ್ಯಣ್ಯವನ್ನು ಹೆಚ್ಚಿಸಲು ಮತ್ತು ಯಾರ್ಕ್‌ಷೈರ್‌ಗೆ ಗಮನಾರ್ಹ ಬಂಡವಾಳವನ್ನು ತರಲು ನೆರವಾಯಿತು.[೬೯] ಬ್ರಾಡ್‌ಫೋರ್ಡ್, ಹ್ಯಾಲಿಫ್ಯಾಕ್ಸ್, ಕೈಗ್ಲಿ ಮತ್ತು ಹಡ್ಡರ್ಸ್‌ಫೀಲ್ಡ್ ಉಣ್ಣೆ ಮಿಲ್ಲಿಂಗ್‌ನ ಸಾಂಪ್ರದಾಯಿಕ ಕೇಂದ್ರಗಳಾಗಿವೆ. ಇವು ಆಗಿನಿಂದ ನಶಿಸಿದ್ದು, ಬ್ರಾಡ್‌ಫೋರ್ಡ್, ಡಿವ್ಸ್‌ಬರ್ ಮತ್ತು ಕೈಗ್ಲಿಮುಂತಾದ ಪ್ರದೇಶಗಳಲ್ಲಿ ಸ್ಥಳೀಯ ಆರ್ಥಿಕತೆಯಲ್ಲಿ ಕುಸಿತ ಅನುಭವಿಸಿದೆ. ನಾರ್ತ್ ಯಾರ್ಕ್‌ಷೈರ್ ಸ್ಥಿರವಾಗಿ ನೆಲೆಗೊಂಡ ಪ್ರವಾಸಿ ಕೈಗಾರಿಕೆಯನ್ನು ಹೊಂದಿದ್ದು, ಎರಡು ರಾಷ್ಟ್ರೀಯ ಉದ್ಯಾನಗಳಾದ(ಯಾರ್ಕ್‌ಷೈರ್ ಡೇಲ್ಸ್ ನ್ಯಾಷನಲ್ ಪಾರ್ಕ್, ನಾರ್ತ್ ಯಾರ್ಕ್‌ಷೈರ್ ಮೂರ್ಸ್ ನ್ಯಾಷನಲ್ ಪಾರ್ಕ್), ಹಾರೊಗೇಟ್, ಯಾರ್ಕ್ ಮತ್ತು ಸ್ಕಾರ್‌ಬರೊ ಮತ್ತು ಅಂತಹ ಒಂದು ಕೈಗಾರಿಕೆ ಲೀಡ್ಸ್‌ನಲ್ಲಿ ಬೆಳೆಯುತ್ತಿದೆ. ಕಿಂಗ್‌ಸ್ಟನ್ ಅಪಾನ್ ಹಲ್ ಯಾರ್ಕ್‌ಷೈರ್‌ನ ಅತೀ ದೊಡ್ಡ ಬಂದರಾಗಿದ್ದು, ಅತ್ಯಂತ ದೊಡ್ಡ ಉತ್ಪಾದನೆ ನೆಲೆಯನ್ನು ಹೊಂದಿದೆ. ಅದರ ಮೀನುಗಾರಿಕೆ ಕೈಗಾರಿಕೆಯು ಆದಾಗ್ಯೂ ಇತ್ತೀಚಿನ ವರ್ಷಗಳಲ್ಲಿ ಕುಸಿತ ಅನುಭವಿಸಿದೆ. ಉತ್ತರವು ಇನ್ನೂ ಕೃಷಿ ಹಿನ್ನೆಲೆಯನ್ನು ಹೊಂದಿದೆಯಾದರೂ ಇದು ಹೆಚ್ಚು ವೈವಿಧ್ಯತೆಯಿಂದ ಕೂಡಿದೆ. ಸ್ಥಳೀಯ ವ್ಯಾಪಾರಗಳಿಗೆ ನೆರವಾಗಲು ಪ್ರವಾಸೋದ್ಯಮವಿದೆ.

ಅನೇಕ ದೊಡ್ಡ ಬ್ರಿಟಿಷ್ ಕಂಪೆನಿಗಳು ಯಾರ್ಕ್‌ಷೈರ್‌ನಲ್ಲಿ ನೆಲೆಹೊಂದಿವೆ. ಇವುಗಳಲ್ಲಿ ಮಾರಿಸನ್ಸ್ (ಬ್ರಾಡ್‌ಫೋರ್ಡ್), ಆಸ್ಡಾ (ಲೀಡ್ಸ್), ಕಾಮೆಟ್, (ಹಲ್), Jet೨.com (ಲೀಡ್ಸ್), ರಾನ್ಸೀಲ್ (ಶೆಫೀಲ್ಡ್), ಆಪ್ಟೇರ್ (ಲೀಡ್ಸ್), ವಾರ್ಫ್‌ಡೇಲ್ (ಲೀಡ್ಸ್), ಪ್ಲಾಕ್ಸ್‌ಟನ್ (ಸ್ಕಾರ್‌ಬರೊ), ಲಿಟಲ್ ಚೆಫ್ (ಶೆಫೀಲ್ಡ್), ಹ್ಯಾಲಿಫ್ಯಾಕ್ಸ್ ಬ್ಯಾಂಕ್ (ಹ್ಯಾಲಿಫ್ಯಾಕ್ಸ್) ಮತ್ತು ಮೆಕೇನ್ಸ್ (ಸ್ಕಾರ್‌ಬರೊ) ಒಳಗೊಂಡಿವೆ.

ಸಾರಿಗೆ

ಪಶ್ಚಿಮ ಯಾರ್ಕ್‌ಷೈರ್ ಫೆರಿಬ್ರಿಜ್‌ನಲ್ಲಿರುವ A1(M) ಮತ್ತು M62 ಜಂಕ್ಷನ್

ಯಾರ್ಕ್‌ಷೈರ್‌ನಲ್ಲಿ ಅತ್ಯಂತ ಪ್ರಮುಖ ರಸ್ತೆಯನ್ನು ಐತಿಹಾಸಿಕವಾಗಿ ಗ್ರೇಟ್ ನಾರ್ಥ್ ರೋಡ್ ಎಂದು ಕರೆಯಲಾಗುತ್ತಿದ್ದು, A೧ ಎಂದೂ ಪರಿಚಿತವಾಗಿದೆ.[೭೦] ಈ ಟ್ರಂಕ್ ರಸ್ತೆಯು ಕೌಂಟಿಯ ಮಧ್ಯದಲ್ಲಿ ಹಾದುಹೋಗುತ್ತದೆ ಮತ್ತು ಲಂಡನ್‌ನಿಂದ ಎಡಿನ್‌ಬರ್ಗ್‌ವರೆಗೆ ಮುಖ್ಯ ಹಾದಿಯಾಗಿದೆ.[೭೧] ಇನ್ನೊಂದು ಮುಖ್ಯ ರಸ್ತೆಯು ಹೆಚ್ಚು ಪೂರ್ವದ A೧೯ ರಸ್ತೆಯಾಗಿದ್ದು, ಡಾನ್‌ಕ್ಯಾಸ್ಟರ್‌ನಲ್ಲಿ ಆರಂಭವಾಗಿ ಸೀಟನ್ ಬರ್ನ್‌ನಲ್ಲಿ ನ್ಯೂಕ್ಯಾಸಲ್ -ಅಪಾನ್-ಟೈನ್‌ಗೆ ಉತ್ತರದಲ್ಲಿ ಕೊನೆಗೊಳ್ಳುತ್ತದೆ. The M೬೨ ಮೋಟರ್‌ವೇ ಕೌಂಟಿಯನ್ನು ಪೂರ್ವದಿಂದ ಪಶ್ಚಿಮಕ್ಕೆ ಹಲ್‌ನಿಂದ ಗ್ರೇಟರ್ ಮ್ಯಾಂಚೆಸ್ಟರ್ ಮತ್ತು ಮರ್ಸಿಸೈಡ್‌ನತ್ತ ಹಾದುಹೋಗುತ್ತದೆ.[೭೨]

M೧ ಲಂಡನ್‌ ಮತ್ತು ಇಂಗ್ಲೆಂಡ್ ದಕ್ಷಿಣದಿಂದ ಯಾರ್ಕ್‌ಷೈರ್‌ಗೆ ವಾಹನಗಳನ್ನು ಒಯ್ಯುತ್ತದೆ. ೧೯೯೯ರಲ್ಲಿ ಲೀಡ್ಸ್ ಪೂರ್ವಕ್ಕೆ ತಿರುಗಲು ಮತ್ತು A೧ಗೆ ಸಂಪರ್ಕಿಸಲು ಸುಮಾರು 8 miles (13 km)ಸೇರಿಸಲಾಯಿತು.[೭೩] ಸ್ಕಾಟ್‌ಲ್ಯಾಂಡ್ ಮತ್ತು ಲಂಡನ್ ನಡುವೆ ಇರುವ ಈಸ್ಟ್ ಕೋಸ್ಟ್ ಮೇನ್ ಲೈನ್ ರೈಲು ಸಂಪರ್ಕವು ಯಾರ್ಕ್‌ಷೈರ್ ಮೂಲಕ  A೧ಗೆ ಸರಿಸುಮಾರು ಸಮಾನಾಂತರವಾಗಿ ಹೋಗಿದೆ ಮತ್ತು ಟ್ರಾನ್ಸ್ ಪೆನ್ನಿ ರೈಲು ಸಂಪರ್ಕವು ಲೀಡ್ಸ್ ಮೂಲಕ ಹಲ್‌ನಿಂದ ಲಿವರ್‌ಪೂಲ್‌ಗೆ ಪೂರ್ವದಿಂದ ಪಶ್ಚಿಮಕ್ಕೆ ಸಾಗುತ್ತದೆ.[೭೪]
ಲೀಡ್ಸ್ ಬ್ರಾಡ್‌ಫರ್ಡ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಯಾರ್ಕ್‌ಷೈರ್‌ನ ಅತೀ ದೊಡ್ಡ ವಿಮಾನ ನಿಲ್ದಾಣ.

ರೈಲು ಸಾರಿಗೆಯ ಆಗಮನಕ್ಕೆ ಮುನ್ನ, ಸರಕುಗಳ ಸಾಗಣೆಗೆ ಹಲ್ ಮತ್ತು ವಿಟ್‌ಬಿ ಬಂದರುಗಳು ಪ್ರಮುಖ ಪಾತ್ರವನ್ನು ವಹಿಸಿದವು. ಐತಿಹಾಸಿಕವಾಗಿ ಇಂಗ್ಲೆಂಡ್‌ನ ಅತೀ ಉದ್ದದ ಕಾಲುವೆ ಲೀಡ್ಸ್ ಮತ್ತು ಲಿವರ್‌ಪೂಲ್ ಕಾಲುವೆ ಸೇರಿದಂತೆ ಕಾಲುವೆಗಳನ್ನು ಬಳಸಲಾಯಿತು. ಇಂದಿನ ದಿನಗಳಲ್ಲಿ ಒಳನಾಡು ಯುರೋಪ್‌ನ್ನು(ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂ) P&O ಫೆರೀಸ್‌ನ ಕಾಯಂ ದೋಣಿ ಸಂಚಾರ ಸೇವೆಗಳಿಂದ ಹಲ್‌ನಿಂದ ತಲುಪಬಹುದು.[೭೫] ಯಾರ್ಕ್‌ಷೈರ್ ಲೀಡ್ಸ್ ಬ್ರಾಡ್‌ಫೋರ್ಡ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ವಾಯು ಸಾರಿಗೆ ಸೇವೆಗಳನ್ನು ಹೊಂದಿದೆ. ಈ ವಿಮಾನನಿಲ್ದಾಣವು ನಿಲ್ದಾಣದ ಗಾತ್ರ ಮತ್ತು ಪ್ರಯಾಣಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ೧೯೯೬ರಿಂದ ಗಮನಾರ್ಹ ಮತ್ತು ಶೀಘ್ರ ಬೆಳವಣಿಗೆಯನ್ನು ಅನುಭವಿಸಿದ್ದು, ಇಂದಿನ ದಿನದವರೆಗೆ ಸುಧಾರಣೆಗಳು ನಡೆಯುತ್ತಿವೆ.[೭೬] ಸೌತ್ ಯಾರ್ಕ್‌ಷೈರ್ ಫಿನಿಂಗ್ಲೆಯಲ್ಲಿ ನೆಲೆಹೊಂದಿರುವ ರಾಬಿನ್ ಹುಡ್ ವಿಮಾನನಿಲ್ದಾಣ ಡಾನ್‌ಕಾಸ್ಟರ್ ಶೆಫೀಲ್ಡ್‌‌ನಿಂದ ಸೇವೆ ಪಡೆಯುತ್ತಿದೆ.[೭೭] ಶೆಫೀಲ್ಡ್ ಸಿಟಿ ವಿಮಾನನಿಲ್ದಾಣವು ೧೯೯೭ರಲ್ಲಿ ಆರಂಭವಾಯಿತು. ಲಂಡನ್ ಜತೆ ನಗರದ ಉತ್ತಮ ರೈಲು ಸಂಪರ್ಕಗಳು ಮತ್ತು ಸಮೀಪದ ಪ್ರದೇಶಗಳಲ್ಲಿ ವಿಮಾನನಿಲ್ದಾಣಗಳ ಅಭಿವೃದ್ಧಿಯಿಂದ ವಿಮಾನನಿಲ್ದಾಣ ಸ್ಥಾಪಿಸದಂತೆ ೧೯೬೦ರ ದಶಕದಲ್ಲಿ ಕೌನ್ಸಿಲ್ ನಿರ್ಧಾರದಿಂದ ಶೆಫೀಲ್ಡ್‌ನಲ್ಲಿ ಅನೇಕ ವರ್ಷಗಳವರೆಗೆ ವಿಮಾನನಿಲ್ದಾಣವಿರಲಿಲ್ಲ. ಹೊಸದಾಗಿ ಆರಂಭವಾದ ವಿಮಾನನಿಲ್ದಾಣ ದೊಡ್ಡ ವಿಮಾನನಿಲ್ದಾಣಗಳಾದ ಲೀಡ್ಸ್ ಬ್ರಾಡ್‌ಪೋರ್ಡ್ ವಿಮಾನನಿಲ್ದಾಣ ಮತ್ತು ಈಸ್ಟ್ ಮಿಡ್‌ಲ್ಯಾಂಡ್ಸ್ ವಿಮಾನನಿಲ್ದಾಣ ಮುಂತಾದ ದೊಡ್ಡ ನಿಲ್ದಾಣಗಳ ಜತೆ ಸ್ಪರ್ಧಿಸಲು ಸಾಧ್ಯವಾಗದೇ, ಕೇವಲ ಕೆಲವೇ ನಿಗದಿತ ವಿಮಾನ ಸಂಚಾರಗಳನ್ನು ಮಾತ್ರ ಆಕರ್ಷಿಸಿತು. ರನ್‌ವೇ ಕಡಿಮೆ ದರದ ವಿಮಾನಗಳನ್ನು ಬೆಂಬಲಿಸಲು ತೀರಾ ಚಿಕ್ಕದಾಗಿದೆ. ಡಾನ್‌‌ಕ್ಯಾಸ್ಟರ್ ಶೆಫೀಲ್ಡ್ ವಿಮಾನನಿಲ್ದಾಣದ ಆರಂಭದಿಂದ ವಿಮಾನನಿಲ್ದಾಣವು ಅವಶ್ಯಕತೆ ಇಲ್ಲದಂತಾಗಿ ೨೦೦೮ ಏಪ್ರಿಲ್‌ನಲ್ಲಿ ಅಧಿಕೃತವಾಗಿ ಮುಚ್ಚಲಾಯಿತು.

