ಶುದ್ಧಗೆ

ಅಕ್ಷರ ಮಾಲೆ / ವರ್ಣಮಾಲೆ : ‘ಅಕ್ಷರ’ ಎಂದರೆ syllable ಎಂದೂ ‘ವರ್ಣ’ ಎಂದರೆ letter ಎಂದೂ ಅರ್ಥವನ್ನು ಪಡೆಯುತ್ತದೆ. ಕನ್ನಡಅಕ್ಷರಗಳನ್ನು ಕೇಶಿರಾಜ ಸಂಸ್ಕೃತ ಮೂಲವನ್ನು ಇರಿಸಿಕೊಂಡು ಚರ್ಚಿಸಿದ್ದಾನೆ. ಇವುಗಳನ್ನು ಆತ ಶುದ್ಧಗೆ ಎಂದು ಕರೆದಿದ್ದಾನೆ.[೧]

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು
ಅಕ್ಷರಮಾಲೆಯ ಮಾದರಿ.
ಅ,ಆ, ಇ, ಈ, ಉ, ಊ, ಋ, ಋೂ , ಲುೃ, ಲೂೃ, ಏ, ಐ, ಓ, ಔ.
ಕ್, ಖ್, ಗ್, ಘ್, ಙï,
ಚ್, ಛ್, ಜ್, ಝ್, ಞï,
ಟï, ಠ್, ಡ್, ಢ್, ಣï,
ತ್, ಥ್, ದ್, ಧ್, ನ್,
ಪ್, ಫ್, ಬ್, ಭ್, ಮ್,
ಯ್, ರ್, ಲ್, ವ್, ಶ್, ಷ್, ಸ್, ಹ್, ಳ್

ಕಾಗುಣಿತಾಕ್ಷರ

ವ್ಯಂಜನಗಳಿಗೆ ಸ್ವರಗಳು ಸೇರಿ ಗುಣಿತಾಕ್ಷರಗಳೆನಿಸುವುವು.ರೂಢಿಯಲ್ಲಿ ಕಾಗುಣಿತ ಎನ್ನುತ್ತೇವೆ.

ಉದಾ : ಕ್+ಅ=ಕ. ಹೀಗೆ ‘ಕ್’ ವ್ಯಂಜನಕ್ಕೆ ‘ಅ’ ಸ್ವರ ಸಂಜ್ಞೆಗಳು ಕೂಡಿದಾಗ ‘ಕ’ಕಾರವಾಗುತ್ತದೆ.‘ಕ’ಕಾರದಲ್ಲಿ ಹದಿನಾಲ್ಕು ಸ್ವರಗಳೂ ಸೇರಿದ ಮೇಲೆ ಆಗುವ ‘ಕ ಕಾ ಕಿ ಕೀ ಕು ಕೂ ಕೃ ಕñ ಕೆ ಕೇ ಕೈ ಕೊ ಕೋ ಕೌ’ ಎಂಬ ಹದಿನಾಲ್ಕು ಗುಣೀತಾಕ್ಷರಗಳೇ ಕಾಗುಣಿತಾಕ್ಷರಗಳು.
‘ಕ್’ ಕಾರದಿಂದ ‘ಮ್’ಕಾರದ ವರೆಗಿನ 25 ವರ್ಗೀಯ ವ್ಯಂಜನಗಳಿಗೂ ಯ್’ಕಾರದಿಂದ ಳ್’ಕಾರದ ವರೆಗಿನ 9 ಅವರ್ಗೀಯ ವ್ಯಂಜನಗಳಿಗೂ ಹೀಗೆ ಕಾಗುಣಿತಾಕ್ಷರವನ್ನು ಬಳಸಬಹುದು.

ಒತ್ತಕ್ಷರ ಸ್ವರೂಪ

ಒತ್ತಕ್ಷರವನ್ನು ಸಂಯುಕ್ತಾಕ್ಷರವೆಂದೂ[ಸಂಯುಕ್ತಾಕ್ಷರ ಎಂದರೆ, ಚೆನ್ನಾಗಿ ಸೇರಿದ ಎಂದು ಅರ್ಥ. ಎಂದರೆ ಎರಡು ವ್ಯಂಜನಗಳು ಮಧ್ಯದಲ್ಲಿ ಯಾವ ಕಾಲ ವಿಳಂಬವೂ ಇಲ್ಲದೇ ಸೇರುವುದೇ ಸಂಯುಕ್ತಾಕ್ಷರ], ದ್ವಿತ್ವಾಕ್ಷರವೆಂದೂ [ಒಂದೇ ಜಾತಿಯ ಎರಡು ವ್ಯಂಜನಗಳು ಸೇರುವುದಕ್ಕೆ ದ್ವಿತ್ವವೆಂದು] ಕರೆಯುತ್ತಾರೆ.ಒತ್ತಕ್ಷರಗಳಲ್ಲಿ ಎರಡು ವಿಧ.

  1. ಸಜಾತೀಯ ಒತ್ತಕ್ಷರಗಳು.
  2. ವಿಜಾತೀಯ ಒತ್ತಕ್ಷರಗಳು.

