೨೦೧೨ರ ಒಲಂಪಿಕ್ ಕ್ರೀಡಾಕೂಟ
೨೦೧೨ರ ಬೇಸಿಗೆಯ ಒಲಂಪಿಕ್ ಕ್ರೀಡಾಕೂಟ, ಅಧಿಕೃತವಾಗಿ ಗೇಮ್ಸ್ ಆಫ್ ೩೦ ಒಲಂಪಿಯಾಡ್ ಎಂದು ಕರೆಯಲ್ಪಡುವ ಕ್ರೀಡಾಕೂಟ, ಜುಲೈ ೨೭ ರಿಂದ ಆಗಸ್ಟ್ ೧೨ರವರೆಗೆ, ಲಂಡನ್ ನಗರದಲ್ಲಿ ನಡೆಯಿತು. ಒಟ್ಟು ೨೦೪ ರಾಷ್ತ್ರಿಯ ಒಲಂಪಿಕ್ ಕಮೀಟಿ ಗಳ ಪ್ರತಿನಿಧಿಗಳಾಗಿ ಒಟ್ಟು ೧೦೦೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.೨೦೦೫ರಲ್ಲಿ ಸಿಂಗಾಪುರ್ನಲ್ಲಿ ನಡೆದ ಅಂತರ ರಾಷ್ತ್ರೀಯ ಒಲಂಪಿಕ್ ಕಮೀಟಿ (ಐ ಒ ಸಿ) ಯ ೧೧೭ನೇ ಅಧಿವೇಶನದಲ್ಲಿ ೨೦೧೨ನೇ ಒಲಂಪಿಕ್ ಲಂಡನ್ ನಗರದಲ್ಲಿ ನಡೆಯುವುದೆಂದು ತೀರ್ಮಾನವಾಯಿತು. ಲಂಡನ್ ನಗರದ ಪರವಾಗಿ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಸೆಬಾಸ್ಟಿಯನ್ ಕೋ ಹಾಗು ಅಂದಿನ ಲಂಡನ್ ನ ಮಹಾಪೌರರಾದ ಕೆನ್ ಲಿವಿಂಗ್ ಸ್ಟೋನ್ ತಮ್ಮ ಬಿಡ್ ಅನ್ನು ಮಂಡಿಸಿದರು. ಇದೇ ಅಧಿವೇಶನದಲ್ಲಿ ನ್ಯೂ ಯಾರ್ಕ್, ಮಾಸ್ಕೋ, ಮಡ್ರಿಡ್ ಹಾಗು ಪ್ಯಾರಿಸ್ ನಗರಗಳು ೩೦ನೇ ಒಲಂಪಿಕ್ ನಡೆಸಲು, ತಮ್ಮ ಬಿಡ್ ಅನ್ನು ಸಲ್ಲಿಸಿದ್ದರು. ಅಂತಿಮವಾಗಿ ಲಂಡನ್ ನಗರಕ್ಕೆ ಒಲಂಪಿಕ್ ನಡೆಸುವ ಅವಕಾಶ ಸಿಕ್ಕಿತು.
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