ಡಾಯ್ಚ ಬ್ಯಾಂಕ್

ಡಾಯ್ಚ ಬ್ಯಾಂಕ್ ಎಜಿ (ವಾಸ್ತವವಾಗಿ "ಜರ್ಮನ್ ಬ್ಯಾಂಕ್"; [ˈdɔʏtʃə ˈbaŋk]FWB: DBK, NYSE: DB) ಎನ್ನುವುದು ಒಂದು ಅಂತರಾಷ್ಟ್ರೀಯ ಜಾಗತಿಕ ಬ್ಯಾಂಕ್ ಆಗಿದ್ದು, ಇದರ ಕೇಂದ್ರ ಕಚೇರಿಯು ಜರ್ಮನಿಯ ಫ್ರಾಂಕ್‌ಫರ್ಟ್ನಲ್ಲಿದೆ. ಬ್ಯಾಂಕ್ ೭೨ ರಾಷ್ಟ್ರಗಳಲ್ಲಿ ೮೦,೦೦೦ ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ, ಮತ್ತು, ಅಮೇರಿಕಾ, ಏಷ್ಯಾ ಫೆಸಿಫಿಕ್ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಬೃಹತ್ ಪ್ರಮಾಣದ ಉಪಸ್ಥಿತಿಯನ್ನು ಹೊಂದಿದೆ.

Deutsche Bank AG
ಸಂಸ್ಥೆಯ ಪ್ರಕಾರAktiengesellschaft (FWB: DBK, NYSE: DB)
ಸ್ಥಾಪನೆ1870
ಮುಖ್ಯ ಕಾರ್ಯಾಲಯFrankfurt am Main, Germany
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Josef Ackermann (CEO and chairman of the management board), Clemens Börsig (Chairman of the supervisory board)
ಉದ್ಯಮFinancial services
ಉತ್ಪನ್ನInvestment, commercial, retail and private banking, asset management
ಆದಾಯ€27.95 billion (2009)[೧]
ನಿವ್ವಳ ಆದಾಯ€4.973 billion (2009)[೧]
ಒಟ್ಟು ಆಸ್ತಿ€1.501 trillion (2009)[೧]
ಒಟ್ಟು ಪಾಲು ಬಂಡವಾಳ€36.6 billion (2009)[೧]
ಉದ್ಯೋಗಿಗಳು81,929 (FTE, 2010)
ಜಾಲತಾಣDB.com
ಜರ್ಮನಿಯ ಫ್ರಾಂಕ್‌ಫರ್ಟ್‌ನ ಬ್ಯಾಂಕಿಂಗ್ ಡಿಸ್ಟ್ರಿಕ್ಟ್‌ನಲ್ಲಿ ಡಾಯ್ಚ ಬ್ಯಾಂಕ್ ಅವಳಿ ಗೋಪುರಗಳು, ಡಾಯ್ಚ ಬ್ಯಾಂಕಿನ ಕೇಂದ್ರ ಕಚೇರಿಗಳು.

ನ್ಯೂಯಾರ್ಕ್, ಲಂಡನ್, ಫ್ರಾಂಕ್‌ಫರ್ಟ್, ಪ್ಯಾರಿಸ್, ಮಾಸ್ಕೋ, ಆಮ್‌ಸ್ಟರ್‌ಡ್ಯಾಮ್, ಟೊರಾಂಟೋ, ಸಾವೋ ಪೋಲೋ, ಸಿಂಗಾಪುರ, ಹಾಂಗ್ ಕಾಂಗ್, ಟೋಕಿಯೋ ಮತ್ತು ಸಿಡ್ನಿ ಸೇರಿದಂತೆ ಪ್ರಮುಖವಾದ ಆರ್ಥಿಕ ಕೇಂದ್ರಗಳಲ್ಲಿ ಡಾಯ್ಚ ಬ್ಯಾಂಕ್ ಕಚೇರಿಗಳನ್ನು ಹೊಂದಿದೆ. ಹೆಚ್ಚಿನದಾಗಿ, ಮಧ್ಯ ಪೂರ್ವ, ಲ್ಯಾಟಿನ್ ಅಮೇರಿಕ, ಮಧ್ಯ ಮತ್ತು ಪೂರ್ವ ಯುರೋಪ್ ಹಾಗೂ ಏಷ್ಯಾ ಫೆಸಿಫಿಕ್ನಂತಹ ವಿಸ್ತಾರವಾಗುತ್ತಿರುವ ಮಾರುಕಟ್ಟೆಗಳಲ್ಲಿ ಬ್ಯಾಂಕ್ ಹೂಡಿಕೆಯನ್ನು ಮಾಡುತ್ತಿದೆ.

ಖಾಸಗಿ ಮತ್ತು ವ್ಯವಹಾರಿಕ ಗ್ರಾಹಕರ ಜೊತೆಗೆ ಕಾರ್ಪೋರೇಟ್ ಮತ್ತು ಸಾಂಸ್ಥಿಕ ಗ್ರಾಹಕರಿಗೆ ಆರ್ಥಿಕ ಉತ್ಪನ್ನಗಳು ಮತ್ತು ಸೇವೆಗಳನ್ನು ಬ್ಯಾಂಕ್ ಒದಗಿಸುತ್ತದೆ. ಬ್ಯಾಂಕು ಒದಗಿಸುವ ಸೇವೆಗಳು, ಮಾರಾಟ, ವ್ಯಾಪಾರ ಮತ್ತು ಡೆಬಿಟ್ ಮತ್ತು ಈಕ್ವಿಟಿಯ ಪ್ರಾರಂಭ ಅಲ್ಲದೇ; ವಿಲೀನಗಳು ಮತ್ತು ಖರೀದಿ (ಎಮ್&ಎ); ಅಪಾಯ ನಿರ್ವಹಣೆ ಉತ್ಪನ್ನಗಳಾದ ವ್ಯುತ್ಪನ್ನಗಳು, ಕಾರ್ಪೋರೇಟ್ ಹಣಕಾಸು, ಆರ್ಥಿಕ ನಿರ್ವಹಣೆ, ರಿಟೇಲ್ ಬ್ಯಾಂಕಿಂಗ್, ಫಂಡ್ ನಿರ್ವಹಣೆ, ಮತ್ತು ವಹಿವಾಟು ಬ್ಯಾಂಕಿಂಗ್ ಇವುಗಳಗನ್ನು ಒಳಗೊಂಡಿದೆ.[೨]

ಜೋಸೆಫ್ ಆಕರ್‌ಮ್ಯಾನ್ ಅವರು ೨೦೦೨ ರಿಂದ ಡಾಯ್ಚ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಮೂಹ ಎಕ್ಸಿಕ್ಯೂಟಿವ್ ಕಮಿಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಅಂದರೆ ೨೦೧೩ ರವರೆಗೆ ಡಾಯ್ಚ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂದುವರಿಯಲು ಅವರು ೨೦೦೯ ರ ಕೊನೆಯಲ್ಲಿ ಸಮ್ಮತಿಸಿದರು.[೩] ಫ್ರಾಂಕ್‌ಫರ್ಟ್ (ಎಫ್‌ಡಬ್ಲ್ಯೂಬಿ) ಮತ್ತು ನ್ಯೂಯಾರ್ಕ್ ಶೇರು ವಿನಿಮಯ ಕೇಂದ್ರ (ಎನ್‌ವೈಎಸ್‌ಇ) ಎರಡರಲ್ಲೂ ಡಾಯ್ಚ ಬ್ಯಾಂಕ್ ಪಟ್ಟಿ ಮಾಡಲ್ಪಟ್ಟಿದೆ.

ಇತಿಹಾಸ

ಡಾಯ್ಚ ಬ್ಯಾಂಕ್, ಸಿಡ್ನಿ

1870-1919

ಬರ್ಲಿನ್‌ನಲ್ಲಿ ವಿದೇಶೀ ವ್ಯಾಪಾರಕ್ಕಾಗಿ ತಜ್ಞ ಬ್ಯಾಂಕ್ ಆಗಿ ಡಾಯ್ಚ ಬ್ಯಾಂಕ್ ಅನ್ನು ೧೯೭೦ ರಲ್ಲಿ ಜರ್ಮನಿಯಲ್ಲಿ ಸ್ಥಾಪಿಸಲಾಯಿತು[೪]. ಬ್ಯಾಂಕಿನ ಕಾನೂನನ್ನು ೧೮೭೦ ರ ಜನವರಿ ೨೨ ರಂದು ಅಂಗೀಕರಿಸಲಾಯಿತು ಮತ್ತು ೧೮೭೦ ರ ಮಾರ್ಚ್ ೧೦ ರಂದು ಪ್ರಶ್ಶಿಯನ್ ಸರ್ಕಾರವು ಅದಕ್ಕೆ ಬ್ಯಾಂಕಿಂಗ್ ಪರವಾನಗಿಯನ್ನು ನೀಡಿತು.ವಿದೇಶೀ ವ್ಯವಹಾರದ ಬಗ್ಗೆ ಕಾನೂನು ಬಲವಾದ ಒತ್ತು ನೀಡಿದೆ: "ಬ್ಯಾಂಕಿನ ಉದ್ದೇಶವು ಎಲ್ಲಾ ಪ್ರಕಾರದ ಬ್ಯಾಂಕಿಂಗ್ ವ್ಯವಹಾರಗಳನ್ನು ನಿರ್ವಹಿಸುವುದಾಗಿದೆ ಮತ್ತು ನಿರ್ದಿಷ್ಟವಾಗಿ ಜರ್ಮನಿ, ಇತರ ಯುರೋಪಿಯನ್ ದೇಶಗಳು ಮತ್ತು ವಿದೇಶಿ ಮಾರುಕಟ್ಟೆಗಳ ನಡುವೆ ವ್ಯಾಪಾರ ಸಂಬಂಧಗಳಿಗೆ ಉತ್ತೇಜನ ನೀಡುವುದು ಮತ್ತು ಸೌಕರ್ಯ ಕಲ್ಪಿಸುವುದಾಗಿದೆ."[೫]

ಬ್ಯಾಂಕಿನ ಮೊದಲ ದೇಶೀಯ ಶಾಖೆಗಳನ್ನು ೧೮೭೧ ಮತ್ತು ೧೮೭೨ ರಲ್ಲಿ ಉದ್ಭಾಟಿಸಲಾಯಿತು, ಮತ್ತು ಅವುಗಳು ಬ್ರೆಮೆನ್[೬] ಮತ್ತು ಹ್ಯಾಂಬರ್ಗ್[೭] ನಲ್ಲಿ ಪ್ರಾರಂಭಗೊಂಡವು. ತದನಂತರ ಕೆಲವೇ ದಿನಗಳಲ್ಲಿ ಅದರ ಮೊದಲ ವಿದೇಶಿ ಶಾಖೆಗಳು, ಶಾಂಘೈ[೮] (1872) ಮತ್ತು ಲಂಡನ್[೯] (1873) ನಲ್ಲಿ ಪ್ರಾರಂಭಗೊಂಡವು. ಈಗಾಗಲೇ, ಈ ಪ್ರಾರಂಭಿಕ ಹಂತದಲ್ಲೇ, ಉತ್ತರ ಮತ್ತು ದಕ್ಷಿಣ ಅಮೇರಿಕ, ಏಷ್ಯಾ ಮತ್ತು ಟರ್ಕಿಗಳಲ್ಲಿ ಹೂಡಿಕೆಗಳನ್ನು ಮಾಡುವ ಮೂಲಕ ಬ್ಯಾಂಕ್ ದೇಶದಿಂದಾಚೆ ಇನ್ನಷ್ಟು ಮುಂದುವರಿಯಲು ಎದುರು ನೋಡುತ್ತಿತ್ತು.

