ಸ್ವಯಂಸೇವೆ

ಸ್ವಯಂಸೇವೆಯನ್ನು ಸಾಮಾನ್ಯವಾಗಿ ಪರಹಿತದ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಒಬ್ಬ ವ್ಯಕ್ತಿ ಅಥವಾ ಗುಂಪು ಮತ್ತೊಬ್ಬ ವ್ಯಕ್ತಿ, ಗುಂಪು ಅಥವಾ ಸಂಸ್ಥೆಗೆ ಪ್ರಯೋಜನವಾಗಲು ಯಾವುದೇ ಆರ್ಥಿಕ ಅಥವಾ ಸಾಮಾಜಿಕ ಲಾಭವಿಲ್ಲದೆಯೇ ಸೇವೆಗಳನ್ನು ಒದಗಿಸುತ್ತದೆ.[೧] ಸ್ವಯಂಸೇವೆಯು ಕೌಶಲ ಅಭಿವೃದ್ಧಿಗೂ ಖ್ಯಾತಿಪಡೆದಿದೆ ಮತ್ತು ಹಲವುವೇಳೆ ಒಳ್ಳೆತನವನ್ನು ಪ್ರಚಾರಮಾಡಲು ಅಥವಾ ಮಾನವ ಜೀವನದ ಗುಣಮಟ್ಟವನ್ನು ಸುಧಾರಿಸಲು ಉದ್ದೇಶಿತವಾಗಿರುತ್ತದೆ. ಸ್ವಯಂಸೇವೆಯು ಸ್ವಯಂಸೇವಕನಿಗೆ ಜೊತೆಗೆ ಸೇವೆ ಪಡೆಯುತ್ತಿರುವ ವ್ಯಕ್ತಿ ಅಥವಾ ಸಮುದಾಯಕ್ಕೆ ಸಕಾರಾತ್ಮಕ ಪ್ರಯೋಜನಗಳನ್ನು ಹೊಂದಿರಬಹುದು.[೨] ಇದು ಸಂಭಾವ್ಯ ಉದ್ಯೋಗಕ್ಕಾಗಿ ಸಂಪರ್ಕಗಳನ್ನು ಮಾಡಿಕೊಡಲು ಕೂಡ ಉದ್ದೇಶಿತವಾಗಿರುತ್ತದೆ. ಅನೇಕ ಸ್ವಯಂಸೇವಕರು ತಾವು ಕೆಲಸಮಾಡುವ ಕ್ಷೇತ್ರಗಳಲ್ಲಿ ನಿರ್ದಿಷ್ಟವಾಗಿ ತರಬೇತಿಪಡೆದಿರುತ್ತಾರೆ, ಉದಾಹರಣೆಗೆ ವೈದ್ಯವಿಜ್ಞಾನ, ಶಿಕ್ಷಣ ಅಥವಾ ತುರ್ತು ಸಹಾಯ.

೨೦೧೨ರ ಸ್ಯಾಂಡಿ ಚಂಡಮಾರುತದ ನಂತರ ಸ್ವಯಂಸೇವಕರು ಬ್ರೂಕ್ಲಿನ್‍ನಲ್ಲಿ ಮಗ್ಗುಲುದಾರಿಯನ್ನು ಗುಡಿಸುತ್ತಿರುವುದು.

ಉಲ್ಲೇಖಗಳು