ರೋಮಂಥಕ

ರೋಮಂಥಕಗಳು ಜೀರ್ಣಕ್ರಿಯೆಗೆ ಮುನ್ನ ಒಂದು ವಿಶೇಷೀಕೃತ ಹೊಟ್ಟೆಯಲ್ಲಿ ಆಹಾರವನ್ನು (ಪ್ರಧಾನವಾಗಿ ಸೂಕ್ಷ್ಮಜೀವಿಕ ಕ್ರಿಯೆಗಳಿಂದ) ಕಿಣ್ವನಕ್ಕೆ ಗುರಿಪಡಿಸುವ ಮೂಲಕ, ಸಸ್ಯಾಧಾರಿತ ಆಹಾರದಿಂದ ಪೋಷಕಾಂಶಗಳನ್ನು ಪಡೆಯಬಲ್ಲ ಸಸ್ತನಿಗಳು. ಈ ಪ್ರಕ್ರಿಯೆಯು ಜೀರ್ಣಾಂಗ ವ್ಯವಸ್ಥೆಯ ಮುಂಭಾಗದಲ್ಲಿ ನಡೆಯುತ್ತದೆ ಮತ್ತು ಹಾಗಾಗಿ ಇದನ್ನು ಮುಂಗರುಳು ಕಿಣ್ವನ ಎಂದು ಕರೆಯಲಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ ಕಿಣ್ವನಕ್ಕೆ ಗುರಿಯಾದ ಸೇವಿಸಿದ ವಸ್ತುವನ್ನು (ಮೆಲುಕು/ರೋಮಂಥ ಎಂದು ಕರೆಯಲ್ಪಡುತ್ತದೆ) ಕಕ್ಕಿ ಮತ್ತೊಮ್ಮೆ ಅಗಿಯುವ ಅಗತ್ಯವಿರುತ್ತದೆ. ಸಸ್ಯ ವಸ್ತುವನ್ನು ಮತ್ತಷ್ಟು ಜೀರ್ಣ ಮಾಡಿ ಜೀರ್ಣಕ್ರಿಯೆಯನ್ನು ಕೆರಳಿಸುವ ಸಲುವಾಗಿ ರೋಮಂಥವನ್ನು ಮತ್ತೊಮ್ಮೆ ಅಗಿಯುವ ಪ್ರಕ್ರಿಯೆಯನ್ನು ರೋಮಂಥನ ಎಂದು ಕರೆಯಲಾಗುತ್ತದೆ.[೧]

ರೋಮಂಥಕ ಜೀರ್ಣಾಂಗ ವ್ಯವಸ್ಥೆಯ ಚಿತ್ರ

ಅಸ್ತಿತ್ವದಲ್ಲಿರುವ ರೋಮಂಥಕಗಳ ಸರಿಸುಮಾರು ೨೦೦ ಪ್ರಜಾತಿಗಳಲ್ಲಿ ಪಳಗಿಸಿದ ಮತ್ತು ಕಾಡು ಪ್ರಜಾತಿಗಳು ಎರಡೂ ಸೇರಿವೆ. ರೋಮಂಥಕ ಸಸ್ತನಿಗಳಲ್ಲಿ ದನಗಳು, ಎಲ್ಲ ಪಳಗಿಸಿದ ಹಾಗೂ ಕಾಡು ಗೋಜಾತಿ ಪ್ರಾಣಿಗಳು, ಮೇಕೆಗಳು, ಕುರಿಗಳು, ಜಿರಾಫೆಗಳು, ಜಿಂಕೆಗಳು, ಗೆಜೆಲ್‍ಗಳು ಮತ್ತು ಎರಳೆಗಳು ಸೇರಿವೆ.

ಉಲ್ಲೇಖಗಳು