ಹಸಿರುಮನೆ ಪರಿಣಾಮ

ಅವಗೆಂಪು ವಿಕಿರಣಗಳನ್ನು ಹೀರಿಕೊಳ್ಳುವ ಮತ್ತು ಅದನ್ನು ಹೊರಹಾಕುವ ವಿವಿಧ ಅನಿಲಗಳು ವಾತಾವರಣವೊಂದರಲ್ಲಿ ಸಂಗ್ರಹವಾಗುವ ಕಾರಣದಿಂದ ಗ್ರಹ ಅಥವಾ ಉಪಗ್ರಹವೊಂದರ ಮೇಲ್ಮೈ ಬಿಸಿಯಾಗುವುದನ್ನು ಹಸಿರುಮನೆ ಪರಿಣಾಮ ಎಂದು ಕರೆಯುತ್ತಾರೆ.[೧] ಈ ರೀತಿಯಾಗಿ ಹಸಿರುಮನೆ ಅನಿಲಗಳು ಬಿಸಿಯನ್ನು ಮೇಲ್ಮೈ,-ವಾಯುಮಂಡಲ ವ್ಯವಸ್ಥೆಯೊಳಗಡೆ ಬಂಧಿಸಿಡುತ್ತವೆ.[೨][೩][೪][೫]ಈ ಕಾರ್ಯವಿಧಾನವು ವಾಸ್ತವಿಕ ಹಸಿರುಮನೆಯೊಂದರದ್ದಕ್ಕಿಂತ ಮೂಲಭೂತವಾಗಿ ಭಿನ್ನವಾಗಿದ್ದು, ಅದು ಬಿಸಿ ಗಾಳಿಯನ್ನು ವ್ಯವಸ್ಥೆಯನ್ನು ಒಳಗೇ ಪ್ರತ್ಯೇಕಿಸುವ ಮೂಲಕ ಕಾರ್ಯನಿರ್ವಹಿಸುವುದರಿಂದ, ಲಂಬಗಮನದಿಂದ ತಾಪವು ನಷ್ಟವಾಗುವುದಿಲ್ಲ. ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಮೊದಲು 1824ರಲ್ಲಿ ಜೋಸೆಫ್ ಫೂರಿಯರ್ ಆವಿಷ್ಕರಿಸಿರು; ಜಾನ್‌ ಟಿಂಡಾಲ್‌ 1858ರಲ್ಲಿ ಇದರ ಕುರಿತು ಮತ್ತಷ್ಟು ಖಾತರಿಯಾದ ಪ್ರಯೋಗವನ್ನು ನಡೆಸಿದರು; ನಂತರ ಸ್ವಾಂಟೆ ಅರ್ರೇನಿಯಸ್ ಎಂಬ ವಿಜ್ಞಾನಿ 1896ರಲ್ಲಿ ಇದರ ಕುರಿತು ಪರಿಮಾಣಾತ್ಮಕವಾಗಿ ವರದಿ ಮಾಡಿದರು.[೬]ಭೂಮಿಯ ಮೇಲ್ಮೈಯಲ್ಲಿ ಹಸಿರುಮನೆ ಪರಿಣಾಮ ಮತ್ತು ವಾತಾವರಣ ಇಲ್ಲವಾದರೆ, 14 °C (57 °F) ಇರುವ ಭೂಮಿಯ ಸರಾಸರಿ ಮೇಲ್ಮೈ ತಾಪಮಾನವು[೭] ಭೂಮಿಯ ಕೃಷ್ಣಕಾಯ ತಾಪಮಾನ ಎಂದು ಹೇಳಲಾಗುವ -18 °C (−0.4 °F)ನಷ್ಟು ಅತಿ ಕಡಿಮೆ ಮಟ್ಟದವರೆಗೂ ಇಳಿಯಬಹುದು.[೮][೯][೧೦] ಭೂಮಿಯ ಮೇಲ್ಮೈ ಮತ್ತು ಕೆಳ ವಾತಾವರಣದಲ್ಲಿ[೧೧] ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಕಾವೇರುವಿಕೆಯಾದ ಮಾನವಜನ್ಯ ಜಾಗತಿಕ ತಾಪಮಾನ ಏರಿಕೆಯು (AGW)[೧೧], "ಹೆಚ್ಚಳಗೊಂಡಿರುವ ಹಸಿರುಮನೆ ಪರಿಣಾಮ"ದಿಂದ ಉಂಟಾಗಿದೆ ಎಂದು ನಂಬಲಾಗಿದ್ದು, ಇದಕ್ಕೆ ವಾತಾವರಣದ ಹಸಿರುಮನೆ ಅನಿಲಗಳಲ್ಲಿನ ಮಾನವನಿರ್ಮಿತ ಏರಿಕೆಯೇ ಪ್ರಮುಖ ಕಾರಣವಾಗಿದೆ.[೧೨]