ಸಂಸ್ಕೃತಿ

ಯಾರ್ಕ್‌ಷೈರ್ ಜನರ ಸಂಸ್ಕೃತಿಯು ಇದರ ಇತಿಹಾಸವನ್ನು ನೇರವಾಗಿ ನಿಯಂತ್ರಿಸುತ್ತಿದ್ದ ವಿವಿಧ ಭಿನ್ನ ನಾಗರಿಕತೆಗಳ ಸಂಚಿತ ಉತ್ಪನ್ನವಾಗಿದೆ. ಇವುಗಳಲ್ಲಿ ಸೆಲ್ಟರು (ಬ್ರಿಗಾಂಟೆ ಮತ್ತು ಪಾರಿಸಿ), ರೋಮನ್ನರು, ಏಂಜಲ್ಸ್, ನಾರ್ಸ್ ವೈಕಿಂಗರುಮತ್ತು ನಾರ್ಮನ್ನರುಸೇರಿದ್ದಾರೆ[೭೮] ಐತಿಹಾಸಿಕ ನಾರ್ತ್ ರೈಡಿಂಗ್‌ನ ಪಶ್ಚಿಮ ಭಾಗವು ಹೆಚ್ಚುವರಿ ಬ್ರೆಟಾನ್ ಸಂಸ್ಕೃತಿಯ ಮಿಶ್ರಣವನ್ನು ಹೊಂದಿತ್ತು. ಹಾನರ್ ಆಫ್ ರಿಚ್ಮಂಡ್ ಡ್ಯೂಕ್ ಆಫ್ ಬ್ರಿಟಾನಿಯ ಜೆಫ್ರಿ ೧ ಮೊಮ್ಮಗ ಅಲೇನ್ ಲೆ ರೌಕ್ಸ್‌ನಿಂದ ವಶವಾದ ಕಾರಣದಿಂದ ಇದು ಬ್ರೆಟಾನ್ ಸಂಸ್ಕೃತಿಯ ಮಿಶ್ರಣವನ್ನು ಹೊಂದಿತ್ತು.[೭೯] ಯಾರ್ಕ್‌ಷೈರ್ ಜನರು ತಮ್ಮ ಕೌಂಟಿಯ ಬಗ್ಗೆ ಮತ್ತು ಸ್ಥಳೀಯ ಸಂಸ್ಕೃತಿ ಬಗ್ಗೆ ವಿಪುಲವಾಗಿ ಹೆಮ್ಮೆ ತಾಳಿದ್ದರು. ಅವರ ದೇಶಕ್ಕಿಂತ ಅವರ ಕೌಂಟಿಯ ಜತೆ ಹೆಚ್ಚು ಪ್ರಬಲವಾಗಿ ಗುರುತಿಸಿಕೊಂಡಿರುತ್ತಾರೆ ಎಂದು ಕೆಲವು ಬಾರಿ ಸೂಚಿಸಲಾಗಿದೆ.[೮೦] ಯಾರ್ಕ್‌ಷೈರ್ ಜನರು ಟೈಕ್ ಎಂದು ಹೆಸರಾದ ಸ್ವಯಂ ವಿಶಿಷ್ಟ ಆಡುಭಾಷೆಯನ್ನು ಹೊಂದಿದ್ದರು. ಇದನ್ನು ಪೂರ್ಣ ಸ್ವರೂಪದ ಭಾಷೆ ಎಂದು ಕೆಲವರು ವಾದಿಸಿದ್ದಾರೆ.[೮೧] ಕೌಂಟಿಯು ವಿಶಿಷ್ಠ ಯಾರ್ಕ್‌ಷೈರ್ ಆಡುಮಾತುಗಳನ್ನು ಸೃಷ್ಟಿಸಿದ್ದು, ಇದು ಕೌಂಟಿಯಲ್ಲಿ ಬಳಕೆಯಲ್ಲಿದೆ. ಇಂಗ್ಲೆಂಡ್‌ನಲ್ಲಿ ಬೇರೆಲ್ಲೂ ಕಂಡುಬರದ ಸಾಂಪ್ರದಾಯಿಕ ನೃತ್ಯ ಉದ್ದ ಕತ್ತಿಯ ನೃತ್ಯವು ಯಾರ್ಕ್‌ಷೈರ್‌ನ ವಿಶಿಷ್ಟ ಸಂಪ್ರದಾಯಗಳಲ್ಲಿ ಒಂದಾಗಿದೆ. ಯಾರ್ಕ್‌ಷೈರ್‌ನ ಅತ್ಯಂತ ಪ್ರಖ್ಯಾತ ಸಾಂಪ್ರದಾಯಿಕ ನೃತ್ಯವು ಆನ್ ಇಲ್ಕಾ ಮೂರ್ ಬಟ್ 'ಎಟ್ ("ಆನ್ಇಲ್ಕೆ ಮೂರ್‌ವಿತೌಟ್ ಎ ಹ್ಯಾಟ್").ಇದನ್ನು ಕೌಂಟಿಯ ಅನಧಿಕೃತ ರಾಷ್ಟ್ರಗೀತೆ ಎಂದು ಪರಿಗಣಿಸಲಾಗಿದೆ.[೮೨]

ವಾಸ್ತುಶಿಲ್ಪ

ಹೋವಾರ್ಡ್ ಕೋಟೆ

ಯಾರ್ಕ್‌ಷೈರ್‌ನಾದ್ಯಂತ ನಾರ್ಮನ್-ಬ್ರೆಟಾನ್ ಅವಧಿಯಲ್ಲಿ ವಿಶೇಷವಾಗಿ ಹ್ಯಾರಿಯಿಂಗ್ ಆಫ್ ದಿ ನಾರ್ತ್ ನಂತರ ಅನೇಕ ಕೋಟೆಗಳನ್ನು ನಿರ್ಮಿಸಲಾಯಿತು. ಇವುಗಳಲ್ಲಿ ಬೊವೆಸ್ ಕೋಟೆ, ಪಿಕರಿಂಗ್ ಕೋಟೆ, ರಿಚ್ಮಂಡ್ ಕೋಟೆ, ಸ್ಕಿಪ್‌ಟನ್ ಕೋಟೆ, ಯಾರ್ಕ್ ಕೋಟೆ ಮತ್ತಿತರ ಒಳಗೊಂಡಿವೆ.[೮೩] ನಂತರ ಮಧ್ಯಯುಗೀನ ಕೋಟೆಗಳಾದ ಹೆಲ್ಮ್‌ಸ್ಲೇ, ಮಿಡಲ್‌ಹ್ಯಾಂ ಮತ್ತು ಸ್ಕಾರ್‌ಬರೊ ವನ್ನು ಆಕ್ರಮಣ ಮಾಡಿದ ಸ್ಕಾಟರ ವಿರುದ್ಧ ರಕ್ಷಣೆಯಾಗಿ ನಿರ್ಮಿಸಲಾಯಿತು.[೮೪] ಮಿಡಲ್‌ಹ್ಯಾಂ ಗಮನಾರ್ಹವಾಗಿದೆ. ಏಕೆಂದರೆ ಇಂಗ್ಲೆಂಡ್‌ನ ರಿಚರ್ಡ್ IIIII ಅವನ ಬಾಲ್ಯವನ್ನು ಅಲ್ಲಿ ಕಳೆದಿದ್ದನು.[೮೪] ಈ ಕೋಟೆಗಳ ಪಳೆಯುಳಿಕೆಗಳು ಕೆಲವು ಇಂಗ್ಲೀಷ್ ಪರಂಪರೆಯ ಸ್ಥಳಗಳಾಗಿದ್ದು ಜನಪ್ರಿಯ ಪ್ರವಾಸಿ ತಾಣಗಳಾಗಿವೆ.[೮೪] ಯಾರ್ಕ್‌ಷೈರ್‌ನಲ್ಲಿ ಅನೇಕ ಹಳ್ಳಿಗಾಡಿನ ಮನೆಗಳಿದ್ದು, ಅವುಗಳಲ್ಲಿ ನಾಮಧೇಯದಲ್ಲಿ ಕೋಟೆ ಎಂಬ ಹೆಸರನ್ನು ಹೊಂದಿದೆ. ಆದರೂ ಅವು ಅರಮನೆಗೆ ಹೆಚ್ಚಾಗಿ ಹೋಲುತ್ತವೆ.[೮೫] ಅತ್ಯಂತ ಗಮನಾರ್ಹ ಉದಾಹರಣೆಗಳು ಅಲ್ಲರ್‌ಟನ್ ಕೋಟೆ ಮತ್ತು ಹೋವಾರ್ಡ್ ಕೋಟೆ.[೮೬] ಎರಡೂ ಹೊವಾರ್ಡ್ ಕುಟುಂಬದ ಜತೆ ಸಂಬಂಧ ಹೊಂದಿದೆ.[೮೭] ಕ್ಯಾಸಲ್ ಹೋವಾರ್ಡ್ ಮತ್ತು ಅರ್ಲ್ ಆಫ್ ಹೇರ್‌ವುಡ್ ನಿವಾಸವಾದ ಹೇರ್‌ವುಡ್ ಹೌಸ್ ಟ್ರೆಷರ್ ಹೌಸಸ್ ಆಫ್ ಇಂಗ್ಲೆಂಡ್‌ನಲ್ಲಿ ಒಳಗೊಂಡಿವೆ. ಇವು ಒಂಬತ್ತು ಇಂಗ್ಲೀಷ್ ಹಳ್ಳಿಗಾಡಿನ ಮನೆಗಳ ಸಮೂಹವಾಗಿದೆ.[೮೮]

ವಿಟ್‌ಬೈ ಅಬ್ಬೆ

ಅಲ್ಲಿ ಅಸಂಖ್ಯಾತ ಇತರೆ ಗ್ರೇಡ್ ೧ ಪಟ್ಟಿಯ ಕಟ್ಟಡಗಳು ಐತಿಹಾಸಿಕ ಕೌಂಟಿಯಲ್ಲಿದೆ. ಇವುಗಳಲ್ಲಿ ಸಾರ್ವಜನಿಕ ಕಟ್ಟಡಗಳಾದ ಲೀಡ್ಸ್ ಟೌನ್ ಹಾಲ್, ಶೆಫೀಲ್ಡ್ ಟೌನ್ ಹಾಲ್, ಆರ್ಮ್ಸ್‌ಬಿ ಹಾಲ್, the ಯಾರ್ಕ್‌ಷೈರ್ ಮ್ಯೂಸಿಯಂ ಮತ್ತು ಯಾರ್ಕ್‌ನ ಗಿಲ್ಡ್‌ಹಾಲ್ ಸೇರಿವೆ. ಗಮನಾರ್ಹ ಕಟ್ಟಡಗಳಿಂದ ಕೂಡಿದ ದೊಡ್ಡ ಎಸ್ಟೇಟ್‌‍ಗಳನ್ನು ಬ್ರಾಡ್ಸ್‌ವರ್ತ್ ಹಾಲ್, ಟೆಂಪಲ್ ನ್ಯೂಸಾಮ್ ಮತ್ತು ವೆಂಟ್‌ವರ್ತ್ ಕ್ಯಾಸಲ್‌ನಲ್ಲಿ ನಿರ್ಮಿಸಲಾಗಿದೆ. ಇದರ ಜತೆಗೆ ನ್ಯಾಷನಲ್ ಟ್ರಸ್ಟ್‌ ರಕ್ಷಿಸಿದ ಮತ್ತು ನಿರ್ವಹಿಸಿದ ನನ್ನಿಂಗ್‌ಟನ್ ಹಾಲ್, ರೈವಾಲಕ್ಸ್ ಟೆರೇಸ್ & ಟೆಂಪಲ್ಸ್ ಮತ್ತು ಸ್ಟಡ್ಲಿ ರಾಯಲ್ ಪಾರ್ಕ್ ಮುಂತಾದ ಆಸ್ತಿಗಳು ಒಳಗೊಂಡಿವೆ.[೮೯] ಧಾರ್ಮಿಕ ವಾಸ್ತುಶಿಲ್ಪವು ಪ್ರಧಾನ ಚರ್ಚು ಮತ್ತು ಕ್ರೈಸ್ತ ಸನ್ಯಾಸಿಯರ ನಿವಾಸಗಳು ಮತ್ತು ಅಬ್ಬೆಗಳ ಪಳೆಯುಳಿಕೆಗಳನ್ನು ಒಳಗೊಂಡಿವೆ. ಇವುಗಳಲ್ಲಿ ಅನೇಕ ಕಟ್ಟಡಗಳು ಹೆನ್ರಿ VIII ಕ್ರೈಸ್ತಸನ್ಯಾಸಿಗಳ ನಿವಾಸಗಳ ವಿಸರ್ಜನೆಯಿಂದ ತೊಂದರೆ ಅನುಭವಿಸಿವೆ. ಇವುಗಳಲ್ಲಿ ಬೋಲ್ಟನ್ ಅಬ್ಬೆ, ಫೌಂಟನ್ಸ್ ಅಬ್ಬೆ, ಗಿಸ್‌ಬರೊ ಪ್ರಿಯರಿ,ರೈವಾಲಕ್ಸ್ ಅಬ್ಬೆ , ಸೇಂಟ್ ಮೇರೀಸ್ ಅಬ್ಬೆಮತ್ತು ವಿಟ್ಬಿ ಅಬ್ಬೆ ಸೇರಿವೆ.[೯೦] ಐತಿಹಾಸಿಕ ಮೂಲದ ಇನ್ನೂ ಬಳಕೆಯಲ್ಲಿರುವ ಧಾರ್ಮಿಕ ಕಟ್ಟಡಗಳು ಯಾರ್ಕ್ ಮಿನ್‌ಸ್ಟರ್, ಅತೀ ದೊಡ್ಡ ಉತ್ತರ ಯುರೋಪ್‌ನ ಗೋತಿಕ್ ಕ್ಯಾಥೆಡ್ರಲ್‌,[೯೦] ಬೆವರ್ಲಿ ಮಿನ್‌ಸ್ಟರ್, ಬ್ರಾಡ್‌ಫೋರ್ಡ್ ಕೆಥೆಡ್ರಲ್ ಮತ್ತು ರೈಪನ್ ಕೆಥೆಡ್ರಲ್ಒಳಗೊಂಡಿವೆ.[೯೦]

