ಎರಿಕ್‌ ಸ್ಮಿತ್‌‌

ಎರಿಕ್‌ ಎಮರ್‌‌ಸನ್‌ ಸ್ಮಿತ್‌‌ (ಜನನ (೧೯೫೫-೦೪-೨೭)೨೭ ಏಪ್ರಿಲ್ ೧೯೫೫)[೩] ಓರ್ವ ಎಂಜಿನಿಯರ್‌‌, ಗೂಗಲ್‌‌ನ ಸಭಾಪತಿ/CEO ಮತ್ತು ಆಪಲ್‌ ಇಂಕ್‌‌ನನಿರ್ದೇಶಕರ ಮಂಡಳಿಯ ಓರ್ವ ಹಿಂದಿನ ಸದಸ್ಯನಾಗಿದ್ದಾನೆ.[೪] ಯುನಿಕ್ಸ್‌ಗಾಗಿ ರೂಪಿಸಲಾದ ಲೆಕ್ಸ್‌‌ ಎಂಬ ನಿಘಂಟಿನ ಅಥವಾ ಕೋಶೀಯ ವಿಶ್ಲೇಷಕ ತಂತ್ರಾಂಶಕ್ಕೆ ಅವನು ಓರ್ವ ಸಹ-ಲೇಖಕನಾಗಿದ್ದಾನೆ. ಕಾರ್ನೆಗೀ ಮೆಲನ್‌ ವಿಶ್ವವಿದ್ಯಾಲಯ[೫] ಮತ್ತು ಪ್ರಿನ್ಸ್‌‌ಟನ್‌ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ನ್ಯಾಸನಿರ್ವಾಹಕರ ಮಂಡಳಿಗಳಲ್ಲೂ ಅವನು ಕಾರ್ಯನಿರ್ವಹಿಸಿದ್ದಾನೆ.[೬]

Eric Schmidt
Born (1955-04-27) ೨೭ ಏಪ್ರಿಲ್ ೧೯೫೫ (ವಯಸ್ಸು ೬೮)
Washington, DC
Alma materUniversity of California, Berkeley
Princeton University
Occupation(s)Engineer, Chairman and CEO of Google
WebsiteGoogle Inc. Profile

ಜೀವನ ವೃತ್ತಾಂತ

ಡಾ. ಎರಿಕ್‌ ಸ್ಮಿತ್‌‌ ವಾಷಿಂಗ್ಟನ್‌‌, D.C.ಯಲ್ಲಿ ಜನಿಸಿದ ಮತ್ತು ವರ್ಜೀನಿಯಾದ ಬ್ಲ್ಯಾಕ್ಸ್‌‌ಬರ್ಗ್‌ ಎಂಬಲ್ಲಿ ಬೆಳೆದ. ಯಾರ್ಕ್‌ಟೌನ್‌ ಪ್ರೌಢಶಾಲೆಯಿಂದ[೭] ಉತ್ತೀರ್ಣನಾದ ನಂತರ, ಪ್ರಿನ್ಸ್‌‌ಟನ್‌ ವಿಶ್ವವಿದ್ಯಾಲಯವನ್ನು ಸೇರಿಕೊಂಡ ಎರಿಕ್‌ ಸ್ಮಿತ್‌‌, ಅಲ್ಲಿ 1976ರಲ್ಲಿ BSEE ಪದವಿಯೊಂದನ್ನು ಗಳಿಸಿದ.[೮] 1979ರಲ್ಲಿ ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅವನು ಒಂದು MS ಪದವಿಯನ್ನು ಪಡೆದ; ವಿದ್ಯಾಲಯದ ಆವರಣದ ಕಂಪ್ಯೂಟರ್‌ ಕೇಂದ್ರ (ಕಂಪ್ಯೂಟರ್‌ ಸೆಂಟರ್‌-CS) ಹಾಗೂ EECS ವಿಭಾಗಗಳನ್ನು[೯][೧೦] ಸಂಪರ್ಕಿಸುವ ಜಾಲಬಂಧವೊಂದನ್ನು ವಿನ್ಯಾಸಗೊಳಿಸಿದ್ದಕ್ಕೆ ಮತ್ತು ಅದನ್ನು ಅನುಷ್ಠಾನಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಇದು ಅವನಿಗೆ ದೊರೆಯಿತು. ಹಂಚಿಕೆಮಾಡಲ್ಪಟ್ಟ ತಂತ್ರಾಂಶ ಅಭಿವೃದ್ಧಿ ಕಾರ್ಯವನ್ನು ನಿರ್ವಹಿಸುವುದರಲ್ಲಿನ ಸಮಸ್ಯೆಗಳು ಮತ್ತು ಈ ಸಮಸ್ಯೆಗಳನ್ನು ಪರಿಹರಿಸುವುದಕ್ಕಿರುವ ಸಾಧನಗಳ ಕುರಿತಾಗಿ ಪ್ರೌಢಪ್ರಬಂಧವೊಂದನ್ನು ಸಲ್ಲಿಸುವ ಮೂಲಕ, 1982ರಲ್ಲಿ ಆತ EECSನಲ್ಲಿ ಒಂದು PhDಯನ್ನು ಪಡೆದ.[೧೧] ಲೆಕ್ಸ್‌‌ (ಇದೊಂದು ನಿಘಂಟಿನ ವಿಶ್ಲೇಷಕ, ಮತ್ತು ಅನುವಾದಕದ ನಿರ್ಮಾಣಕ್ಕೆ ಸಂಬಂಧಿಸಿರುವ ಒಂದು ಪ್ರಮುಖ ಸಾಧನ) ಎಂಬ ಕಾರ್ಯಸೂಚಿಗೆ ಅವನು ಜಂಟಿ ಲೇಖಕನಾಗಿದ್ದ. ಸ್ಟಾನ್‌ಫೋರ್ಡ್‌ ಬಿಸಿನೆಸ್‌ ಸ್ಕೂಲ್‌‌‌ನಲ್ಲಿ ಓರ್ವ ಅರೆಕಾಲಿಕ ಪ್ರಾಧ್ಯಾಪಕನಾಗಿ ಅವನು ಬೋಧಿಸಿದ.[೧೨]ಕ್ಯಾಲಿಫೋರ್ನಿಯಾದ ಅಥರ್ಟನ್‌ ಎಂಬಲ್ಲಿ ತನ್ನ ಪತ್ನಿ ವೆಂಡಿಯೊಂದಿಗೆ ಡಾ. ಸ್ಮಿತ್‌‌ ವಾಸಿಸುತ್ತಿದ್ದಾನೆ.[೧೩]ಆರ್ಟ್‌ನ್ಯೂಸ್‌ನ 200 ಅಗ್ರಗಣ್ಯ ಕಲಾ ಸಂಗ್ರಾಹಕರ ಪಟ್ಟಿಯಲ್ಲಿಯೂ ಅವನು ಸ್ಥಾನಗಿಟ್ಟಿಸಿಕೊಂಡಿದ್ದಾನೆ.[೧೪]