ಭೂಮಿಯ ವಾತಾವರಣ, ಭೂಮಿಯ ಮೇಲ್ಮೈ ಮತ್ತು ಬಾಹ್ಯಾಕಾಶಗಳ ನಡುವೆ ನಡೆಯುವ ಶಕ್ತಿ ವಿನಿಮಯಗಳ ಯೋಜಿತ ನಿರೂಪಣೆ.ಭೂ ಮೇಲ್ಮೈ ಹೊರಸೂಸಿದ ಶಕ್ತಿಯನ್ನು ಹಿಡಿದಿಡುವ ಮತ್ತು ಮರುಬಳಸುವ ವಾತಾವರಣದ ಸಾಮರ್ಥ್ಯವು ಹಸಿರುಮನೆ ಪರಿಣಾಮದ ಗುಣಲಕ್ಷಣಗಳನ್ನು ವಿವರಿಸುತ್ತದೆ.

ಮೂಲಭೂತ ಕಾರ್ಯವಿಧಾನ

ಭೂಮಿಯ ಶಕ್ತಿಯ ಮೂಲ ಸೂರ್ಯ. ಈ ಶಕ್ತಿಯ ಬಹುತೇಕ ಭಾಗ ಕಣ್ಣಿಗೆ ಕಾಣುವ ಬೆಳಕಿನ ರೂಪದಲ್ಲಿ ಮತ್ತು ಹತ್ತಿರದ ತರಂಗಾಂತರಗಳ ರೂಪದಲ್ಲಿ ಭೂಮಿಗೆ ದೊರೆಯುತ್ತದೆ. ಸೂರ್ಯನ ಶಕ್ತಿಯ ಸುಮಾರು 50%ರಷ್ಟು ಭಾಗವನ್ನು ಭೂಮಿಯ ಮೇಲ್ಮೈ ಹೀರಿಕೊಳ್ಳುತ್ತದೆ. ಸಂಪೂರ್ಣ ಶೂನ್ಯಕ್ಕಿಂತ ಜಾಸ್ತಿಯಿರುವ ವಾತಾವರಣ ಹೊಂದಿರುವ ಎಲ್ಲ ಕಾಯಗಳಂತೆ ಭೂಮಿಯ ಮೇಲ್ಮೈ ಕೂಡಾ ಶಕ್ತಿಯನ್ನು ಅವಗೆಂಪು ಶ್ರೇಣಿಯಲ್ಲಿ ಹೊರಸೂಸುತ್ತದೆ. ಮೇಲ್ಮೈ ಹೊರಸೂಸಿದ ಬಹುತೇಕ ಅವಗೆಂಪು ವಿಕಿರಣವನ್ನು ವಾತಾವರಣದಲ್ಲಿರುವ ಹಸಿರುಮನೆ ಅನಿಲಗಳು ಹೀರಿಕೊಳ್ಳುತ್ತವೆ ಮತ್ತು ಹೀಗೆ ಹೀರಿಕೊಂಡ ಶಾಖವನ್ನು ಅಣುಗಳ ಸಂಘರ್ಷಣೆಯ ಮೂಲಕ ವಾಯುಮಂಡಲದ ಇತರೆ ಅನಿಲಗಳಿಗೂ ಸಾಗಿಸುತ್ತವೆ. ಹಸಿರುಮನೆ ಅನಿಲಗಳು ಅವಗೆಂಪು ಶ್ರೇಣಿಯಲ್ಲೂ ವಿಕಿರಣವನ್ನು ಹೊರಸೂಸುತ್ತವೆ. ವಿಕಿರಣವು ಮೇಲ್ಮುಖ ಮತ್ತು ಕೆಳಮುಖ ದಿಕ್ಕುಗಳೆರಡರ ಕಡೆಗೂ ಹೊರಹೊಮ್ಮಿ, ಒಂದಷ್ಟು ಭಾಗ ಬಾಹ್ಯಾಕಾಶದ ಕಡೆಗೆ ಮತ್ತಷ್ಟು ಭಾಗ ಭೂಮಿಯ ಮೇಲ್ಮೈ ಕಡೆಗೆ ಚಲಿಸುತ್ತದೆ. ಈ ರೀತಿ ಕೆಳಮುಖವಾಗಿ ಸೂಸಲ್ಪಟ್ಟ ಶಕ್ತಿಯ ಒಂದಷ್ಟು ಭಾಗದಿಂದ ಮೈಲ್ಮೈ ಮತ್ತು ಕೆಳ ವಾಯುಮಂಡಲ ಬಿಸಿಯಾಗುತ್ತವೆ. ಈ ಪ್ರಕ್ರಿಯೆಯು ಭೂಮಿಯ ಮೇಲಿನ ನಮ್ಮ ಬದುಕನ್ನು ಸಾಧ್ಯವಾಗಿಸಿದೆ.[೮]