ಸಾಹಿತ್ಯ ಮತ್ತು ಕಲೆ

ಬ್ರಾಂಟೆ ಸಹೋದರಿಯರು

ಯಾರ್ಕ್‌ಷೈರ್ ನಾರ್ತಂಬ್ರಿಯ ರಾಜಪ್ರಭುತ್ವದ ದಕ್ಷಿಣ ಭಾಗವನ್ನು ಒಳಗೊಂಡಿದ್ದಾಗ, ಅಲ್ಲಿ ಆಲ್ಕುಯಿನ್, ಕ್ಯಾಡ್‌ಮನ್ ಮತ್ತು ವಿಲ್ಫ್ರಿಡ್ ಸೇರಿದಂತೆ ಅನೇಕ ಗಮನಾರ್ಹ ಕವಿಗಳು, ಪಂಡಿತರು, ಪಾದ್ರಿಗಳು ಇದ್ದರು.[೯೧] ಕೌಂಟಿಯ ಅತ್ಯಂತ ಗೌರವಾನ್ವಿತ ಸಾಹಿತ್ಯಕ ಕುಟುಂಬವು ಮೂವರು ಬ್ರಾಂಟೆ ಸಹೋದರಿಯರು. ಹಾವೋರ್ತ್ ಸುತ್ತಲಿರುವ ಕೌಂಟಿಯ ಭಾಗವನ್ನು ಅವರ ಗೌರವಾರ್ಥವಾಗಿ ಬ್ರಾಂಟೆ ಕೌಂಟಿ ಎಂದು ಉಪನಾಮವನ್ನು ಇರಿಸಲಾಗಿದೆ.[೯೨] ೧೯ನೇ ಶತಮಾನದ ಮಧ್ಯಾವಧಿಯಲ್ಲಿ ಬರೆದಿರುವ ಅವರ ಕಾದಂಬರಿಗಳು ಮೊದಲಿಗೆ ಪ್ರಕಟವಾದಾಗ ಭಾವೋದ್ರೇಕವನ್ನು ಉಂಟುಮಾಡಿತು. ಆದರೂ ತರುವಾಯ ಮಹಾನ್ ಇಂಗ್ಲೀಷ್ ಸಾಹಿತ್ಯದ ಕೃತಿಚಕ್ರದಲ್ಲಿ ಸ್ವೀಕರಿಸಲಾಯಿತು.[೯೩] ಸಹೋದರಿಯರಿಂದ ರಚಿತವಾದ ಅತ್ಯಂತ ಪ್ರಸಿದ್ಧ ಕಾದಂಬರಿಗಳು ಆನ್ನೆ ಬ್ರಾಂಟೆಯವರ ದಿ ಟೆನ್ಯಾಂಟ್ ಆಫ್ ವೈಲ್ಡ್‌ಪೆಲ್ ಹಾಲ್ , ಚಾರ್ಲೊಟ್ಟೆ ಬ್ರಾಂಟೆಯವರ ಜೇನ್ ಐರ್ ಮತ್ತು ಎಮಿಲಿ ಬ್ರಾಂಟೆಯವರ ವುದರಿಂಗ್ ಹೈಟ್ಸ್ .[೯೨] ಯಾರ್ಕ್‌ಷೈರ್‌ನಲ್ಲಿ ಜೀವನವನ್ನು ಬಿಂಬಿಸಲು ಬಹುಮಟ್ಟಿಗೆ ವುದರಿಂಗ್ ಹೈಟ್ಸ್ ‌ನ್ನು ಮೂಲವಾಗಿ ಬಳಸಲಾಗಿದೆ. ಅದರ ಪಾತ್ರಗಳಲ್ಲಿ ಅಲ್ಲಿ ವಾಸಿಸುವ ಜನರ ನಮೂನೆಗಳನ್ನು ವಿವರಿಸಲಾಗಿದೆ ಮತ್ತು ಬಿರುಗಾಳಿಯಿಂದ ಕೂಡಿದ ಯಾರ್ಕ್‌ಷೈರ್ ಜೌಗುಭೂಮಿಯ ಬಳಕೆಗೆ ಮಹತ್ವ ನೀಡಲಾಗಿದೆ. ಅವರ ಮುಂಚಿನ ಮನೆಯಾಗಿದ್ದ ಪಾರ್ಸನಿನ ನಿವಾಸವು ಅವರ ಗೌರವಾರ್ಥ ವಸ್ತುಸಂಗ್ರಹಾಲಯವಾಗಿದೆ.[೯೪] ಬ್ರಾಮ್ ಸ್ಟೋಕರ್ ವಿಟ್ಬಿ[೯೫] ಯಲ್ಲಿ ವಾಸಿಸುವಾಗ ಡ್ರಾಕ್ಯುಲಾ ಕೃತಿಯ ಲೇಖಕನಾದ[೯೫] ಮತ್ತು ಸ್ಥಳೀಯ ಜನಪದ ಕತೆಗಳ ಹಲವಾರು ಅಂಶಗಳನ್ನು ಇದು ಒಳಗೊಂಡಿದೆ. ರಷ್ಯದ ಹಡಗು ಡಿಮಿಟ್ರಿ ಬಂದರಿನಲ್ಲಿ ಲಂಗರು ಹಾಕುವುದು ಸೇರಿದೆ. ಇದು ಪುಸ್ತಕದಲ್ಲಿ ಡಿಮೀಟರ್‌ಗೆ (ಫಲವಂತಿಕೆಯ ದೇವತೆ) ಆಧಾರವಾಯಿತು.[೯೬]

ಯಾರ್ಕ್‌ಷೈರ್ ಕಾದಂಬರಿಕಾರ ಸಂಪ್ರದಾಯವು ೨೦ನೇ ಶತಮಾನದಲ್ಲಿ ಮುಂದುವರಿಯಿತು. J. B. ಪ್ರೀಸ್ಟ್ಲಿ, ಅಲನ್ ಬೆನ್ನೆಟ್, A S ಬ್ಯಾಟ್, ಮತ್ತು ಬಾರ್ಬರಾ ಟೈಲರ್ ಬ್ರಾಡ್‌ಫೋರ್ಡ್ ಪ್ರಮುಖ ಉದಾಹರಣೆಗಳು.[೯೭][೯೮] ಟೈಲರ್ ಬ್ರಾಡ್‌ಫೋರ್ಡ್ ಎ ವುಮನ್ ಆಫ್ ಸಬ್‌ಸ್ಟೇನ್ಸ್ ‌ ಕಾದಂಬರಿಯಿಂದ ಹೆಸರು ಪಡೆದಿದ್ದು, ಇದು ಇತಿಹಾಸದಲ್ಲಿ ಅತ್ಯುತ್ತಮ ಮಾರಾಟದ ಕಾದಂಬರಿಗಳ ಅಗ್ರ ಹತ್ತು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಪಡೆದಿದೆ.[೯೯] ಇನ್ನೊಬ್ಬ ಪ್ರಖ್ಯಾತ ಲೇಖಕ ಮಕ್ಕಳ ಕತೆಗಾರ ಆರ್ಥರ್ ರಾನ್‌ಸಮ್ ಆಗಿದ್ದು, ಸ್ವಾಲೋಸ್ ಮತ್ತು ಅಮೆಜಾನ್ಸ್ ಸರಣಿಯನ್ನು ಬರೆದಿದ್ದಾರೆ.[೯೮] ಜೇಮ್ಸ್ ಹೆರಿಯಟ್, ತಮ್ಮ ಪುಸ್ತಕಗಳ ಅತ್ಯುತ್ತಮ ಮಾರಾಟವಾಗುವ ೬೦ಲಕ್ಷಕ್ಕೂ ಹೆಚ್ಚು ಪ್ರತಿಗಳ ಲೇಖಕ ಉತ್ತರ ಯಾರ್ಕ್‌ಷೈರ್ ತಿರ್ಸ್ಕ್‌ನಲ್ಲಿ ಪಶುವೈದ್ಯನಾಗಿ ಅವರ ಸುಮಾರು ೫೦ ವರ್ಷಗಳ ಅನುಭವಗಳ ಬಗ್ಗೆ ಬರೆದಿದ್ದಾರೆ. ಅವರ ಪುಸ್ತಕಗಳಲ್ಲಿ ಈ ಪಟ್ಟಣವನ್ನು ಡಾರೊಬೈ ಎಂದು ಉಲ್ಲೇಖಿಸಿದ್ದಾರೆ.[೧೦೦](ಸಂಡರ್‌ಲ್ಯಾಂಡ್‌ನಲ್ಲಿ ಹುಟ್ಟಿದ್ದರೂ)ಅವರ ಸುಲಭವಾದ ಓದುವ ಶೈಲಿ ಮತ್ತು ಆಸಕ್ತಿದಾಯಕ ಪಾತ್ರಗಳಿಂದ ಮೆಚ್ಚುಗೆ ಗಳಿಸಿದ್ದಾರೆ.[೧೦೧] ಕವಿಗಳಲ್ಲಿ ಟೆಡ್ ಹಗೆಸ್, W. H.ಆಡನ್, ವಿಲಿಯಂ ಎಂಪ್ಸನ್ ಮತ್ತು ಆಂಡ್ರಿವ್ ಮಾರ್ವೆಲ್ಸೇರಿದ್ದಾರೆ.[೯೮][೧೦೨][೧೦೩] ೨೦ನೇ ಶತಮಾನದಲ್ಲಿ ಇಬ್ಬರು ಪ್ರಖ್ಯಾತ ಶಿಲ್ಪಿಗಳು ಹೊಮ್ಮಿದರು. ಸಮಕಾಲೀನರಾದ ಹೆನ್ರಿ ಮೂರ್ ಮತ್ತು ಬಾರ್ಬರಾ ಹೆಪ್‌ವರ್ತ್. ಅವರ ಕೆಲವು ಶಿಲ್ಪಗಳು ಯಾರ್ಕ್‌ಷೈರ್ ಸ್ಕಲ್ಪ್‌ಚರ್ ಪಾರ್ಕ್‌ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿದೆ.[೧೦೪] ಯಾರ್ಕ್‌ಷೈರ್‌ನಲ್ಲಿ ವ್ಯಾಪಕ ಸಂಗ್ರಹಗಳ ಅನೇಕ ಕಲಾ ಗ್ಯಾಲರಿಗಳಿವೆ. ಅವುಗಳಲ್ಲಿ ಫೆರೆನ್ಸ್ ಕಲಾ ಗ್ಯಾಲರಿ, ಲೀಡ್ಸ್ ಕಲಾ ಗ್ಯಾಲರಿ, ಮಿಲೇನಿಯಂ ಗ್ಯಾಲರಿಗಳು ಮತ್ತು ಯಾರ್ಕ್ ಕಲಾ ಗ್ಯಾಲರಿ ಸೇರಿವೆ.[೧೦೫][೧೦೬][೧೦೭] ಕೆಲವು ಅತ್ಯುತ್ತಮ ಹೆಸರಿನ ಸ್ಥಳೀಯ ವರ್ಣಚಿತ್ರಕಾರರು ವಿಲಿಯಂ ಎಟ್ಟಿಮತ್ತು ಡೇವಿಡ್ ಹಾಕ್ನಿ;[೧೦೮] ಹಾಕ್ನಿಯ ಅನೇಕ ಕಲಾಕೃತಿಗಳನ್ನು ಸಾಲ್ಟೇರ್‌ನ ಸಾಲ್ಟ್ಸ್‌ಮಿಲ್ ೧೮೫೩ ಗ್ಯಾಲರಿಯಲ್ಲಿ ಇರಿಸಲಾಗಿದೆ.[೧೦೯]

ಕ್ರೀಡೆ

ಚಿತ್ರ:Sheffield FC.svg
ವಿಶ್ವದ ಅತೀ ಹಳೆದ ಫುಟ್ಬಾಲ್ ಕ್ಲಬ್ ಶೆಫೀಲ್ಡ್ FC ಯ ಬಿಲ್ಲೆ

ಯಾರ್ಕ್‌ಷೈರ್ ಕ್ರೀಡಾ ಕ್ಷೇತ್ರದ ಸುದೀರ್ಘ ಪರಂಪರೆಯನ್ನು ಹೊಂದಿದೆ. ಫುಟ್ಬಾಲ್, ರಗ್ಬಿ ಲೀಗ್, ಕ್ರಿಕೆಟ್ ಮತ್ತು ಕುದುರೆ ರೇಸ್ನಲ್ಲಿ ಭಾಗವಹಿಸುವುದು ಅತ್ಯಂತ ಸುಸ್ಥಿರ ಕ್ರೀಡಾ ಸಾಹಸಗಳಲ್ಲಿ ಸೇರಿವೆ.[೧೧೦][೧೧೧][೧೧೨][೧೧೩] ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಸ್ಥಳೀಯ ಪ್ರಥಮ ದರ್ಜೆ ಕ್ರಿಕೆಟ್ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಕೌಂಟಿಯನ್ನು ಪ್ರತಿನಿಧಿಸುತ್ತದೆ. ಒಟ್ಟು ೩೦ ಚಾಂಪಿಯನ್‌ಷಿಪ್ ಟೈಟಲ್‌ಗಳೊಂದಿಗೆ, ಯಾವುದೇ ಕೌಂಟಿಗಿಂತ ೧೨ಕ್ಕಿಂತ ಹೆಚ್ಚು ಟೈಟಲ್‌ಗಳೊಂದಿಗೆ, ಯಾರ್ಕ್‌ಷೈರ್ ಅತ್ಯಂತ ಬಿರುದಾಂಕಿತ ಕೌಂಟಿ ಕ್ರಿಕೆಟ್ ಕ್ಲಬ್ ಎನಿಸಿದೆ.[೧೧೨][೧೧೪] ಕ್ರಿಕೆಟ್‌ನಲ್ಲಿ ಅತ್ಯಂತ ಮನ್ನಣೆಯ ವ್ಯಕ್ತಿಗಳು ಕೌಂಟಿಯಲ್ಲಿ ಜನಿಸಿದ್ದಾರೆ. ಅವರಲ್ಲಿ ಜೆಫ್ ಬಾಯ್ಕಾಟ್, ಲೆನ್ ಹಟ್ಟನ್ ಮತ್ತು ಹರ್ಬರ್ಟ್ ಸಟ್‌ಕ್ಲಿಫ್ ಸೇರಿದ್ದಾರೆ.[೧೧೪] ಇಂಗ್ಲೆಂಡ್‌ನ ಅತೀ ಹಳೆಯ ಕುದುರೆ ಪಂದ್ಯ ೧೫೧೯ರಲ್ಲಿ ಆರಂಭವಾಗಿದ್ದು, ಮಾರ್ಕೆಟ್ ವೇಟನ್ ಬಳಿ ಕಿಪ್ಲಿಂಗ್‌ಕೋಟ್ಸ್‌ನಲ್ಲಿ ಪ್ರತಿ ವರ್ಷ ನಿರ್ವಹಿಸಲಾಗುತ್ತದೆ.[೧೧೩] ಕುದುರೆ ರೇಸ್ ಕ್ಷೇತ್ರದಲ್ಲಿ ಈ ಸಂಪ್ರದಾಯವನ್ನು ಮುಂದುವರಿಸುತ್ತಾ, ಪ್ರಸಕ್ತ ಒಂಭತ್ತು ಸ್ಥಿರವಾಗಿ ಸ್ಥಾಪಿತವಾದ ರೇಸ್‌ಕೋರ್ಸ್‌ಗಳು ಕೌಂಟಿಯಲ್ಲಿವೆ.[೧೧೫] ಬ್ರಿಟನ್ ಅತೀ ಹಳೆಯ ಸಂಘಟಿತ ನರಿ ಬೇಟೆ ಬಿಲ್ಸ್‌ಡೇಲ್ ಆಗಿದ್ದು, ಮೂಲತಃ ೧೬೬೮ರಲ್ಲಿ ಸ್ಥಾಪಿತವಾಯಿತು.[೧೧೬][೧೧೭] ಯಾರ್ಕ್‌ಷೈರ್ ಅಧಿಕೃತವಾಗಿ ಕ್ಲಬ್ ಫುಟ್ಬಾಲ್ ಹುಟ್ಟಿದ ಸ್ಥಳವಾಗಿ FIFAದಿಂದ ಮಾನ್ಯತೆ ಗಳಿಸಿದೆ.,[೧೧೮][೧೧೯]. ೧೮೫೭ರಲ್ಲಿ ಸ್ಥಾಪಿತವಾದ ಶೆಫೀಲ್ಡ್ FC ವಿಶ್ವದಲ್ಲೇ ಅತೀ ಹಳೆಯ ಅಸೋಸಿಯೇಷನ್ ಫುಟ್ಬಾಲ್ ಕ್ಲಬ್ ಎಂದು ಪ್ರಮಾಣೀಕರಿಸಲಾಗಿದೆ.[೧೨೦] ವಿಶ್ವದ ಪ್ರಥಮ ಅಂತರ ಕ್ಲಬ್ ಪಂದ್ಯ ಮತ್ತು ಸ್ಥಳೀಯ ಡರ್ಬಿಯನ್ನು ವಿಶ್ವದ ಅತ್ಯಂತ ಹಳೆಯ ಮೈದಾನ ಸ್ಯಾಂಡಿಗೇಟ್ ರಸ್ತೆಯಲ್ಲಿ ಆಡಲಾಗುತ್ತದೆ.[೧೨೧] ಈಗ ಜಗತ್ತಿನಾದ್ಯಂತ ಬಳಸುತ್ತಿರುವ ಆಟದ ನಿಯಮಗಳನ್ನು ಹರ್ಲ್‌ನ ಎಬೆನೆಜೆರ್ ಕಾಬ್ ಮಾರ್ಲಿ ರೂಪಿಸಿದ್ದಾರೆ.[೧೨೨]