ದಿ ಎರಿಕ್‌ ಸ್ಮಿತ್‌‌ ಫ್ಯಾಮಿಲಿ ಫೌಂಡೇಷನ್‌

ನೈಸರ್ಗಿಕ ಸಂಪನ್ಮೂಲಗಳ ಸಮರ್ಥನೀಯತೆ ಮತ್ತು ಜವಾಬ್ದಾರಿಯುತ ಬಳಕೆಯ ವಿಷಯಗಳ ಮೇಲೆ ದಿ ಎರಿಕ್‌ ಸ್ಮಿತ್‌‌ ಫ್ಯಾಮಿಲಿ ಫೌಂಡೇಷನ್‌ ಗಮನಹರಿಸುತ್ತದೆ. ಬೃಹತ್‌-ಪ್ರಮಾಣದ ಭೂಮಿಯ ಬಳಕೆಯಲ್ಲಿ ವಿಶೇಷಜ್ಞತೆಯನ್ನು ಪಡೆದಿರುವ ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಒಂದು ವಾಸ್ತುಯೋಜನಾ ಸಂಸ್ಥೆಯಾದ ಹಾರ್ಟ್‌ ಹೋವರ್‌ಟನ್‌ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೆಂಡಿ ಎರಿಕ್‌ ಸ್ಮಿತ್‌‌, ನ್ಯಾನ್‌ಟಕೆಟ್‌ ದ್ವೀಪದಲ್ಲಿ ಹಲವಾರು ಯೋಜನೆಗಳನ್ನು ಆರಂಭಿಸಿದ್ದಾಳೆ. ಕಾಲೋಚಿತ ಪ್ರಾಣಿಗಳ ಭಾರೀ ವಲಸೆಯಿಂದ ದ್ವೀಪದ ಪ್ರಧಾನ ಜೀವಸಂಕುಲದ ಮೇಲೆ ಆಗುವ ಪ್ರಭಾವವನ್ನು ತಗ್ಗಿಸುವ ಸಲುವಾಗಿ, ಮತ್ತು ದ್ವೀಪದ ಅನನ್ಯ ಲಕ್ಷಣವನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹಮ್ಮಿಕೊಂಡ ಯೋಜನೆಗಳು ಇವಾಗಿವೆ. ವೆಂಡಿ ಸ್ಮಿತ್‌‌ ಆಯಿಲ್‌ ಕ್ಲೀನಪ್‌ X ಚಾಲೆಂಜ್‌ ಎಂಬ ಒಂದು ಸವಾಲು ಪ್ರಶಸ್ತಿಗೆ ಸಂಬಂಧಿಸಿದಂತಿರುವ ಬಹುಮಾನ ನಿಧಿಯನ್ನು ವೆಂಡಿ ಸ್ಮಿತ್‌‌ ನೀಡಿದಳು; ನಡುಸಮುದ್ರದ ವಿಶಿಷ್ಟಸ್ತರದ ತೈಲ ಸೋರಿಕೆಯಿಂದ ಪ್ರೇರೇಪಿಸಲ್ಪಟ್ಟ, ಸಮುದ್ರದ ನೀರಿನಿಂದ ಕಚ್ಚಾ ತೈಲವನ್ನು ಪರಿಣಾಮಕಾರಿ ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಸವಾಲು ಇದಾಗಿತ್ತು.[೧೫]

