ಪರ್ಯಾಯ ಔಷಧ

"ಪೂರಕ ಔಷಧ " ಹಾಗೂ "ಪೂರಕ ಮತ್ತು ಪರ್ಯಾಯ ಔಷಧ " ಎಂಬ ಶೀರ್ಷಿಕೆಗಳು ಇಲ್ಲಿಗೆ ಪುನರ್‌ನಿರ್ದೇಶಿಸುತ್ತವೆ.'

ಪಾಶ್ಚಾತ್ಯ ಸಂಸ್ಕೃತಿಯಲ್ಲಿ, ಪರ್ಯಾಯ ಔಷಧ ಎಂಬ ವಿವಾದಾತ್ಮಕ ಪರಿಭಾಷೆಯು ಯಾವುದೇ ಶಮನಕಾರಿ ಚಿಕಿತ್ಸಾ ಪರಿಪಾಠಕ್ಕೆ ಅನ್ವಯಿಸುವಂಥದ್ದಾಗಿದ್ದು, "ಅದು ಸಾಂಪ್ರದಾಯಿಕ ಔಷಧದ[೧] ವ್ಯಾಪ್ತಿಯೊಳಗಡೆ ಬರುವಂಥದ್ದಾಗಿರುವುದಿಲ್ಲ" ಅಥವಾ "ಪರಿಣಾಮಕಾರಿಯಾಗಿದೆ ಎಂಬುದಾಗಿ ಸುಸಂಗತವಾಗಿ ತೋರಿಸಲ್ಪಟ್ಟಿರುವಂಥದ್ದಾಗಿರುವುದಿಲ್ಲ."[೨] ಇದು ಅನೇಕವೇಳೆ ಕುರುಹು ಆಧರಿತ ಔಷಧಕ್ಕೆ ವ್ಯತಿರಿಕ್ತವಾದುದಾಗಿರುತ್ತದೆ ಮತ್ತು ಕೇವಲ ಒಂದು ವೈಜ್ಞಾನಿಕ ಆಧಾರಕ್ಕಿಂತ ಹೆಚ್ಚಾಗಿ ಒಂದು ಐತಿಹಾಸಿಕ ಅಥವಾ ಸಾಂಸ್ಕೃತಿಕ ಆಧಾರದೊಂದಿಗಿನ ಚಿಕಿತ್ಸಾ ಕ್ರಮಗಳನ್ನು ಒಳಗೊಳ್ಳುತ್ತದೆ. ಆದಾಗ್ಯೂ, ಇಂಥ ಚಿಕಿತ್ಸಾ ಪರಿಪಾಠಗಳು ಮೋಸಗೊಳಿಸುವ ಪರಿಪಾಠಗಳು ಎಂಬ ಅಭಿಪ್ರಾಯವನ್ನು ಹೊಂದಿರುವ ಸಂದೇಹವಾದಿಗಳಿಂದ ಪರ್ಯಾಯ ಔಷಧ ಎಂಬ ಪರಿಭಾಷೆಯು ಟೀಕಿಸಲ್ಪಟ್ಟಿದೆ.[೩] ರಿಚರ್ಡ್ ಡಾಕಿನ್ಸ್‌‌ ಎಂಬಾತ ಈ ಕುರಿತಾಗಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, "ಪರ್ಯಾಯ ಔಷಧ ಎಂಬುದು ಯಾವುದೂ ಇಲ್ಲ. ರೋಗಶಮನಕಾರಿ ವ್ಯವಸ್ಥೆಯಲ್ಲಿರುವುದು ಕೆಲಸ ಮಾಡುವ ಔಷಧ ಮತ್ತು ಕೆಲಸ ಮಾಡದಿರುವ ಔಷಧ ಮಾತ್ರವೇ" ಎಂದು ತಿಳಿಸಿದ್ದಾನೆ.[೪]

ಇತರ ಚಿಕಿತ್ಸಾ ಪರಿಪಾಠಗಳ ಒಂದು ಶ್ರೇಣಿಯ ಜೊತೆಜೊತೆಗೆ, ಅಮೆರಿಕಾದ ನ್ಯಾಷನಲ್‌ ಸೆಂಟರ್‌ ಫಾರ್‌ ಕಾಂಪ್ಲಿಮೆಂಟರಿ ಅಂಡ್‌ ಆಲ್ಟರ್‌ನೇಟಿವ್‌ ಮೆಡಿಸಿನ್‌ (NCCAM) ಉದಾಹರಣೆಗಳನ್ನು ಉಲ್ಲೇಖಿಸುತ್ತದೆ. ಅವುಗಳೆಂದರೆ: ಪ್ರಕೃತಿ ಚಿಕಿತ್ಸೆ, ಬೆನ್ನೆಲುಬು ನೀವಿಕೆಯ ಔಷಧ, ಮೂಲಿಕಾ ತತ್ತ್ವ, ಸಾಂಪ್ರದಾಯಿಕ ಚೀನಿಯರ ಔಷಧ, ಆಯುರ್ವೇದ, ಧ್ಯಾನ, ಯೋಗ, ಜೈವಿಕ ಪ್ರತ್ಯಾಧಾನ, ಸಂಮೋಹನ, ಹೋಮಿಯೋಪತಿ, ಸೂಜಿಚಿಕಿತ್ಸೆ, ಮತ್ತು ಪೌಷ್ಟಿಕತೆಯ-ಆಧರಿತ ಚಿಕಿತ್ಸಾ ಕ್ರಮಗಳು.[೫]

ಮುಖ್ಯವಾಹಿನಿಯ ಚಿಕಿತ್ಸಾ ಕೌಶಲಗಳ[೬][೭][೮] ಜೊತೆಗೂಡಿಸಿ ಬಳಸಿದಾಗ ಹೊರಹೊಮ್ಮುವ ಮಧ್ಯಸ್ಥಿಕೆಯ ಅದೇ ವಸ್ತುಗಳಿಗೆ ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ಪೂರಕ ಔಷಧ ಅಥವಾ ಸುಸಂಯೋಜನಾತ್ಮಕ ಔಷಧ ದೊಂದಿಗೆ ಇದು ಆಗಿಂದಾಗ್ಗೆ ವರ್ಗೀಕರಿಸಲ್ಪಡುತ್ತದೆ ಹಾಗೂ ಪೂರಕ ಮತ್ತು ಪರ್ಯಾಯ ಔಷಧ , ಅಥವಾ CAM ಎಂಬ ಆಶ್ರಯದಾತ ಪರಿಭಾಷೆಯ ಅಡಿಯಲ್ಲಿ ಇರಿಸಲ್ಪಡುತ್ತದೆ. ಪರ್ಯಾಯ ಔಷಧದ ವಲಯದ ಕೆಲವೊಂದು ಸಂಶೋಧಕರು ವಿಧಾನದ ಭಿನ್ನತೆಗಳಿಗೆ ಒತ್ತುನೀಡುವುದರೆಡೆಗೆ ಆದ್ಯತೆ ನೀಡುವ ಈ ವರ್ಗೀಕರಣವನ್ನು ವಿರೋಧಿಸುತ್ತಾರೆ; ಆದರೆ ಅದೇನೇ ಇದ್ದರೂ, ಪ್ರಮಾಣಕವಾಗಿ ಮಾರ್ಪಟ್ಟಿರುವ CAM ಎಂಬ ಪರಿಭಾಷೆಯನ್ನು ಬಳಸುತ್ತಾರೆ.[೯][೧೦] "ಪ್ರಮುಖ CAM ಪದ್ಧತಿಗಳು ವೈವಿಧ್ಯತೆಯುಳ್ಳವುಗಳಾಗಿದ್ದರೂ ಅನೇಕ ಸಾಮಾನ್ಯ ಗುಣಲಕ್ಷಣಗಳನ್ನೂ ಅವು ಹೊಂದಿವೆ; ವ್ಯಕ್ತೀಕರಿಸುವ ಚಿಕಿತ್ಸೆಗಳ ಮೇಲಿನ ಒಂದು ಗಮನ, ಇಡೀ ವ್ಯಕ್ತಿಯನ್ನು ಉಪಚರಿಸುವುದು, ಸ್ವಯಂ-ಕಾಳಜಿ ಮತ್ತು ಸ್ವಯಂ-ಉಪಶಮನವನ್ನು ಉತ್ತೇಜಿಸುವುದು, ಹಾಗೂ ಪ್ರತೀ ವ್ಯಕ್ತಿಯ ಆಧ್ಯಾತ್ಮಿಕ ಸ್ವರೂಪವನ್ನು ಗುರುತಿಸುವುದು ಇವೆಲ್ಲವೂ ಅದರಲ್ಲಿ ಸೇರಿವೆ. ಇದರ ಜೊತೆಗೆ, ಮುಖ್ಯವಾಹಿನಿಯ ಆರೋಗ್ಯಪಾಲನಾ ಕ್ರಮದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಳ್ಳೆಯ ಪೋಷಣೆಯ ಮೇಲಿನ ಒಂದು ಗಮನ ಮತ್ತು ವ್ಯಾಧಿ ನಿರೋಧಕ ಚಿಕಿತ್ಸಾ ಪರಿಪಾಠಗಳಂಥ ಗುಣಲಕ್ಷಣಗಳನ್ನು ಅನೇಕ CAM ಪದ್ಧತಿಗಳು ಹೊಂದಿವೆ. ಮುಖ್ಯವಾಹಿನಿಯ ಔಷಧಕ್ಕಿಂತ ಭಿನ್ನವಾಗಿರುವ CAMನಲ್ಲಿ ಅನೇಕವೇಳೆ ಒಂದಷ್ಟು ಕೊರತೆಗಳು ಕಂಡುಬರುತ್ತವೆ ಅಥವಾ ಕೇವಲ ಸೀಮಿತವಾದ ಪ್ರಾಯೋಗಿಕ ಮತ್ತು ವೈದ್ಯಕೀಯ ಅಧ್ಯಯನವನ್ನು ಇದು ಹೊಂದಿದೆ; ಆದಾಗ್ಯೂ, ಜ್ಞಾನದ ಈ ಅಂತರದೆಡೆಗೆ ಗಮನ ಹರಿಸುವ ಉದ್ದೇಶದೊಂದಿಗೆ CAMನ ವೈಜ್ಞಾನಿಕ ಕ್ರಮಬದ್ಧ ಪರೀಕ್ಷೆಯು ಆರಂಭಗೊಳ್ಳುತ್ತಿದೆ ಎನ್ನಬಹುದು. ಈ ರೀತಿಯಾಗಿ, CAM ಮತ್ತು ಮುಖ್ಯವಾಹಿನಿಯ ಔಷಧದ ನಡುವಿನ ಎಲ್ಲೆಗೆರೆಗಳು, ಅಷ್ಟೇ ಏಕೆ ವಿಭಿನ್ನ CAM ಪದ್ಧತಿಗಳ ನಡುವಿನ ಎಲ್ಲೆಗೆರೆಗಳು ಅನೇಕವೇಳೆ ಮಸುಕಾಗಿಸಲ್ಪಟ್ಟಿವೆ ಹಾಗೂ ನಿರಂತರವಾಗಿ ಬದಲಾಗುತ್ತಿವೆ."[೬]

ಪರ್ಯಾಯ ಔಷಧದ ಚಿಕಿತ್ಸಾ ಪರಿಪಾಠಗಳು ತಮ್ಮ ವಿಧಾನಶಾಸ್ತ್ರಗಳ ರೀತಿಯಲ್ಲಿಯೇ ವೈವಿಧ್ಯಮಯವಾದ ತಳಹದಿಗಳನ್ನು ಹೊಂದಿವೆ. ಸಾಂಪ್ರದಾಯಿಕ ಔಷಧ, ಜಾನಪದ ಜ್ಞಾನ, ಆಧ್ಯಾತ್ಮಿಕ ನಂಬಿಕೆಗಳು, ಅಥವಾ ವಾಸಿಮಾಡುವುದಕ್ಕೆ ಸಂಬಂಧಿಸಿದ ಹೊಸದಾಗಿ ಗ್ರಹಿಸಲ್ಪಟ್ಟ ವಿಧಾನಗಳ ಮೇಲೆ ಚಿಕಿತ್ಸಾ ಪರಿಪಾಠಗಳು ತಮ್ಮನ್ನು ಸಂಘಟಿಸಿಕೊಳ್ಳಬಹುದು ಅಥವಾ ಅವನ್ನು ಆಧರಿಸಿರಬಹುದು.[೧೧] ಪರ್ಯಾಯ ವೈದ್ಯಕೀಯ ಚಿಕಿತ್ಸಾ ಪರಿಪಾಠಗಳು ಸಾಕಷ್ಟು ಪ್ರಮಾಣದಲ್ಲಿ ವ್ಯಾಪಕವಾಗಿ ಹಬ್ಬಿದ ಕಾರ್ಯವ್ಯಾಪ್ತಿಗಳು ಅವಕ್ಕೆ ಅನುಮತಿ ನೀಡಬಹುದು ಮತ್ತು ನಿಯಂತ್ರಿಸಬಹುದು. ಪರ್ಯಾಯ ಔಷಧದ ವೃತ್ತಿಗಾರರಿಂದ ಮಾಡಲ್ಪಟ್ಟಿರುವ ಸಮರ್ಥನೆಗಳನ್ನು ವೈದ್ಯಕೀಯ ಸಮುದಾಯವು ಸಾಮಾನ್ಯವಾಗಿ ಸ್ವೀಕರಿಸುವುದಿಲ್ಲ; ಏಕೆಂದರೆ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಕುರುಹು-ಆಧರಿತ ಮೌಲ್ಯಮಾಪನವು ಈ ಚಿಕಿತ್ಸಾ ಪರಿಪಾಠಗಳಿಗೆ ಸಂಬಂಧಿಸಿದಂತೆ ಒಂದೋ ಲಭ್ಯವಿರುವುದಿಲ್ಲ ಅಥವಾ ನಿರ್ವಹಿಸಲ್ಪಟ್ಟಿರುವುದಿಲ್ಲ. ಒಂದು ವೇಳೆ ಪರ್ಯಾಯ ವೈದ್ಯಕೀಯ ಚಿಕಿತ್ಸಾ ಪರಿಪಾಠವೊಂದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ವೈಜ್ಞಾನಿಕವಾದ ಕ್ರಮಬದ್ಧ ಪರೀಕ್ಷೆಯು ಸಮರ್ಥಿಸಿದ್ದೇ ಆದಲ್ಲಿ, ಆಗ ಅದು ಮುಖ್ಯವಾಹಿನಿಯ ಔಷಧ ಎನಿಸಿಕೊಳ್ಳುತ್ತದೆ ಹಾಗೂ ಇನ್ನೆಂದೂ "ಪರ್ಯಾಯ" ಔಷಧ ಎಂದು ಕರೆಸಿಕೊಳ್ಳುವುದಿಲ್ಲ; ಅಷ್ಟೇ ಅಲ್ಲ, ಇದು ಲಾಭದಾಯಕವೆಂದು ಸಾಬೀತು ಮಾಡಲ್ಪಟ್ಟಲ್ಲಿ, ಸಾಂಪ್ರದಾಯಿಕ ವೃತ್ತಿಗಾರರಿಂದ[೧೨][೧೩] ವ್ಯಾಪಕವಾಗಿ ಅಳವಡಿಸಿಕೊಳ್ಳಲ್ಪಡುತ್ತದೆ.

ಪರ್ಯಾಯ ಕೌಶಲಗಳಲ್ಲಿ ಕುರುಹಿನ ಕೊರತೆಯು ಕಂಡುಬರುತ್ತದೆಯಾದ್ದರಿಂದ ಅಥವಾ ಪರೀಕ್ಷೆಗಳಲ್ಲಿ ಕಾರ್ಯನಿರ್ವಹಿಸುವಲ್ಲಿ ಅವು ಪದೇಪದೇ ವಿಫಲಗೊಂಡಿರಬಹುದಾದ್ದರಿಂದ, ಕೆಲವೊಬ್ಬರು ಇದನ್ನು ಕುರುಹು ಇರದಿರುವಿಕೆಯನ್ನು-ಆಧರಿಸಿದ ಔಷಧ ಎಂಬುದಾಗಿ ವ್ಯಾಖ್ಯಾನಿಸಿದ್ದಾರೆ, ಅಥವಾ ಇದನ್ನು ಔಷಧವೇ ಅಲ್ಲ ಎಂಬುದಾಗಿ ವಿಶದೀಕರಿಸಿದ್ದಾರೆ. ಕೆಲವೊಂದು CAM ಪರೀಕ್ಷಿಸಲ್ಪಟ್ಟಿರುವುದರಿಂದ CAMನ್ನು ವ್ಯಾಖ್ಯಾನಿಸುವುದಕ್ಕಿರುವ ಕುರುಹು-ಆಧರಿತ ವಿಧಾನವು ಸಮಸ್ಯಾತ್ಮಕವಾಗಿ ಪರಿಣಮಿಸುತ್ತದೆ, ಮತ್ತು ಮುಖ್ಯವಾಹಿನಿಯ ಅನೇಕ ವೈದ್ಯಕೀಯ ಕೌಶಲಗಳಲ್ಲಿ ಬಲವಾದ ಕುರುಹಿನ ಕೊರತೆಯು ಕಂಡುಬರುತ್ತದೆ ಎಂಬುದಾಗಿ ಕೆಲವೊಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.[೧೪]

13 ದೇಶಗಳಲ್ಲಿನ ಇದರ ಹರಡಿಕೆಯನ್ನು ಮೌಲ್ಯಮಾಪನ ಮಾಡುವ, 1998ರಲ್ಲಿ ಬಂದ ಅಧ್ಯಯನಗಳ ಒಂದು ಕ್ರಮಬದ್ಧವಾದ ಅವಲೋಕನವು ತೀರ್ಮಾನಕ್ಕೆ ಬಂದ ಪ್ರಕಾರ, ಸುಮಾರು 31%ನಷ್ಟು ಕ್ಯಾನ್ಸರ್‌ ರೋಗಿಗಳು ಕೆಲವೊಂದು ಸ್ವರೂಪದ ಪೂರಕ ಮತ್ತು ಪರ್ಯಾಯ ಔಷಧವನ್ನು ಬಳಸುತ್ತಾರೆ.[೧೫] ಪರ್ಯಾಯ ಔಷಧವು ದೇಶದಿಂದ ದೇಶಕ್ಕೆ ಬದಲಾಗುತ್ತಾ ಹೋಗುತ್ತದೆ. ಎಡ್‌ಜರ್ಡ್ ಅರ್ನ್‌ಸ್ಟ್‌ ಎಂಬಾತ ಹೇಳುವ ಪ್ರಕಾರ, ಆಸ್ಟ್ರಿಯಾ ಮತ್ತು ಜರ್ಮನಿಯಲ್ಲಿ CAM ಎಂಬುದು ಮುಖ್ಯವಾಗಿ ವೈದ್ಯರ[೧೦] ಕೈಗಳಲ್ಲಿದೆ; ಕೆಲವೊಂದು ಅಂದಾಜುಗಳು ಸೂಚಿಸುವ ಪ್ರಕಾರ, ಅಮೆರಿಕಾದ ಪರ್ಯಾಯ ವೃತ್ತಿಗಾರರ ಪೈಕಿ ಕನಿಷ್ಟಪಕ್ಷ ಅರ್ಧದಷ್ಟು ಮಂದಿ ವೈದ್ಯರಾಗಿದ್ದಾರೆ.[೧೬] ಜರ್ಮನಿಯಲ್ಲಿ, ಗಿಡಮೂಲಿಕೆಗಳು ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಟ್ಟಿವೆ. ಅವುಗಳ ಪೈಕಿ ಅರ್ಧದಷ್ಟು ಭಾಗವು ವೈದ್ಯರಿಂದ ಶಿಫಾರಸು ಮಾಡಲ್ಪಡುತ್ತವೆ ಮತ್ತು ಅವರ E ಆಯೋಗ ಶಾಸನವನ್ನು ಆಧರಿಸಿದ ಆರೋಗ್ಯ ವಿಮೆಯಿಂದ ಅವಕ್ಕೆ ರಕ್ಷಣೆ ಒದಗಿಸಲಾಗಿರುತ್ತದೆ.[೧೭]

ಪರಿಭಾಷೆಗಳು

ಸ್ವತಂತ್ರವಾಗಿ ಬಳಸಲ್ಪಡುವ ಅಥವಾ ಸಾಂಪ್ರದಾಯಿಕ ಔಷಧದ ಜಾಗದಲ್ಲಿ ಬಳಸಲ್ಪಡುವ ಚಿಕಿತ್ಸಾ ಪರಿಪಾಠಗಳನ್ನು ವಿವರಿಸಲು 'ಪರ್ಯಾಯ ಔಷಧ' ಎಂಬ ಪರಿಭಾಷೆಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆಗಳ ಜೊತೆಗೂಡಿ ಅಥವಾ ಅವಕ್ಕೆ ಪೂರಕವಾಗುವಂತೆ ಬಳಸಲಾಗುವ ಚಿಕಿತ್ಸಾ ಪರಿಪಾಠಗಳನ್ನು ವಿವರಿಸಲು 'ಪೂರಕ ಔಷಧ' ಎಂಬ ಪರಿಭಾಷೆಯನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಸುಗಂಧದ್ರವ್ಯ ಚಿಕಿತ್ಸೆಯ ಬಳಕೆಯನ್ನು ಪೂರಕ ಔಷಧದ ಒಂದು ಉದಾಹರಣೆಯಾಗಿ NCCAM ಸೂಚಿಸುತ್ತದೆ; ಅಂದರೆ, "ಆರೋಗ್ಯ ಮತ್ತು ಯೋಗಕ್ಷೇಮವನ್ನು ಪ್ರವರ್ತಿಸುವಲ್ಲಿನ ಹಾಗೂ ಶಸ್ತ್ರಚಿಕಿತ್ಸೆಯನ್ನು[೧೩] ಅನುಸರಿಸಿಕೊಂಡು ಬರುವ ರೋಗಿಯ ಅಸ್ವಸ್ಥತೆಯನ್ನು ತಗ್ಗಿಸಲು ನೆರವಾಗುವಲ್ಲಿನ ಒಂದು ಪ್ರಯತ್ನವಾದ ಸುಗಂಧದ್ರವ್ಯ ಚಿಕಿತ್ಸೆಯಲ್ಲಿ ಹೂವುಗಳು, ಗಿಡಮೂಲಿಕೆಗಳು, ಮತ್ತು ಮರಗಳಿಂದ ಪಡೆಯಲಾದ ಸಾರತೈಲಗಳ ಪರಿಮಳವನ್ನು ಒಳಗೆಳೆದುಕೊಳ್ಳಲಾಗುತ್ತದೆ." ಪರಿಣಾಮಕಾರಿತ್ವದ ಒಂದಷ್ಟು ವೈಜ್ಞಾನಿಕ ಕುರುಹನ್ನು ಹೊಂದಿರುವ ಸಾಂಪ್ರದಾಯಿಕ ಮತ್ತು ಪರ್ಯಾಯ ವೈದ್ಯಕೀಯ ಚಿಕಿತ್ಸೆಗಳ ಸಂಯೋಜನೆಗಳನ್ನು 'ಸುಸಂಯೋಜನಾತ್ಮಕ' ಅಥವಾ 'ಸಂಯೋಜಿತ ಔಷಧ' ಎಂಬ ಪರಿಭಾಷೆಗಳು ಸೂಚಿಸುತ್ತವೆ; ಇಂಥ ಪರಿಪಾಠಗಳನ್ನು ಅವುಗಳ ಸಮರ್ಥಕರು ಪೂರಕ ಔಷಧದ ಅತ್ಯುತ್ತಮ ಉದಾಹರಣೆಗಳು ಎಂಬುದಾಗಿ ಪರಿಗಣಿಸುತ್ತಾರೆ.[೧೩]

ರಾಲ್ಫ್ ಸ್ನೈಡರ್‌ಮನ್‌ ಮತ್ತು ಆಂಡ್ರ್ಯೂ ವೇಲ್‌ ಎಂಬಿಬ್ಬರು ಈ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, "ಸುಸಂಯೋಜನಾತ್ಮಕ ಔಷಧವೆಂಬುದು ಪೂರಕ ಮತ್ತು ಪರ್ಯಾಯ ಔಷಧದೊಂದಿಗೆ ಸಮಾನಾರ್ಥಕವಾಗಿಲ್ಲ. ಇದು ಸಾಕಷ್ಟು ವಿಶಾಲವಾದ ಒಂದು ಅರ್ಥ ಮತ್ತು ಧ್ಯೇಯವನ್ನು ಹೊಂದಿದೆ; ಆರೋಗ್ಯದ ಮೇಲೆ ಮತ್ತು ವಾಸಿಮಾಡುವಿಕೆಯ ಮೇಲೆ ಔಷಧದ ಗಮನವು ಪುನರ್‌‌ಸ್ಥಾಪನೆಯಾಗುವುದಕ್ಕೆ ಸಂಬಂಧಿಸಿದಂತೆ ಹಾಗೂ ರೋಗಿ-ವೈದ್ಯರ ಬಾಂಧವ್ಯದ ಪ್ರಾಧಾನ್ಯತೆಗೆ ಒತ್ತುನೀಡುವುದಕ್ಕೆ ಸಂಬಂಧಿಸಿದಂತೆ ಕರೆನೀಡುತ್ತದೆ" ಎಂದಿದ್ದಾರೆ.[೧೮] ತಡೆಗಟ್ಟುವಿಕೆ ಮತ್ತು ಜೀವನಶೈಲಿಯ ಬದಲಾವಣೆಗಳ ಮೇಲಿನ ಒಂದು ಒತ್ತುನೀಡುವಿಕೆಯನ್ನು ಒಳಗೊಂಡಿರುವ ಸಂಪ್ರದಾಯಬದ್ಧ ಮತ್ತು ಪೂರಕ ಔಷಧದ ಸಂಯೋಜನೆಯು ಸಂಯೋಜಿತ ಔಷಧ ಎಂದು ಕರೆಯಲ್ಪಡುತ್ತದೆ.

