ಕೌಮಿ ತರಾನಾ

ಪಾಕಿಸ್ತಾನದ ರಾಷ್ಟ್ರಗೀತೆ

ಕೌಮಿ ತರಾನಾ (ಉರ್ದು: قومی ترانہ [ˈqɔː.mi ˈt̪ə.rɑː.nɑ], ಅರ್ಥಾತ್ "ರಾಷ್ಟ್ರಗೀತೆ") ಅಥವಾ ಪಾಕ್ ಸರ್‍ಜ಼ಮೀ (ಉರ್ದು: پاک سرزمین [ˈpɑːk ˈsər.zə.miːn], ಅರ್ಥಾತ್ "ಪವಿತ್ರ ಭೂಮಿ"), ಪಾಕಿಸ್ತಾನದ ರಾಷ್ಟ್ರಗೀತೆಯಾಗಿದೆ. ೧೯೪೯ರಲ್ಲಿ ಅಹ್ಮದ್ ಘುಲಾಮ್ ಅಲಿ ಛಾಗ್ಲಾ ಸಂಗೀತ ಸಂಯೋಜಿಸಿದ್ದು, ಹಫೀಜ಼್ ಝಾಲಂಧರಿ ೧೯೫೨ರಲ್ಲಿ ಸಾಹಿತ್ಯ ರಚಿಸಿದರು. ಆಗಸ್ಟ್ ೧೯೫೪ರಲ್ಲಿ[೧] ರಚನೆಯನ್ನು ಪಾಕಿಸ್ತಾನವು ಅಧಿಕೃತ ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಂಡಿತು ಹಾಗೂ ಅದೇ ವರ್ಷ ಅಹ್ಮದ್ ರಷ್ದಿ, ಕೌಕಾಬ್ ಜಹಾನ್, ರಷೀದಾ ಬೇಗಮ್, ನಜಾಮ್ ಅರಾ, ನಸೀಮಾ ಷಹೀನ್, ಜ಼ವರ್ ಹುಸೇನ್, ಅಖ್ತರ್ ಅಬ್ಬಾಸ್, ಘುಲಾಮ್ ದಸ್ತಗೀರ್, ಅನ್ವರ್ ಜ಼ಹೀರ್ ಹಾಗೂ ಅಖ್ತರ್ ವಸೀ ಅಲಿ ಸೇರಿದಂತೆ ಹನ್ನೊಂದು ಪ್ರಮುಖ ಪಾಕಿಸ್ತಾನಿ ಗಾಯಕರು ರಾಷ್ಟ್ರಗೀತೆಯನ್ನು ಹಾಡಿದರು.[೨][೩]

೧೯೫೪ರಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಿದ ಅಹ್ಮದ್ ರಷ್ದಿ

ಪಾಕಿಸ್ತಾನ ಸರ್ಕಾರವು ಅಧಿಕೃತ ರಾಷ್ಟ್ರಗೀತೆನ್ನು ಸಂಯೋಜಿಸಲು ರಾಷ್ಟ್ರೀಯ ರಾಷ್ಟ್ರಗೀತೆ ಸಮಿತಿಯನ್ನು (ಎನ್‍ಎಸಿ) ೧೯೪೮ರ ಡಿಸಂಬರ್‍ನಲ್ಲಿ ಸ್ಥಾಪಿಸಿತು. ಶೇಖ್‍ ಮುಹಮ್ಮದ್‍ ಇಕ್ರಮ್‍ ಸಮಿತಿಯ ಅಧ್ಯಕ್ಷರಾಗಿದ್ದು, ಅಬ್ದುರ್‍ ರಬ್‍ ನಿಶ್ತಾರ್‍, ಅಹ್ಮದ್ ಛಾಗ್ಲಾ ಮತ್ತು ಹಫೀ‍ಜ಼್‍ ಝಾಲಂಧರಿ ಅವರೊಡನೆ ಇತರೆ ರಾಜಕಾರಣಿಗಳು, ಸಂಗೀತಕಾರರು ಹಾಗೂ ಕವಿಗಳು ಸದಸ್ಯರಾಗಿದ್ದರು. ಆರಂಭದಲ್ಲಿ ಸೂಕ್ತ ರಾಷ್ಟ್ರಗೀತೆಯನ್ನು ರಚಿಸುವಲ್ಲಿ ಸಮಿತಿಯು ಹಲವು ತೊಡಕುಗಳನ್ನು ಎದುರಿಸಬೇಕಾಯಿತು.