ಬ್ಯಾಂಕಿನ ಮೊದಲ ವರ್ಷಗಳಲ್ಲಿನ ಪ್ರಮುಖವಾದ ಯೋಜನೆಗಳೆಂದರೆ, ಅಮೇರಿಕದಲ್ಲಿನ ಉತ್ತರ ಫೆಸಿಫಿಕ್ ರೇಲ್ವೆ ರಸ್ತೆ[೧೦] ಮತ್ತು ಬಾಗ್ದಾದ್ ರೇಲ್ವೆ ಸೇರಿದೆ[೧೧] (1888). ಜರ್ಮನಿಯಲ್ಲಿ, ಸ್ಟೀಲ್ ಕಂಪನಿಯಾದ ಕ್ರಪ್ ನ ಬಾಂಡ್ ನೀಡುವಿಕೆಗಳ ಆರ್ಥಿಕ ನೆರವು ನೀಡುವಲ್ಲಿ ಬ್ಯಾಂಕ್ ಪ್ರಮುಖ ಪಾತ್ರ ವಹಿಸಿತ್ತು (1879) ಮತ್ತು ಬರ್ಲಿನ್ ಶೇರು ಮಾರುಕಟ್ಟೆಗೆ ರಾಸಾಯನಿಕ ಕಂಪನಿಯಾದ ಬೇಯರ್ ಅನ್ನು ಪರಿಚಯ ಮಾಡಿಸಿತು.

ಡಾಯ್ಚ ಬ್ಯಾಂಕಿನ ಮೊದಲ ದಶಕಗಳು ತೀವ್ರ ವಿಸ್ತರಣೆಗಳ ಕಾಲಾವಧಿಯಾಗಿತ್ತು. ನೀಡುವಿಕೆ ವ್ಯವಹಾರಗಳು ೧೮೮೦ ರಲ್ಲಿ ಪ್ರಮುಖವಾಗಿ ಬೆಳೆಯಲು ಪ್ರಾರಂಭಿಸಿತು ಮತ್ತು ೧೮೯೦ ರಲ್ಲಿ ಅದು ನಿಜವಾಗಿಯೂ ಪ್ರವರ್ಧಮಾನಕ್ಕೆ ಬಂದಿತು. ಜರ್ಮನಿಯ ಎಲೆಕ್ಟ್ರಿಕಲ್-ಎಂಜಿನಿಯರಿಂಗ್ ಉದ್ಯಮದ ಅಭಿವೃದ್ಧಿಯಲ್ಲಿ ಬ್ಯಾಂಕ್ ಪ್ರಮುಖವಾದ ಪಾತ್ರ ವಹಿಸಿತು, ಅಲ್ಲದೇ ಅದು ಕಬ್ಬಿಣ ಮತ್ತು ಸ್ಟೀಲ್ ಉದ್ಯಮದಲ್ಲೂ ಬಲವಾಗಿ ಕಾಲೂರಿತು. ಜರ್ಮನಿಯಲ್ಲಿನ ಬಲವಾದ ತಳಹದಿಯು ವಿದೇಶದಲ್ಲಿ ವ್ಯವಹಾರದ ಆರ್ಥಿಕ ಹೂಡಿಕೆಗೆ ಅನುಮತಿಸಿತು, ಕೆಲವು ಸಂದರ್ಭಗಳಲ್ಲಿ ಹಲವು ವರ್ಷಗಳವರೆಗೆ ಅದರಲ್ಲಿ ನೆಲೆ ನಿಲ್ಲುವಂತೆ ಮಾಡಿತು, ಇದಕ್ಕೆ ಉತ್ತಮವಾದ ಉದಾಹರಣೆಯೆಂದರೆ ಬಾಗ್ದಾದ್ ರೇಲ್ವೆಯಾಗಿದೆ.

೧೮೯೦ ರ ಎರಡನೆಯ ಅವಧಿಯು ಡಾಯ್ಚ ಬ್ಯಾಂಕಿನ ವಿಸ್ತರಣೆಯ ಹೊಸ ಶಕೆಯ ಪ್ರಾರಂಭವನ್ನು ಕಂಡಿತು. ಬೃಹತ್ ಪ್ರಾಂತೀಯ ಬ್ಯಾಂಕುಗಳೊಂದಿಗೆ ಬ್ಯಾಂಕು ಮೈತ್ರಿಯನ್ನು ಸಾಧಿಸುವ ಮೂಲಕ ಜರ್ಮನಿಯ ಮುಖ್ಯ ಔದ್ಯೋಗಿಕ ಪ್ರಾಂತ್ಯಗಳಿಗೆ ತನ್ನ ಪ್ರವೇಶವನ್ನು ಮಾಡಿತು. ಜರ್ಮನಿಯ ಬ್ಯಾಂಕಿಂಗ್ ಉದ್ಯಮದಲ್ಲಿ ಆಗ ಜಂಟಿ ಹೂಡುವಿಕೆಗಳು ಕೇಂದ್ರೀಕರಣದ ಲಕ್ಷಣವಾಗಿ ಪ್ರಗತಿಯಲ್ಲಿತ್ತು. ಡಾಯ್ಚ ಬ್ಯಾಂಕ್‌ಗೆ, ೧೮೮೬ ರಿಂದ ಫ್ರಾಂಕ್‌ಫರ್ಟ್ ಶಾಖೆ[೧೨] ಮತ್ತು ೧೮೯೨ ರಿಂದ ಮ್ಯೂನಿಚ್ ಶಾಖೆಯಂತಹ ಅದರ ಸ್ವಂತ ದೇಶೀಯ ಶಾಖೆಗಳು ಆ ಸಮಯದಲ್ಲಿ ಬಹು ದುರ್ಲಭವಾಗಿದ್ದವು;, ಆದರೆ ಡ್ರೆಸ್ಡನ್ ಮತ್ತು ಲೀಪಿಗ್‌ನಲ್ಲಿ [೧೩] ೧೯೦೧ ರಲ್ಲಿ ಇನ್ನಷ್ಟು ಶಾಖೆಗಳನ್ನು ಸ್ಥಾಪಿಸಲಾಯಿತು.

ಹೆಚ್ಚಿನದಾಗಿ, ವಿದೇಶೀ ವ್ಯವಹಾರಗಳ ಉತ್ತೇಜನಕ್ಕಾಗಿ ತಜ್ಞ ಸಂಸ್ಥೆಗಳ ಮೌಲ್ಯವನ್ನು ಬ್ಯಾಂಕ್ ವೇಗವಾಗಿ ಗ್ರಹಿಸಿತು. ವಿದೇಶೀ ಸಚಿವಾಲಯದ ಮೃದುವಾದ ಒತ್ತಡವು 1886 ರಲ್ಲಿ ಡಾಯ್ಚೆ ಯೂಬರ್‌ಸೀಚ್ ಬ್ಯಾಂಕ್[೧೪] ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿತು ಮತ್ತು ಮೂರು ವರ್ಷಗಳ ನಂತರ ಹೊಸತಾಗಿ ಸ್ಥಾಪಿತವಾದ ಡಾಯ್ಚೆ-ಏಷಿಯಾಟಿಚ್ ಬ್ಯಾಂಕ್[೧೫] ನಲ್ಲಿ ಅಧಿಕಾರ ಪಡೆಯಲಾಯಿತು, ಆದರೆ ಈ ಕಂಪನಿಗಳ ಅಸ್ತಿತ್ವವು ಸುಭದ್ರವಾದ ವಾಣಿಜ್ಯ ಅರಿವನ್ನು ಮೂಡಿಸಿತ್ತು ಎಂಬುದನ್ನು ಆ ಕಂಪನಿಗಳ ಯಶಸ್ಸು ತೋರಿಸಿತು.

1914 ರಲ್ಲಿ ಏಕಾಏಕೀ "ಫ್ರಾಂಕ್‌ಫರ್ಟ್ ಜೀಟಂಗ್" ತನ್ನ ಓದುಗರಿಗೆ ಡಾಯ್ಚ ಬ್ಯಾಂಕ್ " ವಿಶ್ವದ ಅತೀ ದೊಡ್ಡ ಬ್ಯಾಂಕ್" ಎಂದು ಫ್ರಾಂಕ್‌ಫರ್ಟ್ ಜೀಟಂಗ್, ಎರ್ಸ್ಟೆಸ್ ಮೋರ್ಗೆನ್‌ಬ್ಲಾಟ್, 5 ನೇ ಮಾರ್ಚ್ 1914 ರಂದು ತಿಳಿಸಿತು. ಈ ಹಕ್ಕು ಪ್ರಮುಖ ವಿಷಯವಾಗಿದ್ದಲ್ಲದೇ, ಅದೇ ಸಮಯದಲ್ಲಿ ಶಕೆಯ ಅಂತ್ಯಕ್ಕೆ ಕಾರಣವಾಯಿತು. ವಿಶ್ವ ಯುದ್ಧ I ರ ಸಮಯದಲ್ಲಿ, ಹಲವು ದೃಢ ಸಂಕಲ್ಪದ ಕಂಪನಿಗಳು ಯಶಸ್ಸು ಪಡೆಯಲು ಕಾರಣೀಭೂತವಾದ ಆದರ್ಶದ ಚೈತನ್ಯದ ಮೂಲವು ಕ್ರಮೇಣ ಬತ್ತಿ ಹೋಯಿತು.

