ಅನುಷ್ಕಾ ಶೆಟ್ಟಿ

ಭಾರತೀಯ ನಟಿ

'ಸ್ವೀಟಿ ಶೆಟ್ಟಿ', (೭ ನವೆಂಬರ್ ೧೯೮೧ರಲ್ಲಿ ಜನನ) ಇವರು ತಮ್ಮ ಸ್ಟೇಜ್ ಹೆಸರಾದ ಅನುಷ್ಕಾ ಶೆಟ್ಟಿ ಚಿರಪರಿಚಿತರಾದ ಭಾರತೀಯ ನಟಿ ಮತ್ತು ರೂಪದರ್ಶಿ ತೆಲುಗು ಮತ್ತು ತಮಿಳು ಚಲನಚಿತ್ರಗಳು ಪ್ರಧಾನವಾಗಿ ಕೆಲಸ ಮಾಡುತ್ತಾರೆ.ಅವರು ೨೦೦೫ರಲ್ಲಿ ತೆಲುಗು ಚಿತ್ರ ಸೂಪರ್ ಮೂಲಕ ಚೊಚ್ಚಲ ನಟನೆಯನ್ನು ಮಾಡಿದರು. ಅವರು ಖ್ಯಾತ ನಟಿಯಾಗಲು ವಿಕ್ರಮಾರ್ಕುಡು (೨೦೦೬), ಅರುಂಧತಿ [೧](೨೦೦೯), ವೇದಂ [೨](೨೦೧೦), ರುದ್ರಮದೇವಿ (೨೦೧೫) ಮತ್ತು ಬಾಹುಬಲಿ: ದಿ ಬಿಗಿನಿಂಗ್ ಎಂಬ ತೆಲುಗು ಚಲಚಿತ್ರಗಳಲ್ಲಿ ನಟಿಸಲು ಹೋದರು. ಹೆಚ್ಚಿನ-ಬಜೆಟ್ ಸರಣಿಯಲ್ಲಿ ನಟಿಸಿದ ನಂತರ, ಅವರು ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿಯರಲ್ಲಿ ಸ್ವತಃ ತನ್ನನ್ನು ತಾನೆ ಗುರುತಿಸಿಕೊಂಡಿದ್ದಾರೆ.ಅವರು ಅರುಂಧತಿ (೨೦೦೯) ಚಿತ್ರದ ಅರುಂಧತಿಯ ಪಾತ್ರದಲ್ಲಿ ನಟಿಸಿ ವಿಮರ್ಶಾತ್ಮಕ ಮೆಚ್ಚುಗೆ ಪಡೆದರು, ವೇದಂ ಚಿತ್ರದಲ್ಲಿ ಸರೋಜಳಾಗಿ ಮತ್ತು ರುದ್ರಮದೇವಿ ಚಿತ್ರದಲ್ಲಿ ರಾಣಿ ರುದ್ರಮದೇವಿಯ ಪಾತ್ರ ವಹಿಸಿದರು. ಈ ಮೂರು ಚಿತ್ರಗಳೂ ಮೂರು ಫಿಲ್ಮ್ಫೇರ್, ಒಂದು ನಂದಿ ಮತ್ತು ಮೂರು ಸಿನಿಮಾ ಪ್ರಶಸ್ತಿಗಳನ್ನು ಗಳಿಸಿತು. ೨೦೧೦ರಲ್ಲಿ, ಅನುಷ್ಕಾ ಯಶಸ್ಸು ತಮಿಳು ಸಿನಿಮಾದಲ್ಲಿ ಸಿಂಗಮ್ (೨೦೧೦), ಅದರ ಉತ್ತರಭಾಗ ಸಿಂಗಮ್ II (೨೦೧೩) ಮತ್ತು ಯೆನ್ನೈ ಅರಿಂಧಾಳ್ (೨೦೧೫) ಸಾಧಿಸಿತು. ವಾನಮ್ (೨೦೧೧), ದೈವ ತಿರುಮಗಳ್ (೨೦೧೧) ಮತ್ತು ಇಂಜಿ ಇಡುಪ್ಪಾಜ಼್ಹಗಿದಲ್ಲಿ ಅವರ ಸಾಧನೆಗಳಿಗಾಗಿ ಹೊಗಳಿಕೆಗಳನ್ನು ಪಡೆದರು. ಆ ಸಂದರ್ಭದಲ್ಲಿ ಆ ಮೂರು ಚಿತ್ರಗಳು ಯಶಸ್ಸನ್ನು ಕಂಡವು.ಅವರು ೨೦೧೫ನ ಹೈದರಾಬಾದ್ನ ಅತ್ಯಂತ ಅಪೇಕ್ಷಣೀಯ ವುಮನ್ ಎಂದು ಮತ ಪಡೆದರು.

ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ
Born೭ ನವೆಂಬರ್ ೧೯೮೧
Nationalityಭಾರತೀಯ
Other namesಸ್ವೀಟಿ ಶೆಟ್ಟಿ
Educationಬಿ.ಸಿ.ಎ
Occupation(s)ನಟಿ, ಯೋಗ ಶಿಕ್ಷಕಿ
Signature

ಆರಂಭಿಕ ಜೀವನ

ಮಂಗಳೂರು, ಕರ್ನಾಟಕದಲ್ಲಿ[೩] ಜನಿಸಿದ ಅನುಷ್ಕಾ, ಜನಾಂಗ ತುಳುವ ಬಂದಿಳಿದ ಬೆಳ್ಳಿಪದಿ ಉರಮಲು ಗುತು ಕುಟುಂಬದಿಂದ ಬಂದಿದ್ದಾರೆ. ಆಕೆಯ ಪೋಷಕರ ಹೆಸರು ಪ್ರಫುಲ್ಲ ಮತ್ತು ಎ.ಎನ್. ವಿಠಲ ಶೆಟ್ಟಿ. ಆಕೆಗೆ ಇಬ್ಬರು ಸಹೋದರರು, ಗುಣರಂಜನ್ ಶೆಟ್ಟಿ ಮತ್ತು ಸಾಯಿ ರಮೇಶ್ ಶೆಟ್ಟಿ. ಸಾಯಿ ರಮೇಶ್ ಒಬ್ಬ ಕಾಸ್ಮೆಟಿಕ್ ಸರ್ಜನ್. ಅನುಷ್ಕಾ ಬೆಂಗಳೂರಿನಲ್ಲಿ ಶಾಲಾ ವ್ಯಾಸಂಗವನ್ನು ಮತ್ತು ಬಿ. ಸಿ. ಎ ಪದವಿಯನ್ನು ಮೌಂಟ್ ಕಾರ್ಮೆಲ್ ಕಾಲೇಜ್ನಲ್ಲಿ ಮಾಡಿದರು. ಅವರು ಭರತ್ ತಾಕುರ್ ಅವರಲ್ಲಿ ತರಬೇತಿ ಪಡೆದ ಯೋಗ ಭೋಧಕಿಯೂ ಆಗಿದ್ದರು.