ಯಾರ್ಕ್‌ಷೈರ್‌ನಲ್ಲಿ ಸ್ಥಾಪಿತವಾದ ಅತ್ಯಂತ ಯಶಸ್ವಿ ಫುಟ್ಬಾಲ್ ಕ್ಲಬ್‌ಗಳು ಬಾರ್ನ್‌ಸ್ಲೇ, ಬ್ರಾಡ್‌ಫೋರ್ಡ್ ಸಿಟಿ, ಡಾನ್‌ಕ್ಯಾಸ್ಟರ್ ರೋವರ್ಸ್, ಹಡರ್ಸ್‌ಫೀಲ್ಡ್ ಟೌನ್, ಹಲ್ ಸಿಟಿ, ಲೀಡ್ಸ್ ಯುನೈಟೆಡ್, ಮಿಡಲ್‌ಬರೊ, ಶೆಫೀಲ್ಡ್ ಯುನೈಟೆಡ್ ಮತ್ತುಶೆಫೀಲ್ಡ್ ವೆಡ್‌ನೆಸ್‌ಡೇ,[೧೨೩] ಅವುಗಳಲ್ಲಿ ನಾಲ್ಕು ಲೀಗ್ ಚಾಂಪಿಯನ್‌ಗಳಾಗಿದ್ದು, ಹಡರ್ಸ್‌ಫೀಲ್ಡ್ ಮೂರು ಸತತ ಲೀಗ್ ಪ್ರಶಸ್ತಿಗಳನ್ನು ಗೆದ್ದ ಪ್ರಥಮ ಕ್ಲಬ್ ಎನಿಸಿದೆ.[೧೨೪] ಮಿಡಲ್ಸ್‌ಬ್ರೊ F.Cಇತ್ತೀಚೆಗೆ ೨೦೦೬ರ UEFA ಕಪ್ ಫೈನಲ್[೧೨೫] ತಲುಪುವ ಮೂಲಕ[೧೨೫] ಮತ್ತು ೨೦೦೪ರ ಲೀಗ್ ಕಪ್ ಗೆಲ್ಲುವ ಮೂಲಕ ಪ್ರಾಮುಖ್ಯತೆ ಗಳಿಸಿತು.[೧೨೬] ಆಟದ ಮೇಲೆ ಪರಿಣಾಮ ಬೀರಿದ ಯಾರ್ಕ್‌ಷೈರ್ ಹೆಸರಾಂತ ಆಟಗಾರರು ವಿಶ್ವ ಕಪ್-ವಿಜೇತ ಗೋಲುರಕ್ಷಕ ಗಾರ್ಡನ್ ಬ್ಯಾಂಕ್ಸ್[೧೨೭] ಮತ್ತು ಎರಡು ಬಾರಿಯವರ್ಷದ ಐರೋಪ್ಯ ಫುಟ್ಬಾಲ್ ಆಟಗಾರ ಪ್ರಶಸ್ತಿ ವಿಜೇತ ಕೆವಿನ್ ಕೀಗನ್,[೧೨೮] ಮತ್ತು ಪ್ರಮುಖ ಮ್ಯಾನೇಜರುಗಳಾದ ಹರ್ಬರ್ಟ್ ಚ್ಯಾಪ್‌ಮನ್, ಬ್ರಿಯಾನ್ ಕ್ಲೋಗ್, ಬಿಲ್ ನಿಕಲ್‌ಸನ್, ಜಾರ್ಜ್ ರೇನರ್ ಮತ್ತುಡಾನ್ ರೆವಿ ಒಳಗೊಂಡಿದ್ದಾರೆ.[೧೨೯]

The ರಗ್ಬಿ ಫುಟ್ಬಾಲ್ ಲೀಗ್ ಮತ್ತು ಅದರ ಜತೆಗೆ ರಗ್ಬಿ ಲೀಗ್ಕ್ರೀಡೆಯನ್ನು ೧೮೯೫ರಲ್ಲಿ ಹಡ್ಡರ್ಸ್‌ಫೀಲ್ಡ್ ಜಾರ್ಜ್ ಹೊಟೆಲ್‌lನಲ್ಲಿ ಸ್ಥಾಪಿಸಲಾಯಿತು. ರಗ್ಬಿ ಫುಟ್ಬಾಲ್ ಯೂನಿಯನ್‌ನಲ್ಲಿ ಉತ್ತರ-ದಕ್ಷಿಣ ಒಡಕಿನ ನಂತರ ಸ್ಥಾಪನೆಯಾಯಿತು.[೧೩೦] ಉನ್ನತ ಲೀಗ್ ಸೂಪರ್ ಲೀಗ್ ಆಗಿದ್ದು, ಅತ್ಯಂತ ಬಿರುದಾಂಕಿತ ಯಾರ್ಕ್‌ಷೈರ್ ಕ್ಲಬ್‌ಗಳು ಹಡ್ಡರ್ಸ್‌ಫೀಲ್ಡ್ ಜೈಂಟ್ಸ್, ಹಲ್ FC, ಬ್ರಾಡ್‌ಫೋರ್ಡ್ ಬುಲ್ಸ್, ಹಲ್ KR, ವೇಕ್‌ಫೀಲ್ಡ್ ಟ್ರಿನಿಟಿ ವೈಲ್ಡ್‌ಕ್ಯಾಟ್ಸ್, ಕ್ಯಾಸಲ್‌ಫೋರ್ಡ್ ಟೈಗರ್ಸ್ ಮತ್ತು ಲೀಡ್ಸ್ ರೈನೋಸ್.[೧೩೧] ಒಟ್ಟು ೬ ಯಾರ್ಕ್‌ಷೈರ್‌ ಮಂದಿಯನ್ನು ರಗ್ಬಿ ಲೀಗ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದೆ. ಅವರಲ್ಲಿ ರೋಜರ್ ಮಿಲ್‌ವಾರ್ಡ್, ಜಾಂಟಿ ಪಾರ್ಕಿನ್ ಮತ್ತು ಹೆರಾಲ್ಡ್ ವಾಗ್‌ಸ್ಟಾಫ್ಸೇರಿದ್ದಾರೆ.[೧೩೨] ಬಾಕ್ಸಿಂಗ್ ಕ್ಷೇತ್ರದಲ್ಲಿ ಶೆಫೀಲ್ಡ್‌ನ "ಪ್ರಿನ್ಸ್" ನಸೀಂ ಹಮೆದ್ ಯಶಸ್ಸು ಮತ್ತು ವ್ಯಾಪಕ ಖ್ಯಾತಿಯನ್ನು ಸಾಧಿಸಿದ್ದಾರೆ.[೧೩೩] ಅದನ್ನು ಬ್ರಿಟಿಷ್ ಬಾಕ್ಸಿಂಗ್‌ನ ಅತ್ಯಂತ ಹೆಸರಾಂತ ವೃತ್ತಿಜೀವನಗಳು ಎಂದು BBC ವರ್ಣಿಸಿದೆ.[೧೩೩] ಯಾರ್ಕ್‌ಷೈರ್ ರೇಸ್‌ಕೋರ್ಸ್‌ಗಳ ಶ್ರೇಣಿಯನ್ನು ಕೂಡ ಹೊಂದಿದೆ. ಉತ್ತರ ಯಾರ್ಕ್‌ಷೈರ್‌ನಲ್ಲಿ, ಕ್ಯಾಟೆರಿಕ್, ರೆಡ್‌ಕಾರ್, ರೈಪನ್, ತಿರ್ಸ್ಕ್ ಮತ್ತು ಯಾರ್ಕ್ ಈಸ್ಟ್ ರೈಡಿಂಗ್ ಆಫ್ ಯಾರ್ಕ್‌ಷೈರ್‌ನಲ್ಲಿ ಬೆವರ್ಲಿ,ವೆಸ್ಟ್ ಯಾರ್ಕ್‌ಷೈರ್‌ನಲ್ಲಿ ಪಾಂಟೆಫ್ರಾಕ್ಟ್ ಮತ್ತು ವೆದರ್‌ಬೈ, ದಕ್ಷಿಣ ಯಾರ್ಕ್‌ಷೈರ್‌ನಲ್ಲಿ ಡಾನ್‌ಕಾಸ್ಟರ್.

ನರ್ ಮತ್ತು ಸ್ಪೆಲ್‌ನ ಕ್ರೀಡೆಯು ಈ ಪ್ರದೇಶಕ್ಕೆ ವಿಶಿಷ್ಠವಾಗಿದ್ದು, ೧೮ ಮತ್ತು ೧೯ನೇ ಶತಮಾನಗಳಲ್ಲಿ ಅಕ್ಷರಶಃ ಅಸ್ಪಷ್ಟತೆಯಿಂದಾಗಿ ೨೦ನೇ ಶತಮಾನದಲ್ಲಿ ಅವನತಿ ಹೊಂದುವ ಮುನ್ನ ಆ ಪ್ರದೇಶದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿತ್ತು.[೧೩೪][೧೩೫][೧೩೬]

ಪಾಕಪದ್ಧತಿ

ಸಾಂಪ್ರದಾಯಿಕ ಸಂಡೇ ರೋಸ್ಟ್ ಭಾಗವಾಗಿ ಬಡಿಸುವ ಯಾರ್ಕ್‌ಷೈರ್ ಕಡುಬುಗಳು

ಯಾರ್ಕ್‌ಷೈರ್‌ನ ಸಾಂಪ್ರದಾಯಿಕ ಪಾಕಪದ್ಧತಿಯು, ನಾರ್ತ್ ಆಫ್ ಇಂಗ್ಲೆಂಡ್‌ಗೆ ಸಮಾನವಾಗಿ, ವಿಶೇಷವಾಗಿ ಸಿಹಿ ತಿಂಡಿಗಳಿಗೆ ಸಂಬಂಧಿಸಿದಂತೆ ಸಮೃದ್ಧ ರುಚಿಯ ಪದಾರ್ಥಗಳನ್ನು ಬಳಸುವುದಕ್ಕೆ ಹೆಸರಾಗಿದೆ. ಅವು ಬಹುತೇಕ ಜನರಿಗೆ ಕೈಗೆಟಕುವಂತದ್ದಾಗಿದೆ.[೧೩೭] ಯಾರ್ಕ್‌ಷೈರ್‌ ಮೂಲದ ಅಥವಾ ಅದರೊಂದಿಗೆ ಹೆಚ್ಚಾಗಿ ಸಂಬಂಧ ಹೊಂದಿದ ಅನೇಕ ತಿನಿಸುಗಳಿವೆ.[೧೩೭] ಯಾರ್ಕ್‌ಷೈರ್ ಪಡ್ಡಿಂಗ್, ರುಚಿಕರವಾದ ಅರೆದ್ರವ ಮಿಶ್ರಣವಾಗಿದ್ದು, ಯಾರ್ಕ್‌ಷೈರ್ ಆಹಾರಗಳಲ್ಲಿ ಇದುವರೆಗೆ ಅತ್ಯಂತ ಹೆಸರು ಪಡೆದಿದೆ ಮತ್ತು ಇಂಗ್ಲೆಂಡ್‌ನಾದ್ಯಂತ ಸೇವಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಹುರಿದ ದನದ ಮಾಂಸ ಮತ್ತು ತರಕಾರಿಗಳೊಂದಿಗೆ ಬಡಿಸಲಾಗುತ್ತದೆ ಮತ್ತು ಇದು ಸಂಡೆ ರೋಸ್ಟ್ ಭಾಗವಾಗಿದೆ.[೧೩೭]