1919-1933

ಯುದ್ಧದ ನಂತರದ ತಕ್ಷಣ ಕಾಲಾವಧಿಯು ದಿವಾಳಿಯ ಸಮಯವಾಗಿತ್ತು. ಈಗಾಗಲೇ ತನ್ನ ಹಲವು ವಿದೇಶಿ ಆಸ್ತಿಗಳನ್ನು ಕಳೆದುಕೊಂಡಿದ್ದ ಡಾಯ್ಚ ಬ್ಯಾಂಕ್, ಇತರ ಬಂಡವಾಳ ಪತ್ರಗಳನ್ನು ಮಾರಾಟ ಮಾಡುವ ನಿರ್ಬಂಧಕ್ಕೆ ಒಳಗಾಯಿತು. ಇಲ್ಲಿಯವರೆಗೆ ಸಾಧಿಸಿದ್ದ ಶಕ್ತಿ ಸಾಮರ್ಥ್ಯವೆಲ್ಲಾ ತೀರಕ್ಕೆ ಬಂದು ನಿಂತಿತು. ಆದರೆ ವ್ಯವಹಾರವೂ ಕೂಡ ಇತ್ತು, ಅವುಗಳಲ್ಲಿ ಕೆಲವು ಮುಂದಿನ ದೀರ್ಘಾವದಿಯಲ್ಲಿ ಪರಿಣಾಮ ಬೀರುವಂತವುಗಳಾಗಿತ್ತು. ಚಿತ್ರ ನಿರ್ಮಾಣ ಕಂಪನಿಯಾದ ಯುಎಫ್‌ಎ ಸ್ಥಾಪನೆಯಲ್ಲಿ ಮತ್ತು ಡೇಮರ್ ಮತ್ತು ಬೆಂಜ್‌ನ ವಿಲೀನದಲ್ಲಿ ಬ್ಯಾಂಕ್ ಪ್ರಮುಖ ಪಾತ್ರ ನಿರ್ವಹಿಸಿತು.

1929 ರಲ್ಲಿ ಬ್ಯಾಂಕ್ ಇತರ ಸ್ಥಳೀಯ ಬ್ಯಾಂಕುಗಳೊಂದಿಗೆ ವಿಲೀನ ಹೊಂದಿ ಡಾಯ್ಚ ಬ್ಯಾಂಕ್ ಮತ್ತು ಡಿಸ್ಕೊಂಟೋಗೆಸೆಲ್‌ಶಾಫ್ಟ್ ರಚನೆಯಾಯಿತು, ಆ ಸಮಯದಲ್ಲಿ ಅದು ಜರ್ಮನ್ ಬ್ಯಾಂಕಿಂಗ್ ಇತಿಹಾಸದಲ್ಲಿ ಅತೀ ದೊಡ್ಡದಾದ ವಿಲೀನವಾಗಿತ್ತು. ಹೆಚ್ಚುತ್ತಿರುವ ವೆಚ್ಚಗಳು ವಿಲೀನಕ್ಕೆ ಮುಖ್ಯ ಕಾರಣವಾಗಿತ್ತು. ೧೯೨೦ ರಲ್ಲಿ ಉದ್ಯಮದಾದ್ಯಂತ ವಿಕೇಂದ್ರೀಕರಣದತ್ತ ಒಲವು ಮತ್ತೊಂದು ಕಾರಣವಾಗಿತ್ತು. ವಿಲೀನವು ಹೆಚ್ಚುತ್ತಿರುವ ವಿಶ್ವದ ಆರ್ಥಿಕ ಮತ್ತು ಬ್ಯಾಂಕಿಂಗ್ ಬಿಕ್ಕಟ್ಟನ್ನು ಪ್ರತಿರೋಧಿಸಲು ಸಹಾಯ ಮಾಡುವ ಸೂಕ್ತ ಸಮಯದಲ್ಲೇ ನಡೆದಿತ್ತು. ೧೯೩೭ ರಲ್ಲಿ, ಕಂಪನಿಯ ಹೆಸರು ಡಾಯ್ಚ ಬ್ಯಾಂಕ್‌ ಎನ್ನುವುದಕ್ಕೆ ಮತ್ತೆ ಬದಲಿಸಿತು.

ರಾಜಕೀಯ ಪರಿಣಾಮದ ರೂಪದಲ್ಲಿ ಬಿಕ್ಕಟ್ಟು ಶತಮಾನದ ಅತ್ಯಂತ ವಿಪತ್ತುಕಾರಕ ಆರ್ಥಿಕ ಘಟನೆಯಾಗಿತ್ತು. ಬ್ಯಾಂಕುಗಳನ್ನು ದುರ್ಬಲಗೊಳಿಸಿದ ಆಸ್ತಿಬಾಬ್ತುಗಳ ಕೊರತೆಯ ಜೊತೆಗೆ ಅಲ್ಪಾವಧಿಯ ವಿದೇಶೀ ಸಾಲ ಮತ್ತು ಸಾಲಗಾರರು ಸಾಲವನ್ನು ಇನ್ನು ಮುಂದೆ ಪಾವತಿಸಲಾದ ಸ್ಥಿತಿಯೊಂದಿಗೆ ಪರಿಸ್ಥಿತಿಯು ಇನ್ನಷ್ಟು ಬಿಗಡಾಯಿಸಿದರೆ, ರಾಜ್ಯದ ಹಟಮಾರಿ ಧೋರಣೆಯು ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು. ಜರ್ಮನ್ ಬ್ಯಾಂಕುಗಳಿಗೆ, ಉದ್ಯಮದಲ್ಲಿನ ಬಿಕ್ಕಟ್ಟು ಪರ್ವಕಾಲವಾಗಿತ್ತು. ಪರಿಸ್ಥಿತಿಗಳಿಗೆ ಹಿಂತಿರುಗಿದ್ದನ್ನು ಮೊದಲನೇ ವಿಶ್ವ ಯುದ್ಧಕ್ಕಿಂತ ಮೊದಲಿನ "ಸ್ವರ್ಣ ಯುಗ" ದ ಸ್ಮರಣೆಯೆಂದು ಕೆಲವು ವಿಧದಲ್ಲಿ ಭಾವಿಸಿದ್ದುದನ್ನು ಹಲವು ವರ್ಷಗಳವರೆಗೆ ತಳ್ಳಿಹಾಕಲಾಯಿತು.

1933-1945

ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಬಂದ ನಂತರ, ಮೂರನೇ ಜರ್ಮನ್ ಸಾಮ್ರಾಜ್ಯದ ಆಜ್ಞೆಯ ಅನುಸಾರ, ಡಾಯ್ಜ ಬ್ಯಾಂಕ್ ತನ್ನ ಮೂರು ಜೂಯಿಷ್ ಆಡಳಿತ ಮಂಡಳಿ ಸದಸ್ಯರನ್ನು 1933 ರಲ್ಲಿ ಅಮಾನತುಗೊಳಿಸಿತು. ಮುಂದಿನ ವರ್ಷಗಳಲ್ಲಿ ಜ್ಯೂಯಿಷ್-ಮಾಲೀಕತ್ವದ ವ್ಯವಹಾರಗಳ ಆರ್ಯನೀಕರಣಗಳಲ್ಲಿ ಡಾಯ್ಚ ಬ್ಯಾಂಕ್ ಪಾಲ್ಗೊಂಡಿತು: ಅದರ ಸ್ವಂತ ಇತಿಹಾಸಕಾರರ ಪ್ರಕಾರ, ನವೆಂಬರ್ 1938 ರೊಳಗೆ ಬ್ಯಾಂಕ್ ಅಂತಹ 368 ಮುಟ್ಟುಗೋಲು ಹಾಕಿಕೊಳ್ಳುವಿಕೆಯಲ್ಲಿ ಪಾಲ್ಗೊಂಡಿತು.[೧೬] ಯುದ್ಧದ ಸಮಯದಲ್ಲಿ, ಪೂರ್ವ ಯುರೋಪ್ ಆಕ್ರಮಣದ ಸಂದರ್ಭದಲ್ಲಿ ಜರ್ಮನಿಯ ವಶಕ್ಕೆ ಬಂದ ಇತರ ಬ್ಯಾಂಕುಗಳನ್ನು ಡಾಯ್ಚ ಬ್ಯಾಂಕ್ ಸಂಯೋಜಿತಗೊಳಿಸಿತು. ಡಾಯ್ಚ ಬ್ಯಾಂಕ್ ಸ್ಟಾಪೋಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಿತು ಮತ್ತು ಆಸ್ವಿಟ್ಚ್ ಕ್ಯಾಂಪ್ ಮತ್ತು ಹತ್ತಿರದ ಐಜಿ ಫರ್ಬೇನ್ ಸೌಲಭ್ಯಗಳನ್ನು ನಿರ್ಮಿಸಲು ಆರ್ಥಿಕ ಸಾಲ ನೀಡಿತು. ಆಸ್ವಿಟ್ಚ್‌ನಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಫೆಬ್ರವರಿ ೧೯೯೯ ರಲ್ಲಿ ಡಾಯ್ಚ ಬ್ಯಾಂಕ್ ಬಹಿರಂಗಪಡಿಸಿತು.[೧೭] ಡಿಸೆಂಬರ್ 1999 ರಲ್ಲಿ ಡಾಯ್ಚವು ಇತರ ಪ್ರಮುಖ ಜರ್ಮನ್ ಕಂಪನಿಗಳೊಂದಿಗೆ ಹೋಲೋಕಾಸ್ಟ್ ಬದುಕುಳಿದವರು ಹೂಡಿದ ಮೊಕದ್ದಮೆಗೆ ಸಂಬಂಧಿಸಿದಂತೆ $5.2 ಬಿಲಿಯನ್ ಪರಿಹಾರದ ಹಣವನ್ನು ವಿತರಿಸಿತು.[೧೮][೧೯] ಎರಡನೆಯ ವಿಶ್ವ ಯುದ್ಧದ ಸಂದರ್ಭದಲ್ಲಿನ ಡಾಯ್ಚ ಬ್ಯಾಂಕ್‌ನ ಇತಿಹಾಸವನ್ನು ಬ್ಯಾಂಕು ನೇಮಿಸಿದ ಸ್ವತಂತ್ರ್ಯ ಇತಿಹಾಸಕಾರರು ದಾಖಲಿಸಿದ್ದಾರೆ.[೧೬]