೧೯೫೦ರ ಜನವರಿ ೩೦ರಲ್ಲಿ ಇಂಡೋನೇಷಿಯಾದ ಆಗಿನ ಅಧ್ಯಕ್ಷರಾದ ಸುಕಾರ್ನೋ ಪಾಕಿಸ್ತಾನಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಹಾಡಲು ಯಾವುದೇ ಅಧಿಕೃತ ರಾಷ್ಟ್ರಗೀತೆ ಲಭ್ಯವಿರಲಿಲ್ಲ. ನಂತರ ೧೯೫೦ರಲ್ಲಿ ಇರಾನಿನ ಷಾಹ, ಮೊಹಮ್ಮದ್ ರಜ಼ಾ ಫೆಹಲ್ವಿ ಅವರ ದಿಢೀರ್ ಭೇಟಿಯು ರಾಷ್ಟ್ರಗೀತೆ ಸಲುವಾಗಿ ಪಾಕಿಸ್ತಾನ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹೇರಿತು. ಆಗಿನ ರಾಷ್ಟ್ರಗೀತೆ ರಚನಾ ಸಮಿತಿಯ ಅಧ್ಯಕ್ಷರೂ, ಶಿಕ್ಷಣ ಸಚಿವರೂ ಆಗಿದ್ದ ಫ಼ಜ಼್ಲೂರ್‍ ರಹಮಾನ್‍ ಹಲವಾರು ಕವಿಗಳು, ಸಂಯೋಜಕರನ್ನು ನಿಯೋಜಿಸಿದ್ದರೂ, ಅವರು ಅಲ್ಲಿಸಿದ ಯಾವುದೇ ಸಾಹಿತ್ಯವನ್ನು ಸೂಕ್ತವೆಂದು ಪರಿಗಣಿಸಲಾಗಲಿಲ್ಲ. ರಚನಾ ಸಮಿತಿಯು ಹತ್ತುಹಲವು ಸಂಗೀತ ಸಂಯೋಜನೆಗಳನ್ನು ಪರೀಕ್ಷಿಸಿ, ಅಂತಿಮವಾಗಿ ಅಹ್ಮದ್ ಜಿ ಛಾಗ್ಲಾ ಅವರು ಮಂಡಿಸಿದ ರಾಗವನ್ನು ಔಪಚಾರಿಕ ಅನುಮೋದನೆಗೆ ಸಲ್ಲಿಸಿತು. ೨೧ ಆಗಸ್ಟ್ ೧೯೪೯ರಂದು ಪಾಕಿಸ್ತಾನ ಸರ್ಕಾರವು ಛಾಗ್ಲಾರವರ ಸಂಯೋಜನೆಯನ್ನು ಅಧಿಕೃತ ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಂಡಿತು.

೧೯೫೦ರ ಮಾರ್ಚ್ ೧ರಂದು ಮೊದಲಬಾರಿಗೆ ವಿದೇಶಿ ಅಧ್ಯಕ್ಷರೊಬ್ಬರಿಗೆ ಪಾಕಿಸ್ತಾನ ನೌಕಾಪಡೆಯಿಂದ ಇರಾನಿನ ಷಾಹ ಅವರ ಭೇಟಿಯ ಸಂದರ್ಭದಲ್ಲಿ, ಯಾವುದೇ ಸಾಹಿತ್ಯವಿಲ್ಲದೆ, ಕೇವಲ ರಾಷ್ಟ್ರಗೀತೆಯ ಸಂಗೀತ ಸಂಯೋಜನೆಯನ್ನು ನುಡಿಸಲಾಯಿತು.

ಸಂಗೀತ

ಕೌಮಿ ತರಾನಾ ಹಿಂದೂಸ್ತಾನಿ ಸಂಯೋಜನೆಯಾಗಿದ್ದರೂ, ವಿದೇಶಿ ಬ್ಯಾಂಡ್‍ಗಳು ಸುಲಭವಾಗಿ ನುಡಿಸುವಂಥಹುದ್ದಾಗಿದೆ.ರ‍ಚನೆಯ ಸಂಗೀತವು ಅದರ ಸಂಯೋಜಕ ಛಾಗ್ಲಾ ಅವರಿಗಿದ್ದ ಪೂರ್ವ ಮತ್ತು ಪಾಶ್ಚಾತ್ಯ ಸಂಗೀತಗಳ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತವೆ. ರಾಷ್ಟ್ರಗೀತೆಯನ್ನು ೮೦ಸೆಕೆಂಡುಗಳ ಕಾಲ ನುಡಿಸಿದ್ದು, ೨೧ ಸಂಗೀತ ವಾದ್ಯಗಳು ಮತ್ತು ೩೮ ವಿವಿಧ ಸ್ವರಗಳ ಬಳಕೆ ಮಾಡಿಕೊಳ್ಳಲಾಗಿದೆ.[೪]