ಸ್ವಭಾವ ನಿರೂಪಣೆ

ಪರ್ಯಾಯ ಔಷಧಕ್ಕಾಗಲೀ ಅಥವಾ ಪೂರಕ ಔಷಧಕ್ಕಾಗಲೀ ಯಾವುದೇ ಸ್ಪಷ್ಟ ಮತ್ತು ಸುಸಂಗತ ವ್ಯಾಖ್ಯಾನವು ಲಭ್ಯವಿಲ್ಲ.[೧೯]: 17  ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಇದು ಯಾವುದೇ ಶಮನಕಾರಿ ಚಿಕಿತ್ಸಾ ಪರಿಪಾಠ ಎಂಬುದಾಗಿ ಅನೇಕವೇಳೆ ವ್ಯಾಖ್ಯಾನಿಸಲ್ಪಟ್ಟಿದ್ದು, "ಅದು ಸಾಂಪ್ರದಾಯಿಕ ಔಷಧದ[೧] ವ್ಯಾಪ್ತಿಯೊಳಗಡೆ ಬರುವಂಥದ್ದಾಗಿರುವುದಿಲ್ಲ" ಅಥವಾ "ಪರಿಣಾಮಕಾರಿಯಾಗಿದೆ ಎಂಬುದಾಗಿ ಸುಸಂಗತವಾಗಿ ತೋರಿಸಲ್ಪಟ್ಟಿರುವಂಥದ್ದಾಗಿರುವುದಿಲ್ಲ."[೨]

ಸ್ವಯಂ ಸ್ವಭಾವ ನಿರೂಪಣೆ

ನ್ಯಾಷನಲ್‌ ಸೆಂಟರ್‌ ಫಾರ್‌ ಕಾಂಪ್ಲಿಮೆಂಟರಿ ಅಂಡ್‌ ಆಲ್ಟರ್‌ನೇಟಿವ್‌ ಮೆಡಿಸಿನ್‌ (NCCAM) CAMನ್ನು ಹೀಗೆ ವ್ಯಾಖ್ಯಾನಿಸುತ್ತದೆ: "CAM ಎಂಬುದು, ಪ್ರಸಕ್ತವಾಗಿ ಸಾಂಪ್ರದಾಯಿಕ ಔಷಧದ ಒಂದು ಭಾಗವಾಗಿರದ ವೈವಿಧ್ಯಮಯವಾದ ವೈದ್ಯಕೀಯ ಮತ್ತು ಆರೋಗ್ಯ ರಕ್ಷಣಾ ಪದ್ಧತಿಗಳು, ಪರಿಪಾಠಗಳು, ಮತ್ತು ಉತ್ಪನ್ನಗಳ ಒಂದು ಸಮೂಹವಾಗಿದೆ."[೧೩]

ಡೆನ್ಮಾರ್ಕಿನ ನಾಲೆಜ್‌ ಅಂಡ್‌ ರಿಸರ್ಚ್‌ ಸೆಂಟರ್‌ ಫಾರ್‌ ಆಲ್ಟರ್‌ನೆಟಿವ್‌ ಮೆಡಿಸಿನ್‌ (ಡ್ಯಾನಿಷ್‌ ಭಾಷೆಯ ಹ್ರಸ್ವರೂಪ: ViFAB; ViFAB ಎಂಬುದು ಡೆನ್ಮಾರ್ಕಿನ ಒಳಾಡಳಿತ ಮತ್ತು ಆರೋಗ್ಯ ಖಾತೆಯ ಅಡಿಯಲ್ಲಿ ಬರುವ ಒಂದು ಸ್ವತಂತ್ರ ಸಂಸ್ಥೆ. www.vifab.dk/uk ಎಂಬುದು ViFABನ ವೆಬ್‌ಸೈಟ್‌) ಎಂಬ ಸಂಸ್ಥೆಯು "ಪರ್ಯಾಯ ಔಷಧ" ಎಂಬ ಪರಿಭಾಷೆಯನ್ನು ಈ ಕೆಳಕಂಡವುಗಳಿಗೆ ಸಂಬಂಧಿಸಿದಂತೆ ಬಳಸುತ್ತದೆ: - ಅಧಿಕೃತ ಆರೋಗ್ಯ ಪಾಲನಾ ವೃತ್ತಿಗಾರರಲ್ಲದ ಚಿಕಿತ್ಸಕರಿಂದ ನಿರ್ವಹಿಸಲ್ಪಡುವ ಚಿಕಿತ್ಸೆಗಳು.- ಅಧಿಕೃತ ಆರೋಗ್ಯ ಪಾಲನಾ ವೃತ್ತಿಗಾರರಿಂದ ನಿರ್ವಹಿಸಲ್ಪಡುವ, ಆದರೆ ಮುಖ್ಯವಾಗಿ ಆರೋಗ್ಯ ಪಾಲನಾ ಪದ್ಧತಿಯ ಹೊರಗಡೆ ಅನ್ಯಥಾ ಬಳಸಲ್ಪಡುವ ವಿಧಾನಗಳನ್ನು ಆಧರಿಸಿರುವ ಚಿಕಿತ್ಸೆಗಳು. ಒಂದು ಆರೋಗ್ಯ ಪಾಲನಾ ಪ್ರಮಾಣೀಕರಣವನ್ನು ಹೊಂದಿರದ ಜನರು ಈ ಚಿಕಿತ್ಸೆಗಳನ್ನು ನಿರ್ವಹಿಸಲು ಸಮರ್ಥರಾಗಿರಬೇಕು.

ಕೊಖ್ರೇನ್‌ ಪೂರಕ ಔಷಧ ಕ್ಷೇತ್ರವು ಕಂಡುಕೊಂಡಿರುವ ಪ್ರಕಾರ, ಒಂದು ದೇಶದಲ್ಲಿ ಪೂರಕ ಅಥವಾ ಪರ್ಯಾಯ ಎಂಬುದಾಗಿ ಪರಿಗಣಿಸಲ್ಪಟ್ಟಿರುವ ಚಿಕಿತ್ಸಾ ಪರಿಪಾಠಗಳು ಮತ್ತೊಂದು ದೇಶದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸಾ ಪರಿಪಾಠಗಳಾಗಿ ಪರಿಗಣಿಸಲ್ಪಟ್ಟಿರಬಹುದು. ಆದ್ದರಿಂದ ಅವರ ವ್ಯಾಖ್ಯಾನವು ಸಾರ್ವತ್ರಿಕವಾಗಿದೆ: "ಹಲವಾರು ದೇಶಗಳಲ್ಲಿನ ಸಾಂಪ್ರದಾಯಿಕ ಔಷಧದ ಕ್ಷೇತ್ರದ ಹೊರಗಡೆಯಿರುವ ಎಲ್ಲಾ ಇಂಥ ಚಿಕಿತ್ಸಾ ಪರಿಪಾಠಗಳು ಮತ್ತು ಕಲ್ಪನೆಗಳನ್ನು ಪೂರಕ ಔಷಧವು ಒಳಗೊಳ್ಳುತ್ತದೆ ಮತ್ತು ಅದು ಕಾಯಿಲೆಯನ್ನು ತಡೆಗಟ್ಟುವ ಅಥವಾ ಉಪಚರಿಸುವ, ಅಥವಾ ಆರೋಗ್ಯ ಮತ್ತು ಯೋಗಕ್ಷೇಮವನ್ನು ಪ್ರವರ್ತಿಸುವ ಒಂದು ವಿಧಾನವಾಗಿ ಅದರ ಬಳಕೆದಾರರಿಂದ ವ್ಯಾಖ್ಯಾನಿಸಲ್ಪಟ್ಟಿದೆ."[೨೦]

ಉದಾಹರಣೆಗೆ, ಜೈವಿಕ ಪ್ರತ್ಯಾಧಾನವನ್ನು ಶಾರೀರಿಕ ಔಷಧ ಹಾಗೂ ಪುನಃಸ್ಥಾಪನಾ ಸಮುದಾಯದ ವ್ಯಾಪ್ತಿಯೊಳಗೆ ಸಾಮಾನ್ಯವಾಗಿ ಬಳಸಲಾಗುತ್ತದೆಯಾದರೂ, ಒಟ್ಟಾರೆಯಾಗಿ ಅದು ವೈದ್ಯಕೀಯ ಸಮುದಾಯದೊಳಗೆ ಪರ್ಯಾಯ ಔಷಧವಾಗಿ ಪರಿಗಣಿಸಲ್ಪಟ್ಟಿದೆ, ಮತ್ತು ಕೆಲವೊಂದು ಗಿಡಮೂಲಿಕೆಗಳ ಚಿಕಿತ್ಸಾ ಕ್ರಮಗಳು ಯುರೋಪ್‌ನಲ್ಲಿ ಮುಖ್ಯವಾಹಿನಿಯ ಔಷಧಗಳಾಗಿದ್ದರೂ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಪರ್ಯಾಯ ಔಷಧಗಳಾಗಿವೆ.[೨೧] ಡೇವಿಡ್‌ M. ಐಸೆನ್‌ಬರ್ಗ್‌ ಎಂಬ ಓರ್ವ ಸುಸಂಯೋಜನಾತ್ಮಕ ಔಷಧ ಸಂಶೋಧಕನು[೨೨] ಇವನ್ನು ವ್ಯಾಖ್ಯಾನಿಸುತ್ತಾ, "ಇವು US ವೈದ್ಯಕೀಯ ಶಾಲೆಗಳಲ್ಲಿ ವ್ಯಾಪಕವಾಗಿ ಕಲಿಸಲ್ಪಡದ ಅಥವಾ US ಆಸ್ಪತ್ರೆಗಳಲ್ಲಿ[೨೩] ಸಾಮಾನ್ಯವಾಗಿ ಲಭ್ಯವಿರದ ವೈದ್ಯಕೀಯ ಮಧ್ಯಸ್ಥಿಕೆಗಳಾಗಿವೆ" ಎಂದು ಅಭಿಪ್ರಾಯ ಪಡುತ್ತಾನೆ; ಈ ಕುರಿತು NCCAM ವಿವರಿಸುತ್ತಾ, ಹಿಂದೆ ಪ್ರಮಾಣೀಕರಿಸದ ಪರಿಹಾರಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದಾಗಿ ಕಂಡುಬಂದಲ್ಲಿ ಅವನ್ನು ಸಾಂಪ್ರದಾಯಿಕ ಔಷಧದೊಳಗೆ ಸಂಘಟಿಸಬಹುದು ಎಂದು ಹೇಳುತ್ತದೆ.[೧೩]

ಪೂರಕ ಮತ್ತು ಪರ್ಯಾಯ ಔಷಧದ ಓರ್ವ ಸಂಶೋಧಕನಾದ ಬ್ಯಾರೀ R. ಕ್ಯಾಸಿಲೆತ್‌ ಎಂಬಾತ ಸದರಿ ಸಂದರ್ಭವನ್ನು ಸಾರಸಂಗ್ರಹವಾಗಿ ಹೇಳುತ್ತಾ, "ಮುಖ್ಯವಾಹಿನಿಯ ಔಷಧದೊಳಗೆ CAMನ್ನು ಸಂಯೋಜಿಸುವುದಕ್ಕೆ ಸಂಬಂಧಿಸಿದ ಸದ್ಯದ ಪ್ರಯತ್ನಗಳ ಕುರಿತಾಗಿ, ಅಥವಾ "ಪರ್ಯಾಯ" ಔಷಧಕ್ಕೆ ಸಂಬಂಧಿಸಿದಂತೆ ಒಂದು ಪ್ರತ್ಯೇಕವಾದ NIH ಸಂಶೋಧನಾ ಘಟಕವನ್ನು ಹೊಂದುವುದರ ಕುರಿತಾಗಿ ಎಲ್ಲಾ ಮುಖ್ಯವಾಹಿನಿಯ ವೈದ್ಯರು CAMನಿಂದ ಸಂತುಷ್ಟರಾಗಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾನೆ.[೧೨][೨೪]

ವೈಜ್ಞಾನಿಕ ಸಮುದಾಯ

ಸಂಸ್ಥೆಗಳು

ಅಮೆರಿಕಾ ಸಂಯುಕ್ತ ಸಂಸ್ಥಾನದ ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ ಪರ್ಯಾಯ ಔಷಧವನ್ನು ಹೀಗೆ ವ್ಯಾಖ್ಯಾನಿಸಿದೆ: "ಪರ್ಯಾಯ ಔಷಧ ಎಂಬುದು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಪರಿಣಾಮಕಾರಿ ಎಂಬುದಾಗಿ ಸಾಬೀತು ಮಾಡಲ್ಪಡದ ಎಲ್ಲಾ ಚಿಕಿತ್ಸೆಗಳಾಗಿವೆ."[೨೫] 2005ರಲ್ಲಿ ಬಿಡುಗಡೆಯಾದ, ಕಾಂಪ್ಲಿಮೆಂಟರಿ ಅಂಡ್‌ ಆಲ್ಟರ್‌ನೆಟಿವ್‌ ಮೆಡಿಸಿನ್‌ ಇನ್‌ ದಿ ಯುನೈಟೆಡ್‌ ಸ್ಟೇಟ್ಸ್‌ ಎಂಬ ಶೀರ್ಷಿಕೆಯನ್ನು ಹೊಂದಿದ ಬಹುಮತಾಭಿಪ್ರಾಯದ ವರದಿಯೊಂದರಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಸಿನ್‌ (IOM) ಪೂರಕ ಮತ್ತು ಪರ್ಯಾಯ ಔಷಧವನ್ನು (CAM) ವ್ಯಾಖ್ಯಾನಿಸುತ್ತಾ, ಅದು ಒಂದು ನಿರ್ದಿಷ್ಟ ಸಂಸ್ಕೃತಿ ಮತ್ತು ಐತಿಹಾಸಿಕ ಅವಧಿಯಲ್ಲಿನ ಔಷಧ ವಲಯದೆಡೆಗಿನ ಪ್ರಧಾನವಲ್ಲದ ವಿಧಾನವಾಗಿದೆ ಎಂದು ತಿಳಿಸಿದೆ.[೨೬] ಇದೇ ರೀತಿಯ ವ್ಯಾಖ್ಯಾನವೊಂದನ್ನು ಕೊಖ್ರೇನ್‌ ಕೊಲಾಬರೇಷನ್‌[೨೦] ಮತ್ತು UKಯ ಆರೋಗ್ಯ ಇಲಾಖೆಯಂಥ ಅಧಿಕೃತ ಸರ್ಕಾರಿ ಘಟಕಗಳು ಸ್ವೀಕರಿಸಿ ಅಳವಡಿಸಿಕೊಂಡಿವೆ.[೨೭] ಕೊಖ್ರೇನ್‌ ಕೊಲಾಬರೇಷನ್‌‌ನಂಥ ಕುರುಹು-ಆಧರಿತ ಔಷಧದ ಪ್ರತಿಪಾದಕರು ಪರ್ಯಾಯ ಔಷಧ ಎಂಬ ಪರಿಭಾಷೆಯನ್ನು ಬಳಸುತ್ತಾರಾದರೂ, ಎಲ್ಲಾ ಚಿಕಿತ್ಸೆಗಳು, ಅವು "ಮುಖ್ಯವಾಹಿನಿ"ಯದಿರಬಹುದು ಅಥವಾ "ಪರ್ಯಾಯ"ವಾಗಿರಬಹುದು, ವೈಜ್ಞಾನಿಕ ವಿಧಾನದ ಪ್ರಮಾಣಕ-ಮಾನದಂಡಗಳಿಗೆ ನಿಷ್ಠವಾಗಿರಬೇಕು ಎಂಬ ಅಂಶಕ್ಕೆ ಸಮ್ಮತಿಸುತ್ತಾರೆ.[೨೮]

ವಿಜ್ಞಾನಿಗಳು

ಹಲವಾರು ಮುಖ್ಯವಾಹಿನಿಯ ವಿಜ್ಞಾನಿಗಳು ಮತ್ತು ವೈದ್ಯರು ಪರ್ಯಾಯ ಔಷಧದ ಕುರಿತು ವ್ಯಾಖ್ಯಾನಿಸಿದ್ದಾರೆ ಮತ್ತು ಅದನ್ನು ಟೀಕಿಸಿದ್ದಾರೆ.

ಯಾವುದೇ ಚಿಕಿತ್ಸೆಯನ್ನು 'ಪರ್ಯಾಯ ಔಷಧ' ಎಂಬುದಾಗಿ ಸೂಕ್ತವಾಗಿ ವರ್ಗೀಕರಿಸಬಹುದೇ ಎಂಬ ಅಂಶದ ಕುರಿತಾಗಿ ವೈದ್ಯಕೀಯ ಸಂಶೋಧಕರ ನಡುವೆ ಚರ್ಚೆಯೊಂದು ನಡೆಯುತ್ತಿದೆ. ಸಮರ್ಪಕವಾಗಿ ಪರೀಕ್ಷಿಸಲ್ಪಟ್ಟಿರುವ ಒಂದು ಔಷಧ ಮತ್ತು ಸಮರ್ಪಕವಾಗಿ ಪರೀಕ್ಷಿಸಲ್ಪಟ್ಟಿರದ ಒಂದು ಔಷಧ ಮಾತ್ರವೇ ಇರಲು ಸಾಧ್ಯ ಎಂಬುದಾಗಿ ಕೆಲವೊಬ್ಬರು ಸಮರ್ಥಿಸುತ್ತಾರೆ.[೧೨] ಏಕಮಾತ್ರವಾಗಿ ವೈಜ್ಞಾನಿಕ ಕುರುಹಿನ ಮೇಲೆ ಆಧರಿಸಿ ಆರೋಗ್ಯ ಪಾಲನಾ ಚಿಕಿತ್ಸಾ ಪರಿಪಾಠಗಳನ್ನು ವರ್ಗೀಕರಿಸುವುದು ಅಗತ್ಯ ಎಂಬುದು ಅವರ ಅಭಿಪ್ರಾಯವಾಗಿದೆ. ಒಂದು ವೇಳೆ ಚಿಕಿತ್ಸೆಯೊಂದು ಅತಿ ಕಟ್ಟುನಿಟ್ಟಿನ ಪರೀಕ್ಷೆಗೊಳಪಟ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದಾಗಿ ಕಂಡುಬಂದಲ್ಲಿ, ಆರಂಭದಲ್ಲಿ ಅದು ಪರ್ಯಾಯ ಔಷಧ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದರೂ ಅದನ್ನು ಲೆಕ್ಕಿಸದೆ ಸಾಂಪ್ರದಾಯಿಕ ಔಷಧವು ಅದನ್ನು ಸ್ವೀಕರಿಸಿ ಅಳವಡಿಸಿಕೊಳ್ಳುತ್ತದೆ.[೧೨] ಈ ರೀತಿಯಾಗಿ, ಚಿಕಿತ್ಸಾ ವಿಧಾನವೊಂದರ ಪರಿಣಾಮಕಾರಿತ್ವದ ಅಥವಾ ಅದರ ಕೊರತೆಯ ವರ್ಧಿಸಿದ ಜ್ಞಾನವನ್ನು ಆಧರಿಸಿ, ಚಿಕಿತ್ಸಾ ವಿಧಾನವೊಂದು ತನ್ನ ವರ್ಗಗಳನ್ನು (ಪ್ರಮಾಣೀಕರಿಸಲ್ಪಟ್ಟಿದ್ದರ ಪ್ರತಿಯಾಗಿರುವ ಪ್ರಮಾಣೀಕರಿಸಲ್ಪಡದ ವರ್ಗಗಳು) ಬದಲಿಸಿಕೊಳ್ಳಲು ಸಾಧ್ಯವಿದೆ. ಈ ನಿಲುವಿಗೆ ಸಂಬಂಧಿಸಿದ ಗಮನ ಸೆಳೆಯುವ ಬೆಂಬಲಿಗರಲ್ಲಿ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌‌ನ (JAMA) ಹಿಂದಿನ ಸಂಪಾದಕನಾದ ಜಾರ್ಜ್‌ D. ಲಂಡ್‌ಬರ್ಗ್‌ ಸೇರಿದ್ದಾನೆ.[೨೯]

ಕ್ವಾಕ್‌ವಾಚ್‌‌‌ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕನಾದ ಸ್ಟೀಫನ್‌ ಬ್ಯಾರೆಟ್‌ ವಾದಿಸುವ ಪ್ರಕಾರ, "ಪರ್ಯಾಯ" ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಚಿಕಿತ್ಸಾ ಪರಿಪಾಠಗಳನ್ನು ಯಥಾರ್ಥವಾದ, ಪ್ರಾಯೋಗಿಕವಾದ ವಿಧಾನಗಳು ಎಂಬುದಾಗಿ ಅಥವಾ ಪ್ರಶ್ನಾರ್ಹ ವಿಧಾನಗಳು ಎಂಬುದಾಗಿ ಮರುವರ್ಗೀಕರಿಸುವುದು ಅಗತ್ಯವಾಗಿದೆ. ಈ ಕುರಿತಾಗಿ ಆತ ಇಲ್ಲಿ ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ, ಸುರಕ್ಷತೆ ಮತ್ತು ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಬಲವಾದ ಕುರುಹನ್ನು ಹೊಂದಿರುವ ವಿಧಾನಗಳನ್ನು ಯಥಾರ್ಥವಾದ ವಿಧಾನಗಳು ಎಂಬುದಾಗಿಯೂ, ಪ್ರಮಾಣೀಕರಿಸಲ್ಪಡದಿದ್ದರೂ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಸಮಂಜಸವೆಂದು ಕಾಣುವ ಒಂದು ತಾರ್ಕಿಕ ವಿವರಣೆಯನ್ನು ಹೊಂದಿರುವ ವಿಧಾನವನ್ನು ಪ್ರಾಯೋಗಿಕ ವಿಧಾನ ಎಂಬುದಾಗಿಯೂ, ಮತ್ತು ವೈಜ್ಞಾನಿಕವಾಗಿ ಸಮಂಜಸವೆಂದು ಕಾಣುವ ಒಂದು ತಾರ್ಕಿಕ ವಿವರಣೆಯನ್ನು ಹೊಂದಿಲ್ಲದ ಆಧಾರರಹಿತ ವಿಧಾನವನ್ನು ಪ್ರಶ್ನಾರ್ಹ ವಿಧಾನ ಎಂಬುದಾಗಿಯೂ ಆತ ವ್ಯಾಖ್ಯಾನಿಸುತ್ತಾನೆ. ಕೆಲವೊಂದು "ಪರ್ಯಾಯ" ಔಷಧಗಳು ಅರ್ಹತೆಯನ್ನು ಹೊಂದಿವೆಯೆಂಬ ಕಾರಣಕ್ಕಾಗಿಯೇ ಉಳಿದವುಗಳು, ಅವುಗಳಲ್ಲಿ ಬಹುಪಾಲು ನಿಷ್ಪ್ರಯೋಜಕವಾಗಿದ್ದರೂ ಸಹ, ಸಮಾನ ಪರಿಗಣನೆ ಮತ್ತು ಗೌರವಕ್ಕೆ ಯೋಗ್ಯವಾಗಿವೆ ಎಂಬಂಥ ಅನಿಸಿಕೆಯು ಅಸ್ತಿತ್ವದಲ್ಲಿರುವುದು ಅವನ ಕಳವಳ ಅಥವಾ ಕಾಳಜಿಗಳಿಗೆ ಕಾರಣವಾಗಿದೆ.[೩೦] ಒಂದು ವಿಭಿನ್ನ ರೂಪಾಂತರ ಅಥವಾ ಸೇವನಾ ಪ್ರಮಾಣವು ವಿಭಿನ್ನ ಫಲಿತಾಂಶಗಳನ್ನು ನೀಡಲು ಸಾಧ್ಯವಿರುವುದರಿಂದ, ಒಂದು ನಿರ್ದಿಷ್ಟ ಔಷಧ ವಿಧಾನವು ಕೆಲಸ ಮಾಡುವುದಿಲ್ಲ ಎಂಬುದಾಗಿ ಎಂದಿಗೂ ಹೇಳಬಾರದು ಎಂಬಂಥ ಕಾರ್ಯನೀತಿಯೊಂದು NIHನಲ್ಲಿ ಚಾಲ್ತಿಯಲ್ಲಿದೆ ಎಂದು ಅವನು ಹೇಳುತ್ತಾನೆ.[೩೧]

ಪೂರಕ ಔಷಧ ಶಾಸ್ತ್ರದ ಪ್ರಾಧ್ಯಾಪಕನಾದ ಎಡ್‌ಜರ್ಡ್‌ ಅರ್ನ್‌ಸ್ಟ್‌ ಎಂಬಾತ ಅನೇಕ ಪರ್ಯಾಯ ಕೌಶಲಗಳಿಗೆ ಸಂಬಂಧಿಸಿದಂತಿರುವ ಕುರುಹನ್ನು ದುರ್ಬಲ, ಅಸ್ತಿತ್ವದಲ್ಲಿಲ್ಲದ, ಅಥವಾ ನಕಾರಾತ್ಮಕ ಎಂಬುದಾಗಿ ನಿರೂಪಿಸುತ್ತಾನಾದರೂ, ಇತರವುಗಳಿಗೆ ಸಂಬಂಧಿಸಿದಂತೆ, ಅದರಲ್ಲೂ ನಿರ್ದಿಷ್ಟವಾಗಿ ಕೆಲವೊಂದು ಗಿಡಮೂಲಿಕೆಗಳು ಮತ್ತು ಸೂಜಿಚಿಕಿತ್ಸೆಗೆ ಸಂಬಂಧಿಸಿದಂತೆ ಕುರುಹಿನ ಅಸ್ತಿತ್ವ ಕಂಡುಬರುತ್ತದೆ ಎಂದು ತಿಳಿಸುತ್ತಾನೆ.[೩೨]

ರಿಚರ್ಡ್‌ ಡಾಕಿನ್ಸ್‌‌ ಎಂಬ ಓರ್ವ ವಿಕಾಸಾತ್ಮಕ ಜೀವಶಾಸ್ತ್ರಜ್ಞನು ಪರ್ಯಾಯ ಔಷಧವನ್ನು ವ್ಯಾಖ್ಯಾನಿಸುತ್ತಾ, "ಇದು ಪರೀಕ್ಷಿಸಲಾಗದ, ಪರೀಕ್ಷೆಗೆ ಒಳಗಾಗಲು ನಿರಾಕರಿಸುವ, ಅಥವಾ ಪರೀಕ್ಷೆಗಳಲ್ಲಿ ಏಕಪ್ರಕಾರವಾಗಿ ವಿಫಲಗೊಳ್ಳುವ ಚಿಕಿತ್ಸಾ ಪರಿಪಾಠಗಳ ಒಂದು ವರ್ಗ" ಎಂದು ತಿಳಿಸುತ್ತಾನೆ.[೩೩] ಆತ ತನ್ನ ಅಭಿಪ್ರಾಯವನ್ನು ಮುಂದುವರಿಸುತ್ತಾ, "ಪರ್ಯಾಯ ಔಷಧ ಎಂಬುದು ಯಾವುದೂ ಇಲ್ಲ. ರೋಗಶಮನಕಾರಿ ವ್ಯವಸ್ಥೆಯಲ್ಲಿರುವುದು ಕೆಲಸ ಮಾಡುವ ಔಷಧ ಮತ್ತು ಕೆಲಸ ಮಾಡದಿರುವ ಔಷಧ ಮಾತ್ರವೇ" ಎಂದೂ ತಿಳಿಸಿದ್ದಾನೆ.[೪] ಸೂಕ್ತವಾಗಿ ನಿರ್ವಹಿಸಲ್ಪಟ್ಟ ಪರೀಕ್ಷಾ-ಪ್ರಕ್ರಿಯೆಗಳಲ್ಲಿ ಒಂದು ವೇಳೆ ಚಿಕಿತ್ಸಾ ಕೌಶಲವೊಂದು ಪರಿಣಾಮಕಾರಿ ಎಂಬುದಾಗಿ ನಿರೂಪಿಸಲ್ಪಟ್ಟರೆ, ಅದು ಪರ್ಯಾಯ ಚಿಕಿತ್ಸೆ ಎಂದು ಕರೆಸಿಕೊಳ್ಳುವುದಕ್ಕೆ ಅಂತ್ಯಹಾಡಿದಂತಾಗುತ್ತದೆ ಮತ್ತು ಅದು ಸರಳವಾಗಿ ಔಷಧವೆನಿಸಿಕೊಳ್ಳುತ್ತದೆ ಎಂದು ಅವನು ಹೇಳುತ್ತಾನೆ.[೩೪]

