ಗೂಗಲ್ ನಕ್ಷೆಗಳು

ಗೂಗಲ್ ನಕ್ಷೆಗಳು (ಹಿಂದೆ ಗೂಗಲ್ ಲೋಕಲ್ ಎಂದು ಕರೆಯಲಾಗುತ್ತಿತ್ತು) ಗೂಗಲ್ ಒದಗಿಸುವ ಜಾಲತಾಣದಲ್ಲಿ-ನಕ್ಷೆ-ತೋರಿಸುವ ಸೇವಾ ಅನ್ವಯಯಿಸುವಿಕೆ ಮತ್ತು ತಂತ್ರಜ್ಞಾನವಾಗಿದೆ. ಇದು ವಾಣಿಜ್ಯವಲ್ಲದ ಬಳಕೆಗೆ ಉಚಿತವಾಗಿದ್ದು ಹಲವಾರು ನಕ್ಷೆ-ಆಧಾರಿತ ಸೇವೆಗಳನ್ನು ಒದಗಿಸುತ್ತದೆ, ಅವುಗಳೆಂದರೆ ಗೂಗಲ್ ನಕ್ಷೆಗಳ ಜಾಲತಾಣ, ಗೂಗಲ್ ರೈಡ್ ಫೈಂಡರ್, ಗೂಗಲ್ ಟ್ರಾನ್ಸಿಟ್[೧] ಮತ್ತು ಗೂಗಲ್ ನಕ್ಷೆ APIನ ಮೂಲಕ ಮೂರನೇ-ಪಕ್ಷದ ಜಾಲತಾಣಗಳಲ್ಲಿ ಹುದುಗಿರುವ ನಕ್ಷೆಗಳು.[೨] ಇದು ಪ್ರಪಂಚದಾದ್ಯಂತದ ಅಸಂಖ್ಯಾತ ರಾಷ್ಟ್ರಗಳ ರಸ್ತೆಯ ನಕ್ಷೆಗಳು, ಕಾಲ್ನಡಿಗೆ, ಕಾರು ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ಪ್ರಯಾಣ ಮಾಡಲು ಮಾರ್ಗ ಯೋಜಕ ಹಾಗೂ ನಗರದಲ್ಲಿ ಉದ್ಯಮವಿರುವ ಸ್ಥಳವನ್ನು ಸೂಚಿಸುವ ಸ್ಥಳ-ಸೂಚಕಗಳು ಮೊದಲಾದವನ್ನು ಒದಗಿಸುತ್ತದೆ. ಗೂಗಲ್ ನಕ್ಷೆಗಳ ಉಪಗ್ರಹ ಚಿತ್ರಗಳು ಈಗಿನವಲ್ಲ; ಅವು ಕೆಲವು ತಿಂಗಳ ಅಥವಾ ವರ್ಷಗಳ ಹಿಂದಿನವು.[೩]

Google Maps
ಚಿತ್ರ:Google Maps directions.png
Screenshot of Google Maps showing a route from San Francisco to Los Angeles on Interstate 5.
URLmaps.google.com
ತಾಣದ ಗುಂಪುWeb mapping
ದಾಖಲಿಸಿದOptional, included with a Google Account
ಲಭ್ಯವಾದlanguage(s)Multilingual
ಮಾಲೀಕGoogle
ನಿರ್ಮಾತೃರುGoogle
ಪ್ರಾರಂಭಿಸಿದಫೆಬ್ರವರಿ 8, 2005 (2005-02-08)
ಸಧ್ಯದ ಸ್ತಿತಿActive

ಗೂಗಲ್ ನಕ್ಷೆಗಳು ಮರ್ಕೇಟರ್ ಪ್ರಕ್ಷೇಪಣದ ಹತ್ತಿರದ ಹೋಲಿಕೆಯನ್ನು ಬಳಸುತ್ತದೆ, ಆದ್ದರಿಂದ ಇದು ಧ್ರುವಗಳ ಸುತ್ತಮುತ್ತಲಿನ ಪ್ರದೇಶಗಳನ್ನು ತೋರಿಸುವುದಿಲ್ಲ. ಇದಕ್ಕೆ ಸಂಬಂಧಿಸಿದ ಒಂದು ಸೇವೆಯೆಂದರೆ ಗೂಗಲ್ ಅರ್ತ್, ಇದು ಧ್ರುವ ಪ್ರದೇಶಗಳನ್ನು ತೋರಿಸುವುದನ್ನೂ ಒಳಗೊಂಡಂತೆ ಹೆಚ್ಚು ಪ್ರಪಂಚ-ಅವಲೋಕನದ ಗುಣಲಕ್ಷಣಗಳನ್ನು ಒದಗಿಸುವ ಒಂದು ಯೋಜನೆಯಾಗಿದೆ.

ಉಪಗ್ರಹ ನೋಟ

ಗೂಗಲ್ ನಕ್ಷೆಗಳು ಅಮೆರಿಕಾ ಸಂಯುಕ್ತ ಸಂಸ್ಥಾನ (ಹವಾಯಿ, ಅಲಸ್ಕಾ, ಪ್ಯುಯೆರ್ಟೊ ರಿಕೊ, ಮತ್ತು U.S. ವರ್ಜಿನ್ ದ್ವೀಪಗಳನ್ನೂ ಒಳಗೊಂಡು) ಕೆನಡಾ ಮತ್ತು ಯುನೈಟೆಡ್ ಕಿಂಗ್ಡಮ್ ಮಾತ್ರವಲ್ಲದೆ ಆಸ್ಟ್ರೇಲಿಯಾ ಮತ್ತು ಇತರ ಹಲವಾರು ರಾಷ್ಟ್ರಗಳ ಹೆಚ್ಚಿನ ನಗರ ಪ್ರದೇಶಗಳ ಹೆಚ್ಚು-ಪೃಥಕ್ಕರಣದ ಉಪಗ್ರಹ-ಚಿತ್ರಗಳನ್ನು ಒದಗಿಸುತ್ತವೆ. ಗೂಗಲ್ ನಕ್ಷೆಗಳು ಬಳಸುವ ಹೆಚ್ಚು-ಪೃಥಕ್ಕರಣದ ಚಿತ್ರಣಗಳು ಈಜಿಪ್ಟ್‌ನ ನೈಲ್ ಕಣಿವೆ, ಸಹಾರ ಮರುಭೂಮಿ ಮತ್ತು ಸಿನೈ ಮೊದಲಾದ ಪ್ರದೇಶಗಳನ್ನೂ ಒಳಗೊಳ್ಳತ್ತವೆ. ಗೂಗಲ್ ನಕ್ಷೆಗಳು ಇಂಗ್ಲಿಷ್-ಮಾತನಾಡುವ ಪ್ರದೇಶಗಳ ಹೆಚ್ಚಿನ ನಗರಗಳನ್ನೂ ಆವರಿಸುತ್ತವೆ. ಆದರೆ ಗೂಗಲ್ ನಕ್ಷೆಗಳ ಸೇವೆಯು ಕೇವಲ ಇಂಗ್ಲಿಷ್ ನಕ್ಷೆಗಳ ಸೇವೆಯಲ್ಲ, ಏಕೆಂದರೆ ಅದು ಪ್ರಪಂಚವನ್ನೆಲ್ಲಾ ಆವರಿಸುವ ಉದ್ದೇಶವನ್ನು ಹೊಂದಿತ್ತು.

ಭಯೋತ್ಪಾದಕರು ದಾಳಿಗಳನ್ನು ಮಾಡಲು ಯೋಜನೆಗಳನ್ನು ರೂಪಿಸುವಾಗ ಈ ಉಪಗ್ರಹ ಚಿತ್ರಗಳನ್ನು ಬಳಸುವ ಸಂಭವವಿದೆ ಎಂದು ಅನೇಕ ಸರ್ಕಾರಗಳು ದೂರಿದವು.[೪] ಗೂಗಲ್ ಭದ್ರತೆಗಾಗಿ U.S. ನೇವಲ್ ಅಬ್ಸರ್ವೇಟರಿ ಪ್ರದೇಶ (ಇಲ್ಲಿ ಉಪಾಧ್ಯಕ್ಷರ ಅಧಿಕೃತ ನಿವಾಸವಿರುತ್ತದೆ) ಹಾಗೂ ಹಿಂದೆ[೫] ಅಮೆರಿಕಾ ಸಂಯುಕ್ತ ಸಂಸ್ಥಾನದ ಶಾಸನಮಂದಿರ ಮತ್ತು ಶ್ವೇತ ಭವನ ಮೊದಲಾದವನ್ನೂ ಒಳಗೊಂಡಂತೆ ಕೆಲವು ಪ್ರದೇಶಗಳ (ಮುಖ್ಯವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ)[೬] ಮಾಹಿತಿಯನ್ನು ತೋರಿಸುವುದಿಲ್ಲ. ನೇವಡಾ ಮರುಭೂಮಿಯ ಏರಿಯಾ 51 ಇತ್ಯಾದಿ ಇತರ ಸುಪ್ರಸಿದ್ಧ ಸರ್ಕಾರಿ ಸಂಘಟನೆಗಳ ಮಾಹಿತಿಯು ಗೂಗಲ್‍‌ನಲ್ಲಿ ಗೋಚರವಾಗುತ್ತದೆ.ಎಲ್ಲಾ ಪ್ರದೇಶಗಳ ಉಪಗ್ರಹ ಚಿತ್ರಗಳು ಒಂದೇ ಪೃಥಕ್ಕರಣವನ್ನು ಹೊಂದಿಲ್ಲ; ಕಡಿಮೆ ಜನನಿರುವ ಪ್ರದೇಶಗಳ ಮಾಹಿತಿಯು ಸಾಮಾನ್ಯವಾಗಿ ಕಡಿಮೆ ವಿವರಗಳನ್ನು ಒದಗಿಸುತ್ತದೆ. ಕೆಲವು ಪ್ರದೇಶಗಳು ಮೋಡಗಳ ತೇಪೆಯಿಂದ ಅಸ್ಪಷ್ಟವಾಗಿರುತ್ತವೆ.[೭][೮]

ಸುಲಭವಾಗಿ ಕೈಗೂಡುವ ಮತ್ತು ಶೋಧಿಸಬಹುದಾದ ನಕ್ಷೆ ಮತ್ತು ಉಪಗ್ರಹ ಚಿತ್ರವನ್ನು ನೀಡುವುದರೊಂದಿಗೆ, ಗೂಗಲ್‌ನ ನಕ್ಷೆ ಒದಗಿಸುವ ಸಾಧನವು ಉಪಗ್ರಹ ಚಿತ್ರಣದಲ್ಲಿ ತೀವ್ರ ಆಸಕ್ತಿಯನ್ನು ಉತ್ತೇಜಿಸಿತು. ಆಸಕ್ತಿದಾಯಕ ನೈಸರ್ಗಿಕ ಮತ್ತು ಕೃತಕ ಹೆಗ್ಗುರುತುಗಳು ಮಾತ್ರವಲ್ಲದೆ ಪ್ರಸಿದ್ಧ ಪ್ರಾಂಗಣಗಳು ಮತ್ತು ಅಪೂರ್ವ ಭೌಗೋಳಿಕ ರಚನೆಗಳ ಉಪಗ್ರಹ-ಚಿತ್ರಗಳನ್ನೊಳಗೊಂಡ ಜಾಲತಾಣಗಳು ರಚಿತವಾದವು, ಅವುಗಳ ಚಿತ್ರದಲ್ಲಿ "ದೊಡ್ಡಗಾತ್ರದ" ಬರಹಗಳು ಕಂಡುಬರುತ್ತವೆ.

ಗೂಗಲ್ ಉಪಗ್ರಹ ದಿಂದ ತೆಗೆದ ಚಿತ್ರವನ್ನು ಬಳಸುತ್ತಿದೆ ಎಂದು ಹೇಳುತ್ತದಾದರೂ, ಹೆಚ್ಚಿನ ಅಧಿಕ-ಪೃಥಕ್ಕರಣದ ಚಿತ್ರಗಳು ಉಪಗ್ರಹಗಳ ಬದಲಿಗೆ 800–1500 ಅಡಿ ಎತ್ತರದಲ್ಲಿ ಹಾರುವ ವಿಮಾನಗಳಿಂದ ತೆಗೆದ ವೈಮಾನಿಕ ಛಾಯಾಚಿತ್ರವಾಗಿವೆ."Blurry or Outdated Imagery".

ಗುರಿ

ಗೂಗಲ್ ನಕ್ಷೆಗಳಲ್ಲಿ ಹೊಂದಿಕೊಂಡಿರುವ ಪ್ರದೇಶಗಳು

ಗೂಗಲ್ ನಕ್ಷೆಗಳು ಈ ಕೆಳಗಿನವುಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತವೆ:

  • ಆಫ್ರಿಕಾದ ಪ್ರಧಾನ ಭೂಭಾಗ, ಆದರೆ ಈಜಿಪ್ಟ್, ಲೆಸೋತೊ ಹಾಗೂ ಸ್ಪ್ಯಾನಿಶ್ ನಗರಗಳಾದ ಸಿಯುಟ ಮತ್ತು ಮೆಲಿಲ್ಲಾ ಮೊದಲಾದವನ್ನು ಹೊರತುಪಡಿಸಿ.
  • ಯುರೋಪ್, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ದಕ್ಷಿಣ ಏಷ್ಯಾ: ಅಂದೋರ, ಅಲ್ಬೇನಿಯಾ, ಅರ್ಮೇನಿಯಾ, ಆಸ್ಟ್ರಿಯಾ, ಅಜರ್ಬೈಜಾನ್, ಬಾಂಗ್ಲಾದೇಶ, ಬೆಲ್ಜಿಯಮ್, ಬಲಾರಸ್, ಬಲ್ಗೇರಿಯಾ, ಕ್ರೊಯಾಟಿಯಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್ (ಫರೋ ದ್ವೀಪಗಳನ್ನು ಹೊರತುಪಡಿಸಿ), ಎಸ್ಟೋನಿಯಾ, ಫ್ರಾನ್ಸ್, ಫಿನ್ಲೆಂಡ್, ಜರ್ಮನಿ, ಗ್ರೀಸ್, ಗಿಬ್ರ್ಯಾಲ್ಟರ್, ಹಂಗೇರಿಯಾ, ಭಾರತ, ಇರಾನ್, ಐರ್ಲೆಂಡ್, ಇಟಲಿ, ಕಜಖ್‌ಸ್ತಾನ್, ಕಿರ್ಗಿಜ್‌ಸ್ತಾನ್, ಲಾಟ್ವಿಯಾ, ಲೈಚ್ಟೆಂಸ್ಟೈನ್, ಲಿತ್ವೇನಿಯಾ, ಲುಕ್ಸೆಂಬರ್ಗ್, FYR ಮ್ಯಾಸೆಡೋನಿಯಾ, ಮಾಲ್ಡೋವ, ಮೊನಾಕೊ, ಮಾಂಟೆನೆಗ್ರೊ, ನೇಪಾಳ, ನೆದರ್ಲೆಂಡ್ಸ್, ನಾರ್ವೆ ( ಸ್ವಾಲ್ಬಾರ್ಡ್ಅನ್ನು ಹೊರತುಪಡಿಸಿ), ಪಾಕಿಸ್ತಾನ, ಪೊಲೆಂಡ್, ಪೋರ್ಚುಗಲ್ (ಅಜೋರೆಸ್ ಮತ್ತು ಮಡೈರಾವನ್ನು ಹೊರತುಪಡಿಸಿ), ರೊಮೇನಿಯಾ, ಸ್ಯಾನ್ ಮರಿನೊ, ಸ್ಲೊವಾಕಿಯಾ, ಸ್ಲೊವೇನಿಯಾ, ಸರ್ಬಿಯಾ, ಸ್ಪೇನ್ (ಕೆನರಿ ದ್ವೀಪಗಳು ಹಾಗೂ ಸಿಯುಟ ಮತ್ತು ಮೆಲಿಲ್ಲಾವನ್ನು ಹೊರತುಪಡಿಸಿ), ಸ್ವೀಡನ್, ಸ್ವಿಟ್ಜರ್ಲೆಂಡ್, ಟಾಜಿಕಿಸ್ತಾನ್, ಟರ್ಕಿ, ತುರ್ಕ್‌ಮೆನಿಸ್ತಾನ್, ಉಕ್ರೇನ್, ಯುನೈಟೆಡ್ ಕಿಂಗ್ಡಮ್, ಉಜ್ಬೆಕಿಸ್ತಾನ್ ಮತ್ತು ವೆಟಿಕನ್ ಸಿಟಿ
  • ಉತ್ತರ ಅಮೆರಿಕಾ: ಕೆನಡಾ, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಮೆಕ್ಸಿಕೊ
  • ದಕ್ಷಿಣ ಅಮೆರಿಕಾ: ಅರ್ಜೆಂಟೈನಾ, ಬೊಲಿವಿಯಾ, ಬ್ರೆಜಿಲ್, ಚಿಲಿ, ಪ್ಯಾರಾಗ್ವಾಯ್ ಮತ್ತು ಪೆರು (ಸ್ಯಾನ್ ಮಾರ್ಟಿನ್‌ ಉತ್ತರ ಭಾಗ, ಪೆಸಿಫಿಕ್ ಕರಾವಳಿ ಅಥವಾ ಇಕ್ವಿಟೋಸ್‌ನ ಪಿಯುರಾ ಹಾಗೂ ಲೊರೆಟೊ ಪ್ರದೇಶದ ಇತರ ಸ್ಥಳಗಳನ್ನು ಹೊರತುಪಡಿಸಿ)
  • ಆಗ್ನೇಯಾ ಏಷ್ಯಾ: ಕಾಂಬೋಡಿಯಾ, ಲಾವೋಸ್, ಸಿಂಗಾಪುರ, ಪರ್ಯಾಯ ದ್ವೀಪ ಮಲೇಷಿಯಾ, ಥೈಲೆಂಡ್ ಮತ್ತು ವಿಯೆಟ್ನಾಂ.
  • ಸಾಮಾನ್ಯ-ಗಡಿ-ಹೊಂದಿಲ್ಲದ(ನಾನ್-ಕಾಂಟಿಗ್ಯುವಸ್) ರಾಷ್ಟ್ರಗಳು ಮತ್ತು ಪ್ರದೇಶಗಳು: ಆಸ್ಟ್ರೇಲಿಯಾ, ಚೀನಾ, ಕೊಮೊರಾಸ್, ಕೋಸ್ಟಾ ರಿಕಾ, ಈಜಿಪ್ಟ್, ಹವಾಯಿ, ಹಿಸ್ಪೇನಿಯೋಲ (ಡಾಮಿನಿಕನ್ ರಿಪಬ್ಲಿಕ್ ಮತ್ತು ಹೈಟಿ), ಹಾಂಗ್ ಕಾಂಗ್, ಐಸ್ಲೆಂಡ್, ಇಂಡೋನೇಷಿಯಾ (ಬಲಿ, ಜಾವ, ಮದುರ ಮತ್ತು ಸುಮಾತ್ರ ಮಾತ್ರ), ಇಸ್ರೇಲ್ (ಮತ್ತು ಪಶ್ಚಿಮ ಕರಾವಳಿಯ ಭಾಗಗಳು), ಜಮೈಕಾ, ಜಪಾನ್, ಜೋರ್ಡನ್, ದಕ್ಷಿಣ ಕೊರಿಯಾ, ಲೆಬನಾನ್, ಮಕಾವ್, ಮದಗಸ್ಕಾರ್, ಮಾಲ್ಟ, ಮಾರಿಟಿಯಸ್, ಮೆಕ್ಸಿಕೊ, ನ್ಯೂಜಿಲೆಂಡ್, ಪ್ಯುಯೆರ್ಟೊ ರಿಕೊ, ರಿಯೂನಿಯನ್, ರಷ್ಯಾ (ಮೋಸ್ಕೊ ಪ್ರದೇಶ ಮಾತ್ರ), ಸಬಾಹ್, ಸಾರಾವಕ್, ಸೆಚೆಲ್ಲೆಸ್, ದಕ್ಷಿಣಾ ಕೊರಿಯಾ (ಆಕಾಶಕಾಯದ ಸಂಕ್ರಮಣ ಮಾತ್ರ), ಶ್ರೀಲಂಕಾ, ಥೈವಾನ್, ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು ಮತ್ತು US ವರ್ಜಿನ್ ದ್ವೀಪಗಳು.

