ಮೊದಲನೆಯ ಎಲಿಜಬೆಥ್

ಎಲಿಜಬೆತ್ I (7 ಸೆಪ್ಟೆಂಬರ್ 1533 - 24 ಮಾರ್ಚ್ 1603) ಇಂಗ್ಲೆಂಡ್ ಮತ್ತು ಐರ್ಲೆಂಡ್ನ ರಾಣಿ 17 ನವೆಂಬರ್ 1558 ರಿಂದ ಅವಳ ಮರಣದವರೆಗೆ. ಕೆಲವೊಮ್ಮೆ ವರ್ಜಿನ್ ಕ್ವೀನ್, ಗ್ಲೋರಿಯಾನಾ ಅಥವಾ ಗುಡ್ ಕ್ವೀನ್ ಬೆಸ್ ಎಂದು ಕರೆಯಲ್ಪಡುವ, ಮಕ್ಕಳಿಲ್ಲದ ಎಲಿಜಬೆತ್ ಟ್ಯೂಡರ್ ಸಾಮ್ರಾಜ್ಯದ ಕೊನೆಯ ರಾಜನಾಗಿದ್ದ.ಎಲಿಜಬೆತ್ ಹೆನ್ರಿ VIII ರ ಮಗಳು ಮತ್ತು ಅವರ ಎರಡನೆಯ ಹೆಂಡತಿಯಾದ ಅನ್ನಿ ಬೊಲಿನ್, ಎಲಿಜಬೆತ್ ಹುಟ್ಟಿದ ನಂತರ ಎರಡು ಮತ್ತು ಒಂದೂವರೆ ವರ್ಷಗಳ ನಂತರ ಮರಣದಂಡನೆ ವಿಧಿಸಲಾಯಿತು. ಹೆನ್ರಿ VIII ಗೆ ಅನ್ನಿಯ ಮದುವೆಯನ್ನು ರದ್ದುಗೊಳಿಸಲಾಯಿತು, ಮತ್ತು ಎಲಿಜಬೆತ್ರನ್ನು ನ್ಯಾಯಸಮ್ಮತವಲ್ಲದವನಾಗಿ ಘೋಷಿಸಲಾಯಿತು. 1553 ರಲ್ಲಿ ಅವರ ಸಾವಿನ ತನಕ, ಅವರ ಕಿರಿಯ ಸಹೋದರ ಎಡ್ವರ್ಡ್ VI, ಕಿರೀಟವನ್ನು ಲೇಡಿ ಜೇನ್ ಗ್ರೆಯ್ಗೆ ಒಪ್ಪಿಸಿ, ಅವನ ಇಬ್ಬರು ಅರೆ-ಸಹೋದರಿಯರು, ಎಲಿಜಬೆತ್ ಮತ್ತು ರೋಮನ್ ಕ್ಯಾಥೋಲಿಕ್ ಮೇರಿರ ವಿರುದ್ಧದ ಹೇಳಿಕೆಗಳನ್ನು ನಿರ್ಲಕ್ಷಿಸಿ, ಕಾನೂನಿಗೆ ವಿರುದ್ಧವಾಗಿ ಕಾನೂನಿನ ಹೊರತಾಗಿಯೂ ಆಳಿದರು. ಎಡ್ವರ್ಡ್ರ ಇಚ್ಛೆಯನ್ನು ಪಕ್ಕಕ್ಕೆ ಹಾಕಲಾಯಿತು ಮತ್ತು ಮೇರಿ ರಾಣಿಯಾದಳು, ಲೇಡಿ ಜೇನ್ ಗ್ರೇ ಅನ್ನು ಇಟ್ಟುಕೊಂಡಳು. ಮೇರಿ ಆಳ್ವಿಕೆಯಲ್ಲಿ, ಪ್ರೊಟೆಸ್ಟೆಂಟ್ ಬಂಡುಕೋರರನ್ನು ಬೆಂಬಲಿಸುವ ಅನುಮಾನದ ಮೇಲೆ ಎಲಿಜಬೆತ್ ಸುಮಾರು ಒಂದು ವರ್ಷ ಜೈಲು ಶಿಕ್ಷೆಗೆ ಒಳಗಾದರು..