ನ್ಯಾಷನಲ್‌ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಹೆಲ್ತ್‌‌ ಬೆಂಬಲಿತ ಪರ್ಯಾಯ ಔಷಧದ ಸಂಶೋಧನೆಯಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ನಿಷ್ಕೃಷ್ಟತೆಯ ಕೊರತೆಯಿದ್ದುದರ ಕುರಿತಾಗಿ ನಾಲ್ವರು ನೊಬೆಲ್‌ ಪ್ರಶಸ್ತಿ ವಿಜೇತರು ಹಾಗೂ ಇತರ ಪ್ರಸಿದ್ಧ ವಿಜ್ಞಾನಿಗಳಿಂದ ಬರೆಯಲ್ಪಟ್ಟ ಪತ್ರವೊಂದು ವಿಷಾದಿಸಿದೆ.[೩೫] ನ್ಯಾಷನಲ್‌ ಸೆಂಟರ್‌ ಫಾರ್‌ ಕಾಂಪ್ಲಿಮೆಂಟರಿ ಅಂಡ್‌ ಆಲ್ಟರ್‌ನೇಟಿವ್‌ ಮೆಡಿಸಿನ್‌ ಸಂಸ್ಥೆಯನ್ನು ಮುಚ್ಚಿಬಿಡಬೇಕು ಎಂಬುದಾಗಿ ವಿಜ್ಞಾನಿಗಳ ಒಂದು ಗುಂಪು 2009ರಲ್ಲಿ ಪ್ರಸ್ತಾವನೆಯೊಂದನ್ನು ಸಲ್ಲಿಸಿತು. ಶರೀರ ವಿಜ್ಞಾನ ಮತ್ತು ಕಾಯಿಲೆಯ ಅಸಾಂಪ್ರದಾಯಿಕ ಗ್ರಹಿಕೆಗಳ ಮೇಲೆ ಬಹುಪಾಲು ಅಧ್ಯಯನಗಳು ಆಧರಿತವಾಗಿದ್ದವು ಹಾಗೂ ಅವು ಅತ್ಯಲ್ಪ ಪರಿಣಾಮವನ್ನು ತೋರಿಸಿವೆ ಅಥವಾ ಯಾವುದೇ ಪರಿಣಾಮವನ್ನು ತೋರಿಸಿಲ್ಲ ಎಂಬುದು ಅವರ ವಾದವಾಗಿತ್ತು. ಅಷ್ಟೇ ಅಲ್ಲ, ಪಥ್ಯಾಹಾರ, ವಿಹಾರ-ವಿಶ್ರಾಂತಿ, ಯೋಗ ಮತ್ತು ಸಸ್ಯೋತ್ಪನ್ನ ಪರಿಹಾರಗಳಂಥ ಸದರಿ ಕ್ಷೇತ್ರದ ಹೆಚ್ಚು-ಸಮಂಜಸವೆಂದು ಕಾಣುವ ಮಧ್ಯಸ್ಥಿಕೆಗಳನ್ನು NIHನ ಇತರ ಭಾಗಗಳಲ್ಲಿರುವ ರೀತಿಯಲ್ಲಿಯೇ ಅಧ್ಯಯನ ಮಾಡಲು ಸಾಧ್ಯವಿದೆ; NIHನ ಇತರ ಭಾಗಗಳಲ್ಲಿ ಅವು ಸಾಂಪ್ರದಾಯಿಕ ಸಂಶೋಧನೆ ಯೋಜನೆಗಳೊಂದಿಗೆ ಸ್ಪರ್ಧಿಸಬೇಕಾಗಿ ಬರುತ್ತದೆ ಎಂಬುದೂ ಅವರ ವಾದವಾಗಿತ್ತು.[೩೬]

ಸುಮಾರು 2.5 ಶತಕೋಟಿ $ನಷ್ಟು ವೆಚ್ಚದಲ್ಲಿ ಹತ್ತು ವರ್ಷಗಳ ಅವಧಿಯವರೆಗೆ NCCAM ವತಿಯಿಂದ ನಡೆಸಲ್ಪಟ್ಟ ಹೆಚ್ಚೂಕಮ್ಮಿ ಎಲ್ಲಾ ಅಧ್ಯಯನಗಳಲ್ಲಿ ಹೊರಹೊಮ್ಮಿದ ನಕಾರಾತ್ಮಕ ಫಲಿತಾಂಶಗಳು ಈ ಕಳವಳ ಅಥವಾ ಕಾಳಜಿಗಳನ್ನು ಬೆಂಬಲಿಸಿವೆ.[೩೭] ಸಂಶೋಧನಾ ವಿಧಾನಗಳ ಓರ್ವ ಪರಿಣತ ಮತ್ತು "ಸ್ನೇಕ್‌ ಆಯಿಲ್‌ ಸೈನ್ಸ್‌‌" ಕೃತಿಯ ಲೇಖಕನಾದ R. ಬಾರ್ಕರ್‌‌ ಬೌಸೆಲ್ ಎಂಬಾತ, "ಅಸಂಬದ್ಧವಾದುದರ ಕುರಿತಾಗಿ ತನಿಖೆ ನಡೆಸುವುದು ರಾಜಕೀಯವಾಗಿ ಸರಿಯಾಗಿದೆ" ಎಂದು ಹೇಳಿದ್ದಾನೆ.[೩೧] NIH ಬೆಂಬಲವನ್ನಷ್ಟೇ ಹೊಂದಿರುವುದು "ಕ್ರಮಬದ್ಧವಾಗಿಲ್ಲದ ಚಿಕಿತ್ಸೆಗಳಿಗೆ ನಿರಾಧಾರವಾದ ತರ್ಕಸಮ್ಮತಿಯನ್ನು" ನೀಡಲು ಬಳಸಲ್ಪಡುತ್ತಿದೆ ಎಂಬ ಕುರಿತು ಅಲ್ಲಲ್ಲಿ ಕಳವಳಗಳು ವ್ಯಕ್ತವಾಗಿವೆ.[೩೬]

ಸೈಂಟಿಫಿಕ್‌ ರಿವ್ಯೂ ಆಫ್‌ ಆಲ್ಟರ್‌ನೆಟಿವ್‌ ಮೆಡಿಸಿನ್‌ ನಿಯತಕಾಲಿಕದ ಓರ್ವ ಸಂಪಾದಕ ಮತ್ತು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಓರ್ವ ಔಷಧ ಪ್ರಾಧ್ಯಾಪಕನಾಗಿರುವ ವ್ಯಾಲೇಸ್‌ ಸ್ಯಾಂಪ್ಸನ್‌ ಈ ಕುರಿತಾಗಿ ಬರೆಯುತ್ತಾ, CAM ಎಂಬುದು "ಅಸಂಬದ್ಧವಾದುದರ ಹಬ್ಬಿಸುವಿಕೆಯಾಗಿದೆ" ಮತ್ತು ಕಪಟ ವೈದ್ಯ , ಸಂಶಯಾಸ್ಪದ ಹಾಗೂ ಅಸಂಭಾವ್ಯ ಎಂಬುದಕ್ಕೆ ಬದಲಿಯಾಗಿ ಪರ್ಯಾಯ ಮತ್ತು ಪೂರಕ ಎಂಬ ಪರಿಭಾಷೆಗಳು ಬಳಸಲ್ಪಟ್ಟಿವೆ ಎಂಬ ಉದಾಹರಣೆಯನ್ನು ಇದು ಆಧರಿಸಿದೆ ಎಂದು ಹೇಳುತ್ತಾನೆ ಹಾಗೂ ಆಧ್ಯಂತವಾಗಿರುವ ಕಾರಣ ಮತ್ತು ಪ್ರಯೋಗವನ್ನು ಹೊಂದಿರದ ಅಸಮಂಜಸತೆಯನ್ನು CAM ಸಹಿಸುವುದರ ಕುರಿತಾಗಿ ತನ್ನ ಕಳವಳಗಳನ್ನು ವ್ಯಕ್ತಪಡಿಸುತ್ತಾನೆ.[೩೮]

ಜನಪ್ರಿಯ ಪತ್ರಿಕಾರಂಗ

ದಿ ವಾಷಿಂಗ್ಟನ್‌ ಪೋಸ್ಟ್‌ ಈ ಕುರಿತಾಗಿ ವರದಿ ಮಾಡುತ್ತಾ, ಸಾಂಪ್ರದಾಯಿಕವಾಗಿ ತರಬೇತಿ ಪಡೆದ ವೈದ್ಯರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಸುಸಂಯೋಜನಾತ್ಮಕ ಔಷಧದ ಬಳಕೆಯನ್ನು ಮಾಡುತ್ತಿದ್ದು, "ಈ ಸಾಂಪ್ರದಾಯಿಕ ವೈದ್ಯಕೀಯ ಪಾಲನೆಯು ಸೂಜಿಚಿಕಿತ್ಸೆ, ರೇಕಿ ಮತ್ತು ಗಿಡಮೂಲಿಕೆಗಳ ಪರಿಹಾರಗಳಂಥ ಕಾರ್ಯತಂತ್ರಗಳನ್ನು ಸಂಘಟಿಸುತ್ತದೆ" ಎಂದು ತಿಳಿಸುತ್ತದೆ.[೩೯] ಆಸ್ಟ್ರೇಲಿಯಾದ ಟಿಮ್‌ ಮಿನ್‌ಚಿನ್‌ ಎಂಬ ಹಾಸ್ಯ ಕಲಾವಿದ "ಸ್ಟಾರ್ಮ್‌" ಎಂಬ ಶೀರ್ಷಿಕೆಯನ್ನು ಹೊಂದಿರುವ, ಒಂಬತ್ತು ನಿಮಿಷ ಅವಧಿಯ ತನ್ನ ಬೀಟ್‌ ಕವಿತೆಯಲ್ಲಿ ಈ ಕುರಿತು ಉಲ್ಲೇಖಿಸುತ್ತಾ, "ಪರ್ಯಾಯ ಔಷಧ ಎಂಬುದು ಒಂದೋ ಕೆಲಸ ಮಾಡುತ್ತದೆ ಎಂಬುದು ಸಾಬೀತಾಗಿರದ, ಅಥವಾ ಕೆಲಸ ಮಾಡಬಾರದು ಎಂಬುದು ಸಾಬೀತಾಗಿರುವ ವಸ್ತುವಾಗಿದೆ" ಎಂದು ಹೇಳುತ್ತಾನೆ, ಮತ್ತು ನಂತರದಲ್ಲಿ ವ್ಯಂಗ್ಯವಾಡುತ್ತಾ, "ಕೆಲಸ ಮಾಡುತ್ತದೆ ಎಂಬುದಾಗಿ ಪ್ರಮಾಣೀಕರಿಸಲ್ಪಟ್ಟ 'ಪರ್ಯಾಯ ಔಷಧ'ವನ್ನು ಅವರು ಏನೆಂದು ಕರೆಯುತ್ತಾರೆಂದು ನಿಮಗೆ ಗೊತ್ತೇ? ಔಷಧ ಎಂದು ಕರೆಯುತ್ತಾರೆ" ಎಂದು ನುಡಿಯುತ್ತಾನೆ.[೪೦]

ವರ್ಗೀಕರಣಗಳು

ಪೂರಕ ಮತ್ತು ಪರ್ಯಾಯ ಔಷಧದ ಶಾಖೆಗಳಿಗಾಗಿ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ವರ್ಗೀಕರಣ ಪದ್ಧತಿಗಳ ಪೈಕಿ ಒಂದನ್ನು NCCAM ಅಭಿವೃದ್ಧಿಪಡಿಸಿದೆ.[೧೩][೧೯] ಒಂದಷ್ಟು ಅತಿಕ್ರಮಣವನ್ನು ಹೊಂದಿರುವ ಐದು ಪ್ರಮುಖ ಗುಂಪುಗಳಾಗಿ ಪೂರಕ ಮತ್ತು ಪರ್ಯಾಯ ಚಿಕಿತ್ಸಾ ಕ್ರಮಗಳನ್ನು ಇದು ವರ್ಗೀಕರಿಸುತ್ತದೆ.[೧೩]

  1. ಸಮಗ್ರ ವೈದ್ಯಕೀಯ ಪದ್ಧತಿಗಳು: ಇತರ ಗುಂಪುಗಳ ಪೈಕಿ ಒಂದಕ್ಕಿಂತ ಹೆಚ್ಚನ್ನು ಇವು ಅಡ್ಡಹಾಯುತ್ತವೆ; ಉದಾಹರಣೆಗಳಲ್ಲಿ ಚೀನಿಯರ ಸಾಂಪ್ರದಾಯಿಕ ಔಷಧ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ಮತ್ತು ಆಯುರ್ವೇದ ಸೇರಿವೆ.
  2. ಮನಸ್ಸು-ದೇಹದ ಔಷಧ: ಆರೋಗ್ಯದೆಡೆಗೆ ಒಂದು ಸಮಗ್ರತಾ ದೃಷ್ಟಿಯ ವಿಧಾನವನ್ನು ಇದು ಪರಿಗಣಿಸುತ್ತದೆ; ಮನಸ್ಸು, ದೇಹ, ಮತ್ತು ಚೇತನದ ನಡುವಿನ ಪರಸ್ಪರ ಸಂಬಂಧವನ್ನು ಈ ಸಮಗ್ರತಾ ದೃಷ್ಟಿಯ ವಿಧಾನವು ಪರಿಶೋಧಿಸುತ್ತದೆ. "ದೈಹಿಕ ಚಟುವಟಿಕೆಗಳು ಮತ್ತು ಕುರುಹುಗಳ" ಮೇಲೆ ಮನಸ್ಸು ಪರಿಣಾಮ ಬೀರಬಲ್ಲದು ಎಂಬ ಆಧಾರವಾಕ್ಯದ ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
  3. ಜೀವವಿಜ್ಞಾನ ರೀತ್ಯಾ ಆಧರಿತ ಚಿಕಿತ್ಸಾ ಪರಿಪಾಠಗಳು: ಪ್ರಕೃತಿಯಲ್ಲಿ ಕಂಡುಬರುವ ಗಿಡಮೂಲಿಕೆಗಳು, ಆಹಾರಗಳು, ಜೀವಸತ್ವಗಳು, ಮತ್ತು ಇತರ ಸ್ವಾಭಾವಿಕ ವಸ್ತುಗಳಂಥ ವಸ್ತುಗಳನ್ನು ಇವು ಬಳಸುತ್ತವೆ.
  4. ಕುಶಲತೆಯಿಂದ ಬಳಸುವ ಮತ್ತು ದೇಹ-ಆಧರಿತ ಚಿಕಿತ್ಸಾ ಪರಿಪಾಠಗಳು: ಬೆನ್ನೆಲುಬು ನೀವಿಕೆಯ ಮತ್ತು ಮೂಳೆ ವೈದ್ಯಪದ್ಧತಿಯ ಕೈಚಳಕದಲ್ಲಿ ಮಾಡುವಂತೆ ದೇಹದ ಭಾಗಗಳ ಕೈಚಳಕ ಅಥವಾ ಚಲನೆಯನ್ನು ಇವು ಒಳಗೊಳ್ಳುತ್ತವೆ.
  5. ಶಕ್ತಿ ಔಷಧ: ಶಕ್ತಿ ಕ್ಷೇತ್ರಗಳು ಎಂಬುದಾಗಿ ಭಾವಿಸಲಾಗಿರುವ ಮತ್ತು ಹಾಗೆಂದು ಪ್ರಯೋಗದಿಂದ ರುಜುವಾತು ಪಡಿಸಬಹುದಾದ ಕ್ಷೇತ್ರಗಳೊಂದಿಗೆ ವ್ಯವಹರಿಸುವ ಒಂದು ವಲಯ ಇದಾಗಿದೆ:
  • ತೋರಿಸಿಕೊಳ್ಳುವಂತೆ ದೇಹವನ್ನು ಸುತ್ತುವರಿಯುವ ಮತ್ತು ತೂರಿಕೊಳ್ಳುವ ಶಕ್ತಿ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಉದ್ದೇಶವನ್ನು ಜೈವಿಕ ಕ್ಷೇತ್ರದ ಚಿಕಿತ್ಸಾ ಕ್ರಮಗಳು ಹೊಂದಿರುತ್ತವೆ. ಯಾವ ಶಕ್ತಿ ಕ್ಷೇತ್ರಗಳ ಮೇಲೆ ಈ ಚಿಕಿತ್ಸಾ ಕ್ರಮಗಳು ಸಾಧಾರಗೊಳಿಸಲ್ಪಟ್ಟಿವೆಯೋ ಹಾಗೆ ಭಾವಿಸಲಾದ ಶಕ್ತಿ ಕ್ಷೇತ್ರಗಳ ಅಸ್ತಿತ್ವವನ್ನು ಬೆಂಬಲಿಸುವ ಯಾವುದೇ ಅನುಭವಾತ್ಮಕ ಕುರುಹು ಕಂಡುಬಂದಿಲ್ಲ.
  • ಸ್ಪಂದಿಸಲ್ಪಟ್ಟ ಕ್ಷೇತ್ರಗಳು, ಪರ್ಯಾಯ-ಪ್ರವಾಹದ ಅಥವಾ ಒಮ್ಮುಖ-ಪ್ರವಾಹದ ಕ್ಷೇತ್ರಗಳಂಥ ಪ್ರಯೋಗದಿಂದ ರುಜುವಾತು ಪಡಿಸಬಹುದಾದ ವಿದ್ಯುತ್ಕಾಂತೀಯ ಕ್ಷೇತ್ರಗಳನ್ನು ಜೈವಿಕ-ವಿದ್ಯುತ್ಕಾಂತೀಯ-ಆಧರಿತ ಚಿಕಿತ್ಸಾ ಕ್ರಮಗಳು ಒಂದು ಅಸಾಂಪ್ರದಾಯಿಕ ವಿಧಾನದಲ್ಲಿ ಬಳಸಿಕೊಳ್ಳುತ್ತವೆ.

ಬಳಕೆ

ಪೂರಕ ಮತ್ತು ಪರ್ಯಾಯ ಔಷಧವನ್ನು ಬಳಸಿದ ವಯೋಮಾನ ಹೊಂದಾಣಿಕೆ ಮಾಡಿದ ವಯಸ್ಕರ ಶೇಕಡಾವಾರು ಪ್ರಮಾಣ: ಅಮೆರಿಕಾ ಸಂಯುಕ್ತ ಸಂಸ್ಥಾನಗಳು, 2002[೪೧]

ಚಿಕಿತ್ಸೆಗಾಗಿ ಅಥವಾ ಆರೋಗ್ಯ-ವರ್ಧಿಸುವ ಕ್ರಮಗಳಿಗಾಗಿ ಪರ್ಯಾಯ ವಿಧಾನಗಳೆಡೆಗೆ ತಿರುಗುವ ಸಂದರ್ಭ ಬಂದಾಗ, ರೋಗನಿರ್ಣಯ ಮತ್ತು ಮೂಲಭೂತ ಮಾಹಿತಿಗೆ ಸಂಬಂಧಿಸಿದಂತೆ ಅನೇಕ ಜನರು ಮುಖ್ಯವಾಹಿನಿ ಔಷಧವನ್ನು ಬಳಸಿಕೊಳ್ಳುತ್ತಾರೆ. ಪರ್ಯಾಯ ವಿಧಾನಗಳನ್ನು ಅನೇಕವೇಳೆ ಸಾಂಪ್ರದಾಯಿಕ ಔಷಧದ ಜೊತೆಗೂಡಿಸಿ ಬಳಸಲಾಗುತ್ತದೆ ಎಂಬ ಅಂಶವನ್ನು ಅಧ್ಯಯನಗಳು ಸೂಚಿಸುತ್ತವೆ.[೪೧] NCCAM ಇದನ್ನು ಸುಸಂಯೋಜನಾತ್ಮಕ (ಅಥವಾ ಸಂಯೋಜಿತ) ಔಷಧ ಎಂಬುದಾಗಿ ಉಲ್ಲೇಖಿಸಿದೆ; ಏಕೆಂದರೆ, ಇದು "ಸಾಂಪ್ರದಾಯಿಕ ಔಷಧ ಮತ್ತು CAMಗೆ ಸೇರಿದ ಚಿಕಿತ್ಸೆಗಳನ್ನು ಸಂಯೋಜಿಸುತ್ತದೆ ಮತ್ತು ಈ ಕಾರಣದಿಂದಾಗಿಯೇ ಒಂದಷ್ಟು ಉನ್ನತ-ಗುಣಮಟ್ಟದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಕುರುಹು ಅಲ್ಲಿ ಕಂಡುಬರುತ್ತದೆ."[೧೩] ಸುಸಂಯೋಜನಾತ್ಮಕ ಔಷಧದ ಓರ್ವ ಅಗ್ರಗಣ್ಯ ಪ್ರತಿಪಾದಕನಾದ ಆಂಡ್ರ್ಯೂ T. ವೇಲ್‌ M.D.ಯ ಅನುಸಾರ ಸುಸಂಯೋಜನಾತ್ಮಕ ಔಷಧದ ತತ್ತ್ವಗಳಲ್ಲಿ ಇವೆಲ್ಲವೂ ಸೇರಿವೆ: ಸಾಂಪ್ರದಾಯಿಕ ಮತ್ತು CAM ವಿಧಾನಗಳ ಯಥೋಚಿತ ಬಳಕೆ; ರೋಗಿಯ ಪಾಲ್ಗೊಳ್ಳುವಿಕೆ; ಆರೋಗ್ಯದ ವರ್ಧನೆ ಮತ್ತು ಕಾಯಿಲೆಯ ಚಿಕಿತ್ಸೆಯ ಮುಂದುವರಿಕೆ; ಮತ್ತು ಸ್ವಾಭಾವಿಕವಾದ, ಕನಿಷ್ಟವಾಗಿ-ಆಕ್ರಮಣಶೀಲವಾದ ವಿಧಾನಗಳಿಗೆ ಸಂಬಂಧಿಸಿದಂತೆ ಇರುವ ಒಂದು ಆದ್ಯತೆ.[೪೨]

1997ರ ಸಮೀಕ್ಷೆಯೊಂದರಲ್ಲಿ ಕಂಡುಬಂದ ಪ್ರಕಾರ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಮೀಕ್ಷೆಗೆ ಪ್ರತಿಕ್ರಿಯಿಸಿದವರ ಪೈಕಿ 13.7%ನಷ್ಟು ಮಂದಿ ಸಾಂಪ್ರದಾಯಿಕ ವೈದ್ಯಪದ್ಧತಿಯ ಓರ್ವ ವೈದ್ಯ ಹಾಗೂ ಪರ್ಯಾಯ ಔಷಧ ಪದ್ಧತಿಯ ಓರ್ವ ವೈದ್ಯ ಈ ಇಬ್ಬರಿಂದಲೂ ಸೇವೆಗಳನ್ನು ಬಯಸಿದ್ದರು. ಇದೇ ಸಮೀಕ್ಷೆಯಲ್ಲಿ ಕಂಡುಬಂದಂತೆ, ಪರ್ಯಾಯ ಔಷಧ ಪದ್ಧತಿಯ ಓರ್ವ ವೈದ್ಯನಿಂದ ಸೇವೆಗಳನ್ನು ಬಯಸಿದ್ದ 96%ನಷ್ಟು ಪ್ರತಿಕ್ರಿಯಾಶೀಲರು, ಕಳೆದ 12 ತಿಂಗಳುಗಳ ಅವಧಿಯಲ್ಲಿ ಸಾಂಪ್ರದಾಯಿಕ ವೈದ್ಯಪದ್ಧತಿಯ ಓರ್ವ ವೈದ್ಯನ ಸೇವೆಗಳನ್ನೂ ಬಯಸಿದ್ದರು. ಸಾಂಪ್ರದಾಯಿಕ ವೈದ್ಯಪದ್ಧತಿಯ ವೈದ್ಯರೊಂದಿಗೆ ಕೇವಲ 38.5%ನಷ್ಟು ರೋಗಿಗಳು ತಾವು ತೆಗೆದುಕೊಳ್ಳುತ್ತಿದ್ದ ಪರ್ಯಾಯ ಚಿಕಿತ್ಸಾ ಕ್ರಮಗಳ ಕುರಿತಾಗಿ ಚರ್ಚಿಸುತ್ತಿದ್ದುದರಿಂದ, ತಮ್ಮ ರೋಗಿಗಳು ಪರ್ಯಾಯ ವೈದ್ಯಕೀಯ ಚಿಕಿತ್ಸೆಗಳನ್ನು ಬಳಸುತ್ತಿರುವುದು ಸದರಿ ವೈದ್ಯರಿಗೆ ಅನೇಕವೇಳೆ ಅರಿವಿರಲಿಲ್ಲ.[೪೩]

ಎಕ್ಸೆಟರ್ ವಿಶ್ವವಿದ್ಯಾಲಯದಲ್ಲಿ ಪೂರಕ ಔಷಧದ ಪ್ರಾಧ್ಯಾಪಕನಾದ ಎಡ್‌ಜರ್ಡ್‌ ಅರ್ನ್‌ಸ್ಟ್‌ ಎಂಬಾತ ಆಸ್ಟ್ರೇಲಿಯಾದ ವೈದ್ಯಕೀಯ ನಿಯತಕಾಲಿಕದಲ್ಲಿ ಬರೆಯುತ್ತಾ, "ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಸಾರ್ವತ್ರಿಕ ಜನಸಂಖ್ಯೆಯ ಪೈಕಿ ಸುಮಾರು ಅರ್ಧದಷ್ಟು ಭಾಗದ ಜನರು ಪೂರಕ ಮತ್ತು ಪರ್ಯಾಯ ಔಷಧವನ್ನು (CAM) ಬಳಸುತ್ತಾರೆ " ಎಂದು ತಿಳಿಸಿದ್ದಾನೆ.[೪೪] ಅಮೆರಿಕಾ ಸಂಯುಕ್ತ ಸಂಸ್ಥಾನದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಹೆಲ್ತ್‌‌ನ ಭಾಗವಾದ ನ್ಯಾಷನಲ್‌ ಸೆಂಟರ್‌ ಫಾರ್‌ ಕಾಂಪ್ಲಿಮೆಂಟರಿ ಅಂಡ್‌ ಆಲ್ಟರ್‌ನೇಟಿವ್‌ ಮೆಡಿಸಿನ್‌ ವತಿಯಿಂದ 2004ರ ಮೇ ತಿಂಗಳಲ್ಲಿ ಬಿಡುಗಡೆಯಾದ ಸಮೀಕ್ಷಾ ಫಲಿತಾಂಶಗಳು ಕಂಡುಕೊಂಡ ಪ್ರಕಾರ, 2002ರಲ್ಲಿ ದೇಶದಲ್ಲಿನ ವಯಸ್ಕರ ಪೈಕಿ 62.1%ನಷ್ಟು ಜನರು ಕಳೆದ 12 ತಿಂಗಳುಗಳ ಅವಧಿಯಲ್ಲಿ CAMನ ಯಾವುದಾದರೊಂದು ಸ್ವರೂಪವನ್ನು ಬಳಸಿದ್ದರು ಮತ್ತು 75%ನಷ್ಟು ಮಂದಿ ಜೀವಿತಾವಧಿಯಾದ್ಯಂತ ಬಳಸಿದ್ದರು (ಆದರೂ, ಒಂದು ವೇಳೆ ನಿರ್ದಿಷ್ಟವಾಗಿ ಆರೋಗ್ಯ ಕಾರಣಗಳಿಗಾಗಿರುವ ಪ್ರಾರ್ಥನೆ ಯನ್ನು ಇದರಿಂದ ಹೊರತುಪಡಿಸಿದರೆ ಈ ಅಂಕಿ-ಅಂಶಗಳು ಕ್ರಮವಾಗಿ 36.0% ಮತ್ತು 50%ಗೆ ಕುಸಿಯುತ್ತವೆ); ಈ ಅಧ್ಯಯನದಲ್ಲಿ ಯೋಗ, ಧ್ಯಾನ, ಗಿಡಮೂಲಿಕೆಗಳ ಚಿಕಿತ್ಸೆಗಳು ಮತ್ತು CAM ಆಗಿ ಅಟ್ಕಿನ್ಸ್‌ ಪಥ್ಯಾಹಾರಗಳು ಸೇರಿಕೊಂಡಿದ್ದವು.[೪೧][೪೫] 40%ನಷ್ಟಿರುವ ಇದೇ ರೀತಿಯ ಅಂಕಿ-ಅಂಶವೊಂದನ್ನು ಮತ್ತೊಂದು ಅಧ್ಯಯನವು ಸೂಚಿಸುತ್ತದೆ.[೪೬]