ಕೌಂಟಿಯೊಂದಿಗೆ ಸಂಬಂಧಿಸಿದ ಇತರ ಆಹಾರಗಳು ಯಾರ್ಕ್‌ಷೈರ್ ಮೊಸರಿನ ಕಡುಬು, ರೋಸ್‌ವಾಟ‌ರ್‌ನೊಂದಿಗೆ ಮೊಸರಿನ ಕಡುಬಿನ ಭಕ್ಷ್ಯ,[೧೩೮] [೧] ಸಿಹಿ ಶುಂಠಿ ಕೇಕ್ ಪಾರ್ಕಿನ್,ಇದು ಸಾಮಾನ್ಯ ಶುಂಠಿ ಕೇಕ್‌ಗಳಿಗಿಂತ ಭಿನ್ನವಾಗಿದ್ದು, ಅದರಲ್ಲಿ ಓಟ್ ಧಾನ್ಯದ ಹಿಟ್ಟು ಮತ್ತು ಕಾಕಂಬಿ ಒಳಗೊಂಡಿದೆ[೧೩೯] ಮತ್ತು ವೆನ್‌ಸ್ಲೇಯ್‌ಡೇಲ್ ಗಿಣ್ಣು, ವೆನ್‌ಸ್ಲೇಯ್‌ಡೇಲ್‌ ಜತೆ ಸಂಬಂಧ ಹೊಂದಿದ ಗಿಣ್ಣಾಗಿದ್ದು, ಸಾಮಾನ್ಯವಾಗಿ ಸಿಹಿ ತಿಂಡಿಗಳಿಗೆ ಜತೆಯಾಗಿ ಸೇವಿಸಲಾಗುತ್ತದೆ.[೧೪೦] ಪಾನೀಯ ಶುಂಠಿ ಬಿಯರ್, ಶುಂಠಿಯ ಸುವಾಸನೆಯಿಂದ ಕೂಡಿದೆ ಹಾಗು ಯಾರ್ಕ್‌ಷೈರ್ ಮೂಲದ್ದಾಗಿದ್ದು, ೧೮ನೇ ಶತಮಾನದವರೆಗೆ ಅಸ್ತಿತ್ವದಲ್ಲಿತ್ತು.[ಸೂಕ್ತ ಉಲ್ಲೇಖನ ಬೇಕು] ಲಿಕ್ವೋರೈಸ್ ಸಿಹಿಯನ್ನು ಪಾಂಟೆ‌ಫ್ರಾಕ್ಟ್‌ನ ಜಾರ್ಜ್ ಡನ್‌ಹಿಲ್ ಮೊದಲಿಗೆ ಸೃಷ್ಟಿಸಿದ.೧೭೬೦ರ ದಶಕದಲ್ಲಿ ಸಕ್ಕರೆಯ ಜತೆ ಲಿಕ್ವೋರೈಸ್ ಸಸಿಯನ್ನು ಮಿಶ್ರಣ ಮಾಡಿದನೆಂದು ಭಾವಿಸಲಾಗಿದೆ.[೧೪೧] ಯಾರ್ಕ್‌ಷೈರ್ ವಿಶೇಷವಾಗಿ ಯಾರ್ಕ್ ನಗರವು ಮಿಠಾಯಿ ತಯಾರಿಸುವ ಕೈಗಾರಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ರೌನ್‌ಟ್ರೀಸ್, ಟೆರೀಸ್ ಮತ್ತು ಥಾರ್ನ್‌ಟನ್ಸ್ ಮುಂತಾದ ಕಂಪೆನಿಗಳ ಮಾಲೀಕತ್ವದ ಚಾಕೊಲೇಟ್ ಕೈಗಾರಿಕೆಗಳು ಬ್ರಿಟನ್‌ನ ಅನೇಕ ಜನಪ್ರಿಯ ಸಿಹಿಗಳನ್ನು ಸೃಷ್ಟಿಸಿವೆ.[೧೪೨][೧೪೩] ಇನ್ನೊಂದು ಸಾಂಪ್ರದಾಯಿಕ ಯಾರ್ಕ್‌ಷೈರ್ ಆಹಾರ ಪಿಕೆಲೆಟ್(ತೆಳು ಮೃದು ರೊಟ್ಟಿ). ಇದು ಕ್ರಂಪೆಟ್‌‌ಗಳನ್ನು ಹೋಲುತ್ತಿದ್ದರೂ, ಅತಿಯಾಗಿ ತೆಳುವಾಗಿದೆ.[೧೪೪] ರೂಬಾರ್ಬ್ ಟ್ರಯಾಂಗಲ್ ಯಾರ್ಕ್‌ಷೈರ್‌ನಲ್ಲಿರುವ ಸ್ಥಳವಾಗಿದ್ದು, ಅದು ಸ್ಥಳೀಯರಿಗೆ ಬಹುಮಟ್ಟಿನ ರೂಬಾರ್ಬ್‌ ಪೂರೈಕೆ ಮಾಡುತ್ತದೆ.

ಇತ್ತೀಚಿನ ವರ್ಷಗಳಲ್ಲಿ ವಲಸೆಯಿಂದ ಮತ್ತು ಏಷ್ಯದ ಕುಟುಂಬಗಳ ಯಶಸ್ವಿ ಏಕತೆಯಿಂದ ಕರಿಗಳು(ಮಸಾಲೆ ಮಿಶ್ರಣ) ಕೌಂಟಿಯಲ್ಲಿ ಜನಪ್ರಿಯತೆ ಗಳಿಸಿದೆ. ಅಲ್ಲಿ ಅನೇಕ ಪ್ರಖ್ಯಾತ ಕರಿ ಸಾಮ್ರಾಜ್ಯಗಳು ಯಾರ್ಕ್‌ಷೈರ್ ಮೂಲಗಳನ್ನು ಹೊಂದಿದೆ. ಅದರಲ್ಲಿ ಕ್ಲೆಕ್‌ಹೀಟನ್‌ನಲ್ಲಿರುವ ೮೪೦ ಆಸನದ ಆಕಾಶ್ ರೆಸ್ಟೊರೆಂಟ್ ಕೂಡ ಸೇರಿದೆ. ಇದನ್ನು "ವಿಶ್ವದ ಅತೀ ದೊಡ್ಡ ಕರಿ ಹೌಸ್" ಎಂದು ಬಣ್ಣಿಸಲಾಗಿದೆ.[೧೪೫]

ಬೀರ್ ಮತ್ತು ಮದ್ಯ ತಯಾರಿಕೆ

ಯಾರ್ಕ್‌ಷೈರ್ ನಲ್ಲಿ ಅಸಂಖ್ಯಾತ ಮದ್ಯಸಾರ ತಯಾರಿಕೆಯ ಘಟಕಗಳಿವೆ,ಅವುಗಳಲ್ಲಿ ಪ್ರಮುಖವಾದುವೆಂದರೆ, ಬ್ಲ್ಯಾಕ್ ಶೀಪ್ , ಕಾಪರ್ ಡ್ರ್ಯಾಗನ್ , ಕ್ರಾಂಪ್ಟನ್ ಬ್ರಿವರಿ, ಜಾನ್ ಸ್ಮಿತ್ಸ್, ಸ್ಯಾಮ್ ಸ್ಮಿತ್ಸ್, ಟೆಟ್ಲೆಯ್ಸ್, ಕೆಲ್ಹಮ್ ಐಲ್ಯಾಂಡ್ ಬ್ರಿವರಿ, ಥೀಕ್ ಸ್ಟೊನ್ಸ್ ಮತ್ತು ತಿಮೊತಿ ಟೇಲರ್.[೧೪೬] ಇಲ್ಲಿ ದೊರೆವ ಬೀರ್ ಶೈಲಿಯನ್ನು ಗಮನಿಸಿದರೆ, ಈ ಚಿಕ್ಕ ದ್ವೀಪದಲ್ಲಿ ಇದು ಕಹಿ ರುಚಿ ಪಡೆದಿದೆ ಎಂದು ಹೇಳಬಹುದು.[೧೪೭] ಉತ್ತರ ಇಂಗ್ಲೆಂಡ್ ನಲ್ಲಿ ಎಲ್ಲೆಡೆ ದೊರೆಯುವ ಇದನ್ನು ಕೈಪಂಪ್ ಮೂಲಕ ಸರಬರಾಜು ಮಾಡಲಾಗುತ್ತದೆ.ಇದಕ್ಕೊಂದು ಹೊಳಪು ನೀಡಲು ಇದನ್ನು ಅತ್ಯಧಿಕ ನೊರೆ ಬರುವ ಹಾಗೆ ಮಾರ್ಪಡಿಸಿರುವುದು ಸ್ವಾಭಾವಿಕವಾಗಿದೆ.[೧೪೮]

ಮದ್ಯ ತಯಾರಿಕೆ ಪ್ರಕ್ರಿಯೆಯು ೧೨ ನೆಯ ಶತಮಾನದಿಂದಲೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತೆಂದು ಹೇಳಲಾಗುತ್ತಿದೆ.ಸದ್ಯ ಉದಾಹರಣೆಗೆ ಪರಿತ್ಯಕ್ತ ಸ್ಥಳವೆನಿಸಿದ ಫೌಂಟೇನ್ಸ್ ಅಬೆಯ್ ನಲ್ಲಿ ಸುಮಾರು ಹತ್ತು ದಿನಗಳಿಗೊಮ್ಮೆ ಅತ್ಯಧಿಕ ಎಂದರೆ ೬೦ ಬ್ಯಾರಲ್ ಗಳಷ್ಟು ಮದ್ಯಸಾರವನ್ನು ಮೊಳೆತ ಪ್ರಬಲ ಬಾರ್ಲಿ ಕಿಣ್ವಗಳಿಂದ ತಯಾರಿಸಲಾಗುತ್ತಿತ್ತು.[೧೪೯] ಸದ್ಯದ ಬಹುತೇಕ ಯಾರ್ಕ್‌ಷೈರ್ ಬ್ರಿವರಿಗಳು ಆರಂಭಿಕ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಸ್ಥಾಪನೆಯಾದವು.ಅಂದರೆ ಹದಿನೆಂಟನೆಯ ಶತಮಾನದ ಅಂತ್ಯಕ್ಕೆ ಅಥವಾ ೧೯ನೆಯ ಶತಮಾನದ ಆರಂಭದಲ್ಲಿ ಪ್ರಾರಂಭವಾದವು.[೧೪೬]

ಸಂಗೀತ ಮತ್ತು ಚಲನಚಿತ್ರ

೨೦೦೫ರ ವೇದಿಕೆಯಲ್ಲಿ ಕೇಟ್ ರಸ್ಬಿ

ಯಾರ್ಕ್‌ಷೈರ್ ಪರಂಪರೆಯಲ್ಲಿ ಸಾಮಾನ್ಯವಾಗಿ ಅಲ್ಲಿನ ಅತ್ಯಂತ ಶ್ರೀಮಂತ ಜಾನಪದ ಸಂಗೀತ ಮತ್ತು ಜಾನಪದ ನೃತ್ಯಗಳು ಹಾಸುಹೊಕ್ಕಾಗಿವೆ.ಅದರಲ್ಲೂ ವೈಶಿಷ್ಟ್ಯಪೂರ್ಣವಾದ ಲಾಂಗ್ ಸೊರ್ಡ್ ಡಾನ್ಸ್ ತುಂಬಾ ಖ್ಯಾತಿ ಪಡೆದಿದೆ.[೧೫೦] ಯಾರ್ಕ್‌ಷೈರ್ ನಲ್ಲಿ ಮುಖ್ಯವಾಗಿ ಅಲ್ಲಿನ ಹಾಡುಗಳನ್ನು ಅದರಲ್ಲಿ ಬಳಸುವ ಸಂಭಾಷಣಾ ಸಾಹಿತ್ಯದ ಮೇಲೆ ವಿಂಗಡಿಸಿ ಗುರುತಿಸಲಾಗುತ್ತದೆ.ಅದರಲ್ಲೂ ವೆಸ್ಟ್ ರೈಡಿಂಗ್ ನಲ್ಲಿ ಮತ್ತು 'ಆನ್ ಇಲ್ ಕಲಾ ಮೂರ್ ಬಹತ್ 'ಅತ್ ಹಾಡಿನಲ್ಲಿ ಈ ತೆರನಾದ ಜನಪದೀಯ ಸಾಹಿತ್ಯಕ್ಕೆ ಕೆಂಟ್ ರಾಗ ಸಂಯೋಜನೆ ಮಾಡಲಾಗುತ್ತದೆ.(ಇದನ್ನು ಬಹುತೇಕವಾಗಿ ಮೆಥಾಡಿಸ್ಟ್ ಹಿಮ್ನಲ್ ಪದ್ಯಗಳಿಂದ ಆಯ್ದುಕೊಳ್ಳಲಾಗಿದೆ.)ಆದರಿದು ಅನಧಿಕೃತ ಯಾರ್ಕ್‌ಷೈರ್ ನಾಡಗೀತೆ ಎಂದೂ ಹೇಳಲಾಗುತ್ತದೆ.[೧೫೧] ಈ ಚಿಕ್ಕ ದ್ವೀಪದಲ್ಲಿ ಪ್ರಸಿದ್ದ ಸಂಗೀತಗಾರರೆಂದರೆ ಹಲ್ ನಲ್ಲಿನ ವಾಟರ್ ಸನ್ಸ್,ಇವರು ಯಾರ್ಕ್‌ಷೈರ್ ನ ಜಾನಪದ ಕಥನ ಭಾಷಾಂತರಗಳ ಜಾನಪದ ಹಾಡುಗಳನ್ನು ೧೯೬೫ ರಿಂದ ಧ್ವನಿ ಮುದ್ರಿಸಲು ಆರಂಭಿಸಿದರು.[೧೫೨] ಯಾರ್ಕ್‌ಷೈರ್ ನ ಇನ್ನುಳಿದ ಜಾನಪದ ಸಂಗೀತಗಾರರೆಂದರೆ ಯಂಗ್ ಟ್ರೆಡಿಶನ್ ನ ಹೀದರ್ ವುಡ್ (ಜನನ ೧೯೪೫); ಮಿಕ್ಕುಳಿದ ಅತ್ಯಂತ ಚುರುಕಿನ ಜಾನಪದ ಗುಂಪುಗಳೆಂದರೆ ಮಿ.ಫಾಕ್ಸ್ (೧೯೭೦–೨),ದಿ ಡೈಟಾನ್ ಫೆಮಿಲಿ,ಜೂಲಿ ಮ್ಯಾಥಿವ್ಸ್,ಕತ್ರಿನ್ ರಾಬರ್ಟ್ಸ್ ಮತ್ತು ಕಾಟೆ ರಸ್ಬಿ ಇದ್ದರೂ ಅಲ್ಪಕಾಲದ್ದವಾಗಿದ್ದವು.[೧೫೨] ಯಾರ್ಕ್‌ಷೈರ್ ನಲ್ಲಿ ಜಾನಪದ ಸಂಗೀತ ಸಂಸ್ಕೃತಿಯು ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ.ಇಲ್ಲಿ ಸುಮಾರು ನಲ್ವತ್ತಕ್ಕಿಂತ ಹೆಚ್ಚು ಫೋಕ್ ಕ್ಲಬ್ಸ್ ಅಸ್ತಿತ್ವದಲ್ಲಿವೆ.ಅಲ್ಲದೇ ಮೂವತ್ತು ವಾರ್ಷಿಕ ಜಾನಪದ ಸಂಗೀತ ಉತ್ಸವಗಳು ನಡೆಯುತ್ತವೆ.[೧೫೩] ಹೀಗೆ ೨೦೦೭ ರಲ್ಲಿ ದಿ ಯಾರ್ಕ್‌ಷೈರ್ ಗಾರ್ಲ್ಯಾಂಡ್ ಗ್ರುಪ್ ವೊಂದನ್ನು ಹುಟ್ಟು ಹಾಕಲಾಯಿತು.ಇದರ ಮೂಲಕ ಯಾರ್ಕ್‌ಷೈರ್ ಜಾನಪದ ಹಾಡುಗಳನ್ನು ಆನ್ ಲೈನ್ ಮೂಲಕ ಮತ್ತು ಶಾಲೆಗಳಲ್ಲಿ ಸುಲಭವಾಗಿ ದೊರೆಯುವಂತೆ ಮಾಡಲಾಯಿತು.[೧೫೪]

ಶಾಸ್ತ್ರೀಯ ಸಂಗೀತ ಲೋಕದಲ್ಲಿ, ಯಾರ್ಕ್‌ಷೈರ್ ನಲ್ಲಿ ಅತ್ಯಂತ ಪ್ರಮುಖರಾದವರಲ್ಲಿ ಫ್ರೆಡ್ರಿಕ್ ಡೆಲ್ಯುವಸ್, ಜಾರ್ಜ್ ಡೈಸನ್, ಎಡ್ವರ್ಡ್ ಬೇರ್ಸ್ಟೊವ್, ವಿಲಿಯಮ್ ಬೆನೆಸ್, ಕೆನ್ನೆತ್ ಲೈಟನ್, ಎರಿಕ್ ಫೆನ್ಬಿ, ಹಾಯ್ದನ್ ವುಡ್, ಆರ್ತರ್ ವುಡ್, ಅರ್ನಾಲ್ಡ್ ಕುಕೆ , ಗಾವಿನ್ ಬ್ರಿಯರ್ಸ್; ಅದಲ್ಲದೇ,ಟೀವಿ,ಚಲನಚಿತ್ರ ಮತ್ತು ರೇಡಿಯೊ ಸಂಗೀತ ಜಗತ್ತಿನಲ್ಲಿ, ಜಾನ್ ಬ್ಯಾರಿ ಮತ್ತು ವಾಲಿ ಸ್ಟೊಟ್ ಮುಂತಾದವರನ್ನು ಬೆಳಕಿಗೆ ತಂದಿದೆ.