ಸಜಾತೀಯ ಒತ್ತಕ್ಷರಗಳು

ಒಂದೇ ಜಾತಿಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರವು ಸಜಾತೀಯ ಒತ್ತಕ್ಷರ.

ಉದಾ : ‘ಅಣ್ಣ’ ಎಂಬ ಪದದಲ್ಲಿ ಅ+ಣ್+ಣ್+ಅ. ಹಾಗೇನೆ ಅಕ್ಕ, ಅಜ್ಜ, ಅಪ್ಪ, ಅಮ್ಮ, ತಮ್ಮ, ಅತ್ತಿಗೆ ಇತ್ಯಾದಿ ಪದಗಳೂ ಈ ನಿಯಮದಲ್ಲಿ ಕಾಗುಣಿತಗೊಂಡಿವೆ. ವ್ಯಂಜನಗಳಿಗೆ ಸಜಾತೀಯ ಒತ್ತಕ್ಷರಗಳು ಈ ಕೆಳಗಿನಂತಿವೆ.
ಕ್ಕ್ಖ್ ್ಖಗ್ಗ್ಘ್ಘ್ಙïÐ
ಚ್ಚ್ಛ್ಛ್ಜ್ಜ್ಝ್ಝ್ಞï್ಞ
ಟ್ಟ್ಠ್ಠ್ಡ್ಡ್ಢ್ಢ್ಣ್ಣ್
ತ್ತ್ಥ್ಥ್ದ್ದ್ಧ್ಧ್ನ್ನ್
ಪ್ಪ್ಫ್ಫ್ಬ್ಬ್ಭ್ಭ್ಮ್ಮ್
ಯ್ಯ್ ರ್ರ್ ಲ್ಲ್ ವ್ವ್ ಶ್ಶ್ ಷ್ಷ್ ಸ್ಸ್ ಹ್ಹ್ ಳ್ಳ್

ವಿಜಾತೀಯ ಒತ್ತಕ್ಷರಗಳು

ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ವಿಜಾತೀಯ ಸಂಯುಕ್ತಾಕ್ಷರ ಎನ್ನುತ್ತಾರೆ.ಉದಾ : ‘ಭಕ್ತ’ ಎಂಬ ಶಬ್ದಲ್ಲಿ ಭ್+ಅ+ಕ್+ತ್+ಅ. ಈ ಪದದಲ್ಲಿ ಐದು ಅಕ್ಷರಗಳಿವೆ. ಹಾಗೇನೆ ಸ್ತ್ರೀ, ವಸ್ತ್ರ, ಸ್ವಾರ್ಥ ಮುಂತಾದ ಪದಗಳಿಗೂ ಕಾಗುಣಿತಾಕ್ಷರವನ್ನು ಅನ್ವಯಿಸಬಹುದು.

ವ್ಯಂಜನಗಳಿಗೆ ವಿಜಾತೀಯ ವ್ಯಂಜನಗಳು ಒತ್ತಕ್ಷರವಾಗಿ ಬರುವ ಸಂದರ್ಭ - ಕ್ಗ, ಕ್ತ, ಕ್ಮ, ಕ್ಯ, ಕ್ರ, ಕ್ಲ, ಕ್ವ, ಕ್ಷ, ಕ್ಸ, ಇತ್ಯಾದಿ.ಅಭ್ಯಾಸಕ್ಕೆ- ತರಗತಿಯಲ್ಲಿ ಇಂತಹ ವಿಜಾತೀಯ ವ್ಯಂಜನಗಳನ್ನು ಬರೆಯಿರಿ.
  • ವಿಶಿಷ್ಟ ಲಿಪಿಗಳು(ಅರ್ಕಾವೊತ್ತು, ದೀರ್ಘ)
  • ಅರ್ಕಾವೊತ್ತು ಲಿಪಿ - ರ್‘’ ಇದೊಂದುವಿಶಿಷ್ಟ ಕನ್ನಡ ಲಿಪಿ. ಉಚ್ಛಾರಣೆಯಲ್ಲಿ ‘ಅರ್’ ಎಂದಾಗುತ್ತದೆ.ಉದಾ :ಕರ್ನಾಟಕ ಕರ್ಮ, ಧರ್ಮ, ಮರ್ಮ ಇತ್ಯಾದಿ ಪದಗಳು. [ಇದನ್ನು ಕರ್ನಾಟಕವೆಂದೂ ಬರೆಯಬಹುದು.ಕರ್ನಾಟಕವನ್ನು ಕರ್ನಾಟಕವೆಂದೂ ಬರೆಯಬಹುದು.ಇಲ್ಲಿ ‘ರಾ’ ಅಕ್ಷರಕ್ಕೆ ದೀರ್ಘ ರೂಪ ಬಂದಿದೆ.ಕರ್ನಾಟಕದಲ್ಲಿ ‘ನಾ’ ಅಕ್ಷರ ದೀರ್ಘ ರೂಪ ಪಡೆದಿದೆ.ಇದು ಕನ್ನಡ ವಿಶಿಷ್ಟತೆ].
  • ದೀರ್ಘಲಿಪಿಗಳು – 1. ಕಾ Á[ಆ], 2. ಕೀ ‘ೀ’[ಈ], 3. ಕು ‘ು’[ಉ], 4. ಕೂ ‘ೂ’[ಊ], 5. ಕೃ ‘ೃ’[ಋ], 6. ಕೆ ‘É’[ಎ], 7. ಕೇ ‘Éೀ’[ಏ], 8. ಕೈ ‘Éೈ’[ಐ], 9. ಕೊ ‘Éೂ’[ಒ], 10. ಕೋ ‘Éೂೀ’[ಓ], 11. ಕೌ ‘Ë’[ಔ],