1998ರಲ್ಲಿ BBC ನಡೆಸಿದ 1209 ವಯಸ್ಕರ ಒಂದು ಬ್ರಿಟಿಷ್‌ ದೂರವಾಣಿ ಸಮೀಕ್ಷೆಯು ತೋರಿಸುವ ಪ್ರಕಾರ, ಬ್ರಿಟನ್‌ನಲ್ಲಿನ ವಯಸ್ಕರ ಪೈಕಿ ಸುಮಾರು 20%ನಷ್ಟು ಮಂದಿ ಕಳೆದ 12 ತಿಂಗಳುಗಳ ಅವಧಿಯಲ್ಲಿ ಪರ್ಯಾಯ ಔಷಧವನ್ನು ಬಳಸಿದ್ದರು.[೪೭] ಪರ್ಯಾಯ ಔಷಧದ ಕುರಿತಾಗಿ ಫೌಂಡೇಷನ್‌ ಫಾರ್‌ ಇಂಟಿಗ್ರೇಟೆಡ್‌ ಹೆಲ್ತ್‌‌ ವತಿಯಿಂದ ಪ್ರಕಟಿಸಲ್ಪಟ್ಟಿದ್ದ ಎರಡು ಕೈಪಿಡಿಗಳನ್ನು ಹಿಂತೆಗೆದುಕೊಳ್ಳಬೇಕು ಎಂಬುದಾಗಿ ರಾಜಕುಮಾರ ಚಾರ್ಲ್ಸ್‌‌‌ನನ್ನು ಬಹಿರಂಗವಾಗಿ ಪ್ರಾರ್ಥಿಸುವ ಮೂಲಕ, ಈ ವಿಷಯದ ಕುರಿತಾಗಿಯೂ ಅರ್ನ್‌ಸ್ಟ್‌ ರಾಜಕೀಯವಾಗಿ ಸಕ್ರಿಯನಾಗಿದ್ದಾನೆ; ಇದಕ್ಕೆ ಅವನು ನೀಡಿರುವ ಆಧಾರಗಳು ಹೀಗಿವೆ: "ಪರ್ಯಾಯ ಔಷಧದ ಭಾವಿಸಲಾದ ಪ್ರಯೋಜನಗಳಿಗೆ ಸಂಬಂಧಿಸಿದ, ಹಾದಿತಪ್ಪಿಸುವ ಮತ್ತು ನಿಖರವಾಗಿಲ್ಲದ ಹಲವಾರು ಸಮರ್ಥನೆಗಳನ್ನು ಆ ಎರಡೂ ಕೈಪಿಡಿಗಳು ಒಳಗೊಂಡಿವೆ" ಮತ್ತು "ಪರಿಣಾಮಕಾರಿಯಲ್ಲದ ಮತ್ತು ಕೆಲವೊಮ್ಮೆ ಅಪಾಯಕಾರಿಯಾಗಿರುವ ಪರ್ಯಾಯ ಚಿಕಿತ್ಸೆಗಳನ್ನು ಉತ್ತೇಜಿಸುವುದರಿಂದ ರಾಷ್ಟ್ರಕ್ಕೆ ಸೇವೆ ಸಂದಂತೆ ಆಗುವುದಿಲ್ಲ."[೪೮] ಒಟ್ಟಾರೆಯಾಗಿ ಹೇಳುವುದಾದರೆ, CAMನ್ನು ವೈಜ್ಞಾನಿಕ ಪರೀಕ್ಷೆ ಒಳಪಡಿಸಬಹುದು ಎಂಬುದನ್ನು ಮತ್ತು ಒಳಪಡಿಸಲೇಬೇಕು ಎಂಬುದನ್ನು ಅವನು ನಂಬುತ್ತಾನೆ.[೨೮][೩೨][೪೯]

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪರ್ಯಾಯ ಔಷಧದ ಬಳಕೆಯು ಹೆಚ್ಚುತ್ತಿರುವಂತೆ ಕಾಣಿಸುತ್ತದೆ. 1990ರಲ್ಲಿ 33.8%ನಷ್ಟಿದ್ದ ಪರ್ಯಾಯ ಔಷಧದ ಬಳಕೆಯು 1997ರ ವೇಳೆಗೆ 42.1%ನಷ್ಟು ಪ್ರಮಾಣಕ್ಕೆ ಏರಿತ್ತು ಎಂಬುದಾಗಿ 1998ರ ಅಧ್ಯಯನವೊಂದು ತೋರಿಸಿದೆ.[೪೩] ಯುನೈಟೆಡ್‌ ಕಿಂಗ್‌ಡಂನಲ್ಲಿ, ಶ್ರೀಮಂತ ಶಾಸನಸಭೆಯಿಂದ (ಮೇಲ್ಮನೆಯಿಂದ) ಆದೇಶಿಸಲ್ಪಟ್ಟ 2000ರ ವರದಿಯೊಂದು ಹೀಗೆ ಸೂಚಿಸಿತು: "...ಯುನೈಟೆಡ್‌ ಕಿಂಗ್‌ಡಂನಲ್ಲಿನ CAM ಬಳಕೆಯು ಹೆಚ್ಚಿನದ್ದಾಗಿದೆ ಮತ್ತು ಹೆಚ್ಚುತ್ತಲೇ ಇದೆ ಎಂಬ ಅಭಿಪ್ರಾಯವನ್ನು ಬೆಂಬಲಿಸುವುದಕ್ಕಿರುವ ದತ್ತಾಂಶದ ಪ್ರಮಾಣವು ಸೀಮಿತವಾಗಿರುವಂತೆ ತೋರುತ್ತದೆ."[೫೦] ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಸಂಪನ್ಮೂಲಗಳ ಕೊರತೆ ಮತ್ತು ಬಡತನದಿಂದಾಗಿ ಅತ್ಯಾವಶ್ಯಕ ಔಷಧಗಳೆಡೆಗಿನ ಸಂಪರ್ಕವು ತೀವ್ರವಾಗಿ ನಿರ್ಬಂಧಿಸಲ್ಪಟ್ಟಿದೆ. ಪರ್ಯಾಯ ಪರಿಹಾರಗಳನ್ನು ಅನೇಕವೇಳೆ ನಿಕಟವಾಗಿ ಹೋಲುವ ಅಥವಾ ಅವುಗಳಿಗೆ ಸಂಬಂಧಿಸಿದ ಆಧಾರವನ್ನು ರೂಪಿಸುವ ಸಾಂಪ್ರದಾಯಿಕ ಪರಿಹಾರಗಳು, ಪ್ರಾಥಮಿಕ ಆರೋಗ್ಯ ಪಾಲನೆಯನ್ನು ಒಳಗೊಳ್ಳಬಹುದು ಅಥವಾ ಆರೋಗ್ಯ ಪಾಲನಾ ಪದ್ಧತಿಯೊಳಗೆ ಸಂಯೋಜಿಸಲ್ಪಡಬಹುದು. ಆಫ್ರಿಕಾದಲ್ಲಿ ಪ್ರಾಥಮಿಕ ಆರೋಗ್ಯ ಪಾಲನಾ ವಲಯದಲ್ಲಿನ ಸಾಂಪ್ರದಾಯಿಕ ಔಷಧದ ಪಾಲು 80%ನಷ್ಟಿದ್ದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಟ್ಟಾರೆಯಾಗಿ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕೂ ಹೆಚ್ಚಿನ ಜನರು ಅತ್ಯಾವಶ್ಯಕ ಔಷಧಗಳೆಡಗಿನ ಸಂಪರ್ಕದ ಕೊರತೆಯನ್ನು ಎದುರಿಸುತ್ತಿದ್ದಾರೆ.[೫೧]

ಔಷಧ ಚಿಕಿತ್ಸೆಯ ಅಗತ್ಯವಿರುವ ಪ್ರಮುಖವಾದ ಮತ್ತು ಗೌಣವಾದ ರೋಗಸ್ಥಿತಿಗಳ ಒಂದು ವ್ಯಾಪಕ ಶ್ರೇಣಿಯನ್ನು ಉಪಚರಿಸುವಲ್ಲಿ ಹಲವಾರು ಪರ್ಯಾಯ ಚಿಕಿತ್ಸಾ ವಿಧಾನಗಳು ಪರಿಣಾಮಕಾರಿಯಾಗಿವೆ ಎಂಬುದಾಗಿ ಪರ್ಯಾಯ ಔಷಧದ ಸಮರ್ಥಕರು ಪ್ರತಿಪಾದಿಸುತ್ತಾರೆ; ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಪ್ರಕಟಿಸಲ್ಪಟ್ಟ ಸಂಶೋಧನೆಯು (2003ರಲ್ಲಿ ಬಂದ ಮೈಕಲ್‌ಸೇನ್‌,[೫೨] 2003ರಲ್ಲಿ ಬಂದ ಗೋನ್ಸಲ್‌ಕೊರಾಲೆ,[೫೩] ಮತ್ತು 2003ರಲ್ಲಿ ಬಂದ ಬರ್ಗಾನಂಥವು)[೫೪] ನಿರ್ದಿಷ್ಟ ಪರ್ಯಾಯ ಚಿಕಿತ್ಸೆಗಳ ಪರಿಣಾಮಕಾರಿತ್ವವನ್ನು ಸಾಬೀತು ಮಾಡುತ್ತದೆ ಎಂಬುದಾಗಿ ಅವರು ಸಮರ್ಥಿಸುತ್ತಾರೆ. ನ್ಯಾಷನಲ್‌ ಲೈಬ್ರರಿ ಆಫ್‌ ಮೆಡಿಸಿನ್‌ ದತ್ತಾಂಶ ಸಂಗ್ರಹದಲ್ಲಿರುವ, 1966ರಿಂದ ಮೆಡ್‌ಲೈನ್‌-ಮಾನ್ಯತೆ ಪಡೆದ ನಿಯತಕಾಲಿಕಗಳಲ್ಲಿ ಪ್ರಕಟಿಸಲ್ಪಡುತ್ತಿರುವ, ಪರ್ಯಾಯ ಔಷಧವಾಗಿ ವರ್ಗೀಕರಿಸಲ್ಪಟ್ಟ 370,000ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳನ್ನು ಪಬ್‌ಮೆಡ್‌ ಶೋಧನೆಯೊಂದು ಹೊರಗೆಡವಿತು ಎಂಬುದಾಗಿ ಅವರು ಪ್ರತಿಪಾದಿಸುತ್ತಾರೆ. ಇದನ್ನೂ ನೋಡಿ: ಕ್ಲೀಜ್‌ನೆನ್‌ 1991,[೫೫] ಮತ್ತು ಲಿಂಡೆ 1997.[೫೬]

ಉಪಶಾಮಕ ಆರೈಕೆಯಲ್ಲಿ ಅಥವಾ ರೋಗಿಗಳಲ್ಲಿ ಕಂಡುಬರುವ ದೀರ್ಘಕಾಲದ ನೋವನ್ನು ನಿಭಾಯಿಸಲು ಪ್ರಯತ್ನ ಪಡುತ್ತಿರುವ ವೃತ್ತಿಗಾರರಿಂದ ಪೂರಕ ಚಿಕಿತ್ಸಾ ಕ್ರಮಗಳು ಅನೇಕವೇಳೆ ಬಳಸಲ್ಪಡುತ್ತಿವೆ. ಔಷಧ ವೈದ್ಯಶಾಸ್ತ್ರದ ಇತರ ಕ್ಷೇತ್ರಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚಾಗಿ ಉಪಶಾಮಕ ಆರೈಕೆಯಲ್ಲಿ ಬಳಸಲಾಗುವ ಅಂತರ ಶಾಸ್ತ್ರೀಯ ವಿಧಾನದಲ್ಲಿ ಪೂರಕ ಔಷಧವು ಹೆಚ್ಚು ಸ್ವೀಕಾರಾರ್ಹವಾಗಿ ಪರಿಗಣಿಸಲ್ಪಟ್ಟಿದೆ. "ಮರಣಕಾಲೀನರಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಉಪಶಾಮಕ ಆರೈಕೆಯು ಪಾಲನೆಯ ವಿಷಯದಲ್ಲಿ ತಾನು ಪಡೆದ ಆರಂಭಿಕ ಅನುಭವಗಳ ಹಿನ್ನೆಲೆಯಲ್ಲಿ, ಜೀವನದ ಅಂತ್ಯಭಾಗದಲ್ಲಿ ಗುಣಮಟ್ಟದ ಆರೈಕೆಯ ಯಾವುದೇ ವಿನ್ಯಾಸ ಮತ್ತು ವಿತರಣೆಯ ಅಂತರಂಗದಲ್ಲಿ ರೋಗಿಯ ಮೌಲ್ಯಗಳು ಮತ್ತು ಜೀವನಶೈಲಿಯ ಅಭ್ಯಾಸಗಳನ್ನು ಇರಿಸುವುದರ ಅವಶ್ಯಕತೆಯನ್ನು ಪರಿಗಣಿಸಿತು. ಒಂದು ವೇಳೆ ಪೂರಕ ಚಿಕಿತ್ಸಾ ಕ್ರಮಗಳನ್ನು ರೋಗಿಯು ಬಯಸಿದರೆ, ಮತ್ತು ಎಲ್ಲಿಯವರೆಗೆ ಇಂಥ ಚಿಕಿತ್ಸೆಗಳು ರೋಗಿಗೆ ಅಪಾಯವನ್ನುಂಟುಮಾಡದೆ ಹೆಚ್ಚುವರಿ ಬೆಂಬಲವನ್ನು ಒದಗಿಸುತ್ತಿದ್ದವೋ, ಅಲ್ಲಿಯವರೆಗೆ ಅವುಗಳನ್ನು ಸ್ವೀಕಾರಾರ್ಹವೆಂದು ಪರಿಗಣಿಸಲಾಗುತ್ತಿತ್ತು."[೫೭] "ನೋವಿನ ಮತ್ತು ಅದರ ಜೊತೆಗಿರುವ ಚಿತ್ತಸ್ಥಿತಿಯ ಶಾಂತಿಭಂಗವನ್ನು ತಗ್ಗಿಸಲೆಂದು ಹಾಗೂ ಜೀವನದ ಗುಣಮಟ್ಟವನ್ನು ಹೆಚ್ಚಿಸಲೆಂದು" ವಿನ್ಯಾಸಗೊಳಿಸಲಾದ ಮನಸ್ಸು-ದೇಹದ ಮಧ್ಯಸ್ಥಿಕೆಗಳನ್ನು ಪೂರಕ ಔಷಧದ ಔಷಧ-ವಿಜ್ಞಾನದ್ದಲ್ಲದ ಮಧ್ಯಸ್ಥಿಕೆಗಳು ಬಳಸಿಕೊಳ್ಳಬಲ್ಲವು.[೫೮]

ಪೂರಕ ಔಷಧ ಚಿಕಿತ್ಸೆಯ ಪರಿಪಾಠವನ್ನು ಅನುಸರಿಸುತ್ತಿರುವ ವೈದ್ಯರು, ಲಭ್ಯವಿರುವ ಪೂರಕ ಚಿಕಿತ್ಸಾ ಕ್ರಮಗಳಿಗೆ ಮೊರೆಹೋಗುವುದರ ಕುರಿತು ಸಾಮಾನ್ಯವಾಗಿ ಚರ್ಚಿಸುತ್ತಾರೆ ಮತ್ತು ರೋಗಿಗಳಿಗೆ ಸಲಹೆ ನೀಡುತ್ತಾರೆ. ಮನಸ್ಸು-ದೇಹದ ಪೂರಕ ಚಿಕಿತ್ಸಾ ಕ್ರಮಗಳು ಕೆಲವೊಂದು ಆರೋಗ್ಯ ಸ್ಥಿತಿಗತಿಗಳನ್ನು ಉಪಚರಿಸುವಲ್ಲಿ ಔಷಧಿ-ರಹಿತ ವಿಧಾನವೊಂದನ್ನು ಮುಂದುಮಾಡುವುದರಿಂದ, ರೋಗಿಗಳು ಅವುಗಳಲ್ಲಿ ಅನೇಕವೇಳೆ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ.[೫೯] ಅರಿವಿಗೆ ಸಂಬಂಧಿಸಿದ-ವರ್ತನೆಯ ಚಿಕಿತ್ಸೆಯಂಥ ಕೆಲವೊಂದು ಮನಸ್ಸು-ದೇಹದ ಕೌಶಲಗಳು ಹಿಂದೊಮ್ಮೆ ಪೂರಕ ಔಷಧವಾಗಿ ಪರಿಗಣಿಸಲ್ಪಟ್ಟಿದ್ದವಾದರೂ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಈಗ ಅವು ಸಾಂಪ್ರದಾಯಿಕ ಔಷಧ ವೈದ್ಯಶಾಸ್ತ್ರದ ಒಂದು ಭಾಗವಾಗಿವೆ.[೬೦] "ನೋವಿಗಾಗಿ ಬಳಸಲ್ಪಡುವ ಪೂರಕ ಔಷಧ ಚಿಕಿತ್ಸೆಗಳಲ್ಲಿ ಇವು ಸೇರಿವೆ: ಸೂಜಿಚಿಕಿತ್ಸೆ, ಕಡಿಮೆ-ಮಟ್ಟದ ಲೇಸರ್‌‌ ಚಿಕಿತ್ಸೆ, ಧ್ಯಾನ, ಸುಗಂಧ ಚಿಕಿತ್ಸೆ, ಚೀನಿಯರ ಔಷಧ, ನೃತ್ಯ ಚಿಕಿತ್ಸೆ, ಸಂಗೀತ ಚಿಕಿತ್ಸೆ, ಅಂಗಮರ್ದನ, ಮೂಲಿಕಾ ತತ್ತ್ವ, ಚಿಕಿತ್ಸಾ ತಂತ್ರದ ಸ್ಪರ್ಶ, ಯೋಗ, ಮೂಳೆ ವೈದ್ಯಪದ್ಧತಿ, ಬೆನ್ನೆಲುಬು ನೀವಿಕೆಯ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆ, ಮತ್ತು ಹೋಮಿಯೋಪತಿ."[೬೧]

UKಯಲ್ಲಿ ಪೂರಕ ಔಷಧವನ್ನು ವಿಶದೀಕರಿಸುವಾಗ ಶ್ರೀಮಂತ ಶಾಸನಸಭೆಯ ಆಯ್ದ ಸಮಿತಿಯು ನಿರ್ಣಯವೊಂದನ್ನು ಹೊರಡಿಸಿ, ಸಾಂಪ್ರದಾಯಿಕ ಔಷಧಕ್ಕೆ[೬೨] ಪೂರಕವಾಗುವಲ್ಲಿ ಈ ಮುಂದಿನ ಚಿಕಿತ್ಸಾ ಕ್ರಮಗಳು ಬಹುತೇಕ ಸಂದರ್ಭಗಳಲ್ಲಿ ಬಳಸಲ್ಪಟ್ಟಿದ್ದವು ಎಂದು ತಿಳಿಸಿತು: ಅಲೆಕ್ಸಾಂಡರ್‌ ಕೌಶಲ, ಸುಗಂಧದ್ರವ್ಯ ಚಿಕಿತ್ಸೆ, ಬ್ಯಾಕ್‌ ಮತ್ತು ಇತರ ಹೂವು ಪರಿಹಾರಗಳು, ಅಂಗಮರ್ದನವನ್ನು ಒಳಗೊಂಡಿರುವ ದೇಹ ಕೆಲಸದ ಚಿಕಿತ್ಸಾ ಕ್ರಮಗಳು, ಸಮಾಲೋಚಕ ಒತ್ತಡ ಚಿಕಿತ್ಸಾ ಕ್ರಮಗಳು, ಸಂಮೋಹನದ ಚಿಕಿತ್ಸೆ, ಧ್ಯಾನ, ಅನುವರ್ತನ ಸ್ಥಾನಮರ್ದನ, ಕರಾಂಗುಲಿ ಮರ್ದನ, ಮಹಾಋಷಿ ಆಯುರ್ವೇದೀಯ ಔಷಧ, ಪೌಷ್ಟಿಕತೆಗೆ ಸಂಬಂಧಿಸಿದ ಔಷಧ, ಮತ್ತು ಯೋಗ.

ಅಮೆರಿಕಾ ಸಂಯುಕ್ತ ಸಂಸ್ಥಾನ

ಇದರ ಥರದ ಒಂದು ಸಸ್ಯೋದ್ಯಾನವು ಲ್ಯಾಟಿನೋ ಸಮುದಾಯದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಸಂತರ ಪ್ರತಿಮೆಗಳು, ಪ್ರಾರ್ಥನೆಗಳೊಂದಿಗೆ ಅಲಂಕರಿಸಲ್ಪಟ್ಟ ಮೋಂಬತ್ತಿಗಳು, ಮತ್ತು ಇತರ ವಸ್ತುಗಳ ಜೊತೆಯಲ್ಲಿ ಜಾನಪದ ಔಷಧವನ್ನು ಮಾರಾಟ ಮಾಡುತ್ತದೆ.

18 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ US ವಯಸ್ಕರ ಕುರಿತಾಗಿ ನ್ಯಾಷನಲ್‌ ಸೆಂಟರ್‌ ಫಾರ್‌ ಹೆಲ್ತ್‌ ಸ್ಟಾಟಿಸ್ಟಿಕ್ಸ್‌ (CDC) ಮತ್ತು ನ್ಯಾಷನಲ್‌ ಸೆಂಟರ್‌ ಫಾರ್‌ ಕಾಂಪ್ಲಿಮೆಂಟರಿ ಅಂಡ್‌ ಆಲ್ಟರ್‌ನೇಟಿವ್‌ ಮೆಡಿಸಿನ್‌ ವತಿಯಿಂದ 2002ರಲ್ಲಿ ನಡೆಸಲ್ಪಟ್ಟ ಸಮೀಕ್ಷೆಯೊಂದು ಈ ಮುಂದಿನ ಅಂಶಗಳನ್ನು ಹೊರಗೆಡವಿತು:[೪೧]

  • 74.6%ನಷ್ಟು ಮಂದಿ ಯಾವುದಾದರೊಂದು ಸ್ವರೂಪದಲ್ಲಿ ಪೂರಕ ಮತ್ತು ಪರ್ಯಾಯ ಔಷಧವನ್ನು (CAM) ಬಳಸಿದ್ದರು.
  • 62.1%ನಷ್ಟು ಮಂದಿ ಮೊದಲ ಹನ್ನೆರಡು ತಿಂಗಳುಗಳೊಳಗಾಗಿ ಈ ಪರಿಪಾಠದಲ್ಲಿ ತೊಡಗಿಸಿಕೊಂಡಿದ್ದರು.
  • ನಿರ್ದಿಷ್ಟವಾಗಿ ಆರೋಗ್ಯ ಕಾರಣಗಳಿಗಾಗಿರುವ ಪ್ರಾರ್ಥನೆಯನ್ನು ಇದರಿಂದ ಹೊರತುಪಡಿಸಿದರೆ, ಈ ಅಂಕಿ-ಅಂಶಗಳು ಕ್ರಮವಾಗಿ 49.8% ಮತ್ತು 36.0%ಗೆ ಕುಸಿಯುತ್ತವೆ.
  • 45.2%ನಷ್ಟು ಮಂದಿ ಕಳೆದ ಹನ್ನೆರಡು ತಿಂಗಳುಗಳ ಅವಧಿಯಲ್ಲಿ ಆರೋಗ್ಯ ಕಾರಣಗಳಿಗಾಗಿ ಪ್ರಾರ್ಥನೆಯನ್ನು ಬಳಸಿಕೊಂಡಿದ್ದರು; ಇದು ತಮ್ಮದೇ ಆರೋಗ್ಯಕ್ಕಾಗಿ ಪ್ರಾರ್ಥಿಸುವ ರೂಪದಲ್ಲಿತ್ತು ಅಥವಾ ಇತರರು ಅವರಿಗಾಗಿ ಪ್ರಾರ್ಥಿಸುವ ರೂಪದಲ್ಲಿತ್ತು.
  • 54.9%ನಷ್ಟು ಮಂದಿ CAMನ್ನು ಸಾಂಪ್ರದಾಯಿಕ ಔಷಧದ ಜೊತೆಗೂಡಿಸಿ ಬಳಸಿದ್ದರು.
  • 14.8%ನಷ್ಟು ಮಂದಿ "ಓರ್ವ ಪರವಾನಗಿ ಪಡೆದ ಅಥವಾ ಪ್ರಮಾಣಿತ" ವೃತ್ತಿಗಾರನಿಂದ ಆರೈಕೆಯನ್ನು ಪಡೆಯಲು ಬಯಸಿದ್ದರು; "CAMನ್ನು ಬಳಸುವ ಬಹುಪಾಲು ವ್ಯಕ್ತಿಗಳು ಸ್ವತಃ ತಾವೇ ಉಪಚರಿಸಿಕೊಳ್ಳುವುದರೆಡೆಗೆ ಆದ್ಯತೆ ನೀಡುತ್ತಾರೆ" ಎಂಬುದನ್ನು ಇದು ಸೂಚಿಸುತ್ತದೆ.
  • ಸ್ನಾಯು-ಅಸ್ಥಿಪಂಜರದ ರೋಗಸ್ಥಿತಿಗಳನ್ನು, ಅಥವಾ ದೀರ್ಘಕಾಲದ ಅಥವಾ ಮರುಕಳಿಸುವ ನೋವಿಗೆ ಸಂಬಂಧಿಸಿದ ಇತರ ರೋಗಸ್ಥಿತಿಗಳನ್ನು ಉಪಚರಿಸಲು ಮತ್ತು/ಅಥವಾ ತಡೆಗಟ್ಟಲು ಬಹುಪಾಲು ಜನರು CAMನ್ನು ಬಳಸಿದ್ದರು.
  • "CAMನ್ನು ಬಳಸುವಲ್ಲಿನ ಸಂಭಾವ್ಯತೆಯು ಪುರುಷರಿಗಿಂತ ಮಹಿಳೆಯರಲ್ಲಿ ಜಾಸ್ತಿಯಿತ್ತು. ನಿರ್ದಿಷ್ಟವಾಗಿ ಆರೋಗ್ಯ ಕಾರಣಗಳಿಗಾಗಿರುವ ಪ್ರಾರ್ಥನೆಯೂ ಸೇರಿದಂತೆ ಮನಸ್ಸು-ದೇಹದ ಚಿಕಿತ್ಸಾ ಕ್ರಮಗಳ ಬಳಕೆಯಲ್ಲಿ ಅತಿದೊಡ್ಡ ಪ್ರಮಾಣದ ಲಿಂಗ ವೈಲಕ್ಷಣ್ಯವು ಅಥವಾ ಪರಿಮಾಣ ವ್ಯತ್ಯಾಸವು ಕಂಡುಬಂದಿದೆ."
  • "ನಿರ್ದಿಷ್ಟವಾಗಿ ಆರೋಗ್ಯ ಕಾರಣಗಳಿಗಾಗಿರುವ ಪ್ರಾರ್ಥನೆಯನ್ನು ಒಳಗೊಂಡಿದ್ದ ಚಿಕಿತ್ಸಾ ಕ್ರಮಗಳ ಗುಂಪುಗಳನ್ನು ಹೊರತುಪಡಿಸಿ, ಶಿಕ್ಷಣ ಮಟ್ಟಗಳು ಹೆಚ್ಚಾದಂತೆ CAMನ ಬಳಕೆಯೂ ಹೆಚ್ಚಾಗಿತ್ತು."
  • 2002ರಲ್ಲಿ USನಲ್ಲಿ ಬಳಸಲ್ಪಟ್ಟ ಅತ್ಯಂತ ಸಾಮಾನ್ಯ CAM ಚಿಕಿತ್ಸಾ ಕ್ರಮಗಳು ಹೀಗಿದ್ದವು: ಪ್ರಾರ್ಥನೆ (45.2%), ಮೂಲಿಕಾ ತತ್ತ್ವ (18.9%), ಉಸಿರಾಟದ ಧ್ಯಾನ (11.6%), ಧ್ಯಾನ (7.6%), ಬೆನ್ನೆಲುಬು ನೀವಿಕೆಯ ಔಷಧ (7.5%), ಯೋಗ (5.1%), ದೇಹ ಕೆಲಸ (5.0%), ಪಥ್ಯಾಹಾರ-ಆಧರಿತ ಚಿಕಿತ್ಸೆ (3.5%), ಮುಂದುವರಿಯುವ ವಿಹಾರ-ವಿಶ್ರಾಂತಿ (3.0%), ದೊಡ್ಡ-ಜೀವಸತ್ವ ಚಿಕಿತ್ಸೆ (2.8%) ಮತ್ತು ಮನೋಗೋಚರೀಕರಣ (2.1%)