ಎಲಿಜ಼ಬೆತ್ ೧ ಆಫ್ ಇಂಗ್ಲೆಂಡ್


ಹೆನ್ರಿ-೮ ಮತ್ತು ಆನ್ನಿ ಬಾಯ್ಲೀನ್ ರವರ ಪುತ್ರಿ ಎಲಿಜ಼ಬೆತ್ ೧. ಎಡ್ವರ್ಡ್-೬ ಇವಳ ಅಣ್ಣ ಹಾಗು ರೋಮನ್ ಕ್ಯಾಥೊಲಿಕ್ ಮೇರಿ ಇವಳ ಸಹೋದರಿ. ೧೫೫೮ರಲ್ಲಿ, ಎಲಿಜ಼ಬೆತ್ ತನ್ನ ಸಹೋದರಿಯ ಮರಣದ ನಂತರ ರಾಣಿಯಾಗಿ ಆಳ್ವಿಕೆ ನಡಿಸಳು ಪ್ರಾರಂಭಿಸಿದಳು. ಆಳ್ವಿಕೆಯ ಸಮಯದಲ್ಲಿ ಇವಳು ತನ್ನ ಸಲಹಾ ಪರಿಷತ್ತಿನ ಸಹಾಯದ ಮೇರೆಗೆ ಆಳ್ವಿಕೆ ನಡೆಸಿದಳು, ಇದರಲ್ಲಿ ಮುಖ್ಯವಾದವರು ವಿಲಿಯಮ್ ಸೆಸೀಲ್ ಹಾಗು ಮೊದಲ ಬೇರ್ರಾನ್ ಬರ್ಗ್ಲಿ. ರಾಣಿಯಾಗಿ ಇವಳು ಮೊದಲು ಮಾಡಿದ ಕೆಲಸ ಪ್ರೊಟೆಸ್ಟೆಂಟ್ ಚರ್ಚ್ ಸ್ಥಾಪನೆ ಮಾಡಿದ್ದು, ಅದರ ಸರ್ವೋಚ್ಚ ಆಧಿಕಾರಿ ಸಹ ಆದರು. ಇದು ನಂತರ "ಚರ್ಚ್ ಆಫ್ ಇಂಗ್ಲಾಡ್" ಸಹ ಆಯಿತು.

ಎಲಿಜ಼ಬೆತ್ನ ಆಡಳಿತವನ್ನು ಎಲಿಜ಼ಬೆತನ್ ಯುಗ ಎಂದು ಕರೆಯುತ್ತಾರೆ. ಈ ಕಾಲವು ವಿಲಿಯಮ್ ಷೇಕ್ಸ್‌ಪಿಯರ್ ಹಾಗು ಕ್ರಿಸ್ಟೊಫರ್ ಮರ್ಲೊವ್ ರವರ ಇಂಗ್ಲೀಷ್ ನಾಟಕಗಳಿಗೆ ಹೆಸರುವಾಸಿಯಾಗಿದೆ

ಆರಂಭಿಕ ಜೀವನ

ಗ್ರೀನ್ವಿಚ್ ಅರಮನೆಯಲ್ಲಿ ಜನಿಸಿದ ಇವಳು ಹೆನ್ರಿ-೮ನ ಎರಡನೆಯ ಮಗು. ಅವಳ ತಾಯಿ ಆನ್ನಿ ಬಾಲಿನ್, ಹೆನ್ರಿಯ ಎರಡನೆ ಹೆಂಡತಿ. ಎಲಿಜ಼ಬೆತ್ ಎರಡು ವರ್ಷದ ಮಗುವಾಗಿದ್ದಾಗ ಅವಳ ತಾಯಿಯನ್ನು ಗಲ್ಲಿಗೇರಿಸಲಾಯಿತು, ಹಾಗು ಎಲಿಜ಼ಬೆತ್ನನ್ನು ಅಕ್ರಮ ಸಂತಾನ ಎಂದು ಘೋಷಿಸಿ ಹೆನ್ರಿ ಮತ್ತೊಂದು ಮದುವೆಯಾದ, ಆಗ ಹುಟ್ತಿದ್ದು ಎಡ್ವರ್ಡ್, ಇವನನ್ನುಗ್ ರಾಜ್ಯದ ಹಕ್ಕುದಾರ ಎಂದು ಘೋಷಿಸಲಾಯಿತು.