ವೃತ್ತಿಜೀವನ

ಆರಂಭಿಕ ವೃತ್ತಿಜೀವನ

ತನ್ನ ವೃತ್ತಿಜೀವನದ ಆರಂಭದಲ್ಲಿ IT ಕಂಪನಿಗಳೊಂದಿಗೆ ತಾಂತ್ರಿಕ ಸ್ಥಾನಮಾನಗಳ ಒಂದು ಸರಣಿಯನ್ನೇ ಎರಿಕ್‌ ಸ್ಮಿತ್‌ ಹೊಂದಿದ್ದ. ಬೆಲ್‌ ಲ್ಯಾಬ್ಸ್‌, ಜೈಲಾಗ್‌ ಮತ್ತು ಕ್ಸೆರಾಕ್ಸ್‌‌‌ನ ಹೆಸರಾಂತ ಪಾಲೋ ಆಲ್ಟೋ ರಿಸರ್ಚ್‌ ಸೆಂಟರ್‌ (PARC) ಕಂಪನಿಗಳು ಇವುಗಳಲ್ಲಿ ಸೇರಿವೆ. 1983ರಲ್ಲಿ ಸನ್‌ ಮೈಕ್ರೋಸಿಸ್ಟಮ್ಸ್‌ ಕಂಪನಿಯನ್ನು ಸೇರಿಕೊಂಡ ಆತ, ಅದರ ಜಾವಾ ಅಭಿವೃದ್ಧಿ ಪ್ರಯತ್ನಗಳ[ಸೂಕ್ತ ಉಲ್ಲೇಖನ ಬೇಕು][dubious ] ನೇತೃತ್ವವನ್ನು ವಹಿಸಿದ ಮತ್ತು ಪ್ರಧಾನ ತಂತ್ರಜ್ಞಾನ ಅಧಿಕಾರಿಯ ಸ್ಥಾನಕ್ಕೆ ಏರಿದ. 1997ರಲ್ಲಿ, ನೋವೆಲ್‌ ಕಂಪನಿಯ CEO ಆಗಿ ಅವನು ನೇಮಿಸಲ್ಪಟ್ಟ.ಕೇಂಬ್ರಿಜ್‌ ಟೆಕ್ನಾಲಜಿ ಪಾರ್ಟ್‌ನರ್ಸ್‌‌‌ನ ಸ್ವಾಧೀನದ ನಂತರ ಎರಿಕ್‌ ಸ್ಮಿತ್‌‌ ನೋವೆಲ್‌ ಕಂಪನಿಯನ್ನು ಬಿಟ್ಟ. ಗೂಗಲ್‌ ಸಂಸ್ಥಾಪಕರಾದ ಲ್ಯಾರಿ ಪೇಜ್‌ ಮತ್ತು ಸರ್ಜೆ ಬ್ರಿನ್‌ ಎರಿಕ್‌ ಸ್ಮಿತ್‌‌ನನ್ನು ಸಂದರ್ಶಿಸಿದರು. ಅವನಿಂದ[೧೬] ಪ್ರಭಾವಿತರಾದ ಅವರಿಬ್ಬರೂ, ಸಾಹಸೋದ್ಯಮ ಬಂಡವಾಳಗಾರರಾದ ಜಾನ್‌ ಡೋಯರ್‌ ಮತ್ತು ಮೈಕೇಲ್‌ ಮೋರಿಟ್ಜ್‌‌‌ರ ಪ್ರಭಾವದ ಅಡಿಯಲ್ಲಿ ತಮ್ಮ ಕಂಪನಿಯನ್ನು ನಡೆಸಲೆಂದು ಎರಿಕ್‌ ಸ್ಮಿತ್‌ನನ್ನು 2001ರಲ್ಲಿ ನೇಮಿಸಿಕೊಂಡರು.