2004ರಲ್ಲಿ ನಡೆಸಲಾದ ಸರಿಸುಮಾರು 1,400 U.S. ಆಸ್ಪತ್ರೆಗಳ ಒಂದು ಸಮೀಕ್ಷೆಯು ಕಂಡುಕೊಂಡಂತೆ, ನಾಲ್ಕರಲ್ಲಿ ಒಂದಕ್ಕಿಂತ ಹೆಚ್ಚು ಆಸ್ಪತ್ರೆಗಳು ಸೂಜಿಚಿಕಿತ್ಸೆ, ಹೋಮಿಯೋಪತಿ, ಮತ್ತು ಅಂಗಮರ್ದನ ಚಿಕಿತ್ಸೆಯಂಥ ಪರ್ಯಾಯ ಹಾಗೂ ಪೂರಕ ಚಿಕಿತ್ಸಾ ಕ್ರಮಗಳನ್ನು ನೀಡಿದ್ದವು.[೬೩]

ಅಮೆರಿಕನ್‌ ಹಾಸ್ಪಿಟಲ್‌ ಅಸೋಸಿಯೇಷನ್‌‌ನ ಒಂದು ಅಂಗಸಂಸ್ಥೆಯಾಗಿರುವ ಹೆಲ್ತ್‌ ಫೋರಂ 2008ರಲ್ಲಿ ಕೈಗೊಂಡ US ಆಸ್ಪತ್ರೆಗಳ ಒಂದು ಸಮೀಕ್ಷೆಯು ಕಂಡುಕೊಂಡಂತೆ, ಸಮೀಕ್ಷೆಗೆ ಪ್ರತಿಕ್ರಿಯಿಸಿದ ಆಸ್ಪತ್ರೆಗಳ ಪೈಕಿ 37 ಪ್ರತಿಶತಕ್ಕೂ ಹೆಚ್ಚಿನ ಆಸ್ಪತ್ರೆಗಳು ತಾವು ಒಂದು ಅಥವಾ ಒಂದಕ್ಕಿಂತ ಹೆಚ್ಚು ಪರ್ಯಾಯ ಔಷಧ ಚಿಕಿತ್ಸೆಗಳನ್ನು ನೀಡುವುದಾಗಿ ಸೂಚಿಸಿದ್ದವು; 2005ರಲ್ಲಿ ಈ ಬಗೆಯ ಚಿಕಿತ್ಸೆಗಳನ್ನು ನೀಡುತ್ತಿದ್ದ ಆಸ್ಪತ್ರೆಗಳ ಪ್ರಮಾಣ 26.5 ಪ್ರತಿಶತದಷ್ಟಿತ್ತು. ಮೇಲಾಗಿ, ದಕ್ಷಿಣದ ಅಟ್ಲಾಂಟಿಕ್‌ ಸಂಸ್ಥಾನಗಳಲ್ಲಿರುವ ಆಸ್ಪತ್ರೆಗಳು CAMನ್ನು ಒಳಗೊಂಡಿದ್ದರ ಸಂಭಾವ್ಯತೆ ಅತಿಹೆಚ್ಚಾಗಿತ್ತು; ಇದರ ನಂತರದ ಸ್ಥಾನಗಳನ್ನು ಪೂರ್ವ, ಉತ್ತರ, ಕೇಂದ್ರಭಾಗದ ಸಂಸ್ಥಾನಗಳು ಹಾಗೂ ಮಧ್ಯ ಅಟ್ಲಾಂಟಿಕ್‌ನಲ್ಲಿರುವ ಆಸ್ಪತ್ರೆಗಳು ಆಕ್ರಮಿಸಿಕೊಂಡಿದ್ದವು. CAMನ್ನು ನೀಡುತ್ತಿರುವ ಆಸ್ಪತ್ರೆಗಳ ಪೈಕಿ 70%ಗೂ ಹೆಚ್ಚಿನವು ನಗರ ಪ್ರದೇಶಗಳಲ್ಲಿದ್ದವು.[೬೪]

ಪರ್ಯಾಯ ಔಷಧದ ಜನಪ್ರಿಯತೆಯ ಕುರಿತಾಗಿ ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ ಕೂಡಾ ಸಮೀಕ್ಷೆಗಳನ್ನು ನಡೆಸಿದೆ. ಸಾರ್ವಜನಿಕ ವರ್ತನೆಗಳು ಮತ್ತು ಹುಸಿವಿಜ್ಞಾನದ ಗ್ರಹಿಕೆಗಳ ಮೇಲೆ ಮಾಧ್ಯಮಗಳಲ್ಲಿನ ವೈಜ್ಞಾನಿಕ ಕಾದಂಬರಿಗಳು ಬೀರುವ ನಕಾರಾತ್ಮಕ ಪ್ರಭಾವವನ್ನು ವಿವರಿಸಿದ ನಂತರ, ಮತ್ತು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಪರಿಣಾಮಕಾರಿ ಎಂಬುದಾಗಿ ಪ್ರಮಾಣೀಕರಿಸಲ್ಪಡದ ಎಲ್ಲಾ ಚಿಕಿತ್ಸೆಗಳಂತೆಯೇ ಪರ್ಯಾಯ ಔಷಧವೂ ಸಹ ಎಂಬುದನ್ನು ವಿಶದೀಕರಿಸಿದ ನಂತರ, ಅಷ್ಟೇ ಏಕೆ, ವಿಜ್ಞಾನಿಗಳು, ಸಂಘಟನೆಗಳು, ಮತ್ತು ವಿಜ್ಞಾನದ ಕಾರ್ಯನೀತಿ ರೂಪಿಸುವ ಸಮುದಾಯದ ಸದಸ್ಯರ ಪ್ರತ್ಯೇಕ ಕಳವಳ-ಕಾಳಜಿಗಳನ್ನು ಉಲ್ಲೇಖಿಸಿದ ನಂತರ, "ಅದೇನೇ ಇದ್ದರೂ, ಪರ್ಯಾಯ ಔಷಧದ ಜನಪ್ರಿಯತೆಯು ಹೆಚ್ಚುತ್ತಿರುವಂತೆ ಕಾಣಿಸುತ್ತದೆ" ಎಂಬುದಾಗಿ ಅದು ವ್ಯಾಖ್ಯಾನಿಸಿತು.[೨೫]

ಟೆಕ್ಸಾಸ್‌ ಸಂಸ್ಥಾನದಲ್ಲಿ, ವೃತ್ತಿಮರ್ಯಾದೆಗೆ ಉಚಿತವಲ್ಲದ ನಡತೆಯ ಅಥವಾ ಒಂದು ಸ್ವೀಕಾರಾರ್ಹ ವಿಧಾನದಲ್ಲಿ ವೈದ್ಯಶಾಸ್ತ್ರವನ್ನು ಪರಿಪಾಲಿಸುವಲ್ಲಿನ ವೈಫಲ್ಯತೆಯ ಆರೋಪಗಳಿಂದ ವೈದ್ಯರು ಭಾಗಶಃವಾಗಿ ರಕ್ಷಿಸಲ್ಪಡಬಹುದು; ಅಷ್ಟೇ ಅಲ್ಲ, ಒಂದು ವೇಳೆ ಮಂಡಲಿಯು ನಿರ್ದಿಷ್ಟಪಡಿಸಿದ ಚಿಕಿತ್ಸಾ ಪರಿಪಾಠದ ಅವಶ್ಯಕತೆಗಳು ಈಡೇರಿಸಲ್ಪಟ್ಟರೆ ಮತ್ತು ಬಳಕೆ ಮಾಡಿಕೊಂಡ ಚಿಕಿತ್ಸಾ ಕ್ರಮಗಳು ಔಷಧ ಚಿಕಿತ್ಸೆಯ ಅಗತ್ಯವಿರುವ ರೋಗಿಯ ಸ್ಥಿತಿಗತಿಗೆ ಸಂಬಂಧಿಸಿದಂತಿರುವ ಸಾಂಪ್ರದಾಯಿಕ ಚಿಕಿತ್ಸೆಗೆ ಹೋಲಿಸಿದಾಗ ರೋಗಿಗೆ ಒದಗಿದ ಒಂದು ಸುರಕ್ಷತೆಯ ಅಪಾಯವು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಮಹತ್ತರವಾಗಿದ್ದರೆ, ಪೂರಕ ವಿಧಾನವೊಂದರಲ್ಲಿ ಅವರು ಪರ್ಯಾಯ ಔಷಧವನ್ನು ಶಿಫಾರಸು ಮಾಡಿದಾಗ ಜರುಗಿಸಬಹುದಾದ ಶಿಸ್ತುಕ್ರಮದಿಂದಲೂ ವೈದ್ಯರು ಭಾಗಶಃವಾಗಿ ರಕ್ಷಿಸಲ್ಪಡಬಹುದು.[೬೫]

ಡೆನ್ಮಾರ್ಕ್‌

16 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದ ಡೆನ್ಮಾರ್ಕಿನ ಜನಸಂಖ್ಯೆಯ ಪೈಕಿ 45.2%ನಷ್ಟು ಮಂದಿ 2005ರಲ್ಲಿ ತಮ್ಮ ಬದುಕಿನ ಯಾವುದಾದರೊಂದು ಹಂತದಲ್ಲಿ ಪರ್ಯಾಯ ಔಷಧವನ್ನು ಬಳಸಿದ್ದರು.22.5%ನಷ್ಟು ಮಂದಿ ಹಿಂದಿನ ವರ್ಷದೊಳಗಾಗಿ ಪರ್ಯಾಯ ಔಷಧವನ್ನು ಬಳಸಿದ್ದರು.

ಹಿಂದಿನ ವರ್ಷದ (2005) ವ್ಯಾಪ್ತಿಯೊಳಗಿನ ಅತ್ಯಂತ ಜನಪ್ರಿಯವಾದ ಚಿಕಿತ್ಸಾ ಕ್ರಮಗಳ ಬಗೆಗಳಲ್ಲಿ ಇವು ಸೇರಿವೆ:

- ಅಂಗಮರ್ದನ, ಮೂಳೆ ವೈದ್ಯಪದ್ಧತಿ ಅಥವಾ ಇತರ ಕೈಚಳಕದ ಕೌಶಲಗಳು (13.2 ಪ್ರತಿಶತ)

- ಅನುವರ್ತನ ಸ್ಥಾನಮರ್ದನ (6.1 ಪ್ರತಿಶತ)

- ಸೂಜಿಚಿಕಿತ್ಸೆ (5.4 ಪ್ರತಿಶತ)

ಡೆನ್ಮಾರ್ಕ್‌ನಲ್ಲಿನ ಪರ್ಯಾಯ ಔಷಧದ ಕುರಿತಾದ ಸಂಖ್ಯಾಶಾಸ್ತ್ರೀಯವಾದ ಸಮೀಕ್ಷೆಗಳ ಹೆಚ್ಚಿನ ಫಲಿತಾಂಶಗಳು ViFABನ (ನಾಲೆಜ್‌ ಅಂಡ್‌ ರಿಸರ್ಚ್‌ ಸೆಂಟರ್‌ ಫಾರ್‌ ಆಲ್ಟರ್‌ನೆಟಿವ್‌ ಮೆಡಿಸಿನ್ಸ್‌‌) ಸ್ಥಳೀಯ ಪುಟದಲ್ಲಿ ಲಭ್ಯವಿದೆ; ಸಂಖ್ಯಾಶಾಸ್ತ್ರದ ಕುರಿತಾದ ಪುಟಗಳನ್ನು ನೋಡಿ: http://www.vifab.dk/uk/alternative+medicine/statistics Archived 2010-12-22 ವೇಬ್ಯಾಕ್ ಮೆಷಿನ್ ನಲ್ಲಿ.

ಶಿಕ್ಷಣ

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಕಾಲೇಜುಗಳು ಪರ್ಯಾಯ ಔಷಧದಲ್ಲಿನ ಪಠ್ಯಕ್ರಮಗಳ ಬೋಧನೆಯನ್ನು ನೀಡಲು ಪ್ರಾರಂಭಿಸಿವೆ. ಉದಾಹರಣೆಗೆ, 729 ಶಾಲೆಗಳ (ಒಂದು MD ಪದವಿಯನ್ನು ನೀಡುತ್ತಿರುವ 125 ವೈದ್ಯಕೀಯ ಶಾಲೆಗಳು, ವೈದ್ಯರಿಗೆ ಮೂಳೆ ವೈದ್ಯಪದ್ಧತಿಯ ಔಷಧ ಪದವಿಯೊಂದನ್ನು ನೀಡುತ್ತಿರುವ 25 ವೈದ್ಯಕೀಯ ಶಾಲೆಗಳು, ಮತ್ತು ಒಂದು ಶುಶ್ರೂಷಾ ವೃತ್ತಿ ಪದವಿಯನ್ನು ನೀಡುತ್ತಿರುವ 585 ಶಾಲೆಗಳು) ಸಮೀಕ್ಷೆ ನಡೆಸಿದ ಮೂರು ಪ್ರತ್ಯೇಕ ಸಂಶೋಧನಾ ಸಮೀಕ್ಷೆಗಳಲ್ಲಿ, 60%ನಷ್ಟು ಪ್ರಮಾಣಕ ವೈದ್ಯಕೀಯ ಶಾಲೆಗಳು, 95%ನಷ್ಟು ಮೂಳೆ ವೈದ್ಯಪದ್ಧತಿಯ ವೈದ್ಯಕೀಯ ಶಾಲೆಗಳು ಮತ್ತು 84.8%ನಷ್ಟು ಶುಶ್ರೂಷಾ ವೃತ್ತಿ ಶಾಲೆಗಳು CAMನ ಯಾವುದಾದರೊಂದು ಸ್ವರೂಪವನ್ನು ಬೋಧಿಸುತ್ತವೆ ಎಂದು ತಿಳಿದುಬಂದಿದೆ.[೬೬][೬೭][೬೮] ಅರಿಜೋನಾ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜು, ಆಂಡ್ರ್ಯೂ ವೇಲ್‌ ಎಂಬಾತನ ನಾಯಕತ್ವದ ಅಡಿಯಲ್ಲಿ ಸುಸಂಯೋಜನಾತ್ಮಕ ಔಷಧಶಾಸ್ತ್ರದಲ್ಲಿನ ಒಂದು ಶಿಕ್ಷಣ ಕಾರ್ಯಕ್ರಮವನ್ನು ನೀಡುತ್ತದೆ; "ಸಾಂಪ್ರದಾಯಿಕ ಔಷಧವನ್ನು ತಿರಸ್ಕರಿಸದ, ಅಥವಾ ಪರ್ಯಾಯ ಚಿಕಿತ್ಸಾ ಪರಿಪಾಠಗಳನ್ನು ವಿಮರ್ಶಾರಹಿತವಾಗಿ ಸಮ್ಮತಿಸದ" ಪರ್ಯಾಯ ಔಷಧದ ಹಲವಾರು ಶಾಖೆಗಳಲ್ಲಿ ಇದು ವೈದ್ಯರಿಗೆ ತರಬೇತಿಯನ್ನು ನೀಡುತ್ತದೆ.[೬೯] ಕೆನಡಾ ಮತ್ತು USAಯಲ್ಲಿ, ಅಧಿಕೃತ ಮನ್ನಣೆ ಪಡೆದಿರುವ ಪ್ರಕೃತಿ ಚಿಕಿತ್ಸಾ ವಿಧಾನದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳೂ ಸಹ ಸಂಖ್ಯೆ ಮತ್ತು ಜನಪ್ರಿಯತೆಯಲ್ಲಿ ಹೆಚ್ಚುತ್ತಿವೆ. (ನೋಡಿ: ನ್ಯಾಚುರೋಪತಿಕ್‌ ಮೆಡಿಕಲ್‌ ಸ್ಕೂಲ್‌ ಇನ್‌ ನಾರ್ತ್‌ ಅಮೆರಿಕಾ).

ಇದೇ ರೀತಿಯಲ್ಲಿ, "ಅಸಾಂಪ್ರದಾಯಿಕ ಔಷಧದ ಪಠ್ಯಕ್ರಮಗಳು ಐರೋಪ್ಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಕವಾಗಿ ಪ್ರತಿನಿಧಿಸಲ್ಪಟ್ಟಿವೆ. ಒಂದು ವ್ಯಾಪಕ ಶ್ರೇಣಿಯ ಚಿಕಿತ್ಸಾ ಕ್ರಮಗಳನ್ನು ಅವು ಒಳಗೊಂಡಿವೆ. ಅವುಗಳ ಪೈಕಿ ಅನೇಕವನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತದೆ. ಹಲವಾರು ಬೋಧನಾಂಗಗಳಲ್ಲಿ[೭೦] ಸಂಶೋಧನಾ ಕಾರ್ಯವು ಪ್ರಗತಿಯಲ್ಲಿದೆಯಾದರೂ, ಕೇವಲ ಪ್ರತಿಕ್ರಿಯಿಸಿದ [ಐರೋಪ್ಯ] ವಿಶ್ವವಿದ್ಯಾಲಯಗಳ ಪೈಕಿ ಕೇವಲ 40%ನಷ್ಟು ಮಾತ್ರ ಯಾವುದಾದರೊಂದು ಸ್ವರೂಪದ CAM ತರಬೇತಿಯನ್ನು ನೀಡುತ್ತಿದ್ದವು."[೭೧]

ಬ್ರಿಟನ್‌ನಲ್ಲಿನ ಅಸಾಂಪ್ರದಾಯಿಕ ಶಾಲೆಗಳಿಗೆ ವ್ಯತಿರಿಕ್ತವಾಗಿ, ಪರ್ಯಾಯ ಔಷಧದ ವೈದ್ಯಕೀಯ ಅಭ್ಯಾಸವನ್ನು ಬೋಧಿಸುವ ಪಠ್ಯಕ್ರಮಗಳನ್ನು ಯಾವುದೇ ಸಾಂಪ್ರದಾಯಿಕ ವೈದ್ಯಕೀಯ ಶಾಲೆಗಳು ನೀಡುವುದಿಲ್ಲ.[೭೨] UK ಮತ್ತು ಐರ್ಲೆಂಡ್‌ನ ಕಾಲೇಜ್‌ ಆಫ್‌ ನ್ಯಾಚುರೋಪತಿಕ್‌ ಮೆಡಿಸಿನ್‌ ರೀತಿಯಲ್ಲಿಯೇ ಬ್ರಿಟಿಷ್‌ ಮೆಡಿಕಲ್‌ ಆಕ್ಯುಪಂಕ್ಚರ್‌ ಸೊಸೈಟಿಯು ವೈದ್ಯರಿಗೆ ಸೂಜಿಚಿಕಿತ್ಸೆಯ ವೈದ್ಯಕೀಯ ಪ್ರಮಾಣಪತ್ರಗಳನ್ನು ನೀಡುತ್ತದೆ.

ಕಟ್ಟಳೆ

ಹಲವಾರು ಪರ್ಯಾಯ ಚಿಕಿತ್ಸಾ ಕ್ರಮಗಳ ಅನಿರ್ದಿಷ್ಟ ಸ್ವರೂಪದಿಂದಾಗಿ ಮತ್ತು ವಿಭಿನ್ನ ವೈದ್ಯ ವೃತ್ತಿಗಾರರು ಮಾಡುವ ವ್ಯಾಪಕ ವೈವಿಧ್ಯತೆಯ ಸಮರ್ಥನೆಗಳ ಕಾರಣದಿಂದಾಗಿ, ಪರ್ಯಾಯ ಔಷಧದ ವ್ಯಾಖ್ಯಾನದ ಕುರಿತೂ ಸೇರಿದಂತೆ ಪರ್ಯಾಯ ಔಷಧವು ಹುರುಪಿನ ಚರ್ಚೆಯ ಒಂದು ಮೂಲವಾಗಿ ಪರಿಣಮಿಸಿದೆ.[೭೩][೭೪] ಆಹಾರಕ್ರಮದ ಪೂರಕ ವಸ್ತುಗಳು, ಅವುಗಳ ಘಟಕಾಂಶಗಳು, ಸುರಕ್ಷತೆ, ಮತ್ತು ಸಮರ್ಥನೆಗಳು, ಇವೆಲ್ಲವೂ ಒಂದು ನಿರಂತರವಾದ ವಿವಾದದ ಮೂಲವಾಗಿವೆ.[೭೫] ಕೆಲವೊಂದು ನಿದರ್ಶನಗಳಲ್ಲಿ, ರಾಜಕೀಯ ವಿಷಯಗಳು, ಮುಖ್ಯವಾಹಿನಿಯ ಔಷಧ ಮತ್ತು ಪರ್ಯಾಯ ಔಷಧ ಇವೆಲ್ಲವೂ ಪರಸ್ಪರ ಘರ್ಷಿಸುತ್ತವೆ; ಸಂಶ್ಲೇಷಿತ ಔಷಧವಸ್ತುಗಳು ಕಾನೂನುಬದ್ಧವಾಗಿವೆಯಾದರೂ, ಅದೇ ಸಕ್ರಿಯ ರಾಸಾಯನಿಕದ ಗಿಡಮೂಲಿಕಾ ಮೂಲಗಳು ನಿಷೇಧಿಸಲ್ಪಟ್ಟಿವೆ ಎಂಬಂಥ ನಿದರ್ಶನಗಳನ್ನು ಇವು ಹೋಲುತ್ತವೆ.[೭೬]

ಇತರ ನಿದರ್ಶನಗಳಲ್ಲಿ, ಮುಖ್ಯವಾಹಿನಿಯ ಔಷಧದ ಕುರಿತಾದ ವಿವಾದವು ಚಿಕಿತ್ಸೆಯೊಂದರ ಸ್ವರೂಪದ ಕುರಿತಾದ ಪ್ರಶ್ನೆಗಳುನ್ನು ಹುಟ್ಟುಹಾಕುತ್ತದೆ; ನೀರಿನ ಫ್ಲೋರೈಡೀಕರಣದ ವಿಷಯ ಇದಕ್ಕೊಂದು ಉದಾಹರಣೆ.[೭೭] ಪರ್ಯಾಯ ಔಷಧ ಮತ್ತು ಮುಖ್ಯವಾಹಿನಿಯ ಔಷಧದ ಚರ್ಚೆಗಳು ಧರ್ಮದ ಸ್ವಾತಂತ್ರ್ಯದ ಚರ್ಚೆಗಳಾಗಿಯೂ ಹರಡಿಕೊಳ್ಳುತ್ತವೆ; ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ ಓರ್ವನ ಮಕ್ಕಳಿಗೆ ನೀಡಬೇಕಾದ ಜೀವರಕ್ಷಕ ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕು ಇದಕ್ಕೊಂದು ಉದಾಹರಣೆ.[೭೮] ಈ ನಿಟ್ಟಿನಲ್ಲಿ, ನಿಯಂತ್ರಣದ ಸಮತೋಲನವೊಂದನ್ನು ಕಂಡುಹಿಡಿಯುವಲ್ಲಿನ ಪ್ರಯತ್ನವನ್ನು ಸರ್ಕಾರಿ ನಿಯಂತ್ರಕರು ಮುಂದುವರಿಸುತ್ತಾರೆ.[೭೯]

ಪರ್ಯಾಯ ಔಷಧದ ಯಾವ ಶಾಖೆಗಳು ಕಾನೂನುಬದ್ಧವಾಗಿವೆ, ಯಾವುವು ನಿಯಂತ್ರಿಸಲ್ಪಟ್ಟಿವೆ, ಮತ್ತು ಯಾವ ಶಾಖೆಗಳಿಗೆ (ಹಾಗೇನಾದರೂ ಇದ್ದಲ್ಲಿ) ಒಂದು ಸರ್ಕಾರಿ-ನಿಯಂತ್ರಿತ ಆರೋಗ್ಯ ಸೇವೆಯು ಒದಗಿಸಲ್ಪಟ್ಟಿದೆ ಅಥವಾ ಆರೋಗ್ಯ ಔಷಧೀಯ ಖಾಸಗಿ ವಿಮಾ ಕಂಪನಿಯು ವೆಚ್ಚವನ್ನು ತುಂಬಿಕೊಟ್ಟಿದೆ ಎಂಬುದಕ್ಕೆ ಸಂಬಂಧಿಸಿ ಕಾರ್ಯವ್ಯಾಪ್ತಿಯು ಭಿನ್ನವಾಗುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಸಮಿತಿಯ, ಆರೋಗ್ಯವನ್ನು ಪಡೆಯುವುದರ ಅತ್ಯುನ್ನತ ಪ್ರಮಾಣಕಕ್ಕಿರುವ ಹಕ್ಕಿನ ಮೇಲಿನ ಸಾರ್ವತ್ರಿಕ ವ್ಯಾಖ್ಯಾನ ಸಂಖ್ಯೆ 14ರ (2000) 34ನೇ ವಿಧಿಯು (ನಿರ್ದಿಷ್ಟ ಕಾನೂನುಬದ್ಧ ಹೊಣೆಗಾರಿಕೆಗಳು ) ಈ ರೀತಿ ವ್ಯಾಖ್ಯಾನಿಸುತ್ತದೆ:

"ಇಷ್ಟೇ ಅಲ್ಲದೇ, ಗೌರವಿಸಬೇಕಾದ ಹೊಣೆಗಾರಿಕೆಗಳಲ್ಲಿ ಇವು ಸೇರಿವೆ: ಮಾನಸಿಕ ಕಾಯಿಲೆಯ ಚಿಕಿತ್ಸೆ ಅಥವಾ ಸಾಂಕ್ರಾಮಿಕ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಒಂದು ಅಪವಾದಾತ್ಮಕ ಆಧಾರದ ಮೇಲಿನ ಹೊರತು ಸಾಂಪ್ರದಾಯಿಕ ವ್ಯಾಧಿ ನಿರೋಧಕ ಆರೈಕೆ, ವಾಸಿಮಾಡುವ ಚಿಕಿತ್ಸಾ ಪರಿಪಾಠಗಳು ಮತ್ತು ಔಷಧಗಳನ್ನು ನಿಷೇಧಿಸುವುದರಿಂದ ಅಥವಾ ನಿರೋಧಿಸುವುದರಿಂದ, ಅಸುರಕ್ಷಿತ ಔಷಧವಸ್ತುಗಳನ್ನು ಮಾರುಕಟ್ಟೆ ಮಾಡುವಿಕೆಯಿಂದ, ಮತ್ತು ಒತ್ತಾಯದಿಂದ ನಡೆಸುವ ವೈದ್ಯಕೀಯ ಚಿಕಿತ್ಸೆಗಳನ್ನು ಪ್ರಯೋಗಿಸುವುದರಿಂದ ವಿಮುಖವಾಗಿರುವುದು ನಾಗರಿಕ ಸರ್ಕಾರವೊಂದರ ಹೊಣೆಗಾರಿಕೆಯಾಗಿರುತ್ತದೆ."[೮೦]

ಈ ವಿಧಿಯ ನಿರ್ದಿಷ್ಟವಾದ ಅನುಷ್ಠಾನಗಳನ್ನು ಸದಸ್ಯ ರಾಷ್ಟ್ರಗಳಿಗೆ ಬಿಡಲಾಗಿದೆ.