ಎಲಿಜ಼ಬೆತ್ನ ವಿದ್ಯಾಭ್ಯಾಸ ಮುಗಿಯುವ ಸಮಯದಲ್ಲಿ ಅವಳು ಅತಿಹೆಚ್ಚು ಕಲಿತ ಮಹಿಳೆಯರಲ್ಲಿ ಒಬ್ಬಳಾಗಿದ್ದಳು. ಎಲಿಜ಼ಬೆತ್ಗೆ ಇಂಗ್ಲೀಷ್ ಬಿಟ್ಟು ವೆಲ್ಶ್, ಕಾರ್ನಿಷ್, ಸ್ಕಾಟಿಷ್, ಐರಿಶ್, ಲ್ಯಾಟಿನ್, ಇಟಾಲಿಯನ್, ಗ್ರೀಕ್ ಭಾಷೆಗಳು ಬರುತ್ತಿದ್ದವು.

ಆಳ್ವಿಕೆ

ಎಲಿಜ಼ವಬೆತ್ ಪಟ್ಟಾಭಿಷೇಕ

ಎಲಿಜ಼ಬೆತ್ ರಾಣಿಯಾಗಿದ್ದು ತನ್ನ ೨೫ನೇ ವರ್ಷದಲ್ಲಿ. ಅವಳ ಪಟ್ಟಾಭಿಷೇಕವನ್ನು ಎಲ್ಲಾ ಜನರು ಬಹಳ ಹರುಷದಿಂದ ಸ್ವಾಗತಿಸಿದರು. ಸಾರ್ವಜನಿಕ ನೀತಿಯಲ್ಲಿ ಅವಳು ವ್ಯವಹಾರಿಕ ಸಿಧ್ಧಾಂತವನ್ನು ನಂಬಿದವಳು, ಇದನ್ನೆ ಧಾರ್ಮಿಕ ಸಂಪ್ರದಾಯದಲ್ಲು ಬಳಸಿದಳು. ಎಲಿಜ಼ಬೆತ್ ಮತ್ತು ಅವಳ ಸಲಹೆಗಾರರು, ಕ್ಯಾಥೋಲಿಕ್ ಕ್ರುಸೇಡನ್ನು ಇಂಗ್ಲಾಡಿನ್ ಆಡಳಿತಕ್ಕೆ ಅಪಾಯಕಾರಿ ಎಂದು ಭಾವಿಸಿದ್ದರು. ಆದ್ದರಿಂದ ಅವಳು ಪ್ರೊಟೆಸ್ಟೆಂಟ್ರನ್ನು ಹೆಚ್ಚು ಬಲ ಪಡೆಸಲು ಪ್ರಯತ್ನಸಿದ್ದಳು. ಇದಕ್ಕೆ ಬಹಳಷ್ಟು ಕ್ಯಾಥೋಲಿಕ್ಗಳ ಅಡ್ದಿ ಇದ್ದರು, ಇದು ಕೊನೆಗೆ ಸಾರ್ಥಕವಾಯಿತು. ಎಲಿಜ಼ಬೆತ್ತಿನ ವಿದೇಶಾಂಗ ನೀತಿ ರಕ್ಷಣಾತ್ಮಕವಾಗಿತ್ತು, ಅವಳ ನೌಕಪಡೆಯ ನೀತಿ ಮಾತ್ರ ಆಕ್ರಮಣಕಾರಿಯಾಗಿತ್ತು, ಇದು ಸ್ಪೇನ್ ವಿರುಧ್ಧದ ಯುದ್ಧದಲ್ಲಿ ಉಪಯುಕ್ತಕಾರಿಯಾಗಿತ್ತು.