ಗೂಗಲ್

2001ರ ಮಾರ್ಚ್‌ನಲ್ಲಿ ಸಭಾಪತಿಯಾಗಿ ಗೂಗಲ್‌ನ ನಿರ್ದೇಶಕರ ಮಂಡಳಿಯನ್ನು ಸೇರಿಕೊಂಡ ಎರಿಕ್‌ ಸ್ಮಿತ್‌‌, 2001ರ ಆಗಸ್ಟ್‌ನಲ್ಲಿ ಕಂಪನಿಯ CEO ಆದ. ಗೂಗಲ್ ಕಂಪನಿಯಲ್ಲಿ, ಗೂಗಲ್‌ನ ದೈನಂದಿನ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತಿರುವ ಹೊಣೆಗಾರಿಕೆಯನ್ನು ಸಂಸ್ಥಾಪಕರಾದ ಪೇಜ್‌ ಮತ್ತು ಬ್ರಿನ್‌ ಜೊತೆಯಲ್ಲಿ ಎರಿಕ್‌ ಸ್ಮಿತ್‌‌ ಹಂಚಿಕೊಳ್ಳುತ್ತಾನೆ. ಗೂಗಲ್‌ನ 2004ರ S-1 ಸಲ್ಲಿಕೆಯ[೧೭] ಪುಟ 29 ಸೂಚಿಸುವಂತೆ, ಎರಿಕ್‌ ಸ್ಮಿತ್‌‌, ಪೇಜ್‌, ಮತ್ತು ಬ್ರಿನ್‌ರವರುಗಳು ಗೂಗಲ್‌ನ್ನು ಒಂದು ತ್ರಿಪ್ರಭುತ್ವವಾಗಿ ನಡೆಸುತ್ತಿದ್ದಾರೆ. ಸಾರ್ವಜನಿಕ ಕಂಪನಿಯೊಂದರ CEOಗೆ ವಿಶಿಷ್ಟವಾಗಿ ನಿಯೋಜಿಸಲಾದ ನ್ಯಾಯಸಮ್ಮತ ಹೊಣೆಗಾರಿಕೆಗಳನ್ನು ಎರಿಕ್‌ ಸ್ಮಿತ್‌‌ ಹೊಂದಿದ್ದಾನೆ ಮತ್ತು ಉಪಾಧ್ಯಕ್ಷರುಗಳ ಹಾಗೂ ಮಾರಾಟ ಸಂಘಟನೆಯ ವ್ಯವಸ್ಥಾಪನೆಯ ಮೇಲೆ ಅವನು ಗಮನ ಹರಿಸುತ್ತಾನೆ.ಗೂಗಲ್‌ನ ವೆಬ್‌ಸೈಟ್‌ ಅನುಸಾರ, "ಒಂದು ಕಂಪನಿಯಾಗಿ ಗೂಗಲ್‌ನ ಕ್ಷಿಪ್ರ ಬೆಳವಣಿಗೆಯನ್ನು ನಿರ್ವಹಿಸಲು ಅಗತ್ಯವಾದ ಸಾಂಸ್ಥಿಕ ಮೂಲಭೂತ ಸೌಕರ್ಯವನ್ನು ನಿರ್ಮಿಸುವುದರ ಬಗ್ಗೆ ಹಾಗೂ ಉತ್ಪನ್ನ ಅಭಿವೃದ್ಧಿಯ ಆವರ್ತನದ ಸಮಯಗಳನ್ನು ಒಂದು ಕನಿಷ್ಟ ಪ್ರಮಾಣಕ್ಕೆ ಇರಿಸಿದಾಗಲೂ ಸಹ ಗುಣಮಟ್ಟವು ಉಳಿದುಕೊಳ್ಳುತ್ತದೆ ಎಂಬುದನ್ನು ಖಾತ್ರಿಪಡಿಸುವುದರ ಬಗ್ಗೆಯೂ" ಎರಿಕ್‌ ಸ್ಮಿತ್‌‌ ಗಮನ ಹರಿಸುತ್ತಾನೆ.[೧೮]2007ರಲ್ಲಿ, PC ವರ್ಲ್ಡ್‌‌ ನಿಯತಕಾಲಿಕವು ವೆಬ್ ವಲಯದ ಕುರಿತಾದ 50 ಅತ್ಯಂತ ಪ್ರಮುಖ ಜನರ ಪಟ್ಟಿಯಲ್ಲಿ ಗೂಗಲ್‌ ಸಹ-ಸಂಸ್ಥಾಪಕರಾದ ಲ್ಯಾರಿ ಪೇಜ್‌ ಮತ್ತು ಸರ್ಜೆ ಬ್ರಿನ್‌‌‌ರವರ ಜೊತೆಗೆ ಎರಿಕ್‌ ಸ್ಮಿತ್‌‌ನನ್ನು #1 ಸ್ಥಾನದಲ್ಲಿ ಉಲ್ಲೇಖಿಸಿತು.[೧೯]ಬ್ರೆಂಡಾನ್‌ ವುಡ್‌ ಇಂಟರ್‌ನ್ಯಾಷನಲ್‌ ಎಂಬ ಒಂದು ಸಲಹಾ ಸಂಸ್ಥೆಯು 2009ರಲ್ಲಿ ಸ್ಮಿತ್‌ನನ್ನು "ಅಗ್ರಗಣ್ಯ CEOಗಳ" ಪೈಕಿ ಒಬ್ಬ ಎಂಬುದಾಗಿ ಪರಿಗಣಿಸಿತು.[೨೦][೨೧]2011ರ ಏಪ್ರಿಲ್‌ 4ರಂದು ಜಾರಿಗೆ ಬರುವಂತೆ ಗೂಗಲ್‌ನ CEO ಹುದ್ದೆಗೆ ಎರಿಕ್‌ ಸ್ಮಿತ್‌‌ ರಾಜೀನಾಮೆ ಕೊಡಲಿದ್ದು, ಕಂಪನಿಯ ಕಾರ್ಯಕಾರಿ ಸಭಾಪತಿಯಾಗಿ ಅವನು ಮುಂದುವರಿಯಲಿದ್ದಾನೆ ಹಾಗೂ ಸಹ-ಸಂಸ್ಥಾಪಕರಾದ ಲ್ಯಾರಿ ಪೇಜ್‌ ಮತ್ತು ಸರ್ಜೆ ಬ್ರಿನ್‌ರವರಿಗೆ ಓರ್ವ ಸಲಹೆಗಾರನಾಗಿ ಪಾತ್ರವಹಿಲಿದ್ದಾನೆ ಎಂಬುದಾಗಿ 2011ರ ಜನವರಿ 20ರಂದು ಗೂಗಲ್‌ ಪ್ರಕಟಿಸಿತು. ಎರಿಕ್‌ ಸ್ಮಿತ್‌‌ನಿಂದ CEOನ ಸ್ಥಾನವನ್ನು ಲ್ಯಾರಿ ಪೇಜ್‌ ವಹಿಸಿಕೊಳ್ಳಲಿದ್ದಾನೆ.[೨೨]