ಹಸಿರುಮನೆ ಅನಿಲಗಳು

ಾಹರಣೆಗೆದಧ

ಭೂಮಿಯ ಅತಿ ಹೇರಳವಾದ ಹಸಿರುಮನೆ ಅನಿಲಗಳು ಅನುಕ್ರಮವಾಗಿ ಈ ಕೆಳಗಿನಂತಿವೆ:

  • ನೀರಿನ ಆವಿ
  • ಇಂಗಾಲದ ಡೈಆಕ್ಸೈಡ್‌
  • ಮೀಥೇನ್
  • ನೈಟ್ರಸ್‌ ಆಕ್ಸೈಡ್
  • ಓಝೋ‌ನ್‌
  • CFC ಅನಿಲಗಳು

ಹಸಿರುಮನೆ ಪರಿಣಾಮಕ್ಕೆ ಇವುಗಳ ಕೊಡುಗೆಯನ್ನು ಆಧರಿಸಿ ನೈಜ ವಾತಾವರಣ ನಿರ್ಧರಿಸಲ್ಪಡುತ್ತದೆ:[೧೩]

  • 36–70% ಕೊಡುಗೆ ನೀಡುವ ನೀರಿನ ಆವಿ
  • 9–26% ಕೊಡುಗೆ ಸಲ್ಲಿಸುವ ಇಂಗಾಲದ ಡೈಆಕ್ಸೈಡ್‌
  • 4–9%ರಷ್ಟು ಕೊಡುಗೆ ನೀಡುವ ಮೀಥೇನ್‌
  • 3–7%ರಷ್ಟು ಕೊಡುಗೆ ನೀಡುವ ಓಝೋನ್‌

ಭೂಮಿಯ ಹಸಿರುಮನೆ ಪರಿಣಾಮಕ್ಕೆ ಕಾರಣವಾಗಿರುವ ಪ್ರಮುಖ ಅನಿಲೇತರ ವಸ್ತುವಾದ ಮೋಡಗಳು ಕೂಡ ಅವಗೆಂಪು ವಿಕರಣವನ್ನು ಹೀರಿಕೊಂಡು ಹೊರಸೂಸುತ್ತವೆ. ಈ ರೀತಿ ವಾತಾವರಣದ ವಿಕಿರಣಕಾರಕ ಗುಣಲಕ್ಷಣಗಳ ಮೇಲೆ ಪರಿಣಾಮ ಬೀರುತ್ತವೆ.[೧೪]

