ಥಾಮಸ್ ರಾಬರ್ಟ್ ಮಾಲ್ಥಸ್

ಗಣಿತಜ್ಞ

[[ಚಿತ್ರ:

ಚಿತ್ರ:ಉದಾಹರಣೆ.jpg

|thumb]]

ಥಾಮಸ್ ರಾಬರ್ಟ್ ಮಾಲ್ಥಸ್

ಜೀವನ ಚಿತ್ರಣ

ಟಿ.ಆರ್.ಮಾಲ್ಥಸ್ ೧೭೬೬ರಲ್ಲಿ ಇಂಗ್ಲೆಂಡಿನ ರೋಕೆರಿಯಲ್ಲಿ ಜನಿಸಿದರು.ಇವರ ತಂದೆಯವರು ಡೇನಿಯಲ್ ಮಾಲ್ಥಸ್ ಒಬ್ಬ ಶ್ರೇಷ್ಟ ವಿಚಾರವಂತ ಮತ್ತು ಇತಿಹಾಸಕಾರ.ಅವರು ಆ ಕಾಲದ ಶ್ರೇಷ್ಟ ತತ್ವಜ್ಞಾನಿಗಳಾಗಿದ್ದ ಡೇವಿಡ್ ಹ್ಯೂಮ್,ರುಸ್ಸೊ ಮುಂತಾದವರ ಆಪ್ತ ಸ್ನೇಹಿತನಾಗಿದ್ದರು.ಇಂತಹ ಪರಿಸರದಲ್ಲಿ ಬೆಳೆದ ಮಾಲ್ಥಸ್ ಉತ್ತಮವಾದ ಶಿಕ್ಷಣವನ್ನು ಪಡೆಯುವುದು ಸಾಧ್ಯವಾಯಿತು.ಕೇಂಬ್ರಿಜ್ ನಲ್ಲಿ ತತ್ವಶಾಸ್ತ್ರ,ಕ್ರೈಸ್ತ ವೇದಾಂತ ಮತ್ತು ಗಣಿತಶಾಸ್ತ್ರಗಳಲ್ಲಿ ಉತ್ಕ್ರುಷ್ಟ ಶಿಕ್ಷಣ ಪಡೆದ ಆತ ೧೭೮೮ರಲ್ಲಿ ಪದವಿಯನ್ನು ಪಡೆದರು.೧೭೯೧ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಾಲ್ಥಸ್ ಕೆಲಕಾಲ ಪಾದ್ರಿಯ ಸಹಾಯಕನಾಗಿ ಕಾರ್ಯನಿರ್ವಹಿಸಿದರು.೧೭೯೯ ರಿಂದ ೧೮೦೨ರ ವರೆಗೆ ಡೇನಿಯಲ್ ಕ್ಲಾರ್ಕ್ ಎಂಬ ಪ್ರಸಿದ್ದ ಯಾತ್ರಿಕನೊಡನೆ ಯೂರೋಪಿನಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡರು.ಈಸ್ಟ್ ಇಂಡಿಯಾ ಕಂಪೆನಿಯು ಲಂಡನ್ ನಗರದ ಬಳಿ ಸ್ಥಾಪಿಸಿದ್ದ ಕಾಲೇಜೊಂದರಲ್ಲಿ ಆತ ೧೮೦೫ರಲ್ಲಿ ಇತಿಹಾಸ ಮತ್ತು ರಾಜಕೀಯ ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಕಗೊಂಡರು.ಈ ಹುದ್ದೆಯಲ್ಲಿ ಆತ ಮರಣ ಹೊಂದುವವರೆಗೆ(೧೮೩೪)ಮುಂದುವರೆದರು.