ಆಪಲ್‌

2006ರ ಆಗಸ್ಟ್‌ 28ರಂದು ಆಪಲ್‌ನ ನಿರ್ದೇಶಕರ ಮಂಡಳಿಗೆ ಎರಿಕ್‌ ಸ್ಮಿತ್‌‌ ಚುನಾಯಿಸಲ್ಪಟ್ಟ. ಹಿತಾಸಕ್ತಿಗಳ ಘರ್ಷಣೆಯಿಂದಾಗಿ ಹಾಗೂ ಗೂಗಲ್‌ ಮತ್ತು ಆಪಲ್‌ ನಡುವೆ ಬೆಳೆಯುತ್ತಿರುವ ಸ್ಪರ್ಧೆಯಿಂದಾಗಿ, ಆಪಲ್‌ನಲ್ಲಿನ ತನ್ನ ಮಂಡಳಿಯ ಸದಸ್ಯ ಸ್ಥಾನಕ್ಕೆ ಎರಿಕ್‌ ಸ್ಮಿತ್‌ ರಾಜೀನಾಮೆಯನ್ನು ನೀಡಲಿದ್ದಾನೆ ಎಂಬುದಾಗಿ 2009ರ ಆಗಸ್ಟ್‌ 3ರಂದು ಪ್ರಕಟಿಸಲ್ಪಟ್ಟಿತು.[೨೩]

ಅಧ್ಯಕ್ಷ ಬರಾಕ್‌ ಒಬಾಮಾ

ಬರಾಕ್‌ ಒಬಾಮಾನ ಅಧ್ಯಕ್ಷೀಯ ಪ್ರಚಾರಾಂದೋಲನಕ್ಕೆ ಎರಿಕ್‌ ಸ್ಮಿತ್‌‌ ಓರ್ವ ಔಪಚಾರಿಕ ಸಲಹೆಗಾರನಾಗಿದ್ದ ಮತ್ತು ಸದರಿ ಅಭ್ಯರ್ಥಿಯ ಪರವಾಗಿ 2008ರ ಅಕ್ಟೋಬರ್‌ 19ರ ವಾರದಲ್ಲಿ ತನ್ನ ಪ್ರಚಾರಾಂದೋಲನವನ್ನು ಶುರುಮಾಡಿದ.[೨೪] ಒಬಾಮಾ ತನ್ನ ಆಡಳಿತಾವಧಿಯಲ್ಲಿ ಸೃಷ್ಟಿಸಿದ ಹೊಸ ಪ್ರಧಾನ ತಂತ್ರಜ್ಞಾನ ಅಧಿಕಾರಿಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಅವನನ್ನು ಓರ್ವ ಸಂಭಾವ್ಯ ಅಭ್ಯರ್ಥಿಯಾಗಿ ಉಲ್ಲೇಖಿಸಲಾಗಿತ್ತು.[೨೫] ಒಬಾಮಾಗಾಗಿ ತನ್ನ ಅನುಮೋದನೆಯನ್ನು ಘೋಷಿಸುವ ಸಂದರ್ಭದಲ್ಲಿ, ತನ್ನ 1.00$ ವೇತನದೊಂದಿಗೆ ತಾನು ತೆರಿಗೆ ಕಡಿತವನ್ನು ಪಡೆಯಲಿರುವುದಾಗಿ ಎರಿಕ್‌ ಸ್ಮಿತ್‌‌ ತಮಾಷೆಗಾಗಿ ಹೇಳಿದ.[೨೬] ಒಬಾಮಾ ಗೆದ್ದ ನಂತರ, ಅಧ್ಯಕ್ಷ ಒಬಾಮಾನ ಪರಿವರ್ತನೆ ಸಲಹಾ ಮಂಡಳಿಯ ಓರ್ವ ಸದಸ್ಯನಾಗಿ ಎರಿಕ್‌ ಸ್ಮಿತ್‌‌ಗೆ ಸ್ಥಾನ ದೊರಕಿತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಎಲ್ಲಾ ಸಮಸ್ಯೆಗಳನ್ನು, ಕನಿಷ್ಟಪಕ್ಷ ಸ್ವದೇಶಿ ಕಾರ್ಯನೀತಿಯಲ್ಲಿನ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸುವುದಕ್ಕೆ ಇರುವ ಅತ್ಯಂತ ಸುಲಭದ ಮಾರ್ಗವನ್ನು ಅವನು ಪ್ರಸ್ತಾವಿಸಿದ; ನವೀಕರಿಸಬಲ್ಲ ಶಕ್ತಿಗೆ ಮಾನ್ಯತೆ ಅಥವಾ ಪ್ರತಿಫಲವನ್ನು ನೀಡುವ, ಮತ್ತು ಕಾಲಾನಂತರದಲ್ಲಿ ನವೀಕರಿಸಬಲ್ಲ ಶಕ್ತಿಯಿಂದ ಪಳೆಯುಳಿಕೆ ಇಂಧನಗಳನ್ನು ಬದಲಿಸುವುದಕ್ಕೆ ಪ್ರಯತ್ನಿಸುವ ಒಂದು ಪ್ರಚೋದಕ ಕಾರ್ಯಕ್ರಮವೇ ಈ ಮಾರ್ಗವಾಗಿದೆ ಎಂಬುದು ಅವನ ಪ್ರತಿಪಾದನೆಯಾಗಿತ್ತು.[೨೭]ಅಲ್ಲಿಂದೀಚೆಗೆ ಅವನು ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾದ ಅಧ್ಯಕ್ಷರ ಸಲಹೆಗಾರರ ಪರಿಷತ್ತಿನ (ಪ್ರೆಸಿಡೆಂಟ್‌'ಸ್‌ ಕೌನ್ಸಿಲ್‌ ಆಫ್‌ ಅಡ್ವೈಸರ್ಸ್‌ ಆನ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ) PCAST ಓರ್ವ ಹೊಸ ಸದಸ್ಯನಾಗಿದ್ದಾನೆ.[೨೮]