ಕೇಶಿರಾಜ ಕಂಡಿರುವ ಶುದ್ಧಗೆ, ಶುದ್ಧಗೆಯ ವಿಶ್ಲೇಷಣೆ. ಶುದ್ಧಗೆಯ ಪರಿಶೀಲನೆ

‘ವರ್ಣಂಗಳ ಪಾಠಕ್ರಮ
ಮರ್ಣವವೃತ ಧಾತ್ರಿಯೊಳ್ ಪ್ರಸಿದ್ಧಂ --------- ’ [ಸೂ : 14] – ಕೇಶಿರಾಜ. [ಅಕ್ಕರಂಗಳನೋದುವ ಕ್ರಮಂ ಕಡಲುಡುಗೆಯಾದ ಧಾರಿಣಿಯೊಳ್ ಸ್ವಭಾವದಿಂ ಪ್ರಸಿದ್ಧಂ.]

‘ಯಾವುದೇ ಭಾಷೆಯ ಜೀವಂತಿಕೆ ಇರುವುದು ಆ ಭಾಷೆಯ ವರ್ಣ ವ್ಯವಸ್ಥೆಯ ಮೇಲೆ’.ಈ ವರ್ಣವ್ಯವಸ್ಥೆ ಅಥವಾ ಅಕ್ಷರಮಾಲೆಯನ್ನು ಕೇಶಿರಾಜ ‘ಶುದ್ಧಗೆ’ ಎಂದು ಕರೆದಿದ್ದಾನೆ.ಶುದ್ಧಗೆ ಎಂದರೆ ‘ಶುದ್ಧಾಕ್ಷರ’ ಅಕ್ಷರವೆಂದೂ ವರ್ಣವೆಂದೂ ಶುದ್ಧಾಕ್ಷರಕ್ಕೆ ಪರ್ಯಾಯ ಹೆಸರು.ಯಾವ ವರ್ಣವನ್ನು ಬರೆಯಲು ಹಾಗೂ ಉಚ್ಚರಿಸಲು ಬರುವುದೋ ಅದೇ ಶುದ್ಧಾಕ್ಷರವಾಗಿದೆ.ಗುಡುಗು, ಮಿಂಚು ಮೊದಲಾದುವುಗಳಿಂದ ಕಿವಿಗೆ ಕೇಳುವ ಸ್ವರಗಳಾವುವೂ ಶುದ್ಧಗೆಗಳಲ್ಲ. ಉದಾಹರಣೆಗೆ, ನಾಯಿಯನ್ನು ಕರೆಯುವುದಕ್ಕೆ, ಕೋಳಿಯನ್ನು ಕರೆಯುವುದಕ್ಕೆ ಒಂದು ಸಂಜ್ಞೆ ಹೊರಡಿಸುತ್ತೇವೆ.ಇವುಗಳು ಶುದ್ಧಗೆಗೆ ಹೊರತಾದ ಶಬ್ಧಗಳು.ಯಾಕೆಂದರೆ ಅವುಗಳಿಗೆ ಲಿಪಿಯಿಲ್ಲ. ಅವಕ್ಕೆ ಭಾಷೆಯಲ್ಲಿ ಶುದ್ಧಾಕ್ಷರಕ್ಕೆ ಇರುವ ಯಾವ ಸಾಂಕೇತಿಕ ವ್ಯವಸ್ಥೆಯೂ ಇಲ್ಲ.ಕೇಶಿರಾಜನ ಶುದ್ಧಾಕ್ಷರ ಬಗೆಗಿನ ತರ್ಕವು ಆಧುನಿಕ ಭಾಷಾತಜ್ಞರ ವಿಚಾರಕ್ಕೆ ತೀರಾ ನಿಕಟವಾಗಿರುವುದನ್ನು ಕಾಣಬಹುದು.ಹೀಗಾಗಿ ಆತನ ಶುದ್ಧಾಕ್ಷರ ತರ್ಕಕ್ಕೂ ಆಧುನಿಕ ವಿದ್ವಾಂಸರ ತರ್ಕಕ್ಕೂ ಸಾಧ್ಯತೆಗಳಿವೆ. ಆಧುನಿಕ ಭಾಷಾತಜ್ಞರ ಪ್ರಕಾರ ಕೇಶಿರಾಜನ ‘ಘನಸ್ವನಾದಿ’ ಎಂಬುದಕ್ಕೆ ‘ಧ್ವನಿ’ (Phone) ಎಂದೂ, ಶುದ್ಧಾಕ್ಷರ ಎಂಬುದಕ್ಕೆ ‘ಧ್ವನಿಮಾ’ (Phoneme) ಎಂದೂ ಹೆಸರಿಸಲಾಗಿದೆ.

