ಲೋಹಾಭ

ತುಲನಾತ್ಮಕವಾಗಿ ದುರ್ಬಲವಾದ ಲೋಹೀಯ ಮತ್ತು ಲೋಹವಲ್ಲದ ಗುಣಲಕ್ಷಣಗಳನ್ನು ಹೊಂದಿರುವ ರಾಸಾಯನಿಕ ಅಂಶ

ಲೋಹಾಭಗಳೆಂದರೆ ಲೋಹ ಮತ್ತು ಅಲೋಹಗಳೆರಡರ ನಡುವಿನ ಗುಣಲಕ್ಷಣಗಳನ್ನು ತೋರುವ ಅಥವಾ ಅವೆರಡರ ಗುಣಲಕ್ಷಣಗಳನ್ನು ತೋರುವ ಮೂಲವಸ್ತುಗಳು. ಇವುಗಳ ವಿಭಿನ್ನವಾದ ಮತ್ತು ವಿಚಿತ್ರವಾದ ಗುಣಲಕ್ಷಣಗಳನ್ನು ತೋರುವ ಗುಣದಿಂದಾಗಿ ಇವುಗಳಿಗೆ ನಿಖರವಾದ ವ್ಯಾಖ್ಯೆಯನ್ನು ನೀಡುವುದು ಕಷ್ಟ. ಈ ವಿಶೇಷ ಗುಣದ ಹೊರತಾಗಿಯೂ ಇವು ರಸಾಯನಶಾಸ್ತ್ರದ ಸಾಹಿತ್ಯದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿವೆ.

ಬೋರಾನ್
ಸಿಲಿಕಾನ್
ಜರ್ಮೇನಿಯಂ
ಆರ್ಸೆನಿಕ್

ಲೋಹಾಭಗಳ ವ್ಯಾಖ್ಯೆ

ಲೋಹಾಭಗಳು[೧] ಎಂಬ ಪದವನ್ನು ಸಾಮಾನ್ಯವಾಗಿ ಅಲೋಹಗಳಿಗೆ ಬಳಸಲಾಗುತ್ತಿತ್ತು. ಇವುಗಳ ಇತ್ತೀಚಿನ ವ್ಯಾಖ್ಯೆ ಎಂದರೆ ಇವು ಲೋಹ ಮತ್ತು ಅಲೋಹಗಳೆರಡರ ನಡುವಿನ ಗುಣಲಕ್ಷಣಗಳನ್ನು ತೋರುವ ಅಥವಾ ಅವೆರಡರ ಗುಣಲಕ್ಷಣಗಳನ್ನು ತೋರುವ ಮೂಲವಸ್ತುಗಳು. ಈ ತೆರನಾದ ವ್ಯಾಖ್ಯೆಯು ೧೯೪೦ ರಿಂದ ಹೆಚ್ಚು ಪ್ರಚಲಿತವಾಯಿತು[೨]. ಕೆಲವೊಮ್ಮೆ ಅವುಗಳನ್ನು ಅರೆಲೋಹಗಳು ಎಂದೂ ಕೂಡಾ ಕರೆಯಲಾಗುತ್ತದೆ. ಈ ಅರೆ ಲೋಹಗಳು ಎಂಬ ಪದವು ಸಾಮಾನ್ಯವಾಗಿ ರಾಸಾಯನ ಶಾಸ್ತ್ರಕ್ಕಿಂತ ಭೌತಶಾಸ್ತ್ರದಲ್ಲಿ ಹೆಚ್ಚು ಬಳಕೆಯಾಗುತ್ತದೆ.

ಲೋಹಾಭಗಳಿಗೆ ಉದಾಹರಣೆಗಳು

ಸಾಮಾನ್ಯವಾಗಿ ಗುರುತಿಸಲ್ಪಡುವ ಆರು ಲೋಹಾಭಗಳು

  1. ಬೋರಾನ್(Bo)
  2. ಸಿಲಿಕಾನ್(Si)
  3. ಜರ್ಮೇನಿಯಂ(Gr)
  4. ಆರ್ಸೆನಿಕ್ (Ar)
  5. ಆಂಟಿಮೊನಿ(An)
  6. ಟೆಲ್ಲರಿಯಂ(Tl)