ವೈದ್ಯಕೀಯ ಚಿಕಿತ್ಸೆಗಳನ್ನು ಅನುಮೋದಿಸುವ ಸರ್ಕಾರಿ ಸಂಸ್ಥೆಗಳು ವಿಧಿಸುವ ನಿರ್ಬಂಧಗಳಿಗೆ ಪರ್ಯಾಯ ಔಷಧದ ಹಲವಾರು ಸಮರ್ಥಕರು ಅಸಮ್ಮತಿ ಸೂಚಿಸುತ್ತಾರೆ. ಉದಾಹರಣೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಟೀಕಾಕಾರರು ಹೇಳುವ ಪ್ರಕಾರ, ಪ್ರಾಯೋಗಿಕ ಮೌಲ್ಯಮಾಪನ ವಿಧಾನಗಳಿಗೆ ಸಂಬಂಧಿಸಿದಂತಿರುವ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌‌‌‌ನ ಮಾನದಂಡಗಳು, ಸಾರ್ವಜನಿಕರಿಗೆ ಪ್ರಯೋಜನಕಾರಿ ಮತ್ತು ಪರಿಣಾಮಕಾರಿಯಾಗಿರುವ ಚಿಕಿತ್ಸೆಗಳು ಮತ್ತು ವಿಧಾನಗಳನ್ನು ತರಲು ಬಯಸುತ್ತಿರುವರಿಗೆ ತಡೆಯೊಡ್ಡುತ್ತವೆ, ಮತ್ತು ಅವರ ಕೊಡುಗೆಗಳು ಮತ್ತು ಆವಿಷ್ಕಾರಗಳು ಅನ್ಯಾಯವಾಗಿ ರದ್ದುಪಡಿಸಲ್ಪಟ್ಟಿವೆ, ಉಪೇಕ್ಷಿಸಲ್ಪಟ್ಟಿವೆ ಅಥವಾ ದಮನ ಮಾಡಲ್ಪಟ್ಟಿವೆ. ಆರೋಗ್ಯ ವಂಚನೆ ಸಂಭವಿಸುತ್ತದೆ ಎಂಬ ಅಂಶವನ್ನು ಪರ್ಯಾಯ ಔಷಧವನ್ನು ಒದಗಿಸುವವರು ಗುರುತಿಸುತ್ತಾರೆ, ಮತ್ತು ಇದು ಸಂಭವಿಸಿದಾಗಲೆಲ್ಲಾ ಅದರೊಂದಿಗೆ ಯಥೋಚಿತವಾಗಿ ವ್ಯವಹರಿಸಬೇಕು ಎಂಬುದಾಗಿ ಅವರು ವಾದಿಸುತ್ತಾರೆ; ಆದರೆ, ಕ್ರಮಬದ್ಧವಾದ ಆರೋಗ್ಯ ಪಾಲನಾ ಉತ್ಪನ್ನಗಳು ಎಂಬುದಾಗಿ ತಾವು ಪರಿಗಣಿಸಿರುವುದಕ್ಕೆ ಈ ನಿರ್ಬಂಧಗಳು ವಿಸ್ತರಿಸಲ್ಪಡಬಾರದು ಎಂಬುದೂ ಅವರ ಅಭಿಪ್ರಾಯವಾಗಿದೆ.

ನ್ಯೂಜಿಲೆಂಡ್‌ನಲ್ಲಿ ಪರ್ಯಾಯ ಔಷಧ ಉತ್ಪನ್ನಗಳು ಆಹಾರ ಉತ್ಪನ್ನಗಳಾಗಿ ವರ್ಗೀಕರಿಸಲ್ಪಟ್ಟಿರುವುದರಿಂದ, ಯಾವುದೇ ಕಟ್ಟುಪಾಡುಗಳು ಅಥವಾ ಸುರಕ್ಷತಾ ಮಾನದಂಡಗಳು ಅಲ್ಲಿ ಯುಕ್ತವಾಗಿಲ್ಲ.[೮೧]

ಆಸ್ಟ್ರೇಲಿಯಾದಲ್ಲಿ, ಸದರಿ ವಿಷಯವನ್ನು ಪೂರಕ ಔಷಧ ಎಂಬುದಾಗಿ ಕರೆಯಲಾಗುತ್ತದೆ ಮತ್ತು ಅಲ್ಲಿನ ಥೆರಪೆಟಿಕ್‌ ಗೂಡ್ಸ್‌ ಅಡ್ಮಿನಿಸ್ಟ್ರೇಷನ್‌ ಸಂಸ್ಥೆಯು ಹಲವಾರು ಮಾರ್ಗದರ್ಶನಗಳು ಹಾಗೂ ಮಾನದಂಡಗಳನ್ನು ಜಾರಿಮಾಡಿದೆ.[೮೨] ಪೂರಕ ಔಷಧಗಳಿಗೆ ಮೀಸಲಾದ ಆಸ್ಟ್ರೇಲಿಯಾದ ನಿಯಂತ್ರಕ ಮಾರ್ಗದರ್ಶಿ ಸೂತ್ರಗಳು (ಆಸ್ಟ್ರೇಲಿಯನ್‌ ರೆಗ್ಯುಲೇಟರಿ ಗೈಡ್‌ಲೈನ್ಸ್‌ ಫಾರ್‌ ಕಾಂಪ್ಲಿಮೆಂಟರಿ ಮೆಡಿಸಿನ್ಸ್‌-ARGCM) ತಮ್ಮ ಹಕ್ಕೊತ್ತಾಯವನ್ನು ಮಂಡಿಸುತ್ತಾ, ಗಿಡಮೂಲಿಕಾ ವಸ್ತುಗಳಲ್ಲಿ ಇರುವ ಕೀಟನಾಶಕಗಳು, ಧೂಪಕಗಳು, ವಿಷಕಾರಿ ಲೋಹಗಳು, ಸೂಕ್ಷ್ಮಜೀವಿಯ ವಿಷಗಳು, ವಿಕಿರಣಪಟು ನ್ಯೂಕ್ಲೈಡ್‌ಗಳು ಮತ್ತು ಸೂಕ್ಷ್ಮಜೀವಿಯ ಮಾಲಿನ್ಯಗಳನ್ನು ನಿಯಂತ್ರಿಸಬೇಕು ಎಂದು ಕೇಳಿವೆಯಾದರೂ, ಈ ವಿಶಿಷ್ಟ ಲಕ್ಷಣಗಳ ಕುರುಹುಗಳು ಅಥವಾ ಪುರಾವೆಗಳಿಗಾಗಿ ಅವು ಮನವಿ ಮಾಡಿಕೊಂಡಿಲ್ಲ.[೮೩] ಆದಾಗ್ಯೂ, ಔಷಧ ಸಂಗ್ರಹದ ಪ್ರಬಂಧಗಳಲ್ಲಿನ ಗಿಡಮೂಲಿಕಾ ವಸ್ತುಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಗೆ [೮೪] ಒದಗಿಸುವುದು ಅಗತ್ಯವಾಗಿದೆ.

ಸಕ್ರಿಯ ಘಟಕಾಂಶಗಳ ಒಂದು ಪ್ರಮಾಣಕವಾಗಿಸಿದ ಪ್ರಮಾಣವನ್ನು ಔಷಧಗಳು ಒಳಗೊಂಡಿವೆ ಮತ್ತು ಅವು ಮಾಲಿನ್ಯದಿಂದ ಮುಕ್ತವಾಗಿವೆ ಎಂಬುದನ್ನು ಖಾತ್ರಿಪಡಿಸಲು ಆಧುನಿಕ ಔಷಧ ವಸ್ತುಗಳ ಉತ್ಪಾದನೆಯು ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಡುತ್ತಿದೆ. ಪರ್ಯಾಯ ಔಷಧದ ಉತ್ಪನ್ನಗಳು ಇದೇ ಸರ್ಕಾರಿ ಗುಣಮಟ್ಟ ನಿಯಂತ್ರಣದ ಮಾನದಂಡಗಳಿಗೆ ಒಳಪಟ್ಟಿಲ್ಲ. ಹೀಗಾಗಿ ಸೇವನಾ ಪ್ರಮಾಣಗಳ ನಡುವಿನ ಸ್ಥಿರತೆಯು ಬದಲಾಗಬಹುದಾಗಿದೆ. ಇದು ರಾಸಾಯನಿಕ ಅಂಶ ಮತ್ತು ಪ್ರತ್ಯೇಕ ಸೇವನಾ ಪ್ರಮಾಣಗಳ ಜೀವವಿಜ್ಞಾನ ಚಟುವಟಿಕೆಯಲ್ಲಿನ ಅನಿಶ್ಚಿತತೆಗೆ ಕಾರಣವಾಗುತ್ತದೆ. ಪರ್ಯಾಯ ಆರೋಗ್ಯ ಉತ್ಪನ್ನಗಳು ಕಲಬೆರಕೆ ಮತ್ತು ಮಾಲಿನ್ಯಕ್ಕೆ ಈಡಾಗಬಲ್ಲವು ಎಂಬುದು ಈ ಮೇಲ್ವಿಚಾರಣೆಯ ಕೊರತೆಯ ಅರ್ಥವಾಗಿದೆ.[೮೫] ವಿಭಿನ್ನ ಬಗೆಗಳು ಮತ್ತು ಮಟ್ಟಗಳಲ್ಲಿರುವ ಕಟ್ಟುಪಾಡನ್ನು ವಿಭಿನ್ನ ದೇಶಗಳು ಹೊಂದಿರುವುದರಿಂದಾಗಿ, ಈ ಸಮಸ್ಯೆಯು ಅಂತರರಾಷ್ಟ್ರೀಯ ವಾಣಿಜ್ಯ ವಲಯದಿಂದ ವರ್ಧಿಸಲ್ಪಟ್ಟಿದೆ. ಇದರಿಂದಾಗಿ ನಿರ್ದಿಷ್ಟ ಉತ್ಪನ್ನಗಳ ಅಪಾಯಗಳು ಮತ್ತು ಗುಣಮಟ್ಟಗಳ ಮೌಲ್ಯಗಳನ್ನು ಸೂಕ್ತವಾಗಿ ನಿರ್ಣಯಿಸುವುದು ಬಳಕೆದಾರರಿಗೆ ಕಷ್ಟಕರವಾಗಬಹುದು.

ಪರ್ಯಾಯ ಮತ್ತು ಕುರುಹು-ಆಧರಿತ ಔಷಧ

ಪರಿಣಾಮಕಾರಿತ್ವದ ಪರೀಕ್ಷೆ

ಅನೇಕ ಪರ್ಯಾಯ ಚಿಕಿತ್ಸಾ ಕ್ರಮಗಳು ಪರೀಕ್ಷೆಗೆ ಒಳಪಟ್ಟು ವೈವಿಧ್ಯಮಯ ಫಲಿತಾಂಶಗಳನ್ನು ಒದಗಿಸಿವೆ. 2003ರಲ್ಲಿ, CDCಯಿಂದ ಸಹಾಯಧನ ಪಡೆದ ಯೋಜನೆಯೊಂದು 208 ಷರತ್ತುಬದ್ಧ-ಚಿಕಿತ್ಸಾ ಜೋಡಿಗಳನ್ನು ಗುರುತಿಸಿತು. ಅವುಗಳ ಪೈಕಿ 58%ನಷ್ಟನ್ನು ಕನಿಷ್ಟಪಕ್ಷ ಒಂದು ಯಾದೃಚ್ಛೀಕರಿಸಲ್ಪಟ್ಟ ನಿಯಂತ್ರಿತ ಪರೀಕ್ಷಾ-ಪ್ರಕ್ರಿಯೆಯು (ರ್ಯಾಂಡಮೈಸ್ಡ್‌ ಕಂಟ್ರೋಲ್ಡ್‌ ಟ್ರಯಲ್‌-RCT) ಅಧ್ಯಯನಕ್ಕೊಳಪಡಿಸಿತ್ತು, ಮತ್ತು 23%ನಷ್ಟನ್ನು ಒಂದು ಉತ್ತಮ-ವಿಶ್ಲೇಷಣೆಯೊಂದಿಗೆ ಮೌಲ್ಯಮಾಪನ ಮಾಡಲಾಗಿತ್ತು.[೮೬] USನ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಸಿನ್‌ ಮಂಡಳಿಯೊಂದರಿಂದ 2005ರಲ್ಲಿ ಬಂದ ಪುಸ್ತಕವೊಂದರ ಅನುಸಾರ, CAMನ ಮೇಲೆ ಗಮನಹರಿಸಿದ್ದ RCTಗಳ ಸಂಖ್ಯೆಯು ನಾಟಕೀಯವಾಗಿ ಏರಿತ್ತು. ವಿಕರ್ಸ್‌ (1998) ಕುರಿತಾಗಿ ಈ ಪುಸ್ತಕವು ಉಲ್ಲೇಖಿಸುತ್ತದೆ; CAM-ಸಂಬಂಧಿತ RCTಗಳ ಪೈಕಿ ಅನೇಕವು ಕೊಖ್ರೇನ್‌ ದಾಖಲಾತಿಯಲ್ಲಿವೆಯಾದರೂ, ಈ ಪರೀಕ್ಷಾ-ಪ್ರಕ್ರಿಯೆಗಳ ಪೈಕಿ 19%ನಷ್ಟು ಭಾಗಗಳು ಮೆಡ್‌ಲೈನ್‌ನಲ್ಲಿರಲಿಲ್ಲ, ಮತ್ತು 84%ನಷ್ಟು ಭಾಗಗಳು ಸಾಂಪ್ರದಾಯಿಕ ವೈದ್ಯಕೀಯ ನಿಯತಕಾಲಿಕಗಳಲ್ಲಿದ್ದವು ಎಂಬುದನ್ನು ಈತ ಕಂಡುಕೊಂಡಿದ್ದ.[೧೯]: 133 

2005ರ ವೇಳೆಗೆ ಇದ್ದಂತೆ, ಕೊಖ್ರೇನ್‌ ಗ್ರಂಥಾಲಯವು 145 CAM-ಸಂಬಂಧಿತ ಕೊಖ್ರೇನ್‌ನ ಕ್ರಮಬದ್ಧ ಅವಲೋಕನಗಳನ್ನು ಮತ್ತು 340 ಕೊಖ್ರೇನ್‌ನದ್ದಲ್ಲದ ಕ್ರಮಬದ್ಧ ಅವಲೋಕನಗಳನ್ನು ಹೊಂದಿತ್ತು. ಕೇವಲ 145 ಕೊಖ್ರೇನ್‌ ಅವಲೋಕನಗಳ ತೀರ್ಮಾನಗಳ ವಿಶ್ಲೇಷಣೆಯನ್ನು ಇಬ್ಬರು ಓದುಗರು ನಿರ್ವಹಿಸಿದ್ದರು. 83%ನಷ್ಟು ನಿದರ್ಶನಗಳಲ್ಲಿ ಓದುಗರು ಸಮ್ಮತಿಸಿದ್ದರು. ಅವರು ಅಸಮ್ಮತಿ ಸೂಚಿಸಿದ್ದ 17%ನಷ್ಟು ನಿದರ್ಶನಗಳಲ್ಲಿ, ಆರಂಭಿಕ ಓದುಗರ ಪೈಕಿ ಓರ್ವನು ಶ್ರೇಯಾಂಕವೊಂದನ್ನು ನಿಗದಿಪಡಿಸುವುದರೊಂದಿಗೆ ಓರ್ವ ಮೂರನೇ ಓದುಗನು ಸಮ್ಮತಿ ಸೂಚಿಸಿದ್ದ. ಈ ಅಧ್ಯಯನಗಳು ಕಂಡುಕೊಂಡ ಪ್ರಕಾರ, CAMಗೆ ಸಂಬಂಧಿಸಿದಂತೆ 38.4%ನಷ್ಟು ನಿದರ್ಶನಗಳು ಸಕಾರಾತ್ಮಕ ಪರಿಣಾಮವನ್ನು ಅಥವಾ ಸಂಭಾವ್ಯ ಸಕಾರಾತ್ಮಕ (12.4%) ಪರಿಣಾಮವನ್ನು ತೀರ್ಮಾನಿಸಿದವು, 4.8%ನಷ್ಟು ನಿದರ್ಶನಗಳು ಯಾವುದೇ ಪರಿಣಾಮವನ್ನು ತೀರ್ಮಾನಿಸಲಿಲ್ಲ, 0.69%ನಷ್ಟು ನಿದರ್ಶನಗಳು ಅಪಾಯಕಾರಿ ಪರಿಣಾಮವನ್ನು ತೀರ್ಮಾನಿಸಿದವು, ಮತ್ತು 56.6%ನಷ್ಟು ನಿದರ್ಶನಗಳು ಸಾಕಷ್ಟಿರದ ಕುರುಹನ್ನು ತೀರ್ಮಾನಿಸಿದವು. ಸಾಂಪ್ರದಾಯಿಕ ಚಿಕಿತ್ಸೆಗಳ ಮೌಲ್ಯಮಾಪನವೊಂದು ಕಂಡುಕೊಂಡ ಪ್ರಕಾರ, 41.3%ನಷ್ಟು ನಿದರ್ಶನಗಳು ಸಕಾರಾತ್ಮಕ ಅಥವಾ ಸಂಭಾವ್ಯ ಸಕಾರಾತ್ಮಕ ಪರಿಣಾಮವನ್ನು ತೀರ್ಮಾನಿಸಿದವು, 20%ನಷ್ಟು ನಿದರ್ಶನಗಳು ಯಾವುದೇ ಪರಿಣಾಮವನ್ನು ತೀರ್ಮಾನಿಸಲಿಲ್ಲ, 8.1%ನಷ್ಟು ನಿದರ್ಶನಗಳು ನಿವ್ವಳ ಅಪಾಯಕಾರಿ ಪರಿಣಾಮಗಳನ್ನು ತೀರ್ಮಾನಿಸಿದವು, ಮತ್ತು 21.3%ನಷ್ಟು ನಿದರ್ಶನಗಳು ಸಾಕಷ್ಟಿರದ ಕುರುಹನ್ನು ತೀರ್ಮಾನಿಸಿದವು. ಅದೇನೇ ಇದ್ದರೂ, CAM ಅವಲೋಕನವು 2004ರ ಕೊಖ್ರೇನ್‌ ದತ್ತಾಂಶ ಸಂಗ್ರಹವನ್ನು ಬಳಸಿದರೆ, ಸಾಂಪ್ರದಾಯಿಕ ಅವಲೋಕನವು 1998ರ ಕೊಖ್ರೇನ್‌ ದತ್ತಾಂಶ ಸಂಗ್ರಹವನ್ನು ಬಳಸಿತು.[೧೯]: 135–136 

ಚಿಕಿತ್ಸೆಯ ಬಗೆಯ ಆಧಾರದ ಮೇಲೆ ವಿಂಗಡಿಸಲ್ಪಟ್ಟ (ತಿಂಗಳಿಗೊಮ್ಮೆ ನವೀಕರಿಸಲಾದ) ಫಲಿತಾಂಶಗಳ ಸಾರಾಂಶಗಳನ್ನು ಒಳಗೊಂಡಿರುವ ಪರ್ಯಾಯ ಔಷಧದ ಕುರಿತಾದ ಕೊಖ್ರೇನ್‌ ಅವಲೋಕನಗಳ ಪಟ್ಟಿಗಳು ViFABಯ (ನಾಲೆಜ್‌ ಅಂಡ್‌ ರಿಸರ್ಚ್‌ ಸೆಂಟರ್‌ ಫಾರ್‌ ಆಲ್ಟರ್‌ನೆಟಿವ್‌ ಮೆಡಿಸಿನ್ಸ್‌‌) ಸ್ಥಳೀಯ ಪುಟದಲ್ಲಿ ಲಭ್ಯವಿದೆ; ಪಟ್ಟಿಗಳನ್ನು ಇಲ್ಲಿ ನೋಡಿ: http://www.vifab.dk/uk/cochrane+and+alternative+medicine Archived 2010-12-23 ವೇಬ್ಯಾಕ್ ಮೆಷಿನ್ ನಲ್ಲಿ.

ಬಹುಪಾಲು ಪರ್ಯಾಯ ವೈದ್ಯಕೀಯ ಚಿಕಿತ್ಸೆಗಳು ಸ್ವಾಮ್ಯದಹಕ್ಕು ಪಡೆಯಲು ಅರ್ಹವಾಗಿಲ್ಲ, ಹೀಗಾಗಿ ಖಾಸಗಿ ವಲಯದಿಂದ ಸಹಾಯಧನವನ್ನು ಪಡೆಯುವ ಕಡಿಮೆ ಮಟ್ಟದ ಸಂಶೋಧನೆಗೆ ಇದು ಕಾರಣವಾಗಬಹುದಾಗಿದೆ. ಮೇಲಾಗಿ, ಬಹುತೇಕ ದೇಶಗಳಲ್ಲಿ ಪರಿಣಾಮಕಾರಿತ್ವದ ಯಾವುದೇ ಕುರುಹು ಇಲ್ಲದೆಯೇ ಪರ್ಯಾಯ ಚಿಕಿತ್ಸೆಗಳನ್ನು (ಔಷಧ ವಸ್ತುಗಳಿಗೆ ವ್ಯತಿರಿಕ್ತವಾಗಿ) ಮಾರುಕಟ್ಟೆ ಮಾಡಬಹುದಾಗಿದ್ದು, ಇದು ವೈಜ್ಞಾನಿಕ ಸಂಶೋಧನೆಗೆ ಧನಸಹಾಯಮಾಡುವ ತಯಾರಕರಿಗೆ ಸಂಬಂಧಿಸಿದಂತೆ ಒಂದು ಉತ್ಸಾಹ ಭಂಜಕ ಸಂಗತಿಯೂ ಆಗಿದೆ.[೮೭] ವೈದ್ಯಕೀಯ ಸಂಶೋಧನೆಗೆ ಪ್ರತಿಫಲ ನೀಡುವ ಸಲುವಾಗಿ ಬಹುಮಾನದ ಪದ್ಧತಿಯೊಂದನ್ನು ಅಳವಡಿಸಿಕೊಳ್ಳುವಂತೆ ಕೆಲವೊಬ್ಬರು ಪ್ರಸ್ತಾವಿಸಿದ್ದಾರೆ.[೮೮] ಅದೇನೇ ಇದ್ದರೂ, ಸಂಶೋಧನೆಗಾಗಿ ಸಾರ್ವಜನಿಕರಿಂದ ಒದಗುವ ಧನಸಹಾಯವು ಚಾಲ್ತಿಯಲ್ಲಿದೆ. ಪರ್ಯಾಯ ಔಷಧ ಕೌಶಲಗಳ ಸಂಶೋಧನೆಗಾಗಿ ಧನಸಹಾಯವನ್ನು ಹೆಚ್ಚಿಸುವುದು US ನ್ಯಾಷನಲ್‌ ಸೆಂಟರ್‌ ಫಾರ್‌ ಕಾಂಪ್ಲಿಮೆಂಟರಿ ಅಂಡ್‌ ಆಲ್ಟರ್‌ನೇಟಿವ್‌ ಮೆಡಿಸಿನ್‌ ಸಂಸ್ಥೆಯ ಉದ್ದೇಶವಾಗಿತ್ತು. NCCAM ಮತ್ತು ಅದರ ಪೂರ್ವವರ್ತಿಯಾದ ಆಫೀಸ್‌ ಆಫ್‌ ಆಲ್ಟರ್‌ನೇಟಿವ್‌ ಮೆಡಿಸಿನ್‌ ಇವು 1992ರಿಂದಲೂ ಇಂಥ ಸಂಶೋಧನೆಯ ಮೇಲೆ 1 ಶತಕೋಟಿ $ಗೂ ಹೆಚ್ಚಿನ ಮೊತ್ತದ ಹಣವನ್ನು ಖರ್ಚುಮಾಡಿವೆ.[೮೯][೯೦]

ಪರ್ಯಾಯ ಚಿಕಿತ್ಸಾ ಪರಿಪಾಠಗಳ ಕುರಿತು ಶಂಕಿಸುವ ಕೆಲವೊಂದು ಸಂದೇಹವಾದಿಗಳು ಹೇಳುವ ಪ್ರಕಾರ, ಅನ್ಯಥಾ ಪರಿಣಾಮಕಾರಿಯಲ್ಲದ ಚಿಕಿತ್ಸೆಯೊಂದು ತನ್ನ ರೋಗಲಕ್ಷಣದ ಪರಿಹಾರಕ್ಕೆ ಕಾರಣವೆಂದು ಹೇಳಬಹುದು; ಇದಕ್ಕೆ ಹುಸಿಮದ್ದಿನ ಪರಿಣಾಮವು ಕಾರಣವಾಗಿರಬಹುದು, ಕಾಯಿಲೆಯೊಂದರಿಂದ ಪಡೆದ ಸ್ವಾಭಾವಿಕ ಚೇತರಿಕೆ ಅಥವಾ ಕಾಯಿಲೆಯೊಂದರ ಆವರ್ತನದ ಸ್ವರೂಪವು (ನಿವರ್ತನ ಭ್ರಾಮಕತೆ) ಕಾರಣವಾಗಿರಬಹುದು, ಅಥವಾ ವ್ಯಕ್ತಿಯು ಮೂಲತಃ ಒಂದು ನಿಜವಾದ ಕಾಯಿಲೆಯನ್ನು ಎಂದಿಗೂ ಹೊಂದಿಲ್ಲದರ ಸಾಧ್ಯತೆಯು ಕಾರಣವಾಗಿರಬಹುದು.[೯೧]

ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳು, ಔಷಧವಸ್ತುಗಳು, ಮತ್ತು ಮಧ್ಯಸ್ಥಿಕೆಗಳಿಗೆ ಸಂಬಂಧಿಸಿದಂತಿರುವ ರೀತಿಯಲ್ಲಿಯೇ, ವೈದ್ಯಕೀಯ ಪರೀಕ್ಷಾ-ಪ್ರಕ್ರಿಯೆಗಳಲ್ಲಿ ಪರ್ಯಾಯ ಔಷಧದ ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು ಕಷ್ಟಕರವಾಗಬಲ್ಲದು. ರೋಗಸ್ಥಿತಿಯೊಂದಕ್ಕೆ ಸಂಬಂಧಿಸಿದಂತಿರುವ ಒಂದು ಪ್ರಮಾಣೀಕರಿಸಲ್ಪಟ್ಟ, ಪರಿಣಾಮಕಾರಿ ಚಿಕಿತ್ಸೆಯು ಈಗಾಗಲೇ ಲಭ್ಯವಿರುವ ನಿದರ್ಶನಗಳಲ್ಲಿ, ಹೆಲ್ಸಿಂಕಿ ಘೋಷಣೆಯು ವಿಶದೀಕರಿಸುವ ಪ್ರಕಾರ, ಇಂಥ ಚಿಕಿತ್ಸೆಯ ತಡೆಹಿಡಿಯುವಿಕೆಯು ಬಹುಪಾಲು ಸನ್ನಿವೇಶಗಳಲ್ಲಿ ಅನೈತಿಕವೆನಿಸಿಕೊಳ್ಳುತ್ತದೆ. ಪರೀಕ್ಷೆಗೆ ಒಳಪಟ್ಟಿರುವ ಒಂದು ಪರ್ಯಾಯ ಕೌಶಲದ ಜೊತೆಗೆ ಪಾಲನೆಯ-ಪ್ರಮಾಣಕ ಚಿಕಿತ್ಸೆಯನ್ನು ಬಳಸುವುದರಿಂದ, ಗೊಂದಲ ಹುಟ್ಟಿಸುವ ಅಥವಾ ವ್ಯಾಖ್ಯಾನಿಸಲು-ಕಷ್ಟಕರವಾಗುವ ಫಲಿತಾಂಶಗಳು ಹೊರಹೊಮ್ಮಬಹುದು.[೯೨]

ನ್ಯಾಷನಲ್‌ ಸೆಂಟರ್‌ ಫಾರ್‌ ಕಾಂಪ್ಲಿಮೆಂಟರಿ ಅಂಡ್‌ ಆಲ್ಟರ್‌ನೇಟಿವ್‌ ಮೆಡಿಸಿನ್‌ (ಹಿಂದೆ OAM ಎಂದು ಹೆಸರಾಗಿತ್ತು) ವತಿಯಿಂದ ಸಹಾಯಧನ ಪಡೆದ ಹತ್ತು ವರ್ಷಗಳ ಅವಧಿಯ ಬೃಹತ್‌ ಅಧ್ಯಯನಗಳು 2009ರಲ್ಲಿ ಹೊರಹೊಮ್ಮಿಸಿದ, ಅತೀವವಾಗಿ ಪ್ರಚಾರ ನೀಡಲಾದ ನಕಾರಾತ್ಮಕ ಫಲಿತಾಂಶಗಳಿಂದ ಟೀಕಾಕಾರರ ದೂರುಗಳು ಸಮರ್ಥಿಸಲ್ಪಟ್ಟವು:

