ಫ್ರಾನ್ಸಿಸ್ ಬೆಕನ್

ಪ್ರಾನ್ಸಿಸ್ ಬೆಕನ್ (ಜ. ೨೨ ಜನವರಿ ೧೫೬೧. ಮ. ೯ ಏಪ್ರಿಲ್ ೧೬೨೬) ಎಲಿಜಬೆಥನ್ ಕಾಲದ ಲೇಖಕ, ಇಂಗ್ಲೀಷ್ ತತ್ವವೇತ್ತ ಮತ್ತು ರಾಜಕೀಯ ದುರೀಣ ಎಂದು ಗುರುತಿಸಲಾಗಿದೆ. ಅವನು ಅಟಾರ್ನಿ ಜನರಲ್ ಆಗಿಯೂ ಮತ್ತು ಲಾರ್ಡ್ ಚಾನ್ಸಲರ್ ಆಫ್ ಇಂಗ್ಲೆಂಡ್ ಆಗಿಯೂ ಸೇವೆ ಸಲ್ಲಿಸಿದ್ದ. ಅವನ ಕೃತಿಗಳು ವಿಜ್ಞಾನದ ಪದ್ಧತಿಯ ಬೆಳ‌ಣಿಗೆಗೆ ಕಾರಣವಾದವು ಮತ್ತು ಅವನು ಪ್ರಭಾವವನ್ನು ವೈಜ್ಞಾನಿಕ ಕ್ರಾಂತಿಯ ಕಾಲದಾದ್ಯಂತ ನೋಡ ಬಹುದು.[೧]

ಫ್ರಾನ್ಸಿಸ್ ಬೆಕನ್
ಪ್ರಾನ್ಸಿಸ್ ಬೆಕನ್‌ನ ಚಿತ್ರ, ಫ್ರಾನ್ಸ್ ಪೋರಬಸ್ರವರಿಂದ (೧೬೧೭), ವಾರ್ಸ ಪ್ಯಾಲೇಸ್ ಆಫ್ ವಾಟರ್.
ಜನನ೨೨ ಜನವರಿ ೧೫೬೧
ಸ್ಟ್ರಾಂಡ್ಲಂಡನ್, ಇಂಗ್ಲೆಂಡ್
ಮರಣ೯ ಏಪ್ರಿಲ್ ೧೬೨೬ (ವಯಸ್ಸು ೬೫)
ಹೈಗೇಟ್, ಮಿಡ್ಲ್‌ಸೆಕ್ಸ್, ಇಂಗ್ಲೆಂಡ್
ರಾಷ್ಟ್ರೀಯತೆಇಂಗ್ಲೀಷ್
ಕಾಲಮಾನ೧೭ನೆಯ ಶತಮಾನದ ಇಂಗ್ಲೀಷ್ ಪುನರುತ್ಥಾನ
ವಿಜ್ಞಾನ ಕ್ರಾಂತಿ
ಪ್ರದೇಶಪಾಶ್ಚಿಮಾತ್ಯ ತತ್ವವೇತ್ತ
ಪರಂಪರೆಪುನರುತ್ಥಾನ ತತ್ವಜ್ಞಾನ
ಅನುಭವಜನ್ಯವಾದ
ಅಧ್ಯಯನ ಮಾಡಿದ ಸಂಸ್ಥೆಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯ
ಪ್ರಭಾವಕ್ಕೋಳಗಾಗು
  • Presocratics (Democritus, Empedocles, Parmenides), Plato, Aristotle, Cicero, Niccolò Machiavelli, Michel de Montaigne, Vanoccio Biringuccio, Bernard Palissy, Bernardino Telesio, William Gilbert, Roger Bacon
ಪ್ರಭಾವ ಬೀರು
  • ಥಾಮಸ್ ಹಾಬ್ಸ್, ಇಸಾಕ್ ನ್ಯೂಟನ್, ಜಾನ್ ಲಾಕೆ, ವಿಲಿಯಂ ಪೆಟ್ಟಿ, Encyclopédistes, Basil Montagu, Thomas Jefferson
ಸಹಿ

