ಅಧ್ಯಾತ್ಮಜ್ಞಾನ

ಅಧ್ಯಾತ್ಮಜ್ಞಾನವನ್ನು ಜನಪ್ರಿಯವಾಗಿ ದೇವರು ಅಥವಾ ಪರಮಾತ್ಮನೊಂದಿಗೆ ಒಂದಾಗುವುದು ಎಂದು ತಿಳಿಯಲಾಗುತ್ತದೆ, ಆದರೆ ಅದು ಯಾವುದೇ ರೀತಿಯ ಭಾವಪರವಶತೆ ಅಥವಾ ಪ್ರಜ್ಞೆಯ ಬದಲಾದ ಸ್ಥಿತಿಯನ್ನು ಸೂಚಿಸಬಹುದು ಮತ್ತು ಇದಕ್ಕೆ ಧಾರ್ಮಿಕ ಅಥವಾ ಪಾರಮಾರ್ಥಿಕ ಅರ್ಥವನ್ನು ಕೊಡಲಾಗುತ್ತದೆ. ಅದು ಪರಮ ಅಥವಾ ರಹಸ್ಯವಾದ ಸತ್ಯಗಳಲ್ಲಿನ ಒಳನೋಟದ ಸಾಧನೆಯನ್ನು, ಮತ್ತು ವಿವಿಧ ಆಚರಣೆಗಳು ಮತ್ತು ಅನುಭವಗಳ ಬೆಂಬಲದಿಂದಾದ ಮಾನವ ರೂಪಾಂತರವನ್ನೂ ಸೂಚಿಸಬಹುದು.

ಆಧುನಿಕ ಕಾಲದಲ್ಲಿ, "ಅಧ್ಯಾತ್ಮಜ್ಞಾನ" ಪದವು ಸೀಮಿತ ವ್ಯಾಖ್ಯಾನವನ್ನು ಪಡೆದುಕೊಂಡಿದೆ. ಇದು ವಿಸ್ತಾರವಾದ ಅನ್ವಯಗಳನ್ನು ಹೊಂದಿದೆ, ಪರಮಾತ್ಮ, ಅನಂತ, ಅಥವಾ ದೇವರೊಂದಿಗೆ ಸೇರಿಕೆಯ ಗುರಿಯ ಅರ್ಥದಲ್ಲಿ. ಈ ಸೀಮಿತ ವ್ಯಾಖ್ಯಾನವನ್ನು ವ್ಯಾಪಕ ಧಾರ್ಮಿಕ ಸಂಪ್ರದಾಯಗಳು ಮತ್ತು ಆಚರಣೆಗಳಿಗೆ ಅನ್ವಯಿಸಲಾಗಿದೆ, ಮತ್ತು ಇದರಲ್ಲಿ ಅಧ್ಯಾತ್ಮಜ್ಞಾನದ ಪ್ರಮುಖ ಅಂಶವಾಗಿ "ಅಧ್ಯಾತ್ಮ ಅನುಭವ"ಕ್ಕೆ ಮಹತ್ವ ಕೊಡಲಾಗುತ್ತದೆ.

ಹಿಂದೂ ಧರ್ಮದಲ್ಲಿ, ವಿವಿಧ ಸಾಧನೆಗಳು ಅವಿದ್ಯೆಯನ್ನು ಜಯಿಸುವ ಮತ್ತು ಮೋಕ್ಷ ಪಡೆಯಲು ದೇಹ, ಮನಸ್ಸು ಮತ್ತು ಅಹಂನೊಂದಿಗಿನ ಸೀಮಿತ ಗುರುತಿಸುವಿಕೆಯನ್ನು ಮೀರುವ ಗುರಿಹೊಂದಿರುತ್ತವೆ. ಹಿಂದೂ ಧರ್ಮವು ಮೋಕ್ಷ ಮತ್ತು ಉನ್ನತ ಶಕ್ತಿಗಳ ಅರ್ಜನೆಯ ಗುರಿಹೊಂದಿರುವ ಅನೇಕ ಸಂಬಂಧಿತ ತಪಸ್ವಿ ಸಂಪ್ರದಾಯಗಳು ಮತ್ತು ದಾರ್ಶನಿಕ ಪರಂಪರೆಗಳನ್ನು ಹೊಂದಿದೆ.[೧] ಬ್ರಿಟೀಷರಿಂದ ಭಾರತದ ವಸಾಹತಿನ ಆರಂಭದೊಂದಿಗೆ, ಆ ಸಂಪ್ರದಾಯಗಳು ಅಧ್ಯಾತ್ಮಜ್ಞಾನದಂತಹ ಪಾಶ್ಚಾತ್ಯ ಪದಗಳಲ್ಲಿ ವ್ಯಾಖ್ಯಾನಿಸಲ್ಪಟ್ಟವು, ಮತ್ತು ಪಾಶ್ಚಾತ್ಯ ಪದಗಳು ಹಾಗೂ ಆಚರಣೆಗಳೊಂದಿಗೆ ಪ್ರತಿರೂಪ ಪಡೆದವು.[೨]

ಯೋಗ ಶಾಶ್ವತ ಶಾಂತಿಯ ಸ್ಥಿತಿಯನ್ನು ಸಾಧಿಸುವ ಗುರಿಹೊಂದಿರುವ ದೈಹಿಕ, ಮಾನಸಿಕ, ಮತ್ತು ಪಾರಮಾರ್ಥಿಕ ಅಭ್ಯಾಸ ಅಥವಾ ಬೋಧನ ಶಾಖೆ. ಯೋಗದ ವಿವಿಧ ಪರಂಪರೆಗಳು ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದಲ್ಲಿ ಕಂಡುಬರುತ್ತವೆ.[೩][೪][೫][೪] ಪತಂಜಲಿಯ ಯೋಗಸೂತ್ರಗಳು ಯೋಗವನ್ನು ಮನಸ್ಸಿನ ಬದಲಾಗುತ್ತಿರುವ ಸ್ಥಿತಿಗಳ ಶಾಂತಗೊಳಿಸುವಿಕೆ ಎಂದು ವ್ಯಾಖ್ಯಾನಿಸುತ್ತವೆ ಮತ್ತು ಇದು ಸಮಾಧಿಯಲ್ಲಿ ಸಾಧನೆಯಾಗುತ್ತದೆ.

ಉಲ್ಲೇಖಗಳು