"ಯಾವ ಪರಿಹಾರೋಪಾಯಗಳು ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಕಂಡುಹಿಡಿಯಲು ಹತ್ತು ವರ್ಷಗಳ ಹಿಂದೆ ಸರ್ಕಾರವು ಗಿಡಮೂಲಿಕೆಗಳ ಮತ್ತು ಇತರ ಪರ್ಯಾಯ ಆರೋಗ್ಯ ಪರಿಹಾರಗಳ ಪರೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಸಿತು. 2.5 ಶತಕೋಟಿ $ನಷ್ಟು ಮೊತ್ತದ ಹಣವನ್ನು ಖರ್ಚುಮಾಡಿದ ನಂತರ, ಹೆಚ್ಚೂಕಮ್ಮಿ ಅವುಗಳ ಪೈಕಿ ಯಾವೊಂದೂ ಸಮರ್ಥವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ನಿರಾಶಾದಾಯಕ ಉತ್ತರ ದೊರಕಿದಂತಾಗಿದೆ."[೩೧]

ಆಂಡ್ರ್ಯೂ J. ವಿಕರ್ಸ್‌ ಎಂಬ ಕ್ಯಾನ್ಸರ್‌ ಸಂಶೋಧಕ ಈ ರೀತಿ ಹೇಳಿಕೆ ನೀಡಿದ್ದಾನೆ:

"ಸಾಕಷ್ಟು ಜನಪ್ರಿಯ ಮತ್ತು ವೈಜ್ಞಾನಿಕವಾಗಿರುವ ಬರಹಗಾರಿಕೆಗೆ ವ್ಯತಿರಿಕ್ತವಾಗಿ, ಅನೇಕ ಪರ್ಯಾಯ ಕ್ಯಾನ್ಸರ್‌ ಚಿಕಿತ್ಸೆಗಳು ಒಳ್ಳೆಯ ಗುಣಮಟ್ಟದ ವೈದ್ಯಕೀಯ ಪರೀಕ್ಷಾ-ಪ್ರಕ್ರಿಯೆಗಳಲ್ಲಿ ತನಿಖೆಗೆ ಒಳಪಟ್ಟಿದ್ದು, ಅವು ಪರಿಣಾಮಕಾರಿಯಲ್ಲ ಎಂಬುದು ತೋರಿಸಲ್ಪಟ್ಟಿದೆ. ಈ ಲೇಖನದಲ್ಲಿ, ಕ್ಯಾನ್ಸರ್‌ ರೋಗದ ಹಲವಾರು ಪರ್ಯಾಯ ಪರಿಹಾರೋಪಾಯಗಳ ಮೇಲಿನ ವೈದ್ಯಕೀಯ ಪರೀಕ್ಷಾ-ಪ್ರಕ್ರಿಯೆಯ ದತ್ತಾಂಶವು ಅವಲೋಕಿಸಲ್ಪಟ್ಟಿದ್ದು, ಲಿವಿಂಗ್‌ಸ್ಟನ್-ವೀಲರ್‌, ಡಿ ಬೆಲ್ಲಾ ಮಲ್ಟಿಥೆರಪಿ, ಆಂಟಿನಿಯೋಪ್ಲಾಸ್ಟಾನ್‌ಗಳು, C ಜೀವಸತ್ವ, ಹೈಡ್ರಜೈನ್‌ ಸಲ್ಫೇಟ್‌, ಲೇಟ್ರೈಲ್‌, ಮತ್ತು ಮಾನಸಿಕ ಚಿಕಿತ್ಸೆ ಮೊದಲಾದವು ಈ ವಿಧಾನಗಳಲ್ಲಿ ಸೇರಿವೆ. ಇಂಥ ಚಿಕಿತ್ಸಾ ಕ್ರಮಗಳಿಗೆ ಸಂಬಂಧಿಸಿದಂತೆ "ಪ್ರಮಾಣೀಕರಿಸದ" ಎಂಬ ಹಣೆಪಟ್ಟಿಯು ಅನುಚಿತವಾಗಿದೆ; ಅನೇಕ ಪರ್ಯಾಯ ಕ್ಯಾನ್ಸರ್‌ ಚಿಕಿತ್ಸಾ ಕ್ರಮಗಳು "ಅಲ್ಲಗಳೆಯಲ್ಪಟ್ಟಿವೆ" ಎಂಬುದನ್ನು ಪ್ರತಿಪಾದಿಸುವ ಸಮಯ ಇದಾಗಿದೆ."[೯೩][೯೩]

ಸುರಕ್ಷತೆಯ ಪರೀಕ್ಷೆ

ಸಾಂಪ್ರದಾಯಿಕ ಔಷಧ ವಸ್ತುಗಳೊಂದಿಗಿನ ಪಾರಸ್ಪರಿಕ ಪ್ರಭಾವಗಳು

ಜೀವವಿಜ್ಞಾನದ ರೀತ್ಯಾ ಸಕ್ರಿಯವಾಗಿರುವ ಪರ್ಯಾಯ ಔಷಧದ ಸ್ವರೂಪಗಳನ್ನು ಸಾಂಪ್ರದಾಯಿಕ ಔಷಧದೊಂದಿಗೆ ಜೊತೆಗೂಡಿಸಿ ಬಳಸಿದಾಗಲೂ ಅವು ಅಪಾಯಕಾರಿಯಾಗಬಲ್ಲ ಸಾಧ್ಯತೆಗಳಿವೆ. ಪ್ರತಿರಕ್ಷಾ-ವರ್ಧನೆಯ ಚಿಕಿತ್ಸೆ, ಷಾರ್ಕ್‌ ಮೀನು ಮೃದ್ವಸ್ಥಿ, ಜೈವಿಕ ಅನುರಣನ ಚಿಕಿತ್ಸೆ, ಆಮ್ಲಜನಕ ಮತ್ತು ಓಜೋನ್‌ ಚಿಕಿತ್ಸಾ ಕ್ರಮಗಳು, ಇನ್‌ಸುಲಿನ್‌ ಸಾಮರ್ಥ್ಯಕೊಡುವ ಚಿಕಿತ್ಸೆ ಮೊದಲಾದವು ಇದರ ಉದಾಹರಣೆಗಳಲ್ಲಿ ಸೇರಿವೆ. ಇತರ ಸಮಸ್ಯೆಗಳನ್ನು ಪರಿಗಣಿಸಿದಾಗ, ರಾಸಾಯನಿಕ ಚಿಕಿತ್ಸೆಯ ಔಷಧಗಳು, ವಿಕಿರಣ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅವಧಿಯಲ್ಲಿ ನೀಡುವ ಅರಿವಳಿಕೆಗಳೊಂದಿಗೆ ಕೆಲವೊಂದು ಗಿಡಮೂಲಿಕಾ ಪರಿಹಾರಗಳು ಅಪಾಯಕಾರಿಯಾದ ಪಾರಸ್ಪರಿಕ ಪ್ರಭಾವಗಳನ್ನು ಉಂಟುಮಾಡಬಲ್ಲವು.[೯] ಈ ಅಪಾಯಗಳ ಕುರಿತಾದ ಉಪಾಖ್ಯಾನ ರೂಪದ ಉದಾಹರಣೆಯೊಂದನ್ನು ಆಸ್ಟ್ರೇಲಿಯಾದ ಅಡಿಲೇಡ್‌ ವಿಶ್ವವಿದ್ಯಾಲಯದ ಸಹವರ್ತಿ ಪ್ರಾಧ್ಯಾಪಕ ಅಲಾಸ್ಟೇರ್‌ ಮ್ಯಾಕ್‌ಲೆನ್ನನ್‌ ವರದಿಮಾಡಿದ್ದಾನೆ; ಈ ನಿದರ್ಶನವು ಓರ್ವ ಮಹಿಳಾ ರೋಗಿಯ ಕುರಿತಾಗಿದ್ದು, ಆಕೆಯು ಶಸ್ತ್ರಕ್ರಿಯೆಯ ಮೇಜಿನ ಮೇಲೆ ಹೆಚ್ಚೂಕಮ್ಮಿ ರಕ್ತಸ್ರಾವವಾಗಿ ಪ್ರಾಣಬಿಟ್ಟಳು. ಶಸ್ತ್ರಚಿಕಿತ್ಸೆಗೆ ಮುಂಚಿತವಾಗಿ "ತನ್ನ ಬಲವನ್ನು ರೂಪಿಸಿಕೊಳ್ಳಲೆಂದು" ತಾನು "ನೈಸರ್ಗಿಕ" ಔಷಧದ ಗುಟುಕುಗಳನ್ನು ತೆಗೆದುಕೊಳ್ಳುತ್ತಿದ್ದುದನ್ನು ಉಲ್ಲೇಖಿಸಲು ಆಕೆಯು ಉಪೇಕ್ಷಿಸಿದ ನಂತರ ಈ ಘಟನೆಯು ಸಂಭವಿಸಿತು. ಇದರ ಜೊತೆಗೆ ಒಂದು ಶಕ್ತಿಯುತ ಹೆಪ್ಪುರೋಧಕವನ್ನೂ ಸೇವಿಸಿದ್ದು ಹೆಚ್ಚೂಕಮ್ಮಿ ಅವಳ ಸಾವಿಗೆ ಕಾರಣವಾಯಿತು.[೯೪]

ಮತ್ತೊಂದು ಸಂಭಾವ್ಯ ಕಾರ್ಯವಿಧಾನದ ಕುರಿತಾಗಿಯೂ ಮ್ಯಾಕ್‌ಲೆನ್ನನ್‌ ABC ಆನ್‌ಲೈನ್‌‌‌ ಗೆ ತಿಳಿಸುತ್ತಾನೆ:

"ಮತ್ತು ಕೊನೆಯದಾಗಿ ಹೇಳುವುದಾದರೆ, ಒಂದು ಪರ್ಯಾಯ ಔಷಧದಿಂದ ಮುಂದಿನದಕ್ಕೆ ಹೋಗುವಾಗ ಕೆಲವೊಂದು ರೋಗಿಗಳಲ್ಲಿ ಸಿನಿಕತನ ಮತ್ತು ನಿರಾಸೆ ಹಾಗೂ ಖಿನ್ನತೆಯು ಆವರಿಸಿಕೊಳ್ಳುತ್ತದೆ. ಹುಸಿಮದ್ದಿನ ಪರಿಣಾಮದ ಪ್ರಭಾವವು ಮೂರು ತಿಂಗಳುಗಳ ನಂತರ ಕಳೆದುಹೋಗುವುದು ಅವರ ಅರಿವಿಗೆ ಬರುತ್ತದೆ, ಮತ್ತು ಇದರಿಂದಾಗಿ ನಿರಾಶೆಗೊಳ್ಳುವ ಅವರು ಮತ್ತೊಂದು ವಿಧಾನದೆಡೆಗೆ ಸಾಗುತ್ತಾರೆ. ಅಲ್ಲಿಯೂ ಅವರು ನಿರಾಶೆ ಹೊಂದುತ್ತಾರೆ ಹಾಗೂ ಅವರ ಭ್ರಮೆಯು ನಿವಾರಿಸಲ್ಪಡುತ್ತದೆ; ಇದು ಖಿನ್ನತೆಯನ್ನು ಸೃಷ್ಟಿಸಬಲ್ಲದ್ದಾದ್ದರಿಂದ ಯಾವುದೇ ಪರಿಣಾಮಕಾರಿ ವಿಧಾನದೊಂದಿಗೆ ರೋಗಿಗೆ ನೀಡುವ ಕಟ್ಟಕಡೆಯ ಚಿಕಿತ್ಸೆಯೂ ಕಷ್ಟಕರವಾಗಿ ಪರಿಣಮಿಸುತ್ತದೆ. ಏಕೆಂದರೆ ಹಿಂದಿನ ಅನೇಕ ನಿದರ್ಶನಗಳಲ್ಲಿ ಅವರು ವೈಫಲ್ಯತೆಯ ಸರಮಾಲೆಯನ್ನೇ ನೋಡಿದವರಾಗಿರುತ್ತಾರೆ ".[೯೫]

ಸಂಭಾವ್ಯ ಪಾರ್ಶ್ವ-ಪರಿಣಾಮಗಳು

ಅನಪೇಕ್ಷಿತ ಪಾರ್ಶ್ವ-ಪರಿಣಾಮಗಳಿಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಚಿಕಿತ್ಸೆಗಳನ್ನು ಪರೀಕ್ಷೆಗೆ ಒಳಪಡಿಸಲಾದರೆ, ಪರ್ಯಾಯ ಚಿಕಿತ್ಸೆಗಳನ್ನು ಇಂಥ ಪರೀಕ್ಷೆಗೆ ಸಾಮಾನ್ಯವಾಗಿ ಒಳಪಡಿಸುವುದೇ ಇಲ್ಲ. ಅದು ಸಾಂಪ್ರದಾಯಿಕ ಚಿಕಿತ್ಸೆಯಾಗಿರಬಹುದು ಅಥವಾ ಪರ್ಯಾಯ ಚಿಕಿತ್ಸೆಯಾಗಿರಬಹುದು, ರೋಗಿಯೋರ್ವನ ಮೇಲೆ ಜೀವವಿಜ್ಞಾನದ ಅಥವಾ ಮಾನಸಿಕ ಪರಿಣಾಮವನ್ನು ಹೊಂದಿರುವ ಯಾವುದೇ ಚಿಕಿತ್ಸೆಯು ಸಾಕಷ್ಟು ಅಪಾಯಕಾರಿಯಾದ ಜೀವವಿಜ್ಞಾನದ ಅಥವಾ ಮಾನಸಿಕವಾದ ಪಾರ್ಶ್ವ-ಪರಿಣಾಮಗಳನ್ನು ಕೂಡಾ ಹೊಂದಿರಬಹುದು. ಪರ್ಯಾಯ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಈ ವಾಸ್ತವಾಂಶವನ್ನು ರುಜುವಾತುಪಡಿಸಲು ನಡೆಸಲಾಗುವ ಪ್ರಯತ್ನಗಳಲ್ಲಿ ಕೆಲವೊಮ್ಮೆ ನಿಸರ್ಗಕ್ಕೆ ಸಲ್ಲಿಸುವ ಮೊರೆ ಯ ಭ್ರಾಮಕತೆಯನ್ನು ಬಳಸಲಾಗುತ್ತದೆ, ಅಂದರೆ , "ಯಾವುದು ನೈಸರ್ಗಿಕವಾಗಿದೆಯೋ ಅದು ಅಪಾಯಕಾರಿಯಾಗಿರಲು ಸಾಧ್ಯವಿಲ್ಲ" ಎಂಬ ಚಿಂತನೆಯನ್ನು ಇದು ಒಳಗೊಂಡಿರುತ್ತದೆ.

ಪಾರ್ಶ್ವ-ಪರಿಣಾಮಗಳಿಗೆ ಸಂಬಂಧಿಸಿದಂತೆ ಇರುವ ಸಾಮಾನ್ಯ ಚಿಂತನೆಗೆ ಹೋಮಿಯೋಪತಿಯು ಒಂದು ಅಪವಾದವಾಗಿದೆ. U.S. ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ (FDA) ಸಂಸ್ಥೆಯು 1938ರಿಂದಲೂ ಹೋಮಿಯೋಪತಿ ಚಿಕಿತ್ಸಾ ಪದ್ಧತಿಯ ಉತ್ಪನ್ನಗಳನ್ನು "ಗಮನಾರ್ಹವಾಗಿರುವ ಹಲವಾರು ವಿಭಿನ್ನ ಮಾರ್ಗಗಳಲ್ಲಿ ಇತರ ಔಷಧವಸ್ತುಗಳಿಂದ" ನಿಯಂತ್ರಿಸಿಕೊಂಡುಬಂದಿದೆ.[೯೬] "ಪರಿಹಾರೋಪಾಯಗಳು" ಎಂಬುದಾಗಿ ಕರೆಯಲ್ಪಡುವ ಹೋಮಿಯೋಪತಿ ಚಿಕಿತ್ಸಾ ಪದ್ಧತಿಯ ತಯಾರಿಕೆಗಳು ಅತೀವವಾಗಿ ದುರ್ಬಲವಾಗಿದ್ದು, ಮೂಲ ಸಕ್ರಿಯ (ಮತ್ತು ಪ್ರಾಯಶಃ ವಿಷಕಾರಿ) ಘಟಕಾಂಶದ ಒಂದು ಏಕ ಕಣವು ಸಂಭಾವ್ಯವಾಗಿ ಉಳಿದುಕೊಳ್ಳುವುದರ ಹಂತಕ್ಕಿಂತಲೂ ಅವು ಅನೇಕವೇಳೆ ಸಾಕಷ್ಟು ಆಚೆಯಿರುತ್ತವೆ. ಹೀಗಾಗಿ ಅವು ಆ ಲೆಕ್ಕದಲ್ಲಿ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿವೆಯಾದರೂ, "ಅವುಗಳ ಉತ್ಪನ್ನಗಳು ಉತ್ತಮವಾದ ತಯಾರಿಕಾ ಪರಿಪಾಠದ ಅವಶ್ಯಕತೆಗಳ ವಿಷಯದಲ್ಲಿ ವಿನಾಯಿತಿ ಪಡೆದಿವೆ ಎನ್ನಬೇಕು; ಅವಧಿ ತೀರುವಿಕೆಯ ದಿನಾಂಕದ ನಮೂದಿಸುವಿಕೆ ಮತ್ತು ಗುರುತು ಹಾಗೂ ಬಲಕ್ಕೆ ಸಂಬಂಧಿಸಿದಂತಿರುವ ಸಂಪೂರ್ಣಗೊಂಡ ಉತ್ಪನ್ನದ ಪರೀಕ್ಷಿಸುವಿಕೆಯಿಂದ ಅವಕ್ಕೆ ವಿನಾಯಿತಿ ಸಿಕ್ಕಿದೆ", ಮತ್ತು ಅವುಗಳಲ್ಲಿರುವ ಮದ್ಯಸಾರದ ಸಾಂದ್ರತೆಯು ಸಾಂಪ್ರದಾಯಿಕ ಔಷಧವಸ್ತುಗಳಲ್ಲಿ ಅನುಮತಿಸಲಾಗಿರುವ ಪ್ರಮಾಣಕ್ಕಿಂತ ಸಾಕಷ್ಟು ಹೆಚ್ಚಿನದಾಗಿರಬಹುದಾಗಿದೆ.[೯೬]

ಚಿಕಿತ್ಸೆಯಲ್ಲಿನ ವಿಳಂಬ

ಗೌಣಸ್ವರೂಪದಲ್ಲಿರುವ ಅಸ್ವಸ್ಥತೆಯೊಂದಕ್ಕೆ ಸಂಬಂಧಿಸಿದಂತೆ ಒಂದು ಪರ್ಯಾಯ ಚಿಕಿತ್ಸೆಯಿಂದ ಯಶಸ್ಸನ್ನು ಅನುಭವಿಸಿರುವ ಅಥವಾ ಗ್ರಹಿಸಿರುವವರಿಗೆ ಅದರ ಪರಿಣಾಮಕಾರಿತ್ವದ ಕುರಿತಾಗಿ ಮನವರಿಕೆಯಾಗಿರಬಹುದು. ಅಷ್ಟೇ ಅಲ್ಲ, ಒಂದು ಹೆಚ್ಚು ಗಂಭೀರವಾದ, ಪ್ರಾಯಶಃ ಜೀವ-ಬೆದರಿಕೆಯೊಡ್ಡುವ ಕಾಯಿಲೆಗೆ ಸಂಬಂಧಿಸಿದಂತೆ ಆ ಯಶಸ್ಸನ್ನು ಮತ್ತಾವುದಾದರೂ ಪರ್ಯಾಯ ಚಿಕಿತ್ಸೆಗೆ ಆಧಾರವಾಗಿ ಬಳಸುವಂತೆ ಅವರ ಮನವೊಪ್ಪಿಸಬಹುದು.[೯೭] ಈ ಕಾರಣಕ್ಕಾಗಿಯೇ ಟೀಕಾಕಾರರು ತಮ್ಮ ವಾದವನ್ನು ಮಂಡಿಸುತ್ತಾರೆ; ಯಶಸ್ಸನ್ನು ವ್ಯಾಖ್ಯಾನಿಸಲೆಂದು ಹುಸಿಮದ್ದಿನ ಪರಿಣಾಮದ ಮೇಲೆ ನೆಚ್ಚಿಕೊಳ್ಳುವ ಚಿಕಿತ್ಸಾ ಕ್ರಮಗಳು ಅತ್ಯಂತ ಅಪಾಯಕಾರಿಯಾಗಿರುತ್ತವೆ ಎಂಬುದು ಅವರ ವಾದ. ಮಾನಸಿಕ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದ ಪತ್ರಕರ್ತನಾದ ಸ್ಕಾಟ್‌ ಲಿಲಿಎನ್‌ಫೆಲ್ಡ್‌ ಎಂಬಾತ 2002ರಲ್ಲಿ ಈ ಕುರಿತು ವಿವರಿಸುತ್ತಾ, "ಊರ್ಜಿತಗೊಳಿಸದ ಅಥವಾ ವೈಜ್ಞಾನಿಕವಾಗಿ ಬೆಂಬಲಿಸಲ್ಪಡದ ಮಾನಸಿಕ ಆರೋಗ್ಯದ ಚಿಕಿತ್ಸಾ ಪರಿಪಾಠಗಳು, ಪರಿಣಾಮಕಾರಿ ಚಿಕಿತ್ಸೆಗಳನ್ನು ವ್ಯಕ್ತಿಗಳು ಬಳಸದಂತಾಗುವುದಕ್ಕೆ ಕಾರಣವಾಗಬಹುದು" ಎಂದು ಹೇಳಿದ್ದಾನೆ ಮತ್ತು ಇದನ್ನಾತ "ಅವಕಾಶದ ವೆಚ್ಚ" ಎಂಬುದಾಗಿ ಉಲ್ಲೇಖಿಸಿದ್ದಾನೆ. ಪರಿಣಾಮಕಾರಿಯಲ್ಲದ ಚಿಕಿತ್ಸೆಗಳ ಮೇಲೆ ದೊಡ್ಡ ಪ್ರಮಾಣಗಳಲ್ಲಿ ಸಮಯ ಮತ್ತು ಹಣವನ್ನು ಖರ್ಚುಮಾಡುವ ವ್ಯಕ್ತಿಗಳಲ್ಲಿ ಕೊನೆಗೆ ಆ ಎರಡು ಬಾಬತ್ತುಗಳು ಅಮೂಲ್ಯವೆಂಬಂತೆ ಅತ್ಯಲ್ಪವಾಗಿ ಉಳಿದುಕೊಳ್ಳಬಹುದು. ಇದರಿಂದಾಗಿ ಹೆಚ್ಚು ಪ್ರಯೋಜನಕಾರಿಯಾಗಿರಬಹುದಾದ ಚಿಕಿತ್ಸೆಗಳನ್ನು ಪಡೆಯುವ ಅವಕಾಶವನ್ನು ಅವರು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಿರುಪದ್ರವಿ ಚಿಕಿತ್ಸೆಗಳೂ ಸಹ ಪರೋಕ್ಷವಾಗಿ ನಕಾರಾತ್ಮಕ ಫಲಿತಾಂಶಗಳನ್ನು ಉಂಟುಮಾಡಬಲ್ಲವುಗಳಾಗಿರುತ್ತವೆ.[೯೮]

ಆಸ್ಟ್ರೇಲಿಯಾದಲ್ಲಿ 2001 ಮತ್ತು 2003ರ ನಡುವೆ ನಾಲ್ವರು ಮಕ್ಕಳು ಮರಣಿಸಿದರು; ಅವರ ಹೆತ್ತವರು ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳಿಗೆ ಬದಲಾಗಿ ಪರಿಣಾಮಕಾರಿಯಲ್ಲದ ಪ್ರಕೃತಿ ಚಿಕಿತ್ಸಾ ವಿಧಾನದ, ಹೋಮಿಯೋಪತಿ ಚಿಕಿತ್ಸಾ ಪದ್ಧತಿಯ, ಅಥವಾ ಇತರ ಪರ್ಯಾಯ ಔಷಧಗಳು ಮತ್ತು ಪಥ್ಯಾಹಾರಗಳನ್ನು ಆಯ್ಕೆಮಾಡಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು.[೯೯] ಒಟ್ಟಾರೆಯಾಗಿ, ಅಲ್ಲಿ ಕಂಡುಬಂದ 17 ನಿದರ್ಶನಗಳಲ್ಲಿ, ಸಾಂಪ್ರದಾಯಿಕ ಔಷಧವನ್ನು ಬಳಸುವಲ್ಲಿನ ಒಂದು ವೈಫಲ್ಯತೆಯಿಂದಾಗಿ ಮಕ್ಕಳು ಗಮನಾರ್ಹವಾಗಿ ತೊಂದರೆಗೊಳಗಾಗಿದ್ದರು.