೧೫೮೮ನಲ್ಲಿ ನಡೆದ ಸ್ಪೇನ್ ವಿರುದ್ಧದ ಯುದ್ಧದಲ್ಲಿ ಇಂಗ್ಲೆಂಡ್ ಗೆದ್ದಿದ್ದರು ಅದರಿಂದ ಬಂದ ನಷ್ಟ ಅವಳ ಆಳ್ವಿಕೆಯ ಕೊನೆಯ ತನಕ ಕಂಡು ಬರುತಿತ್ತು. ಸ್ಪೇನ್ ಮತ್ತು ಐರ್ಲ್ಯಾಂಡ್ ಜೊತೆಯ ಸಂಭಂದ ಇನ್ನು ಹಾಳಾಗುತ್ತಿತ್ತು, ಜನರ ಮೇಲಿನ ಕಷ್ಟ ಹೆಚ್ಚಿತು. ಅವಳ ಕೊನೆಯ ಕಾಲದಲ್ಲಿ ಜನರಲ್ಲಿ ಅವಳ ಮೇಲಿದ್ದ ಭಾವನೆ ಇಳಿಯ ತೊಡಗಿತು. ಇದಕ್ಕೆ ಮುಖ್ಯವಾದ ಕಾರಣ ಬದಲಾದ ಸಲಹೆಗಾರರು, ಸ್ಪೇನ್ ಯುಧ್ಧದಲ್ಲಿ ಬಹಳಷ್ಟು ಸಲಹೆಗಾರರು ಮ್ರುತ ಪಟ್ಟಿದ್ದರು. ಆಡಳಿತದಲ್ಲಿ ಒಳ ಜಗಳ ಶುರುವಾಯಿತು. ಹೀಗೆ ಇವಳು ಕಟ್ಟಿದ ಸಾಮ್ರಾಜ್ಯ ಅವಳ ಕಣ್ಣ ಮುಂದೆಯೆ ಬೇಳಲು ಪ್ರಾರಂಭಿಸಿತು.

ಮರಣ

ಎಲಿಜ಼ಬೆತ್ನ ಮುಖ್ಯ ಸಲಹೆಗಾರರಾದ ವಿಲಿಯಮ್ ಸೆಸೀಲ್ ೪ ಆಗಸ್ಟ್ ೧೫೯೮ರಲ್ಲಿ ನಿಧನಗೊಂಡರು. ಅವರ ಕಾರ್ಯ ಅವರ ಮಗನಾದ ರಾಬರ್ಟ್ ಸೆಸೀಲ್ಗೆ ಹೋಗಿತು. ಅವನ ಮುಖ್ಯ ಕಾರ್ಯ ರಾಜ್ಯದ ಮುಂದಿನ ಉತ್ತರಾಧಿಕಾರಿಯನ್ನು ಹುಡುಕುವುದಾಗಿತ್ತು. ಇದಕ್ಕೆ ಕಾರಣ ಎಲಿಜ಼ಬೆತ್ ಗೇ ಮಕ್ಕಳ್ಳಿಲ್ಲದಿದ್ದುದು. ಎಲಿಜ಼ಬೆತ್ ನ ಒಪ್ಪಿಗೆ ಇದಕ್ಕೆ ಇಲ್ಲದಿದ್ದ ಕಾರಣ ರಾಬರ್ಟ್ ಈ ಕಾರ್ಯವನ್ನು ಗೋಪ್ಯವಾಗಿ ಮಾಡಿದ. ಮೊದಲು ಜೇಮ್ಸ್ ೬ ಆಫ್ ಸ್ಕಾಟ್ಲ್ಯಾಂಡ್ನನ್ನು ಸಂಪರ್ಕಿಸಿದ.

