ಮೈಲಿ

ಮೈಲಿ ೫,೨೮೦ ಅಡಿಗಳಿಗೆ (೧,೭೬೦ ಗಜಗಳು, ಅಥವಾ ಸುಮಾರು ೧,೬೦೯ ಮೀಟರ್‍ಗಳು) ಸಮಾನವಾದ ಉದ್ದದ ಏಕಮಾನ. ೫,೨೮೦ ಅಡಿಗಳ ಮೈಲಿಯನ್ನು ನಾವಿಕ ಮೈಲಿಯಿಂದ (ಸುಮಾರು ೬,೦೭೬ ಅಡಿಗಳು, ಅಥವಾ ೧,೮೫೨ ಮೀಟರ್‌ಗಳು) ಪ್ರತ್ಯೇಕಿಸಲು ಅದನ್ನು ಭೂ ಮೈಲಿ ಎಂದು ಕರೆಯಬಹುದು. ೧೯೫೯ರ ಅಂತರರಾಷ್ಟ್ರೀಯ ಗಜ ಮತ್ತು ಪೌಂಡ್ ಒಪ್ಪಂದ ಗಜವನ್ನು ನಿಖರವಾಗಿ ೦.೯೧೪೪ ಮೀಟರ್‌ಗಳೆಂದು ಪ್ರಮಾಣೀಕರಿಸುವವರೆಗೆ ಭೂ ಮೈಲಿಯ ನಿಖರವಾದ ಉದ್ದ ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ಬದಲಾಗುತ್ತಿತ್ತು, ಮತ್ತು ಇದಾದ ಮೇಲೆ ಒಂದು ಮೈಲಿ ನಿಖರವಾಗಿ ೧,೬೦೯.೩೪೪ ಮೀಟರ್‌ಗಳೆಂದಾಯಿತು.'ಮೈಲಿ' ಸಹ ನಾವಿಕ ಮೈಲಿ (ಈಗ ೧.೮೫೨ ಕಿಮೀ ನಿಖರವಾಗಿ), ಇಟಾಲಿಯನ್ ಮೈಲಿ (ಸುಮಾರು ೧.೮೫೨ ಕಿಮೀ), ಮತ್ತು ಚೀನೀ ಮೈಲಿ (ಈಗ 500 ನಿಖರವಾಗಿ) ಬೇರೆ ಮೈಲಿಗಳಿಗೆ ಹೆಚ್ಚು ಕಮ್ಮಿ ಸಮಾನವಾಗಿದೆ. ಇದನ್ನು ವಿವರಿಸಲು ರೋಮನ್ ಮೈಲಿ ಸಮನಾಗಿರುತ್ತದೆ. ಈ ಮೈಲಿನಿಂದನೇ ಉತ್ಪಾದಿತ ಆಗಿರುವ ವಿವಿಧ ಮೈಲಿಗಳು ವಿವಿಧ ದೇಶಗಳಲ್ಲಿ ಬಳಕೆಯಲ್ಲಿವೆ . ರೋಮನ್ನರು ೫೦೦೦ ಅಡಿಯನ್ನು ಒಂದು ಮೈಲಿಯಾಗಿ ಮಾಡಿದ್ದರು.