ಪ್ರಮಾಣಕ ವೈದ್ಯಕೀಯ ಆರೈಕೆಗೆ ಒಂದು ಪೂರಕವಾಗಿ ಬಳಸಿದಾಗ ಅಪಾಯದ ಪ್ರಮಾಣವು ಹೆಚ್ಚಾಗಬಲ್ಲದು

ಪರ್ಯಾಯ ಕ್ಯಾನ್ಸರ್‌ ಚಿಕಿತ್ಸೆಗಳನ್ನು ಬಳಸುವ ರೋಗಿಗಳು, ಕಾಯಿಲೆಯ ಬಗೆ ಮತ್ತು ಹಂತಕ್ಕೆ ಸಂಬಂಧಿಸಿದಂತೆ ನಿಯಂತ್ರಣ ಕ್ರಮವನ್ನು ಅನುಸರಿಸಿದ ನಂತರವೂ ಒಂದು ಕಳಪೆಯಾದ ಬದುಕುಳಿಯುವ ಅವಧಿಗೆ ಸಾಕ್ಷಿಯಾಗಬಹುದು.[೧೦೦] ಪ್ರಾಯಶಃ ಇದಕ್ಕಿರುವ ಕಾರಣವೇನೆಂದರೆ, ತಾವು ಬದುಕುಳಿಯುವ ಸಂಭಾವ್ಯತೆ ಹೆಚ್ಚು ಎಂಬುದಾಗಿ ಕರಾರುವಾಕ್ಕಾಗಿ ಗ್ರಹಿಸುವ ರೋಗಿಗಳು, ಪ್ರಮಾಣೀಕರಿಸದ ಪರಿಹಾರಗಳನ್ನು ಪ್ರಯತ್ನಿಸುವುದಿಲ್ಲ, ಮತ್ತು ತಾವು ಬದುಕುಳಿಯುವುದು ಅಸಂಭವ ಎಂಬುದನ್ನು ಕರಾರುವಾಕ್ಕಾಗಿ ಗ್ರಹಿಸುವ ರೋಗಿಗಳು, ಪ್ರಮಾಣೀಕರಿಸದ ಪರಿಹಾರಗಳೆಡೆಗೆ ಆಕರ್ಷಿಸಲ್ಪಡುತ್ತಾರೆ.[೧೦೦]

ಸಂಶೋಧನಾ ಧನಸಹಾಯ

1986 ಮತ್ತು 2003ರ ನಡುವೆ ನಡೆದ CAM ಸಂಶೋಧನೆಗೆ ಡಚ್‌ ಸರ್ಕಾರವು ಸಹಾಯಧನವನ್ನು ನೀಡಿತಾದರೂ, 2006ರಲ್ಲಿ ಇದು ಧನಸಹಾಯವನ್ನು ಔಪಚಾರಿಕವಾಗಿ ಅಂತ್ಯಗೊಳಿಸಿತು.[೧೦೧]

ಮನವಿ

1998ರಲ್ಲಿ[೪೬] ಪ್ರಕಟಿಸಲ್ಪಟ್ಟಿರುವ ಅಧ್ಯಯನವೊಂದು ಸೂಚಿಸುವ ಪ್ರಕಾರ, ಪರ್ಯಾಯ ಔಷಧದ ಬಳಕೆಯ ಬಹುಭಾಗವು ಪ್ರಮಾಣಕ ವೈದ್ಯಕೀಯ ಚಿಕಿತ್ಸೆಗಳೊಂದಿಗೆ ಜೊತೆಗೂಡಿತ್ತು. ಅಧ್ಯಯನಕ್ಕೆ ಒಳಗಾದವರ ಪೈಕಿ ಸರಿಸುಮಾರಾಗಿ 4.4 ಪ್ರತಿಶತದಷ್ಟು ಮಂದಿ ಪರ್ಯಾಯ ಔಷಧವನ್ನು ಸಾಂಪ್ರದಾಯಿಕ ಔಷಧಕ್ಕಿರುವ ಒಂದು ಬದಲಿ-ಬಳಕೆಯಾಗಿ ಉಪಯೋಗಿಸಿದ್ದರು. ಸಂಶೋಧನೆಯು ಕಂಡುಕೊಂಡ ಪ್ರಕಾರ, ಪರ್ಯಾಯ ಔಷಧವನ್ನು ಬಳಸಿದವರು ಉನ್ನತ ಶಿಕ್ಷಣವನ್ನು ಪಡೆಯುವೆಡೆಗೆ ಒಲವು ತೋರಿದ್ದರು ಅಥವಾ ಕಳಪೆಯಾದ ಆರೋಗ್ಯ ಸ್ಥಿತಿಗತಿಯನ್ನು ವರದಿಮಾಡಿದ್ದರು. ಸಾಂಪ್ರದಾಯಿಕ ಔಷಧದ ಬಳಕೆಯಲ್ಲಿ ಕಂಡುಬಂದ ಅಸಂತೃಪ್ತಿಯು ಆಯ್ಕೆಯಲ್ಲಿನ ಒಂದು ಅರ್ಥಪೂರ್ಣ ಅಂಶವಾಗಿರಲಿಲ್ಲವಾದರೂ, ಪರ್ಯಾಯ ಔಷಧ ಬಳಕೆದಾರರ ಪೈಕಿ ಬಹುತೇಕ ಮಂದಿ ಹಾಗೆ ಮಾಡುತ್ತಿದ್ದರು ಎಂಬಂತೆ ಕಂಡುಬರುತ್ತದೆ; ಏಕೆಂದರೆ, "ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಈ ಪರ್ಯಾಯ ಕ್ರಮಗಳು, ಆರೋಗ್ಯ ಮತ್ತು ಜೀವನದೆಡೆಗೆ ತಾವು ಹೊಂದಿರುವ ಮೌಲ್ಯಗಳು, ನಂಬಿಕೆಗಳು, ಮತ್ತು ತತ್ತ್ವಚಿಂತನೆಯ ದೃಷ್ಟಿಕೋನಗಳೊಂದಿಗೆ ಹೆಚ್ಚು ಹೊಂದಿಕೊಳ್ಳುವಂತಿದ್ದುದನ್ನು ಅವರು ಕಂಡುಕೊಂಡಿದ್ದರು." ನಿರ್ದಿಷ್ಟವಾಗಿ ಹೇಳುವುದಾದರೆ, ಚಿಕಿತ್ಸೆಗೆ ಒಳಪಟ್ಟ ವ್ಯಕ್ತಿಗಳು ಆರೋಗ್ಯದೆಡೆಗಿನ ಒಂದು ಸಮಗ್ರತಾ ದೃಷ್ಟಿಯ ದೃಷ್ಟಿಕೋನ, ತಮ್ಮ ಜೀವನ ಸಿದ್ಧಾಂತವನ್ನು ಬದಲಿಸಿದ ಒಂದು ಪರಿವರ್ತನೆಯ ಅನುಭವ, ಪರಿಸರವಾದ, ಸ್ತ್ರೀಸಮಾನತಾವಾದ, ಮನೋವಿಜ್ಞಾನ, ಮತ್ತು/ಅಥವಾ ಆಧ್ಯಾತ್ಮಿಕತೆ ಮತ್ತು ವೈಯಕ್ತಿಕ ಬೆಳವಣಿಗೆಗಳಿಗೆ ಬದ್ಧವಾಗಿರುವ ಹಲವಾರು ಗುಂಪುಗಳೊಂದಿಗೆ ಗುರುತಿಸಿಕೊಳ್ಳುವುದು ಇವೇ ಮೊದಲಾದ ಅಭಿವ್ಯಕ್ತಿಗಳನ್ನು ಹೊರಹೊಮ್ಮಿಸಿದ್ದರು; ಇವಿಷ್ಟರ ಜೊತೆಗೆ, ಒಂದು ವೈವಿಧ್ಯಮಯ ಸಾಮಾನ್ಯ ಮತ್ತು ಗೌಣ ಅಸ್ವಸ್ಥತೆಗಳಿಂದ, ಅದರಲ್ಲೂ ಗಮನಾರ್ಹವಾಗಿ ತಲ್ಲಣ, ಬೆನ್ನಿನ ಸಮಸ್ಯೆಗಳು, ಮತ್ತು ದೀರ್ಘಕಾಲದ ನೋವಿನಂಥ ಸಮಸ್ಯೆಗಳಿಂದ ತಾವು ಬಳಲುತ್ತಿರುವವರಂತೆ ಅವರು ತೋರಿಸಿಕೊಂಡಿದ್ದರು.

ಸಾಂಪ್ರದಾಯಿಕ ಔಷಧದ ಬದಲಾಗಿ ಪರ್ಯಾಯ ಔಷಧಗಳನ್ನು ಬಳಸುವ ಅಲ್ಪಸಂಖ್ಯಾತರು, ಅವುಗಳಿಗಾಗಿ ಮನವಿಯನ್ನು ಸಲ್ಲಿಸುವುದರ ಹಿಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನಸಿಕ ಕಾರಣಗಳನ್ನು ಲೇಖಕರು ಊಹಿಸಿದ್ದಾರೆ. ಸ್ಥೂಲವಾಗಿ ಹೇಳುವುದಾದರೆ, ಈ ಚಿಕಿತ್ಸೆಗಳಲ್ಲಿ ಕಂಡುಬರುವ ಆಸಕ್ತಿಗೆ ಹಲವಾರು ಸಮಾಜೋ-ಸಾಂಸ್ಕೃತಿಕ ಕಾರಣಗಳಿದ್ದು, ಸಾರ್ವಜನಿಕರ ವಲಯದಲ್ಲಿನ ಕಡಿಮೆ ಮಟ್ಟದ ವೈಜ್ಞಾನಿಕ ಸಾಕ್ಷರತೆಯ ಮೇಲೆ ಅವು ಕೇಂದ್ರೀಕೃತಗೊಂಡಿವೆ. ವೈಜ್ಞಾನಿಕ-ವಿರೋಧಿ ವರ್ತನೆಗಳಲ್ಲಿನ ಒಂದು ಹೆಚ್ಚಳ ಮತ್ತು ಹೊಸ ಯುಗದ ಅತೀಂದ್ರಿಯವಾದ ಕೂಡ ಇದರ ಜೊತೆಗೂಡಿವೆ.[೧೦೨] ಇದಕ್ಕೆ ಸಂಬಂಧಿಸಿದಂತೆ, ಪರ್ಯಾಯ ವೈದ್ಯಕೀಯ ಸಮುದಾಯದಿಂದ ಮಾಡಲ್ಪಡುವ ಅತಿಯಾದ ಸಮರ್ಥನೆಗಳ ಹುರುಪಿನ ಮಾರುಕಟ್ಟೆ ಮಾಡುವಿಕೆ[೧೦೩] ಜೊತೆಗೆ, ಅಸಮರ್ಪಕ ಮಾಧ್ಯಮಗಳು ಕೂಲಂಕಷ-ಪರೀಕ್ಷಣ ಹಾಗೂ ಟೀಕಾಕಾರರ ಮೇಲಿನ ದಾಳಿಗಳು ಇದರಲ್ಲಿ ಸೇರಿಕೊಂಡಿವೆ.[೧೦೨][೧೦೪]

ಸಾಂಪ್ರದಾಯಿಕ ಔಷಧ ಮತ್ತು ಔಷಧ ಕಂಪನಿಗಳೆಡೆಗಿನ ಪಿತೂರಿ ಸಿದ್ಧಾಂತಗಳಲ್ಲಿನ ಒಂದು ಹೆಚ್ಚಳವೂ ಇಲ್ಲಿ ಕಂಡುಬರುತ್ತದೆ. ವೈದ್ಯರಂಥ ಸಾಂಪ್ರದಾಯಿಕ ಅಧಿಕಾರಿಗಳಲ್ಲಿರುವ ಅಪನಂಬಿಕೆ, ಮತ್ತು ಪ್ರಸಕ್ತವಿರುವ ವೈಜ್ಞಾನಿಕ ಜೈವಿಕ ಔಷಧದ ವಿತರಣೆ ವಿಧಾನಗಳಲ್ಲಿ ಇಷ್ಟವಿಲ್ಲದಿರುವಿಕೆ ಇವೆಲ್ಲವೂ ಸೇರಿಕೊಂಡು, ರೋಗಿಗಳು ಹಲವಾರು ಅಸ್ವಸ್ಥತೆಗಳನ್ನು ಉಪಚರಿಸಲು ಪರ್ಯಾಯ ಔಷಧಕ್ಕಾಗಿ ಅರಸುವಂತೆ ಮಾಡಿವೆ.[೧೦೪] ಖಾಸಗಿ ಅಥವಾ ಸಾರ್ವಜನಿಕ ಆರೋಗ್ಯ ವಿಮೆಯ ಒಂದು ಕೊರತೆಯಿಂದಾಗಿ ಅನೇಕ ರೋಗಿಗಳು ಸಮಕಾಲೀನ ಔಷಧದೆಡೆಗಿನ ಸಂಪರ್ಕದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಅವರು ಕಡಿಮೆ-ವೆಚ್ಚದ ಪರ್ಯಾಯ ಔಷಧವನ್ನು ಅರಸುವಂತಾಗಿದೆ.[೪೧] ಈ ಮಾರುಕಟ್ಟೆಯಿಂದ ಲಾಭವನ್ನು ಪಡೆಯುವ ದೃಷ್ಟಿಯಿಂದ ವೈದ್ಯಶಾಸ್ತ್ರದ ವೈದ್ಯರೂ ಸಹ ಪರ್ಯಾಯ ಔಷಧವನ್ನು ಆಕ್ರಮಣಶೀಲವಾಗಿ ಮಾರುಕಟ್ಟೆ ಮಾಡುತ್ತಿದ್ದಾರೆ.[೧೦೩]

ಪರ್ಯಾಯ ಔಷಧದ ಜನಪ್ರಿಯತೆಯ ಸಾಮಾಜಿಕ-ಸಾಂಸ್ಕೃತಿಕ ಆಧಾರಗಳ ಜೊತೆಗೆ, ಅದರ ಬೆಳವಣಿಗೆಗೆ ಗಂಡಾಂತರಕಾರಿಯಾಗಿರುವ ಹಲವಾರು ಮಾನಸಿಕ ಸಮಸ್ಯೆಗಳೂ ಇಲ್ಲಿವೆ. ಅಂಥ ಅತ್ಯಂತ ಗಂಡಾಂತರಕಾರಿ ಅಂಶಗಳಲ್ಲಿ ಹುಸಿಮದ್ದಿನ ಪರಿಣಾಮವು ಒಂದಾಗಿದ್ದು, ಇದು ಔಷಧದಲ್ಲಿನ ಒಂದು ಚೆನ್ನಾಗಿ-ಪ್ರಮಾಣೀಕರಿಸಲ್ಪಟ್ಟ ವೀಕ್ಷಣೆಯಾಗಿದೆ.[೧೦೫] ಇದಕ್ಕೆ ಸಂಬಂಧಿಸಿದ ಇತರ ಅಂಶಗಳಲ್ಲಿ, ನಂಬುವುದಕ್ಕಿರುವ[೧೦೨] ಸಂಕಲ್ಪದಂತೆಯೇ ಇರುವ ಮಾನಸಿಕ ಪರಿಣಾಮಗಳು, ಸಮರಸದ ಸಾಮಾಜಿಕ ಕಾರ್ಯಚಟುವಟಿಕೆಯನ್ನು[೧೦೨] ಪ್ರವರ್ತಿಸುವಲ್ಲಿ ಮತ್ತು ಸ್ವಾಭಿಮಾನವನ್ನು ಕಾಯ್ದುಕೊಂಡು ಹೋಗುವಲ್ಲಿ ನೆರವಾಗುವ ಅರಿವಿಗೆ ಸಂಬಂಧಿಸಿದ ಪೂರ್ವಗ್ರಹಗಳು ಮತ್ತು ಪೋಸ್ಟ್‌ ಹಾಕ್‌, ಎರ್ಗೋ ಪ್ರಾಪ್ಟರ್‌ ಹಾಕ್‌ ಭ್ರಾಮಕತೆ ಇವು ಸೇರಿವೆ.[೧೦೨]

ಜೀವೌಷಧಿಯ ಚಿಕಿತ್ಸೆಗಳಿಂದ ಉಂಟಾಗುವ ನೋವಿನಿಂದ ಕೂಡಿದ, ಹಿತವಲ್ಲದ, ಮತ್ತು ಕೆಲವೊಮ್ಮೆ ಅಪಾಯಕಾರಿಯಾದ ಪಾರ್ಶ್ವ ಪರಿಣಾಮಗಳನ್ನು ರೋಗಿಗಳೂ ಸಹ ಒಲ್ಲದವರಾಗಬಹುದು. ಕ್ಯಾನ್ಸರ್‌ ಮತ್ತು HIV ಸೋಂಕಿನಂಥ ತೀವ್ರಸ್ವರೂಪದ ಕಾಯಿಲೆಗಳಿಗಾಗಿರುವ ಚಿಕಿತ್ಸೆಗಳು ಸುಪರಿಚಿತವಾದ, ಗಮನಾರ್ಹವಾದ ಪಾರ್ಶ್ವ ಪರಿಣಾಮಗಳನ್ನು ಹೊಂದಿವೆ. ಪ್ರತಿಜೀವಕಗಳಂಥ ಕಡಿಮೆ-ಅಪಾಯದ ಔಷಧೀಕರಣಗಳೂ ಸಹ ಕೆಲವೇ ವ್ಯಕ್ತಿಗಳಲ್ಲಿ ಜೀವ-ಬೆದರಿಕೆಯೊಡ್ಡುವ ಅತಿ ಸಂವೇದನಶೀಲತೆಯ ಪ್ರತಿಕ್ರಿಯೆಗಳನ್ನು ಉಂಟುಮಾಡುವಷ್ಟು ಸಮರ್ಥವಾಗಿರುತ್ತವೆ. ಹೆಚ್ಚು ಸಾಮಾನ್ಯವಾಗಿ ಹೇಳುವುದಾದರೆ, ಕೆಮ್ಮು ಅಥವಾ ಹೊಟ್ಟೆ ಕೆಡಿಸುವಿಕೆಯಂಥ ಗೌಣವಾದರೂ ಪೀಡಿಸುವ ಕುರುಹುಗಳನ್ನು ಅನೇಕ ಔಷಧೀಕರಣಗಳು ಉಂಟುಮಾಡಬಹುದು. ಈ ಎಲ್ಲಾ ನಿದರ್ಶನಗಳಲ್ಲಿ, ಸಾಂಪ್ರದಾಯಿಕ ಚಿಕಿತ್ಸೆಗಳ ಪ್ರತಿಕೂಲ ಪರಿಣಾಮಗಳನ್ನು ತಪ್ಪಿಸಲೆಂದು ರೋಗಿಗಳು ಪರ್ಯಾಯ ಚಿಕಿತ್ಸೆಗಳನ್ನು ಅರಸುತ್ತಿರುವ ಸಾಧ್ಯತೆಗಳಿರುತ್ತವೆ.[೧೦೨][೧೦೪]

ಇದರ ಜನಪ್ರಿಯತೆಯು ಇತರ ಅಂಶಗಳಿಗೆ ಸಂಬಂಧಿಸಿರಬಹುದು. ಎಡ್‌ಜರ್ಡ್‌ ಅರ್ನ್‌ಸ್ಟ್‌ ಜೊತೆಗಿನ ಸಂದರ್ಶನವೊಂದರಲ್ಲಿ ದಿ ಇಂಡಿಪೆಂಡೆಂಟ್‌ ಹೀಗೆ ಬರೆಯಿತು:

"ಹಾಗಿದ್ದಲ್ಲಿ, ಇದು ಅಷ್ಟೇಕೆ ಜನಪ್ರಿಯವಾಗಿದೆ? ಅರ್ನ್‌ಸ್ಟ್‌ ಈ ಕುರಿತಾಗಿ ದೂಷಿಸುತ್ತಾ, ಔಷಧಿ ಒದಗಿಸುವವರ, ಗ್ರಾಹಕರ ಮತ್ತು ವೈದ್ಯರ ಉಪೇಕ್ಷೆಯು ಒಂದು ಅವಕಾಶವನ್ನು ಸೃಷ್ಟಿಸಿದ್ದು, ಅದರೊಳಗೆ ಪರ್ಯಾಯ ಚಿಕಿತ್ಸಕರು ಅಡಿಯಿಟ್ಟಿದ್ದಾರೆ ಎಂದು ಹೇಳುತ್ತಾನೆ. "ಜನರಿಗೆ ಸುಳ್ಳುಗಳನ್ನು ಹೇಳಲಾಗುತ್ತಿದೆ. ಇಲ್ಲಿ ಏನಿಲ್ಲವೆಂದರೂ 40 ದಶಲಕ್ಷ ವೆಬ್‌ಸೈಟ್‌ಗಳಿದ್ದು, ಅವುಗಳ ಪೈಕಿ 39.9 ದಶಲಕ್ಷ ವೆಬ್‌ಸೈಟ್‌ಗಳು ಸುಳ್ಳುಗಳನ್ನು, ಕೆಲವೊಮ್ಮೆಯಂತೂ ಅತಿರೇಕದ ಸುಳ್ಳುಗಳನ್ನು ಹೇಳುತ್ತವೆ. ಅವು ಕ್ಯಾನ್ಸರ್‌ ರೋಗಿಗಳನ್ನು ದಾರಿತಪ್ಪಿಸುತ್ತವೆ. ಸದರಿ ರೋಗಿಗಳು ತಮ್ಮ ಕಟ್ಟಕಡೆಯ ನಯಾಪೈಸೆಯನ್ನೂ ಖರ್ಚುಮಾಡುವಂತೆ ಉತ್ತೇಜಿಸಲ್ಪಡುತ್ತಾರಾದರೂ, ಅವರ ಜೀವಗಳನ್ನೇ ಮೊಟಕುಗೊಳಿಸುವಂಥ ವಸ್ತುಗಳಿಂದ ಅವರು ಉಪಚರಿಸಲ್ಪಡುತ್ತಾರೆ. ಅದೇ ವೇಳೆಗೆ, ಜನರನ್ನು ವಂಚಿಸುವುದೂ ಸಹ ಸುಲಭವಾಗಿದೆ. ಯಶಸ್ವಿಯಾಗಬೇಕೆಂದರೆ ಸುಲಭವಾಗಿ ವಂಚಿಸುವ ಸಾಮರ್ಥ್ಯವನ್ನು ಹೊಂದುವುದು ಉದ್ಯಮಕ್ಕೆ ಅಗತ್ಯವಾಗಿರುತ್ತದೆ. ಹೀಗೆ ಹೇಳುವುದರಿಂದ ನಾನು ಸಾರ್ವಜನಿಕರ ವಲಯದಲ್ಲಿ ಜನಪ್ರಿಯನಾಗದಿರಬಹುದು, ಆದರೆ ಇದೇ ಸತ್ಯ" ಎಂದು ಆತ ಅಭಿಪ್ರಾಯಪಡುತ್ತಾನೆ.[೧೦೬]

ಅಧ್ಯಯನಕ್ಕೆ ಸಂಬಂಧಿಸಿದ ಆಕರಗಳು

  • ಪರ್ಯಾಯ ಮತ್ತು ಪೂರಕ ಔಷಧದ ಕುರಿತಾದ ನಿಯತಕಾಲಿಕ
  • ನಾಲೆಜ್‌ ಅಂಡ್‌ ರಿಸರ್ಚ್‌ ಸೆಂಟರ್‌ ಫಾರ್‌ ಆಲ್ಟರ್‌ನೆಟಿವ್‌ ಮೆಡಿಸಿನ್ಸ್‌: ಕೊಖ್ರೇನ್‌ ಅಂಡ್‌ ಆಲ್ಟರ್‌ನೆಟಿವ್‌ ಮೆಡಿಸಿನ್‌, ನೋಡಿ: http://www.vifab.dk/uk/ಕೊಖ್ರೇನ್‌+and+alternative+medicine[ಶಾಶ್ವತವಾಗಿ ಮಡಿದ ಕೊಂಡಿ]

ಇವನ್ನೂ ನೋಡಿ

  • ಪರ್ಯಾಯ ಔಷಧದ ಕುರಿತಾದ ಲೇಖನಗಳ ಪರಿವಿಡಿ
  • ಪರ್ಯಾಯ ಔಷಧದ ಇತಿಹಾಸ
  • ಪೂರಕ ಔಷಧದ ಮೌಲ್ಯಮಾಪನ ಮಾಡುವಿಕೆಗೆ ಸಂಬಂಧಿಸಿದ ಕಾರ್ಯಸೂಚಿ
  • ಪರ್ಯಾಯ ಕ್ಯಾನ್ಸರ್‌ ಚಿಕಿತ್ಸೆಗಳು
  • ಪರ್ಯಾಯ ಔಷಧದ ಶಾಖೆಗಳ ಪಟ್ಟಿ
  • ಔಷಧದ ಟೀಕೆ
  • ಸಾಂಪ್ರದಾಯಿಕ ಔಷಧ
  • ಆರೋಗ್ಯ ಸ್ವಾತಂತ್ರ್ಯದ ಆಂದೋಲನ
  • ಶಕೂರ್‌‌ v. ಸಿಟು
  • ಕರಾರುವಾಕ್ಕಾದ-ಆಣ್ವಿಕ ಔಷಧದ ನಿಯತಕಾಲಿಕ
  • ಮನೆಯ ಔಷಧ ಪರಿಹಾರ

ಉಲ್ಲೇಖಗಳು

ಹೆಚ್ಚಿನ ಓದಿಗಾಗಿ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆ

ಪರ್ಯಾಯ ಔಷಧದ ಸಂಶೋಧನೆಗೆ ಸಮರ್ಪಿಸಿಕೊಂಡಿರುವ ನಿಯತಕಾಲಿಕಗಳು

ಹೆಚ್ಚಿನ ಓದಿಗಾಗಿ

  • Bausell, R. Barker (2007). Snake Oil Science: The Truth About Complementary and Alternative Medicine. Oxford University Press. ISBN 978-0-19-531368-0.
  • ಬೆನೆಡೆಟ್ಟಿ F, ಮ್ಯಾಗಿ G, ಲೋಪಿಯಾನೊ L. "ಓಪನ್‌ ವರ್ಸಸ್‌ ಹಿಡನ್‌ ಮೆಡಿಕಲ್‌ ಟ್ರೀಟ್‌ಮೆಂಟ್ಸ್‌: ದಿ ಪೇಷೆಂಟ್ಸ್‌ ನಾಲೆಜ್‌ ಎಬೌಟ್‌ ಎ ಥೆರಪಿ ಅಫೆಕ್ಟ್ಸ್ ದಿ ಥೆರಪಿ ಔಟ್‌ಕಮ್‌." ಪ್ರಿವೆನ್ಷನ್‌ & ಟ್ರೀಟ್‌ಮೆಂಟ್‌ , 2003; 6 (1), APA ಆನ್‌ಲೈನ್‌
  • ಬಿವಿನ್ಸ್‌, ರಾಬರ್ಟಾ "ಆಲ್ಟರ್‌ನೆಟಿವ್‌ ಮೆಡಿಸಿನ್‌?: ಎ ಹಿಸ್ಟರಿ" ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌ 2008
  • ಡೈಮಂಡ್‌, J. ಸ್ನೇಕ್‌ ಆಯಿಲ್‌ ಅಂಡ್‌ ಅದರ್‌ ಪ್ರೀಆಕ್ಯುಪೇಷನ್ಸ್‌ , 2001, ISBN 0-09-942833-4, ಮುನ್ನುಡಿ: ರಿಚರ್ಡ್‌ ಡಾಕಿನ್ಸ್‌‌, R.ಡಾಕಿನ್ಸ್‌‌ನ ಎ ಡೆವಿಲ್‌'ಸ್‌ ಚಾಪ್ಲೇನ್‌‌ ನಲ್ಲಿ ಮರುಮುದ್ರಿಸಲ್ಪಟ್ಟಿತು, 2003, ISBN 0-7538-1750-0 .
  • Downing AM, Hunter DG (2003). "Validating clinical reasoning: a question of perspective, but whose perspective?". Manual Therapy. 8 (2): 117–9. doi:10.1016/S1356-689X(02)00077-2. PMID 12890440. {{cite journal}}: Unknown parameter |month= ignored (help)
  • Eisenberg DM (1997). "Advising patients who seek alternative medical therapies". Annals of Internal Medicine. 127 (1): 61–9. doi:10.1059/0003-4819-127-1-199707010-00010. PMID 9214254. {{cite journal}}: Unknown parameter |doi_brokendate= ignored (help); Unknown parameter |month= ignored (help)
  • Gunn IP (1998). "A critique of Michael L. Millenson's book, Demanding medical excellence: doctors and accountability in the information age, and its relevance to CRNAs and nursing". AANA Journal. 66 (6): 575–82. PMID 10488264. {{cite journal}}: Unknown parameter |month= ignored (help)
  • Hand, Wayland Debs (1980). "Folk Magical Medicine and Symbolism in the West". Magical Medicine. Berkeley: University of California Press. pp. 305–19. ISBN 9780520041295. OCLC 6420468.
  • Illich, Ivan (1976). Limits to medicine : medical nemesis : the expropriation of health. Penguin. ISBN 9780140220094. OCLC 4134656.
  • Mayo Clinic (2007). Mayo Clinic Book of Alternative Medicine: The New Approach to Using the Best of Natural Therapies and Conventional Medicine. Parsippany, New Jersey: Time Inc Home Entertainment. ISBN 978-1-933405-92-6.
  • Phillips Stevens Jr. (2001). "Magical Thinking in Complementary and Alternative Medicine". Skeptical Inquirer Magazine. {{cite journal}}: Unknown parameter |month= ignored (help)
  • Planer, Felix E. (1988). Superstition (Revised ed.). Buffalo, New York: Prometheus Books. ISBN 9780879754945. OCLC 18616238.
  • Rosenfeld, Anna (circa 2000). "Where Do Americans Go for Healthcare?". Cleveland, Ohio: Case Western Reserve University. Archived from the original on 9 ಮೇ 2006. Retrieved 23 September 2010. {{cite web}}: Check date values in: |year= (help)
  • Singh, S (2008). Trick or treatment: The undeniable facts about alternative medicine. Norton. ISBN 9780393066616. OCLC 181139440. {{cite book}}: Unknown parameter |coauthors= ignored (|author= suggested) (help); Unknown parameter |isbn-status= ignored (help); preview at Google Books
  • Tonelli MR (2001). "The limits of evidence-based medicine". Respiratory Care. 46 (12): 1435–40, discussion 1440–1. PMID 11728302. {{cite journal}}: Unknown parameter |month= ignored (help)
  • Trivieri Larry, Jr.; Anderson, John W., eds. (2002). Alternative Medicine: The Definitive Guide. Berkeley: Ten Speed Press. ISBN 978-1-58761-141-4.
  • Wisneski LA, Anderson L (2005). The Scientific Basis of Integrative Medicine. CRC Press. ISBN 0-8493-2081-X.
  • Zalewski Z (1999). "Importance of philosophy of science to the history of medical thinking". CMJ. 40 (1): 8–13. Archived from the original on 2004-02-06.

ಬಾಹ್ಯ ಕೊಂಡಿಗಳು

ಟೀಕೆ