ಒಕ್ಕಲು ಜಮೀನು

ಒಕ್ಕಲು ಜಮೀನು (ಕೃಷಿಕ್ಷೇತ್ರ, ಹೊಲ, ಗದ್ದೆ) ಪ್ರಧಾನವಾಗಿ ಕೃಷಿ ಪ್ರಕ್ರಿಯೆಗಳಿಗೆ ಮೀಸಲಿಡಲಾದ ಭೂಪ್ರದೇಶ. ಆಹಾರ ಮತ್ತು ಇತರ ಬೆಳೆಗಳನ್ನು ಉತ್ಪಾದಿಸುವುದು ಇವುಗಳ ಪ್ರಧಾನ ಉದ್ದೇಶವಾಗಿದೆ; ಆಹಾರ ಉತ್ಪಾದನೆಯಲ್ಲಿ ಇದು ಮೂಲಭೂತ ಸೌಕರ್ಯವಾಗಿದೆ.[೧] ಈ ಪದವನ್ನು ವಿಶೇಷೀಕೃತ ಘಟಕಗಳಿಗೆ ಬಳಸಲಾಗುತ್ತದೆ, ಉದಾಹರಣೆಗೆ, ಕೃಷಿಯೋಗ್ಯ ಜಮೀನು, ತರಕಾರಿ ಜಮೀನುಗಳು, ಹಣ್ಣಿನ ಜಮೀನುಗಳು, ಮತ್ತು ನೈಸರ್ಗಿಕ ನಾರುಗಳು, ಜೈವಿಕ ಇಂಧನಗಳು ಮತ್ತು ಇತರ ದ್ರವ್ಯಗಳ ಉತ್ಪಾದನೆಗೆ ಬಳಸಲಾದ ಜಮೀನು. ಈ ಪದವು ಜಾನುವಾರು ಕ್ಷೇತ್ರಗಳು, ಗೋಮಾಳಗಳು, ಹಣ್ಣುತೋಟಗಳು, ನೆಡುತೋಪುಗಳು ಹಾಗೂ ಎಸ್ಟೇಟುಗಳು, ಸಣ್ಣ ಜಮೀನುಗಳು ಹಾಗೂ ಹವ್ಯಾಸ ಜಮೀನುಗಳು, ಮತ್ತು ತೋಟದ ಮನೆ ಹಾಗೂ ಕೃಷಿ ಕಟ್ಟಡಗಳನ್ನು ಒಳಗೊಳ್ಳುತ್ತದೆ.

ಚೀನಾದ ಕೃಷಿಭೂಮಿ

ಒಕ್ಕಲು ಜಮೀನುಗಳ ಪ್ರಕಾರಗಳು

ಒಕ್ಕಲು ಜಮೀನು ಒಬ್ಬನೇ ವ್ಯಕ್ತಿ, ಕುಟುಂಬ, ಸಮುದಾಯ, ನಿಗಮ ಅಥವಾ ಕಂಪನಿಯ ಒಡೆತನದಲ್ಲಿರಬಹುದು ಮತ್ತು ನಿರ್ವಹಿಸಲ್ಪಡಬಹುದು. ಒಕ್ಕಲು ಜಮೀನು ಒಂದು ಅಥವಾ ಹಲವು ಪ್ರಕಾರಗಳ ಬೆಳೆಗಳನ್ನು ಉತ್ಪಾದಿಸಬಹುದು, ಮತ್ತು ಹೆಕ್ಟೇರಿನ ಅಲ್ಪಭಾಗದಿಂದ ಹಿಡಿದು ಹಲವು ಸಾವಿರ ಹೆಕ್ಟೇರುಗಳವರೆಗೆ ಯಾವುದೇ ಗಾತ್ರದ ಹಿಡುವಳಿಯಾಗಿರಬಹುದು.[೨]

ಉಲ್ಲೇಖಗಳು