ಚಲನಚಿತ್ರ ವೃತ್ತಿಜೀವನ

ಮೊದಲ ಸಿನಿಮಾ ಮತ್ತು ತೆಲುಗುನಲ್ಲಿ ಖ್ಯಾತಿ: ೨೦೦೫-೨೦೦೮ಅನುಷ್ಕಾ ತನ್ನ ಚೊಚ್ಚಲ ನಟನೆಯನ್ನು ಪುರಿ ಜಗನ್ನಾಥನವರ ಸೂಪರ್ (೨೦೦೫) ಎಂಬ ತೆಲುಗು ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ಮತ್ತು ಆಯೆಷಾ ಟಾಕಿಯ ಜೊತೆ ಮಾಡಿದರು. ೨೦೦೬ರಲ್ಲಿ ಅವರ ನಾಲ್ಕು ಚಲನಚಿತ್ರಗಳು ಬಿಡುಗಡೆಯಾದವು, ಮೊದಲನೆಯದು ಎಸ್.ಎಸ್.ರಾಜಮೌಳಿಯವರ ವಿಕ್ರಮಾರ್ಕುಡು ಎಂಬ ಚಿತ್ರದಲ್ಲಿ ರವಿತೇಜ ಅವರ ಜೊತೆಯಲ್ಲಿ ನಟಿಸಿದರು. ಆ ಚಿತ್ರ ಯಶಸ್ಸು ಗಳಿಸಿತು ಮತ್ತು ಅನುಷ್ಕಾರಿಗೆ ಆಂಧ್ರ ಪ್ರದೇಶದಲ್ಲಿ ಜನಪ್ರಿಯತೆ ಮತ್ತು ಮನ್ನಣೆ ತಂದುಕೊಟ್ಟಿತು. ಅವರು ಮುಂದಿನ ಚಿತ್ರ ಅಸ್ತ್ರಂನಲ್ಲಿ ನಟಿಸಿದರು, ಸರ್ಫರೋಶ್ ಎಂಬ ಹಿಂದಿ ಚಿತ್ರದ ರಿಮೇಕ್. ತದನಂತರ ತಮಿಳು ಚಲನಚಿತ್ರದ ಉದ್ಯಮದಲ್ಲಿ ನಟನೆ ಪ್ರಾರಂಭವಾಯಿತು, ಸುಂದರ್.ಸಿ ನಿರ್ದೇಶಣದ ಆಕ್ಷನ್ ಚಿತ್ರ 'ರೆಂಡು'ನಲ್ಲಿ ಆರ್.ಮಾಧವನ್ ಜೊತೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡರು. ಎ.ಆರ್.ಮುರುಗದಾಸ್ರವರ ಚೊಚ್ಚಲ ನಿರ್ದೇಶನದಲ್ಲಿ ಬಂದ 'ಸ್ಟಾಲಿನ್' ಎಂಬ ತೆಲುಗು ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಸ್ಪೆಶಲ್ ಅಪಿಯರೆನ್ಸಾಗಿ ಕಾಣಿಸಿಕೊಂಡರು.ಅವರು ರಾಘವ ಲಾರೆನ್ಸ್ ನಟಿಸಿದ, ಅಕ್ಕಿನೇನಿ ನಾಗಾರ್ಜುನ ಜೊತೆ ನಟಿಸಿದ ಡಾನ್, ಟಿ.ಗೋಪಿಚಂದ್ ಜೊತೆಗೆ ನಟಿಸಿದ ಲಕ್ಷ್ಯಂ ಚಿತ್ರ ೨೦೦೭ರಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಸಾಧಿಸಿತು. ೨೦೦೮ರಲ್ಲಿ ಅವರು ಆರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಆ ವರ್ಷದಲ್ಲಿ ಒಕ ಮಗಾಡು ಮೊದಲು ತೆರೆಕಂಡಿತು. ಆ ಚಿತ್ರದಲ್ಲಿ ಮೂರು ಮುಖ್ಯ ಸ್ತ್ರೀ ಪಾತ್ರಗಳಲ್ಲಿ ಒಂದು ಅವರದಾಗಿತ್ತು. ಒಕ ಮಗಾಡು ಚಿತ್ರದಲ್ಲಿ ನಂದಮುರಿ ಬಾಲಕೃಷ್ಣ ಜೊತೆ ನಟಿಸಿದರು. ಮುಂದಿನ ಚಿತ್ರಗಳು ಜಗಪತಿ ಬಾಬು ಮತ್ತು ಭೂಮಿಕಾ ಚಾವ್ಲಾ ಜೊತೆ ನಟಿಸಿದ 'ಸ್ವಾಗತಂ' ಹಾಗು ರವಿತೇಜ ಜೊತೆ 'ಬಲಾದೂರ್' ಕಳಪೆ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನು ಗಳಿಕೆ ಮಾಡಲಿಲ್ಲ. ನಂತರ ಅವರ ಮುಂದಿನ ಚಿತ್ರದಲ್ಲಿ ಗೋಪಿಚಂದ್ ಜೊತೆ ನಟಿಸಿದ ಶೌರ್ಯಂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು.[೪]

ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು: ೨೦೦೯-೨೦೧೦

೨೦೦೯ರಲ್ಲಿ ಅನುಷ್ಕಾ ಮೊದಲ ಬ್ಲಾಕ್ಬಸ್ಟರ್ ಹಿಟ್ ಕಾಲ್ಪನಿಕ ಚಲನಚಿತ್ರ 'ಅರುಂಧತಿ'ಯಲ್ಲಿ ನಟಿಸಿದರು. ಈ ನಾಯಕಿ ಕೇಂದ್ರಿತ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಎರಡು ಪಾತ್ರಗಳನ್ನು ನಿರ್ವಹಿಸಿದರು. ಇದು ವಿಮರ್ಶಾತ್ಮಕವಾಗಿ ಹಾಗು ವಾಣಿಜ್ಯವಾಗಿ ಯಶಸ್ಸನ್ನು ಕಂಡಿತು. ನಂತರ ಅವರು ನಂದಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಮತ್ತು ಫಿಲ್ಮ್ಫೇರತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು. ಅವರ ಮುಂದಿನ ಚಿತ್ರ 'ಬಿಲ್ಲಾ', ಅದೇ ಹೆಸರಿದ್ದ ೨೦೦೭ನ ತಮಿಳು ಚಿತ್ರದ ರಿಮೇಕ್. ಆ ಚಿತ್ರಕ್ಕೆ ವಿವಿಧ ಪ್ರತಿಕ್ರಿಯೆಗಳು ಬಂದವು. ೨೦೦೯ರಲ್ಲಿ ಕೊನೆಯ ಬಿಡುಗಡೆಯೆಂದರೆ ತನ್ನ ಎರಡನೇ ತಮಿಳು ಚಲನಚಿತ್ರ ಆಕ್ಷನ್ ಮಸಾಲ 'ವೆಟ್ಟೈಕರಣ್' ನಟ ವಿಜಯ್ ಜೊತೆ.೨೦೧೦ರಲ್ಲಿ ಅವರ ಕೆಲವು ತೆಲುಗು ಚಿತ್ರಗಳು ಬಿಡುಗಡೆಯಾದವು. ವೇದಂ ಚಿತ್ರದಲ್ಲಿ ಅವರು ವೇಶ್ಯೆ ಪಾತ್ರ ಮಾಡಿ ಕ್ರಿಶ್ ಅವರ ವಿರ್ಮಶಾತ್ಮಕ ಮೆಚ್ಚುಗೆ ಗಳಿಸಿದರು. ಅವರ ನಟನೆಯಿಂದ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ಅದು ಅವರ ಎರಡನೇ ಫಿಲ್ಮ್ಫೇರ್ ಪ್ರಶಸ್ತಿಯಾಗಿತ್ತು. ಮುಂದಿನ ತೆಲುಗು ಚಿತ್ರ 'ಪಂಚಾಕ್ಷರಿ' ಮತ್ತೆ ಅದು ನಾಯಕಿ ಕೇಂದ್ರಿತ ಚಿತ್ರವಾಗಿತ್ತು ಹಾಗು ಅವರು ಎರಡು ಪಾತ್ರಗಳ ಪ್ರರ್ದಶನ ಮಾಡಿದರು. ಅನಂತರ ಆಕ್ಷನ್-ಹಾಸ್ಯ ಚಿತ್ರ 'ಖಲೇಜಾ'ದಲ್ಲಿ ಮಹೇಶ್ ಬಾಬು ಜೊತೆ ಮೊಟ್ಟ ಮೊದಲ ಬಾರಿಗೆ ನಟಿಸಿದರು. ಅನಂತರ ಕನ್ನಡ ಚಿತ್ರ ಅಪ್ತರಕ್ಷಕದ ತೆಲುಗು ರಿಮೇಕ್ 'ನಾಗವಲ್ಲಿ'ಯಲ್ಲಿ ಚಂದ್ರಮುಖಿ ಪಾತ್ರವನ್ನು ಮಾಡಿದರು. 'ಕೇಡಿ' ಮತ್ತು 'ತಕಿತ ತಕಿತ' ಚಿತ್ರದಲ್ಲಿ ವಿಶೇಷ ಪಾತ್ರವನ್ನು ಅನುಷ್ಕಾ ಮಾಡಿದ್ದಾರೆ. ಆದರೂ ೨೦೧೦ನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಆಕೆಯ ೨೦೧೦ನ ಏಕೈಕ ತಮಿಳು ಬಿಡುಗಡೆ, ಸಹನಟನಾಗಿ ಸೂರ್ಯ ಪೊಲೀಸ್ ಸ್ಟೋರಿ ಸಿಂಗಮ್ ಹೆಚ್ಚಿನ ಯಶಸ್ವಿಯಾಯಿತು.[೫]