ಸಾಮಾನ್ಯವಾಗಿ ಬ್ರಾಸ್ ಬ್ಯಾಂಡ್,ಬಾಜಾ ಬಜಂತ್ರಿಗಳಿಗೆ ಯಾರ್ಕ್‌ಷೈರ್ ಎಂಬ ಈ ಚಿಕ್ಕ ದ್ವೀಪ ತವರು ಮನೆ ಎಂದು ಕರೆಸಿಕೊಳ್ಳುತ್ತದೆ.ಜಗತ್ತಿನಲ್ಲಿಯೇ ಅತ್ಯಂತ ಖ್ಯಾತಿ ಪಡೆದ ಯಶಸ್ವಿ ಬ್ರಾಸ್ ಬ್ಯಾಂಡ್ ಗಳಿಗೆ ಇಲ್ಲಿ ಉತ್ತೇಜನ ದೊರಕಿದೆ.ಉದಾಹರಣೆಗೆ ಬ್ಲ್ಯಾಕ್ ಡೈಕೆ,ಬ್ರೈಟ್ ಹೌಸ್ & ರಾಸ್ಟ್ರಿಕ್,ಯಾರ್ಕ್‌ಷೈರ್ ಇಂಪಿರಿಯಲ್,ಯಾರ್ಕ್‌ಷೈರ್ ಬಿಲ್ಡಿಂಗ್ ಸೊಸೈಟಿ ಮತ್ತು ಕಾರ್ಲ್ಟನ್ ಮೇಲ್ ಫ್ರಿಕ್ಲೆಯ್.[ಸೂಕ್ತ ಉಲ್ಲೇಖನ ಬೇಕು] ಐತಿಹಾಸಿಕವಾಗಿ ಈ ಬ್ಯಾಂಡ್ ಗಳು ಕೌಂಟಿಯ ಸುತ್ತಮುತ್ತಲಿನ ಗಣಿಗಳು,ಗಿರಣಿಗಳು ಮತ್ತು ಉಕ್ಕಿನ ಕಾರ್ಯಾಗಾರಗಳ ಬಳಿ ತಲೆ ಎತ್ತಿದ್ದವು.ಆದರೆ ಈ ಕೈಗಾರಿಕೆಗಳು ವಿನಾಶದತ್ತ ಸಾಗಿದಂತೆ ಈ ಬ್ಯಾಂಡ್ ಗಳು ಮತ್ತಷ್ಟು ವೃತ್ತಿಪರವಾದವು.ಅವುಗಳು ತಮ್ಮದೇ ಸ್ವಂತ ಹಕ್ಕಿನ ಮೇಲೆ ಕಾರ್ಯಪ್ರವೃತ್ತವಾಗುವುದು ಅನಿವಾರ್ಯವಾಯಿತು.[ಸೂಕ್ತ ಉಲ್ಲೇಖನ ಬೇಕು] ಇಂತಹ ಬ್ರಾಸ್ ಸಂಗೀತವನ್ನು UK ನಲ್ಲಿ ಹಲವರು ಇನ್ನೂ ಇದೊಂದು ಸ್ಥಾಪಿತ ಸಂಸ್ಥೆ ಎಂದು ಪರಿಗಣಿಸುತ್ತಾರೆ.ಸಾಗರೋತ್ತರ ದೇಶಗಳಲ್ಲಿ ಈ ಸಂಗೀತ ಪ್ರಕಾರದ ಜನಪ್ರಿಯತೆ ಅಧಿಕಗೊಂಡಿದೆ.ಈ UK ಬ್ಯಾಂಡ್ಸ್ ಗಳು ಯುರೊಪ್,ಆಸ್ಟ್ರೇಲಿಯಾ,ದೂರದ ಪೌರಾತ್ಯ ಮತ್ತು USA ಗಳಲ್ಲಿ ತಮ್ಮ ಕಾರ್ಯಕ್ರಮ ಪ್ರದರ್ಶಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಆಗ ೧೯೭೦ ರಲ್ಲಿ ಡೇವಿಡ್ ಬೌವೀ ಎಂಬುವವರು ಉತ್ತರ ಯಾರ್ಕ್‌ಷೈರ್ [೧೫೫] ನಲ್ಲಿನ ತಾಡ್ ಕಾಸ್ಟರ್ ನ ಜನಕ ಎಂದು ಕರೆದುಕೊಳ್ಳುತ್ತಿದ್ದರು. ಇವರು ಹಲ್ ನಿಂದ್ ಮೂವರು ಸಂಗೀತಗಾರರ ಸೇವೆಯನ್ನು ಎರವಲು ಪಡೆದಿದ್ದರು. ಅವರೆಂದರೆ ಮಿಕ್ ರೊನ್ಸನ್,ಟ್ರೆವೊರ್ ಬೊಲ್ಡರ್ ಮತ್ತು ಮಿಕ್ ವುಡ್ ಮಾನ್ಸೆಯ್;ಈ ಮೂವರು ಜಿಗ್ಗಿ ಸ್ಟಾರ್ ಡಸ್ಟ್ ಅಂಡ್ ದಿ ಸ್ಪೈಡರ್ಸ್ ಫ್ರಾಮ್ ಮಾರ್ಸ್ ಎಂಬ ಆಲ್ಬಮ್ ನ್ನು ಧ್ವನಿ ಮುದ್ರಣ ಮಾಡಿದರು.ಇದು ಎಲ್ಲೆಡೆಗೂ ತನ್ನ ಪ್ರಭಾವ ಬೀರಿತು.ಆ ಕಾಲದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರಭಾವೀ ಎಂದು ಪರಿಗಣಿತವಾಯಿತು.[೧೫೬] ಮುಂದಿನ ದಶಕಗಳಲ್ಲಿ ಶೆಫೆಲ್ಡಿಮೂಲದ ಡೆಫ್ ಲೆಪ್ಪಾರ್ಡ್ ತಮ್ಮ ಸಾಧನೆಯಿಂದ ವಿಶ್ವಾದ್ಯಂತ ಅದರಲ್ಲಿಯೂ ಪ್ರಮುಖವಾಗಿ ಅಮೆರಿಕಾದಲ್ಲಿ ಪ್ರಖ್ಯಾತಿ ಪಡೆದರು. ಅವರ ೧೯೮೩ ರ ಆಲ್ಬಮ್ ಪಿರೊಮಾನಿಯಾ (ಆಲ್ಬಮ್) ಮತ್ತು ೧೯೮೭ ರ ಆಲ್ಬಮ್,ಹಿಸ್ಟೆರಿಯಾ (ಡೆಫ್ ಲೆಪ್ಪಾರ್ಡ್ ಆಲ್ಬಮ್) ಗಳು ಅತ್ಯಂತ ಯಶಸ್ವಿ ಆಲ್ಬಮ್ ಗಳಾಗಿ ಸಾರ್ವಕಾಲಿಕ ಖ್ಯಾತಿ ಗಳಿಸಿದವು. ಯಾರ್ಕ್‌ಷೈರ್ ಯಾವಾಗಲೂ ಪ್ರಾಚೀನ-ಸಂಗೀತ ದ ಸನ್ನಿವೇಶಗಳನ್ನು ಸಾಂದರ್ಭಿಕವಾಗಿ ಯಶಸ್ವಿಯಾಗಿ ನೆರವೇರಿಸಿ ಎಲ್ಲೆಡೆಗೂ ತನ್ನ ಸಾಧನೆ ಮೆರೆದಿದೆ. ಅದರಲ್ಲಿ; ದಿ ಸಿಸ್ಟರ್ಸ್ ಆಫ್ ಮರ್ಸಿ, ದಿ ಕಲ್ಟ್, ವಾರ್ದಿಸ್, ಗ್ಯಾಂಗ್ ಆಫ್ ಫೋರ್, ABC, ದಿ ಹ್ಯುಮನ್ ಲೀಗ್, ನಿವ್ ಮಾಡೆಲ್ ಆರ್ಮಿ , ಸಾಫ್ಟ್ ಸೆಲ್, ಚುಂಬಾವಾಂಬಾ, ದಿ ವೆಡ್ಡಿಂಗ್ ಪ್ರೆಜೆಂಟ್ ಮತ್ತು ದಿ ಮಿಶನ್.[೧೫೭] ಇವುಗಳು ಅತ್ಯಂತ ಪ್ರಸಿದ್ದಿ ಪಡೆದವುಗಳಲ್ಲಿ ಸೇರಿವೆ. ಅದು ಶೆಫೆಲ್ಡ್ ನಿಂದ ಬಂದ ತಿರುಳಾದ ಪಲ್ಪ್ ಎನಿಸಿದೆ.ಅಲ್ಲದೇ ೧೯೯೫ರಲ್ಲಿ ಅತ್ಯಧಿಕ ಜನಪ್ರಿಯವಾಯಿತಲ್ಲದೇ ಅದು ಕಾಮನ್ ಪೀಪಲ್ ರೂಪದಲ್ಲಿತ್ತು.ಆ ಹಾಡು ಉತ್ತರದಲ್ಲಿನ ದುಡಿಯುವ-ವರ್ಗದ ಬದುಕಿನ ಮೇಲೆ ಕೇಂದ್ರೀಕೃತವಾಗಿದೆ.[೧೫೮] ನಂತರ ೨೧ನೆಯ ಶತಮಾನದಲ್ಲಿ ಆ ಪ್ರದೇಶದಲ್ಲಿನ ಇಂಡಿ ರಾಕ್ ಮತ್ತು ಪೊಸ್ಟ್-ಪಂಕ್ ರಿವೈವಲ್ ಜೊತೆಗೆ ಕೈಸರ್ ಚೆಫ್ಸ್ ಕೂಡಾ ಜನಪ್ರಿಯತೆ ಕಂಡವು.ನಂತರ ಬಂದ ದಿ ಕ್ರಿಬ್ಸ್ ಮತ್ತು ದಿ ಆರ್ಕ್ಟಿಕ್ ಮಂಕೀಸ್ ಉತ್ತಮ ಮಾರಾಟ ಕಂಡವು.ಇದರೊಂದಿಗೆ ವಾಟ್ ಎವರ್ ಪೀಪಲ್ ಸೇ ಐ ಆಮ್,ದ್ಯಾಟೀಸ್ ವಾಟ್ ಐ ಆಮ್ ನಾಟ್ ಕೂಡ ಚೊಚ್ಚಿಲ ಆಲ್ಬಮ್ ಆದರೂ ಬ್ರಿಟಿಶ್ ಸಂಗೀತ ಇತಿಹಾಸದಲ್ಲಿಯೇ ಅತ್ಯಂತ ವೇಗದ-ಮಾರಾಟ ಕಂಡು ದಾಖಲೆ ಸೃಷ್ಟಿಸಿತು.[೧೫೯] ಅದಲ್ಲದೇ ಇಂಡಿ ರಾಕ್ ಬ್ಯಾಂಡ್ ವನ್ ನೈಟ್ ಓನ್ಲಿ ಕೂಡ ಹೆಲ್ಮ್ ಸ್ಲೆಯ್ ಹಳ್ಳಿಯಿಂದ ಬಂದದ್ದಾಗಿದೆ.

