ಹೊಣೆಗಾರಿಕೆ

ನೀತಿಶಾಸ್ತ್ರ ಮತ್ತು ಆಡಳಿತದಲ್ಲಿ, ಹೊಣೆಗಾರಿಕೆ (ಜವಾಬ್ದಾರಿ) ಎಂದರೆ ಉತ್ತರದಾಯಿತ್ವ, ನಿಂದನಾರ್ಹತೆ, ಬಾಧ್ಯತೆ, ಮತ್ತು ಲೆಕ್ಕ ಕೊಡುವಿಕೆಯ ಅಪೇಕ್ಷೆ.[೧] ಆಡಳಿತದ ಅಂಶವಾಗಿ, ಇದು ಸಾರ್ವಜನಿಕ ವಲಯ, ಲಾಭರಹಿತ ಹಾಗೂ ಖಾಸಗಿ (ಕಾರ್ಪೊರೇಟ್) ಹಾಗೂ ವೈಯಕ್ತಿಕ ಸಂದರ್ಭದ ಸಮಸ್ಯೆಗಳಿಗೆ ಸಂಬಂಧಿಸಿದ ಚರ್ಚೆಗಳಿಗೆ ಕೇಂದ್ರಿಯವಾಗಿದೆ. ನಾಯಕತ್ವದ ಪಾತ್ರಗಳಲ್ಲಿ, ಹೊಣೆಗಾರಿಕೆ ಎಂದರೆ ಸ್ವೀಕೃತಿ ಹಾಗೂ ಪಾತ್ರದ ಅಥವಾ ಉದ್ಯೋಗ ಸ್ಥಾನದ ವ್ಯಾಪ್ತಿಯೊಳಗೆ ಆಡಳಿತ, ಹಾಗೂ ಅನುಷ್ಠಾನ ಸೇರಿದಂತೆ, ಕ್ರಿಯೆಗಳು, ಉತ್ಪನ್ನಗಳು, ನಿರ್ಧಾರಗಳು ಮತ್ತು ಕಾರ್ಯನೀತಿಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು. ಇದು ವರದಿ ಒಪ್ಪಿಸುವ, ವಿವರಿಸುವ ಮತ್ತು ಆಗುವ ಪರಿಣಾಮಗಳಿಗೆ ಉತ್ತರದಾಯಿಯಾಗಿರುವ ಬದ್ಧತೆಯನ್ನು ಒಳಗೊಳ್ಳುತ್ತದೆ.

ಅಡಿಟಿಪ್ಪಣಿಗಳು

ಬಾಹ್ಯ ಸಂಪರ್ಕಗಳು