ಕಾರ್ಯಗತಗೊಳಿಸುವಿಕೆ

ಇತರ ಅನೇಕ ಗೂಗಲ್ ಜಾಲತಾಣ ಅನ್ವಯಗಳಂತೆ, ಗೂಗಲ್ ನಕ್ಷೆಗಳೂ ಸಹ ವ್ಯಾಪಕವಾಗಿ ಜಾವಸ್ಕ್ರಿಪ್ಟ್ಅನ್ನು ಬಳಸುತ್ತವೆ. ಬಳಕೆದಾರರು ನಕ್ಷೆಯನ್ನು ಎಳೆದಾಗ, ರೇಖಾ-ಚೌಕಗಳು ಸರ್ವರ್‌ನಿಂದ ಡೌನ್‌ಲೋಡ್ ಆಗಿ ಆ ಪುಟದಲ್ಲಿ ಮೂಡಿಬರುತ್ತವೆ. ಬಳಕೆದಾರರು ವ್ಯವಹಾರಕ್ಕಾಗಿ ಹುಡುಕಿದರೆ, ಫಲಿತಾಂಶಗಳು ಪಕ್ಕದ ಫಲಕ ಮತ್ತು ನಕ್ಷೆಯಲ್ಲಿ ಮೂಡಿಬರಲು ಹಿನ್ನೆಲ್ಲೆಯಲ್ಲಿ ಡೌನ್‌ಲೋಡ್ ಆಗುತ್ತವೆ; ಪುಟವು ಪುನಃಲೋಡ್ ಆಗುವುದಿಲ್ಲ. ಕೆಂಪು ಸೂಜಿಯನ್ನು (ಕೆಲವು ಭಾಗಶಃ-ಪಾರದರ್ಶಕ PNGಗಳಿಂದ ರಚಿತವಾದ) ನಕ್ಷೆಯ ಚಿತ್ರಗಳ ಮೇಲ್ಭಾಗದಲ್ಲಿ ಇರಿಸುವ ಮೂಲಕ ಸ್ಥಳಗಳನ್ನು ಸಮರ್ಥವಾಗಿ ಎಳೆಯಬಹುದು.

ಫಾರ್ಮ್ ಸಲ್ಲಿಕೆಯ ಒಂದು ಹುದುಗಿದ-ಐಫ್ರೇಮ್ಅನ್ನು ಬಳಸಲಾಗುತ್ತದೆ ಏಕೆಂದರೆ ಅದು ಬ್ರೌಸರ್ ಇತಿಹಾಸವನ್ನು ಉಳಿಸುತ್ತದೆ. ಈ ಜಾಲತಾಣವು ಉತ್ತಮ ನಿರ್ವಹಣೆಯ ಉದ್ದೇಶದಿಂದ ದತ್ತಾಂಶ ವರ್ಗಾವಣೆಗಾಗಿ XMLನ ಬದಲಿಗೆ JSONಅನ್ನು ಬಳಸುತ್ತದೆ. ಈ ತಂತ್ರಜ್ಞಾನಗಳೆರಡೂ ವ್ಯಾಪಕ ಅಜಾಕ್ಸ್ ಆಧಾರದಲ್ಲಿ ಕಂಡುಬರುತ್ತವೆ.

ವಿಸ್ತರಣೀಯತೆ ಮತ್ತು ಗ್ರಾಹಕೀಕರಣ

ಗೂಗಲ್ ನಕ್ಷೆಗಳನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ಜಾವಸ್ಕ್ರಿಪ್ಟ್ ಮತ್ತು XMLನಲ್ಲಿ ಕೋಡ್ ಮಾಡಲಾಗಿರುವುದರಿಂದ, ಕೆಲವು ಅಂತಿಮ-ಬಳಕೆದಾರರು ಈ ಸಾಧನವನ್ನು ವಿರುದ್ಧವಾಗಿ-ರೂಪಿಸಿದರು ಹಾಗೂ ಗ್ರಾಹಕ-ಪರ ಸ್ಕ್ರಿಪ್ಟ್‌ಗಳನ್ನು ಮತ್ತು ಸರ್ವರ್-ಪರ ಹುಕ್‌ಗಳನ್ನು ರಚಿಸಿದರು, ಇವು ಬಳಕೆದಾರರಿಗೆ ಅಥವಾ ಜಾಲತಾಣಗಳಿಗೆ ಗೂಗಲ್ ನಕ್ಷೆಗಳಿಗೆ ವಿಸ್ತರಿಸಿದ ಅಥವಾ ಗ್ರಾಹಕರ-ಇಷ್ಟಾನುಸಾರದ ಲಕ್ಷಣಗಳನ್ನು ಸೇರಿಸಲು ಅವಕಾಶ ಮಾಡಿಕೊಟ್ಟವು.

ಗೂಗಲ್‌ನಿಂದ ಮೂಲಭೂತ ಸಾಧನ ಮತ್ತು ನಕ್ಷೆ/ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ಅಂತಹ ಸಾಧನಗಳು ಗೂಗಲ್ ನಕ್ಷೆಗಳ ಇಂಟರ್ಫೇಸ್‌ಗೆ ಗ್ರಾಹಕ-ಆಯ್ಕೆಯ ಸ್ಥಳ ಐಕಾನ್‌ಗಳು, ಸ್ಥಳದ ನಿರ್ದೇಶಾಂಕ ಮತ್ತು ಮೆಟಾಡೇಟಾ ಹಾಗೂ ಗ್ರಾಹಕ ನಕ್ಷೆ ಚಿತ್ರದ-ಮೂಲಗಳನ್ನು ಒದಗಿಸುತ್ತದೆ. ಸ್ಕ್ರಿಪ್ಟ್-ಸೇರಿಸುವ ಸಾಧನ ಗ್ರೀಸ್‌ಮಂಕಿಯು ಗೂಗಲ್ ನಕ್ಷೆಗಳ ದತ್ತಾಂಶವನ್ನು ಗ್ರಾಹಕೀಯಗೊಳಿಸಲು ಹಲವಾರು ಗ್ರಾಹಕ-ಪರ ಸ್ಕ್ರಿಪ್ಟ್‌ಗಳನ್ನು ಒದಗಿಸುತ್ತದೆ.

ಫ್ಲಿಕರ್ ಮೊದಲಾದ ಫೋಟೊ ಹಂಚುವ ಜಾಲತಾಣಗಳೊಂದಿಗಿನ ಸಂಯೋಗದೊಂದಿಗೆ ಇವುಗಳನ್ನು "ಮೆಮರಿ ನಕ್ಷೆ"ಗಳನ್ನು ರಚಿಸಲು ಬಳಸಲಾಗುತ್ತದೆ. [clarification needed What are memory maps?] ಕೀಹೋಲ್ ಉಪಗ್ರಹ ಫೋಟೊಗಳ ನಕಲುಗಳನ್ನು ಬಳಸಿಕೊಂಡು, [clarification needed What are Keyhole satellite photos?] ಬಳಕೆದಾರರು ವೈಯಕ್ತಿಕ ಮಾಹಿತಿಗಳನ್ನು ಮತ್ತು ಪ್ರದೇಶದ ನಿರ್ದಿಷ್ಟ ಅಂಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಚಿತ್ರ-ವಿವರಣೆಯ ಅಂಶಗಳ ಪ್ರಯೋಜನವನ್ನು ಪಡೆದರು.

ಗೂಗಲ್ ನಕ್ಷೆ API

ಗೂಗಲ್ ಅಭಿವರ್ಧಕರಿಗೆ ತಮ್ಮ ಜಾಲತಾಣಗಳಲ್ಲಿ ಗೂಗಲ್ ನಕ್ಷೆಗಳನ್ನು ಏಕೀಕರಿಸಲು ಅವಕಾಶ ಮಾಡಿಕೊಡಲು 2005ರ ಜೂನ್‌ನಲ್ಲಿ[೯] ಗೂಗಲ್ ನಕ್ಷೆ API ಅನ್ನು ಆರಂಭಿಸಿತು. ಇದೊಂದು ಉಚಿತ ಸೇವೆಯಾಗಿದೆ ಮತ್ತು currently ಜಾಹೀರಾತುಗಳನ್ನು ಹೊಂದಿಲ್ಲ, ಆದರೆ ಗೂಗಲ್ ಅದರ ಬಳಕೆಯ ನಿಯಮಗಳಲ್ಲಿ ಭವಿಷ್ಯದಲ್ಲಿ ಜಾಹೀರಾತುಗಳನ್ನು ಪ್ರಕಟಗೊಳಿಸುವ ಹಕ್ಕನ್ನು ಮೀಸಲಿಟ್ಟಿರುತ್ತದೆಂದು ಹೇಳುತ್ತದೆ.[೧೦]

ಗೂಗಲ್ ನಕ್ಷೆ APIಅನ್ನು ಬಳಸಿಕೊಂಡು ಗೂಗಲ್ ನಕ್ಷೆಗಳ ಜಾಲತಾಣವನ್ನು ಜಾಲತಾಣದ ನಿರ್ದಿಷ್ಟ ದತ್ತಾಂಶವನ್ನು ಆವರಿಸಲು ಸಾಧ್ಯವಾಗುವ ಹೊರಗಿನ ಜಾಲತಾಣಕ್ಕೆ ಹುದುಗಿಸಬಹುದು. ಆರಂಭದಲ್ಲಿ ಕೇವಲ ಜಾವಸ್ಕ್ರಿಪ್ಟ್ API ಆಗಿದ್ದ, ನಕ್ಷೆ API ವಿಸ್ತರಣೆಗೊಂಡು ಸ್ಥಿರ-ನಕ್ಷೆ ಚಿತ್ರಗಳನ್ನು ಪತ್ತೆಹಚ್ಚುವ ಒಂದು ಸೇವೆ ಆಡೋಬ್ ಫ್ಲ್ಯಾಶ್ ಅನ್ವಯಗಳಿಗಾಗಿ APIಅನ್ನು ಹಾಗೂ ಭೌಗೋಳಿಕ ಕೋಡ್ ಮಾಡಲು, ಚಲಿಸುವ ನಿರ್ದೇಶನಗಳನ್ನು ರೂಪಿಸಲು ಮತ್ತು ಎತ್ತರವಾದ ಸ್ಥಳಗಳ ಬಗ್ಗೆ ಮಾಹಿತಿ ಪಡೆಯಲು ಜಾಲತಾಣ ಸೇವೆಗಳನ್ನು ಸೇರಿಸಿಕೊಂಡಿತು. ಸುಮಾರು 350,000[೧೧] ಜಾಲತಾಣಗಳು ಗೂಗಲ್ ನಕ್ಷೆ APIಅನ್ನು ಬಳಸುತ್ತವೆ, ಆ ಮೂಲಕ ಅದನ್ನು ಹೆಚ್ಚು ವ್ಯಾಪಕವಾಗಿ ಬಳಕೆಯಾಗುವ ಜಾಲತಾಣ ಅನ್ವಯ ಬೆಳವಣಿಗೆ API ಆಗಿ ಮಾಡಿವೆ.[೧೨]

ಗೂಗಲ್ ನಕ್ಷೆ API ಬಳಸಲ್ಪಡುವ ಜಾಲತಾಣಕ್ಕೆ ಸಾರ್ವಜನಿಕವಾಗಿ ಪ್ರವೇಶ ಸಾಧ್ಯವಿರುವ ಮತ್ತು ಪ್ರವೇಶಕ್ಕಾಗಿ ಶುಲ್ಕವನ್ನು ವಿಧಿಸದ ವಾಣಿಜ್ಯ ಬಳಕೆಗೆ ಇದು ಉಚಿತವಾಗಿರುತ್ತದೆ.[೧೩] ಈ ಅವಶ್ಯಕತೆಗಳನ್ನು ಪೂರೈಸದ ಜಾಲತಾಣಗಳು ಗೂಗಲ್ ನಕ್ಷೆ API ಪ್ರೀಮಿಯರ್ಅನ್ನು ಖರೀದಿಸಬಹುದು.[೧೪]

ಗೂಗಲ್ ನಕ್ಷೆ APIಯ ಯಶಸ್ಸು ಹಲವಾರು ಸ್ಪರ್ಧಾತ್ಮಕ ಪರ್ಯಾಯಗಳ ಹುಟ್ಟಿಗೆ ಕಾರಣವಾಯಿತು, ಅವುಗಳೆಂದರೆ ಯಾಹೂ! ಮ್ಯಾಪ್ಸ್ API, ಬಿಂಗ್ ಮ್ಯಾಪ್ಸ್ ಪ್ಲ್ಯಾಟ್‌ಫಾರ್ಮ್, ಮ್ಯಾಪ್‌ಕ್ವೆಸ್ಟ್ ಡೆವಲಪ್ಮೆಂಟ್ ಪ್ಲ್ಯಾಟ್‌ಫಾರ್ಮ್ ಮತ್ತು ಓಪನ್‌ಲೇಯರ್ಸ್.

ಮೊಬೈಲ್‌ಗಾಗಿ ಗೂಗಲ್ ನಕ್ಷೆಗಳು

2006ರಲ್ಲಿ ಗೂಗಲ್ ಯಾವುದೇ ಜಾವ-ಆಧಾರಿತ ಫೋನ್ ಅಥವಾ ಮೊಬೈಲ್ ಸಾಧನಗಳಲ್ಲಿ ಕೆಲಸ ನಿರ್ವಹಿಸುವ ಉದ್ದೇಶದಿಂದ ಮೊಬೈಲ್‌ಗಾಗಿ ಗೂಗಲ್ ನಕ್ಷೆಗಳೆಂಬ ಒಂದು ಜಾವ ಅನ್ವಯವನ್ನು ಆರಂಭಿಸಿತು. ಹೆಚ್ಚಿನ ಜಾಲ-ಆಧಾರಿತ ತಾಣಗಳ ಲಕ್ಷಣಗಳನ್ನು ಈ ಅನ್ವಯದಲ್ಲಿ ಒದಗಿಸಲಾಯಿತು.[೧೫]

2007ರ ನವೆಂಬರ್ 28ರಂದು, ಮೊಬೈಲ್‌ಗಾಗಿ ಗೂಗಲ್ ನಕ್ಷೆ 2.0 ಬಿಡುಗಡೆಗೊಂಡಿತು. ಇದು GPS-ರೀತಿಯ ಸ್ಥಳ ಸೇವೆಯನ್ನು ಆರಂಭಿಸಿತು, ಆದರೆ ಇದಕ್ಕೆ GPS ಗ್ರಾಹಕದ ಅಗತ್ಯವಿಲ್ಲ. "ನನ್ನ ಸ್ಥಳ" ಲಕ್ಷಣವು ಲಭ್ಯವಿದ್ದರೆ ಮೊಬೈಲ್ ಸಾಧನದ GPS ಸ್ಥಳವನ್ನು ಬಳಸಿಕೊಂಡು ಕೆಲಸ ಮಾಡುತ್ತದೆ. ಈ ಮಾಹಿತಿಯನ್ನು ಹತ್ತಿರದ ನಿಸ್ತಂತು ಜಾಲ ಮತ್ತು ಸೆಲ್ ಜಾಲತಾಣಗಳನ್ನು ಕಂಡುಹಿಡಿಯುವ ತಂತ್ರಾಂಶವು ಒದಗಿಸುತ್ತದೆ. ಆ ತಂತ್ರಾಂಶವು ನಂತರ ತಿಳಿದ ನಿಸ್ತಂತು ಜಾಲ ಮತ್ತು ಸೆಲ್ ಜಾಲತಾಣಗಳ ಡೇಟಾಬೇಸ್ಅನ್ನು ಉಪಯೋಗಿಸಿಕೊಂಡು ಸೆಲ್ ಜಾಲತಾಣದ ಸ್ಥಳವನ್ನು ಹುಡುಕುತ್ತದೆ. ಬಳಕೆದಾರರ ಪ್ರಸ್ತುತದ ಸ್ಥಳವನ್ನು ಕಂಡುಹಿಡಿಯಲು ನನ್ನ ಸ್ಥಳಕ್ಕೆ ನೆರವು ನೀಡಲು ವಿವಿಧ ಸೆಲ್ ಟ್ರಾನ್ಸ್‌ಮೀಟರ್‌ಗಳ ವಿವಿಧ ಸಂಕೇತಗಳ ಬಲವನ್ನು ತ್ರಿಕೋನ ಮಾಪನದಿಂದ ಕಂಡುಹಿಡಿದು, ನಂತರ ಅವುಗಳ ಸ್ಥಳದ ಲಕ್ಷಣವನ್ನು (ಆನ್‌ಲೈನ್ ಸೆಲ್ ಜಾಲತಾಣದ ಡೇಟಾಬೇಸ್‌ನಿಂದ ಪತ್ತೆಹಚ್ಚಿದ) ಬಳಸಿಕೊಳ್ಳುವ ಮೂಲಕ ಸೆಲ್-ಜಾಲತಾಣ ಸ್ಥಳ ವಿಧಾನವನ್ನು ಉಪಯೋಗಿಸಲಾಗುತ್ತದೆ. ಬಳಕೆದಾರರ ಸ್ಥಳದ ಬಗ್ಗೆ ಇನ್ನಷ್ಟು ಮಾಹಿತಿ ಕಂಡುಹಿಡಿಯಲು ಹತ್ತಿರದ ವೈಫೈ ಹಾಟ್‌ಸ್ಪಾಟ್‌ಗಳನ್ನು ಪತ್ತೆಹಚ್ಚಿ, ಅವುಗಳ ಸ್ಥಳ ಲಕ್ಷಣಗಳನ್ನು (ಸೆಲ್ ಜಾಲತಾಣ ಡೇಟಾಬೇಸ್‌ನಂತಹುದೇ ರೀತಿಯಲ್ಲಿ ಆನ್‌ಲೈನ್ ವೈಫೈ ಡೇಟಾಬೇಸ್‌ನಿಂದ ಪತ್ತೆಹಚ್ಚಿದ) ಬಳಸಿಕೊಳ್ಳುವ ಮೂಲಕ ನಿಸ್ತಂತು ಜಾಲ ಸ್ಥಳ ವಿಧಾನವನ್ನು ಅಂದಾಜಿಸಲಾಗುತ್ತದೆ.ಇವು ಈ ಕೆಳಗಿನ ಕ್ರಮದಲ್ಲಿ ಆದ್ಯತೆ ಪಡೆಯುತ್ತವೆ:

  • GPS-ಆಧಾರಿತ ಸೇವೆಗಳು
  • WLAN-ಆಧಾರಿತ/ ವೈಫೈ-ಆಧಾರಿತ ಸೇವೆಗಳು
  • ಸೆಲ್ ಟ್ರಾನ್ಸ್‌ಮೀಟರ್-ಆಧಾರಿತ ಸೇವೆಗಳು

ಟ್ರಾನ್ಸ್‌ಮೀಟರ್‌ನ ಬೆಲೆ ಗೊತ್ತುಮಾಡುವ ಸಾಮರ್ಥ್ಯದ ಆಧಾರದಲ್ಲಿ ತಂತ್ರಾಂಶವು ಸೆಲ್ ಜಾಲತಾಣದ ಅಂದಾಜಿಸಿದ ವಲಯದ ಸುತ್ತಲು ಹಳದಿ ಐಕಾನ್ ಮತ್ತು ಹಸಿರು ವೃತ್ತದಲ್ಲಿ ಲಭ್ಯಯಿರುವ ರಸ್ತೆಗಳನ್ನು ನೀಲಿ ಬಣ್ಣದಲ್ಲಿ ರಚಿಸುತ್ತದೆ. ಸೆಲ್ ಜಾಲತಾಣಕ್ಕೆ ಮೊಬೈಲ್ ಸಾಧನವು ಎಷ್ಟು ಹತ್ತಿರವಿದೆ ಎಂಬುದನ್ನು ಅಂದಾಜುಮಾಡುವ ಸೆಲ್ ಫೋನ್ ಸಂಕೇತದ ಸಾಮರ್ಥ್ಯವನ್ನು ಬಳಸಿಕೊಂಡು ಈ ಅಂದಾಜನ್ನು ಪರಿಷ್ಕರಿಸಲಾಗುತ್ತದೆ.