ಸಾಹಿತ್ಯ

೧೯೫೨ರಲ್ಲಿ ಪಾಕಿಸ್ತಾನಿ ಕವಿ ಹಫ಼ೀಜ಼್ ಝಾಲಂಧರಿ ಬರೆದಿರುವ ಉರ್ದು ಸಾಹಿತ್ಯವು ಪರ್ಷಿಯನ್ ಭಾಷೆಯೊಂದಿಗೆ ಸಾಕಷ್ಟು ಸಾಮ್ಯತೆಹೊಂದಿದ್ದು, ಎರಡೂ ಭಾಷಿಕರಿಗೆ ಅರ್ಥವಾಗುವಂತಿದೆ. ಗೀತೆಯಲ್ಲಿರುವ ಮೂರು ಚರಣಗಳಲ್ಲಿ ಯಾವುದೇ ಚರಣವು ಪುನರಾವರ್ತಿಸುವುದಿಲ್ಲ. ಗೀತೆಯಲ್ಲಿರುವ ಬಹುತೇಕ ಶಬ್ದಗಳು ಪರ್ಷಿಯನ್ ಭಾಷೆಯದ್ದಾಗಿದ್ದು, 'کا' (ಕಾ, /'kɑː/) ಏಕೈಕ ಉರ್ದು ಪದವಾಗಿದೆ.[೫][೬][೭][೮][೯]

ಉರ್ದು ಸಾಹಿತ್ಯಲಿಪ್ಯಂತರಣಭಾಷಾಂತರ
ಕನ್ನಡಇಂಗ್ಲೀಷ್ಇಂಗ್ಲೀಷ್[೧೦]
پاک سرزمین شاد بادಪಾಕ್ ಸರ್‍ಜ಼ಮೀನ್ ಷಾದ್‍ ಬಾದ್Pāk sarzamīn shād bādMay the holy land, stay glad;
كشورِ حسين شاد بادಕಿಶ್ವರ್-ಎ-ಹಸೀನ್ ಷಾದ್‍ ಬಾದ್Kishwar-i ḥasīn shād bādBeauteous realm, stay glad.
تُو نشانِ عزمِ عالی شانತೂ ನಿಷಾನ್-ಎ-ಅಜ಼್ಮ್-ಎ-ಆಲೀ ಶಾನ್Tū nishān-i ʿazm-i ʿālī shānThou, the sign of high resolve
ارضِ پاکستان!ಅರ್ಜ಼್-ಎ-ಪಾಕಿಸ್ತಾನ್!Arẓ-i Pākistān!O Land of Pakistan!
مرکزِ یقین شاد بادಮರ್ಕಜ಼್-ಎ-ಯಕೀನ್ ಷಾದ್‍ಬಾದ್Markaz-i yaqīn shād bādCitadel of faith, stay glad.
پاک سرزمین کا نظامಪಾಕ್ ಸರ್‍ಜ಼ಮೀನ್ ಕಾ ನಿಜ಼ಾಮ್Pāk sarzamīn kā niz̤āmOrder of the holy land,
قوّتِ اُخوّتِ عوامಕುವ್ವತ್-ಎ-ಉಖುವ್ವತ್-ಎ-ಅವಾಮ್Quwwat-i Ukhuwwat-i ʿawāmPower of fraternity of the populace;
قوم، ملک، سلطنتಕೌಮ್, ಮುಲ್ಕ್, ಸಲ್ತನತ್Qaum, mulk, salt̤anatThe nation, country, and domain;
پائنده تابنده باد!ಪಾಯಿಂದಾ ತಾಬಿಂದಾ ಬಾದ್!Pāyindah tābindah bād!Ever luminous remain!
شاد باد منزلِ مرادಷಾದ್ ಬಾದ್ ಮನ್‍ಜ಼ಿಲ್-ಎ-ಮುರಾದ್Shād bād manzil-i murādThe cherished goal, stay glad.
پرچمِ ستاره و ہلالಪರ್ಚ್ಚಿಮ್-ಎ-ಸಿತಾರಾ-ಒ-ಹಿಲಾಲ್Parcam-i sitārah o-hilālFlag with the star and crescent,
رہبرِ ترقّی و کمالರೆಹ್‍ಬರ್-ಎ-ತರಕ್ಕೀ-ಒ-ಕಮಾಲ್Rahbar-i taraqqī o-kamālThe leader of progress and ascent,
ترجمانِ ماضی، شانِ حالತರ್ಜುಮಾನ್-ಎ-ಮಾಜ಼ೀ, ಶಾನ್-ಎ-ಹಾಲ್Tarjumān-i māẓī, shān-i ḥālDragoman of past, the pride of present;
جانِ استقبال!ಜಾನ್-ಎ-ಇಸ್ತಖ್‍ಬಾಲ್!Jān-i istiqbāl!Soul of the future!
سایۂ خدائے ذوالجلالಸಾಯಾಃ-ಇ-ಖುದಾ-ಇ-ಜ಼ೂ-ಇ-ಜಲಾಲ್Sāyah-yi Khudā-yi Ẕū l-jalālShadow of the God of grandeur.

ಬಾಹ್ಯ ಕೊಂಡಿಗಳು