ಎಲಿಜ಼ಬೆತ್ನ ಆರೋಗ್ಯವು ೧೬೦೨ನ ಶರತ್ಕಾಲದವರೆಗೂ ಚೆನ್ನಾಗಿದ್ದರೂ ತನ್ನ ಹತ್ತಿರದ ಸ್ನೇಹಿತರ ಸಾವು ಅವಳಲ್ಲಿ ತೀವ್ರ ಕೊರಗನ್ನು ಮೂಡಿಸಿತು. ೧೬೦೩ನಲ್ಲಿ ತನ್ನ ಹತ್ತಿರದ ಸ್ನೇಹಿತೆಯಾದ ಕ್ಯಾಥರೀನ್, ಲೇಡಿ ನಾಲ್ಲಿಸ್ ಸಾವು ಬಹಳ ದು‌ಃಖ ತಂದಿತು. ಮಾರ್ಚ್ನಲ್ಲಿ ಎಲಿಜ಼ಬೆತ್ನ್ ಆರೋಗ್ಯ ಕೆಡಲು ಪ್ರಾರಂಭಿಸಿತು, ತನ್ನ ಹಾಸಿಗೆ ಸೇರಿದಲು. ಮಾರ್ಚ್ ೨೪ ೧೬೦೩ರ ಮಧ್ಯರಾತ್ರಿ ಎಲಿಜ಼ಬೆತ್ ತನ್ನ ಕೊನೆ ಉಸಿರೆಳೆದಳು. ನಂತರ ಸೆಸೀಲ್ ಹಾಗೂ ರಾಜ್ಯದ ಪರಿಷತ್ತು ಸ್ಕಾಟ್ಲ್ಯಾಂಡ್ನ್ ಜೇಮ್ಸ್ ೬ನನ್ನು ಜೇಮ್ಸ್ ೧ ಆಗಿ ಇಂಗ್ಲೆಂಡ್ನ್ ರಾಜನನ್ನಾಗಿ ಘೋಷಿಸಲಾಯಿತು.

ಎಲಿಜ಼ಬೆತ್ನ್ ಅಂತ್ಯಕ್ರಿಯೆ

ಎಲಿಜ಼ಬೆತ್ ಶವಪೆಟ್ಟಿಗೆಯನ್ನು ೨೮ ಎಪ್ರಿಲ್ ರಂದು ವೆಸ್ಟ್ ಮಿನಿಸ್ಟರ್ ಆಬ್ಬಿಗೆ ತರಲಾಯಿತು, ಅವಳ ಶವವನ್ನು ಅವಳ ಸಹೋದರಿಯಾದ ಮೇರಿಯ ಜೊತೆ ಇಡಲಾಯಿತು.

ಕೀರ್ತಿ

ಎಲಿಜ಼ಬೆತ್ ನ ಮರಣದಿಂದ ಬಹಳಶ್ಟು ಜನ ದುಃಖ ಪಟ್ಟರು. ಜೇಮ್ಸ್ ಮೇಲೆ ಮೊದಮೊದಲು ಬಹಳ ನೀರಿಕ್ಷೆ ಇದ್ದರು, ಅದು ಕೆಲ ಸಮಯದ ನಂತರ ಕೆಳಗಿಳಿಯ ತೊಡಗಿತು. ಜನ ಎಲಿಜ಼ಬೆತ್ ನ ಕಾರ್ಯಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದರು, ಅವಳ ಆಳ್ವಿಕೆಯನ್ನು ಸುವರ್ಣ ಯುಗ ಎಂದು ಕರೆಯಲು ಪ್ರಾರಂಭಿಸಿದರು. ನೆಪೋಲಿಯನ್ ಯುದ್ಧದ ಸಮಯದಲ್ಲೂ ಅವಳ ಆಲ್ವಿಕೆಯನ್ನು ನೆನೆಯಲು ಪ್ರಾರಂಭಿಸಿದರು. ಆದರೆ ಈಗಿನ ಇತಿಹಾಸಿಗರು ಅವಳ ಆಲ್ವಿಕೆಯನ್ನು ಒಂದು ವಿಫಲ ಆಳ್ವಿಕೆಯಾಗಿ ಭಾವಿಸುತ್ತಾರೆ. ಪ್ರೊಟೆಸ್ಟೆಂಟ್ಸ್ ನ ಬೆಂಬಲಿಗರಾಗಿ ಅವರನ್ನು ಭಾವಿಸಿದ್ದರು, ಅವಳ ವಿದೇಶಿ ಕಾರ್ಯನೀತಿ ಬಹಳ ಜಾಗರೋಕತೆಯಿಂದ ಕೂಡಿದ್ದಾಗು ಭಾವಿಸಿದ್ದಾರೆ. ವಿದೇಶಿ ಪ್ರೊಟೆಸ್ಟೆಂಟ್ಸ್ ಗೇ ಹೆಚ್ಚು ಸಹಾಯ ಮಾಡಲಿಲ್ಲ.

ಉಲ್ಲೇಖಗಳು

[೧][೨][೩][೪]

https://www.search.com.vn/wiki/en/Elizabeth_I_of_England

https://www.britannica.com/biography/Elizabeth-I