ಕೇಶಿರಾಜನು ಹೇಳುವಂತೆ ‘ನಾಭಿಮೂಲದೊಳ್ ಕಹಳೆಯ ಪಾಂಗಿನವೋಲ್’ (ನಾಭಿಯ ಒಳಗಿನಿಂದ) ಹೊರಟು ಬರುವ ಧ್ವನಿಯು ಜೀವನಿಷ್ಟದ ಮೇರೆಗೆ ಅಸಂಖ್ಯಾತ ಧ್ವನಿ ರೂಪಗಳನ್ನು ಹುಟ್ಟಿಸಬಹುದು.ಆದರೆ ಭಾಷೆಯಲ್ಲಿ ಮನುಷ್ಯ ನಿರ್ಮಿತವಾದ ಅಸಂಖ್ಯಾತ ಧ್ವನಿ ವಿಶೇಷತೆಗಳಿಗೆ ಬೆಲೆಯಿಲ್ಲ.ಒಂದು ಭಾಷೆಯ ವ್ಯವಹಾರಕ್ಕೆ ಸಾಕಾಗುವಷ್ಟು ಇರುವ ಕೆಲವೇ ಕೆಲವು ನಿಯಮಿತ ಧ್ವನಿಗಳನ್ನು ಮಾತ್ರ ಧ್ವನಿಮಾ ರೂಪಗಳೆಂದು ಅಥವಾ ಶುದ್ಧಾಕ್ಷರಗಳೆಂದೂ ಕರೆಯಲಾಗುತ್ತದೆ.ಹೀಗೆಂದು ಧ್ವನಿಗಳನ್ನು ಅಲ್ಲಗಳೆದು, ಧ್ವನಿಮಾಗಳನ್ನಷ್ಟೇ ಮನ್ನಿಸಬೇಕೆಂಬ ಅರ್ಥದಲ್ಲಿ ಧ್ವನಿಗಳು ಮೂಲತಃ ಇರದೆ ಧ್ವನಿಮಾ ರಚನೆ ಸಾಧ್ಯವಾಗುವುದಿಲ್ಲ.ಇವು ಪರಸ್ಪರ ಪೂರಕವಾದವುಗಳೇ ವಿನಃ ಪ್ರತಿಸ್ಪರ್ಧಿಗಳಾಗಲಿ, ಮಾರಕಗಳಾಗಲಿ ಅಲ್ಲ.

ಕೇಶಿರಾಜನ ಸೂತ್ರದ ಪ್ರಕಾರ,

‘ಕವಿಗಳ್ ಸ್ವರದಿಂ ವರ್ಗದಿ
ನವರ್ಗದಿಂ ಯೋಗವಾಹದಿಂ ದೇಶಿಯೊಳು |
ದ್ಭವಮಪ್ಪ ವರ್ಣದಿಂ ಪಂ
ಚವಿಧಂ ತಾನೆಂದು ತಿಳಿಪುವರ್ ಶುದ್ಧಗೆಯಂ || ’ (ಸೂತ್ರಸಂಖ್ಯೆ – 41)

ಕವಿವಾಣಿಯಂತೆ, ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು.ಅವುಗಳು ಕ್ರಮವಾಗಿ, 1.ಸ್ವರ, 2.ವರ್ಗೀಯ, 3.ಅವರ್ಗೀಯ, 4.ಯೋಗವಾಹ, 5. ದೇಶಿಯ.

ಸ್ವರಾಕ್ಷರಗಳು

ಸೂತ್ರ :

ಸ್ವಯಂ ರಂಜತೇ ಇತಿ
ಸ್ವರ
ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

ವ್ಯಾಖ್ಯೆ

ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.ಸ್ವರಗಳನ್ನು ಹ್ರಸ್ವಸ್ವರ, ದೀರ್ಘಸ್ವರ, ಸಂಧ್ಯಕ್ಷರ ಅಥವಾ ಪ್ಲುತಾಕ್ಷರಗಳೆಂದು ವಿಭಾಗ ಮಾಡಬಹುದು.

ಹ್ರಸ್ವಸ್ವರ

ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಲುೃ.

ದೀರ್ಘಸ್ವರ

ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 – ಆ,ಈ,ಊ.ಋೂ,ಲೂೃ.ಸಂಧ್ಯಕ್ಷರ/ಪ್ಲುತಾಕ್ಷರ - ಮೂರು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 4 – ಏ,ಐ,ಓ,ಔ.

ಪ್ಲುತ

ದೀರ್ಘಸ್ವರವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರ. ಉದಾ: ಅಣ್ಣಾss, ತಮ್ಮಾss, ಹಾ! ರಾಮಾ! .