ಭಾಗಶ: ಗುಣಗಳನ್ನು ಹೊಂದಿರುವ ಲೋಹಾಭಗಳು

  1. ಇಂಗಾಲ
  2. ಅಲ್ಯೂಮಿನಿಯಂ
  3. ಸೆಲೆನಿಯಂ
  4. ಪೊಲೊನಿಯಂ
  5. ಆಸ್ಟಾಟಿನ್

ಆವರ್ತ ಕೋಷ್ಟಕದಲ್ಲಿ ಲೋಹಾಭಗಳು

ಆವರ್ತ ಕೋಷ್ಟಕದಲ್ಲಿ ಲೋಹಾಭಗಳು 'ಪಿ' ಬ್ಲಾಕಿನಲ್ಲಿ ಕರ್ಣದುದ್ದಕ್ಕೂ ಕಂಡುಬರುತ್ತವೆ. ಇವುಗಳ ಗುಂಪು ಬೋರಾನ್ ನಿಂದ ಆರಂಭವಾಗಿ ಆಸ್ಟಾಟಿನ್ ನಲ್ಲಿ ಅಂತ್ಯಗೊಳ್ಳುತ್ತದೆ. ಕೆಲವು ಆವರ್ತಕ ಕೋಷ್ಟಕಗಳಲ್ಲಿ ಲೋಹಗಳು ಮತ್ತು ಅಲೋಹಗಳ ಮಧ್ಯೆ ವಿಭಾಗವನ್ನುಂಟು ಮಾಡುವ ಗೆರೆಯನ್ನು ಎಳೆಯಲಾಗಿರುತ್ತದೆ. ಲೋಹಾಭಗಳು ಈ ವಿಭಾಜಕದ ಅಕ್ಕ ಪಕ್ಕದಲ್ಲಿ ಕಂಡುಬರುತ್ತವೆ.

ಆವರ್ತಕ ಕೋಷ್ಟಕದಲ್ಲಿ ಲೋಹಾಭಗಳು


ಲೋಹಾಭಗಳ ಗುಣಲಕ್ಷಣಗಳು

ಲೋಹಾಭಗಳು[೩]ಗಳು ನೋಡಲು ಸಾಮಾನ್ಯವಾಗಿ ಲೋಹಗಳಂತೆ ಕಾಣುತ್ತವೆ. ಆದರೆ ಅವು ಪೆಡಸಾಗಿದ್ದು ಉತ್ತಮ ವಿದ್ಯುತ್ ವಾಹಕಗಳು. ರಾಸಾಯನಿಕವಾಗಿ ಅವು ಅಲೋಹಗಳ ಗುಣ ಲಕ್ಷಣಗಳನ್ನು ತೋರಿಸುತ್ತವೆ. ಆದರೆ ಅವು ಇತರೆ ಲೋಹಗಳೊಂದಿಗೆ ಸೇರಿ ಮಿಶ್ರ ಲೋಹಗಳನ್ನು ಉಂಟುಮಾಡಬಲ್ಲವು. ಅಲ್ಲದೇ ಅವುಗಳ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳು ಲೋಹ ಮತ್ತು ಅಲೋಹಗಳ ಗುಣ ಲಕ್ಷಣಗಳ ಮಧ್ಯದ ಸ್ಥಿತಿಯಲ್ಲಿರುತ್ತವೆ. ಅವುಗಳ ಪೆಡಸು ಗುಣದಿಂದಾಗಿ ಅವುಗಳಿಂದ ಕಠಿಣವಾದ ವಸ್ತುಗಳನ್ನು ಮಾಡುವುದು ಕಷ್ಟ. ಅವುಗಳನ್ನು ಮತ್ತು ಅವುಗಳ ಸಂಯುಕ್ತಗಳನ್ನು ಮಿಶ್ರಲೋಹಗಳ ತಯಾರಿಕೆಗೆ, ಜೈವಿಕ ಏಜೆಂಟ್ ಗಳಾಗಿ, ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕಕಗಳಾಗಿ, ಸೆಮಿ ಕಂಡಕ್ಟರ್ ಗಳ ತಯಾರಿಕೆಯಲ್ಲಿ, ಗಾಜಿನ ತಯಾರಿಕೆಯಲ್ಲಿ ಮತ್ತಿತರ ಕಾರ್ಯಗಳಿಗೆ ಬಳಸುತ್ತಾರೆ. ಸಿಲಿಕಾನ್ ಮತ್ತು ಜರ್ಮೇನಿಯಂಗಳ ವಿದ್ಯುತ್ ವಾಹಕ ಗುಣಗಳಿಂದಾಗಿ ಅವುಗಳನ್ನು ಬಳಸಿಕೊಂಡು ಸೆಮಿ ಕಂಡಕ್ಟರ್ ಗಳನ್ನು ತಯಾರಿಸುವ ಉದ್ಯಮವು ೧೯೫೦ ರಿಂದ ಆರಂಭವಾಯಿತು. ಇವುಗಳಿಂದಾಗಿ ಎಲೆಕ್ರ್ಟಾನಿಕ್ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಿದೆ.

ಉಲ್ಲೇಖಗಳು