ಮೀಟರ್

ಉದ್ದವನ್ನು ಅಳೆಯುವ ಮಾಪನ

ಮೀಟರ್ ಎಂಬುದು ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯಲ್ಲಿ (en:SI units) ಉದ್ದದ ಅಳತೆಯ ಮೂಲ ಪ್ರಮಾಣ. ಐತಿಹಾಸಿಕವಾಗಿ ಇದು ಭೂಮಿಯ ಸಮಭಾಜಕ ವೃತ್ತದಿಂದ ಉತ್ತರ ಧ್ರುವದ ವರೆಗಿನ ದೂರದ ೧೦ ಮಿಲಿಯನ್ರ ಒಂದು ಭಾಗವಾಗಿ ನಿರ್ಧಾರಿತವಾಯಿತು. ಈ ಅಳತೆಯನ್ನು ಫ್ರಾನ್ಸ್ನ ವಿಜ್ಞಾನ ಪರಿಷತ್ತಿನಲ್ಲಿ ಒಂದು ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿಯ ಮೇಲೆ ಎರಡು ಗೆರೆಗಳಿಂದ ಸೂಚಿತವಾಗಿತ್ತು. ಈಗ ತೂಕ ಮತ್ತು ಅಳತೆಗಳ ಅಂತರರಾಷ್ಟ್ರೀಯ ಪ್ರಾಧಿಕಾರವು ಈ ಅಳತೆಯನ್ನು ಬೆಳಕು ಒಂದು ಕ್ಷಣದ (೨೯೯,೭೯೨,೪೫೮ನೇ) ಭಾಗದಲ್ಲಿ ಚಲಿಸುವ ದೂರವಾಗಿ ನಿರ್ದಿಷ್ಟ ಮಾಡಿದೆ. ಬೆಳಕಿನ ವೇಗ: ಅತ್ಯಂತ ಕರಾರುವಾಕ್ಕಾಗಿ ನಿರ್ವಾತ ಪ್ರದೇಶದಲ್ಲಿ 299,792,458 ಮೀ / ಸೆಕೆಂಡ್ (186,282.397 ಮೈಲಿ / ಸೆಕೆಂಡ್) (ಒಂದು ಸೆಕಂಡಿಗೆ) ಅಳೆಯಲಾಗಿದೆ, ಅದರ ಪ್ರಕಾರ 1ಮೀ = 1/299,792,458 (ಅಂದಾಜು 3ಲಕ್ಷ ಕಿ.ಮೀ.)[೧]

ಐತಿಹಾಸಿಕವಾಗಿ ಮೀಟರ್‍ನ ಅಳತೆಯನ್ನು ಸೂಚಿಸುತ್ತಿದ್ದ ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿ

SI ಪದ್ಧತಿಯಲ್ಲಿ ಮೀಟರ್ ಆಧಾರಿತ ಇತರ ಮಾಪನಗಳು

SI ಪದ್ಧತಿಯ ಪ್ರಕಾರ ಮೂಲ ಮಾಪನಗಳ ದಶಕಾಂಶಗಳನ್ನು ಇತರ ಮಾಪನಗಳಾಗಿ ಉಪಯೋಗಿಸಲ್ಪಡುತ್ತವೆ. ಈ ರೀತಿಯ ಮಾಪನಗಳ ಪಟ್ಟಿ ಕೆಳಗಿದೆ. ಪ್ರಮುಖ ಮಾಪನಗಳನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದೆ.[೨]

  • ಇದು ಮೀಟರ್ ಮಾಪನದ ಲೆಖ್ಖದಲ್ಲಿದೆ ೧೦=೧x೧೦ಮೀಟರ್ ; ೧೦-೧= ೧/೧೦ ಮೀ.ಸೆಂ.ಮೀ=೧/೧೦೦ಮೀ.(?)
ದಶಕಾಂಶಹೆಸರುಚಿಹ್ನೆದಶಕಾಂಶಹೆಸರುಚಿಹ್ನೆ
10−1ಡೆಸಿಮೀಟರ್dm101ಡೆಸಿಮೀಟರ್dam
10−2ಸೆಂಟಿಮೀಟರ್cm102ಹೆಕ್ಟೋಮೀಟರ್hm
10−3ಮಿಲಿಮೀಟರ್'mm103ಕಿಲೋಮೀಟರ್km
10−6ಮೈಕ್ರೋಮೀಟರ್µm106ಮೆಗಾಮೀಟರ್Mm
10−9ನ್ಯಾನೋಮೀಟರ್nm109ಗಿಗಾಮೀಟರ್Gm
10−12ಪಿಕೋಮೀಟರ್pm1012ಟೆರಾಮೀಟರ್Tm
10−15ಫೆಮ್ಟೋಮೀಟರ್ (fermi)fm1015ಪೇಟಾಮೀಟರ್Pm
10−18ಅಟ್ಟೋಮೀಟರ್am1018ಎಕ್ಸಾಮೀಟರ್Em
10−21ಝೆಪ್ಟೋಮೀಟರ್zm1021ಜೆಟ್ಟಾಮೀಟರ್Zm
10−24ಯೊಕ್ಟೋಮೀಟರ್ym1024ಯೊಟ್ಟಾ ಮೀಟರ್Ym