ಎರಡನೆಯ ವಿಶ್ವ ಯುದ್ಧದ ಸಂದರ್ಭದಲ್ಲಿ, ಡಾಯ್ಚ ಬ್ಯಾಂಕ್ ಪ್ರೇಗ್ನಲ್ಲಿನ ಬೋಹೆಮಿಯನ್ ಯೂನಿಯನ್ ಬ್ಯಾಂಕ್ ಅನ್ನು ಪೋರ್ಟರಿಕಾ ಮತ್ತು ಸ್ಲೊವೇಕಿಯಾದಲ್ಲಿ, ಬ್ಯಾಂಕ್‌ವೆರೀನ್ ಅನ್ನು ಯುಗೋಸ್ಲಾವಿಯಾ (ಅದನ್ನು ಇದೀಗ ಎರಡು ಆರ್ಥಿಕ ಕಾರ್ಪೋರೇಷನ್‌ಗಳಾಗಿ, ಒಂದನ್ನು ಸರ್ಬಿಯಾದಲ್ಲಿ ಹಾಗೂ ಮತ್ತೊಂದನ್ನು ಕ್ರೊವೇಶಿಯಾದಲ್ಲಿ ವಿಭಜಿಸಲಾಗಿದೆ), ಆಲ್ಬರ್ಟ್ ಡೆ ಬಾರ್ರಿ ಬ್ಯಾಂಕ್ ಅನ್ನು ಆಮ್‌ಸ್ಟರ್‌ಡ್ಯಾಮ್ನಲ್ಲಿ, ನ್ಯಾಷನಲ್ ಬ್ಯಾಂಕ್ ಆಫ್ ಗ್ರೀಸ್ ಅನ್ನು ಅಥೆನ್ಸ್ನಲ್ಲಿ, ಓಸ್ಟೆರೀಚಿಚ್ ಕ್ರೆಡಿಟಾನ್‌ಸ್ಟಾಲ್ಟ್-ಬ್ಯಾಂಕ್‌ವೆರೀನ್ ಅನ್ನು ಆಸ್ಟ್ರಿಯಾ ಮತ್ತು ಹಂಗರಿಯಲ್ಲಿ, ಡ್ಯೂಚ್-ಬಲ್ಗೇರಿಚ್ ಕ್ರೆಡಿಟ್‌ಬ್ಯಾಂಕ್ ಅನ್ನು ಬಲ್ಗೇರಿಯಾದಲ್ಲಿ, ಮತ್ತು ಬಂಕಾ ಕರ್ಮಷಿಯಲ್ ರೊಮಾನಾ ಅನ್ನು ಬುಕಾರೆಸ್ಟ್ನಲ್ಲಿ ನಿರ್ವಹಣೆ ಮಾಡಲು ಜವಾಬ್ದಾರಿ ಪಡೆಯಿತು. ಅದು ಒಂದು ಶಾಖೆಯನ್ನು ಇಸ್ತಾಂಬುಲ್, ಟರ್ಕಿಯಲ್ಲಿ ಸಹ ಹೊಂದಿದೆ.

ಎರಡನೆಯ ಮಹಾಯುದ್ಧದ ನಂತರದ ಕಾಲ

ಎರಡನೆಯ ಮಹಾಯುದ್ಧದಲ್ಲಿ ಜರ್ಮನಿಯ ಸೋಲಿನ ನಂತರ, ೧೯೪೮ ರಲ್ಲಿ ಒಕ್ಕೂಟದ ಅಧಿಕಾರಿಗಳು ಹತ್ತು ಪ್ರಾಂತೀಯ ಬ್ಯಾಂಕುಗಳಾಗಿ ಡಾಯ್ಚ ಬ್ಯಾಂಕಿನ ವಿಭಜನೆಗೆ ಆದೇಶಿಸಿದರು. ಈ 10 ಪ್ರಾಂತೀಯ ಬ್ಯಾಂಕುಗಳನ್ನು ನಂತರ 1952 ರಲ್ಲಿ ಮೂರು ಪ್ರಮುಖ ಬ್ಯಾಂಕುಗಳಾಗಿ ಏಕೀಕರಿಸಲಾಯಿತು: ನೋರ್‌ಡ್ಯೂಚ್ ಬ್ಯಾಂಕ್; ಸುಡ್ಯೂಚ್ ಬ್ಯಾಂಕ್ ಎಜಿ; ಮತ್ತು ರೀನಿಚ್-ವೆಸ್ಟ್‌ಫಾಲಿಚ್ ಬ್ಯಾಂಕ್ ಎಜಿ. 1957 ರಲ್ಲಿ, ಈ ಮೂರು ಬ್ಯಾಂಕುಗಳನ್ನು ವಿಲೀನಗೊಳಿಸಿ ಫ್ರಾಂಕ್‌ಫರ್ಟ್‌ನಲ್ಲಿ ಕೇಂದ್ರ ಕಚೇರಿಯೊಡನೆ ಡಾಯ್ಚ ಬ್ಯಾಂಕ್‌ ಎಜಿ ಆಗಿ ರಚಿಸಲಾಯಿತು.

೧೯೫೯ ರಲ್ಲಿ, ಬ್ಯಾಂಕ್ ವೈಯಕ್ತಿಕ ಸಾಲಗಳನ್ನು ಪರಿಚಯಿಸುವ ಮೂಲಕ ರಿಟೇಲ್ ಬ್ಯಾಂಕಿಂಗ್‌ಗೆ ಪ್ರವೇಶಿಸಿತು. ೧೯೭೦ ರಲ್ಲಿ, ಹೊಸ ಸ್ಥಳಗಳಾದ ಮಿಲಾನ್ (1977), ಮಾಸ್ಕೋ, ಲಂಡನ್, ಪ್ಯಾರಿಸ್ ಮತ್ತು ಟೋಕಿಯೋದಲ್ಲಿ ಹೊಸ ಕಚೇರಿಗಳನ್ನು ತೆರೆಯುವ ಮೂಲಕ ಅಂತರಾಷ್ಟ್ರೀಯ ವಿಸ್ತರಣೆಯೊಂದಿಗೆ ಮುನ್ನುಗ್ಗಿತು. 1980 ರ ದಶಕದಲ್ಲಿ ಬ್ಯಾಂಕ್ ಆಫ್ ಅಮೇರಿಕಾವು ಬಂಕಾ ಡೆಲ್ ಇಟಾಲಿಯಾ ಮೆರಿಡಿಯೋನೇಲ್ ಅನ್ನು ಸ್ವಾಧೀನಪಡಿಸಿಕೊಂಡು 1922 ರಲ್ಲಿ ಸ್ಥಾಪಿಸಿದ ಇಟಾಲಿಯನ್ ಅಂಗಸಂಸ್ಥೆಯಾದ ಬಂಕಾ ಡಿ ಅಮೇರಿಕಾ ಡಿ ಇಟಾಲಿಯಾ ವನ್ನು ಸ್ವಾಧೀನಪಡಿಸಿಕೊಳ್ಳಲು 1986 ರಲ್ಲಿ $603 ಮಿಲಿಯನ್ ಅಮೇರಿಕನ್ ಡಾಲರ್ ಪಾವತಿಸುವ ಮೂಲಕ ಇದು ಮುಂದುವರಿಯಿತು. ಮತ್ತೊಂದು ಯುರೋಪಿಯನ್ ದೇಶವೊಂದರಲ್ಲಿ ಭಾರೀ ಗಾತ್ರದ ಶಾಖೆಯ ಜಾಲವನ್ನ್ನು ಡಾಯ್ಚ ಬ್ಯಾಂಕ್ ಸ್ವಾಧೀನಪಡಿಸಿಕೊಂಡಿದ್ದನ್ನು ಇದು ಪ್ರತಿನಿಧಿಸುತ್ತದೆ.

೧೯೮೯ ರಲ್ಲಿ, ಯುನೈಟೆಡ್ ಕಿಂಗ್‌ಡಮ್- ಮೂಲದ ಮೋರ್ಗಲ್ ಗ್ರೆನ್‌ಫೆಲ್ ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಪ್ರಮುಖವಾದ ಹೂಡಿಕೆ-ಬ್ಯಾಂಕಿಂಗ್ ಅಸ್ತಿತ್ವ. ೧೯೯೦ ರ ದಶಕದ ಮಧ್ಯಭಾಗದಲ್ಲಿ, ಪ್ರಮುಖ ಪ್ರತಿಸ್ಪರ್ಧಿಗಳ ಉನ್ನತ ಮಟ್ಟದ ವ್ಯಕ್ತಿಗಳು ಆಗಮಿಸುವುದರೊಂದಿಗೆ ಬಂಡವಾಳ- ಮಾರುಕಟ್ಟೆಗಳ ಕಾರ್ಯಾಚರಣೆಯನ್ನು ವೃದ್ಧಿಗೊಳಿಸುವ ಕಾರ್ಯ ಪ್ರಾರಂಭವಾಯಿತು. ಮೋರ್ಗನ್ ಗ್ರೆನ್‌ಫೆಲ್ ಅನ್ನು ಸ್ವಾಧೀನಪಡಿಸಿಕೊಂಡ ಹತ್ತು ವರ್ಷಗಳ ನಂತರ, ಯು.ಎಸ್ ಸಂಸ್ಥೆಯಾದ ಬ್ಯಾಂಕರ್ಸ್ ಟ್ರಸ್ಟ್ ಅನ್ನು ಸೇರಿಸಿಕೊಳ್ಳಲಾಯಿತು.

ಸುಮಾರು $೪೭೬ ಮಿಲಿಯನ್ ಅಮೇರಿಕನ್ ಡಾಲರ್‌ಗಳಿಗೆ ಬಂಕಾ ಪೊಪೋಲೇರ್ ಡಿ ಲೆಕ್ಕೋ ಅನ್ನು ಬಂಕಾ ಪೊಪೋಲೇರ್ ಡಿ ನೊವಾರಾದಿಂದ ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಇಟಲಿಯಲ್ಲಿ ಡಾಯ್ಚವು ತನ್ನ ಅಸ್ತಿತ್ವವನ್ನು ವೃದ್ಧಿಗೊಳಿಸುವುದನ್ನು ಮುಂದುವರಿಸಿತು.