ಸಿನಿಮಾಗಳು

Key
Denotes films that have not yet been released
ವರ್ಷಶೀರ್ಷಿಕೆಪಾತ್ರನಿರ್ದೇಶಕಭಾಷೆಟಿಪ್ಪಣಿRef.
೨೦೦೫ಸೂಪರ್ಸಷಾಪುರಿ ಜಗನ್ನಾಥ್ತೆಲುಗು[೬]
೨೦೦೫ಮಹಾನಂದಿನಂದಿನಿವಿ.ಸಮುದ್ರತೆಲುಗು[೭]
೨೦೦೬ವಿಕ್ರಮಾರ್ಕುಡುನೀರಜಾಎಸ್ . ರಾಜಮೌಳಿತೆಲುಗು[೮]
೨೦೦೬ಆಸ್ತ್ರಮ್ಅನುಷಾಸುರೇಶ್ ಕೃಷ್ಣತೆಲುಗು[೯]
೨೦೦೬ರೆಂಡುಜ್ಯೋತಿಸುಂದರ್ ಸಿತಮಿಳು[೧೦]
೨೦೦೬ಸ್ಟ್ಯಾಲಿನ್ —ಎ.ಆರ್.ಮುರುಗದಾಸ್ತೆಲುಗುಐ ವನ್ನಾ ಸ್ಪೈಡರ್ ಮ್ಯಾನ್ ಹಾಡಿನಲ್ಲಿ ವಿಶೇಷ ಪಾತ್ರ[೧೧]
೨೦೦೭ಲಕ್ಷ್ಯಂಇಂದುಶ್ರೀವಾಸ್ತೆಲುಗು[೧೨]
೨೦೦೭ಡಾನ್ಪ್ರಿಯಾರಾಘವ ಲಾರೆನ್ಸ್ತೆಲುಗು[೧೩]
೨೦೦೮ಒಕ್ಕ ಮಗಡುಭಾವನಿವೈ.ವಿ.ಎಸ್.ಚೌಧರಿತೆಲುಗು[೧೪]
೨೦೦೮ಸ್ವಾಗತಂಶೈಲಜಾ (ಶೈಲು)ಕೆ.ದಶರಥ್ತೆಲುಗು[೧೫]
೨೦೦೮ಬಲದೂರ್ಭಾನುಉದಯ್ ಶಂಕರ್

ತೆಲುಗು

[೧೬]
೨೦೦೮ಶೌರ್ಯಂಶ್ವೇತಾಸಿವತೆಲುಗು[೧೭]
೨೦೦೮ಚಿಂತಕಾಯಲ ರವಿಸುನಿತಾಯೋಗಿತೆಲುಗು[೧೮]
೨೦೦೮en:King (2008 film)ಕಿಂಗ್ —ಶ್ರೀನು ವೈಟ್ಲತೆಲುಗುನೂವು ರೆಡಿ ನೇನು ರೆಡಿ ಹಾಡಿನಲ್ಲಿ ವಿಶೇಷ ಪಾತ್ರ[೧೯]
೨೦೦೯ಆರುಂಧತಿಅರುಂಧತಿ / ಜೇಜಮ್ಮ [lower-alpha ೧]ಕೋಡಿ ರಾಮಕೃಷ್ಣತೆಲುಗು[೨೦]
೨೦೦೯ಬಿಲ್ಲಾಮಾಯಾಮಿಹಿರ್ ರಮೇಶ್ತೆಲುಗು[೨೧]
೨೦೦೯ವೆಟೈಕರನ್ಸುಶೀಲಾಬಿ.ಬಾಬುಸಿವನ್ತಮಿಳು[೨೨]
೨೦೧೦ಕೇಡಿ —ಕಿರಣ್ ಕುಮಾರ್ಕೆಡಿಗಾಡು ಹಾಡಿನಲ್ಲಿ ವಿಶೇಷ ಪಾತ್ರ[೨೩]
೨೦೧೦ಸಿಂಗಂಕಾವ್ಯಹರಿತಮಿಳು[೨೪]
೨೦೧೦ವೇದಂಸರೋಜಕ್ರಿಷ್ತೆಲುಗು[೨೫]
೨೦೧೦ಪಂಚಾಕ್ಷರಿಪಂಚಾಕ್ಷರಿ / ಹನಿ [lower-alpha ೧]ವಿ.ಸಮುದ್ರತೆಲುಗು[೨೬]
೨೦೧೦ಖಲೇಜಾಸುಭಾಷಿಣಿತ್ರಿವಿಕ್ರಂ ಶ್ರೀನಿವಾಸ್ತೆಲುಗು[೨೭]
೨೦೧೦ಥಕಿಟ ಥಕಿಟಸ್ವತಃಶ್ರೀಹರಿ ನಾನುತೆಲುಗುಕಿರು ಪಾತ್ರ[೨೮]
೨೦೧೦ನಾಗವಲ್ಲಿಚಂದ್ರಮುಖಿ ( ನಾಗವಲ್ಲಿ )[lower-alpha ೨]ಪಿ‌. ವಾಸುತೆಲುಗು[೨೯]
[೩೦]
೨೦೧೦ರಗಡಶಿರೀಷವೀರು ಪೋಟ್ಲಾತೆಲುಗು[೩೧]
೨೦೧೧ವಾನಂಸರೋಜಕ್ರಿಷ್ತಮಿಳು[೩೨]
೨೦೧೧ದೈವ ತಿರುಮಗಳ್

ಅನುರಾಧಾ

ಎ.ಎಲ್. ವಿಜಯ್ತಮಿಳು[೩೩]
೨೦೧೨ಸಗುಣಿಅನುಷ್ಕಾಶಂಕರ್ ದಯಾಲ್ತಮಿಳುಕಿರು ಪಾತ್ರ[೩೪]
[೩೫]
೨೦೧೨ತಾಂಡವಂಮೀನಾಕ್ಷಿಎ.ಎಲ್.ವಿಜಯ್ತಮಿಳು[೩೬]
೨೦೧೨ಡಮರುಕಂಮಹೇಶ್ವರಿಶ್ರೀನಿವಾಸ ರೆಡ್ಡಿತೆಲುಗು[೩೭]
೨೦೧೩ಅಲೆಕ್ಸ್ ಪಾಂಡಿಯನ್ದಿವ್ಯಸೂರಜ್ತಮಿಳು[೩೮]
೨೦೧೩ಮಿರ್ಚಿಕೊರಟಾಲ ಶಿವತೆಲುಗುವೆನ್ನೆಲ[೩೯]
೨೦೧೩ಸಿಂಗಂ IIಕಾವ್ಯಹರಿತಮಿಳು[೪೦]
೨೦೧೩ಐರನ್ದಾಂ ಉಳಗಂರಮ್ಯಾ / ವರ್ಣ / [lower-alpha ೩]ಸೆಲ್ವರಾಘವನ್ತಮಿಳು[೪೧]
[೪೨]
೨೦೧೪ಲಿಂಗಾಲಕ್ಷ್ಮೀಕೆ.ಎಸ್.ರವಿಕುಮಾರ್ತಮಿಳು[೪೩]
೨೦೧೫ಎನೈ ಅರಿಂದಾಲ್ಥೆನ್ಮೋಜಿಗೌತಮ್ ಮೆನನ್ತಮಿಳು[೪೪]
೨೦೧೫ಬಾಹುಬಲಿ : ದಿ ಬಿಗಿನಿಂಗ್ದೇವಸೇನಎಸ್.ಎಸ್.ರಾಜಮೌಳಿತೆಲುಗು[೪೫]
೨೦೧೫ಬಾಹುಬಲಿ : ದಿ ಬಿಗಿನಿಂಗ್ದೇವಸೇನಎಸ್.ಎಸ್.ರಾಜಮೌಳಿತಮಿಳು[೪೬]
೨೦೧೫ರುದ್ರಮದೇವಿರುದ್ರಮದೇವಿಗುಣಶೇಖರ್ತೆಲುಗು[೪೭]
೨೦೧೫ಸೈಜ್ ಜೀರೋಸೌಂದರ್ಯ (ಸ್ವೀಟಿ)[lower-alpha ೨]ಪ್ರಕಾಶ್ ಕೋವೆಲೌಮುದಿತೆಲುಗು[೪೮]
೨೦೧೫ಇಂಜಿ ಇಡುಪ್ಪಜಗಿಸೌಂದರ್ಯ( ಸ್ವೀಟಿ )[lower-alpha ೨]Kovelamudi, PrakashPrakash Kovelamudiತಮಿಳು[೪೯]
೨೦೧೬Soggade Chinni NayanaKrishna KumariKalyan Krishna Kurasalaತೆಲುಗುಕಿರು ಪಾತ್ರ[೫೦]
೨೦೧೬ಊಪಿರಿನಂದಿನಿವಂಸಿ ಪೈಡಿಪಲ್ಲಿತೆಲುಗುಕಿರು ಪಾತ್ರ[೫೧]
೨೦೧೬ಥೋಜಾನಂದಿನಿವಂಸಿ ಪೈಡಿಪಲ್ಲಿತಮಿಳುಕಿರು ಪಾತ್ರ[೫೨]
೨೦೧೭ಸಿಂಗಂ 3ಕಾವ್ಯ ದುರೈ ಸಿಂಗಂಹರಿತಮಿಳು[೫೩]
೨೦೧೭ಓಂ ನಮೋ ವೆಂಕಟೇಶಾಯಕೃಷ್ಣಮ್ಮಕೆ.ರಾಘವೇಂದ್ರ ರಾವ್ತೆಲುಗು[೫೪]
೨೦೧೭ಬಾಹುಬಲಿ ೨ :ದಿ ಕನ್ಕ್ಲೂಷನ್ದೇವಸೇನಎಸ್.ಎಸ್.ರಾಜಮೌಳಿತೆಲುಗು[೫೫]
೨೦೧೭ಬಾಹುಬಲಿ ೨: ದಿ ಕನ್ಕ್ಲೂಷನ್ದೇವಸೇನಎಸ್.ಎಸ್.ರಾಜಮೌಳಿತಮಿಳು[೫೬]
೨೦೧೮ಭಾಗಮತೀಭಾಗಮತೀ / ಚಂಚಲ[lower-alpha ೧]ಜಿ.ಅಶೋಕ್ತೆಲುಗು[೫೭]
೨೦೧೮ಭಾಗಮತೀಭಾಗಮತೀ / ಸಂಚಲ [lower-alpha ೧]ಜಿ.ಅಶೋಕ್ತಮಿಳು[೫೮]
೨೦೧೯Sye Raa Narasimha Reddy ರಾಣಿ ಲಕ್ಷ್ಮೀ ಬಾಯಿತೆಲುಗುಫಿಲ್ಮಿಂಗ್[೫೯]
TBANishabdham TBAಹೇಮಂತ್ ಮಧುಕರ್ತೆಲುಗುಫಿಲ್ಮಿಂಗ್[೬೦]
TBAಸೈಲೆನ್ಸ್TBAಹೇಮಂತ್ ಮಧುಕರ್ತಮಿಳುಫಿಲ್ಮಿಂಗ್[೬೦]
TBAಸೈಲೆನ್ಸ್TBAಹೇಮಂತ್ ಮಧುಕರ್ಇಂಗ್ಲಿಷ್Filming[೬೦]