ಮಾನವಜನ್ಯ ಹಸಿರುಮನೆ ಪರಿಣಾಮ

ಇಂಗಾಲದ ಡೈಆಕ್ಸೈಡ್‌ ಮಾನವ ಜನ್ಯ ಹಸಿರುಮನೆ ಅನಿಲವಾಗಿದ್ದು, ಇದು ಮಾನವ ಚಟುವಟಿಕೆಗಳಿಂದ ಉಂಟಾಗುವ ವಿಕಿರಣಕಾರಕ ಪ್ರಭಾವ‌ಕ್ಕೆ ಹೆಚ್ಚಿನ ಕಾಣಿಕೆಯನ್ನು ನೀಡುತ್ತದೆ.ಪಳೆಯುಳಿಕೆ ಇಂಧನಗಳನ್ನು ದಹಿಸುವ ಮೂಲಕ ಮತ್ತು ಸಿಮೆಂಟ್‌ ಉತ್ಪಾದನೆ ಹಾಗೂ ವಿಪರೀತ ಅರಣ್ಯನಾಶದಂತಹ ಇತರೆ ಮಾನವ ಚಟುವಟಿಕೆಗಳಿಂದ CO2 ಅನಿಲವು ಉತ್ಪಾದಿಸಲ್ಪಡುತ್ತದೆ.[೧೫] ಮೌನ ಲೋವ ವೀಕ್ಷಣಾಲಯದಿಂದ ಕೈಗೊಳ್ಳಲಾದ CO2 ಮಾಪನಗಳ ಪ್ರಕಾರ, 1960ರಲ್ಲಿ 313 ppm[೧೬] ನಷ್ಟು ಇದ್ದ ಸಾಂದ್ರೀಕರಣವು 2009ರ ವೇಳೆಗೆ ಸುಮಾರು 383 ppmಗೆ ಏರಿಕೆಯಾಗಿರುವುದು ಕಂಡುಬಂದಿದೆ. ಸದ್ಯಕ್ಕೆ ಕಂಡುಬಂದಿರುವ CO2ವಿನ ಪ್ರಮಾಣವು, ಹಿಮಗಡ್ಡೆಯ ದತ್ತಾಂಶದಿಂದ ಸಂಗ್ರಹಿಸಲಾದ ಭೂವೈಜ್ಞಾನಿಕ ದಾಖಲೆಯ ಗರಿಷ್ಠ(~300 ppm) ಪ್ರಮಾಣವನ್ನು ಮೀರುತ್ತದೆ.[೧೭]ಸ್ಸ್ವಾಂಟೆ ಅರ್ರೇನಿಯಸ್ ಎಂಬ ವಿಜ್ಞಾನಿಯಿಂದ 1896ರಲ್ಲಿ ಮೊಟ್ಟಮೊದಲು ವಿವರಿಸಲ್ಪಟ್ಟ, ಹಸಿರುಮನೆ ಪರಿಣಾಮದ ಒಂದು ವಿಶೇಷ ಪ್ರಕರಣವಾದ, ದಹನಕ್ರಿಯೆಯಿಂದ ಉಂಟಾಗುವ ಇಂಗಾಲದ ಡೈಆಕ್ಸೈಡ್‌ ಭೂಮಿಯ ವಾತಾವರಣದ ಮೇಲೆ ಉಂಟುಮಾಡುವ ಪರಿಣಾಮವನ್ನು ಕ್ಯಾಲೆಂಡರ್‌ ಪರಿಣಾಮ ಎಂದೂ ಕರೆಯುತ್ತಾರೆ.