೨೦೦೧ ರ ಅಕ್ಟೋಬರ್‌ನಲ್ಲಿ, ನ್ಯೂಯಾರ್ಕ್ ಶೇರು ಮಾರುಕಟ್ಟೆ (ಎನ್‌ವೈಸಿಎ) ಯಲ್ಲಿ ಡಾಯ್ಚ ಬ್ಯಾಂಕ್ ಪಟ್ಟಿ ಮಾಡಲ್ಪಟ್ಟಿತು. [911] ಕಾರಣದಿಂದ ತಡೆಯಾದ ನಂತರ ಇದು ಎನ್‌ವೈಸಿಎದ ಮೊದಲ ಪಟ್ಟಿಯಾಗಿತ್ತು. ಮುಂದಿನ ವರ್ಷ, ಸ್ಕಡರ್ ಇನ್‌ವೆಸ್ಟ್‌ಮೆಂಟ್ಸ್ ಅನ್ನು ಖರೀದಿಸುವ ಮೂಲಕ ಡಾಯ್ಚ ಬ್ಯಾಂಕ್ ತನ್ನ ಯು.ಎಸ್. ನಲ್ಲಿನ ಅಸ್ತಿತ್ವವನ್ನು ಬಲಗೊಳಿಸಿತು. ಈ ಮಧ್ಯೆ ರೂಡ್ ಬ್ಲಾಸ್ & ಸೀ (2002) ರಷ್ಯನ್ ಹೂಡಿಕೆ ಬ್ಯಾಂಕ್ ಆದ ಯುನೈಟೆಡ್ ಫೈನಾನ್ಸಿಯಲ್ ಗ್ರೂಪ್ (2006) ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಡಾಯ್ಚ ಬ್ಯಾಂಕ್ ಯುರೋಪಿನಲ್ಲಿ ತನ್ನ ಖಾಸಗಿ-ಬ್ಯಾಂಕಿಂಗ್ ವ್ಯವಹಾರವನ್ನು ಹೆಚ್ಚಿಸಿಕೊಂಡಿತು. ಜರ್ಮನಿಯಲ್ಲಿ, ನೋರಿಸ್ ಬ್ಯಾಂಕ್ ಮತ್ತು ಬರ್ಲಿನರ್ ಬ್ಯಾಂಕ್‌ನ ಇನ್ನಷ್ಟು ಸ್ವಾಧೀನತೆಯು ಸ್ವದೇಶಿ ಮಾರುಕಟ್ಟೆಯಲ್ಲಿ ಡಾಯ್ಚ ಬ್ಯಾಂಕಿನ ರಿಟೇಲ್ ನೀಡುವಿಕೆಯನ್ನು ಬಲಪಡಿಸಿತು. ಈ ಸ್ವಾಧೀನ ಪಡಿಸಿಕೊಳ್ಳುವಿಕೆಯ ಸರಣಿಗಳು "ಪರಿವರ್ತನೆಯ" ವಿಲೀನಗಳೆಂದು ಕರೆಯಲಾಗುವುದಕ್ಕೆ ಬ್ಯಾಂಕಿನ ಭದ್ರ-ಪಡಿಸುವಿಕೆಯ ಸ್ವಾಧೀನತೆಗಳ ತಂತ್ರದೊಂದಿಗೆ ನಿಕಟವಾಗಿ ಸರಿಹೊಂದಿಕೆಯಾಗಿತ್ತು. ಒಟ್ಟಾರೆ ಬೆಳವಣಿಗೆಯ ತಂತ್ರದ ಈ ರೂಪಿತಗೊಂಡ ಭಾಗವು ಸಮರ್ಥನೀಯವಾದ 25% ಈಕ್ವಿಟಿಯ ಮೇಲೆ ಪ್ರತಿಫಲಕ್ಕೆ ಗುರಿಯಾಗಿಸಲಾಗಿತ್ತು, ಅದನ್ನು ಬ್ಯಾಂಕ್ 2005 ರಲ್ಲಿ ಸಾಧಿಸಿತು.

ಗೂಢಚಾರಿಕೆ ಹಗರಣ

ಮೇ 2009 ರಲ್ಲಿ ಬ್ಯಾಂಕಿನ ಕಾರ್ಪೋರೇಟ್ ಭದ್ರತೆ ವಿಭಾಗವನ್ನು ಒಳಗೊಂಡ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿನ ಆಂತರಿಕ ಕ್ರಮಗಳು ಅಥವಾ ಕಾನೂನು ಅಗತ್ಯತೆಗಳಲ್ಲಿ ಹಿಂದಿನ ವರ್ಷಗಳಲ್ಲಿ ಸಂಭವಿಸಿದ ಸಂಭಾವ್ಯ ಉಲ್ಲಂಘನೆಗಳ ಬಗ್ಗೆ ಕಾರ್ಯಕಾರಿ ಆಡಳಿತ ಮಂಡಳಿಗೆ ತಿಳಿದು ಬಂದಿದೆ ಎಂದು ಡಾಯ್ಚ ಬ್ಯಾಂಕ್ ಸಾರ್ವಜನಿಕರಿಗೆ ಮಾಹಿತಿ ನೀಡಿತು. ಸ್ವತಂತ್ರ್ಯ ತನಿಖೆಯನ್ನು ನಡೆಸಲು ಡಾಯ್ಚ ಬ್ಯಾಂಕ್ ತಕ್ಷಣವೇ ಕಾನೂನು ಸಂಸ್ಥೆಯಾದ ಫ್ರಾಂಕ್‌ಫರ್ಟ್‌ನ ಕ್ಲೀರಿ ಗೋಟ್ಟಿಲೀಬ್ ಸ್ಟೀನ್ & ಹ್ಯಾಮಿಲ್ಟನ್ ಅನ್ನು ನೇಮಕ ಮಾಡಿತು[೨೦] ಮತ್ತು ಜರ್ಮನ್ ಫೆಡರಲ್ ಫೈನಾನ್ಸಿಯಲ್ ಸೂಪರ್‌ವೈಸರ್ ಅಥಾರಿಟಿ (ಬಾಫಿನ್) ಗೆ ಮಾಹಿತಿ ನೀಡಿತು.ಕಾನೂನು ಸಂಸ್ಥೆಯು ಕಂಡುಹಿಡಿದ ಮತ್ತು ಜುಲೈ 2009 ರಲ್ಲಿ ಪ್ರಕಟಿಸಿದ ಮೂಲಭೂತ ಫಲಿತಾಂಶಗಳು ಈ ರೀತಿಯಾಗಿದೆ: ದತ್ತಾಂಶ ರಕ್ಷಣೆ ಅಥವಾ ಗೌಪ್ಯತೆಗೆ ಸಂಬಂಧಿಸಿದ ಆತಂಕಕಾರಿ ವಿಷಯಗಳಂತಹ ಕಾನೂನು ಸಮಸ್ಯೆಗಳನ್ನು ಹುಟ್ಟು ಹಾಕುವ ನಾಲ್ಕು ಘಟನೆಗಳನ್ನು ಗುರುತಿಸಲಾಗಿದೆ. ಎಲ್ಲಾ ಘಟನೆಗಳಲ್ಲಿ, ಬ್ಯಾಂಕಿನ ಕಾರ್ಪೋರೇಟ್ ಭದ್ರತೆ ವಿಭಾಗದ ಪರವಾಗಿ ಬಾಹ್ಯ ಸೇವಾ ನೀಡುಗರು ನಿರ್ವಹಿಸಿದ ಕೆಲವು ಕಾರ್ಯಗಳ ಪರಿಣಾಮದ ಚಟುವಟಿಕೆಗಳಾಗಿದ್ದವು. ಘಟನೆಗಳನ್ನು ದೂರವಿಡಲಾಗಿತ್ತು ಮತ್ತು ಯಾವುದೇ ಕ್ರಮಬದ್ಧವಾದ ದುರ್ನಡತೆಯು ಕಂಡುಬರಲಿಲ್ಲ. ಕಾನೂನು ಸಮಸ್ಯೆಗಳನ್ನು ಹುಟ್ಟುಹಾಕುವ ಯಾವುದೇ ಚಟುವಟಿಕೆಗಳಲ್ಲಿ ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರ ಪಾಲ್ಗೊಳ್ಳುವಿಕೆಯಾಗಲೀ ಅಥವಾ ಅವರಿಗೆ ಅಂತಹ ಚಟುವಟಿಕೆಗಳ ಬಗ್ಗೆ ಮಾಹಿತಿಯ ಇರುವಿಕೆಯ ಕುರಿತಾಗಲೀ ಯಾವುದೇ ಸೂಚನೆ ಕಂಡುಬರಲಿಲ್ಲ.[೨೧]ಮೇಲೆ ನಮೂದಿಸಿದ ಚಟುವಟಿಕೆಗಳಿಂದ ಪರಿಣಾಮಕ್ಕೊಳಗಾದ ಎಲ್ಲಾ ವ್ಯಕ್ತಿಗಳಿಗೆ ಡಾಯ್ಚ ಬ್ಯಾಂಕ್ ಮಾಹಿತಿ ನೀಡಿತು ಮತ್ತು ತನ್ನ ವಿಷಾದವನ್ನು ಸೂಚಿಸಿತು. ತನ್ನ ಕಾರ್ಪೋರೇಟ್ ಭದ್ರತೆ ಇಲಾಖೆಯು ಬಾಹ್ಯ ಸೇವಾ ಒದಗಿಸುವವರಿಗೆ ವಹಿಸಿದ ಕಾರ್ಯಗಳು ಮತ್ತು ಅವರ ಚಟುವಟಿಕೆಗಳ ನಿಯಂತ್ರಿಸುವಿಕೆಯನ್ನು ಬಲವರ್ಧಿಸುವ ಕ್ರಮಗಳನ್ನು ಬ್ಯಾಂಕ್ ಕೈಗೊಂಡಿತು.[೨೧]