As of ಡಿಸೆಂಬರ್ 15, 2008, ಈ ಸೇವೆಯು ಕೆಳಗಿನ ಆಧಾರಗಳಿಗೆ ಲಭ್ಯವಾಗುತ್ತದೆ:[೧೬]

  • ಆಂಡ್ರೋಯ್ಡ್
  • iOS (ಐಫೋನ್/ಐಪಾಡ್ ಟಚ್/ಐಪಾಡ್)
  • ವಿಂಡೋಸ್ ಮೊಬೈಲ್ ( 2010ರ ಡಿಸೆಂಬರ್ 17ರ ಪ್ರಕಾರ ವಿಂಡೋಸ್ ಫೋನ್ 7 ಅಲ್ಲ)
  • ನೋಕಿಯಾ/ಸಿಂಬಿಯನ್ (S60 3ನೇ ಆವೃತ್ತಿ ಮಾತ್ರ)
  • ಸಿಂಬಿಯನ್ OS (UIQ v3)'
  • ಬ್ಲ್ಯಾಕ್‌ಬೆರಿ
  • ಜಾವ-ಆಧಾರದ ಫೋನ್‌ಗಳು (MIDP 2.0 ಮತ್ತು ಮೇಲಿನ), ಉದಾಹರಣೆಗಾಗಿ ಸೋನಿ ಎರಿಕ್ಸನ್ K800i
  • ಪಾಮ್ OS (ಸೆಂಟ್ರೊ ಮತ್ತು ಹೊಸತು)
  • ಪಾಮ್ ವೆಬ್OS (ಪಾಮ್ ಪ್ರಿ ಮತ್ತು ಪಾಮ್ ಪಿಕ್ಸಿ)

2009ರ ನವೆಂಬರ್ 4ರಂದು, ಮೋಟೊರೋಲ ಡ್ರಾಯ್ಡ್‌ನ ಗೂಗಲ್ ಆಂಡ್ರೋಯ್ಡ್ OS 2.0 ಎಕ್ಲೇರ್ ಒಂದಿಗೆ ಜತೆಗೂಡಿ ಗೂಗಲ್ ಮ್ಯಾಪ್ಸ್ ನೇವಿಗೇಶನ್ ಬಿಡುಗಡೆಗೊಂಡಿತು, ಇದರಲ್ಲಿ ಧ್ವನಿ ಆದೇಶಗಳು, ಟ್ರಾಫಿಕ್ ವರದಿಗಳು ಮತ್ತು ರಸ್ತೆಯ ಅವಲೋಕನದ ಬೆಂಬಲ ಮೊದಲಾದವು ಹೆಚ್ಚಿಗೆ ಇದ್ದವು.[೧೭] ಆರಂಭಿಕ ಬಿಡುಗಡೆಯು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸೀಮಿತವಾಗಿತ್ತು.[೧೮]

ಗೂಗಲ್ ಮ್ಯಾಪ್ಸ್ ಆಂಡ್ರೋಯ್ಡ್ 2.0.

ಚಿತ್ರ:Google Maps 5.0 Android.png
ಆಂಡ್ರೋಯ್ಡ್‌ನ ಗೂಗಲ್ ನಕ್ಷೆಗಳು

ಸೆಲ್ ಫೋನ್‌ಗಳನ್ನು ಸಮುದ್ರಯಾನದಲ್ಲಿ ಸಹಾಯಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಲಿಖಿತ ಚಾಲನೆಯ ಸೂಚನೆಗಳು ಕೆಲವೊಮ್ಮೆ ಅನುಸರಿಸಲು ತುಂಬಾ ಅಸ್ಪಷ್ಟವಾಗಿರುತ್ತವೆ. ಸಮುದ್ರಯಾನ ಉಪಕರಣಗಳು ಶತಕೋಟಿ ಡಾಲರ್ ಉದ್ಯಮವಾಗಿವೆ, ಅದೇ ಗೂಗಲ್ ಮ್ಯಾಪ್ಸ್ ನೇವಿಗೇಶನ್ ಫಾರ್ ಆಂಡ್ರಾಯ್ಡ್ 2.0 ಉಚಿತವಾಗಿದೆ.

ಈ ಅನ್ವಯದಲ್ಲಿ ಒದಗಿಸಲಾದ ಗುಣಲಕ್ಷಣಗಳೆಂದರೆ:

  • ಹುಡುಕಾಟವು ಸ್ಪಷ್ಟ ಇಂಗ್ಲಿಷ್‌ನಲ್ಲಿದೆ
  • ಧ್ವನಿಯ ಮೂಲಕ ಹುಡುಕಾಟ
  • ಟ್ರಾಫಿಕ್ ಅವಲೋಕನ
  • ಮಾರ್ಗದಾದ್ಯಂತ ಹುಡುಕಾಟ
  • ಉಪಗ್ರಹ ಅವಲೋಕನ
  • ಸ್ಟ್ರೀಟ್ ವ್ಯೂ
  • ಕಾರ್ ಡಾಕ್ ಮೋಡ್

ಪರಿಣಾಮ
ಗೂಗಲ್ ಮ್ಯಾಪ್ಸ್ ನೇವಿಗೇಶನ್ ಉಚಿತವಾಗಿದೆ. ಆಂಡ್ರೋಯ್ಡ್‌ಗಾಗಿ ಗೂಗಲ್ ನಕ್ಷೆಗಳ ದೋಷವೆಂದರೆ ಐಫೋನ್‌ನ ಗೂಗಲ್ ನಕ್ಷೆಗಳ ಅನ್ವಯದಂತೆ ಗೂಗಲ್ ನಕ್ಷೆಗಳಿಂದ ನಕ್ಷೆಗಳನ್ನು ಮತ್ತು ಸಂಬಂಧಿತ ಮಾಹಿತಿಯನ್ನು ಪಡೆಯಲು ಅಂತರಜಾಲ ಸಂಪರ್ಕದ ಅಗತ್ಯವಿರುತ್ತದೆ.[೧೯]

ಗೂಗಲ್ ಸಮುದ್ರಯಾನಕ್ಕಾಗಿ-ಗೂಗಲ್-ನಕ್ಷೆಗಳನ್ನು ಆರಂಭಿಸಿದ ನಂತರ ಟಾಮ್-ಟಾಮ್, ಗಾರ್ಮಿನ್ ಮತ್ತು ಇತರ ಸಮುದ್ರಯಾನ ಸೇವಾ ಪೂರೈಕೆದಾರರ ಷೇರುಗಳು ಹೆಚ್ಚುಕಡಿಮೆ ಇಪ್ಪತ್ತೈದು ಪ್ರತಿಶತದಷ್ಟು ಕ್ಷೀಣಿಸಿದವು. ಈ ಅನ್ವಯವು ಆರಂಭದಲ್ಲಿ ಆಂಡ್ರೋಯ್ಡ್ 2.0 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯನ್ನು ಹೊಂದಿರುವ ವೆರಿಜಾನ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. [ಸೂಕ್ತ ಉಲ್ಲೇಖನ ಬೇಕು]

ಗೂಗಲ್ಸ್ ನೇವಿಗೇಶನ್ UKಯಲ್ಲಿ 2010ರ ಎಪ್ರಿಲ್ 20ರಂದು ಮತ್ತು ಆಸ್ಟ್ರೇಲಿಯಾದಲ್ಲಿ 2010ರ ನವೆಂಬರ್ 17ರಂದು ಆರಂಭವಾಯಿತು. ಆದರೂ ಇದು ಪ್ರಪಂಚದ ಉಳಿದ ಭಾಗಗಳಿಗೆ ಬರುವವರೆಗೆ ಇದು ಅಜ್ಞಾತವಾಗಿಯೇ ಉಳಿಯುತ್ತದೆ.

ಗೂಗಲ್ ನಕ್ಷೆಗಳ ಪ್ರಮಿತಿಗಳು

ಗೂಗಲ್ ನಕ್ಷೆಗಳಲ್ಲಿ, URL ಪ್ರಮಿತಿಗಳು ಕೆಲವೊಮ್ಮೆ ಅವುಗಳ ಮಿತಿಗಳಲ್ಲಿ ದತ್ತಾಂಶದಿಂದ-ಕಾರ್ಯಮಾಡುತ್ತವೆ ಮತ್ತು ಜಾಲವು ಸೂಚಿಸುವ ಬಳಕೆದಾರ ಇಂಟರ್ಫೇಸ್ ಆ ಮಿತಿಗಳನ್ನು ಪ್ರತಿಬಿಂಬಿಸಬಹುದು ಅಥವಾ ಪ್ರತಿಬಿಂಬಿಸದೇ ಇರಬಹುದು. ನಿರ್ದಿಷ್ಟವಾಗಿ, ಜೂಮ್ ಮಟ್ಟವು (z ಪ್ರಮಿತಿಯಿಂದ ಸೂಚಿಸಲಾಗುತ್ತದೆ) ವ್ಯತ್ಯಾಸಗೊಳ್ಳುತ್ತದೆ. ಕಡಿಮೆ ಜನರಿರುವ ಪ್ರದೇಶಗಳಲ್ಲಿ, ಜೂಮ್ ಮಟ್ಟವು ಸುಮಾರು 18ರಲ್ಲಿ ನಿಲ್ಲಬಹುದು. APIಯ ಆರಂಭಿಕ ಆವೃತ್ತಿಗಳಲ್ಲಿ, ಈ ಹೆಚ್ಚಿನ ಮೌಲ್ಯಗಳನ್ನು ಸೂಚಿಸುವಾಗ ಯಾವುದೇ ಚಿತ್ರಗಳು ಪ್ರಕಟಗೊಳ್ಳದೇ ಇರಬಹುದು. ಪಾಶ್ಚಿಮಾತ್ಯ ನಗರಗಳಲ್ಲಿ, ಜೂಮ್ ಮಟ್ಟವು ಸಾಮಾನ್ಯವಾಗಿ ಸುಮಾರು 20ರಲ್ಲಿ ನಿಲ್ಲುತ್ತದೆ. ಕೆಲವು ಪ್ರತ್ಯೇಕ ಸಂದರ್ಭಗಳಲ್ಲಿ ಮಾಹಿತಿಯು ಸುಮಾರು 23 ಅಥವಾ ಅದಕ್ಕಿಂತ ಹೆಚ್ಚಿನವರೆಗೆ ಲಭ್ಯವಾಗುತ್ತದೆ, ಉದಾ. ಆಫ್ರಿಕಾದ ಚಾಡ್‌ನ ದೀಸ್ ಎಲಿಫ್ಯಾಂಟ್ಸ್ ಅಥವಾ ದಿಸ್ ವ್ಯೂ ಆಫ್ ಪೀಪಲ್ ಅಟ್ ಎ ವೆಲ್. ಜಾಲ ಇಂಟರ್ಫೇಸ್‌ಗಳು ಮತ್ತು APIಯ ವಿವಿಧ ಆವೃತ್ತಿಗಳು ಈ ಉನ್ನತ ಮಟ್ಟಗಳಿಗೆ ಸಂಪೂರ್ಣವಾಗಿ ಬೆಂಬಲವನ್ನು ನೀಡಬಹುದು ಅಥವಾ ನೀಡದೇ ಇರಬಹುದು.

2010ರ ಅಕ್ಟೋಬರ್‌ನ ದಾಖಲೆಯ ಪ್ರಕಾರ, ಬಳಕೆದಾರರು ಕೇಂದ್ರೀಕರಿಸಿದ ಪ್ರದೇಶಗಳು ಉನ್ನತ ಜೂಮ್ ಮಟ್ಟಗಳನ್ನು ಬೆಂಬಲಿಸಿದರೆ ಎಲ್ಲಾ ವಿಧದಲ್ಲೂ ಜೂಮ್ ಮಾಡಲು ಅವರಿಗೆ ಅವಕಾಶಮಾಡಿಕೊಡುವುದಕ್ಕಾಗಿ ಗೂಗಲ್ ನಕ್ಷೆ ವೀಕ್ಷಕವು ಅದರ ಜೂಮ್ ಪರಿಮಿತಿಯನ್ನು ನವೀಕರಿಸುತ್ತದೆ.

ಅಭಿವೃದ್ಧಿಯ ಇತಿಹಾಸ

ಗೂಗಲ್ ನಕ್ಷೆಗಳು ಮೊದಲು, ಬಳಕೆದಾರರು ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡುವಂತೆ ವಿನ್ಯಾಸಗೊಳಿಸಿದ ಒಂದು C++ ಪ್ರೋಗ್ರ್ಯಾಮ್ ಆಗಿ ಆರಂಭವಾಯಿತು. ಲಾರ್ಸ್ ಮತ್ತು ಜೆನ್ಸ್ ರಾಸ್ಮುಸ್ಸೆನ್ ಸಿಡ್ನಿಯಲ್ಲಿರುವ ಕಂಪನಿಯಲ್ಲಿ ಗೂಗಲ್ ನಿರ್ವಹಣೆಗಾಗಿ ಸ್ಪಷ್ಟವಾಗಿ ಜಾಲ-ಆಧಾರಿತ ಉತ್ಪನ್ನವೊಂದನ್ನು ರಚಿಸುವ ಕಲ್ಪನೆಯನ್ನು ಮಾಡಿದರು.[೨೦] 2004ರ ಅಕ್ಟೋಬರ್‌ನಲ್ಲಿ ಆ ಕಂಪನಿಯನ್ನು ಗೂಗಲ್ ಇಂಕ್[೨೧] ಸ್ವಾಧೀನಪಡಿಸಿಕೊಂಡಿತು, ಅಲ್ಲಿ ಅದು ಜಾಲ ಅನ್ವಯ ಗೂಗಲ್ ನಕ್ಷೆಗಳಾಗಿ ಬದಲಾಯಿತು. ಆ ಅನ್ವಯವನ್ನು ಮೊದಲ ಬಾರಿಗೆ 2005ರ ಫೆಬ್ರವರಿ 8ರಂದು ಗೂಗಲ್ ಬ್ಲಾಗ್‌ನಲ್ಲಿ ಪ್ರಕಟಪಡಿಸಲಾಯಿತು[೨೨] ಮತ್ತು ಅದು ಗೂಗಲ್‌ನಲ್ಲಿತ್ತು. ಅದು ಆರಂಭದಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಮತ್ತು ಮೋಜಿಲ್ಲಾ ವೆಬ್ ಬ್ರೌಸರ್‌ಗಳ ಬಳಕೆದಾರರಿಗೆ ಮಾತ್ರ ಬೆಂಬಲವನ್ನು ನೀಡಿತು. ನಂತರ 2005ರ ಫೆಬ್ರವರಿ 25ರಂದು ಒಪೇರಾ ಮತ್ತು ಸಫಾರಿಗೂ ಬೆಂಬಲ ನೀಡುವಂತೆ ಮಾಡಲಾಯಿತು. ಆದರೆ ಪ್ರಸ್ತುತ[when?] ಒಪೇರಾ ಸಿಸ್ಟಮ್ ಅಗತ್ಯತೆಗಳ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದೆ. As of ಡಿಸೆಂಬರ್ 2010 ಇಂಟರ್ನೆಟ್ ಎಕ್ಸ್‌ಪ್ಲೋರರ್ 7.0+, ಫೈರ್‌ಫಾಕ್ಸ್ 3.6+, ಸಫಾರಿ 3.1+, ಮತ್ತು ಗೂಗಲ್ ಕ್ರೋಮ್ ಮೊದಲಾದವು ಇದಕ್ಕೆ ಬೆಂಬಲ ನೀಡುತ್ತವೆ.[೨೩] ಅದು 2005ರ ಅಕ್ಟೋಬರ್ 6ರಂದು ಗೂಗಲ್ ಲೋಕಲ್‌ನ ಭಾಗವಾಗುವುದಕ್ಕಿಂತ ಮೊದಲು ಆರು ತಿಂಗಳವರೆಗೆ ಬೀಟಾದಲ್ಲಿತ್ತು.

2005ರ ಎಪ್ರಿಲ್‌ನಲ್ಲಿ, ಗೂಗಲ್ ನಕ್ಷೆಗಳನ್ನು ಬಳಸಿಕೊಂಡು ಗೂಗಲ್ ಗೂಗಲ್-ರೈಡ್-ಫೈಂಡರ್ಅನ್ನು ರಚಿಸಿತು. 2005ರ ಜೂನ್‌ನಲ್ಲಿ, ಗೂಗಲ್ ಗೂಗಲ್ ನಕ್ಷೆ APIಅನ್ನು ಬಿಡುಗಡೆಗೊಳಿಸಿತು. 2005ರ ಜುಲೈನಲ್ಲಿ, ಗೂಗಲ್ ಜಪಾನ್‌ಗಾಗಿ ರಸ್ತೆ ನಕ್ಷೆಗಳನ್ನೂ ಒಳಗೊಂಡಂತೆ ಗೂಗಲ್ ನಕ್ಷೆಗಳು ಮತ್ತು ಗೂಗಲ್ ಲೋಕಲ್ ಸೇವೆಗಳನ್ನು ಆರಂಭಿಸಿತು. 2005ರ ಜುಲೈ 22ರಂದು, ಗೂಗಲ್ "ಹೈಬ್ರಿಡ್ ವ್ಯೂ"ಅನ್ನು ಬಿಡುಗಡೆಗೊಳಿಸಿತು. ಈ ಬದಲಾವಣೆಯೊಂದಿಗೆ, ಉಪಗ್ರಹ ಚಿತ್ರ ಮಾಹಿತಿಯು ಪ್ಲೇಟ್ ಕ್ಯಾರೀಯಿಂದ ಮರ್ಕೇಟರ್ ಪ್ರಕ್ಷೇಪಣವಾಗಿ ಪರಿವರ್ತನೆಗೊಂಡಿತು, ಇದು ಸಮಶೀತೋಷ್ಣ ಹವಾಗುಣದ ಅಕ್ಷಾಂಶಗಳಲ್ಲಿನ ಚಿತ್ರವು ಕಡಿಮೆ ವಿಕಾರವಾಗಿ ಕಾಣುವಂತೆ ಮಾಡುತ್ತದೆ. 2005ರ ಜುಲೈನಲ್ಲಿ, ಅಪೋಲೊ ಮೂನ್ ಇಳಿತದ ಮೂವತ್ತಾರನೇ ವಾರ್ಷಿಕ ದಿನದ ಗೌರವಾರ್ಥವಾಗಿ ಗೂಗಲ್ ಮೂನ್ಅನ್ನು ಬಿಡುಗಡೆಗೊಳಿಸಲಾಯಿತು. 2005ರ ಸೆಪ್ಟೆಂಬರ್‌ನಲ್ಲಿ, ಕತ್ರಿನಾ ಚಂಡಮಾರುತದ ನಂತರ ಗೂಗಲ್ ನಕ್ಷೆಗಳು ಬಳಕೆದಾರರಿಗೆ ನಗರದ ವಿವಿಧ ಭಾಗಗಳಲ್ಲಿ ಉಂಟಾದ ಪ್ರವಾಹದ ತೀವ್ರತೆಯನ್ನು ವೀಕ್ಷಿಸಲು ಅನುವು ಮಾಡಿಕೊಡಲು ನ್ಯೂ ಆರ್ಲಿಯನ್ಸ್‌ನ ಉಪಗ್ರಹ ಚಿತ್ರಣವನ್ನು ಅತಿ ಶೀಘ್ರದಲ್ಲಿ ಪರಿಷ್ಕರಿಸಿದವು. (ವಿಚಿತ್ರ ರೀತಿಯಲ್ಲಿ 2007ರ ಮಾರ್ಚ್‌ನಲ್ಲಿ, ಈ ಚಂಡಮಾರುತದ ಹಾನಿಯನ್ನು ತೋರಿಸುವ ಚಿತ್ರಗಳ ಸ್ಥಾನದಲ್ಲಿ ಚಂಡಮಾರುತಕ್ಕಿಂತ ಮೊದಲಿನ ಚಿತ್ರಗಳನ್ನು ಹಾಕಲಾಯಿತು; ಈ ಬದಲಾವಣೆಯನ್ನು ಗೂಗಲ್ ಅರ್ತ್‌‌ನಲ್ಲಿ ಮಾಡಲಾಗಲಿಲ್ಲ, ಇದರಲ್ಲಿ ಕತ್ರಿನಾ-ಚಂಡಮಾರುತದ ನಂತರದ ಚಿತ್ರಗಳು ಈಗಲೂ ಇವೆ).[೨೪][೨೫]