ಇದೊಂದು ಹಸಿರುಮನೆ ಅನಿಲವಾಗಿರುವುದರಿಂದ, ವಾತಾವರಣದಲ್ಲಿನ ಉಷ್ಣದ ಅವಗೆಂಪಿನ ಹೆಚ್ಚುವರಿ ಹೀರಿಕೆ ಮತ್ತು ಹೊರಸೂಸುವಿಕೆಗೆ CO2ವಿನ ಏರಿಕೆಯಾದ ಮಟ್ಟಗಳು ತಮ್ಮದೇ ಆದ ಕಾಣಿಕೆಯನ್ನು ನೀಡುತ್ತವೆ. ಇದರಿಂದಾಗಿ ನಿವ್ವಳ ಬಿಸಿಯಲ್ಲೂ ಏರಿಕೆಯುಂಟಾಗುತ್ತದೆ.ವಾಸ್ತವವಾಗಿ, ಇಂಟರ್‌ಗವರ್ನ್‌ಮೆಂಟಲ್‌ ಪ್ಯಾನಲ್‌ ಆನ್‌ ಕ್ಲೈಮೇಟ್‌ ಚೇಂಜ್‌ ಸಂಸ್ಥೆಯ ನಿರ್ಧಾರಣಾ ವರದಿಗಳ ಪ್ರಕಾರ, "20ನೇ ಶತಮಾನದ ಮಧ್ಯಭಾಗದಿಂದಲೂ ಜಾಗತಿಕ ಸರಾಸರಿ ತಾಪಮಾನದಲ್ಲಿ ಕಂಡುಬಂದಿರುವ ಹೆಚ್ಚಳದಲ್ಲಿನ ಬಹುಪಾಲು ಭಾಗವು ಮಾನವಜನ್ಯ ಹಸಿರುಮನೆ ಅನಿಲಗಳ ಸಾಂದ್ರೀಕರಣದಲ್ಲಿ ಕಂಡುಬಂದ ಹೆಚ್ಚಳದಿಂದ ಉಂಟಾಗಿದೆ. "[೧೮]

ಇಂಗಾಲದ ಡೈಆಕ್ಸೈಡ್‌ನ ಮೌಲ್ಯವು ತೀರ ಕನಿಷ್ಟ ಮಟ್ಟವಾದ 180 ಪಾರ್ಟ್ಸ್ ಪರ್‌ ಮಿಲಿಯನ್‌ (ppm)ನಿಂದ ಕೈಗಾರಿಕಾ ಪೂರ್ವ ಮಟ್ಟವಾದ 270ppm ವರೆಗೂ ಏರಿಕೆಯಾಗಿದೆ ಎನ್ನುವುದನ್ನು ಕಳೆದ 800,000 ವರ್ಷಗಳಿಂದ [೧೯] ಇರುವ ಹಿಮಗಡ್ಡೆಯ ದತ್ತಾಂಶಗಳು ಸ್ಪಷ್ಟವಾಗಿ ತೋರಿಸುತ್ತವೆ.[೨೦] ಈ ಕಾಲಮಾಪಕದ ಮೇಲಿನ ಹವಾಮಾನ ಬದಲಾವಣೆಗಳನ್ನು ನಿಯಂತ್ರಿಸುವಲ್ಲಿ ಕಾರ್ಬನ್‌ ಡೈಆಕ್ಸೈಡ್‌ನಲ್ಲಿನ ಬದಲಾವಣೆ ಮೂಲಭೂತ ಅಂಶವಾಗಿರಬೇಕು ಎಂದು ಕೆಲವು ನಿರ್ದಿಷ್ಟ ಪ್ರಾಚೀನ ಹವಾಮಾನತಜ್ಞರು ಪರಿಗಣಿಸುತ್ತಾರೆ.[೨೧]

== ನೈಜ ಹಸಿರುಮನೆಗಳು==

RHS ವಿಸ್ಲೆಯಲ್ಲೊಂದು ಆಧುನಿಕ ಹಸಿರುಮನೆ

"ಹಸಿರುಮನೆ ಪರಿಣಾಮ" ಎನ್ನುವ ಪರಿಕಲ್ಪನೆ ಹಲವು ವೇಳೆ ಗೊಂದಲದ ಗೂಡಾಗಬಹುದು. ಏಕೆಂದರೆ, ವಾಸ್ತವಿಕ ಹಸಿರುಮನೆಗಳು ವಾತಾವರಣದಲ್ಲಿ ನಡೆಯುವ ಹಸಿರುಮನೆ ಪರಿಣಾಮದ ಪ್ರಕ್ರಿಯೆಯಂತೆ ಕಾರ್ಯನಿರ್ವಹಿಸುವುದಿಲ್ಲ. ವಿವಿಧ ವಸ್ತುಗಳು ಕೆಲವೊಮ್ಮೆ ತಾವು ಮಾಡುವುದನ್ನು ತಪ್ಪಾಗಿ ಸೂಚಿಸುತ್ತವೆ ಅಥವಾ ವಿಕಿರಣ ಮತ್ತು ಲಂಬಗಮನದ ಪ್ರಕ್ರಿಯೆಗಳ ನಡುವೆ ಭೇದ ಮಾಡುವುದಿಲ್ಲ.[೨೨]

