ಆಯಾಸ

ಆಯಾಸ ನಿಶ್ಶಕ್ತಿಯಿಂದ ಭಿನ್ನವಾಗಿರುವ ಸುಸ್ತಾಗುವಿಕೆಯ ಒಂದು ವ್ಯಕ್ತಿಗತ ಅನಿಸಿಕೆ, ಮತ್ತು ಕ್ರಮೇಣವಾದ ಆರಂಭಿಕ ಹಂತವನ್ನು ಹೊಂದಿರುತ್ತದೆ. ನಿಶ್ಶಕ್ತಿಗೆ ಭಿನ್ನವಾಗಿ, ಆಯಾಸವನ್ನು ವಿಶ್ರಾಂತಿಯ ಅವಧಿಗಳಿಂದ ಕಡಿಮೆಮಾಡಬಹುದು. ಆಯಾಸವು ಶಾರೀರಿಕ ಅಥವಾ ಮಾನಸಿಕ ಕಾರಣಗಳನ್ನು ಹೊಂದಿರಬಹುದು. ಶಾರೀರಿಕ ಆಯಾಸವು ಒಂದು ಸ್ನಾಯುವಿನ ಅತ್ಯುತ್ತಮ ಶಾರೀರಿಕ ಸಾಮರ್ಥ್ಯವನ್ನು ಮುಂದುವರಿಸುವ ತುಸುಹೊತ್ತಿನ ಅಸಮರ್ಥತೆ, ಮತ್ತು ಇದು ಬಿರುಸಿನ ದೈಹಿಕ ವ್ಯಾಯಾಮದಿಂದ ಹೆಚ್ಚು ಉಗ್ರವಾಗುತ್ತದೆ.[೧] ಮಾನಸಿಕ ಆಯಾಸವು ಅರಿವಿನ ಚಟುವಟಿಕೆಯ ದೀರ್ಘಕಾಲದ ಅವಧಿಗಳ ಪರಿಣಾಮವಾಗಿ ಗರಿಷ್ಠ ಅರಿವಿನ ಸಾಮರ್ಥ್ಯದಲ್ಲಿ ತುಸುಹೊತ್ತಿನ ಇಳಿತ. ಇದು ಮಂಪರು, ಆಲಸ್ಯ, ಅಥವಾ ನಿರ್ದೇಶಿತ ಗಮನದ ಆಯಾಸವಾಗಿ ವ್ಯಕ್ತಗೊಳ್ಳಬಹುದು.

ವೈದ್ಯಕೀಯವಾಗಿ, ಆಯಾಸವು ಒಂದು ಅನಿರ್ದಿಷ್ಟ ಲಕ್ಷಣ, ಅಂದರೆ ಅದಕ್ಕೆ ಅನೇಕ ಸಂಭವನೀಯ ಕಾರಣಗಳಿವೆ ಮತ್ತು ಅನೇಕ ವಿಭಿನ್ನ ಸ್ಥಿತಿಗಳ ಜೊತೆಗಿರುತ್ತದೆ. ಆಯಾಸವನ್ನು ಚಿಹ್ನೆಯ ಬದಲಾಗಿ ಒಂದು ಲಕ್ಷಣವೆಂದು ಪರಿಗಣಿಸಲಾಗುತ್ತದೆ ಏಕೆಂದರೆ, ಇದು ಇತರರು ಗಮನಿಸಬಹುದಾದ ವಸ್ತುನಿಷ್ಠ ಅನಿಸಿಕೆಯ ಬದಲಾಗಿ ರೋಗಿಯು ವರದಿ ಮಾಡಿದ ಒಂದು ವ್ಯಕ್ತಿಗತ ಅನಿಸಿಕೆ. ಆಯಾಸ ಮತ್ತು 'ಆಯಾಸದ ಅನಿಸಿಕೆ'ಗಳನ್ನು ಹಲವುವೇಳೆ ತಪ್ಪಾಗಿ ಗೊಂದಲಮಾಡಿಕೊಳ್ಳಲಾಗುತ್ತದೆ.

ಉಲ್ಲೇಖಗಳು