As of ಜನವರಿ 2, 2006, ಗೂಗಲ್ ನಕ್ಷೆಗಳು ಅಮೆರಿಕಾ ಸಂಯುಕ್ತ ಸಂಸ್ಥಾನ, ಪ್ಯುಯೆರ್ಟೊ ರಿಕೊ, ಕೆನಡಾ, ಯುನೈಟೆಡ್ ಕಿಂಗ್ಡಮ್, ಜಪಾನ್ ಮತ್ತು ರಿಪಬ್ಲಿಕ್ ಆಫ್ ಐರ್ಲೆಂಡ್‌ನ ಕೆಲವು ನಗರಗಳ ರಸ್ತೆ ನಕ್ಷೆಗಳನ್ನು ಒಳಗೊಂಡಿದೆ. ಟ್ಯುರಿನ್‌ನ ಸುತ್ತಮುತ್ತಲ ಪ್ರದೇಶಗಳ ಮಾಹಿತಿಯನ್ನು 2006ರ ಚಳಿಗಾಲ ಒಲಿಂಪಿಕ್ಸ್‌ನ ಅವಧಿಯಲ್ಲಿ ಸೇರಿಸಲಾಯಿತು. 2006ರ ಜನವರಿ 23ರಂದು, ಗೂಗಲ್ ನಕ್ಷೆಗಳು ಗೂಗಲ್ ಅರ್ತ್‌ನಂತಹುದೇ ಉಪಗ್ರಹ ಚಿತ್ರಣ ಮಾಹಿತಿಗಳನ್ನು ಬಳಸಲು ಪರಿಷ್ಕರಣಗೊಂಡವು. 2006ರ ಮಾರ್ಚ್ 12ರಂದು, ಗೂಗಲ್ ಮಾರ್ಸ್[೨೬] ಆರಂಭವಾಯಿತು, ಇದು ಮಂಗಳ ಗ್ರಹದ ಎಳೆಯಬಹುದಾದ ನಕ್ಷೆ ಮತ್ತು ಉಪಗ್ರಹ-ಚಿತ್ರಣಗಳನ್ನು ಒಳಗೊಂಡಿದೆ. 2006ರ ಎಪ್ರಿಲ್‌ನಲ್ಲಿ, ಗೂಗಲ್ ಲೋಕಲ್ ಮುಖ್ಯ ಗೂಗಲ್ ನಕ್ಷೆಗಳು ಜಾಲತಾಣದೊಂದಿಗೆ ಸೇರಿಕೊಂಡಿತು. 2006ರ ಎಪ್ರಿಲ್ 3ರಂದು, ನಕ್ಷೆ APIಯ ಎರಡನೇ ಆವೃತ್ತಿಯು ಬಿಡುಗಡೆಗೊಂಡಿತು.[೨೭] 2006ರ ಜೂನ್ 11ರಂದು, ಗೂಗಲ್ APIಗೆ ಭೌಗೋಳಿಕ ಕೋಡ್ ಮಾಡುವ ಸೌಕರ್ಯಗಳನ್ನು ಸೇರಿಸಿತು, ಆ ಮೂಲಕ ಈ ಸೇವೆಗೆ ಹೆಚ್ಚು ಅಭಿವರ್ಧಕ-ಕೋರಿಕೆಯ ಲಕ್ಷಣವನ್ನು ಒದಗಿಸಿತು.[೨೮] 2006ರ ಜೂನ್ 14ರಂದು, ಉದ್ಯಮಕ್ಕಾಗಿ ಗೂಗಲ್ ನಕ್ಷೆಗಳು ಅಧಿಕೃತವಾಗಿ ಬಿಡುಗಡೆಗೊಂಡವು.[೨೯] ಒಂದು ವಾಣಿಜ್ಯ ಸೇವೆಯಾಗಿರುವ ಇದು ಅಂತರ್ಜಾಲ ಮತ್ತು ಜಾಹೀರಾತು-ಮುಕ್ತ ನಿರ್ವಹಣೆಗಳನ್ನು ಒಳಗೊಂಡಿದೆ. 2006ರ ಜುಲೈನಲ್ಲಿ ಗೂಗಲ್ ಮುಖ್ಯ ಗೂಗಲ್ ಹುಡುಕಾಟ ಫಲಿತಾಂಶಗಳಲ್ಲಿರುವ ಲೋಕಲ್ ಒನ್‌ಬಾಕ್ಸಸ್‌ನ ರೀತಿಯಲ್ಲಿ ಗೂಗಲ್ ನಕ್ಷೆ ವ್ಯವಹಾರ ಪಟ್ಟಿಗಳನ್ನು ಸೇರಿಸಿಕೊಳ್ಳಲು ಆರಂಭಿಸಿತು.[೩೦] ಡಿಸೆಂಬರ್ 9ರಂದು ಗೂಗಲ್ ಮುಖ್ಯ ಹುಡುಕಾಟ ಫಲಿತಾಂಶಗಳಲ್ಲಿ ಪ್ಲಸ್‌ಬಾಕ್ಸ್ಅನ್ನು ಏಕೀಕರಿಸಿತು.[೩೧] ಡಿಸೆಂಬರ್ 19ರಂದು ಗೂಗಲ್ ನಿಮ್ಮ ಚಾಲನೆಯ ನಿರ್ದೇಶನಗಳಿಗೆ ಹಲವಾರು ಗಮ್ಯಸ್ಥಾನಗಳನ್ನು ಸೇರಿಸಲು ಅವಕಾಶ ಮಾಡಿಕೊಡುವ ಒಂದು ಲಕ್ಷಣವನ್ನು ಸೇರಿಸಿತು.[೩೨] 2007ರ ಫೆಬ್ರವರಿಯ ಆರಂಭದಲ್ಲಿ, ಗೂಗಲ್ ನಕ್ಷೆಗಳ "ಮ್ಯಾಪ್ ವ್ಯೂ(ನಕ್ಷೆ ವೀಕ್ಷಣೆ)"ನಲ್ಲಿ ನ್ಯೂಯಾರ್ಕ್ ನಗರ, ವಾಷಿಂಗ್ಟನ್, ಡಿ.ಸಿ., ಲಂಡನ್, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಇತರ ಕೆಲವು ನಗರಗಳ ಕಟ್ಟಡಗಳು ಮತ್ತು ಸುರಂಗ ಮಾರ್ಗ ನಿಲುಗಡೆಗಳು ಪ್ರಕಟಗೊಂಡವು.[೩೩]

2007ರ ಜನವರಿ 29ರಂದು ಲೋಕಲ್ ಯೂನಿವರ್ಸಲ್ ಫಲಿತಾಂಶಗಳನ್ನು ಉತ್ತಮಗೊಳಿಸಲಾಯಿತು ಮತ್ತು ಮುಖ್ಯ ಗೂಗಲ್ ಫಲಿತಾಂಶಗಳ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಯಿತು.[೩೪] 2007ರ ಫೆಬ್ರವರಿ 28ರಂದು, ಅಮೆರಿಕಾ ಸಂಯುಕ್ತ ಸಂಸ್ಥಾನದ 30 ಪ್ರಮುಖ ನಗರಗಳ ನಕ್ಷೆಗಳಿಗೆ ಸ್ವಯಂಚಾಲಿತವಾಗಿ ನಿಜಾವಧಿಯ ವಾಹನ ಸಂಚಾರದ ಸ್ಥಿತಿಗಳನ್ನು ಸೇರಿಸಲು ಗೂಗಲ್ ಟ್ರಾಫಿಕ್ ಮಾಹಿತಿಯನ್ನು ಅಧಿಕೃತವಾಗಿ ಆರಂಭಿಸಲಾಯಿತು.[೩೫] 2007ರ ಮಾರ್ಚ್ 8ರಂದು, ಲೋಕಲ್ ಬ್ಯುಸಿನೆಸ್ ಸೆಂಟರ್ಅನ್ನು ಉತ್ತಮಪಡಿಸಲಾಯಿತು.[೩೬] 2007ರ ಮೇ 16ರಂದು, ಮುಖ್ಯ ಗೂಗಲ್ ಫಲಿತಾಂಶಗಳ ಪುಟಕ್ಕೆ ಹೆಚ್ಚು ನಕ್ಷೆಯ ಮಾಹಿತಿಯನ್ನು ಸೇರಿಸುವ ಮೂಲಕ ಗೂಗಲ್ ಯೂನಿವರ್ಸಲ್ ಹುಡುಕಾಟ ಫಲಿತಾಂಶಗಳನ್ನು ಅಭಿವೃದ್ಧಿಪಡಿಸಿತು.[೩೭] 2007ರ ಮೇ 18ರಂದು, ಗೂಗಲ್ ಪಕ್ಕದಲ್ಲಿ ಶೋಧನೆ ಮಾಡುವ ಸೌಕರ್ಯಗಳನ್ನು ಸೇರಿಸಿತು.[೩೮] 2007ರ ಮೇ 29ರಂದು, ಗೂಗಲ್‌ನ ಚಾಲನಾ ನಿರ್ದೇಶನಗಳನ್ನು ಗೂಗಲ್ ನಕ್ಷೆ APIಗೆ ಸೇರಿಸಲಾಯಿತು.[೩೯] 2007ರ ಮೇ 29ರಂದು, ಸ್ಟ್ರೀಟ್ ವ್ಯೂ ಅನ್ನು ಸೇರಿಸಲಾಯಿತು, ಇದು ಅಮೆರಿಕಾ ಸಂಯುಕ್ತ ಸಂಸ್ಥಾನದ ಕೆಲವು ಪ್ರಮುಖ ನಗರಗಳ ರಸ್ತೆಗಳ ನೆಲಮಟ್ಟದ 360-ಡಿಗ್ರಿ ಚಿತ್ರಣವನ್ನು ನೀಡುತ್ತದೆ.[೪೦] 2007ರ ಜೂನ್ 19ರಂದು, ಪ್ರತಿಕ್ರಿಯೆಗಳನ್ನು ನೇರವಾಗಿ ಗೂಗಲ್ ನಕ್ಷೆಗಳಲ್ಲಿರು ವ್ಯವಹಾರಗಳಲ್ಲಿ ಸೇರಿಸಲು ಅವಕಾಶ ಮಾಡಿಕೊಡಲಾಯಿತು.[೪೧] 2007ರ ಜೂನ್ 28ರಂದು, ಎಳೆಯಬಹುದಾದ ಚಾಲನೆಯ ನಿರ್ದೇಶನಗಳನ್ನು ಆರಂಭಿಸಲಾಯಿತು.[೪೨] 2007ರ ಜುಲೈ 31ರಂದು, ಹೆಚ್‌ಕಾರ್ಡ್ ಮೈಕ್ರೊಫಾರ್ಮ್ಯಾಟ್‌ಗೆ ಬೆಂಬಲವನ್ನು ಘೋಷಿಸಲಾಯಿತು.[೪೩] ದುರದೃಷ್ಟವಶಾತ್, ಇದು ಕಾರ್ಯಗತಗೊಳ್ಳಲಿಲ್ಲ.[ಸಾಕ್ಷ್ಯಾಧಾರ ಬೇಕಾಗಿದೆ] 2007ರ ಆಗಸ್ಟ್‌ನಲ್ಲಿ, ಗೂಗಲ್ ನಕ್ಷೆಗಳನ್ನು ಇತರ ಜಾಲತಾಣಗಳಿಗೆ ಹುದುಗಿಸಲು ಒಂದು ಸರಳ ದಾರಿಯನ್ನು ಗೂಗಲ್ ಘೋಷಿಸಿತು.[೪೪] 2007ರ ಸೆಪ್ಟೆಂಬರ್ 13ರಂದು, ಲ್ಯಾಟಿನ್ ಅಮೆರಿಕಾ ಮತ್ತು ಏಷ್ಯಾದ 54 ಹೊಸ ರಾಷ್ಟ್ರಗಳನ್ನು ಗೂಗಲ್ ನಕ್ಷೆಗಳಿಗೆ ಸೇರಿಸಲಾಯಿತು.[೪೫] 2007ರ ಅಕ್ಟೋಬರ್ 3ರಂದು, ಗೂಗಲ್ ನಕ್ಷೆಗಳಲ್ಲಿ ಗೂಗಲ್ ಟ್ರಾನ್ಸಿಟ್ಅನ್ನು ಏಕೀಕರಿಸಲಾಯಿತು, ಇದು ಗೂಗಲ್ ನಕ್ಷೆಗಳಲ್ಲಿ ಸಾರ್ವಜನಿಕ ಸಾಗಣೆ ಮಾರ್ಗದ ಮಾಹಿತಿ ನೀಡಲು ಆರಂಭಿಸಿತು.[೪೬] 2007ರ ಅಕ್ಟೋಬರ್ 27ರಂದು, ಗೂಗಲ್ ನಕ್ಷೆಗಳು ಭೌಗೋಳಿಕಜಾಲದ ನಕ್ಷೆ ರೂಪಿಸಿ ಫಲಿತಾಂಶಗಳನ್ನು ಗೂಗಲ್ ನಕ್ಷೆಗಳಲ್ಲಿ ತೋರಿಸಲು ಆರಂಭಿಸಿದವು.[೪೭] 2007ರ ಅಕ್ಟೋಬರ್ 27ರಂದು, ಗೂಗಲ್ ನಕ್ಷೆಗಳು ವ್ಯವಹಾರ ಪಟ್ಟಿಗಳಲ್ಲಿರುವ ಕೂಪನ್‌ಗಳಿಗಾಗಿ ಒಂದು ಹುಡುಕಾಟದ ಇಂಟರ್ಫೇಸ್ಅನ್ನು ಸೇರಿಸಿದವು.[೪೮] 2007ರ ನವೆಂಬರ್ 27ರಂದು, ಸ್ಥಳದ ಸ್ವರೂಪಕ್ಕೆ ಸಂಬಂಧಿಸಿದ ಮೂಲಭೂತ ಲಕ್ಷಣಗಳನ್ನು ತೋರಿಸುವ "ಟೆರ್ರೇನ್(ಭೂಪ್ರದೇಶ)" ವೀಕ್ಷಣೆಯನ್ನು ಸೇರಿಸಲಾಯಿತು. "ಹೈಬ್ರಿಡ್" ವೀಕ್ಷಣೆಯ ಬಟನ್ಅನ್ನು ತೆಗೆದುಹಾಕಲಾಯಿತು. ಅದರ ಬದಲಿಗೆ "ಹೈಬ್ರಿಡ್" ಮತ್ತು "ಸ್ಯಾಟಲೈಟ್" ವೀಕ್ಷಣೆಗಳ ಮಧ್ಯೆ ಪರಸ್ಪರ ಬದಲಾಯಿಸಲು "ಸ್ಯಾಟಲೈಟ್" ಬಟನ್‌ನ ಕೆಳಗೆ "ಶೊ ಲೇಬಲ್ಸ್" ಚೆಕ್‌ಬಾಕ್ಸ್ಅನ್ನು ಇರಿಸಲಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ]

2008ರ ಜನವರಿ 22ರಂದು, ಗೂಗಲ್ ಲೋಕಲ್ ಒನ್‌ಬಾಕ್ಸ್ಅನ್ನು 3 ವ್ಯವಹಾರ ಪಟ್ಟಿಗಳಿಂದ 10ಕ್ಕೆ ವಿಸ್ತರಿಸಿತು.[೪೯] 2008ರ ಫೆಬ್ರವರಿ 20ರಂದು, ಗೂಗಲ್ ನಕ್ಷೆಗಳು ಶೋಧನೆಗಳು ಬಳಕೆದಾರರ ರೇಟಿಂಗ್ ಮತ್ತು ಪಕ್ಕದ ಜಾಲತಾಣಗಳಿಂದ ಸುಧಾರಿಸಲು ಅನುವು ಮಾಡಿಕೊಟ್ಟವು.[೫೦] 2008ರ ಮಾರ್ಚ್ 18ರಂದು, ಗೂಗಲ್ ಅಂತಿಮ-ಬಳಕೆದಾರರಿಗೆ ವ್ಯವಹಾರ ಪಟ್ಟಿಗಳನ್ನು ಸಂಪಾದಿಸಲು ಮತ್ತು ಹೊಸ ಸ್ಥಳಗಳನ್ನು ಸೇರಿಸಲು ಅವಕಾಶ ಮಾಡಿಕೊಟ್ಟಿತು.[೫೧] 2008ರ ಮಾರ್ಚ್ 19ರಂದು, ಗೂಗಲ್ ಲೋಕಲ್-ಬ್ಯುಸಿನೆಸ್-ಸೆಂಟರ್‌ನಲ್ಲಿ ಅನಿಯಮಿತ ವರ್ಗದ ಆಯ್ಕೆಗಳನ್ನು ಸೇರಿಸಿತು.[೫೨] 2008ರ ಎಪ್ರಿಲ್ 2ರಂದು, ಗೂಗಲ್ ಭೂಪ್ರದೇಶ ವೀಕ್ಷಣೆಗೆ ಸಮೋನ್ನತ ರೇಖೆಯನ್ನು ಸೇರಿಸಿತು.[೫೩] 2008ರ ಎಪ್ರಿಲ್‌ನಲ್ಲಿ, ಇತ್ತೀಚೆಗೆ ಉಳಿಸಲಾದ ಸ್ಥಳಗಳನ್ನು ವೀಕ್ಷಿಸಲು ಒಂದು ಬಟನ್ಅನ್ನು ಹುಡುಕಾಟ ವಲಯದ ಬಲಭಾಗದಲ್ಲಿ ಸೇರಿಸಲಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ] 2008ರ ಮೇಯಲ್ಲಿ, "ಮ್ಯಾಪ್", "ಸ್ಯಾಟಲೈಟ್" ಮತ್ತು "ಟೆರ್ರೇನ್" ಬಟನ್‌ಗಳ ಪಕ್ಕದಲ್ಲಿ "ಮೋರ್" ಬಟನ್ಅನ್ನು ಸೇರಿಸಲಾಯಿತು. ಇದು ಪನೊರೇಮಿಯೊ ಮತ್ತು ವಿಕಿಪೀಡಿಯಾದಲ್ಲಿನ ಲೇಖನಗಳಲ್ಲಿನ ಭೌಗೋಳಿಕವಾಗಿ-ಸಂಬಂಧಿಸಿದ ಫೋಟೊಗಳಿಗೆ ಪ್ರವೇಶವನ್ನು ಒದಗಿಸುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ] 2008ರ ಮೇ 15ರಂದು, ಗೂಗಲ್ ನಕ್ಷೆಗಳು ಹೆಚ್ಚಿನ ಅಂತರಜಾಲ ಅನ್ವಯಗಳಿಗೆ ಒಂದು ಆಧಾರವಾಗಿ ಫ್ಲ್ಯಾಶ್ ಮತ್ತು ಆಕ್ಷನ್‌ಸ್ಕ್ರಿಪ್ಟ್ 3ಕ್ಕೆ ಹೊಂದಿಕೊಂಡವು.[ಸಾಕ್ಷ್ಯಾಧಾರ ಬೇಕಾಗಿದೆ] 2008ರ ಜುಲೈ 15ರಂದು, ನಡಿಗೆಯ ನಿರ್ದೇಶನಗಳನ್ನು ಸೇರಿಸಲಾಯಿತು.[೫೪] 2008ರ ಆಗಸ್ಟ್ 4ರಂದು, ಸ್ಟ್ರೀಟ್ ವ್ಯೂಅನ್ನು ಜಪಾನ್ ಮತ್ತು ಆಸ್ಟ್ರೇಲಿಯಾದಲ್ಲಿ ಆರಂಭಿಸಲಾಯಿತು.[೫೪] 2008ರ ಆಗಸ್ಟ್ 15ರಂದು, ಬಳಕೆದಾರರ ಇಂಟರ್ಫೇಸ್ಅನ್ನು ಪುನಃರೂಪಿಸಲಾಯಿತು.[೫೪] 2008ರ ಆಗಸ್ಟ್ 29ರಂದು, ಗೂಗಲ್ ಒಪ್ಪಂದವೊಂದಕ್ಕೆ ಸಹಿಹಾಕಿತು, ಆ ಒಪ್ಪಂದದ ಪ್ರಕಾರ ಜಿಯೊಐ ಅದಕ್ಕೆ ಉಪಗ್ರಹದ ಚಿತ್ರಗಳನ್ನು ಪೂರೈಸಬೇಕಿತ್ತು[೫೫] ಹಾಗೂ ಅದು ನಕ್ಷೆ ದತ್ತಾಂಶದ ರಚನೆಗಾಗಿ ಮ್ಯಾಪ್ ಮೇಕರ್ ಸಾಧನವನ್ನು ಪರಿಚಯಿಸಿತು.[೫೪] 2008ರ ಸೆಪ್ಟೆಂಬರ್ 9ರಂದು, ಒಂದು ವಿರುದ್ಧ ವ್ಯವಹಾರ ವೀಕ್ಷಣ ಲಕ್ಷಣವನ್ನು ಸೇರಿಸಲಾಯಿತು.[೫೪] 2008ರ ಸೆಪ್ಟೆಂಬರ್ 23ರಂದು, ನ್ಯೂಯಾರ್ಕ್ ನಗರದ ಮೆಟ್ರೊಪೊಲಿಟನ್ ಟ್ರಾನ್ಸಿಟ್ ಅಥೋರಿಟಿಯ ಮಾಹಿತಿಯನ್ನು ಸೇರಿಸಲಾಯಿತು.[೫೪] 2008ರ ಅಕ್ಟೋಬರ್ 7ರಂದು, ಜಿಯೊಐ-1 ಅದರ ಮೊದಲ ಚಿತ್ರವನ್ನು ತೆಗೆಯಿತು, ಅದು ಪೆನ್ಸಿಲ್ವೇನಿಯಾದ ಕುಟ್ಜ್‌ಟೌನ್ ವಿಶ್ವವಿದ್ಯಾನಿಲಯದ ಒಂದು ಪಕ್ಷಿನೋಟವಾಗಿತ್ತು.[೫೬] 2008ರ ಅಕ್ಟೋಬರ್ 26ರಂದು, ವಿರುದ್ಧವಾಗಿ ಭೌಗೋಳಿಕ-ಕೋಡ್ ಮಾಡುವುದನ್ನು ನಕ್ಷೆ APIಗೆ ಸೇರಿಸಲಾಯಿತು.[೫೪] 2008ರ ನವೆಂಬರ್ 11ರಂದು, ಸ್ಪೇನ್, ಇಟಲಿ ಮತ್ತು ಫ್ರಾನ್ಸ್‌ನ ಸ್ಟ್ರೀಟ್ ವ್ಯೂಅನ್ನು ಆರಂಭಿಸಲಾಯಿತು.[೫೪] 2008ರ ನವೆಂಬರ್ 23ರಂದು, ಫ್ಲ್ಯಾಶ್‌ಗಾಗಿ ನಕ್ಷೆ APIಗೆ AIR ಆಧಾರವನ್ನು ಸೇರಿಸಲಾಯಿತು.[೫೪] 2008ರ ನವೆಂಬರ್ 25ರಂದು, ಸ್ಟ್ರೀಟ್ ವ್ಯೂಗೆ ಒಂದು ಹೊಸ ಬಳಕೆದಾರರ ಇಂಟರ್ಫೇಸ್ಅನ್ನು ಪರಿಚಯಿಸಲಾಯಿತು.[೫೪] 2008ರ ನವೆಂಬರ್ 27ರಂದು, ಚೀನಾದ ನಕ್ಷೆಗಳು, ಸ್ಥಳೀಯ ವ್ಯವಹಾರ ಮಾಹಿತಿ ಮತ್ತು ಸ್ಥಳೀಯ ಶೈಲಿಗಳನ್ನು ಸೇರಿಸಲಾಯಿತು.[೫೪] 2008ರ ಡಿಸೆಂಬರ್‌ನಲ್ಲಿ, 2x ಸ್ಟ್ರೀಟ್ ವ್ಯೂ ವ್ಯಾಪ್ತಿಯನ್ನು ಆರಂಭಿಸಲಾಯಿತು.[೫೪]