'ಹಸಿರುಮನೆ ಪರಿಣಾಮ' ಎನ್ನುವ ಪದ ಮೂಲತಃ ತೋಟಗಾರಿಕೆಗಾಗಿ ಉಪಯೋಗಿಸುವ ಹಸಿರುಮನೆಗಳಿಂದ ಬಂದಿದೆ. ಆದರೆ ಈಗಾಗಲೇ ಹೇಳಿರುವಂತೆ ಹಸಿರುಮನೆಗಳ ಕಾರ್ಯವಿಧಾನ ಭಿನ್ನವಾಗಿರುತ್ತದೆ.[೨೩] ಅವಗೆಂಪು ವಿಕಿರಣವನ್ನು ಹೀರುವ ಅನಿಲಗಳ ವಿವಿಧ ಕಾರ್ಯವಿಧಾನಗಳ ಮೂಲಕ ವಾತಾವರಣವು ಹೇಗೆ ಕಾರ್ಯನಿರ್ವಹಿಸುತ್ತದೋ ಅದೇ ರೀತಿಯಲ್ಲೇ ಹಸಿರುಮನೆಯೂ ಲಂಬಗಮನವನ್ನು ಮಿತಿಯಲ್ಲಿಡುತ್ತದೆ ಎಂಬುದರ ಕುರಿತಾದ "ಶಾಖವನ್ನು ಹಿಡಿದಿಡುವ" ಹೋಲಿಕೆಯನ್ನು ಹಲವು ಮೂಲಗಳು ಮಾಡುತ್ತವೆ.[೨೪]

ಹಸಿರುಮನೆ ಸಾಮಾನ್ಯವಾಗಿ ಗಾಜು, ಪ್ಲಾಸ್ಟಿಕ್‌ ಅಥವಾ ಪ್ಲಾಸ್ಟಿಕ್‌ ರೀತಿಯ ವಸ್ತುಗಳಿಂದ ನಿರ್ಮಾಣವಾಗಿರುತ್ತದೆ. ಬಿಸಿಲಿನಿಂದಾಗಿ ಇದರೊಳಗಿನ ನೆಲವು ಬಿಸಿಯಾಗುವುದರಿಂದ ಹಸಿರುಮನೆಯು ಬಿಸಿಯಾಗಿ, ಅದರೊಳಗಿನ ಗಾಳಿಯೂ ಕೂಡ ಬಿಸಿಯಾಗುತ್ತದೆ.ಗಾಳಿಯು ಹಸಿರುಮನೆಯೊಳಗೇ ಬಂಧಿಸಲ್ಪಟ್ಟಿರುತ್ತದೆಯಾದ್ದರಿಂದ ಅದು ಬಿಸಿಯಾಗುತ್ತಲೇ ಹೋಗುತ್ತದೆ. ಆದರೆ ಹಸಿರುಮನೆಯ ಹೊರಗಡೆ ಇರುವ ವಾತಾವರಣ ಇದಕ್ಕಿಂತ ವಿಭಿನ್ನವಾಗಿದ್ದು, ಮೇಲ್ಮೈಯ ಸನಿಹ ಇರುವ ಬಿಸಿ ಗಾಳಿಯು ಮೇಲೇರಿ, ಎತ್ತರದ ಮಟ್ಟದಲ್ಲಿರುವ ತಂಪಾದ ಗಾಳಿಯ ಜೊತೆ ಬೆರೆಯುತ್ತದೆ. ಹಸಿರುಮನೆಯೊಂದರ ಛಾವಣಿಯ ಸಮೀಪವಿರುವ ಒಂದು ಸಣ್ಣ ಕಿಟಕಿಯನ್ನು ತೆರೆಯುವುದರ ಮೂಲಕ ಇದನ್ನು ಪ್ರತ್ಯಕ್ಷವಾಗಿ ನೋಡಬಹುದು: ಹೀಗೆ ಮಾಡಿದಾಗಿ ತಾಪಮಾನವು ಗಣನೀಯವಾಗಿ ಕುಸಿಯುವುದು ಕಂಡುಬರುತ್ತದೆ. ಗಾಜಿನ ಛಾವಣಿಯಿಂದ ನಿರ್ಮಿಸಲಾಗಿರುವ ಹಸಿರುಮನೆಯಲ್ಲಿ ಬಿಸಿ ಏರುವ ರೀತಿಯಲ್ಲಿಯೇ, ಕಲ್ಲುಪ್ಪಿನಿಂದ ಆವರಿಸಲ್ಪಟ್ಟ ಹಸಿರುಮನೆಯಲ್ಲೂ ಸಹ ಒಳಭಾಗವು ಬಿಸಿಯಾಗಿರುತ್ತದೆ ಎನ್ನುವುದನ್ನು ಪ್ರಯೋಗಾತ್ಮಕವಾಗಿ (ವುಡ್‌, 1909) ಈಗಾಗಲೇ ಕಂಡುಕೊಳ್ಳಲಾಗಿದೆ.[೨೫] ಈ ರೀತಿ ಹಸಿರುಮನೆಗಳು ಪ್ರಮುಖವಾಗಿ ಲಂಬಗಮನವನ್ನು ತಡೆಯುವ ಮೂಲಕ ಕಾರ್ಯನಿರ್ವಹಿಸುತ್ತವೆ; ಅದರೆ ವಾತಾವರದ ಹಸಿರುಮನೆ ಪರಿಣಾಮವು ವಿಕಿರಣ ನಷ್ಟ ವನ್ನು ಕಡಿಮೆ ಮಾಡುತ್ತದೆಯೇ ಹೊರತು ಲಂಬಗಮನ ವನ್ನಲ್ಲ.[೨೩][೨೬]

