ಹುಲ್ಲುಮೈದಾನ

ಹುಲ್ಲುಮೈದಾನವು (ಹಸಲೆ) ಹುಲ್ಲುಗಳು ಮತ್ತು ಕ್ಲೋವರ್‌ನಂತಹ ಇತರ ತಾಳಿಕೆಯ ಸಸ್ಯಗಳನ್ನು ಬೆಳೆಸಲಾದ ಮಣ್ಣಿನಿಂದ ಆವೃತವಾದ ಭೂಪ್ರದೇಶ. ಇವುಗಳನ್ನು ಹುಲ್ಲುಗತ್ತರಿ (ಅಥವಾ ಕೆಲವೊಮ್ಮೆ ಮೇಯುವ ಪ್ರಾಣಿಗಳನ್ನು) ಬಳಸಿ ಗಿಡ್ಡವಾಗಿರುವಂತೆ ಕಾಪಾಡಲಾಗುತ್ತದೆ. ಇದನ್ನು ಸೌಂದರ್ಯ ಮತ್ತು ಮನೋರಂಜನಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಹುಲ್ಲುಮೈದಾನದ ಸಾಮಾನ್ಯ ಗುಣಲಕ್ಷಣಗಳೆಂದರೆ ಇದು ಕೇವಲ ಹುಲ್ಲಿನ ಪ್ರಜಾತಿಗಳನ್ನು ಹೊಂದಿರುತ್ತದೆ, ಕಳೆ ಮತ್ತು ಕೀಟ ನಿಯಂತ್ರಣಕ್ಕೆ ಒಳಪಡುತ್ತದೆ, ಇದು ಅದರ ಹಸಿರು ಬಣ್ಣವನ್ನು ಕಾಪಾಡುವ ಗುರಿಹೊಂದಿದ ಅಭ್ಯಾಸಗಳಿಗೆ ಒಳಪಡುತ್ತದೆ (ಉದಾ. ನೀರೆರೆಯುವುದು), ಮತ್ತು ಸ್ವೀಕಾರಾರ್ಹ ಎತ್ತರವನ್ನು ಖಚಿತಪಡಿಸಲು ಇದನ್ನು ನಿಯಮಿತವಾಗಿ ಕತ್ತರಿಸಲಾಗುತ್ತದೆ[೧], ಆದರೆ ವ್ಯಾಖ್ಯಾನವಾಗಿ ಈ ಲಕ್ಷಣಗಳು ಕಡ್ಡಾಯವಲ್ಲ. ಹುಲ್ಲುಮೈದಾನಗಳನ್ನು ಮನೆಗಳು, ಅಪಾರ್ಟ್‌ಮೆಂಟ್‍ಗಳು, ವಾಣಿಜ್ಯ ಕಟ್ಟಡಗಳು ಮತ್ತು ಕಚೇರಿಗಳ ಸುತ್ತ ಬಳಸಲಾಗುತ್ತದೆ. ಅನೇಕ ನಗರ ಉದ್ಯಾನಗಳು ಕೂಡ ದೊಡ್ಡ ಹುಲ್ಲುಮೈದಾನಗಳನ್ನು ಹೊಂದಿರುತ್ತವೆ.

ವರ್ಜೀನಿಯಾ ವಿಶ್ವವಿದ್ಯಾಲಯದ ದಕ್ಷಿಣಾಭಿಮುಖವಾಗಿರುವ ಹುಲ್ಲುಮೈದಾನ.

ಉಲ್ಲೇಖಗಳು