2009ರ ಮೇಯಲ್ಲಿ, ಒಂದು ಹೊಸ ಗೂಗಲ್ ನಕ್ಷೆಗಳ ಲೋಗೊವನ್ನು ಬಳಕೆಗೆ ತರಲಾಯಿತು.[೫೭] 2009ರ ಅಕ್ಟೋಬರ್‌ನ ಆರಂಭದಲ್ಲಿ, ಗೂಗಲ್ ನಕ್ಷೆಗಳ U.S. ಆವೃತ್ತಿಯಲ್ಲಿ ಟೆಲಿ ಅಟ್ಲಾಸ್ಅನ್ನು ಅದರ ಭೌಗೋಳಿಕ ಮಾಹಿತಿಯ ಪ್ರಾಥಮಿಕ ಪೂರೈಕೆದಾರವಾಗಿ ಮಾಡಿತು.[೫೮] 2009ರ ಅಕ್ಟೋಬರ್‌ನಲ್ಲಿ, ರೈಲುಮಾರ್ಗಗಳನ್ನು ಮತ್ತೊಮ್ಮೆ ಚಿತ್ರಿಸಲಾಯಿತು, ಹಳೆಯ ರೇಖೆಗಳನ್ನು ತೆಗೆದುಹಾಕಿ, ಸ್ವಲ್ಪಮಟ್ಟಿನ ಹೊಸ ರೂಪಕೊಟ್ಟು ನವೀಕರಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ಅದೇ ತಿಂಗಳಲ್ಲಿ, ಕೆಲವು ಪ್ರದೇಶಗಳ ನಕ್ಷೆಗಳನ್ನು ಬದಲಾಯಿಸಿ, ಅಸ್ತಿತ್ವದಲ್ಲಿಲ್ಲದ ಇತರ ಹೆಚ್ಚುವರಿ ರಸ್ತೆಗಳನ್ನು ಮಾತ್ರವಲ್ಲದೆ ನಕ್ಷೆ ಇಂಟರ್ಫೇಸ್‌ನಲ್ಲಿ ತೋರಿಸುವ ಹಲವಾರು ಗೆರೆಗಳನ್ನು ಸೇರಿಸಿತು.[ಸೂಕ್ತ ಉಲ್ಲೇಖನ ಬೇಕು] 2010ರ ಫೆಬ್ರವರಿ 11ರಂದು, ಗೂಗಲ್ ಮ್ಯಾಪ್ಸ್ ಲ್ಯಾಬ್ಸ್ಅನ್ನು ಸೇರಿಸಲಾಯಿತು. 2010ರ ಮಾರ್ಚ್ 11ರಂದು, ಯುನೈಟೆಡ್ ಕಿಂಗ್ಡಮ್, ಹಾಂಕ್ ಕಾಂಗ್, ಮ್ಯಾಕ್ಯೂ ಮತ್ತು ಜಪಾನ್‌ನ ಕೆಲವು ಸ್ಥಳಗಳ ಸ್ಟ್ರೀಟ್ ವ್ಯೂಅನ್ನು ಆರಂಭಿಸಲಾಯಿತು. 2010ರ ಮೇ 25ರಂದು, Rejseplanen.dk ಒಂದಿಗೆ ಏಕೀಕರಣಗೊಂಡು ಡೆನ್ಮಾರ್ಕ್‌ನ ಸಾರ್ವಜನಿಕ ಸಾಗಣೆ ಮಾರ್ಗದ ಮಾಹಿತಿಯನ್ನು ಸೇರಿಸಲಾಯಿತು.[೫೯]

ಗೂಗಲ್‌ನಿಂದ ಗೂಗಲ್ ನಕ್ಷೆಗಳ ಬಳಕೆ

ಮುಖ್ಯ ಗೂಗಲ್ ನಕ್ಷೆಗಳ ಜಾಲತಾಣವು ಒಂದು ಸ್ಥಳೀಯ ಶೋಧನಾ ಲಕ್ಷಣವನ್ನು ಒಳಗೊಳ್ಳುತ್ತದೆ(ಈಗ ಸಮ್ಮತಿಯಿಲ್ಲ), ಇದನ್ನು ಕೆಲವು ಪ್ರಕಾರದ ವ್ಯವಹಾರಗಳನ್ನು ಭೌಗೋಳಿಕ ಪ್ರದೇಶದಲ್ಲಿರಿಸಲು ಬಳಸಲಾಗುತ್ತದೆ. ಸಮ್ಮತಿಯಿಲ್ಲದ ಗೂಗಲ್ ಸ್ಥಳೀಯ ಶೋಧನೆ APIಯ ಕಾರ್ಯವು ಈಗ ಗೂಗಲ್ ಸ್ಥಳ APIಯಲ್ಲಿ ಇದೆ, ಪ್ರಸ್ತುತ ಇದು ಅಭಿವೃದ್ಧಿಯ ಪರಿಶೀಲನೆಯಲ್ಲಿದೆ.

ಗೂಗಲ್ ಡಿಟು

ಗೂಗಲ್ ಡಿಟು (谷歌地图 lit. "ಗೂಗಲ್ ನಕ್ಷೆಗಳು") 2007ರ ಫೆಬ್ರವರಿ 9ರಂದು ಸಾರ್ವಜನಿಕ ಬಳಕೆಗೆ ಬಂದಿತು ಮತ್ತು ಹಳೆಯ ಗೂಗಲ್ ಬೆಂಡಿ (谷歌本地 lit. "ಗೂಗಲ್ ಲೋಕಲ್")ಅನ್ನು ಬದಲಾಯಿಸಿತು. ಇದು ಗೂಗಲ್ ನಕ್ಷೆಗಳು ಮತ್ತು ಗೂಗಲ್ ಲೋಕಲ್ ಸೇವೆಗಳ ಚೀನಾದ ಸ್ಥಳೀಯ ಆವೃತ್ತಿಯಾಗಿದೆ.

ಚೀನಾದ ಕಾನೂನಿನ ಅವಶ್ಯಕತೆಗಳಿಗೆ ಅನುಸಾರವಾಗಿರಬೇಕಾದರೆ, ಗೂಗಲ್ ಗೂಗಲ್ ಡಿಟುವಿನಲ್ಲಿನ ಕೆಲವು ಗೂಗಲ್ ನಕ್ಷೆಗಳ ಲಕ್ಷಣಗಳನ್ನು ತೆಗೆದುಹಾಕಬೇಕಾಯಿತು ಅಥವಾ ಮಾರ್ಪಡಿಸಬೇಕಾಯಿತು:

  • ಗೂಗಲ್ ಡಿಟು ೇಪನೊರೇಮಿಯೊ, ಯೂಟ್ಯೂಬ್, ವಿಕಿಪೀಡಿಯಾ ಮತ್ತು ವೆಬ್‌ಕ್ಯಾಮ್‌ಗಳಿಂದ ಬಳಕೆದಾರರು-ರಚಿಸಿದ ಮಾಹಿತಿಗಳನ್ನು ಹಾಕಲು ಅವಕಾಶ ಕೊಡುವುದಿಲ್ಲ.
  • ಗೂಗಲ್ ಡಿಟು ಚೀನಾ ಮತ್ತು ಭಾರತದ ನಡುವಿನ ವಿವಾದಾತ್ಮಕ ಗಡಿಪ್ರದೇಶಗಳನ್ನು ಚೀನಾದ ಭಾಗವಾಗಿ ತೋರಿಸುತ್ತದೆ. ಅದೇ ಗೂಗಲ್ ನಕ್ಷೆಗಳಲ್ಲಿ ಆ ವಿವಾದಾತ್ಮಕ ಪ್ರದೇಶಗಳನ್ನು ಚುಕ್ಕೆ ಬಿಂದುಗಳ ಗೆರೆಗಳೊಳಗೆ ತೋರಿಸಲಾಗುತ್ತದೆ.

ಗೂಗಲ್ ಮೂನ್

ಚಿತ್ರ:Google-moon.png
ಗೂಗಲ್ ಮೂನ್

ಅಪೋಲೊ 11 ಚಂದ್ರನಿಂದ ಭೂಮಿಗೆ ಇಳಿಯುವುದರ 36ನೇ ವಾರ್ಷಿಕ ದಿನದ ಗೌರವಾರ್ಥವಾಗಿ 1969ರ ಜುಲೈ 20ರಂದು, ಗೂಗಲ್ ಚಂದ್ರನ ಸಾರ್ವಜನಿಕ ವ್ಯಾಪ್ತಿಯ ಚಿತ್ರಣವನ್ನು ಪ್ರಕಟಗೊಳಿಸಿತು, ಇದನ್ನು ಗೂಗಲ್ ನಕ್ಷೆಗಳ ಇಂಟರ್ಫೇಸ್ ಒಂದಿಗೆ ಏಕೀಕರಿಸಿತು ಮತ್ತು ಗೂಗಲ್ ಮೂನ್ ಎಂಬ ಒಂದು ಸಾಧನವನ್ನು ರಚಿಸಿತು.[೬೦] ಈ ಸಾಧನವು ಕಡಿಮೆ ಲಕ್ಷಣಗಳೊಂದಿಗೆ ಎಲ್ಲಾ ಅಪೋಲೊ ಬಾಹ್ಯಾಕಾಶ ನೌಕೆಗಳು ಚಂದ್ರನಲ್ಲಿ ಇಳಿಯುವ ಕೇಂದ್ರಗಳನ್ನು ಪ್ರಕಟಗೊಳಿಸುತ್ತದೆ. ಅದು ಒಂದು ಸ್ವಿಸ್ ಚೀಸ್ ವಿನ್ಯಾಸವನ್ನು ಹೆಚ್ಚಿನ ಜೂಮ್ ಮಟ್ಟದಲ್ಲಿ ಪ್ರಕಟಗೊಳಿಸುವ ಒಂದು ಈಸ್ಟರ್ ಎಗ್ಅನ್ನೂ ಒಳಗೊಂಡಿತ್ತು, ಇದನ್ನು ಗೂಗಲ್ ಇಂದು ತೆಗೆದುಹಾಕಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ನಾಸ್ ಅಮೆಸ್ ರಿಸರ್ಚ್ ಸೆಂಟರ್ ಮತ್ತು ಗೂಗಲ್ ನಡುವಿನ ಇತ್ತೀಚಿನ ಸಹಯೋಗದ ಯೋಜನೆಯೊಂದು ಗೂಗಲ್ ಮೂನ್‌ಗೆ ಬಳಸಲಾಗುವ ಮಾಹಿತಿಯನ್ನು ಪೂರೈಸುತ್ತಿದೆ ಮತ್ತು ಸುಧಾರಿಸುತ್ತಿದೆ. ಇದು ಪ್ಲಾನೆಟರಿ ಕಂಟೆಂಟ್[೬೧] ಯೋಜನೆಯಾಗಿದೆ. ಗೂಗಲ್ ಮೂನ್ 2005ರ ಜುಲೈ 20ರಂದು (UTC) ಮುಖ್ಯ ಗೂಗಲ್ ಶೋಧನಾ ಪುಟದ ಮೇಲ್ಭಾಗದಲ್ಲಿ ಪ್ರಕಟವಾದ ಗೂಗಲ್ ಲೋಗೊದ ಒಂದು ವಿಶೇಷ ಜ್ಞಾಪಕಾರ್ಥದ ಆವೃತ್ತಿಯಿಂದ ಜತೆಗೂಡಿದೆ.[೬೨]

ಗೂಗಲ್ ಮಾರ್ಸ್

ಚಿತ್ರ:GoogleMars.png
ಗೂಗಲ್ ಮಾರ್ಸ್

ಗೂಗಲ್ ಮೂನ್‌ನಂತೆ ಗೂಗಲ್ ಮಾರ್ಸ್ ಒಂದು ಗೋಚರ ಚಿತ್ರಣದ ವೀಕ್ಷಣೆಯನ್ನು ಮಾತ್ರವಲ್ಲದೆ ಮಂಗಳ ಗ್ರಹದ ಅವರೋಹಿತ ಚಿತ್ರಣ ಮತ್ತು ಮಸುಕಾದ ಉಬ್ಬುಚಿತ್ರಣವನ್ನೂ (ಉನ್ನತ ಸ್ಥಳ) ಒದಗಿಸುತ್ತದೆ. ಗೂಗಲ್ ನಕ್ಷೆಗಳ ನಕ್ಷೆ, ಉಪಗ್ರಹ ಮತ್ತು ಹೈಬ್ರಿಡ್ ಪ್ರಕಾರಗಳಿಗೆ ಬದಲಾವಣೆಗೊಳ್ಳುವಂತೆ ಬಳಕೆದಾರರು ಉನ್ನತ ಸ್ಥಳ, ಗೋಚರ ಮತ್ತು ಅವರೋಹಿತ ಮಾಹಿತಿಯ ನಡುವೆ ಆಯ್ಕೆಯನ್ನು ಮಾಡುವ ಮೂಲಕ ಬದಲಾಗಬಹುದು. ಅರಿಜೋನ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿರುವ ಮಾರ್ಸ್ ಸ್ಪೇಸ್ ಫ್ಲೈಟ್ ಫೆಸಿಲಿಟಿಯ ನಾಸಾ ವಿಜ್ಞಾನಿಗಳ ಸಹಯೋಗದೊಂದಿಗೆ, ಗೂಗಲ್ ನಾಸಾದ ಎರಡು ಮಂಗಳ-ಗ್ರಹದ ಕ್ಷಿಪಣಿಗಳಾದ ಮಾರ್ಸ್ ಗ್ಲೋಬಲ್ ಸರ್ವೇಯರ್ ಮತ್ತು 2001 ಮಾರ್ಸ್ ಒಡಿಸ್ಸಿಯಿಂದ ಸಂಗ್ರಹಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಿತು.[೬೩]

ಈಗ ಗೂಗಲ್ ಅರ್ತ್ 5 ಒಂದಿಗೆ ಹೊಸ ಸುಧಾರಿಸಿದ ಗೂಗಲ್ ಮಾರ್ಸ್ ಮಾಹಿತಿಯನ್ನು ಹೆಚ್ಚು ಪೃಥಕ್ಕರಣ ಸಾಮರ್ಥ್ಯದಲ್ಲಿ ಪಡೆಯಬಹುದು. ಅಷ್ಟೇ ಅಲ್ಲದೆ ಭೂಪ್ರದೇಶಗಳನ್ನು 3Dಯಲ್ಲಿ ವೀಕ್ಷಿಸಬಹುದು ಮತ್ತು ಗೂಗಲ್ ಸ್ಟ್ರೀಟ್ ವ್ಯೂವಿನಂತೆ ವಿವಿಧ ಮಂಗಳ-ಗ್ರಹನೌಕೆಗಳು ಒದಗಿಸಿದ ದೃಶ್ಯಾವಳಿಗಳನ್ನು ನೋಡಬಹುದು.

ಗೂಗಲ್ ಸ್ಕೈ

2007ರ ಆಗಸ್ಟ್‌ನಲ್ಲಿ, ಗೂಗಲ್ ಗೂಗಲ್ ಸ್ಕೈಯನ್ನು ಆರಂಭಿಸಿತು. ಇದೊಂದು ಆನ್‌ಲೈನ್ ಬಾಹ್ಯಾಕಾಶ ನಕ್ಷೆ ರೂಪಿಸುವ ಸಾಧನವಾಗಿದ್ದು ಇದು ಹಬಲ್ ಸ್ಪೇಸ್ ದೂರದರ್ಶಕ ತೆಗೆದ ಛಾಯಾಚಿತ್ರಗಳನ್ನು ಬಳಸಿಕೊಂಡು ಬಳಕೆದಾರರಿಗೆ ಗೋಚರ ಜಗತ್ತಿನ ನಕ್ಷೆಯನ್ನು ರೂಪಿಸಲು ಅವಕಾಶ ಮಾಡಿಕೊಡುತ್ತದೆ.