ಅವನನ್ನು ಅನುಭವಜನ್ಯ ವಿಧಾನ (empiricism)ದ ಜನಕ ಎಂದು ಗುರುತಿಸಲಾಗುತ್ತದೆ. [೨] ಅವನ ಕೃತಿಗಳು ವಿಜ್ಞಾನದ ಅರಿವಿನ ಸಾಧ್ಯತೆಯು ಅನುಗಮನ ತರ್ಕ (inductive reasoning or logic) ಮತ್ತು ಪ್ರಕೃತಿಯನ್ನು ಎಚ್ಚರಿಕೆಯಿಂದ ಅವಲೋಕಿಸುವುದರಿಂದ ಸಾಧ್ಯವಾಗುತ್ತದೆ ಎಂಬ ನಿಲುವು ತಾಳುತ್ತವೆ. ವಿಜ್ಞಾನಿಗಳು ಸಂದೇಹವಾದಿ ಮತ್ತು ಕ್ರಮಬದ್ಧ ಮಾರ್ಗವನ್ನು ಅನುಸರಿಸುವ ಮೂಲಕ ದಾರಿತಪ್ಪಿಸುವ ಚಿಂತನೆಗಳಿಂದ ಬಚಾವಾಗಬಹುದು ಎಂದು ಅವನು ವಾದಿಸುತ್ತಾನೆ. ಅವನ ಚಿಂತನೆಗಳನ್ನು ‘ಬೆಕೊನನ ಪದ್ಧತಿ’ ಎಂದು ಕರೆಯಲಾಗಿದ್ದು ಅವು ಬಹುಕಾಲ ನಿಲ್ಲಲಿಲ್ಲವಾದರೂ ಅವನ ಸಂದೇಹವಾದಿ ಪದ್ಧತಿಯ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಅವನನ್ನು ವಿಜ್ಞಾನ ಪದ್ಧತಿಯ ಜನಕ ಎಂದು ಹೇಳಬಹುದು. ಈ ಪದ್ಧತಿಯ ಹೊಸದಾಗಿತ್ತು ಮತ್ತು ವಿಜ್ಞಾನಕ್ಕೆ ಕಾರ್ಯೋಪಯೋಗಿ ತಾತ್ವಿಕ ಚೌಕಟ್ಟನ್ನು ಒದಗಿಸಿತು. ಈ ತಾತ್ವಿಕ ಚೌಕಟ್ಟು ಇಂದೂ ಸಹ ವಿಜ್ಞಾನ ಮತ್ತು ಅದರ ಪದ್ಧತಿಯ ಬಗೆಗೆನ ಚರ್ಚೆಗೆ ಕೇಂದ್ರವಾಗಿದೆ.

ಪ್ರಭಾವ

'ದಿ ಹಿಸ್ಟರಿ ಆಫ್ ರಾಯಲ್-ಸೊಸೈಟಿ ಆಫ್ ಲಂಡನ್' ಗೆ ಮುಂಭಾಗದ ತುಣುಕು, ಸೊಸೈಟಿಯ ಸ್ಥಾಪಕ ಪ್ರಭಾವಗಳಲ್ಲಿ ಬೆಕನ್ (ಬಲಕ್ಕೆ) ಚಿತ್ರಿಸುತ್ತದೆ - ನ್ಯಾಷನಲ್ ಪೋರ್ಟ್ರೇಟ್ ಗ್ಯಾಲರಿ, ಲಂಡನ್

ವಿಜ್ಞಾನ

ಅವನ ಪ್ರಮುಖ ಕೃತಿಗಳಲ್ಲೊಂದಾದ ನೋವಮ್ ಆರ್ಗನಮ್ ೧೬೩೦ ಮತ್ತು ೧೬೫೦ ರ ದಶಕಗಳಲ್ಲಿ ಪ್ರಭಾವಯುತವಾಗಿತ್ತು. ಈ ಕೃತಿಯ ಪ್ರಕಾರ ಅವಲೋಕನ ಮತ್ತು ಅನುಗಮನ ತರ್ಕ ವಿಜ್ಞಾನ ಪದ್ಧತಿಗೆ ಆಧಾರ. ಅಂದಿನ ಹಲವು ಮೂಢನಂಬಿಕೆಗಳನ್ನು ಪ್ರಶ್ನಿಸಿದ ಥಾಮಸ್ ಬ್ರೌನ್‌ನ ಕೃತಿಯಾದ ಸ್ಯೂಡೋಡಾಕ್ಸಿಯಾ ಎಪಿಡೆಮಿಕಾ ಅಥವಾ ವಲ್ಗರ್ ಎರರ್ಸ್ (ಮೊದಲ ಆವೃತ್ತಿ ೧೬೪೬ ಮತ್ತು ಕೊನೆಯದು ೧೬೭೨) ಬೆಕಾನ್ ಪದ್ಧತಿಯನ್ನು ಅನುಸರಿಸಿತು.