ವೇತನ

ನೇಮಕಗೊಂಡ ನಂತರ, 250,000$ನಷ್ಟು ಮೊತ್ತದ ಒಂದು ವೇತನವನ್ನು ಹಾಗೂ ವಾರ್ಷಿಕ ಕಾರ್ಯಕ್ಷಮತೆಯ ಒಂದು ಬೋನಸ್‌ನ್ನು ಎರಿಕ್‌ ಸ್ಮಿತ್‌‌ಗೆ ಪಾವತಿಸಲಾಯಿತು. ಪ್ರತಿ ಷೇರಿಗೆ 30 ಸೆಂಟುಗಳ ದರದಲ್ಲಿ B ವರ್ಗದ 14,331,703ನಷ್ಟು ಸಾಮಾನ್ಯ ಸ್ಟಾಕನ್ನು, ಮತ್ತು 2.34$ನಷ್ಟು ಖರೀದಿ ಬೆಲೆಯಲ್ಲಿ C ಸರಣಿಯ 426,892ನಷ್ಟು ಆದ್ಯತೆಯ ಸ್ಟಾಕನ್ನು ಅವನಿಗೆ ಮಂಜೂರು ಮಾಡಲಾಯಿತು.[೨೯]2008 ಮತ್ತು 2009ರಲ್ಲಿ ಗೂಗಲ್‌ನ CEO ಆಗಿದ್ದಾಗ, 1$ನಷ್ಟಿದ್ದ ಮೂಲ ವೇತನವನ್ನು, ಮತ್ತು 2008ರಲ್ಲಿ 508,763$ನಷ್ಟು ಹಾಗೂ 2009ರಲ್ಲಿ 243,661$ನಷ್ಟು ಇತರ ವೇತನ-ಪರಿಹಾರವನ್ನು ಎರಿಕ್‌ ಸ್ಮಿತ್‌‌ ಗಳಿಸಿದ. ಯಾವುದೇ ನಗದು, ಸ್ಟಾಕು, ಅಥವಾ ಹಕ್ಕುಗಳನ್ನು ಅವನು ಸ್ವೀಕರಿಸಲಿಲ್ಲ.[೩೦] ಸಂಸ್ಥೆಯೊಂದರಲ್ಲಿನ ಓರ್ವ ಉದ್ಯೋಗಿಯಾಗಿ ಸ್ವೀಕರಿಸಿದ ಸ್ಟಾಕು ಹಕ್ಕುಗಳನ್ನು ಆಧರಿಸಿ ಶತಕೋಟ್ಯಾಧಿಪತಿಗಳಾಗಿರುವ (USD) ಕೆಲವೇ ಜನರ ಪೈಕಿ ಎರಿಕ್‌ ಸ್ಮಿತ್‌‌ ಒಬ್ಬನಾಗಿದ್ದು, ಅವನು ಸದರಿ ಸಂಸ್ಥೆಯ ಸಂಸ್ಥಾಪಕನೂ ಆಗಿರಲಿಲ್ಲ ಅಥವಾ ಸಂಸ್ಥಾಪಕನ ಓರ್ವ ಸಂಬಂಧಿಕನೂ ಆಗಿರಲಿಲ್ಲ ಎಂಬುದು ಗಮನಾರ್ಹ ಸಂಗತಿ.[೩೧] ಫೋರ್ಬ್ಸ್‌ ನಿಯತಕಾಲಿಕವು 2006ರ 'ವಿಶ್ವದ ಅತ್ಯಂತ ಶ್ರೀಮಂತ ಜನರು' ಎಂಬ ತನ್ನ ಪಟ್ಟಿಯಲ್ಲಿ, 6.2 ಶತಕೋಟಿ $ನಷ್ಟು ಇರುವ ಒಂದು ಅಂದಾಜಿಸಲ್ಪಟ್ಟ ಶ್ರೀಮಂತಿಕೆಯನ್ನು ಹೊಂದಿರುವ ವಿಶ್ವದಲ್ಲಿನ 129ನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಶ್ರೇಯಾಂಕವನ್ನು ಎರಿಕ್‌ ಸ್ಮಿತ್‌‌ಗೆ ನೀಡಿತು (ಸದರಿ ಶ್ರೇಯಾಂಕವನ್ನು ಅವನೊಂದಿಗೆ ಓನ್ಸಿ ಸಾವಿರಿಸ್‌, ಅಲೆಕ್ಸೀ ಕುಜ್ಮಿಚೋವ್‌, ಮತ್ತು ರಾಬರ್ಟ್‌ ರೌಲಿಂಗ್‌ ಸಹ ಹಂಚಿಕೊಂಡರು). 2006ರಲ್ಲಿ ಎರಿಕ್‌ ಸ್ಮಿತ್‌‌ 1$ನಷ್ಟು ವೇತನವನ್ನು ಗಳಿಸಿದ್ದ.[೩೨] 2011ರಲ್ಲಿ ಗೂಗಲ್‌ ಕಂಪನಿಯು ಬೀಳ್ಕೊಡುಗೆಯ ಕೊಡುಗೆಯಾಗಿ ಅವನಿಗೆ 100 ದಶಲಕ್ಷ $ನಷ್ಟು ಮೊತ್ತವನ್ನು ನೀಡಿತು.[೩೩][೩೪]

