ಉಲ್ಕಾವೃಷ್ಟಿ
ಸೆಲೆಸ್ಟಿಯಲ್ ಘಟನೆ
ಉಲ್ಕಾವೃಷ್ಟಿಯು ರಾತ್ರಿ ಆಕಾಶದಲ್ಲಿ ಒಂದು ಬಿಂದುವಿನಿಂದ ಅನೇಕ ಉಲ್ಕೆಗಳು ಉತ್ಪತ್ತಿಯಾದಂತೆ ಕಾಣುವ ಒಂದು ಖಗೋಳ ಘಟನೆ. ಈ ಉಲ್ಕೆಗಳಿಗೆ ಕಾರಣ ಸಮಾನಾಂತರ ಪಥಗಳ ಮೇಲೆ ವಿಪರೀತವಾದ ಅತಿವೇಗದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸುವ, ಉಲ್ಕಾಕಲ್ಪಗಳೆಂದು ಕರೆಯಲಾದ, ಬಾಹ್ಯಾಕಾಶದ ಭಗ್ನಾವಶೇಷಗಳ ಪ್ರವಾಹ. ಬಹುತೇಕ ಉಲ್ಕೆಗಳು ಮರಳಿನ ಒಂದು ಕಣಕ್ಕಿಂತ ಚಿಕ್ಕದಾಗಿರುತ್ತವೆ, ಹಾಗಾಗಿ ಬಹುತೇಕ ಎಲ್ಲವೂ ವಿಘಟಿತವಾಗುತ್ತವೆ ಮತ್ತು ಭೂಮಿಯ ಮೇಲ್ಮೈಯನ್ನು ಎಂದಿಗೂ ಮುಟ್ಟುವುದಿಲ್ಲ.
- ಯಾವುದೇ ಉಲ್ಕಾವೃಷ್ಟಿಯ ಸಮಯವನ್ನು ಲೆಕ್ಕ ಹಾಕಲು ಬೇರೆ ಬೇರೆ ಮಾಹಿತಿಗಳು ಅಗತ್ಯವಾಗುತ್ತವೆ.ಉದಾಹರಣೆಗೆ ಧೂಮಕೇತುವಿನ ಕಕ್ಷೆಯ ಪರ್ವಬಿಂದುವಿನ ಕನಿಷ್ಟ ದೂರ,ಧೂಳಿನ ಸಮೂಹ ಚಲನೆ,ಅಕಸ್ಮಾತ್ ಗುರುಗ್ರಹದಂತಹ ದೊಡ್ಡ ಕಾಯ ಹಾದುಹೋಗಿದ್ದರೆ ಅದರಿಂದ ಚಲನೆಯಲ್ಲಿ ಉಂಟಾಗುವ ಕ್ಷೋಭೆ-ಹೀಗೆ.ಇವೆಲ್ಲವೂ ಸೇರಿ ಗರಿಷ್ಟ ಉಲ್ಕೆಗಳ ಅಂದರೆ ಧೂಳು ಮತ್ತು ಭೂಮಿಯ ನಡುವಿನ ಕನಿಷ್ಟ ಅಂತರದ ಸಮಯವನ್ನು ಲೆಕ್ಕ ಹಾಕಬಹುದು.ಇದಾದ ಮೇಲೆ ಆ ಸಮಯದಲ್ಲಿ ಯಾವ ಭೂ ಭಾಗದಲ್ಲಿ ಮುಂಜಾವು ಆಗುತ್ತದೆಯೋ ಅಲ್ಲಿ ಮಾತ್ರ ಗರಿಷ್ಟ ಕಾಣುತ್ತದೆ ಎಂದು ಘೋಷಿಸಬಹುದು.
- ಸಂಜೆಗಿಂತ ಮುಂಜಾವಿನಲ್ಲೇ ಹೆಚ್ಚು ಉಲ್ಕೆಗಳು ಕಾಣುತ್ತವೆ.ಏಕೆಂದರೆ ಉಲ್ಕಾ ಕಣವೊಂದು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕೂಡಲೇ ಅದಕ್ಕೆ ತನ್ನ ವೇಗದ ಜೊತೆಗೆ ಭೂಮಿಯ ಆವರ್ತನದ ವೇಗವೂ ದೊರಕುತ್ತದೆ.ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವ ಕಾರಣ ಈ ವೇಗವೂ ಅದೇ ದಿಕ್ಕಿನಲ್ಲಿ ಅಂದರೆ ಪೂರ್ವ ದಿಕ್ಕಿಗೆ ಇರುತ್ತದೆ.ಆದ್ದರಿಂದ ಎಲ್ಲ ಉಲ್ಕೆಗಳನ್ನೂ ಪೂರ್ವಕ್ಕೆ ತಳ್ಳಿದಂತಾಗುತ್ತದೆ.ಪೂರ್ವದಲ್ಲಿ ಅಂದರೆ ಸೂರ್ಯೋದಯಕ್ಕೆ ಸಿದ್ಧವಾಗಿರುವ ವೀಕ್ಷಕನಿಗೆ ಪಶ್ಚಿಮದಲ್ಲಿ ನಿಂತ ವೀಕ್ಷಕನಿಗಿಂತ ಹೆಚ್ಚು ಉಲ್ಕೆಗಳನ್ನು ಕಾಣುವ ಅವಕಾಶ ಸಿಗುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಲ್ಲೇಖ
- ಉಲ್ಕಾಪಾತ -Meteor shower
- ಉಲ್ಕಾಶಿಲೆ-Meteorite
- ಉಲ್ಕಾಭ -meteoroid
- ಕ್ಷುದ್ರಗ್ರಹ- asteroid
- ಅರಾಯನಿಡ್ ?? -Orionids
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