೨೦೦೧ ರಿಂದ ಒಳಗೊಂಡು ೨೦೦೭ ರವರೆಗೆ, ಅದರ ಪರೀಕ್ಷಕರ ಬಗ್ಗೆ ಬೇಹುಗಾರಿಕೆಯನ್ನು ಮಾಡುವಲ್ಲಿ ತೊಡಗಿಸಿಕೊಂಡಿತು . ತನ್ನ ಕಾರ್ಪೋರೇಟ್ ಭದ್ರತೆ ವಿಭಾಗವು ನಿರ್ದೇಶಿಸಿದಂತೆ ೨೦೦೧ ರಿಂದ ೨೦೦೭ ರವರೆಗೆ ಬೇಹುಗಾರಿಕೆಯ ಘಟನೆಗಳನ್ನು ಬ್ಯಾಂಕ್ ಒಪ್ಪಿಕೊಂಡಿತು, ಆದರೂ ಅವುಗಳನ್ನು "ಪ್ರತ್ಯೇಕಿತ" ಎಂಬುದಾಗಿ ನಿರೂಪಿಸಿತು.[೨೨] ವಾಲ್ ಸ್ಟ್ರೀಟ್ ಜರ್ನಲ್ ನ ಪುಟ ಒಂದರ ವರದಿಯ ಪ್ರಕಾರ, ಬ್ಯಾಂಕಿನ ಟೀಕೆಗಳಿಗೆ ಸಂಬಂಧಿಸಿದಂತೆ ತನಿಖೆ ಮಾಡಲು ಅದು ಬಯಸಿದ 20 ಜನರ ಪಟ್ಟಿಯನ್ನು ಡಾಯ್ಚ ಬ್ಯಾಂಕ್ ತಯಾರಿಸಿತ್ತು, ಅವುಗಳಲ್ಲಿ ಮೈಕೆಲ್ ಬೋಹಂಡ್ರಾಫ್ (ಬ್ಯಾಂಕಿನ ಸಕ್ರಿಯ ಹೂಡಿಕೆದಾರ) ಮತ್ತು ಲಿಯೋ ಕಿರ್ಕ್ (ಬ್ಯಾಂಕಿನೊಂದಿಗೆ ದಾಖೆ ಹೂಡಿದ ಮಾಜಿ ಮಾಧ್ಯಮ ಪ್ರತಿನಿಧಿ) ಇವರುಗಳು ಒಳಗೊಂಡಿದ್ದರು.[೨೨] ಕಿರ್ಕ್ ಅವರನ್ನು ಪ್ರತಿನಿಧಿಸಿದ ಬಬ್ ಗಾವೀಲರ್ & ಸಹಯೋಗಿ ಅವರ ಮ್ಯೂನಿಚ್ ಸಂಸ್ಥೆಯನ್ನು ಸಹ ಗುರಿಯಾಗಿರಿಸಲಾಗಿತ್ತು. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಬ್ಯಾಂಕಿನ ಕಾರ್ಪೋರೇಟ್ ಭದ್ರತೆ ವಿಭಾಗದ ಜೊತೆಗೆ ಅದರ ಕಾನೂನು ವಿಭಾಗವೂ ಸಹ ಸಂಚಿನಲ್ಲಿ ಒಳಗೊಂಡಿತ್ತು.[೨೨] ಅಂದಿನಿಂದ ಬ್ಯಾಂಕ್, ತನ್ನ ಪರವಾಗಿ ಘಟನೆಗಳನ್ನು ತನಿಖೆ ನಡೆಸಲು ನ್ಯೂಯಾರ್ಕ್‌ನ ಸಂಸ್ಥೆಯಾದ ಕ್ಲೀರಿ ಗೊಟ್ಲೀಬ್ ಸ್ಟೀನ್ & ಹ್ಯಾಮಿಲ್ಟನ್ ಅನ್ನು ನೇಮಕ ಮಾಡಿತು. ಕ್ಲೀರಿ ಸಂಸ್ಥೆಯು ತನ್ನ ತನಿಖೆಯನ್ನು ಪೂರ್ಣಗೊಳಿಸಿತು ಮತ್ತು ವರದಿಯನ್ನು ಸಲ್ಲಿಸಿತು, ಆದರೆ ಅದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲಿಲ್ಲ.[೨೨] ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಕ್ಲೀರಿ ಸಂಸ್ಥೆಯು ಪಿತೂರಿಯೊಂದನ್ನು ಬಯಲಿಗೆಳೆದರು, ಅದರ ಪ್ರಕಾರ ಬಬ್ ಗೌವೀಲರ್ ಸಂಸ್ಥೆಯಲ್ಲಿ ಬ್ಯಾಂಕಿನ "ಬೇಹುಗಾರ" ನನ್ನು ಇಂಟರ್ನ್ ಆಗಿ ನೇಮಕ ಮಾಡಿ ಬಬ್ ಗೌವೀಲರ್ ಸಂಸ್ಥೆಯನ್ನು ಆಕ್ರಮಿಸಿಕೊಳ್ಳುವುದು ಡಾಯ್ಚ ಬ್ಯಾಂಕ್ ಯೋಜನೆಯಾಗಿತ್ತು. ಇಂಟರ್ನ್ ಅನ್ನು ನೇಮಕ ಮಾಡಿ ಅವಳು ಕಾರ್ಯನಿರ್ವಹಿಸವುದಕ್ಕೂ ಮೊದಲು ಯೋಜನೆಯನ್ನು ರದ್ದುಗೊಳಿಸಲಾಗಿತ್ತು.[೨೨] ಗುರಿಯಾಗಿರಿಸಿದ ಸಂಸ್ಥೆಯ ಮುಖ್ಯಸ್ಥರಾದ ಪೀಟರ್ ಗೌವೀಲರ್ ಅವರು "ರಾಷ್ಟ್ರೀಯ ಪ್ರಾಸಿಕ್ಯೂಟರುಗಳು ಮತ್ತು ಬ್ಯಾಂಕಿನ ಮೇಲ್ವಿಚಾರಕ ಏಜೆನ್ಸಿಗಳು ಸೇರಿದಂತೆ ಸೂಕ್ತ ಅಧಿಕಾರಿಗಳು ಪೂರ್ಣ ಪ್ರಮಾಣದ ತನಿಖೆಯನ್ನು ಕೈಗೊಳ್ಳುವರೆಂದು ನಾನು ನಿರೀಕ್ಷಿಸುತ್ತೇನೆ" ಎಂದು ಹೇಳಿರುವುದಾಗಿ ಉಲ್ಲೇಖಿಸಲಾಗಿತ್ತು.[೨೨]

ಸಾಧನೆ

ವರ್ಷ2009200820072006200520042003
ನಿವ್ವಳ ವರಮಾನ€5.0ಬಿಲಿ€-3.9ಬಿಲಿ€6.5ಬಿಲಿ€6.1ಬಿಲಿ€3.5ಬಿಲಿ€2.5ಬಿಲಿ€1.4ಬಿಲಿ
ಆದಾಯಗಳು€28.0ಬಿಲಿ€13.5ಬಿಲಿ€30.7ಬಿಲಿ€28.5ಬಿಲಿ€25.6ಬಿಲಿ€21.9ಬಿಲಿ€21.3ಬಿಲಿ
ಈಕ್ವಿಟಿಯ ಮೇಲಿನ ಲಾಭ18%29%30%26%16%1%7%
ಲಾಭಾಂಶ0/10/14.54.02.51.71.5

ಹಿಂದಿನ ಐದು ವರ್ಷಗಳಲ್ಲಿ ತನ್ನ ರಿಟೇಲ್ ಮತ್ತು ವಾಣಿಜ್ಯ ಅಸ್ತಿತ್ವಕ್ಕೆ ಹೆಸರಾಗಿರುವ ಜರ್ಮನ್-ಕೇಂದ್ರೀಕೃತ ಸಂಸ್ಥೆಯಿಂದ ಲಾಭಕ್ಕಾಗಿ ಸಾಂಪ್ರದಾಯಿಕ ಮಾರುಕಟ್ಟೆಗಳಿಗೆ ಕಡಿಮೆ ಅವಲಂಬನೆಯ ಜಾಗತಿಕ ಹೂಡಿಕೆ ಬ್ಯಾಂಕ್ ಆಗಿ ಡಾಯ್ಚ ಬ್ಯಾಂಕ್ ಪರಿವರ್ತಿತವಾಗಿದೆ.

ಅದರ ಬೆಳವಣಿಗೆಗೆ ವ್ಯಾಪಕವಾಗಿ ಬ್ಯಾಂಕ್ ಗುರುತಿಸಲ್ಪಟ್ಟಿದೆ ಮತ್ತು ೨೦೦೩ ರಿಂದ ೨೦೦೫ ರಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಎರಡು ಬಾರಿ ವರ್ಷದ ಐಎಫ್‌ಆರ್ ಬ್ಯಾಂಕ್ ಎಂದು ಹೆಸರಿಸಲ್ಪಟ್ಟಿದೆ.

2008 ರ ಆರ್ಥಿಕ ವರ್ಷಕ್ಕಾಗಿ, ಐದು ದಶಕಗಳಲ್ಲಿ ಮೊದಲ ಬಾರಿಗೆ ಡಾಯ್ಚ ಬ್ಯಾಂಕ್ ಅದರ ವಾರ್ಷಿಕ ನಷ್ಟವನ್ನು ದಾಖಲಿಸಿದೆ.[ಸೂಕ್ತ ಉಲ್ಲೇಖನ ಬೇಕು], ಏಐಜಿಯನ್ನು ಸಂಕಷ್ಟದಿಂದ ಹೊರತರಲು ಯುನೈಟೆಡ್ ಸ್ಟೇಟ್ಸ್‌ನ ತೆರಿಗೆದಾರರು $11.8ಬಿಲಿಯನ್ ಆರ್ಥಿಕ ನೆರವನ್ನು ನೀಡುವುದನ್ನೂ ಒಳಗೊಂಡು ಏಐಜಿ ಯೊಂದಿಗೆ ಅದರ ವಿಮಾ ಹೊಂದಾಣಿಕೆಯಾಗಿ ಬಿಲಿಯನ್‌ಗಟ್ಟನೆ ಡಾಲರ್‌ಗಳಷ್ಟು ಹಣವನ್ನು ಸ್ವೀಕರಿಸಿದ ಹೊರತಾಗಿಯೂ ಇದು ಸಂಭವಿಸಿದೆ.[೨೩][೨೪]

ಆಡಳಿತ ಮಂಡಳಿ ವ್ಯವಸ್ಥೆ

ಇತ್ತೀಚಿನವರೆಗೂ, ಡಾಯ್ಚ ಬ್ಯಾಂಕ್‌ನಲ್ಲಿ ಯಾವುದೇ ಸಿಇಓ ಇರಲಿಲ್ಲ. ಮಂಡಳಿಯನ್ನು “ಮಂಡಳಿಯ ಸ್ಪೀಕರ್” ಅವರು ಪ್ರತಿನಿಧಿಸುತ್ತಿದ್ದರು. ಇಂದು, ಡಾಯ್ಚ ಬ್ಯಾಂಕ್ ಆಡಳಿತ ಮಂಡಳಿಯನ್ನು ಹೊಂದಿದ್ದು, ಅದರ ಸದಸ್ಯರುಗಳೆಂದರೆ: ಜೋಸೆಫ್ ಆಕರ್‌ಮ್ಯಾನ್ (ಅಧ್ಯಕ್ಷರು ಮತ್ತು ಸಿಇಓ); ಹುಗೋ ಬಾಂಜಿಗರ್ (ಮುಖ್ಯ ಭದ್ರತಾ ಅಧಿಕಾರಿ); ಮೈಕೆಲ್ ಕೋರ್ಸ್ (ಜಾಗತಿಕ ಬ್ಯಾಂಕಿಂಗ್); ಅಂಶು ಜೈನ್ (ಜಾಗತಿಕ ಮಾರುಕಟ್ಟೆಗಳು); ಜರ್ಗನ್ ಫಿಶೆನ್ (ಪ್ರಾಂತೀಯ ನಿರ್ವಹಣೆ); ರೇನರ್ ನೆಸ್ಕ್ (ಖಾಸಗಿ & ವ್ಯವಹಾರ ಗ್ರಾಹಕರು); ಹರ್ಮನ್-ಜೋಸೆಫ್ ಲಾಂಬರ್ಟಿ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಮತ್ತು ಸ್ಟೀಫನ್ ಕ್ರೌಸ್.