ಭೂಮಿಯನ್ನು ಹೊರತುಪಡಿಸಿದ ಕಾಯಗಳು

ನಮ್ಮ ಸೌರ ಮಂಡಲದಲ್ಲಿ, ಮಂಗಳ, ಶುಕ್ರಗ್ರಹಗಳು ಮತ್ತು ಉಪಗ್ರಹವಾದ ಟೈಟಾನ್‌ ಕೂಡ ಹಸಿರುಮನೆ ಪರಿಣಾಮವನ್ನು ಪ್ರದರ್ಶಿಸುತ್ತವೆ. ಟೈಟಾನ್‌ ಹಸಿರುಮನೆ ವಿರೋಧಿ ಪರಿಣಾಮವನ್ನು ಹೊಂದಿದೆ. ಇದರ ವಾತಾವರಣವು ಸೂರ್ಯನ ವಿಕಿರಣವನ್ನು ಹೀರಿಕೊಂಡರೂ, ಹೋಲಿಕೆಯಲ್ಲಿ ಇದು ಅವಗೆಂಪು ವಿಕಿರಣಗಳಿಗೆ ಪಾರದರ್ಶಕವಾಗಿರುತ್ತದೆ.ಪ್ಲೂಟೋ ಕೂಡ ಹಸಿರುಮನೆ ವಿರೋಧಿ ಪರಿಣಾಮದ ರೀತಿಯ ವರ್ತನೆಯನ್ನೇ ಪ್ರದರ್ಶಿಸುತ್ತದೆ.[೨೭][೨೮][೨೯]

ಒಂದು ವೇಳೆ ಗುಣಾತ್ಮಕ ಪ್ರತಿಕ್ರಿಯೆಯಿಂದಾಗಿ ಎಲ್ಲಾ ಹಸಿರುಮನೆ ಅನಿಲಗಳೂ ವಾತಾವರಣದೊಳಗೆ ಭಾಷ್ಪೀಭವನವಾಗುವಂತಾದರೆ, ಹತೋಟಿ ಮೀರಿದ ಹಸಿರುಮನೆ ಪರಿಣಾಮವು ಸಂಭವಿಸಬಹುದು.[೩೦] ಇಂಗಾಲದ ಡೈಆಕ್ಸೈಡ್‌ ಮತ್ತು ನೀರಿನ ಆವಿಯನ್ನು ಒಳಗೊಂಡ ಹತೋಟಿ ಮೀರಿದ ಹಸಿರುಮನೆ ಪರಿಣಾಮವು ಶುಕ್ರಗ್ರಹದಲ್ಲಿ ಸಂಭವಿಸಿರಬಹುದು.[೩೧]