ಪರಿಚಯ

ಆಧುನಿಕ ಜನಸಂಖ್ಯಾ ಶಾಸ್ತ್ರದ ಜನಕನೆಂದು ಗೌರವಿಸಲ್ಪಡುವ ಥಾಮಸ್ ರಾಬರ್ಟ್ ಮಾಲ್ಥಸ್ ಸಂಪ್ರದಾಯ ಪಂಥದ ತ್ರಿಮೂರ್ತಿಗಳಲ್ಲೊಬ್ಬನು.ಅವರು ಒಬ್ಬ ಹೆಸರಾಂತ ನಿರಾಶಾವಾದಿ ಅರ್ಥಶಾಸ್ತ್ರಜ್ಞ.ತನ್ನ ಜನಸಂಖ್ಯಾ ಸಿದ್ಧಾಂತದ ಮೂಲಕ ಜಗತ್ತಿನ ಗಮನ ಸೆಳೆದ ಮಾಲ್ಥಸ್ ಜನಪರ ಕಾಳಜಿ ಹೊಂದಿದ್ದರು.ಜನಸಂಖ್ಯೆಯ ಬೆಳವಣಿಗೆ ಮತ್ತು ಸಮಸ್ಯೆಗಳ ಬಗ್ಗೆ ಸುವ್ಯವಸ್ತಿತವಾದ ವಿವರಣೆ ನೀಡಿದವರಲ್ಲಿ ಮಾಲ್ಥಸ್ ಮೊಟ್ಟಮೊದಲಿಗೆ ಎನಿಸಿಕೊಂಡಿದ್ದಾರೆ.ಆತನ ಜನಸಂಖ್ಯಾ ಸಿದ್ದಾಂತವು ಆತನಿಗೆ ಜಗತ್ತಿನಾದ್ಯಂತ ಜನಮನ್ನಣೆ ದೊರಕಿಸಿಕೊಟ್ಟಿತು.ಇದರಿಂದಾಗಿ ಆತನು ಜಗತ್ತಿನ ಶ್ರೇಷ್ಟ ಅರ್ಥಶಾಸ್ತ್ರಜ್ಞರ ಸಾಲಿನಲ್ಲಿ ನಿಲ್ಲುವುದು ಸಾಧ್ಯವಾಯಿತು.ಅವರ ಜನಸಂಖ್ಯಾ ತತ್ವದ ಮೇಲಿನ ಪ್ರಬಂಧವು ಆಡಂ ಸ್ಮಿತ್ತಿನ 'ವೆಲ್ತ್ ಆಫ ನೇಷನ್ಸ್' ಮತ್ತು ಡಾರ್ವಿನ್ನನ 'ಒರಿಜಿನ್ ಆಫ ಸ್ಪಿಶೀಸ್' ನಷ್ಟೇ ಪ್ರಭಾವಿಯಾದುದು.ರಿಕಾರ್ಡೋನ ಆತ್ಮೀಯ ಗೆಳೆಯನಾಗಿದ್ದ ಮಾಲ್ಥಸ್ ಒಬ್ಬ ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞನಾಗಿದ್ದರೂ ಕೆಲವು ವಿಚಾರಗಳಲ್ಲಿ ಭಿನ್ನ ಅಭಿಪ್ರಾಯ ಹೊಂದಿದ್ದನು.