ಬ್ರಿಟಿಶ್ ಟೆಲೆವಿಜನ್ ನ ಮೂರು ಪ್ರಮುಖ ಪ್ರದರ್ಶನಗಳು (ಅದೇ ಆಧಾರದ) ಯಾರ್ಕ್‌ಷೈರ್ ಮೇಲೆ ಚಿತ್ರಣವಾಗಿವೆ.ಅವುಗಳಲ್ಲಿ ಸಿಟ್ ಕಾಮ್ ಲಾಸ್ಟ್ ಆಫ್ ದಿ ಸಮ್ಮರ್ ವೈನ್ ; ಅಲ್ಲದೇ ನಾಟಕ ಸರಣಿಗಳಾದ ಹಾರ್ಟ್ ಬೀಟ್ ಮತ್ತು ಸೋಪ್ ಒಪೆರಾ ಎಮ್ಮರ್ ಡೇಲ್ ಪ್ರದರ್ಶನಗೊಂಡವು.ಕೊನೆಯ ಎರಡು ಯಾರ್ಕ್‌ಷೈರ್ ಟೆಲೆವಿಜನ್ ಮೂಲಕ ನಿರ್ಮಾಣ ಕಂಡವು. ಅದರಲ್ಲೂ ಪ್ರಮುಖವಾಗಿ ಲಾಸ್ಟ್ ಆಫ್ ದಿ ಸಮ್ಮರ್ ವೈನ್ ಅತ್ಯಂತ ದೀರ್ಘಕಾಲಿಕವಾಗಿ ನಡೆದು ಜಗತ್ತಿನಲ್ಲೇ ಉತ್ತಮ ವಿನೋದದ ಮತ್ತು ಹಾಸ್ಯ ಸರಣಿಗಳಲ್ಲಿ ಒಂದೆಂದು ದಾಖಲಾಗಿದೆ.ಇದು ೧೯೭೩ ರಲ್ಲಿ ಆರಂಭಗೊಂಡಾಗಿನಿಂದ ಈಗಲೂ ಓಡುತ್ತಿದೆ.[೧೬೦] ಯಾರ್ಕ್‌ಷೈರ್ ನಲ್ಲಿನ ಇನ್ನೂ ಜನಪ್ರಿಯ ಟೆಲೆವಿಜನ್ ಸರಣಿಗಳೆಂದರೆ ದಿ ಬೆಡೆರ್ ಬೆಕೆ ಟ್ರಿಲೊಜಿ ,ರೈಸಿಂಗ್ ಡ್ಯಾಂಪ್ ,ಫ್ಯಾಟ್ ಫ್ರೆಂಡ್ಸ್ ಮತ್ತು ದಿ ರಾಯಲ್ . ಯಾರ್ಕ್‌ಷೈರ್ ನಲ್ಲಿ ಸಿದ್ದಗೊಂಡು ಪ್ರದರ್ಶನಗೊಳ್ಳುತ್ತಿರುವ ಹಲವು ಚಲನಚಿತ್ರಗಳೆಂದರೆ ಕೆಸ್ , ದಿಸ್ ಸ್ಪೊರ್ಟಿಂಗ್ ಲೈಫ್ , ರೂಮ್ ಎಟ್ ದ ಟಾಪ್ , ಬ್ರಾಸ್ಡ್ ಆಫ್ , ಮಿಶ್ಚೀಫ್ ನೈಟ್ , ರಿಟಾ, ಸೂ ಅಂಡ್ ಬಾಬ್ ಟೂ ಮತ್ತು ಕ್ಯಾಲಂಡರ್ ಗರ್ಲ್ಸ್ . ಶೆಫೆಲ್ಡ್ ನಲ್ಲಿ ಸಿದ್ದಗೊಂಡ ಹಾಸ್ಯ ಚಿತ್ರ ದಿ ಫುಲ್ ಮೊಂಟಿ ಒಂದು ಅಕಾಡಮಿ ಅವಾರ್ಡ್ ಗೆದ್ದುಕೊಂಡಿದೆ.ಅಷ್ಟೇ ಅಲ್ಲದೇ ಸಾರ್ವ-ಕಾಲಿಕ ಎರಡನೆಯ ಅತ್ಯುತ್ತಮ ಬ್ರಿಟಿಶ್ ಚಿತ್ರ ಎಂದು ANI ನ ಜನಮತಗಣನೆಯಲ್ಲಿ ದಾಖಲೆ ಸಾಧಿಸಿದೆ.[೧೬೧] ಕೌಂಟಿ ಕೂಡ ಮೊಂಟಿ ಪೈಥೊನ್ಸ್ ದಿ ಮೀನಿಂಗ್ ಆಫ್ ಲೈಫ್ ನಲ್ಲಿ ಉಲ್ಲೇಖಿತಗೊಂಡಿದೆ.ಜನನದ ಸನ್ನಿವೇಶದಲ್ಲಿನ ಶೀರ್ಷಿಕೆಯೊಂದು "ದಿ ಮಿರಾಕಲ್ ಆಫ್ ಬರ್ತ್,ಪಾರ್ಟ್ II—ದಿ ಥರ್ಡ್ ವರ್ಲ್ಡ್"ಎಂದು ಉದ್ಘರಿಸುತ್ತದೆ. ಸನ್ನಿವೇಶವೊಂದು ಮಿಲ್ ಟೌನ್ ಬೀದಿಯಲ್ಲಿ ತೆರೆದುಕೊಂಡು "ಯಾರ್ಕ್‌ಷೈರ್" ಎಂದು ತಿಳಿಸುತ್ತದೆ.[೧೬೨] ಮೊಂಟಿ ಪೈಥಾನ್ ಕೂಡ ಫೋರ್ ಯಾರ್ಕ್‌ಷೈರ್ ಮೆನ್ ಸ್ಕೆಚ್ ನಲ್ಲಿ ನೇರವಾಗಿ ಅಭಿನಯಿಸಿದ್ದಾರೆ.ಇದು ಮೊದಲ ಬಾರಿಗೆ ಎಟ್ ಲಾಸ್ಟ್ ದಿ ೧೯೪೮ ಶೊ ಮೇಲೆ ಪ್ರದರ್ಶನ ಕಂಡಿದೆ.[೧೬೩]

ಆಡಳಿತ

ರಾಜಕೀಯ

ವಿಲಿಯಂ ವಿಲ್ಬರ್‌ಫೋರ್ಸ್, ಗುಲಾಮಗಿರಿ ರದ್ದುಮಾಡಿದವರು, 1784–೧೮೧೨ರಲ್ಲಿ ಯಾರ್ಕ್‌ಷೈರ್ MP ಯಾಗಿದ್ದರು.

ಯಾರ್ಕ್‌ಷೈರ್೧೨೯೦ರಿಂದಲೂ ಪಾರ್ಲಿಮೆಂಟ್ ಆಫ್ ಇಂಗ್ಲೆಂಡ್ ನ ಹೌಸ್ ಆಫ್ ಕಾಮನ್ಸ್ ನಲ್ಲಿ ಇಬ್ಬರು ಪಾರ್ಲಿಮೆಂಟ್ ಸದಸ್ಯರಿಂದ ಪ್ರತಿನಿಧಿಸಲ್ಪಡುತ್ತದೆ. ಸ್ಕಾಟ್ ಲೆಂಡ್ ನೊಂದಿಗಿನ ಒಗ್ಗೂಡುವಿಕೆ ನಂತರ ಇಬ್ಬರು ಸದಸ್ಯರು ಪಾರ್ಲಿಮೆಂಟ್ ಆಫ್ ಗ್ರೇಟ್ ಬ್ರಿಟನ್ ನಲ್ಲಿ ಕೌಂಟಿಯನ್ನು ೧೭೦೭ ರಿಂದ ೧೮೦೦ ರವರೆಗೆ ಪ್ರತಿನಿಧಿಸಿದ್ದಾರೆ.ಅದಲ್ಲದೇ ಪಾರ್ಲಿಮೆಂಟ್ ಆಫ್ ದಿ ಯುನೈಟೆಡ್ ಕಿಂಗ್ಡಮ್ ನ್ನು ೧೮೦೧ ರಿಂದ ೧೮೩೨ ವರೆಗೆ ಪ್ರತಿನಿಧಿತ್ವ ವಹಿಸಿದ್ದಾರೆ. ಕೌಂಟಿಯು ೧೮೩೨ ರಲ್ಲಿ ಗ್ರಾಂಪೌಂಡ್ ನ ಪ್ರಾತಿನಿಧ್ಯದ ಹರಣದ ನಂತರ ಇನ್ನೆರೆಡು ಸಂಸತ್ ಸದಸ್ಯರ ಬಲ ಪಡೆಯುವಲ್ಲಿ ಸಫಲವಾಗಿದೆ.[೧೬೪] ಹೀಗೆ ಯಾರ್ಕ್‌ಷೈರ್ ಈ ವೇಳೆಯಲ್ಲಿ ಕೇವಲ ಏಕೈಕ,ವಿಶಾಲ ಕೌಂಟಿ ಮತಕ್ಷೇತ್ರವೆಂದು ಪ್ರತಿನಿಧಿಸಲ್ಪಟ್ಟಿದೆ.[೧೬೪] ಇನ್ನುಳಿದ ಕೌಂಟಿಗಳಂತೆ ಯಾರ್ಕ್‌ಷೈರ್ ನಲ್ಲಿಯು ಕೌಂಟಿ ಚಿಕ್ಕಭಾಗಗಳಿವೆ.ಇದರಲ್ಲಿ ಅತ್ಯಂತ ಹಳೆಯದೆಂದರೆ ಸಿಟಿ ಆಫ್ ಯಾರ್ಕ್. ಇದು ೧೨೬೫ ರ ಡೆ ಮೊಂಟ್ ಫೊರ್ಟ್ಸ್ ಪಾರ್ಲಿಮೆಂಟ್ ಇದ್ದಾಗಿಂದ ಅಸ್ತಿತ್ವದಲ್ಲಿದೆ. ಯಾರ್ಕ್‌ಷೈರ್ ನ ರಾಜಕೀಯ ಪ್ರಾತಿನಿಧ್ಯ ಸಂಸತ್ತಿನಲ್ಲಿರುವಾಗ ಅಂದರೆ ರಿಫಾರ್ಮ್ ಆಕ್ಟ್ ೧೮೩೨ ನಂತರ ಅದರ ಉಪವಿಭಾಗಗಳನ್ನು ಹಿಂದೆ ಪಡೆಯಲಾಗಿತ್ತು.ಇಲ್ಲಿ ಯಾರ್ಕ್‌ಷೈರ್ ನ ಮೂವರು ಪಾರ್ಲಿಮೆಂಟ್ ಸದಸ್ಯರು ಐತಿಹಾಸಿಕ ರೈಡಿಂಗ್ಸ್ ಆಫ್ ಯಾರ್ಕ್ಷೈರ್ ನಿಂದ ಹಿಂಪಡೆಯಲಾಗಿತ್ತು;ಈಸ್ಟ್ ರೈಡಿಂಗ್,ನಾರ್ತ್ ರೈಡಿಂಗ್,ಮತ್ತು ವೆಸ್ಟ್ ರೈಡಿಂಗ್ ಮತಕ್ಷೇತ್ರಗಳು ಅದರಲ್ಲಿ ಒಳಗೊಂಡಿದ್ದವು.[೧೬೪]

ನಂತರದ ೧೮೬೫ ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತು ಬಳಿಕ ವೆಸ್ಟ್ ರೈಡಿಂಗ್ ಮತ್ತೆ ನಾರ್ದರ್ನ್,ಈಸ್ಟರ್ನ್ ಮತ್ತು ಸದರ್ನ್ ಸಂಸತ್ ಮತಕ್ಷೇತ್ರಗಳಾಗಿ ವಿಭಜನೆಯಾಯಿತು. ಆದರೆ ಇವೆಲ್ಲ ರಿಡಿಸ್ಟ್ರಿಬುಶನ್ ಆಫ್ ಸೀಟ್ಸ್ ಆಕ್ಟ್ ೧೮೮೫ ವರೆಗೆ ಮಾತ್ರ ಅಸ್ತಿತ್ವದಲ್ಲಿದ್ದವು.[೧೬೫] ಈ ಕಾನೂನು ಯುನೈಟೆಡ್ ಕಿಂಗ್ಡಮ್ ನಲ್ಲಿ ಅತ್ಯಧಿಕವಾದ ಸರ್ಕಾರೀ ಸ್ಥಳೀಕರಣ ಕಂಡಿತು.ಯಾರ್ಕ್‌ಷೈರ್ ನಲ್ಲಿ ಆಗ ೨೬ ಹೊಸ ಸಂಸತ್ ಮತಕ್ಷೇತ್ರಗಳನ್ನು ಪರಿಚಯಿಸಲಾಯಿತು.ಅದಲ್ಲದೇ ಲೋಕಲ್ ಗವರ್ನ್ ಮೆಂಟ್ ಆಕ್ಟ್ ೧೮೮೮ ಸಣ್ಣ ಕೌಂಟಿಗಳಿಗಾಗಿ ಸುಧಾರಿತ ನಿಯಮಾವಳಿಗಳನ್ನು ಜಾರಿಗೊಳಿಸಿತು.ಆಗ ೧೯ ನೆಯ ಶತಮಾನದ ಕೊನೆಯಲ್ಲಿ ಯಾರ್ಕ್‌ಷೈರ್ ನಲ್ಲಿ ೮ ಚಿಕ್ಕ ಕೌಂಟಿಗಳಿದ್ದವು.[೧೬೬]

ಅಲ್ಲದೇ ರಿಪ್ರೆಜೆಂಟೇಶನ್ ಆಫ್ ದಿ ಪೀಪಲ್ಸ್ ಆಕ್ಟ್ ೧೯೧೮ ಪ್ರಕಾರ ಸ್ಥಳೀಯ ಮಟ್ಟದಲ್ಲಿ ಕೆಲವು ಬದಲಾವಣೆಗಳನ್ನು ೧೯೧೮ ರ ಸಾರ್ವತ್ರಿಕ ಚುನಾವಣೆಗಳಿಗಾಗಿ ಮಾಡಲಾಯಿತು.ಮತ್ತೆ ೧೯೫೦ ರಲ್ಲಿ ಮತ್ತೆ ಪರಿಷ್ಕರಿಸಲಾಯಿತು.[೧೬೭] ಯಾರ್ಕ್‌ಷೈರ್ ನಲ್ಲಿನ ಅತ್ಯಂತ ವಿವಾದಿತ ರಿಆರ್ಗೈನೈಜೇಶನ್ ಆಫ್ ಲೋಕಲ್ ಗವರ್ನ್ ಮೆಂಟ್ ಇನ್ ಯಾರ್ಕ್‌ಷೈರ್ ಅಂದರೆ ಲೋಕಲ್ ಗವರ್ನ್ಮೆಂಟ್ ಆಕ್ಟ್ ೧೯೭೨,ಇದು ೧೯೭೪ ರಲ್ಲಿ ಜಾರಿಯಾಯಿತು.[೧೬೮] ಈ ಕಾನೂನಿನಡಿ ರೈಡಿಂಗ್ಸ್ ಗಳು ತಮ್ಮ ಸೇನಾಧಿಕಾರಗಳು,ಅಧಿಕಾರ ವ್ಯಾಪ್ತಿಗಳು ಮತ್ತು ಕೌಂಟಿಗಳ ಆಡಳಿತವನ್ನು ಕಳೆದುಕೊಂಡವು. ಕೌಂಟಿಗಳ ಸಣ್ಣ ವ್ಯಾಪ್ತಿಗಳು ಮತ್ತು ಕೌನ್ಸಿಲ್ಸ್ ಗಳು ರದ್ದಾದವು.ಇವುಗಳನ್ನು ಮೆಟ್ರೊಪಾಲಿಟಿನ್ ಮತ್ತು ನಾನ್-ಮೆಟ್ರೊಪಾಲಿಟಿನ್ ಕೌಂಟಿಗಳ ಮೂಲಕ ಗಡಿ ಬದಲಾವಣೆ ಮುಖಾಂತರ ರದ್ದು ಮಾಡಲಾಯಿತು.[೫೪] ಕೆಲವು ಅಧಿಕಾರಿಗಳು [೧೬೯] ಮತ್ತು ಪ್ರಿನ್ಸ್ ಚಾರ್ಲ್ಸ್ [೧೭೦] ಅವರು ಇಂತಹ ಸುಧಾರಣೆಗಳನ್ನು ಯಾವುದೇ ಪ್ರಾಚೀನ ಸಂಸ್ಕೃತಿಯ ಬದಲಾವಣೆಗೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಯಾಕೆಂದರೆ ಯಾರ್ಕ್‌ಷೈರ್ ರೈಡಿಂಗ್ಸ್ ಸೊಸೈಟಿಯಿಂದ ಗಡಿ ಮತ್ತು ಸಾಂಸ್ಕೃತಿಕ ಬದಲಾವಣೆ ಆದ ಬಗ್ಗೆ ವಿವಾದಗಳೆದ್ದಿದ್ದವು.ಅದಲ್ಲದೇ ಐತಿಹಾಸಿಕವಾಗಿ ತಾವು ಹೆಚ್ಚಿನ ಮಾನ್ಯತೆ ಬಯಸಲು ಅದು ಒತ್ತಾಯಿಸಿತ್ತು.[೧೭೧] ಹೀಗೆ ೧೯೯೬ ರಲ್ಲಿ ಈಸ್ಟ್ ರೈಡಿಂಗ್ ಆಫ್ ಯಾರ್ಕ್ ಷೈರ್ ನ್ನು ಯುನಿಟರಿ ಅಥಾರಿಟಿ ಏರಿಯಾ ಮತ್ತು ಒಂದು ಸೆರೆಮೊನಿಯಲ್ ಕೌಂಟಿ ಎಂದು ಬದಲಾಯಿಸಲಾಯಿತು. ಇಲ್ಲಿ ಯಾರ್ಕ್‌ಷೈರ್ ಮತ್ತು ದಿ ಅಹಂಬರ್ ಪ್ರದೇಶವು ಬಹುತೇಕ ಸರ್ಕಾರಿ ಕಚೇರಿಯನ್ನು ಒಳಗೊಂಡಿದೆ,ಆದರೆ ಐತಿಹಾಸಿಕ ಕೌಂಟಿ ಭಾಗವನ್ನಲ್ಲ.ಯಾರ್ಕ್ ಷೈರ್ ಮತ್ತು ಹಂಬರ್ ಯುರೊಪಿಯನ್ ಚುನಾವಣೆಗಳಿಗೆ ಒಂದು ಮತಕ್ಷೇತ್ರವಾಗಿದೆ.ಇದು ಆರು MEP ಗಳನ್ನು ಯುರೊಪಿಯನ್ ಪಾರ್ಲಿಮೆಂಟ್ ಗೆ ಮರಳಿಸಿದೆ.

