ಹಗ್ಗ

ತಿರುಚಿದ ಅಥವಾ ಹೆಣೆಯಲ್ಪಟ್ಟ ಪ್ಲೈಸ್, ನೂಲುಗಳು ಅಥವಾ ಎಳೆಗಳ ರೇಖೀಯ ಸಂಯೋಜನೆ

ಹಗ್ಗವು ಹೆಚ್ಚು ದೊಡ್ಡ ಹಾಗೂ ಹೆಚ್ಚು ಬಲಶಾಲಿ ರೂಪವನ್ನು ಸೃಷ್ಟಿಸಲು ಒಟ್ಟಾಗಿ ತಿರುಚಿದ ಅಥವಾ ಹೆಣೆದ ನೂಲುಗಳು, ಹುರಿಗಳು, ನಾರುಗಳು ಅಥವಾ ಎಳೆಗಳ ಗುಂಪು. ಹಗ್ಗಗಳು ಕರ್ಷಕ ಶಕ್ತಿಯನ್ನು ಹೊಂದಿರುತ್ತವೆ ಹಾಗಾಗಿ ಇವನ್ನು ಎಳೆಯಲು ಮತ್ತು ಎತ್ತಲು ಬಳಸಬಹುದು. ಹಗ್ಗವು ಸಮಾನ ರೀತಿಯಲ್ಲಿ ರಚನೆಗೊಂಡ ಹುರಿ, ದಾರ ಮತ್ತು ನೂಲಿಗಿಂತ ಹೆಚ್ಚು ದಪ್ಪ ಹಾಗೂ ಹೆಚ್ಚು ಗಟ್ಟಿಮುಟ್ಟಾಗಿರುತ್ತದೆ.

ಹಗ್ಗದ ಸುರುಳಿ

ಹಗ್ಗವನ್ನು ಯಾವುದೇ ಉದ್ದನೆಯ, ನಾರುಗಳಿರುವ, ಎಳೆಗಳಿಂದ ಕೂಡಿದ ವಸ್ತುವಿನಿಂದ ತಯಾರಿಸಬಹುದು, ಆದರೆ ಸಾಮಾನ್ಯವಾಗಿ ಕೆಲವು ನೈಸರ್ಗಿಕ ಅಥವಾ ಕೃತಕ ನಾರುಗಳಿಂದ ತಯಾರಿಸಲಾಗುತ್ತದೆ.[೧] ಕೃತಕ ನಾರಿನ ಹಗ್ಗಗಳು ತಮ್ಮ ನೈಸರ್ಗಿಕ ನಾರಿನ ಸಮಸ್ಥಾನಿಕಗಳಿಗಿಂತ ಗಣನೀಯವಾಗಿ ಗಟ್ಟಿಮುಟ್ಟಗಿರುತ್ತವೆ, ಹೆಚ್ಚಿನ ಕರ್ಷಕ ಶಕ್ತಿಯನ್ನು ಹೊಂದಿರುತ್ತವೆ, ನೈಸರ್ಗಿಕ ನಾರುಗಳಿಂದ ಉತ್ಪಾದಿಸಿದ ಹಗ್ಗಗಳಿಗಿಂತ ಕೊಳೆತ ನಿರೋಧಕವಾಗಿರುತ್ತವೆ, ಮತ್ತು ಇವನ್ನು ನೀರಿನ ಮೇಲೆ ತೇಲುವಂತೆ ಮಾಡಬಹುದು.

ಉಲ್ಲೇಖಗಳು