ಪಾಪ್‌ಕಾರ್ನ್

ಪಾಪ್‌ಕಾರ್ನ್
Popcorn on the cob, freshly harvested.
ಹುರಿದ ಪಾಪ್‌ಕಾರ್ನ್
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Monocots
(ಶ್ರೇಣಿಯಿಲ್ಲದ್ದು):
Commelinids
ಗಣ:
Poales
ಕುಟುಂಬ:
Poaceae
ಕುಲ:
Zea
ಪ್ರಜಾತಿ:
Z. mays
Subspecies:
Z. m. averta
Trinomial name
Zea mays averta

ಮೆಕ್ಕೆ ಜೋಳದ ತೆನೆಗಳನ್ನು ಕಾಯಿಸಿದಾಗ ಅವುಗಳು ಅರಳಿ ಪಾಪ್‌ಕಾರ್ನ್ ಎಂದೆನಿಸುತ್ತವೆ. ‍ಚಾರ್ಲ್ಸ್ ಕ್ರೇಟರ್ಸ್ ಎಂಬುವವರು ಮೊದಲ ಬೃಹತ್ ಪ್ರಮಾಣದ ಪಾಪ್‌ಕಾರ್ನ್ ತಯಾರಿಸುವ ಯಂತ್ರವನ್ನು ಕಂಡುಹಿಡಿದರು. ಒಂದು ಅಂದಾಜಿನಂತೆ ಸುಮಾರು ೯೦೦೦ ಸಾವಿರ ವರ್ಷಗಳಿಂದಲೆ ಮಾನವನಿಗೆ ಪಾಪ್‌ಕಾರ್ನ್ ತಯಾರಿಸುವ ವಿಧಾನಗಳ ಬಗ್ಗೆ ಅರಿವಿತ್ತು. ಗ್ರೇಟ್ ಡಿಪ್ರೆಶನ್ ಸಮಯದಲ್ಲಿ ಪಾಪ್‌ಕಾರ್ನ್ ಅಮೇರಿಕದ ಜನ-ಸಾಮಾನ್ಯರನ್ನು ತಲುಪಿತು. ಇಂದು ವಿಶ್ವದಾದ್ಯಂತ ಪಾಪ್‌ಕಾರ್ನ್ ಒಂದು ಖಾದ್ಯ ತಿಂಡಿಯಾಗಿ ಜನಪ್ರೀಯಗೊಂಡಿದೆ.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಪಾಪ್‌ಕಾರ್ನ್ ಜೋಳವನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ ವಿದೇಶಿ ಆಮದು ಪರಿಣಾಮ ರೈತರು ಬೆಳೆದ ಬೆಳೆಗೆ ಬೇಡಿಕೆ ಇಲ್ಲವಾಗಿದೆ. ಕೆಲ ರೈತರು ಪಾಪ್‌ಕಾರ್ನ್ ಜೋಳವನ್ನು ಅಗ್ಗದ ಬೆಲೆಗೆ ಕೋಳಿ ಫಾರಂಗಳಿಗೆ ಮಾರುತ್ತಿದ್ದಾರೆ.ವಿದೇಶದಿಂದ ಪುರಿ ಜೋಳ (ಪಾಪ್‌ಕಾರ್ನ್) ಯಾವುದೇ ಕಾರಣಕ್ಕೂ ಆಮದು ಮಾಡಿಕೊಳ್ಳಬಾರದು. ದೇಶಿಯ ಪುರಿ ಜೋಳಕ್ಕೆ ಆದ್ಯತೆ ನೀಡಬೇಕೆ ಹೊರತು ವಿದೇಶದಿಂದ ಪುರಿ ಜೋಳ ಆಮದು ಮಾಡಿಕೊಳ್ಳಬಾರದು ಎಂದು ರೈತ ಮುಖಂಡ ಅಶ್ವತ್ಥ್‌ರೆಡ್ಡಿ ಆಗ್ರಹಿಸಿದರು.