ಪ್ರಭಾವಗಳು

ಮಾಲ್ಥಸ್ನ ಮೇಲೆ ಅನೇಕ ಅಂಶಗಳು ಪ್ರಭಾವ ಬೀರಿದವು.ಇದರಿಂದಾಗಿ ಅವರು ತನ್ನ ಜನಸಂಖ್ಯಾ ಸಿದ್ದಾಂತವನ್ನು ಪ್ರತಿಪಾದಿಸುವುದರ ಮೂಲಕ ಭವಿಶ್ಯದಲ್ಲಿ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸುವುದು ಸಾಧ್ಯವಾಯಿತು.ಒಬ್ಬ ಸಂಪ್ರದಾಯ ಪಂಥದ ಅರ್ಥಶಾಸ್ತ್ರ ನಾಗಿ ಅವನು ಆಡಂ ಸ್ಮಿತ್,ಡೇವಿಡ್ ರಿಕಾರ್ಡೋ ಮತ್ತು ಜೆ.ಎಸ್.ಮಿಲ್ಲರ ಚಿಂತನೆಯ ಪ್ರಭಾವಕ್ಕೊಳಗಾದವನು.ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯೂ ಸಹ ಅವನ ಮೇಲೆ ಗಾಢ ಪ್ರಭಾವ ಬೀರಿತು.ಕೈಗಾರಿಕಾ ಕ್ರಾಂತಿಯ ಫಲವಾಗಿ ನಿರುದ್ಯೋಗ,ಬಡತನ ಮತ್ತು ರೋಗರುಜಿನಗಳು ಎಲ್ಲೆಲ್ಲೂ ತಾಂಡವವಾಡುತ್ತಿದ್ದವು.ತ್ವರಿತ ಜನಸಂಖ್ಯಾ ಬೆಳವಣಿಗೆಯಿಂದಾಗಿ ಆಹಾರ ಬೇಡಿಕೆಯೂ ಅಧಿಕಗೊಂಡಿತ್ತು.ಅಲ್ಲದೆ ೧೮ನೇ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡಿನಲ್ಲಿ ಭಿಕರ ಕ್ಷಾಮ ತಲೆದೋರಿತು.ಇವೆಲ್ಲವೂ ತಕ್ಷಣ ಪರಿಹಾರ ಹುಡುಕ ಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದವು.ಇಷ್ಟಲ್ಲದೆ ಆ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಜಾರಿಯಲ್ಲಿದ್ದ ಬಡವರ ಕಾನೂನು ತನ್ನ ಅನುಷ್ಟಾನದಲ್ಲಿ ಹಲವಾರು ದೋಷಗಳನ್ನು ಹೊಂದಿತ್ತು.ಬೆಲೆಗಳು ಗಗನಕ್ಕೇರಿದ್ದ ಆ ಕಾಲದಲ್ಲಿ ಜನರ ಜೇವನ ಸ್ಥಿತಿ ಧಾರುಣವಾಗಿತ್ತು.ಇವೆಲ್ಲಾ ಬೆಳವಣಿಗೆಗಳಿಗೆ ಜನಸಂಖ್ಯೆಯ ತ್ವರಿತ ಬೆಳವಣಿಗೆಯೇ ಕಾರಣ ಎಂಬ ನಿರಾಶಾವದದ ತೀರ್ಮಾನಕ್ಕೆ ಮಾಲ್ಥಸ್ ಬಂದನು.ವಾಣಿಜ್ಯವಾದಿಗಳು ಮತ್ತು ವ್ಯವಸಾಯ ಪಂಥೀಯರು ಜನಸಂಖ್ಯೆಯ ವಿಚಾರದ ಬಗ್ಗೆ ಹೊಂದಿದ್ದ ಅಭಿಪ್ರಾಯಗಳು ಮಾಲ್ಥಸ್ನಿಗೆ ಸವಾಲೆನಿಸಿದವು.