ಮೈತೇಯಿ ಭಾಷೆ

ಮೈತೇಯಿ (/ˈmeɪteɪ/; মৈতৈলোন্, ರೋಮನೈಸ್ಡ್: "ಮೈಟೆಇಲೋನ್")[೨] ಅಧಿಕೃತವಾಗಿ ಮಣಿಪುರಿ (/ˌmænɪˈpʊəri/, /mʌ-/; মণিপুরী) ಎಂದು ಕರೆಯಲಾಗುತ್ತದೆ. ಇದು ಭಾರತದ ಈಶಾನ್ಯದ ಟಿಬೆಟೊ-ಬರ್ಮನ್ ಭಾಷೆಯಾಗಿದೆ. ಇದು ಮಣಿಪುರದ ಅಧಿಕೃತ ಭಾಷೆ ಮತ್ತು ಸಂಪರ್ಕ ಭಾಷೆಯಾಗಿದೆ, ಜೊತೆಗೆ ಭಾರತೀಯ ಗಣರಾಜ್ಯದ 22 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ.[೩] ಇದನ್ನು ಭಾರತೀಯ ಸಂವಿಧಾನದ 8 ನೇ ಶೆಡ್ಯೂಲ್‌ನಲ್ಲಿ ಸೇರಿಸಲಾಗಿದೆ. ಇದು ಸಾಹಿತ್ಯಿಕ ಭಾಷೆಗಳಲ್ಲಿ ಒಂದಾಗಿದ್ದು ಸಾಹಿತ್ಯ ಅಕಾಡೆಮಿಯಿಂದ ಗುರುತಿಸಲ್ಪಟ್ಟಿದೆ. ಅಸ್ಸಾಂ ಮತ್ತು ತ್ರಿಪುರಾದಲ್ಲಿ ಮಾನ್ಯತೆ ಪಡೆದ ಶೈಕ್ಷಣಿಕ ಮತ್ತು ಸಾಹಿತ್ಯಿಕ ಭಾಷೆಗಳಲ್ಲಿ ಒಂದಾಗಿದೆ.[೪][೫] ಮೈತೇಯಿ ಜನರಿಗೆ ಸ್ಥಳೀಯವಾಗಿದ್ದು, ಸುಮಾರು 3 ಮಿಲಿಯನ್ ಮಾತನಾಡುವವರನ್ನು ಹೊಂದಿದೆ ಮತ್ತು ಇದನ್ನು ಸುಮಾರು 1.8 ಮಿಲಿಯನ್ ಜನರು ಪ್ರಥಮ ಭಾಷೆಯಾಗಿ ಬಳಸುತ್ತಾರೆ.[೬] ಪ್ರಧಾನವಾಗಿ ಮಣಿಪುರ ರಾಜ್ಯದಲ್ಲಿ ಮತ್ತು ಎರಡನೆಯ ಭಾಷೆಯಾಗಿ ವಿವಿಧ ಸಮುದಾಯದ ಗುಂಪುಗಳಲ್ಲಿ, ಭಾರತದ ವಿವಿಧ ಭಾಗಗಳಲ್ಲಿ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ಮಾತನಾಡುತ್ತಾರೆ. ಮಣಿಪುರ ರಾಜ್ಯ ಸಂವಿಧಾನದ ಕಾಯಿದೆ 1947ರ ಪ್ರಕಾರ ಐತಿಹಾಸಿಕ ಮಣಿಪುರ ಸಾಮ್ರಾಜ್ಯದಲ್ಲಿ ಇದನ್ನು ನ್ಯಾಯಾಲಯದ ಭಾಷೆಯಾಗಿ ಬಳಸಲಾಯಿತು.[೭] [೮] [೯] [೧೦]

ಮೈತೇಯಿ
মৈতৈ
ಬಳಕೆಯಲ್ಲಿರುವ 
ಪ್ರದೇಶಗಳು:
ಈಶಾನ್ಯ ಭಾರತ, ಬಾಂಗ್ಲಾದೇಶ, ಬರ್ಮಾ
ಒಟ್ಟು 
ಮಾತನಾಡುವವರು:
1.8 ಮಿಲಿಯ
ಭಾಷಾ ಕುಟುಂಬ:
 (ಟಿಬೆಟೋ-ಬರ್ಮನ್)
  ಕುಕಿಶ್ ?
   ಮೈತೇಯಿ 
ಬರವಣಿಗೆ:ಬಂಗಾಳಿ ಅಕ್ಷರಮಾಲೆ (ಪ್ರಸ್ತುತ)
ಮೈತೇಯಿ ಮಾಯೆಕ್ ವರ್ಣಮಾಲೆ (historical)[೧] 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಭಾರತ (ಮಣಿಪುರ)
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1:ಯಾವುದೂ ಇಲ್ಲ
ISO 639-2:mni
ISO/FDIS 639-3:

ಮಣಿಪುರದಲ್ಲಿ ಈ ವರ್ಗಕ್ಕೆ ಸೇರಿದ ಜನರು ಹಮರ್, ಅನಲ್, ನಂಗ್ತೆ ಭಾಷೆಗಳನ್ನಾಡುವವರಿದ್ದಾರೆ. ಲಖೇರ್ ಎಂಬ ಭಾಷೆಯನ್ನು ಅಸ್ಸಾಂ, ಮಣಿಪುರ, ತ್ರಿಪುರಾಗಳಲ್ಲೂ ಮಾತನಾಡುತ್ತಾರೆ.[೧೧] [೧೨] ಮಣಿಪುರಿ, ಲುಶಾಯಿ ಮರಸುಮ್ ಭಾಷೆಗಳೂ ಇವೆ. ಅಲ್ಲದೆ ತಂಗ್‌ಖುಲ್, ವೈಪೈ, ಪೈತೆ, ಜೋವ್ ಎಂಬ ಭಾಷೆಗಳನ್ನು ಮಣಿಪುರ ಮತ್ತು ಅಸ್ಸಾಂನ ಬೇರೆ ಬೇರೆ ಭಾಗಗಳಲ್ಲಿ ಮಾತನಾಡುತ್ತಾರೆ. ಇವುಗಳಲ್ಲಿ ಅಸ್ಸಾಮಿ ಮತ್ತು ಬರ್ಮಿ ಭಾಷೆಗಳ ಪ್ರಭಾವ ಹೆಚ್ಚು.

ಉಲ್ಲೇಖಗಳು

.

ಬಾಹ್ಯ ಉಲ್ಲೇಖಗಳು