ಇದನ್ನೂ ನೋಡಿರಿ

ಅಡಿಟಿಪ್ಪಣಿಗಳು

ಆಕರಗಳು

  • ಭೂಮಿಯ ವಿಕಿರಣ ರಾಶಿ, http://marine.rutgers.edu/mrs/education/class/yuri/erb.html Archived 2006-09-01 ವೇಬ್ಯಾಕ್ ಮೆಷಿನ್ ನಲ್ಲಿ.
  • ಫ್ಲೀಗಲ್‌ , RG ಮತ್ತು ಬ್ಯುಸಿಂಗರ್‌, JA: ಅನ್ ಇಂಟ್ರೊಡಕ್ಷನ್ ಟು ಅಟ್ಮಾಸ್ಫಿಯರಿಕ್ ಫಿಸಿಕ್ಸ್,2ನೇ ಆವೃತ್ತಿ , 1980
  • IPCC ನಿರ್ಧಾರಣಾ ವರದಿಗಳು, ನೋಡಿ http://www.ipcc.ch/
  • ಅನ್ನ್‌ ಹೆಂಡರ್ಸನ್‌-ಸೆಲ್ಲರ್ಸ‌ ಅಂಡ್‌ ಮ್ಯಾಕ್‌ಗುಫ್ಫೀ, K: ಎ ಕ್ಲೈಮೇಟ್‌ ಮಾಡೆಲಿಂಗ್‌ ಪ್ರಿಮಿಯರ್‌ (ಉಕ್ತಿ: ಹಸಿರುಮನೆ ಪರಿಣಾಮ: ಭೂ ಮೇಲ್ಮೈಗೆ ವಾಪಸ್ಸಾಗುವ ಉದ್ದ ತರಂಗಗಳ ವಿಕಿರಣವನ್ನು ಮರುಪರೀಕ್ಷಿಸುವಲ್ಲಿನ ವಾತಾವರಣದ ಪರಿಣಾಮ. ಮೇಲ್ಮೈಯಲ್ಲಿ ಬಿಸಿಗಾಳಿಯನ್ನು ಬಂಧಿಸುವ ಗಾಜಿನ ಮನೆಯೊಂದಿಗೆ ಇದಕ್ಕೆ ಸಂಬಂಧವಿಲ್ಲ ).
  • Idso, S.B.: "ಕಾರ್ಬನ್‌ ಡೈಆಕ್ಸೈಡ್‌: ಫ್ರೆಂಡ್‌ ಆರ್ ಫೋ," 1982 (ಉಕ್ತಿ: ಹಸಿರುಮನೆಯು ತನ್ನ ಒಳಾಂಗಣವನ್ನು ಬಿಸಿಯಾಗಿಟ್ಟುಕೊಳ್ಳುವುದನ್ನು ಹೋಲುವ ರೀತಿಯಲ್ಲಿ CO2 ಭೂಮಿಯನ್ನು ಬಿಸಿ ಮಾಡದಿರುವುದರಿಂದ, ...ವಾಕ್ಸರಣಿಯು ಒಂದು ರೀತಿಯಲ್ಲಿ ಅಸಮಂಜಸವಾಗಿದೆ ).
  • ಕೀಹಲ್‌, ಜೆ.ಟಿ., ಮತ್ತು ಟ್ರೆನ್‌ಬರ್ಥ್‌, ಕೆ. (1997). "ಭೂಮಿಯ ವಾರ್ಷಿಕ ಸರಾಸರಿ ಜಾಗತಿಕ ಶಕ್ತಿ ರಾಶಿ," ಅಮೆರಿಕನ್‌ ಮೀಟಿಯರಲಾಜಿಕಲ್‌ ಸೊಸೈಟಿ ಯ ಸಂಕ್ಷಿಪ್ತ ಪ್ರಕಟಣೆ.'78 (2), 197–208.