ವಾಣಿಜ್ಯ ವಾದಿಗಳು ಅಧಿಕ ಜನಸಂಖ್ಯೆಯು ರಾಷ್ಟ್ರದ ಸಂಪತ್ತಿಗೆ ಪೂರಕ ಎಂದು ನಂಬಿದ್ದರು.ಅದೇ ರೀತಿ ವ್ಯವಸಾಯ ಪಂಥೀಯರು ತಮ್ಮ ಸಹಜ ವ್ಯವಸ್ಥೆ ಪರಿಕಲ್ಪನೆಯ ಮೂಲಕ ಜನಸಂಖ್ಯೆಯ ಬೆಳವಣಿಗೆ ರಾಷ್ಟ್ರಕ್ಕೆ ಪ್ರಯೋಜನಕಾರಿ ಎಂದು ತಿಳಿದಿದ್ದರು.ಈ ವಾದಗಳು ಮಾಲ್ಥಸ್ನಿಗೆ ಸರಿ ಎನಿಸಲಿಲ್ಲ.ಮಾಲ್ಥಸ್ನ ನಿರಾಶಾವಾದದ ತಕ್ಷಣದ ಕಾರಣವೆಂದರೆ ಆತನ ತಂದೆಯಾದ ಡೇನಿಯಲ್ ಮಾಲ್ಥಸ್ನ ಆಶಾವಾದ.ಡೇನಿಯಲ್ ಮಾಲ್ಥಸ್ನು ಹೆಸರಾಂತ ವೇದಾಂತಿ ವಿಲಿಯಂ ಗಾಡ್ವಿನ್ನನ ಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದರು.ಗಾಡ್ವಿನ್ ತನ್ನ ಕ್ರತಿಯಲ್ಲಿ ಜನಸಂಖ್ಯೆಯ ಬೆಳವಣಿಗೆಯು ಒಂದು ಸಮಸ್ಯೆಯೇ ಅಲ್ಲ ಎಂದು ವಾದಿಸಿದ್ದರು.ಅವರ ಪ್ರಭಾವಕ್ಕೆ ಒಳಗಾದ ಮಾಲ್ಥಸ್ನ ತಂದೆಯು ಸಮಾಜದ ಮತ್ತು ಮನುಷ್ಯನ ಪರಿಪೂರ್ಣತೆಯಲ್ಲಿ ನಂಬಿಕೆಯಿರಿಸಿದ್ದನು.ಆದರೆ ಮಾಲ್ಥಸ್ನು ಗಾಡ್ವಿನ್ ಮತ್ತು ಕಾಂಡೋರೆಕ್ಟ್ ಅವರ ಆಶಾವಾದಿ ತತ್ವದ ಮೇಲೆ ದಾಳಿ ನಡೆಸಲು ಸಿದ್ದನಾದರು.ಯುವಕ ಮಾಲ್ಥಸ್ ತನ್ನ ಮೂವತ್ತೆರಡನೇ ವಯಸ್ಸಿನಲ್ಲಿ ತನ್ನ ಪ್ರಬಂಧವು ಪ್ರಕಟಗೊಳಿಸಿ ಜನಸಂಖ್ಯೆಯ ತ್ವರಿತ ಬೆಳವಣಿಗೆಯು ಎಲ್ಲಾ ಸಮಸ್ಯೆಗಳ ಮೂಲ ಹಾಗು ಅದು ಸಮಾಜದ ಪ್ರಗತಿಯ ಆತಂಕದ ಅಸ್ತ್ರ ಎಂಬ ನಿರಾಶಾವಾದಿ ತತ್ವವನ್ನು ಸಾರಿದನು.ಹೀಗೆ ಮಾಲ್ಥಸ್ ಹಲವಾರು ಪ್ರಭಾವಳಿಯಲ್ಲಿ ನಿರಾಶಾವಾದವನ್ನು ಮಂಡಿಸಿದನು.ಮಾಲ್ಥಸ್ ತನ್ನ ಜನಸಂಖ್ಯಾ ಸಿದ್ದಾಂತ ಮತ್ತು ಇತರೆ ವಿಚಾರಧಾರೆಗಳ ಮೂಲಕ ಆರ್ಥಿಕ ಚಿಂತನೆಯ ಬೆಳವಣಿಗೆಗೆ ಅದ್ವಿತೀಯ ಕೊಡುಗೆ ನೀಡಿದ್ದಾನೆ.ಇವುಗಳೆಲ್ಲವುಗಳ ಸಂಕ್ಷಿಪ್ತ ಚಿತ್ರಣ ಈ ಮುಂದಿನಂತಿದೆ.