ಸಂಧ್ಯಕ್ಷರ

ಸಂಧ್ಯಕ್ಷರಗಳಲ್ಲಿ ಗೂಢಸಂಧಿಯಿದೆ. ಏ=ಅ+ಇ; ಆ+ಈ; ಅ+ಈ;ಆ+ಇ; ಓ=ಅ+ಉ; ಆ+ಊ; ಐ=ಅ+ಏ; ಔ=ಅ+ಒ.ಕೇಶಿರಾಜನು ಅ,ಆ; ಇ,ಈ; ಉ,ಊ; ಋ,ಋೂ; ಲುೃ,ಲೂೃ ಅಕ್ಷರಗಳ ಜೋಡಿಗಳನ್ನು ಸವರ್ಣಅಕ್ಷರ/ಸಮಾನ ಅಕ್ಷರಗಳೆಂದು/ಯುಗ್ಮಅಕ್ಷರಗಳೆಂದು ಕರೆದಿದ್ದಾನೆ. ಅಲ್ಲದೆಯೆ, ಎ,ಏ – ಒ,ಓ ಎಂಬ ಅಕ್ಷರಗಳು ಸವರ್ಣ/ಸಮಾನ ಅಕ್ಷರಗಳೆಂದು ಹೇಳಿ ಕನ್ನಡಕ್ಕೆ ವಿಶಿಷ್ಟವಾಗಿರುವ ಕೆಲವು ಅಕ್ಷರಗಳನ್ನು ಗುರುತಿಸಿದ್ದಾನೆ. ಅ. ಆ. ಎಂಬ ವರ್ಣದ ಹಿಂದನ ಸ್ವರಗಳು ‘ನಾಮಿ’ ಸಂಜ್ಞೆಯನ್ನು ಪಡೆಯುವುವು.

ಅನುಸ್ವಾರ ಮತ್ತು ವಿಸರ್ಗಗಳು

ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ವಂಜನಾಂಗವೆಂದೂ ಕರೆಯಲಾಗಿದೆ.

ವರ್ಗೀಯ ವ್ಯಂಜನಾಕ್ಷರಗಳು

ಸ್ವತಂತ್ರವಾಗಿ ಉಚ್ಚರಿಸಲಾಗದ ಅಕ್ಷರಗಳು ‘ವ್ಯಂಜನ’ಗಳಾಗಿವೆ.ಸ್ವರಗಳ ಸಹಾಯವಿಲ್ಲದೆ ವ್ಯಂಜನಗಳ ಉಚ್ಚಾರ ಸಾಧ್ಯವಿಲ್ಲ.ಉದಾ : ಕ್+ಅ=ಕ. ವ್ಯಂಜನ ಸಂಜ್ಞೆಗಳಲ್ಲಿ ‘ಕ್’ಕಾರದಿಂದ ‘ಮ್’ಕಾರದವರೆಗೆ ಒಟ್ಟು 25 ಅಕ್ಷರಗಳಿವೆ.ವ್ಯಂಜನದ ಒಳವರ್ಗ ಹೀಗಿವೆ. ಅವುಗಳು;

ಕ್’ವರ್ಗದ ವ್ಯಂಜನಗಳು - ಕ್ ಖ್ ಗ್ ಘ್ ಙï - 5
ಚ್’ವರ್ಗದ ವ್ಯಂಜನಗಳು - ಚ್ ಛ್ ಜ್ ಝ್ ಞï - 5
ಟ್’ವರ್ಗದ ವ್ಯಂಜನಗಳು – ಟ್ ಠ್ ಡ್ ಢ್ ಣï - 5
ತ್’ವರ್ಗದ ವ್ಯಂಜನಗಳು –ತ್ ಥ್ ದ್ ಧ್ ನ್ - 5
ಪ್’ವರ್ಗದ ವ್ಯಂಜನಗಳು - ಪ್ ಫ್ ಬ್ ಭ್ ಮ್ - 5

ಅಲ್ಪಪ್ರಾಣ

ಕಡಿಮೆ ಉಸಿರಿನಿಂದ ಉಚ್ಛರಿಸುವ ವ್ಯಂಜನಾಕ್ಷರ ಅಲ್ಪಪ್ರಾಣ.ವರ್ಗಾಕ್ಷರಗಳಲ್ಲಿ ಪ್ರತಿ ವರ್ಗದ ಪ್ರಥಮ, ತೃತೀಯ ಅಕ್ಷರಗಳು ‘ಕ್ ಗ್ ಚ್ ಜ್ ಟ್ ಡ್ ತ್ ದ್ ಪ್ ಬ್’ ‘ಅಲ್ಪಪ್ರಾಣ’ವೆಂದೂ ಸರಳವೆಂದೂ ಹೆಸರು.

ಮಹಾಪ್ರಾಣ

ಹೆಚ್ಚು ಉಸಿರಿನಿಂದ ಉಚ್ಛರಿಸುವ ವ್ಯಂಜನಾಕ್ಷರ ಮಹಾಪ್ರಾಣ.ವರ್ಗಾಕ್ಷರಗಳಲ್ಲಿ ಪ್ರತಿ ವರ್ಗದ ದ್ವಿತೀಯಾ, ಚತುರ್ಥ ಅಕ್ಷರಗಳು ‘ಖ್ ಛ್ ಠ್ ಥ್ ಫ್, ಘ್ ಝ್ ಢ್ ಧ್ ಭ್’ ‘ಮಹಾಪ್ರಾಣÁಕ್ಷರ’ವೆಂದೂ ‘ಪರುಷ’ವೆಂದೂ ಹೆಸರು.

ಅನುನಾಸಿಕ

ಮೂಗಿನ ಸಹಾಯದಿಂದ ಉಚ್ಚರಿಸುವ ವ್ಯಂಜನಾಕ್ಷರ. ವರ್ಗಾಕ್ಷರಗಳಲ್ಲಿ ಪ್ರತಿ ವರ್ಗದ ಪಂಚಮಾಕ್ಷರ ‘ಙï ಞï ಣï ನ್ ಮ್’ಗಳಿಗೆ ‘ಅನುನಾಸಿಕ ಅಕ್ಷರ’ವೆಂದು ಹೆಸರು.

ಅವರ್ಗೀಯ ವ್ಯಂಜನಾಕ್ಷರಗಳು

ಒಂದೊಂದಾಗಿ ವರ್ಗೀಕರಿಸಲು ಆಗದಿರುವವುಗಳೇ ಅವರ್ಗೀಯ ವ್ಯಂಜನಾಕ್ಷರಗಳು.

ಯ್, ರ್, ಲ್, ವ್, ಶ್, ಷ್, ಸ್, ಹ್, ಳ್-ಗಳೆಂದು ಅವರ್ಗೀಯ ವ್ಯಂಜನಗಳು ಒಂಭತ್ತು.

ಕೇಶಿರಾಜನು ವರ್ಗೀಯ ವ್ಯಂಜನಗಳಂತೆ ಅವರ್ಗೀಯ ವ್ಯಂಜನಗಳಲ್ಲಿ ಯ್, ವ್, ಲ್, ಅಕ್ಷರಗಳನ್ನು ಅನುನಾಸಿಕಗಳೆಂದು ಹೇಳಿ ಧ್ವನಿಶ್ತ್ರಾದ ಸೂಕ್ಷ್ಮ ಪರಿಜ್ಞಾನವನ್ನು ಪ್ರಕಟಿಸಿದ್ದಾನೆ.

ಯೋಗವಾಹ ಅಕ್ಷರಗಳು

ಯೋಗವಾಹಗಳು ನಾಲ್ಕು.

ಅನುಸ್ವಾರ ‘ಂ’ - ಅಂ, ಡಂ, ಕಂ, ಗಂ;
ವಿಸರ್ಗ ‘ಃ’ - ಅಃ, ಕಃ;
ಜಿಹ್ವಾಮೂಲೀಯ ‘x್ಕ’– ಃಕ.
ಉಪಾದ್ಮಾನೀಯ (ಓಷ್ಠ್ಯ) ‘ಪಿ’

ಇವುಗಳನ್ನು ವರ್ಣಮಾಲೆಯ ಶುದ್ಧಾಕ್ಷರಗಳು ಎಂದು ಕರೆಯುವುದಕ್ಕಿಂತ ಭಾಷೆಯಲ್ಲಿ ಕೇಳಿ ಬರುವ ಧ್ವನಿಗಳು ಯೋಗವಾಹಗಳು ಎಂದು ಮನ್ನಣೆ ನೀಡಲಾಗಿದೆ.ಜಿಹ್ವಾಮೂಲೀಯ ಮತ್ತು ಉಪದ್ಮಾನೀಯಗಳು ಸಂಸ್ಕೃತ ಪದಕೋಶದಲ್ಲಿ ಮಾತ್ರ ಕಾಣಿಸುತ್ತವೆ. ಉದಾ: ಪ್ರಾತ ಃಕಾಲ, ಪಯ ಃಪಾನ ಇತ್ಯಾದಿ. ಆದರೆ ಈ ಧ್ವನಿ ವಿಶೇಷ ಕನ್ನಡಕ್ಕೂ ಸಹಜವಾದುದೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ‘ಉಫ್’ ಎಂಬಲ್ಲಿ ಕೇಳಿ ಬರುವ ಧ್ವನಿಯೇ ಜಿಹ್ವಾಮೂಲೀಯ. ಉದಾ: ಅಂತ ಃಕರಣ, ಮನ ಃಕಷಾಯ. ಉಪಾದ್ಮಾನೀಯಕ್ಕೆ ಉದಾ: ಃಪ / ಪಿ - ತಪ ಃಫಲ, ಪುನ ಃಪುನಃ .ಇದು ಶ್ರವಣ ರೂಪದ ಧ್ವನ್ಯಂಗವಾಗಿದ್ದು ಅಕ್ಷರ ರೂಪದ ಶುದ್ಧಗೆ ಎಂಬುದು ಕನ್ನಡದಲ್ಲಿ ಗಮನಾರ್ಹ.ಅನುಸ್ವಾರ, ವಿಸರ್ಗಗಳು ಸ್ವರಾಂಗ ವ್ಯಂಜನಾಂಗವಾದರೂ ಭಾಷಾ ಬಳಕೆಯಲ್ಲಿ ಅವುಗಳಿಗೆ ಸ್ವತಂತ್ರ ಧ್ವನಿಮಾ ವ್ಯವಸ್ಥೆಯಿಲ್ಲ.ಆದರೂ ಕೇಶಿರಾಜನ ಇವು ನಾಲ್ಕೂ ಯೋಗವಾಹಗಳು.