ಅಭಿಪ್ರಾಯಗಳು

"ಇನ್‌ಸೈಡ್‌ ದಿ ಮೈಂಡ್‌ ಆಫ್‌ ಗೂಗಲ್‌‌" ಎಂಬ CNBC ಸಾಕ್ಷ್ಯಚಿತ್ರದ ಕುರಿತಾಗಿ 2009ರ ಡಿಸೆಂಬರ್‌‌ 3ರಂದು ಪ್ರಸಾರವಾದ ಸಂದರ್ಶನವೊಂದರ ಅವಧಿಯಲ್ಲಿ ಎರಿಕ್‌ ಸ್ಮಿತ್‌ಗೆ "ಜನರು ಗೂಗಲ್‌ನ್ನು ತಮ್ಮ ಅತ್ಯಂತ ವಿಶ್ವಾಸಾರ್ಹವಾದ ಸ್ನೇಹಿತನಾಗಿ ಏಕೆ ಪರಿಗಣಿಸುತ್ತಿದ್ದಾರೆ. ಅವರು ಹಾಗೆ ವಿಶ್ವಾಸವನ್ನಿಡಬೇಕೇ?" ಎಂದು ಪ್ರಶ್ನಿಸಲಾಯಿತು. ಅದಕ್ಕೆ ಅವನ ಜವಾಬು ಹೀಗಿತ್ತು: "ತೀರ್ಮಾನವು ಗಮನಾರ್ಹವಾಗಿರುತ್ತದೆ ಎಂದು ನನಗನ್ನಿಸುತ್ತದೆ. ಬೇರಾರಿಗೂ ಇದು ಗೊತ್ತಾಗಬಾರದು ಎಂದು ನೀವು ಬಯಸುವಂಥದ್ದನ್ನು ಒಂದು ವೇಳೆ ನೀವೇನಾದರೂ ಹೊಂದಿದ್ದಲ್ಲಿ, ಪ್ರಾಯಶಃ ಮೊದಲಿಗೆ ಅದನ್ನು ನೀವು ಮಾಡುತ್ತಾ ಹೋಗಬಾರದು; ಆದರೆ ಒಂದು ವೇಳೆ ನಿಮಗೆ ನಿಜವಾಗಿಯೂ ಆ ಬಗೆಯ ಖಾಸಗಿತನದ ಅಗತ್ಯವಿದ್ದಲ್ಲಿ, ಗೂಗಲ್‌ನ್ನೂ ಒಳಗೊಂಡಂತಿರುವ ಶೋಧಕ ಎಂಜಿನುಗಳು ಕೆಲವೊಂದು ಅವಧಿಯವರೆಗೆ ಈ ಮಾಹಿತಿಯನ್ನು ಉಳಿಸಿಕೊಳ್ಳುತ್ತವೆ ಎಂಬುದು ವಾಸ್ತವತೆಯಾಗಿದೆ, ಮತ್ತು ಉದಾಹರಣೆಗೆ ಹೇಳುವುದಾದರೆ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ನಾವೆಲ್ಲರೂ ದೇಶಭಕ್ತ ಕಾಯಿದೆಗೆ ಒಳಪಡುತ್ತೇವೆ ಎಂಬುದೂ ಸಹ ಮುಖ್ಯವಾಗಿರುತ್ತದೆ. ಹೀಗಾಗಿ ಮಾಹಿತಿಯನ್ನು ಅಧಿಕಾರಿ ವರ್ಗಗಳಿಗೆ ನೀಡಬೇಕಾಗಿ ಬರುವ ಸಾಧ್ಯತೆಯಿರುತ್ತದೆ." [೩೫][೩೬] 2010ರ ಆಗಸ್ಟ್‌ 4ರಂದು ನಡೆದ ಟೆಕೋನಾಮಿ ಸಮ್ಮೇಳನದಲ್ಲಿ ಎರಿಕ್‌ ಸ್ಮಿತ್‌‌ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ತಂತ್ರಜ್ಞಾನವು ಉತ್ತಮವಾಗಿದೆ, ಆದರೆ "ಸಾಕಷ್ಟು ಮಹತ್ತರವಾದ ಪಾರದರ್ಶಕತೆಯನ್ನು ಹೊಂದಿರುವುದು ಮತ್ತು ಅನಾಮಕತೆಯನ್ನು