ಕೊಡುಗೆಗಳು

ತನ್ನ ನಿರಾಶಾವಾದಿ ಚಿಂತನೆಗಳ ಮೂಲಕ ಅರ್ಥಶಾಸ್ತ್ರಜ್ಞಕ್ಕೆ ನಿರಾಶಾವಾದಿ ಕರಾಳ ವಿಜ್ಞಾನ ಎಂದು ಹೆಸರು ತಂದುಕೊಟ್ಟ ಮಾಲ್ಥಸ್ ನನ್ನು ಹಲವಾರು ಕಾರಣಗಳಿಂದ ಟೀಕಿಸಲಾಗಿದೆ.ಅವನ ಜನಸಂಖ್ಯಾ ಸಿದ್ದಾಂತವನ್ನು ಕಟುವಾಗಿ ಟೀಕಿಸಿದ ವಿಮರ್ಶಕರು ಅದನ್ನು ಅಸಂಗತ ತತ್ವವೆಂದು ದೂಷಿಸಿದರು.ಮೌಲ್ಯದ ವಿಚಾರದ ಬಗ್ಗೆ ಮಲ್ಥಸ್ ಸ್ಪಷ್ಟ ಅಭಿಪ್ರಾಯ ಹೊಂದಿರಲಿಲ್ಲ ಎಂದು ಕೆಲ ಅರ್ಥಶಾಸ್ತ್ರಜ್ಞರು ಗೇಲಿ ಮಾಡಿದರು.ಅವನ ಕೂಲಿ ಸಿದ್ದಾಂತವೂ ಸಹ ಟೀಕೆಗೊಳಗಾಯಿತು.ಅವರ ಎಲ್ಲ ವಿಶ್ಲೇಷಣೆಗಳನ್ನು ಜನಸಂಖ್ಯಾ ಸಿದ್ದಾಂತ ಮತ್ತು ಇಳಿಮುಖ ಪ್ರತಿಫಲ ನಿಯಮದ ಸುತ್ತ ಗಿರಕಿ ಹೊಡೆಯುವ ಚಿಂತನೆಗಳು ಎಂದು ಜರಿಯಲಾಯಿತು.ಹೀಗೆ ಮಾಲ್ಥಸ್ನ ಚಿಂತನೆಗಳ ಮೇಲೆ ಟೀಕೆಗಳ ಪ್ರಹಾರವನ್ನೇ ಮಾಡಲಾಯಿತು.ಆದಾಗ್ಯೂ ಮಾಲ್ಥಸ್ನ ಚಿಂತನೆಗಳನ್ನು ನಿರುಪಯುಕ್ತ ಎಂದು ಸಾರಾಸಗಟಾಗಿ ತಿರಸ್ಕರಿಸುವಂತಿಲ್ಲ.ಅವರ ಜನಸಂಖ್ಯಾ ಸಿದ್ದಾಂತವು ಇಂದಿಗೂ ಪ್ರಾಯೋಗಿಕ ಮಹತ್ವ ಪಡೆದಿದೆ.ಮಿತಿಮೀರಿ ಏರುತ್ತಿರುವ ಜನಸಂಖ್ಯೆಯ ಅಪಾಯಗಳ ಬಗ್ಗೆ ಎಚ್ಚರಿಸಿದ ಮೊಟ್ಟಮೊದಲ ಅರ್ಥಶಾಸ್ತ್ರಜ್ಞ ಮಾಲ್ಥಸ್.ಅವರನ್ನು ಆಧುನಿಕ ಜನಸಂಖ್ಯಾ ಶಾಸ್ತ್ರದ ಜನಕ ಎಂದು ಕರಯಲಾಗಿತ್ತು.ಮಾಲ್ಥಸ್ನ ಜನಸಂಖ್ಯಾ ಸಿದ್ದಾಂತದ ಆಧಾರದಲ್ಲಿಯೇ ಡಾರ್ವಿನ್ ತನ್ನ ವಿಕಾಸವಾದವನ್ನು ಮಂಡೀಸಿದರು.

ಮೌಲ್ಯ ಸಿದ್ದಾಂತ

ಮಾಲ್ಥಸನ ಮೌಲ್ಯ ಸಿದ್ದಾಂತವು ಅಷ್ಟೊಂದು ಮಹತ್ವ ಹೊಂದಿಲ್ಲ.ಏಕೆಂದರೆ ಅವರು ನಿರ್ದಿಷ್ಟವಾದ ಮೌಲ್ಯ ಸಿದ್ದಾಂತವನ್ನು ಅಭಿವ್ರಿದ್ಧಿ ಪಡಿಸುವಲ್ಲಿ ವಿಫಲನಾಗಿದ್ದಾರೆ.ಒಂದೆಡೆ ಅವರು ಸ್ಮಿತ್ತನ ಮೌಲ್ಯ ಸಿದ್ದಾಂತವನ್ನು ಟೀಕಿಸಿದರೆ ಇನ್ನೊಂದೆಡೆ ಅದನ್ನು ಅನುಮೋದಿಸಿದ್ದಾರೆ.ಅವರು ಮೌಲ್ಯವನ್ನು ಶ್ರಮವೂ ಸೇರಿದಂತೆ ಇತರ ವಸ್ತುಗಳ ಮೇಲೆ ಅಧಿಪತ್ಯ ಸಾಧಿಸುವ ಸಾಮರ್ಥ್ಯ ಎಂದು ವಿವರಿಸಿದ್ದಾರೆ.ನಂತರ ಆತನು ಮೌಲ್ಯದ ಉತ್ಪಾದನಾ ವೆಚ್ಚ ಸಿದ್ದಾಂತವನ್ನು ಅಭಿವ್ರಿದ್ಧಿ ಪಡಿಸಲು ಪ್ರಯತ್ನಿಸಿದರು.ಅಂದರೆ ಅವರು ಮೌಲ್ಯವನ್ನು ಶ್ರಮ ಮತ್ತು ಲಾಭಗಳ ಒಟ್ಟು ಮೊತ್ತ ಎಂದು ವ್ಯಾಖ್ಯಾನಿಸಿದರು.

ಉಲೇಖಗಳು

[೧]

[೨]