ದೇಶಿಯ ಅಕ್ಷರಗಳು

ಸಂಸ್ಕøತದಲ್ಲಿ ಇಲ್ಲದ ಅಚ್ಚಗನ್ನಡಕ್ಕೆ ವಿಶಿಷ್ಟವಾದ ವರ್ಣಗಳು ದೇಶಿಯಗಳು. ಕನ್ನಡದಲ್ಲಿ ಇವುಗಳ ಸ್ಥಾನ, ಕರಣ, ಪ್ರಾಸ ವಿಚಾರಗಳ ಬಗೆಗೆ ಕೇಶಿರಾಜನೊಬ್ಬನೆ ಅಧಿಕೃತವಾಗಿ ಹೇಳಿರುವನಾದುದರಿಂದ ಇವುಗಳಿಗೆ ಹೆಚ್ಚಿನ ಮಹತ್ವವಿದೆ.ದೇಶಿಯಗಳ ಕುರಿತಂತೆ ಕೇಶಿರಾಜ 16, 17 ನೆಯ ಸೂತ್ರಗಳಲ್ಲಿ ಅವುಗಳ ವ್ಯುತ್ಪತ್ತಿ, ಸ್ಥಾನ ಮತ್ತು ಉಚ್ಚಾರ ಕ್ರಮಗಳ ಬಗ್ಗೆ ವಿವರಿಸಿದ್ದಾನೆ. ಅವುಗಳು,

1). ¾/ರ(ಶಕಟರೇಫ/ಬಂಡಿಯ ‘ರ’ಕಾರ), 2) ¿/ಳ(ಕುಳ), 3) ಳ/ಕ್ಷಳ (ಸಂಸ್ಕøತ ಶಬ್ದಗಳಲ್ಲಿಯ ‘ಲ’ ಕ್ಕೆ ಪ್ರತಿಯಾಗಿ ಬರುವ ‘ಳ’ಕ್ಕೆ ಕ್ಷಳವೆಂದೂ ಹೆಸರು), 4) ಎ, 5) ಒ .

ಕೇಶಿರಾಜ ಸೂತ್ರ 43ರಲ್ಲಿ ಕನ್ನಡ ಶುದ್ಧಗೆಗಳು ಎಷ್ಟು ಎಂದು ನಿರ್ಧರಿಸುವ ವಿವರಗಳಿವೆ.ಆ ಪ್ರಕಾರ ಕೇಶಿರಾಜನು ಈ ವರೆಗೆ ಬಂದಂತಹ ವರ್ಣಗಳನ್ನು ಕಳೆ (-) ಎನ್ನುತ್ತಾನೆ.ಆತನು ಕಳೆಯುವ ವರ್ಣಗಳು ಒಟ್ಟು ಹತ್ತು. ಅವುಗಳು; ::1)ಋ, 2) ಋೂ , 3)ಲುೃ, 4)ಲೂೃ, 5)ಶ್, 6)ಷ್, 7) ಃ, 8) x್ಕ 9) ಪಿ, 10) ಳ್. ಉಳಿದ 47 ವರ್ಣಗಳನ್ನು ಅಚ್ಚಗನ್ನಡದ ಶುದ್ಧಗೆ ಎನ್ನುತ್ತಾನೆ. ಹೀಗೆ ಕೇಶಿರಾಜನ ಸೂತ್ರದ ಪ್ರಕಾರ, ನಾಲ್ವತ್ತೇಳಾಯ್ತಳೆ ಶುದ್ಧಗೆ ಎಂಬ ಖಚಿತ ದರ್ಶನವಿದೆ. ಹೀಗೆ ಒಟ್ಟು ವರ್ಣಗಳು 57.ಕಳೆಯಬೇಕಾದ ವರ್ಣಗಳು 10 = 47. ಇವುಗಳಲ್ಲಿ 10 ಮಹಾಪ್ರಾಣಾಕ್ಷರಗಳನ್ನು ಕಳೆದರೆ ಕನ್ನಡದಲ್ಲಿ 37 ಅಕ್ಷರಗಳಿರುತ್ತವೆ.