ಹೊಂದಿಲ್ಲದಿರುವುದು" ಸವಾಲುಗಳನ್ನು ನಿರ್ವಹಿಸುವುದಕ್ಕಿರುವ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದ. ಅಸಮ್ಮಿತ ಬೆದರಿಕೆಗಳ ಈ ಯುಗದಲ್ಲಿ, "ನಿಜವಾದ ಅನಾಮಕತೆಯು ತುಂಬಾ ಅಪಾಯಕಾರಿ" ಎಂಬುದಾಗಿಯೂ ಈ ಸಂದರ್ಭದಲ್ಲಿ ಎರಿಕ್‌ ಸ್ಮಿತ್‌‌ ಹೇಳಿಕೆ ನೀಡಿದ.[೩೭]2010ರ ಆಗಸ್ಟ್‌ನಲ್ಲಿ, ಜಾಲಬಂಧ ತಾಟಸ್ಥ್ಯದ ಮೇಲಿನ ತನ್ನ ಕಂಪನಿಯ ಅಭಿಪ್ರಾಯಗಳನ್ನು ಎರಿಕ್‌ ಸ್ಮಿತ್‌‌ ಹೀಗೆ ಸ್ಪಷ್ಟೀಕರಿಸಿದ: "ಜಾಲದ ತಾಟಸ್ಥ್ಯದ ಕುರಿತು ನಾವೆಷ್ಟು ಅರ್ಥಮಾಡಿಕೊಂಡಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟವಾಗಿರಲು ನಾನು ಬಯಸುವೆ: ನಾವು ಅರ್ಥಮಾಡಿಕೊಂಡಿರುವ ಪ್ರಕಾರ, ಒಂದು ವೇಳೆ ವಿಡಿಯೋದಂಥ ದತ್ತಾಂಶದ ಒಂದು ಬಗೆಯನ್ನು ನೀವು ಹೊಂದಿದ್ದಲ್ಲಿ, ಮತ್ತೋರ್ವನ ವಿಡಿಯೋದ ಪರವಾಗಿ ನಿಲ್ಲಲು ನೀವು ಓರ್ವ ವ್ಯಕ್ತಿಯ ವಿಡಿಯೋಗೆ ವಿರುದ್ಧವಾಗಿ ಪಕ್ಷಪಾತ ಮಾಡುವುದಿಲ್ಲ. ಆದರೆ ವಿಭಿನ್ನ ಬಗೆಗಳಾದ್ಯಂತ ಭೇದ ಕಲ್ಪಿಸುವುದಕ್ಕೆ ಸಮ್ಮತವಿದೆ, ಆದ್ದರಿಂದ ಅಶರೀರವಾಣಿಯ ವಿಡಿಯೋಗೆ ನೀವು ಆದ್ಯತೆ ನೀಡಬಹುದು, ಮತ್ತು ಆ ವಿಷಯದ ಕುರಿತಾಗಿ ವೆರಿಜೋನ್‌ ಮತ್ತು ಗೂಗಲ್‌ ಜೊತೆಗಿನ ಒಂದು ಸಾರ್ವತ್ರಿಕ ಒಪ್ಪಂದವೂ ಅಸ್ತಿತ್ವದಲ್ಲಿದೆ."[೩೮]

ಇವನ್ನೂ ಗಮನಿಸಿ

  • ಶತಕೋಟ್ಯಾಧಿಪತಿಗಳ ಪಟ್ಟಿ
  • 70/20/10 ಮಾದರಿ — ಎರಿಕ್‌ ಸ್ಮಿತ್‌ನಿಂದ ಪ್ರವರ್ತನಗೊಳಿಸಲ್ಪಟ್ಟ ವ್ಯವಹಾರ ಮಾದರಿ‌‌.[೩೯]
  • ರೀಚಾರ್ಜ್‌IT

ಉಲ್ಲೇಖಗಳು

ಬಾಹ್ಯ ಕೊಂಡಿಗಳು

ವಿಡಿಯೊಗಳು

Business positions
ಪೂರ್ವಾಧಿಕಾರಿ
Larry Page
Google CEO
2001-2011
ಉತ್ತರಾಧಿಕಾರಿ
Larry Page