ಫ್ರಾನ್ಸಿಸ್ ಬೆಕನ್ ಪ್ರಕಾರ, ಕಲಿಕೆ ಮತ್ತು ಅರಿವು ಅನುಗಮನ ತಾರ್ಕದ ಆಧಾರದ ಮೇಲೆ ನಿಂತಿವೆ. ಪ್ರಾಯೋಗಿಕ ಅರಿವನ್ನು ಬಳಸಬಹುದು ಎಂಬ ತನ್ನ ನಂಬಿಕೆಯಿಂದಾಗಿ ಅವನು, ಒಂದು ಪರಿಕಲ್ಪನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಗತ್ಯವಾದ ಎಲ್ಲಾ ಜ್ಞಾನವನ್ನು ಅನುಮನದಿಂದ ಪಡೆಯ ಬಹುದು ಎಂದು ಸಿದ್ಧಾಂತೀಕರಿಸಿದ. ಅನುಗಮನ ತರ್ಕದ ಮೂಲಕ ತೀರ್ಮಾನಗಳನ್ನು ಕೈಗೊಳ್ಳಲು, ಯಾವುದೇ ವಿದ್ಯಮಾನದ ವಿವರಗಳನ್ನು (ಪ್ರಕೃತಿಯ ನಿರ್ದಿಷ್ಟ ಭಾಗಗಳು) ಗಮನಿಸುವ ಮಹತ್ವವನ್ನು ಪರಿಗಣಿಸಬೇಕು ಎಂದು ಅವನು ಬಾವಿಸಿದ. "ಒಮ್ಮೆ ಈ ವಿವರಗಳನ್ನು ಕಲೆಹಾಕಿದ ನಂತರ, ಪ್ರಕೃತಿಯ ಬಗೆಗಿನ ವ್ಯಾಖ್ಯಾನವನ್ನು ಕಲೆಹಾಕಿದ ವಿವರಗಳನ್ನು ಅರ್ಥೈಸುವ ನಿಟ್ಟಿನಲ್ಲಿ ಔಪಚಾರಿಕವಾಗಿ ವ್ಯವಸ್ಥೆಗೊಳಿಸ ಬೇಕು."[೩] ಪ್ರಯೋಗಗಳು ಪ್ರಕೃತಿಯ ಸತ್ಯಗಳನ್ನು ಕಂಡುಹಿಡಿಯಲು ಅವಶ್ಯಕ. ಪ್ರಯೋಗವೊಂದನ್ನು ಮಾಡಿದಾಗ, ಪರಿಶೀಲಿಸಲಾದ ಪ್ರಮೇಯ ಅಥವಾ ಹೈಪಾಥೀಸಿಸ್‌ನ ಭಾಗಗಳನ್ನು ಒಟ್ಟಿಗೆ ಜೋಡಿಸುವುದು ಆರಂಭವಾಗುತ್ತದೆ ಮತ್ತು ಪರಿಣಾಮವಾಗಿ ಫಲಿತಾಂಶ ಮತ್ತು ತೀರ್ಮಾನಗಳು ರೂಪಗೊಳ್ಳುತ್ತವೆ. ಹೀಗೆ ಈ ಬಿಡಿ ತೀರ್ಮಾನಗಳ ಮೂಲಕ ಪ್ರಕೃತಿಯನ್ನು ಅರಿಯ ಬಹುದು. ಈಗ ನಾವು ಈ ತೀರ್ಮಾನಗಳ ಮೂಲಕ ಅನುಗಮನದ ತೀರ್ಮಾನವನ್ನು ರೂಪಿಸ ಬಹುದು. “ಏಕೆಂದರೆ, ಯಾರೂ ಒಂದು ವಸ್ತುವಿನ ಸ್ವಬಾವವನ್ನು ವಸ್ತುವಿನಲ್ಲಿಯೇ ಹುಡುಕಿ ಯಶಸ್ಸು ಗಳಿಸಲಾರರು; ಯಶಸ್ವೀ ತನಿಖೆಯನ್ನು ವಸ್ತುಗಳಿಗೆ ಸಾಮಾನ್ಯವಾಗಿರುವವನ್ನು ಗುರುತಿಸುವ ಮೂಲಕ ಹಿಗ್ಗಿಸಿದಾಗಲಷ್ಟೇ ಇದು ಸಾಧ್ಯ” [೪]


ಉಲ್ಲೇಖಗಳು