ಭಾಷಾವಿಜ್ಞಾನದ ನೆಲೆಯಲ್ಲಿ ಶುದ್ಧಗೆಗಳು

ಕೇಶಿರಾಜನು ನಿರೂಪಿಸುವ ಭಾಷಾವಿಜ್ಞಾನದ ನೆಲೆಯಲ್ಲಿ ಶುದ್ಧಗೆಗಳು

ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ ?
‘ನಾಭಿಮೂಲದೊಳ್ ಕಹಳೆಯ ಪಾಂಗಿನವೋಲ್’ - ಈ ಅಕ್ಷರಗಳು ಹೊಕ್ಕಳದ ಮೂಲಭಾಗದಿಂದ ಹೊರಟ ಶಬ್ದವೊಂದರಿಂದ ಹುಟ್ಟುತ್ತವೆ. ಹಾಗೆ ಹೊರಟ ಶಬ್ದವು ಗಂಟಲು, ದವಡೆ, ಮೂರ್ಧ(ನಲಗೆಯ ಮೇಲ್ಭಾಗದ ಭಾಗ), ತುಟಿ, ಹಲ್ಲು – ಇತ್ಯಾದಿ ಅವಯವಗಳ ಸಹಾಯದಿಂದ ಬೇರೆಬೇರೆ ಅಕ್ಷರಗಳಾಗುತ್ತವೆ. ಈ ರೀತಿಯಲ್ಲಿ ಅಕ್ಷರಗಳು ಹುಟ್ಟುವ ರೀತಿಯನ್ನು ವ್ಯವಸ್ಥೆಗೊಳಿಸಲಾಗಿದೆ.
  1. ಅ, ಆ, ಕ, ಖ, ಗ, ಘ ಙ, ಹ ಮತ್ತು ವಿಸರ್ಗ [ಃ] – ಇವು ಕಂಠದಲ್ಲಿ ಹುಟ್ಟುತ್ತವಾದ್ದರಿಂದ ಇವನ್ನು ‘ಕಂಠ್ಯ’ ವರ್ಣವೆನ್ನುತ್ತಾರೆ.
  2. ಇ, ಈ, ಚ, ಛ, ಜ, ಝ, ಞ, ಯ, ಶ – ಇವುಗಳು ತಾಲುವಿನ(ದವಡೆಯ) ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವನ್ನು ‘ತಾಲವ್ಯಾಕ್ಷರ’ಗಳೆನ್ನುತ್ತಾರೆ.
  3. ಋ, ಋೂ , ಟ, ಠ, ಡ, ಢ, ಣ, ರ, ಷ – ಅಕ್ಷರಗಳು ನಲಗೆಯ ಮೇಲ್ಭಾಗವಾದ ಮೂರ್ಧವೆಂಬುದ ಸಹಾಯದಿಂದ ಹುಟ್ಟತ್ತವೆ. ಆದುದರಿಂದ ಇವು ‘ಮೂರ್ಧನ್ಯ’ಗಳೆನಿಸುವುವು.
  4. ತ, ಥ, ದ, ಧ, ನ, ಲ, ಸ – ಅಕ್ಷರಗಳು ಹಲ್ಲುಗಳ ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವು ‘ದಂತ್ಯ’ ವರ್ಣಗಳೆನಿಸುವುವು.
  5. ಉ, ಊ, ಪ, ಫ, ಬ, ಭ, ಮ – ಅಕ್ಷರಗಳು ತುಟಿಯ[ಓಷ್ಠ್ಯದ] ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವನ್ನು ‘ಓಷ್ಠ್ಯ’ ವರ್ಣಗಳೆನ್ನುವರು.
  6. ಙ, ಞ, ಣ, ನ, ಮ – ವರ್ಣಗಳು ನಾಸಿಕದ ಸಹಾಯದಿಂದ ಹುಟ್ಟುತ್ತವಾದ್ದರಿಂದ ಇವನ್ನು ‘ನಾಸಿಕಗಳು’[ಅನುನಾಸಿಕಗಳು] ಎನ್ನುವರು
  7. ಎ, ಏ, ಐ – ಅಕ್ಷರಗಳು ಹುಟ್ಟಲು ಕಂಠ ಮತ್ತು ತಾಲುಗಳೆರಡರ ಸಹಾಯ ಬೇಕಾಗುವುದರಿಂದ ಇವು ‘ಕಂಠತಾಲು’ ಅಕ್ಷರಗಳೆನಿಸುವುವು.
  8. ಒ, ಓ, ಔ – ಅಕ್ಷರಗಳು ಕಂಠ ಮತ್ತು ತುಟಿಗಳೆರಡರ ಸಹಾದಿಂದ ಹುಟ್ಟುತ್ತವಾದ್ದರಿಂದ ‘ಕಂಠ್ಯೋಷ್ಠ್ಯ’ ವರ್ಣವೆನಿಸುವುದು.
  9. ವ ಎಂಬ ಅಕ್ಷರವು ಹಲ್ಲು ಮತ್ತು ತುಟಿಗಳೆರಡರ ಸಹಾಯದಿಂದ ಹುಟ್ಟುತ್ತವಾದ್ದರಿಂದ ‘ದಂತ್ಯೋಷ್ಠ್ಯ’ ವರ್ಣವೆನಿಸುವುದು.
  10. ಅನುಸ್ವಾರ [ಂ] ವು – ಕಂಠ ಮತ್ತು ನಾಸಿಕದ ಸಹಾಯದಿಂದ ಹುಟ್ಟುತ್ತವಾದ್ದರಿಂದ ‘ಕಂಠನಾಸಿಕ’ ವರ್ಣವೆನಿಸುವುದು.


ಉಲ್ಲೇಖ