ಗೂಗಲ್ ರೈಡ್ ಫೈಂಡರ್

ಗೂಗಲ್ ಒಂದು ಪ್ರಾಯೋಗಿಕ ಗೂಗಲ್ ನಕ್ಷೆ-ಆಧಾರಿತ ಸಾಧನ ರೈಡ್ ಫೈಂಡರ್ ಅನ್ನು ಆರಂಭಿಸಿತು, ಇದು ಸಾರ್ವಜನಿಕ ಟ್ಯಾಕ್ಸಿ ಮತ್ತು ಲಿಮುಸೀನ್ ಸೇವೆಗಳ ಆಯ್ಕೆಗಾಗಿ ಕಾರೊಳಗಿನ GPS ಘಟಕಗಳೊಂದಿಗೆ ಸಂಪರ್ಕ ಸ್ಥಾಪಿಸುತ್ತದೆ. ಇದು ಗೂಗಲ್ ನಕ್ಷೆಗಳ ರಸ್ತೆ ನಕ್ಷೆಯಲ್ಲಿ ಚಿಕಾಗೊ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಮೊದಲಾದವನ್ನೂ ಒಳಗೊಂಡಂತೆ ಪ್ರಮುಖ U.S. ನಗರಗಳ ಸಾರ್ವಜನಿಕ ಸೇವೆಗಳ ಎಲ್ಲಾ ಬೆಂಬಲಿಸುವ ವಾಹನಗಳ ಪ್ರಸ್ತುತದ ಸ್ಥಳವನ್ನು ಪ್ರಕಟಗೊಳಿಸುತ್ತದೆ. 2009ರ ಮಾಹಿತಿಯ ಪ್ರಕಾರ ಇದು ಸ್ಥಗಿತಗೊಂಡಿತು. ಕಾರ್‌ಪೂಲಿಂಗ್ ಎಂಬುದಾಗಿ ತಪ್ಪಾಗಿ ಗ್ರಹಿಸಬಾರದು.

ಗೂಗಲ್ ಟ್ರಾನ್ಸಿಟ್

2005ರ ಡಿಸೆಂಬರ್‌ನಲ್ಲಿ, ಗೂಗಲ್ ಗೂಗಲ್ ಲ್ಯಾಬ್ಸ್‌ನಲ್ಲಿ ಗೂಗಲ್ ಟ್ರಾನ್ಸಿಟ್ಅನ್ನು ಆರಂಭಿಸಿತು, ಇದೊಂದು ಕ್ರಿಸ್ ಹ್ಯಾರೆಲ್ಸನ್ ಮತ್ತು ಅವಿಕಲ್ ಗಾರ್ಗ್‌ರ 20% ಯೋಜನೆಯಾಗಿದೆ.[೬೪] ಗೂಗಲ್ ಟ್ರಾನ್ಸಿಟ್ ಆರಂಭದಲ್ಲಿ ಆರೆಗನ್‌ನ ಪೋರ್ಟ್‌ಲ್ಯಾಂಡ್‌ಗೆ ಬೆಂಬಲ ನೀಡಲು ಪ್ರಾರಂಭವಾಯಿತು. ಈಗ ಇದು ಅಮೆರಿಕಾ ಸಂಯುಕ್ತ ಸಂಸ್ಥಾನ, ಕೆನಡಾ, ಯುರೋಪ್, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಭಾರತ(ಪುಣೆ) ಮತ್ತು ನ್ಯೂಜಿಲೆಂಡ್‌ನ ನೂರಾರು ನಗರಗಳನ್ನು ಒಳಗೊಳ್ಳುತ್ತದೆ. ಈ ಸೇವೆಯು ಮಾರ್ಗ, ಸಾಗಣೆ ಸಮಯ ಮತ್ತು ದರವನ್ನು ಅಂದಾಜಿಸುತ್ತದೆ ಹಾಗೂ ಕಾರನ್ನು ಬಳಸಿ ಮಾಡುವ ಪ್ರಯಾಣದೊಂದಿಗೆ ಹೋಲಿಸುತ್ತದೆ. 2007ರ ಅಕ್ಟೋಬರ್‌ನಲ್ಲಿ ಗೂಗಲ್ ಟ್ರಾನ್ಸಿಟ್, ಗೂಗಲ್ ಲ್ಯಾಬ್ಸ್‌ನಿಂದ ಉತ್ಕರ್ಷ ಪಡೆದು, ಸಂಪೂರ್ಣವಾಗಿ ಗೂಗಲ್ ನಕ್ಷೆಗಳಿಗೆ ಏಕೀಕರಣಗೊಂಡಿತು.[೬೫]

ವ್ಯಾಪ್ತಿ

ಗೂಗಲ್ ಟ್ರಾನ್ಸಿಟ್‌ನ ವ್ಯಾಪ್ತಿಯು ಸಾರ್ವಜನಿಕವಾಗಿ ಲಭ್ಯವಾಗುತ್ತದೆ. ಇದು ಪ್ರಪಂಚದಾದ್ಯಂತ ನೂರಾರು ನಗರಗಳಲ್ಲಿ ಮತ್ತು ಕೆಲವೊಮ್ಮೆ ಚೀನಾ, ಜಪಾನ್, ಸ್ವಿಟ್ಜರ್ಲ್ಯಾಂಡ್ ಮೊದಲಾದ ರಾಷ್ಟ್ರಗಳಾದ್ಯಂತ ಹರಡಿದೆ. ಇದು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದ ಪ್ರಮುಖ ನಗರಗಳನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ಆವರಿಸಿದೆ, ಕೆಲವು ಪ್ರಮುಖ ಅಪವಾದಗಳನ್ನು ಹೊರತುಪಡಿಸಿ (2011ರ ಜನವರಿಯ ಮಾಹಿತಿಯ ಪ್ರಕಾರ), ಉದಾ. ವಾಷಿಂಗ್ಟನ್, DC.

ಯುನೈಟೆಡ್ ಕಿಂಗ್ಡಮ್‌ನಂತಹ ಕೆಲವು ಪ್ರದೇಶಗಳಲ್ಲಿ ಗೂಗಲ್ ಟ್ರಾನ್ಸಿಟ್ ಸಾಗಣೆ ಏಜೆನ್ಸಿಗಳ ಭಾಗವನ್ನು ಮಾತ್ರ ಆವರಿಸುತ್ತದೆ. ಉದಾಹರಣೆಗಾಗಿ, ಲಂಡನ್‌ನ ಸಾರಿಗೆಯು ವ್ಯವಸ್ಥೆಯು ಅದರ ಮಾಹಿತಿಯನ್ನು ಗೂಗಲ್ ಟ್ರಾನ್ಸಿಟ್[ಸಾಕ್ಷ್ಯಾಧಾರ ಬೇಕಾಗಿದೆ]ಗೆ ಒದಗಿಸುವುದಿಲ್ಲ, ಆದರೆ ಕೆಲವು[which?] ಬಸ್ ಕಂಪನಿಗಳು ನೀಡುತ್ತವೆ, ಲಂಡನ್‌‌‌ನ ಅಥವಾ ಅದರ ಸುತ್ತಮುತ್ತಲ ಪ್ರದೇಶದ ಸಾಗಣೆ ನಿರ್ದೇಶನಗಳನ್ನು ಹುಡುಕುವಾಗ "ವ್ಯಾಪ್ತಿಯು ಅಸಂಪೂರ್ಣವಾಗಿದೆ" ಎಂಬ ಸೂಚನೆಯನ್ನು ಕೊಡುತ್ತವೆ.

ಇತರ ಪ್ರದೇಶಗಳಲ್ಲಿ ಗೂಗಲ್ ಟ್ರಾನ್ಸಿಟ್ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ನಿರ್ದೇಶನಗಳನ್ನು ನೀಡುವುದಿಲ್ಲ. ಆದರೆ ಟ್ರಾನ್ಸಿಟ್ ಲೇಯರ್ಅನ್ನು ಒದಗಿಸುತ್ತದೆ, ಇದು ನಕ್ಷೆಯಲ್ಲಿ ಸಾರಿಗೆ ವ್ಯವಸ್ಥೆಯ ರೂಪರೇಖೆಯನ್ನು ನೀಡುತ್ತದೆ. ಪ್ರಮುಖ ಉದಾಹರಣೆಗಳೆಂದರೆ ಪ್ಯಾರಿಸ್, ಬರ್ಲಿನ್, ಮೆಕ್ಸಿಕೊ ನಗರ ಮತ್ತು ಪ್ರಪಂಚದಾದ್ಯಂತದ ಅನೇಕ ಇತರ ರಾಜಧಾನಿಗಳು.

ಗೂಗಲ್ ಬೈಕ್-ಸವಾರಿಯ ನಿರ್ದೇಶನಗಳು

2010ರ ಮಾರ್ಚ್ 10ರಂದು, ಗೂಗಲ್ ಗೂಗಲ್ ನಕ್ಷೆಗಳಲ್ಲಿ ಬೈಕ್-ಸವಾರಿಯ ನಿರ್ದೇಶನಗಳನ್ನು ಹುಡುಕಲು ಸಾಧ್ಯವಾಗುವ ಸೇವೆಯನ್ನು ಸೇರಿಸಿತು. ಅನುಕೂಲಕರ ಮಾರ್ಗಗಳನ್ನು ವಾಹನದಟ್ಟಣೆ, ಎತ್ತರ ಸ್ಥಳಗಳ ಬದಲಾವಣೆ, ಬೈಕ್ ದಾರಿಗಳು, ಬೈಕ್ ಪಥಗಳು ಮತ್ತು ಬೈಕ್-ಸವಾರಿಗೆ ಸೂಕ್ತವಾದ ರಸ್ತೆಗಳಿಂದ ಅಂದಾಜಿಸಲಾಗುತ್ತದೆ. ಒಂದು ಪ್ರಶಸ್ತ ಮಾರ್ಗವೂ ವಿವಿಧ ಪ್ರಕಾರದ ಬೈಕ್-ಸವಾರಿಯ ಪಥಗಳನ್ನು ತೋರಿಸುತ್ತದೆ, ಅವುಗಳಲ್ಲಿ ಕೇವಲ ಬೈಕ್-ಸವಾರಿ ಹಾದಿಗಳು ಸೂಕ್ತವಾಗಿರುತ್ತವೆ. ಈ ಸೇವೆಯು US[೬೬][೬೭] ಮತ್ತು ಕೆನಡಾದಲ್ಲಿ[೬೮] ಲಭ್ಯವಿದೆ ಹಾಗೂ ಇದು ಸಿಂಗಾಪುರದಂತಹ ಕೆಲವು ಇತರ ರಾಷ್ಟ್ರಗಳಲ್ಲಿ ಬೀಟ ಪರಿಶೀಲನೆಯಲ್ಲಿದೆ.

ಗೂಗಲ್‌ನ ಮೈ ಮ್ಯಾಪ್ಸ್

2007ರ ಎಪ್ರಿಲ್‌ನಲ್ಲಿ, ಗೂಗಲ್‌ನ ಸ್ಥಳೀಯ ಶೋಧನಾ ನಕ್ಷೆಗಳಿಗೆ ಹೊಸ ಲಕ್ಷಣ ಮೈ ಮ್ಯಾಪ್ಸ್ ಸೇರಿಕೊಂಡಿತು. ಮೈ ಮ್ಯಾಪ್ಸ್ ಬಳಕೆದಾರರಿಗೆ ಮತ್ತು ವ್ಯವಹಾರಗಳಿಗೆ ಮಾರ್ಕರ್‌ಗಳು, ಪಾಲಿಲೈನ್‌ಗಳು ಮತ್ತು ಪಾಲಿಗನ್‌ಗಳನ್ನು ನಕ್ಷೆಯ ಮೇಲೆ ಇರಿಸುವ ಮೂಲಕ ತಮ್ಮದೇ ಆದ ಸ್ವಂತ ನಕ್ಷೆಯನ್ನು ರಚಿಸಲು ಅವಕಾಶ ಮಾಡಿಕೊಡುತ್ತದೆ. ಈ ಇಂಟರ್ಫೇಸ್ ನಕ್ಷೆಯ ಮೇಲಿನ ಸರಳ ಸ್ಥಾಪನೆಯಾಗಿದೆ. ಬಾರ್ ಮತ್ತು ರೆಸ್ಟಾರೆಂಟುಗಳಿಂದ ಹಿಡಿದು ವೆಬ್‌ಕ್ಯಾಮ್ ಮತ್ತು ಭೂಕಂಪ ಸಂಕೇತಗಳವರೆಗೆ ಸುಮಾರು ಎಂಭತ್ತನಾಲ್ಕು ಪೂರ್ವ-ವಿನ್ಯಾಸಗೊಳಿಸಿದ ಮಾರ್ಕರ್‌ಗಳು ಲಭ್ಯಯಿವೆ. ಪಾಲಿಲೈನ್ ಮತ್ತು ಪಾಲಿಗನ್‌ನ ಬಣ್ಣ, ಅಗಲ ಮತ್ತು ಅಪಾರದರ್ಶಕತೆಯು ಆಯ್ಕೆ ಮಾಡುವಂತಿರುತ್ತವೆ. ಮೈ ಮ್ಯಾಪ್ಸ್ಅನ್ನು ಬಳಸಿಕೊಂಡು ಮಾರ್ಪಡಿಸಿದ ನಕ್ಷೆಗಳನ್ನು ನಂತರದ ವೀಕ್ಷಣೆಗಾಗಿ ಉಳಿಸಬಹುದು ಮತ್ತು ಸಾರ್ವಜನಿಕವಾಗಿ ಮಾಡಬಹುದು ಅಥವಾ ಪಟ್ಟಿಯಲ್ಲಿ ಸೇರಿಸದ ಎಂದು ಗುರುತುಮಾಡಬಹುದು, ಈ ಸಂದರ್ಭದಲ್ಲಿ ಬಳಕೆದಾರರಿಗೆ 42 ಅಕ್ಷರದ ಒಂದು ಭಿನ್ನ ಐಡಿಯನ್ನು ಹೊಂದಿರುವ ಉಳಿಸಿದ URL ಬೇಕಾಗುತ್ತದೆ.

ಮೈ ಮ್ಯಾಪ್‌ಗೆ ಸೇರಿಸಿದ ಪ್ರತಿಯೊಂದು ಅಂಶವೂ ಒಂದು ಸಂಪಾದಿಸಬಹುದಾದ ಟ್ಯಾಗ್ಅನ್ನು ಹೊಂದಿರುತ್ತದೆ. ಈ ಟ್ಯಾಗ್ ಟೆಕ್ಸ್ಟ್, ರಿಚ್ ಟೆಕ್ಸ್ಟ್ ಅಥವಾ HTMLಅನ್ನು ಹೊಂದಿರಬಹುದು. ಹುದುಗಿಸಬಹುದಾದ(ಎಂಬೇಡೆಬಲ್) ವೀಡಿಯೊ ಮತ್ತು ಇತರ ವಿಷಯವನ್ನು HTML ಟ್ಯಾಗ್‌ನಲ್ಲಿ ಸೇರಿಸಬಹುದು.

ಮೈ ಮ್ಯಾಪ್ಸ್‌ ಆರಂಭವಾದ ನಂತರ ರಚಿಸಿದ ನಕ್ಷೆಗಳನ್ನು ಜಾಲಪುಟ ಅಥವಾ ಬ್ಲಾಗ್‌ಗೆ ಸೇರಿಸುವ ಯಾವುದೇ ಸೌಕರ್ಯಗಳಿರಲಿಲ್ಲ. ಕೆಲವು ಸ್ವತಂತ್ರ ಜಾಲತಾಣಗಳು ಈಗ ಬಳಕೆದಾರರಿಗೆ ನಕ್ಷೆಗಳನ್ನು ಹುದುಗಿಸಲು ಮತ್ತು ತಮ್ಮ ನಕ್ಷೆಗಳಿಗೆ ಇನ್ನಷ್ಟು ಕಾರ್ಯಗಳನ್ನು ಸೇರಿಸಲು ಅವಕಾಶ ಮಾಡಿಕೊಡುವ ಸಾಧನಗಳನ್ನು ಸೃಷ್ಟಿಸಿವೆ.[೬೯] ಇದನ್ನು 2.78 ಆವೃತ್ತಿಯಲ್ಲಿ ಪರಿಹರಿಸಲಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ]

ಗೂಗಲ್ ಸ್ಟ್ರೀಟ್ ವ್ಯೂ

2007ರ ಮೇ 25ರಂದು, ಗೂಗಲ್ ಸ್ಟ್ರೀಟ್ ವ್ಯೂಅನ್ನು ಬಿಡುಗಡೆ ಮಾಡಿತು. ಇದೊಂದು ಗೂಗಲ್ ನಕ್ಷೆಗಳ ಹೊಸ ಲಕ್ಷಣವಾಗಿದ್ದು, ವಿವಿಧ U.S. ನಗರಗಳ 360° ದೃಶ್ಯಾವಳಿಯಂಥ ರಸ್ತೆ-ಮಟ್ಟದ ವೀಕ್ಷಣೆಗಳನ್ನು ಒದಗಿಸುತ್ತದೆ. ಈ ದಿನಾಂಕದವರೆಗೆ ಈ ಲಕ್ಷಣವು ಕೇವಲ ಐದು ನಗರಗಳನ್ನು ಮಾತ್ರ ಒಳಗೊಂಡಿತ್ತು. ನಂತರ ಇದು ಆಸ್ಟ್ರೇಲಿಯಾ, ಕೆನಡಾ, ಚೀನಾ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಜರ್ಮನಿ, ಹಾಂಕ್ ಕಾಂಗ್, ಭಾರತ, ಇಟಲಿ, ಜಪಾನ್, ಮೆಕ್ಸಿಕೊ, ನ್ಯೂಜಿಲೆಂಡ್, ದಕ್ಷಿಣಾ ಆಫ್ರಿಕಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ನೆದರ್ಲೆಂಡ್ಸ್, ನಾರ್ವೆ, ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಸಾವಿರಾರು ಪ್ರದೇಶಗಳವರೆಗೆ ವಿಸ್ತರಿಸಿತು.

2008ರ ಆಗಸ್ಟ್‌ನಲ್ಲಿ, ಆಸ್ಟ್ರೇಲಿಯಾವನ್ನು ಸ್ಟ್ರೀಟ್ ವ್ಯೂಗೆ ಸೇರಿಸಲಾಯಿತು, ಈ ಸೇರಿಕೆಯು ಹೆಚ್ಚುಕಡಿಮೆ ಆಸ್ಟ್ರೇಲಿಯಾದ ಎಲ್ಲಾ ಹೆದ್ದಾರಿಗಳು, ರಸ್ತೆಗಳು ಮತ್ತು ಹಾದಿಗಳನ್ನು ಒಳಗೊಂಡಿತ್ತು. ಇದಕ್ಕೆ ಹೆಚ್ಚುವರಿಯಾಗಿ ಅದೇ ತಿಂಗಳಲ್ಲಿ ಜಪಾನ್ಅನ್ನೂ ಸೇರಿಸಲಾಯಿತು ಹಾಗೂ ಅದೇ ವರ್ಷದ ಜುಲೈ 2ರಂದು ಟೂರ್ ದಿ ಫ್ರಾನ್ಸ್ ಮಾರ್ಗವನ್ನು ಸೇರಿಸಲಾಯಿತು. 2008ರ ಡಿಸೆಂಬರ್‌ನಲ್ಲಿ, ನ್ಯೂಜಿಲೆಂಡ್ಅನ್ನು ಸ್ಟ್ರೀಟ್ ವ್ಯೂಗೆ ಕೂಡಿಸಿಕೊಳ್ಳಲಾಯಿತು. ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾತ್ರ ಹೆಚ್ಚುಕಡಿಮೆ ಎಲ್ಲಾ ರಸ್ತೆಗಳು ಮತ್ತು ಹೆದ್ದಾರಿಗಳನ್ನು ಸ್ಟ್ರೀಟ್ ವ್ಯೂನಲ್ಲಿ ಒಳಗೊಂಡಿರುವ ರಾಷ್ಟ್ರಗಳಾಗಿವೆ.