ಪ್ರಶಸ್ತಿಗಳು

  • ೨೦೧೯ - ದಾದಾ ಸಾಹೇಬ್ ಫಲ್ಕೇ ಪ್ರಶಸ್ತಿ(ಅತ್ಯುತ್ತಮ ನಟಿ) .[೬೧][೬೨]
  • ೨೦೧೭ - ಬಿಹೈಂಡ್ ವುಡ್ಸ್ ಗೋಲ್ಡ್ ಮೆಡಲ್ (ಅತ್ಯುತ್ತಮ ನಟಿ).
  • ೨೦೧೬ - ನಂದಿ ಪ್ರಶಸ್ತಿ .
  • ೨೦೧೫ - ಫಿಲ್ಮ್ ಫೇರ್ ಪ್ರಶಸ್ತಿ .[೬೩]

ಯಶಸ್ಸು:೨೦೧೧-ಪ್ರಸ್ತುತ

ತಮಿಳು ಚಿತ್ರ ವಾನಂ ರಿಮೇಕ್ 'ವೇದಂ'ನಲ್ಲಿ ಮಾಡಿದ ಪಾತ್ರದಿಂದ ಮೆಚ್ಚುಗೆ ಪಡೆದರು. ಅವರು ತಮಿಳು ವರ್ಗದಲ್ಲಿ ತಮ್ಮ ಮೊದಲ ಫಿಲ್ಮ್ಫೇರ್ ನಾಮನಿರ್ದೇಶನವನ್ನು ಪಡೆದರು. ೨೦೧೦ರಲ್ಲಿ ಎ.ಎಲ್.ವಿಜಯ್ ಮತ್ತು ವಿಕ್ರಮ್ ಜೊತೆ ಆಕ್ಷನ್-ಡ್ರಾಮ 'ತಾಂಡವಮ್'ನಲ್ಲಿ ನಟಿಸಿದರು. ಎರಡು ವರ್ಷಗಳ ನಂತರ ಅಕ್ಕಿನೇನಿ ನಾಗಾರ್ಜುನ ಜೊತೆ ನಟಿಸಿದ ತನ್ನ ಮೊದಲ ತೆಲುಗು ಕಾಲ್ಪನಿಕ ಚಿತ್ರ 'ಧಮರುಕಂ' ಬಿಡುಗಡೆಯಾಯಿತು. ೨೦೧೩ನ ಅವರ ಮೊದಲ ಚಿತ್ರ ಅಲೆಕ್ಸ್ ಪಾಂಡಿಯನ್, ಸೂರಜ್ ನಿರ್ದೇಶನದಲ್ಲಿ, ಸಹನಟ ಕಾರ್ತಿ ಜೊತೆ ತೆರಗೆ ಬಂತು. ಈ ಚಿತ್ರ ವಿಮರ್ಶಾತ್ಮಕವಾಗಿ ವಿಫಲವಾಯಿತು. ಅವರ ಏರಡನೇ ಚಿತ್ರ ಕೊರಾಟಲ ಸಿವಾರವರ 'ಮಿರ್ಚಿ', ಪ್ರಭಾಸ್ ಜೊತೆ ನಟಿಸಿದರು. ನಂತರ 'ಸಿಂಗಮ್ II'ನಲ್ಲಿ ಕಾಣಿಸಿಕೊಂಡರು. ಅವರ ಜೀವನದಲ್ಲಿ ಮೂರನೆ ಬಾರಿಗೆ ಉಭಯ ಪಾತ್ರದಲ್ಲಿ ಸೆಲ್ವರಾಗವನ್ ರವರ ಇರಾಂಡಮ್ ಉಳಗಂ ಚಿತ್ರದಲ್ಲಿ ಆರ್ಯ ಜೊತೆ ನಟಿಸಿದರು. ಅನುಷ್ಕಾ ಅತ್ಯುತ್ತಮವಾಗಿ ವಿವಿಧ ಭಾವನೆಗಳನ್ನು ಪ್ರದರ್ಶಿಸುವುದರಲ್ಲಿ ಅತ್ಯುತ್ತಮ. ಆಕೆಯ ಇತ್ತೀಚಿನ ತಮಿಳು ಚಿತ್ರ 'ಲಿಂಗಾ'ದಲ್ಲಿ ರಜನಿಕಾಂತ್ ಜೊತೆ ನಟಿಸಿದರು. ೨೦೧೫ರಲ್ಲಿ ಅಜಿತ್ ಜೊತೆ ನಟಿಸಿದ ಯೆನ್ನೈ ಅರಿನ್ಧಾಳ್ ಚಿತ್ರ ಒಳ್ಳೆಯ ವಿಮರ್ಶೆಗಳನ್ನು ಪಡೆಯಿತು. ಅದೇ ವರ್ಷದಲ್ಲಿ ಅವರ ಎರಡನೆಯ ಚಿತ್ರ, ಎಸ್.ಎಸ್.ರಾಜಮೌಲಿ ನಿರ್ದೇಶನದ ಬಾಹುಬಲಿ ಮೊದಲನೆ ಭಾಗ, ಭಾರತದ ಆದಾಯ ಚಿತ್ರಗಳಲ್ಲಿ ಒಂದೆನಿಸಿಕೊಂಡಿತು. ೨೦೧೫ರಲ್ಲಿ ಬಿಡುಗಡೆಯಾದ ಅವರ ಮೂರನೆ ಚಿತ್ರ ರುಧ್ರಮಾದೇವಿ ಬಿಡುಗಡೆಯಾಯಿತು. ಆ ಚಿತ್ರದಲ್ಲಿ ರಾಣಿಯ ಪಾತ್ರವನ್ನು ರಾನ ಡಗ್ಗುಬತಿ ಮತ್ತು ಅಲ್ಲು ಅರ್ಜುನ್ ವಿರುದ್ಧ ನಟಿಸಿದರ. ಆ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಚಿತ್ರ ಸೈಜ್ ಜೀರೊ. ಅದರಲ್ಲಿ ದಪ್ಪ್ಪ ಗಾತ್ರದ ಹೆಣ್ಣಿನ ಪಾತ್ರವನ್ನು ಮಾಡಿದರು. ಅದರಲ್ಲು ಸಹ ಒಳ್ಳೆಯ ನಟನೆ ಮಾಡಿದ್ದರು.[೬೪][೬೫]

ಗ್ಯಾಲರಿ

ಉಲ್ಲೇಖಗಳು


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found