ಸಮೂಹ ಕಾರ್ಯನಿರ್ವಹಣೆ ಕಮಿಟಿಯು ಆಡಳಿತ ಮಂಡಳಿ ಜೊತೆಗೆ ಬ್ಯಾಂಕಿನ ಇತರ ವ್ಯವಹಾರ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡಿದ್ದು, ಅವರುಗಳೆಂದರೆ: ಕೆವಿನ್ ಪಾರ್ಕರ್ (ಆಸ್ತಿ ನಿರ್ವಹಣೆ); ಮತ್ತು ಪೀರ್ ಡಿ ವೆಕ್ (ಖಾಸಗಿ ಹಣಕಾಸು ನಿರ್ವಹಣೆ).

ಕ್ಲೆಮೆನ್ಸ್ ಬೋರ್ಸಿಗ್ ಅವರು ಬ್ಯಾಂಕಿನ ಉಸ್ತುವಾರಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ವ್ಯವಹಾರ ವ್ಯವಸ್ಥೆ

ಡಾಯ್ಚ ಬ್ಯಾಂಕಿನ ಧ್ಯೇಯ ವಾಕ್ಯವೆಂದರೆ: " ನಮ್ಮ ಷೇರುದಾರರು ಮತ್ತು ಜನರಿಗೆ ಅಸಾಧಾರಣವಾದ ಮೌಲ್ಯವನ್ನು ನಿರ್ಮಿಸುವ ಮೂಲಕ ಅಪೇಕ್ಷಿತ ಗ್ರಾಹಕರಿಗೆ ಹಣಕಾಸು ಪರಿಹಾರಗಳ ಪ್ರಮುಖ ಜಾಗತಿಕ ನೀಡುಗರಾಗಲು ನಾವು ಸ್ಪರ್ಧಿಸುತ್ತೇವೆ.” ಬ್ಯಾಂಕಿನ ವ್ಯವಹಾರ ಮಾದರಿಯು ಎರಡು ಆಧಾರ ಸ್ತಂಭಗಳ ಮೇಲೆ ನಿಂತಿದೆ: ಕಾರ್ಪೋರೇಟ್ ಮತ್ತು ಹೂಡಿಕೆ ಬ್ಯಾಂಕ್ (ಸಿಇಬಿ) ಮತ್ತು ಖಾಸಗಿ ಗ್ರಾಹಗಳು ಮತ್ತು ಆಸ್ತಿ ನಿರ್ವಹಣೆ.

ಸಿಐಬಿ

ದಶಕಗಳಿಗೂ ಕೊಂಚ ಹೆಚ್ಚು ಕಾಲದಿಂದ, ಡಾಯ್ಚ ಬ್ಯಾಂಕಿನ ಸಿಐಬಿಯು ತನ್ನನ್ನೇ ವಿಶ್ವದ ಪ್ರಮುಖ ಹೂಡಿಕೆ ಬ್ಯಾಂಕಿಂಗ್ ಸಂಸ್ಥೆಯಾಗಿ ಸ್ಥಾಪಿತವಾಗಿದೆ. ಸಿಐಬಿಯು ಬ್ಯಾಂಕಿನ ಮಾರುಕಟ್ಟೆ-ಪ್ರಮುಖ ಜಾಗತಿಕ ಮಾರುಕಟ್ಟೆಗಳು ಮತ್ತು ಜಾಗತಿಕ ಬ್ಯಾಂಕಿಂಗ್ ವಿಭಾಗಗಳಾಗಿ ಒಳಗೊಂಡಿದೆ.

ಇತ್ತೀಚಿನವರೆಗೂ, ಜಾಗತಿಕ ಮಾರುಕಟ್ಟೆಗಳು ಡಾಯ್ಚ ಬ್ಯಾಂಕಿನ ಲಾಭ ಮತ್ತು ಆದಾಯದ ಪ್ರಮುಖ ಭಾಗವಾಗಿ ನೆರವು ನೀಡಿದೆ. ವ್ಯವಹಾರವು ಡೆಬಿಟ್ ಮತ್ತು ಈಕ್ವಿಟಿ, ವ್ಯುತ್ಪನ್ನಗಳು ಮತ್ತು ಇತರ ನವೀನ ಉತ್ಪನ್ನಗಳ ಮಾರಾಟಗಳು ಮತ್ತು ವ್ಯಾಪಾರಕ್ಕೆ ಜವಾಬ್ದಾರಿಯಾಗಿದೆ. ಬಾಂಡ್ ಮಾರುಕಟ್ಟೆಗಳು, ವಿದೇಶೀ ವಿನಿಮಯ ಮತ್ತು ವ್ಯುತ್ಪನ್ನಗಳಲ್ಲಿನ ಜಾಗತಿಕ ಮಾರುಕಟ್ಟೆಗಳ ಪರಿಣತಿಯು ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಹಲವು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ತಂದಿದೆ.

ಆದರೆ 2004/5 ರಿಂದ ಲಂಡನ್, ಫ್ರಾಂಕ್‌ಫರ್ಟ್ ಮತ್ತು ಇತರೆಡೆಗಳಲ್ಲಿ 6,400 ಉದ್ಯೋಗಿಗಳನ್ನು ಹೊರ ಹಾಕುವ ಮೂಲಕ ವೆಚ್ಚವನ್ನು ತಗ್ಗಿಸುವ ಕಾರ್ಯಕ್ರಮವನ್ನು ಡಾಯ್ಚ ಬ್ಯಾಂಕ್ ಪ್ರಾರಂಭಿಸಿದೆ.[೨೫] ನವೆಂಬರ್ 2008 ರಲ್ಲಿ, ಕ್ರೆಡಿಟ್ ಸಮಸ್ಯೆಗೆ ಪ್ರತಿಕ್ರಿಯೆಯಾಗಿ, ಮುಖ್ಯವಾಗಿ ಲಂಡನ್ ಮತ್ತು ನ್ಯೂಯಾರ್ಕ್‌ನಲ್ಲಿ ತನ್ನ 7 ವ್ಯಾಪಾರಿಗಳಲ್ಲಿ ಒಬ್ಬರನ್ನು ಅಂದರೆ ಒಟ್ಟಾರೆಯಾಗಿ 900 ಹುದ್ದೆಗಳನ್ನು ತೆಗೆದುಹಾಕುವ ಮೂಲಕ ಇನ್ನಷ್ಟು ಉದ್ಯೋಗಿಗಳ ಕಡಿತ ಮಾಡಿತು.[೨೬]

ಹಿಂದಿನ ಐದು ವರ್ಷಗಳಲ್ಲಿ ಪ್ರಮುಖವಾಗಿ ಬೆಳೆದ ಬೃಹತ್ ಪ್ರಮಾಣದ ವಿಲೀನ & ಸ್ವಾಧೀನಪಡಿಸಿಕೊಳ್ಳುವಿಕೆ (ಎಮ್&ಎ) ಅಭ್ಯಾಸವನ್ನು ಜಾಗತಿಕ ಬ್ಯಾಂಕಿಂಗ್ ಒಳಗೊಂಡಿದೆ. 2007 ರಲ್ಲಿ, ಬ್ಯಾಂಕಿನ ಎಮ್‌&ಎ ವ್ಯವಹಾರವು, ಬಹು-ಕಲಾದ ಮತ್ತು ಸ್ಥಿರವಾಗಿ ನೆಲೆಯೂರಿದ ಎಮ್‌&ಎ ಪ್ರಖ್ಯಾತಿಗಳ ಬ್ಯಾಂಕುಗಳು ಮತ್ತು ಸಂಸ್ಥೆಗಳೊಂದಿಗೆ ಪ್ರತಿಸ್ಪರ್ಧೆಯಾಗಿ, ವಿಶ್ವ-ಗುಣಮಟ್ಟದ ಸವಲತ್ತನ್ನು ನಿರ್ಮಿಸಲು ಇನ್ನಷ್ಟು ಹೆಜ್ಜೆ ಇಟ್ಟಿತು. ಯುರೋಪಿಯನ್ ಪ್ರಾರಂಭಿಕ ಸಾರ್ವಜನಿಕ ನೀಡಿಕೆ , ಈಕ್ವಟಿ, ಡೆಬಿಟ್ ಮತ್ತು ಹೆಚ್ಚಿನ ಗಳಿಕೆಯ ಮಾರುಕಟ್ಟೆಗಳಲ್ಲಿ ಪ್ರಮುಖವಾದ ಮತ್ತು ನಾವಿನ್ಯ ಉಪಸ್ಥಿತಿಯನ್ನು ಹೊಂದಿರುವ ಜಾಗತಿಕ ಹಣಕಾಸು ಮಾರುಕಟ್ಟೆಗಳ ವ್ಯವಹಾರವನ್ನು ಸಹ ಜಾಗತಿಕ ಬ್ಯಾಂಕಿಂಗ್ ಒಳಗೊಂಡಿದೆ. ಗ್ರಾಹಕರ ವ್ಯಾಪ್ತಿಯನ್ನು ಸಹ ಜಾಗತಿಕ ಬ್ಯಾಂಕಿಂಗ್‌ನಲ್ಲಿ ಒಳಪಡಿಸಿಕೊಳ್ಳಲಾಗಿದೆ.

ನಗದು ನಿರ್ವಹಣೆ, ಕ್ಲಿಯರಿಂಗ್, ವ್ಯಾಪಾರ ಹಣಕಾಸು ಮತ್ತು ಟ್ರಸ್ಟ್ ಮತ್ತು ಸೆಕ್ಯುರಿಟಿಗಳ ಸೇವೆಗಳನ್ನು ಬ್ಯಾಂಕಿಂಗ್‌ನ ಭಾಗವಾಗುವ ಜಾಗತಿಕ ವಹಿವಾಟು ಬ್ಯಾಂಕಿಂಗ್ ನಿರ್ವಹಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ವ್ಯಾಪಾರವು ಐದು ಪಟ್ಟು ಬೆಳೆದಿದೆ ಮತ್ತು ಇದೀಗ ಅದು ಉದ್ಯಮದ ಮಾರ್ಗದರ್ಶಿಯಾಗಿದೆ. ಪ್ರಮುಖವಾಗಿ ನಗದು ನಿರ್ವಹಣೆಯ ಕ್ಷೇತ್ರದಲ್ಲಿ ಅದರ ವಹಿವಾಟು ಬ್ಯಾಂಕಿಂಗ್ ಸೇವೆಗಳ ಗುಣಮಟ್ಟಕ್ಕಾಗಿ ಡಾಯ್ಚ ಬ್ಯಾಂಕ್ ಹತ್ತು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅದು ಇದೀಗ ಐಬಿಐಟಿಯು ಶ್ರೇಣಿಕೃತಗೊಳಿಸಿರುವ ಬ್ಯಾಂಕಿನ ಅತೀ ದೊಡ್ಡ ವಿಭಾಗಗಳಲ್ಲಿ ಒಂದಾಗಿದೆ.

ಸಿಐಬಿಯ ಗ್ರಾಹಕರು ಪ್ರಮುಖವಾಗಿ ಖಾಸಗಿ ಮತ್ತು ಸಾರ್ವಜನಿಕ ವಿಭಾಗದ ಸಂಸ್ಥೆಗಳಾಗಿದ್ದು, ಅವುಗಳಲ್ಲಿ ಸ್ವತಂತ್ರ್ಯ ರಾಷ್ಟ್ರಗಳು, ಅಧಿರಾಷ್ಟ್ರೀಯ ಕೂಟಗಳು, ಜಾಗತಿಕ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಮಧ್ಯಮ-ಗಾತ್ರದ ಮತ್ತು ಸಣ್ಣ ಕೈಗಾರಿಕೆಗಳು ಸೇರಿವೆ.

ಪಿಸಿಎಮ್

ಖಾಸಗಿ ಆಸ್ತಿಪಾಸ್ತಿ ನಿರ್ವಹಣೆ, ಖಾಸಗಿ ಮತ್ತು ವ್ಯವಹಾರ ಗ್ರಾಹಕರು ಮತ್ತು ಆಸ್ತಿ ನಿರ್ವಹಣೆಯನ್ನು ಖಾಸಗಿ ಗ್ರಾಹಕರು ಮತ್ತು ಆಸ್ತಿ ನಿರ್ವಹಣೆ (ಪಿಸಿಎಮ್) ಒಳಗೊಂಡಿರುತ್ತದೆ. ಈ ಮೂರು ವ್ಯವಹಾರದ ವಿಭಾಗಗಳು ಖಾಸಗಿ ಗ್ರಾಹಕರು ಮತ್ತು ಸಣ್ಣ ಮತ್ತು ಮಧ್ಯಮ-ಗಾತ್ರದ ಉದ್ಯಮಗಳಿಗೆ ರಿಟೇಲ್ ಬ್ಯಾಂಕಿಂಗ್ ಚಟುಟವಟಿಕೆಗಳೊಂದಿಗೆ ಖಾಸಗಿ ಮತ್ತು ಸಾಂಸ್ಥಿಕ ಗ್ರಾಹಕರಿಗೆ ಡಾಯ್ಚ ಬ್ಯಾಂಕಿನ ಹೂಡಿಕೆ ನಿರ್ವಹಣೆ ವ್ಯವಹಾರವನ್ನು ಒಳಗೊಂಡಿರುತ್ತದೆ.

ಖಾಸಗಿ ಆಸ್ತಿಪಾಸ್ತಿ ನಿರ್ವಹಣೆ

ಖಾಸಗಿ ಆಸ್ತಿಪಾಸ್ತಿ ನಿರ್ವಹಣೆಯು ಬ್ಯಾಂಕಿನ ಖಾಸಗಿ ಬ್ಯಾಂಕಿಂಗ್ ವಿಭಾಗವಾಗಿದ್ದು, ವಿಶ್ವದಾದ್ಯಂತದ ಹೆಚ್ಚು ಆದಾಯದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಸೇವೆ ಒದಗಿಸುತ್ತಿದೆ. ಸ್ವಿಟ್ಜರ್ಲ್ಯಾಂಡ್, ಲಕ್ಸಂಬರ್ಗ್, ಚಾನೆಲ್ ದ್ವೀಪಗಳು, ಕೇಮಾನ್ಸ್ ಮತ್ತು ದುಬೈ ಒಳಗೊಂಡು ವಿಶ್ವದ ಖಾಸಗಿ ಬ್ಯಾಂಕಿಂಗ್ ಮುಖ್ಯ ಪ್ರದೇಶಗಳಲ್ಲಿ ವಿಭಾಗವು ಬಲವಾದ ಉಪಸ್ಥಿತಿಯನ್ನು ಹೊಂದಿದೆ.

ಸಂವಹನ

ಆಧುನಿಕ ಸಂವಹನ ಪರಿಕರಗಳ ಮುಂಚಿತವಾದ ಜ್ಞಾನವು ಇಂದು ಡಾಯ್ಚ ಬ್ಯಾಂಕ್ ಆನಂದಿಸುತ್ತಿರುವ ಅಂತರಾಷ್ಟ್ರೀಯ ಮನ್ನಣೆಗೆ ಕೊಡುಗೆಯನ್ನು ನೀಡಿದೆ. 1972 ರಲ್ಲಿ ಆಂಟನ್ ಸ್ಟಾಂಕೋವಸ್ಕಿ ಅವರು ವಿನ್ಯಾಸಗೊಳಿಸಿದ ವಿಶ್ವ ಪ್ರಖ್ಯಾತಿಯ ನೀಲಿ ಲೋಗೋವಾದ "ಸ್ಲಾಶ್ ಇನ್ ಎ ಸ್ಕ್ವೇರ್" ಅನ್ನು ಬ್ಯಾಂಕ್ ರಚಿಸಿತು ಮತ್ತು ಅಪಾಯ-ನಿಯಂತ್ರಿತ ಚೌಕಟ್ಟಿನೊಳಗೆ ಬೆಳವಣಿಗೆಯನ್ನು ಪ್ರತಿನಿಧಿಸಲು ಉದ್ದೇಶಿಸಿದೆ.

ಸ್ವಾಧೀನಕಾರ್ಯಗಳು

  • ಮೋರ್ಗನ್, ಗ್ರೆನ್‌ಫೆಲ್ & ಕಂಪನಿ, 1990.
  • ಬ್ಯಾಂಕರ್ಸ್ ಟ್ರಸ್ಟ್ 30 ನವೆಂಬರ್ 1998.[೨೭]
  • ಸ್ಕಡ್ಡರ್ ಇನ್‌ವೆಸ್ಟ್‌ಮೆಂಟ್ಸ್, 2001
  • ಆರ್‌ಆರ್ಇಇಎಫ್, 2002[೨೮]
  • ಬರ್ಕ್‌ಶೈರ್ ಮೋರ್ಟ್‌ಗೇಜ್ ಫೈನಾನ್ಸ್ 22 ಅಕ್ಟೋಬರ್ 2004.[೨೯]
  • ಚಾಪೆಲ್ ಫಂಡಿಂಗ್, ಇದೀಗ ಡಿಬಿ ಹೋಮ್ ಲೆಂಡಿಂಗ್ 12 ಸೆಪ್ಟೆಂಬರ್ 2006[೩೦]
  • ಮೋರ್ಟ್‌ಗೇಜ್ಐಟಿ ಹೋಲ್ಡಿಂಗ್ಸ್ 3 ಜನವರಿ 2007[೩೧]
  • ಸಾಲ್. ಒಪ್ಪೆನ್‌ಹೀಮ್, 2010

ಪ್ರಮುಖ ಪ್ರಸ್ತುತ ಮತ್ತು ಮಾಜಿ ನೌಕರರು

  • ಹರ್ಮನ್ ಜೋಸೆಫ್ ಆಬ್ಸ್ — ಅಧ್ಯಕ್ಷರು (1957–67)
  • ಸರ್ ಜಾನ್ ಕ್ರಾವೆನ್ — ಲಂಡನ್‌ನಲ್ಲಿನ ಬಂಡವಾಳ ಹೂಡಿಕೆದಾರ
  • ಮೈಕೆಲ್ ಡೋಬ್ಸನ್ — ಸ್ಕ್ರೋಡರ್‌ಗಳ ಮುಖ್ಯಸ್ಥರು
  • ಆಲ್‌ಫ್ರೆಡ್ ಹೆರ್ರೌಸನ್ — ಅಧ್ಯಕ್ಷರು (1971–89)
  • ಎಡ್ಸನ್ ಮಿಚೆಲ್ — ಜಾಗತಿಕ ಮಾರುಕಟ್ಟೆಗಳ ಮುಖ್ಯಸ್ಥರು (1995–2000)
  • ಕಾರ್ಲ್ ಕಿಮ್ಮಿಚ್ — ಅಧ್ಯಕ್ಷರು (1942–1945)
  • ಹರ್ಮನ್ ವಾಲ್ಲಿಚ್ — ಸಹ-ಸ್ಥಾಪಕರು ಮತ್ತು ನಿರ್ದೇಶಕರು (1870–1893)
  • ಜಾರ್ಜ್ ವಾನ್ ಸೀಮೆನ್ಸ್ — ಸಹ-ಸ್ಥಾಪಕರು ಮತ್ತು ನಿರ್ದೇಶಕರು (1870–1900)
  • ಬೋಜ್ ವೀನ್‌ಸ್ಟೀನ್ — ವ್ಯುತ್ಪನ್ನಗಳ ವ್ಯಾಪಾರಿ
  • ಅಂಶು ಜೈನ್ - ಕಾರ್ಪೋರೇಟ್ ಮತ್ತು ಹೂಡಿಕೆ ಬ್ಯಾಂಕಿಂಗ್ ಮುಖ್ಯಸ್ಥರು

+ ಸಾರ್ವಜನಿಕ ಸೇವೆ

  • ಒಟ್ಟೋ ಹರ್ಮನ್ ಖಾನ್ — ಮಾನವ ಪ್ರೇಮಿ

ಇವನ್ನೂ ಗಮನಿಸಿ

Page ಮಾಡ್ಯೂಲ್:Portal/styles.css has no content.

  • ಯುರೋಪಿಯನ್‌ ಹಣಕಾಸು ಸೇವೆಗಳ ದುಂಡುಮೇಜಿನ ಪರಿಷತ್ತು
  • ಡಿಬಿಎಫ್‌ಎಕ್ಸ್ - ಡಾಯ್ಚ ಬ್ಯಾಂಕಿನ ಆನ್‌ಲೈನ್ ಫಾರೆಕ್ಸ್ ಟ್ರೇಡಿಂಗ್ ವೇದಿಕೆ

ಉಲ್ಲೇಖಗಳು

ಬಾಹ್ಯ ಕೊಂಡಿಗಳು