ಡೊರಾಯಾಕಿ

ಡೊರಾಯಾಕಿ (どら焼き, どらやき, 銅鑼焼き, ドラ焼き) ಒಂದು ಬಗೆಯ ಜಾಪಾನೀ ಮಿಠಾಯಿಯಾಗಿದ್ದು ಕೆಂಪು ಅವರೆಯ ಪ್ಯಾನ್‍ಕೇಕ್ ಆಗಿದೆ. ಇದು ಕ್ಯಾಸ್ಟೆಲಾದಿಂದ ತಯಾರಿಸಲಾದ ಎರಡು ಚಿಕ್ಕ ಪ್ಯಾನ್‍ಕೇಕ್‍ನಂತಹ ಪ್ಯಾಟಿಗಳನ್ನು ಹೊಂದಿದ್ದು ನಡುವೆ ಸಿಹಿ ಅಜ಼ೂಕಿ ಅವರೆಯ ಪೇಸ್ಟ್‌ನ ಹೂರಣವನ್ನು ಹೊಂದಿರುತ್ತದೆ.[೧][೨].

ಡೊರಾಯಾಕಿಯ ಒಳಭಾಗ

ಕಾನ್ಸಾಯ್ ಪ್ರದೇಶದಲ್ಲಿ ಈ ಸಿಹಿ ತಿನಿಸನ್ನು ಹಲವುವೇಳೆ ಮಿಕಾಸಾ (三笠) ಎಂದು ಕರೆಯಲಾಗುತ್ತದೆ. ಜಪಾನ್‍ನ ನಾರಾದಲ್ಲಿ, ಸುಮಾರು ೩೦ ಸೆ.ಮಿ. ವ್ಯಾಸದ ಹೆಚ್ಚು ದೊಡ್ಡ ಮಿಕಾಸಾವನ್ನು ತಯಾರಿಸಲಾಗುತ್ತದೆ.[೩]

ಒಂದು ಜಾಪಾನೀ ಮಂಗಾ ಮತ್ತು ಆ್ಯನಮೆ ಪಾತ್ರವಾದ ಡೊರೇಮಾನ್ ಡೊರಾಯಾಕಿಯನ್ನು ಇಷ್ಟಪಡುತ್ತದೆ ಮತ್ತು ಹಾಗಾಗಿ ಇದನ್ನು ಅವನ ಅಚ್ಚುಮೆಚ್ಚಿನ ಆಹಾರವಾಗಿ ಚಿತ್ರಿಸಲಾಗಿದೆ. ಅದು ಆ ಸರಣಿಯಾದ್ಯಂತ ಹಲವು ಬಾರಿ ಕಥಾವಸ್ತುವಿನ ಸಾಧನವಾಗಿದೆ. ಡೊರೇಮಾನ್ ಡೊರಾಯಾಕಿಯ ವ್ಯಸನಿಯಾಗಿದ್ದು ಅವುಗಳನ್ನು ಒಳಗೊಂಡ ಯಾವುದೇ ಬಲೆಗೆ ಮರುಳಾಗುತ್ತಾನೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು