ವಿಕಿಕೋಟ್

ವಿಕಿಕೋಟ್ (Wikiquote)  ವಿಕಿಮೀಡಿಯ ಫೌಂಡೇಶನ್ ಸಂಚಾಲಿತ ವಿಕಿಪೀಡಿಯ ಯೋಜನೆಗಳಲ್ಲಿ ಒಂದು ಇದು ಮೀಡಿಯಾವಿಕಿ ತಂತ್ರಾಂಶದ ಮೂಲಕ ಕಾರ್ಯ ನಿರ್ವಹಿಸುತ್ತದೆ.ಇದು ಡೇನಿಯಲ್ ಆಲ್ಸ್ಟನ್ ಕಲ್ಪನೆಯಾಗಿದ್ದು,ಇದನ್ನು ಆಧರಿಸಿ  ಬ್ರಿಯಾನ್  ವಿಬ್ಬೇರ್ ಕಾರ್ಯಗತಗೊಳಿಸಿದರು. ಈ ಯೋಜನೆಯ ಉದ್ದೇಶವು ಪ್ರಮುಖ ಪ್ರಮುಖ ವ್ಯಕ್ತಿಗಳ ಸಂಭಾಷಣೆ-ಮಾತುಗಳು , ಪ್ರಮುಖ ಪುಸ್ತಕದಲ್ಲಿರುವ ಗಾದೆಗಳು,ಜನಪ್ರಿಯ ಗಾದೆಗಳು ,ನಾಣ್ಣುಡಿ,ಉಲ್ಲೇಖ ಸಮೇತ ಸೇರಿಸುವದಾಗಿದೆ.[೨]

ವಿಕಿಕೋಟ್
Wikiquote logo
Wikiquote logo
Detail of the Wikiquote multilingual portal main page.
wikiquote.org ಮುಖಪುಟದ ಸ್ಕ್ರೀನ್ಶಾಟ್
ಜಾಲತಾಣದ ವಿಳಾಸwww.wikiquote.org
ವಾಣಿಜ್ಯ ತಾಣಅಲ್ಲ
ತಾಣದ ಪ್ರಕಾರಉದ್ಧರಣ ಭಂಡಾರ
ನೊಂದಾವಣಿಐಚ್ಛಿಕ
ಲಭ್ಯವಿರುವ ಭಾಷೆಬಹುಭಾಷಾ
ಒಡೆಯವಿಕಿಮೀಡಿಯ ಫೌಂಡೇಶನ್
ಸೃಷ್ಟಿಸಿದ್ದುಜಿಮ್ಮಿ ವೇಲ್ಸ್ ಮತ್ತು ವಿಕಿಮೀಡಿಯ ಸಮುದಾಯ.
ಪ್ರಾರಂಭಿಸಿದ್ದುಜುಲೈ 10, 2003; 7587 ದಿನ ಗಳ ಹಿಂದೆ (2003-೦೭-10)
ಅಲೆಕ್ಸಾ ‍‍ಶ್ರೇಯಾಂಕpositive decrease 4,250 ,ನವೆಂಬರ್ 2016)[೧]
ಸಧ್ಯದ ಸ್ಥಿತಿಸಕ್ರಿಯ

ಇತಿಹಾಸ

ದೊಡ್ಡ ಎಂಟು ವಿಕಿಕೋಟ್ ಬೆಳವಣಿಗೆ
ದಿನಾಂಕಘಟನೆ
27 ಜೂನ್ 2003ತಾತ್ಕಾಲಿಕವಾಗಿ ವೋಲೋಫ್ ಭಾಷೆ ವಿಕಿಪೀಡಿಯ ಆರಂಭ (wo.wikipedia.com).
10 ಜುಲೈ 2003ಸ್ವಂತ ಸಬ್ಡೊಮೈನ್ ದಾಖಲಿಸಿದರು (quote.wikipedia.org).
25 ಆಗಸ್ಟ್ 2003ಸ್ವಂತ ಡೊಮೇನ್ ದಾಖಲಿಸಿದರು (wikiquote.org).
17 ಜುಲೈ 2004ಹೊಸ ಭಾಷೆ ಸೇರಿಸಲಾಯಿತು.
13 ನವೆಂಬರ್ 2004ಇಂಗ್ಲೀಷ್ ಆವೃತ್ತಿ 2,000 ಪುಟಗಳು ತಲುಪಿತು.
ನವೆಂಬರ್ 200424 ಭಾಷೆಗಳಲ್ಲಿ ಪ್ರಾರಂಭ.
ಮಾರ್ಚ್ 2005ಒಟ್ಟು 10,000 ಪುಟಗಳು ತಲುಪಿತು. ಇಂಗ್ಲೀಷ್ ಆವೃತ್ತಿ 3,000 ಪುಟಗಳು ಹೊಂದಿತು.
ಜೂನ್ 200534 ಭಾಷೆಗಳು ತಲುಪಿತು, ಒಂದು ಶಾಸ್ತ್ರೀಯ (ಲ್ಯಾಟಿನ್) ಸೇರಿದಂತೆ ಮತ್ತು ಒಂದು ಕೃತಕ (ಎಸ್ಪೆರಾಂಟೊ)
4 ನವೆಂಬರ್ 2005ಇಂಗ್ಲೀಷ್ ವಿಕಿಕೋಟ್ 5,000 ಪುಟಗಳು ತಲುಪಿತು.
ಏಪ್ರಿಲ್ 2006ಫ್ರೆಂಚ್ ವಿಕಿಕೋಟ್ ಕಾನೂನು ಕಾರಣಗಳಿಗಾಗಿ ತೆಗೆದುಹಾಕಲಾಯಿತು.
4 ಡಿಸೆಂಬರ್ 2006ಫ್ರೆಂಚ್ ವಿಕಿಕೋಟ್ ಪುನಃ ಆರಂಭ.
7 ಮೇ 2007ಇಂಗ್ಲೀಷ್ ವಿಕಿಕೋಟ್ 10,000 ಪುಟಗಳು ತಲುಪುಪಿತು.
ಜುಲೈ 200740 ಭಾಷೆಗಳಲ್ಲಿ.
ಫೆಬ್ರವರಿ 2010ಒಟ್ಟು 100,000 ಲೇಖನಗಳು ಎಲ್ಲಾ ಭಾಷೆಗಳಿಗೆ ಸೇರಿ.

ಬಹುಭಾಷಾ ಆವೃತ್ತಿ

ನವೆಂಬರ್ 2016 ರಂತೆ 89 ಆವೃತ್ತಿಗಳು ಇವೆ. ಸೆಪ್ಟೆಂಬರ್ 2016 ರ ಪ್ರಕಾರ, ಮೂವತ್ತೊಂದು ಆವೃತ್ತಿಗಳು ಪ್ರತಿ 1,000 ಕ್ಕೂ ಹೆಚ್ಚು ಲೇಖನಗಳು ಒಳಗೊಂಡಿವೆ.[೩] [೪]

ಕನ್ನಡ ವಿಕಿಕೋಟ್

ಕನ್ನಡ ಆವೃತ್ತಿ ವಿಕಿಕೋಟ್ನಲ್ಲಿ ೧ ಜುಲೈ ೨೦೨೦ ನಂತೆ 265 ಲೇಖನ ಪುಟಗಳಿವೆ.

ಇವನ್ನು ನೋಡಿ

ಉಲ್ಲೇಖಗಳು