2009ರ ಜುಲೈನಲ್ಲಿ, ಗೂಗಲ್ ಕಾಲೇಜು ಕ್ಯಾಂಪಸ್‌ಗಳ ಹಾಗೂ ಸುತ್ತಮುತ್ತಲ ಹಾದಿಗಳ ಮತ್ತು ದಾರಿಗಳ ನಕ್ಷೆ ರೂಪಿಸುವುದನ್ನು ಆರಂಭಿಸಿತು. ಮೆಕ್ಸಿಕೊದ ಮುಖ್ಯ ನಗರಗಳನ್ನು ಮತ್ತು ಪ್ರವಾಸಿ ಕೇಂದ್ರಗಳನ್ನು ಸ್ಟ್ರೀಟ್ ವ್ಯೂಗೆ ಸೇರಿಸಲಾಯಿತು.[೭೦]

ಸ್ಟ್ರೀಟ್ ವ್ಯೂ ಆರಂಭವಾದ ನಂತರ ಅದರ ದೃಶ್ಯಾವಳಿಗಳ ಛಾಯಾಚಿತ್ರಗಳಿಗೆ ಕತ್ತರಿ ಪ್ರಯೋಗ ಮಾಡದೆ ಗೋಪ್ಯತೆಯನ್ನು ಕಾಪಾಡುವುದಿಲ್ಲವೆಂಬ ಹಲವಾರು ವಿವಾದಗಳನ್ನು ಎದುರಿಸಿತು.[೭೧][೭೨] ಅನಂತರ ಗೂಗಲ್ ಸ್ವಯಂಚಾಲಿತ ಮುಖ ಪತ್ತೆಹಚ್ಚುವಿಕೆಯ ಮೂಲಕ ಮುಖಗಳನ್ನು ಅಸ್ಪಷ್ಟಗೊಳಿಸಲು ಆರಂಭಿಸಿತು.[೭೩]

ಗೂಗಲ್ ಏರಿಯಲ್ ವ್ಯೂ

2009ರ ಡಿಸೆಂಬರ್‌ನಲ್ಲಿ, ಗೂಗಲ್ ಏರಿಯಲ್ ವ್ಯೂಅನ್ನು ಬಿಡುಗಡೆಗೊಳಿಸಿತು, ಇದು ನಗರಗಳ ಒಂದು "ಪಕ್ಷಿನೋಟ"ವನ್ನು ಒದಗಿಸುವ ಕೋನೀಯ ವಿಮಾನ-ಚಿತ್ರಣವನ್ನು ಒಳಗೊಳ್ಳುತ್ತದೆ. ಇದರಲ್ಲಿ ಲಭ್ಯವಾದ ಮೊದಲ ನಗರಗಳೆಂದರೆ ಸ್ಯಾನ್ ಜೋಸ್ ಮತ್ತು ಸ್ಯಾನ್ ಡೈಗೊ. ಈ ಲಕ್ಷಣವು ಗೂಗಲ್ ನಕ್ಷೆ APIಯ ಮೂಲಕ ಅಭಿವರ್ಧಕರಿಗೆ ಮಾತ್ರ ಲಭ್ಯವಾಗಿತ್ತು.[೭೪] 2010ರ ಫೆಬ್ರವರಿಯಲ್ಲಿ, ಇದನ್ನು ಗೂಗಲ್ ಮ್ಯಾಪ್ಸ್ ಲ್ಯಾಬ್ಸ್‌ನಲ್ಲಿ ಒಂದು ಪ್ರಾಯೋಗಿಕ ಲಕ್ಷಣವಾಗಿ ಆರಂಭಿಸಲಾಯಿತು.[೭೫]

2010ರ ಜುಲೈನಲ್ಲಿ ಏರಿಯಲ್ ವ್ಯೂಅನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಪ್ರಪಂಚದಾದ್ಯಂತದ ಆಯ್ದ ನಗರಗಳ ಗೂಗಲ್ ನಕ್ಷೆಗಳಲ್ಲಿ ಲಭ್ಯವಾಗುವಂತೆ ಮಾಡಲಾಯಿತು.[೭೬]

ಲಭ್ಯಯಿರುವ ನಗರಗಳ ಸಂಪೂರ್ಣ ಪಟ್ಟಿ ಹೀಗಿದೆ (2011ರ ಜನವರಿಯ ಮಾಹಿತಿಯ ಪ್ರಕಾರ):[೭೭]

  • ಚಿಲಿ: ಸ್ಯಾಂಟಿಯಾಗೊ ಮತ್ತು ವಾಲ್ಪರೈಸೊ.
  • ಜರ್ಮನಿ: ಡಾರ್ಟ್ಮಂಡ್ ಮತ್ತು ಸ್ಟಟ್ಗಾರ್ಟ್.
  • ಹಂಗೇರಿ: ಬುಡಪೆಸ್ಟ್.
  • ಇಟಲಿ: ವೆನಿಸ್.
  • ದಕ್ಷಿಣ ಆಫ್ರಿಕಾ: ಬ್ಲೋಯೆಂಫಾಂಟೇನ್, ಕೇಪ್ ಟೌನ್, ಡುರ್ಬಾನ್, ಜೊಹಾನ್ಸ್‌ಬರ್ಗ್, ನೆಲ್ಸ್‌ಪ್ರುಟ್, ಪೋಲೊಕ್ವೇನ್, ಪೋರ್ಟ್ ಎಲಿಜಬೆತ್, ಪ್ರಿಟೋರಿಯಾ ಮತ್ತು ರಸ್ಟೆನ್‌ಬರ್ಗ್ ಸುತ್ತಮುತ್ತಲಿನ ಪ್ರದೇಶ.
  • ಸ್ಪೇನ್: ಸೆವಿಲ್ಲೆ
  • ಅಮೆರಿಕಾ ಸಂಯುಕ್ತ ಸಂಸ್ಥಾನ: ಆಲ್ಬಕ್ವೆರ್ಕ್ಯು, ಆಸ್ಟಿನ್, ಕೋಂಟ್ರ ಕೋಸ್ಟ ಕೌಂಟಿ, ಎಸ್ಕಾಂಡಿಡೊ, ಲಾಂಗ್ ಬೀಚ್, ನ್ಯೂ ಆರ್ಲಿಯನ್ಸ್, ನಾರ್ಫೋಕ್, ಓಕ್‌ಲ್ಯಾಂಡ್ ಏರಿಯಾ, ಓಕ್ಲಹೋಮ ಸಿಟಿ, ಪೋರ್ಟ್‌ಲ್ಯಾಂಡ್ ಏರಿಯಾ, ಸ್ಯಾಕ್ರೊಮೆಂಟೊ ಏರಿಯಾ, ಸಾಲ್ಟ್ ಲೇಕ್ ಸಿಟಿ, ಸ್ಯಾನ್ ಆಂಟೋನಿಯೊ, ಸ್ಯಾನ್ ಡೈಗೊ ಏರಿಯಾ, ಸ್ಯಾನ್ ಜೋಸ್ ಏರಿಯಾ, ಸಂತಾ ಕ್ಲಾರ ಏರಿಯಾ, ಸಂತಾ ಕ್ರುಜ್ ಏರಿಯಾ, ಸೇಂಟ್ ಪೀಟರ್ಸ್‌ಬರ್ಗ್, ಟುಕ್ಸನ್ ಮತ್ತು ವ್ಯಾನ್ ನಯ್ಸ್.

ಗೂಗಲ್ ಲ್ಯಾಟಿಟ್ಯೂಡ್

ಗೂಗಲ್ ಲ್ಯಾಟಿಟ್ಯೂಡ್ ಗೂಗಲ್‌ನ ಒಂದು ಲಕ್ಷಣವಾಗಿದ್ದು ಇದು ಬಳಕೆದಾರರಿಗೆ ತಮ್ಮ ಭೌತಿಕ ಸ್ಥಳಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಸೇವೆಯು ಗೂಗಲ್ ನಕ್ಷೆಗಳನ್ನು, ವಿಶೇಷವಾಗಿ ಮೊಬೈಲ್ ಸಾಧನಗಳನ್ನು, ಆಧರಿಸಿದೆ. ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳಿಗೂ ಒಂದು ಐಗೂಗಲ್ ಸಾಧನವಿದೆ.[೭೮] ಈ ಸೇವೆಯ ಬಳಕೆಯಿಂದ ಉಂಟಾದ ಗೋಪ್ಯತೆ ಸಮಸ್ಯೆಯ ಬಗ್ಗೆ ಕೆಲವು ಟೀಕೆಗಳಿದ್ದವು.[೭೯]

ಗೂಗಲ್ ಫ್ಲೂ ಶಾಟ್ ಫೈಂಡರ್

ಗೂಗಲ್ ಫ್ಲೂ ಶಾಟ್ ಫೈಂಡರ್ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಬಳಕೆದಾರರಿಗೆ ನೀಡಿದ ವಿಳಾಸ ಅಥವಾ ಜಿಪ್ ಕೋಡ್‌ನ ಹತ್ತಿರ ಸರ್ವವ್ಯಾಪಿ H1N1/09 ವೈರಸ್ ಮತ್ತು ನಿಯತಕಾಲಿಕ ಫ್ಲೂ ಲಸಿಕೆಗಳೆರಡೂ ಲಭ್ಯಯಿರುವ ಸ್ಥಳಗಳನ್ನು ಕಂಡುಹಿಡಿಯಲು ಅವಕಾಶ ಮಾಡಿಕೊಡುತ್ತದೆ.

ಮೋನೊಪಾಲಿ ಸಿಟಿ ಸ್ಟ್ರೀಟ್ಸ್

ಮೋನೊಪಾಲಿ ಸಿಟಿ ಸ್ಟ್ರೀಟ್ಸ್ ಒಂದು ಮೋನೊಪಾಲಿ ಆಟದ ಪ್ರಪಂಚದಾದ್ಯಂತದ ನೇರ ಆವೃತ್ತಿಯಾಗಿದೆ, ಇದು ಗೂಗಲ್ ನಕ್ಷೆಗಳನ್ನು ಆಟದ ಆಧಾರವಾಗಿ ಬಳಸಿಕೊಳ್ಳುತ್ತದೆ. ಇದನ್ನು ಗೂಗಲ್ ಮತ್ತು ಹ್ಯಾಸ್ಬ್ರೊ ರಚಿಸಿದವು. ಈ ಆಟ ಈಗ ಅಸ್ತಿತ್ವದಲ್ಲಿಲ್ಲ.[೮೦]

ಮಾಶಪ್ಸ್

ಗೂಗಲ್ ನಕ್ಷೆಗಳು ವಿಕಿಪೀಡಿಯಾ ಲೇಖನಗಳಲ್ಲಿರುವ ಜಿಯೋ-ಟ್ಯಾಗ್‌ಗಳಿಗೆ ಸಂಪರ್ಕವನ್ನು ಕಲ್ಪಿಸುತ್ತವೆ. ಇದು ಪನೊರೇಮಿಯೊದ GPS ಟ್ಯಾಗ್‌ಗಳನ್ನು ಹೊಂದಿರುವ ಫೋಟೊಗಳಿಗೂ ಸಂಪರ್ಕ ಕಲ್ಪಿಸುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ]

ಕೃತಿಸ್ವಾಮ್ಯ

ಗೂಗಲ್ ನಕ್ಷೆಗಳ ನಿಯಮಗಳು ಮತ್ತು ನಿಬಂಧನೆಗಳು[೮೧] ಗೂಗಲ್ ನಕ್ಷೆಗಳ ಬಳಕೆಯು ಗೂಗಲ್ ಸೇವೆಯ ನಿಯಮಗಳಿಂದ[೮೨] ಮತ್ತು ಕೆಲವು ಹೆಚ್ಚುವರಿ ನಿಬಂಧನೆಗಳಿಂದ ನಿಯಂತ್ರಿಸಲ್ಪಡುತ್ತದೆಂದು ಸೂಚಿಸುತ್ತವೆ.

ದೋಷಗಳು

ಕೆಲವು ಪ್ರದೇಶಗಳ ರಸ್ತೆ ನಕ್ಷೆಯ ಮಾಹಿತಿಗಳು ಅನುರೂಪ ಉಪಗ್ರಹ ಚಿತ್ರಗಳೊಂದಿಗೆ ನಿಖರವಾಗಿ ಸರಿಹೊಂದದಿರಬಹುದು. ರಸ್ತೆಯ ಮಾಹಿತಿಯು ಸಂಪೂರ್ಣವಾಗಿ ತಪ್ಪಾಗಿರಬಹುದು ಅಥವಾ ತುಂಬಾ ಹಿಂದಿನದಾಗಿರಬಹುದು: "ಮಾಹಿತಿಯ ಚಾಲ್ತಿ ಮತ್ತು ಮಾಹಿತಿಯ ಯಥಾರ್ಥತೆಯು ಬಹುದೊಡ್ಡ ಸವಾಲಾಗಿದೆ" ಎಂದು ಗೂಗಲ್ ಅರ್ತ್ ಪ್ರತಿನಿಧಿ ಬ್ರಿಯಾನ್ ಮ್ಯಾಕ್‌ಲೆಂಡನ್ ಹೇಳಿದ್ದಾರೆ. ಆದ್ದರಿಂದ 2008ರ ಮಾರ್ಚ್‌ನಲ್ಲಿ ಗೂಗಲ್ ಮನೆ ಮತ್ತು ಉದ್ಯಮಗಳ ಸ್ಥಳಗಳನ್ನು ಸಂಪಾದಿಸುವ ಲಕ್ಷಣವನ್ನು ಸೇರಿಸಿತು.[೮೩][೮೪]

ಭದ್ರತೆಯ ಅಪಾಯಗಳಿವೆಯೆಂದು ಭಾವಿಸಲಾಗುವ ಸ್ಥಳಗಳಿಗೆ ಕತ್ತರಿ ಪ್ರಯೋಗ ಮಾಡುವಂತಹ ನಿರ್ಬಂಧಗಳನ್ನು ಗೂಗಲ್ ನಕ್ಷೆಗಳಿಗೆ ಹೇರಲಾಯಿತು. ಕೆಲವು ಸಂದರ್ಭಗಳಲ್ಲಿ ಕೆಲವು ನಿರ್ದಿಷ್ಟ ಕಟ್ಟಡಗಳ ಮಾಹಿತಿಯನ್ನು ಪರಿಷ್ಕರಣ ಮಾಡಬೇಕಾಗುತ್ತದೆ. ಮತ್ತೆ ಕೆಲವು ಸಂದರ್ಭಗಳಲ್ಲಿ, ಬಹು ಹಿಂದಿನ ಚಿತ್ರಗಳನ್ನು ಬಳಸದಿರುವಂತೆ ನಿರ್ಬಂಧವನ್ನು ಹೇರಲಾಗುತ್ತದೆ, ಉದಾ. ವಾಷಿಂಗ್ಟನ್, D.C.[೮೫] ಈ ಸ್ಥಳಗಳನ್ನು ಉಪಗ್ರಹ ನಕ್ಷೆ ಚಿತ್ರಗಳಲ್ಲಿ ಕಳೆದುಹೋದ ಅಥವಾ ಅಸ್ಪಷ್ಟ ಮಾಹಿತಿಯೊಂದಿಗೆ ಸಂಪೂರ್ಣವಾಗಿ ಪಟ್ಟಿಮಾಡಲಾಗಿದೆ.

ಗೂಗಲ್ ನಕ್ಷೆಗಳು ಗಡಿಪ್ರದೇಶಗಳ ರಸ್ತೆಯ ಮಾಹಿತಿಯನ್ನು ನೀಡುವಲ್ಲಿ ಸಮಸ್ಯೆಯನ್ನು ಹೊಂದಿವೆ. ಉದಾಹರಣೆಗಾಗಿ, ಬಳಕೆದಾರರಿಗೆ ಹಾಂಕ್ ಕಾಂಗ್‌ನಿಂದ ಶೆನ್‌ಜೆನ್‌ಗೆ ಶಾಟೌಜಿಯಾವೊದ ಮೂಲಕ ಹೋಗುವ ಮಾರ್ಗದ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಏಕೆಂದರೆ ಗೂಗಲ್ ನಕ್ಷೆಗಳು ಎರಡು ಅತಿಕ್ರಮಣ ಮಾಡುವ ಸ್ಥಳಗಳ ಮಾರ್ಗ-ನಕ್ಷೆಯನ್ನು ತೋರಿಸುವುದಿಲ್ಲ ಮತ್ತು ಯೋಜಿಸುವುದಿಲ್ಲ.[೮೬]

ಕೆಲವೊಮ್ಮೆ ಗೂಗಲ್ ನಕ್ಷೆಗಳಲ್ಲಿ ವಸ್ತುಗಳು ಮತ್ತು ಪ್ರದೇಶಗಳೂ ಸಹ ಮೋಡಗಳಿಂದಾಗಿ ಮರೆಯಾಗುತ್ತವೆ. ಉದಾಹರಣೆಗಾಗಿ, ಸ್ವೀಡನ್‌ನ ಬೊಲ್ನಾಸ್‌ನ ಹತ್ತಿರದ ಆರ್ಬ್ರಾ ಟ್ರಾನ್ಸ್‌ಮಿಟರ್‌ನ ರೇಡಿಯೊ-ಕಂಬವು(ಮಾಸ್ಟ್) as of August 25, 2010 ಮೋಡದಡಿಯಲ್ಲಿ ಮರೆಯಾಗಿದೆ.

ಕೆಲವೊಮ್ಮೆ ಭೌಗೋಳಿಕ ಸ್ಥಳಗಳ ಹೆಸರುಗಳು ತಪ್ಪಾಗಿರುತ್ತವೆ. ಈ ರೀತಿಯ ದೋಷಕ್ಕೆ ಒಂದು ಉದಾಹರಣೆಯು ವಿಸ್ಕನ್ಸಿನ್‌ನ ಲವೋನದ ಗೂಗಲ್ ನಕ್ಷೆಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ಗೂಗಲ್ ನಕ್ಷೆಗಳು ನಗರದ ಎರಡು ಪ್ರಮುಖ ಸರೋವರಗಳಲ್ಲಿ ಒಂದನ್ನು "ಡಾವ್ಸನ್ ಸರೋವರ"ವೆಂದು ಸೂಚಿಸುತ್ತವೆ;[೮೭] USGS, ವಿಸ್ಕನ್ಸಿನ್ ರಾಜ್ಯ ಮತ್ತು ಸ್ಥಳೀಯ ಸರ್ಕಾರದ ನಕ್ಷೆಗಳೆಲ್ಲವೂ ಅದನ್ನು "ಸ್ಕ್ಯಾಟರ್ಡ್ ರೈಸ್ ಸರೋವರ"ವೆಂದು ಗುರುತಿಸುತ್ತವೆ.[೮೮] ಮತ್ತೊಂದು ಉದಾಹರಣೆಯೆಂದರೆ ಸ್ಯಾಮೋವ, ಇದನ್ನು "ಪಶ್ಚಿಮ ಸ್ಯಾಮೋವ"ವೆಂದು ಸೂಚಿಸಿತು, ಇದನ್ನು ಇತ್ತೀಚೆಗೆ 1997ರಲ್ಲಿ ನಿಖರವಾಗಿ ಸರಿಪಡಿಸಲಾಯಿತು.