ರಾಜಪ್ರಭುತ್ವ ಮತ್ತು ಉನ್ನತವರ್ಗ

ಯಾರ್ಕ್‌ಷೈರ್ ಪ್ರದೇಶವು ಡ್ಯಾನಿಷ್ ವೈಕಿಂಗ್‌ರ ಆಕ್ರಮಣದ ಫಲಶ್ರುತಿಯಾಗಿ ರೂಪುಗೊಳ್ಳಲು ಆರಂಭಿಸಿತು. ಯಾರ್ಕ್, ಜಾರ್ವಿಕ್ ವಸಾಹತಿನಲ್ಲಿ ನೆಲೆಗೊಂಡ ರಾಜಪ್ರಭುತ್ವ‌ವನ್ನು ಅವರು ಸ್ಥಾಪಿಸಿದರು.[೧೭೨] ೯೫೪ರಲ್ಲಿ ಯುದ್ಧದಲ್ಲಿ ದಕ್ಷಿಣದಿಂದ ಇಂಗ್ಲೆಂಡ್ ಪ್ರಭುತ್ವದ ಆಕ್ರಮಣ ಮತ್ತು ವಿಜಯದಿಂದ ವೈಕಿಂಗ್ ರಾಜರ ಆಳ್ವಿಕೆಯು ಕೊನೆಯ ರಾಜ ಎರಿಕ್ ಬ್ಲಡೇಕ್ಸ್ ನಿಧನಹೊಂದುವುದರೊಂದಿಗೆ ಅಂತ್ಯಗೊಂಡಿತು. ಇಂಗ್ಲೆಂಡ್ ರಾಜಪ್ರಭುತ್ವದ ಭಾಗವಾಗಿ ರಚನೆಯಾದ ಸ್ವತಂತ್ರ ರಾಜಪ್ರಭುತ್ವಗಳಲ್ಲಿ ಜಾರ್ವಿಕ್ ಕೊನೆಯದಾಗಿದ್ದು, ಸ್ಥಳೀಯ ರಾಜಪ್ರಭುತ್ವದ ಹೆಸರು ಅಸ್ತಿತ್ವದಲ್ಲಿ ಉಳಿಯಲಿಲ್ಲ.[೧೭೩]

ಯಾರ್ಕ್‌ಷೈರ್ ಗುರುತಿನ ಪ್ರಮುಖ ಚಿಹ್ನೆಯಾಗಿ ವೈಟ್ ರೋಸ್ ಆಫ್ ಯಾರ್ಕ್ ಉಳಿದಿದೆ.

ರಾಜಪ್ರಭುತ್ವದ ಹೆಸರು ನಿಷ್ಕ್ರಿಯವಾದರೂ, ಅದನ್ನು ೯೬೦ರಲ್ಲಿ ಇಂಗ್ಲೆಂಡ್ ರಾಜ ಎಡ್ಗರ್ ದಿ ಪೀಸ್‌ಫುಲ್ ಕುಲೀನ ವರ್ಗದ ಬಿರುದು ಅರ್ಲ್ ಆಫ್ ಯಾರ್ಕ್[೧೭೪] ಸೃಷ್ಟಿಯೊಂದಿಗೆ ಅನುಸರಿಸಿದರು.ಅರ್ಲ್ ಆಧಿಪತ್ಯವು ಯಾರ್ಕ್‌ಷೈರ್‌ನ ಸಾಮಾನ್ಯ ಪ್ರದೇಶವನ್ನು ಒಳಗೊಂಡಿತ್ತು.ಇದನ್ನು ಕೆಲವು ಬಾರಿ ಅರ್ಲ್ ಆಫ್ ಯಾರ್ಕ್‌ಷೈರ್ ಎಂದು ಉಲ್ಲೇಖಿಸಲಾಗುತ್ತದೆ. ಈ ಬಿರುದು ಪ್ರಸಕ್ತ ಇಂಗ್ಲೆಂಡ್ ರಾಜ ನಿರ್ಧರಿಸಿದ ವಿವಿಧ ಕುಲೀನ ವರ್ಗದವರ ಕೈಯಲ್ಲಿ ಹಾದುಹೋಯಿತು.[೧೭೪] ಈ ಬಿರುದನ್ನು ಹೊಂದಿದ ಕೊನೆಯ ವ್ಯಕ್ತಿ ವಿಲಿಯಂ ಲೆ ಗ್ರಾಸ್.ಆದಾಗ್ಯೂ, ಅರ್ಲ್‌ಗಿರಿಯನ್ನು ಹೆನ್ರಿ II ರದ್ದುಮಾಡಿದ. ದಿ ಅನಾರ್ಚಿ (ಅರಾಜಕತೆ)ಎಂದು ಹೆಸರಾದ ತೊಂದರೆಯ ಅವಧಿಯ ಫಲವಾಗಿ ಅರ್ಲ್‌ಗಿರಿಯನ್ನು ರದ್ದುಮಾಡಲಾಯಿತು.[೧೭೫]

ವರಿಷ್ಠರ ವರ್ಗವನ್ನು ೧೩೮೫ರಲ್ಲಿ ಎಡ್ವರ್ಡ್ III ಮರುಸೃಷ್ಟಿಸಿದ. ಈ ಬಾರಿ ಡ್ಯೂಕ್ ಆಫ್ ಯಾರ್ಕ್ ಎಂಬ ಪ್ರತಿಷ್ಠಿತ ಬಿರುದಿನ ರೂಪದಲ್ಲಿ ಸೃಷ್ಟಿಸಿದ. ಇದನ್ನು ಅವನ ಪುತ್ರ ಎಡ್ಮಂಡ್ ಆಫ್ ಲ್ಯಾಂಗ್‌ಲಿಗೆ ನೀಡಿದ. ಎಡ್ಮಂಡ್ ಹೌಸ್ ಆಫ್ ಯಾರ್ಕ್ ಸ್ಥಾಪಿಸಿದ; ನಂತರ ಬಿರುದನ್ನು ಕಿಂಗ್ ಆಫ್ ಇಂಗ್ಲೆಂಡ್‌ ಜತೆ ವಿಲೀನಗೊಳಿಸಲಾಯಿತು. ವೈಟ್ ರೋಸ್ ಆಫ್ ಯಾರ್ಕ್ ಮುಂತಾದ ಯಾರ್ಕ್‌ಷೈರ್‌ನ ಆಧುನಿಕ ದಿನದ ಸಂಕೇತವು ಯಾರ್ಕಿಸ್ಟ್‌ರಿಂದ ಹುಟ್ಟಿಕೊಂಡಿದೆ.[೧೭೬] ಯಾರ್ಕ್‌ಷೈರ್ ಸಂಸ್ಕೃತಿಯೊಳಗೆ ಈ ಹೌಸ್‌ಗೆ ವಿಶೇಷ ನಂಟನ್ನು ಕಲ್ಪಿಸಿದೆ. ಯಾರ್ಕಿಸ್ಟ್ ರಾಜ ರಿಚರ್ಡ್ IIIವಿಶೇಷವಾಗಿ ಪ್ರಸಿದ್ಧನಾಗಿದ್ದಾನೆ. ಅವನು ಜೀವನದ ಬಹು ಭಾಗವನ್ನು ಯಾರ್ಕ್‌ಷೈರ್ ಮಿಡಲ್‌ಹ್ಯಾಂ ಕೋಟೆಯಲ್ಲಿ ಕಳೆದ.[೩೭][೧೭೭] ಆಗಿನಿಂದ ಈ ಬಿರುದು ಅನೇಕ ಮಂದಿಯ ಕೈಯಲ್ಲಿ ಹಾದುಹೋಗಿದ್ದು, ರಾಜನ ಜತೆ ವಿಲೀನವಾಗಿ ಅನೇಕ ಬಾರಿ ಮರುಸೃಷ್ಟಿಸಲಾಯಿತು. ಡ್ಯೂಕ್ ಆಫ್ ಯಾರ್ಕ್ ಬಿರುದು ಪ್ರತಿಷ್ಠಿತವಾಗಿ ಉಳಿದಿದ್ದು, ಬ್ರಿಟಿಷ್ ರಾಜಪ್ರಭುತ್ವದ ಎರಡನೇ ಪುತ್ರನಿಗೆ ನೀಡಲಾಗಿದೆ.[೧೭೮]

ಗಣ್ಯ ವ್ಯಕ್ತಿಗಳು

ಇವನ್ನೂ ಗಮನಿಸಿ‌

Page ಮಾಡ್ಯೂಲ್:Portal/styles.css has no content.

  • ೧೯೩೧ ಡಾಗರ್ ಬ್ಯಾಂಕ್ ಭೂಕಂಪ
  • ೧೯೮೪ರಿಂದ ಉಪಸ್ಥಿತವಿದ್ದ ಮುಚ್ಚಿದ ದಿನಾಂಕಗಳೊಂದಿಗೆ ಯಾರ್ಕ್‌ಷೈರ್ ಕಲ್ಲಿದ್ದಲು ಗಣಿಗಳ ಪಟ್ಟಿ
  • ಯಾರ್ಕ್‌ಷೈರ್‌ನಲ್ಲಿರುವ ಕಮೀಷನರ್‌ಗಳ ಚರ್ಚ್‌ಗಳ ಪಟ್ಟಿ
  • ಯಾರ್ಕ್‌ಷೈರ್ ಆಂಬ್ಯುಲೆನ್ಸ್ ಸೇವೆ
  • ಯಾರ್ಕ್‌ಷೈರ್ ಬಿಲ್ಡಿಂಗ್ ಸೊಸೈಟಿ
  • ಯಾರ್ಕ್‌ಷೈರ್ ಫಾರ್ವಾರ್ಡ್
  • ಯಾರ್ಕ್‌ಷೈರ್ ತುಕಡಿ
  • ಯಾರ್ಕ್‌ಷೈರ್ ಸಮಾಜ
  • ಯಾರ್ಕ್‌ಶೈರ್‌ ಟೆರಿಯರ್‌(ಪ್ರಾದೇಶಿಕ ಸೈನ್ಯದ ಸದಸ್ಯ)
  • ಯಾರ್ಕ್‌ಷೈರ್ ಬಯಲುಗಳು
  • ಈಸ್ಟ್ ರೈಡಿಂಗ್ ಆಫ್ ಯಾರ್ಕ್‌ಷೈರ್
  • ಉತ್ತರ ಯಾರ್ಕ್‌ಷೈರ್
  • ದಕ್ಷಿಣ ಯಾರ್ಕ್‌ಷೈರ್
  • ಪಶ್ಚಿಮ ಯಾರ್ಕ್‌ಷೈರ್

ಉಲ್ಲೇಖಗಳು‌

ಟಿಪ್ಪಣಿಗಳು

a ವಾರ್ಸ್ ಆಫ್ ರೋಸಸ್ ಯಾರ್ಕ್ ಮತ್ತು ಲಂಕಾಸ್ಟರ್ ಹೆಸರುಗಳನ್ನು ಹೊಂದಿದ ರಾಜಮನೆತನದ ಮನೆಗಳ ನಡುವೆ ಹೋರಾಟ ನಡೆದಿದ್ದರೂ, ಯುದ್ಧಗಳು ಇಂಗ್ಲೆಂಡ್‌ನ ವಿಶಾಲವಾದ ಪ್ರದೇಶದಲ್ಲಿ ಸಂಭವಿಸಿದೆ. ಅವು ಹೌಸ್ ಆಫ್ ಪ್ಲಾಂಟಾಜೆನೆಟ್‌ನ ಕ್ಯಾಡೆಟ್ ಶಾಖೆಗಳ ನಡುವೆ ನಡೆದ ರಾಜಮನೆತನದ ಹೋರಾಟವಾಗಿದೆ.ರಾಜಪ್ರಭುತ್ವಕ್ಕಿಂತ ಕೆಳಗಿನ ಯಾರ್ಕ್‌ಷೈರ್‌ನ ಅತ್ಯಂತ ಪ್ರಮುಖ ಕುಟುಂಬ ಶರೀಪ್ ಹಟ್ಟನ್ ನೆವಿಲ್ಲೆಸ್ ಮತ್ತು ಮಿಡಲ್‌ಹ್ಯಾಂ ಯಾರ್ಕಿಸ್ಟರಿಗಾಗಿ ಹೋರಾಡಿದರು. ಅದೇ ರೀತಿ ಬೋಲ್ಟನ್ಸ್ಕ್ರೋಪ್ಸ್, ಡ್ಯಾನ್‌ಬಿಯ ಲ್ಯಾಟಿಮರ್ಸ್ ಮತ್ತು ಸ್ನೇಪ್ ಹಾಗು ತಿರ್ಸ್ಕ್ನ ಮೊಬ್ರೇಸ್ ಮತ್ತು ಬರ್ಟನ್ ಇನ್ ಲಾನ್ಸ್‌ಡೇಲ್. ಆದರೂ ಕೆಲವರು ಲಂಕಾಸ್ಟ್ರಿಯನ್‌ ಪರವಾಗಿ ಹೋರಾಡಿದರು. ಉದಾಹರಣೆಗೆ ಪರ್ಸೀಸ್, ಕ್ಲಿಫರ್ಡ್ಸ್ ಆಫ್ ಸ್ಕಿಪ್‌ಟನ್, ರಾಸ್ ಆಫ್ ಹೆಲ್ಮ್ಸ್‌ಲೆ, ಗ್ರೇಸ್ಟಾಕ್ ಆಫ್ ಹೆಂಡರ್‌ಸ್ಕೆಲ್ಫ್, ಸ್ಟಾಫರ್ಡ್ ಆಫ್ ಹೋಲ್ಡರ್‌ನೆಸ್ ಮತ್ತು ಟ್ಯಾಲ್ಬೋಚ್ ಆಫ್ ಶೆಫೀಲ್ಡ್.

ಬಾಹ್ಯ ಕೊಂಡಿಗಳು‌

ಟೆಂಪ್ಲೇಟು:Yorkshire

54°00′N 1°30′W / 54.000°N 1.500°W / 54.000; -1.500