ಗೂಗಲ್ ನಕ್ಷೆಗಳ ವಿಕಿಪೀಡಿಯಾ ಆಯ್ಕೆಯು ತಪ್ಪಾದ ಅಥವಾ ವ್ಯಾಪಕವಾಗಿ ದಾರಿತಪ್ಪಿಸುವ ಮಾಹಿತಿಯನ್ನು ನೀಡುವ ಮೂಲಕ ಹಲವಾರು ಕುತೂಲಹಕರ ದೋಷಗಳನ್ನು ಉಂಟುಮಾಡಿತು:

ಗೂಗಲ್ ಹಲವಾರು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಗಳಿಂದ ವ್ಯವಹಾರ ಪಟ್ಟಿಗಳನ್ನು ಸಂಕಲಿಸುತ್ತದೆ. ಸೂಚಿಯಲ್ಲಿ ಪುನರಾವರ್ತನೆಯಾಗುವುದನ್ನು ತಪ್ಪಿಸಲು, ಗೂಗಲ್‌ನ ಗಣನೆಯು ವಿಳಾಸ, ದೂರವಾಣಿ ಸಂಖ್ಯೆ ಅಥವಾ ಭೌಗೋಳಿಕ-ಕೋಡ್‌ನ ಆಧಾರದಲ್ಲಿ ಸ್ವಯಂಚಾಲಿತವಾಗಿ ಪಟ್ಟಿಗಳನ್ನು ಮಾಡುತ್ತದೆ.[೮೯] ಆದರೆ ಕೆಲವೊಮ್ಮೆ ಪ್ರತ್ಯೇಕ ವ್ಯವಹಾರಗಳ ಮಾಹಿತಿಯು ಮತ್ತೊಂದರೊಂದಿಗೆ ಪ್ರಮಾದವಶಾತ್ ಸೇರಿಕೊಳ್ಳುತ್ತದೆ, ಇದರಿಂದ ಹಲವಾರು ವ್ಯವಹಾರಗಳ ಮಾಹಿತಿಗಳು ತಪ್ಪಾಗಿ ಪಟ್ಟಿಗಳಲ್ಲಿ ಸೇರುವಂತಾಗುತ್ತದೆ.[೯೦]

ಗೂಗಲ್ ಮಾಹಿತಿಯನ್ನು ಪರಿಶೀಲಿಸಿ, ನಿಖರವಾಗಿ ಸರಿಪಡಿಸಲು ಸ್ವಯಂ-ಸೇವಕರನ್ನು ನೇಮಕಮಾಡಿದೆ.[೯೧]

ಗಡಿಪ್ರದೇಶಗಳನ್ನು ಸೂಚಿಸುವಲ್ಲಿ ಗೂಗಲ್ ಡಿಟು ಮತ್ತು ಗೂಗಲ್ ನಕ್ಷೆಗಳ ನಡುವೆ ಕೆಲವು ವ್ಯತ್ಯಾಸಗಳಿವೆ. ಗೂಗಲ್ ನಕ್ಷೆಗಳಲ್ಲಿ, ಭಾರತ ಮತ್ತು ಪಾಕಿಸ್ತಾನದೊಂದಿಗಿನ ಚೀನಾದ ಗಡಿಪ್ರದೇಶವನ್ನು ಚುಕ್ಕೆಗಳ ಗೆರೆಗಳಿಂದ ತೋರಿಸುವ ಮೂಲಕ ಆ ಪ್ರದೇಶಗಳು ಅಥವಾ ಗಡಿನಾಡುಗಳು ವಿವಾದಲ್ಲಿವೆ ಎಂಬುದನ್ನು ಸೂಚಿಸಲಾಗಿದೆ. ಆದರೆ ಗೂಗಲ್ ಡಿಟು ಭಾರತ ಮತ್ತು ಪಾಕಿಸ್ತಾನದೊಂದಿಗಿನ ಗಡಿಪ್ರದೇಶವನ್ನು ಚುಕ್ಕೆಗಳ ಗೆರೆಗಳಿಂದ ಸೂಚಿಸದೆ, ಚೀನಾದ ಸೀಮಾರೇಖೆಯು ಸ್ಪಷ್ಟವಾಗಿ ಚೀನಾದ ಹೇಳಿಕೆಯಂತಿರುತ್ತದೆ ಎಂಬುದನ್ನು ತೋರಿಸುತ್ತದೆ. ಉದಾಹರಣೆಗಾಗಿ, ಈಗ ಭಾರತ ಆಡಳಿತ ನಡೆಸುತ್ತಿರುವ ಅರುಣಾಚಲ ಪ್ರದೇಶವನ್ನು (ಚೀನಾದಿಂದ "ದಕ್ಷಿಣ ಟಿಬೆಟ್" ಎಂದು ಸೂಚಿಸಲ್ಪಡುತ್ತದೆ) ಗೂಗಲ್ ಡಿಟು ಚೀನಾದ ಸೀಮಾರೇಖೆಯೊಳಗೆ ತೋರಿಸುತ್ತದೆ, ಭಾರತದ ಹೆದ್ದಾರಿಗಳು ಏಕಾಏಕಿ ಚೀನಾದ ಗಡಿರೇಖೆಯಲ್ಲಿ ಕೊನೆಗೊಳ್ಳುತ್ತವೆ. ಗೂಗಲ್ ಡಿಟು ತೈವಾನ್ ಮತ್ತು ದಕ್ಷಿಣ ಚೀನಾದ ಸಮುದ್ರ ದ್ವೀಪಗಳನ್ನು ಚೀನಾದ ಭಾಗವಾಗಿ ತೋರಿಸುತ್ತದೆ. 2009ರ ಮೇಯ ಮಾಹಿತಿಯ ಪ್ರಕಾರ, ಗೂಗಲ್ ಡಿಟುವಿನ ತೈವಾನ್‌ನ ರಸ್ತೆ-ನಕ್ಷೆಯು ರಾಜ್ಯದ ಪ್ರಮುಖ ಅಂಗಗಳನ್ನು ಬಿಟ್ಟುಬಿಟ್ಟಿದೆ, ಉದಾ. ಅಧ್ಯಕ್ಷೀಯ ಭವನ, ಐದು ಯುವಾನ್‌ಗಳು ಮತ್ತು ಸರ್ವೋಚ್ಛ ನ್ಯಾಯಾಲಯ.

ditu.google.cn ಮತ್ತು ditu.google.com ಮಧ್ಯೆ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ditu.google.cn ಮೈ ಮ್ಯಾಪ್ಸ್ಅನ್ನು ಹೊಂದಿಲ್ಲ. ditu.google.cn ಹೆಚ್ಚುಕಡಿಮೆ ಎಲ್ಲಾ ಮಾಹಿತಿಯನ್ನು ಚೀನಾದ-ಭಾಷೆಯಲ್ಲಿ ಪ್ರಕಟಿಸುತ್ತದೆ. ಅದೇ ditu.google.com ಹೆಚ್ಚಿನ ಮಾಹಿತಿಯನ್ನು (ಬಳಕೆದಾರರು-ಆಯ್ಕೆ ಮಾಡಬಹುದಾದ ನೈಜ ಮಾಹಿತಿಯನ್ನು ಮತ್ತು ನಕ್ಷೆಯಲ್ಲಿರುವ ಮಾಹಿತಿಯನ್ನು) ಇಂಗ್ಲಿಷ್‌ನಲ್ಲಿ ಪ್ರಕಟಿಸುತ್ತದೆ. ಈ ಇಂಗ್ಲಿಷ್‌ನಲ್ಲಿ ಪ್ರಕಟಿಸುವ ರೀತಿಯು ಸ್ಥಿರವಾದುದಲ್ಲ, ತಡೆದುತಡೆದು ಆಗುತ್ತದೆ - ಕೆಲವೊಮ್ಮೆ ಇದು ಇಂಗ್ಲಿಷ್‌ನಲ್ಲಿರುತ್ತದೆ, ಮತ್ತೆ ಕೆಲವೊಮ್ಮೆ ಚೀನಾದ-ಭಾಷೆಯಲ್ಲಿರುತ್ತದೆ. ಯಾವ ಭಾಷೆಯು ಪ್ರಕಟವಾಗಬೇಕು ಎಂಬುದನ್ನು ಆಯ್ಕೆ ಮಾಡುವ ನಿರ್ಣಾಯಕ-ಅಂಶವು ತಿಳಿದಿಲ್ಲ.

2010ರ ಅಕ್ಟೋಬರ್‌ನಲ್ಲಿ, ನಿಕಾರಗ್ವಾನ್ ಮಿಲಿಟರಿ ಕಮಾಂಡರ್ ಎಡೆನ್ ಪಸ್ಟೋರ ನಿಕಾರಗ್ವಾನ್ ಸೈನ್ಯವನ್ನು ಐಸ್ಲಾ ಕ್ಯಾಲೆರೊದಲ್ಲಿ (ಸ್ಯಾನ್ ಜುವಾನ್ ನದಿಯ ಮುಖಜ ಭೂಮಿಯಲ್ಲಿ) ಇರಿಸಿದರು, ಆ ಮೂಲಕ ಗೂಗಲ್ ನಕ್ಷೆಗಳು ಚಿತ್ರಿಸಿದ ಗಡಿರೇಖೆಯಲ್ಲಿನ ತನ್ನ ಸೈನ್ಯದ ಕಾರ್ಯಾಚರಣೆಯನ್ನು ಸಮರ್ಥಿಸಿದರು. ಆ ದ್ವೀಪವು ಬಹುಹಿಂದಿನಿಂದಲೂ ಕೋಸ್ಟಾ ರಿಕಾ ಮತ್ತು ನಿಕಾರಗ್ವಾನ್ ಮಧ್ಯೆ ವಿವಾದದಲ್ಲಿತ್ತು. ಈ ಘಟನೆಯು ಗಡಿರೇಖೆಯ ಸಮಸ್ಯೆಗೆ ಹೊಸಚೈತನ್ಯ ನೀಡಿತು. ಬಿಂಗ್ ನಕ್ಷೆಗಳು ಆ ದ್ವೀಪವು ಕೋಸ್ಟಾ ರಿಕಾದ ಸೀಮಾರೇಖೆಯೊಳಗೆ ಬರುತ್ತದೆಂದು ಚಿತ್ರಿಸುತ್ತವೆ. ಗೂಗಲ್ ಈ ವಿವಾದದ ಬಗ್ಗೆ ಪರಿಶೀಲನೆ ಮಾಡುತ್ತಿದೆ ಮತ್ತು ತಪ್ಪೆಂದು ತಿಳಿದುಬಂದಲ್ಲಿ ಮಾಹಿತಿಯನ್ನು ಸರಿಪಡಿಸುತ್ತದೆಂದು ಹೇಳಿತು.[೯೨]

ನಕ್ಷೆಯ ಪ್ರಕ್ಷೇಪಣ

ಗೂಗಲ್ ನಕ್ಷೆಗಳು ಮರ್ಕೇಟರ್ ಪ್ರಕ್ಷೇಪಣವನ್ನು ಹತ್ತಿರದಿಂದ ಹೋಲುವ ಲಕ್ಷಣವನ್ನು ಆಧರಿಸಿವೆ. ಭೂಮಿಯು ಸಂಪೂರ್ಣವಾಗಿ ಗೋಲಾಕಾರದಲ್ಲಿದ್ದರೆ, ಪ್ರಕ್ಷೇಪಣವು ಮರ್ಕೇಟರ್‌ನಂತಹುದೇ ಆಗಬಹುದಿತ್ತು. ಗೂಗಲ್ ನಕ್ಷೆಗಳು ಗೋಲಾಕಾರದ ಮರ್ಕೇಟರ್‌ನ ಸೂತ್ರಗಳನ್ನು ಬಳಸುತ್ತವೆ, ಆದರೆ ಗೂಗಲ್ ನಕ್ಷೆಗಳ ಲಕ್ಷಣಗಳ ನಿರ್ದೇಶಾಂಕಗಳು WGS 84 ದತ್ತಾಂಶವನ್ನು ಆಧರಿಸಿದ GPS ನಿರ್ದೇಶಾಂಕಗಳಾಗಿವೆ. ಗೋಲ ಮತ್ತು WGS 84 ಅಂಡಾಕಾರದ ನಡುವಿನ ವ್ಯತ್ಯಾಸವು ಪರಿಣಾಮವಾದ-ಪ್ರಕ್ಷೇಪಣವು ನಿಖರವಾಗಿ ಯಥಾನುರೂಪವಾಗದಂತೆ ಮಾಡುತ್ತದೆ. ಈ ವ್ಯತ್ಯಾಸವು ಜಾಗತಿಕ ಪರಿಮಾಣದಲ್ಲಿ ಅರ್ಥವಿಲ್ಲದ್ದಾಗಿದೆ. ಆದರೆ ಇದು ಸ್ಥಳೀಯ ಪ್ರದೇಶಗಳ ನಕ್ಷೆಗಳು ನಿಜವಾದ ಅಂಡಾಕಾರದ ಮರ್ಕೇಟರ್ ನಕ್ಷೆಗಳಿಂದ ಸ್ವಲ್ಪಮಟ್ಟಿಗೆ ವಿಪಥವಾಗಲು ಕಾರಣವಾಗುತ್ತದೆ.

ಮರ್ಕೇಟರ್ ಧ್ರುವಗಳನ್ನು ಅನಂತತೆಯಲ್ಲಿ ಪ್ರಕ್ಷೇಪಿಸುವುದರಿಂದ, ಗೂಗಲ್ ನಕ್ಷೆಗಳಿಗೆ ಧ್ರುವಗಳನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ ಇದು ವ್ಯಾಪ್ತಿಯನ್ನು 85° ಉತ್ತರ ಮತ್ತು ದಕ್ಷಿಣದಲ್ಲಿ ತುಂಡರಿಸುತ್ತದೆ. ಇದನ್ನು ಮಿತಿಯೆಂದು ಪರಿಗಣಿಸಲಾಗುವುದಿಲ್ಲ, ಬದಲಿಗೆ ಸೇವೆಯ ಸಾಮರ್ಥ್ಯವೇ ಅಷ್ಟೆಂದು ತಿಳಿಯಲಾಗುತ್ತದೆ. ಆ ಅಕ್ಷಾಂಶಗಳಲ್ಲಿ ಯಾವುದೇ ರಸ್ತೆಗಳಿಲ್ಲ.

ಹೋಲಿಸಬಹುದಾದ ಸೇವೆಗಳು

  • ಬಿಂಗ್ ನಕ್ಷೆಗಳು – ಮೈಕ್ರೊಸಾಫ್ಟ್‌ನ ನಕ್ಷೆ ರೂಪಿಸುವ ಸೇವೆಯಾಗಿದ್ದು ಇದು ರಸ್ತೆ ನಕ್ಷೆಗಳು ಮತ್ತು ವಿಮಾನ/ಉಪಗ್ರಹ ಚಿತ್ರಣವನ್ನು ಒದಗಿಸುತ್ತದೆ
    • ಟೆರ್ರಾಸರ್ವರ್-USA – ಈಗಿನ MSRMaps.Com ಸಾರ್ವಜನಿಕ ಡೊಮೇನ್ (ಐದು ವರ್ಷಗಳಿಗಿಂತ ಹಳೆಯದು) ಉಪಗ್ರಹ ಚಿತ್ರಣ ಮತ್ತು ಮೈಕ್ರೊಸಾಫ್ಟ್ ಸರ್ವರ್‌ಗಳ ಮೂಲಕ USGS ಸ್ಥಳಾಕೃತಿಯ ನಕ್ಷೆಗಳು
    • ಸಾಹಸೋದ್ಯಮಕ್ಕಾಗಿ ಬಿಂಗ್ ನಕ್ಷೆಗಳು - ಹಿಂದಿನ ಮೈಕ್ರೊಸಾಪ್ಟ್ ವರ್ಚುವಲ್ ಅರ್ಥ್
  • ಜಿಯೊಪೋರ್ಟೇಲ್ – ಫ್ರೆಂಚ್ ಪ್ರಾಂತಗಳ ವಿಸ್ತೃತ ವಿಮಾನದ-ಚಿತ್ರಗಳನ್ನು ಒದಗಿಸುವ ಒಂದು ಫ್ರೆಂಚ್ ಪ್ರತಿಸ್ಪರ್ಧಿ
  • ಮ್ಯಾಪ್‌ಕ್ವೆಸ್ಟ್
  • Multimap.com – ಮೈಕ್ರೊಸಾಫ್ಟ್‌ ಪಡೆದ ಇದು ಈಗ ಬಿಂಗ್ ನಕ್ಷೆಗಳೊಂದಿಗೆ ಸೇರಿಕೊಂಡಿದೆ.
  • ಓಪನ್‌ಸ್ಟ್ರೀಟ್‌ಮ್ಯಾಪ್ – ಪ್ರಭುತ್ವವಿಲ್ಲದ, ಸಂಪಾದಿಸಬಹುದಾದ ಪ್ರಪಂಚ-ನಕ್ಷೆ
  • ಓವಿ ನಕ್ಷೆಗಳು – ನೋಕಿಯಾ ಒದಗಿಸುವ ಸೇವೆಯಾಗಿದ್ದು ಇದು ಬಳಕೆದಾರರ ಮೊಬೈಲ್ ಫೋನ್‌ಗಳೊಂದಿಗೆ ಏಕಕಾಲಿಕವಾಗಿಸಲು ಅವಕಾಶ ಮಾಡಿಕೊಡುತ್ತದೆ.
  • ಪಿಕ್ಟೊಮೆಟ್ರಿ – ಪಕ್ಷಿನೋಟ-ಚಿತ್ರವನ್ನು ಒದಗಿಸುವ ಒಂದು ಜಾಲತಾಣ, ಇದನ್ನು ಎಲ್ಲಾ ನಕ್ಷೆ-ರೂಪಿಸುವ ಪ್ರೋಗ್ರ್ಯಾಂಗಳೊಂದಿಗೆ ಒಂದಾಗಿಸಬಹುದು.
  • ಸೀಟ್ ಪ್ಯಾಗಿನ್ ಗೈಲ್ಲೆ – ಇದೊಂದು ಇಟಲಿಯ ಪ್ರತಿಸ್ಪರ್ಧಿಯಾಗಿದ್ದು, ಇಟಲಿಯ ಪ್ರಾಂತಗಳ ವಿವರಾತ್ಮಕ ಉಪಗ್ರಹ-ಚಿತ್ರಗಳನ್ನು ಮತ್ತು ರೋಮ್‌ನ ಪ್ರಯಾಣಿಸಬಹುದಾದ ರಸ್ತೆ-ಮಟ್ಟದ ದೃಶ್ಯಾವಳಿಗಳನ್ನು ಒದಗಿಸುತ್ತದೆ (ಸ್ಟ್ರೀಟ್ ವ್ಯೂನಂತೆ)
  • ಟೆರ್ರಾಲಿಂಕ್ ಇಂಟರ್‌ನ್ಯಾಷನಲ್
  • ವೈಯಾಮೈಕೆಲಿನ್
  • ಯಾಹೂ! ಮ್ಯಾಪ್ಸ್
  • ABಮ್ಯಾಪ್ಸ್

ಇವನ್ನೂ ಗಮನಿಸಿ

  • ಭುವನ್
  • ಜಾಲ ನಕ್ಷೆ ಸೇವೆಗಳ ಹೋಲಿಕೆ
  • ಗೂಗಲ್ ಮ್ಯಾಪ್ಸ್ ರೋಡ್ ಟ್ರಿಪ್ (ಲೈವ್-ಸ್ಟ್ರೀಮಿಂಗ್ ಡಾಕ್ಯುಮೆಂಟರಿ)
  • ಹಿಸ್ಟರಿಪಿನ್
  • lmx ಫೈಲ್‌ಪ್ರಕಾರ
  • ಪ್ಲೇಸೋಪೀಡಿಯಾ
  • ಪ್ಲೇಸ್‌ಸ್ಪಾಟಿಂಗ್
  • ಹಡುಗು ತಾಣದ ನಕ್ಷೆ-ರೂಪಿಸುವ ಸೇವೆ
  • ವಿಕಿಮ್ಯಾಪಿಯಾ, ಗೂಗಲ್ ನಕ್ಷೆಗಳು ಮತ್ತು ವಿಕಿಯನ್ನೊಳಗೊಂಡ ಒಂದು ಮಾಶಪ್, ಇದು "ಸಂಪೂರ್ಣ ಗ್ರಹ ಭೂಮಿಯನ್ನು ವಿವರಿಸುವ" ಗುರಿಯನ್ನು ಹೊಂದಿದೆ.
  • ವಿಕಿಪೀಡಿಯಾವಿಜನ್
  • ಒಪನ್ ಸ್ಟ್ರೀಟ್ ಮ್ಯಾಪ್

ಉಲ್ಲೇಖಗಳು


ಬಾಹ್ಯ ಕೊಂಡಿಗಳು