ಪ್ರಮೇಯ

ಗಣಿತದಲ್ಲಿ, ಪ್ರಮೇಯ ಎಂದರೆ ಸಾಮಾನ್ಯವಾಗಿ ಒಪ್ಪಿಕೊಳ್ಳಲಾದ ಆಧಾರಸೂತ್ರಗಳಂತಹ ಉಕ್ತಿಗಳ ಆಧಾರದ ಮೇಲೆ ಅಥವಾ ಇತರ ಪ್ರಮೇಯಗಳಂತಹ ಪೂರ್ವದಲ್ಲಿ ಸ್ಥಾಪಿತವಾದ ಉಕ್ತಿಗಳ ಆಧಾರದ ಮೇಲೆ ಸತ್ಯವೆಂದು ಸಾಬೀತಾಗಿರುವ ಸ್ವಯಂ-ಸ್ಪಷ್ಟವಲ್ಲದ ಉಕ್ತಿ.[೨][೩][೪] ಹಾಗಾಗಿ ಪ್ರಮೇಯವು ಆಧಾರಸೂತ್ರಗಳ ತಾರ್ಕಿಕ ಪರಿಣಾಮವಾಗಿರುತ್ತದೆ, ಮತ್ತು ಪ್ರಮೇಯದ ನಿಗಮನ ಪ್ರಕ್ರಿಯೆಯು ನಿಗಮನ ಪದ್ಧತಿಯ ನಿರ್ಣಯದ ನಿಯಮಗಳ ಮೂಲಕ ಸತ್ಯವನ್ನು ಪ್ರಮಾಣೀಕರಿಸುವ ತಾರ್ಕಿಕ ಸಮರ್ಥನೆಯಾಗಿರುತ್ತದೆ. ಪರಿಣಾಮವಾಗಿ, ಒಂದು ಪ್ರಮೇಯದ ನಿಗಮನ ಪ್ರಕ್ರಿಯೆಯನ್ನು ಹಲವುವೇಳೆ ಪ್ರಮೇಯ ಉಕ್ತಿಯ ಸತ್ಯದ ಸಮರ್ಥನೆ ಎಂದು ಅರ್ಥಮಾಡಿಕೊಳ್ಳಲಾಗುತ್ತದೆ. ಪ್ರಮೇಯಗಳಿಗೆ ನಿಗಮನ ಪ್ರಕ್ರಿಯೆಗಳನ್ನು ಒದಗಿಸಬೇಕೆಂಬ ಅಗತ್ಯತೆಯನ್ನು ಪರಿಗಣಿಸಿ, ಪ್ರಮೇಯದ ಪರಿಕಲ್ಪನೆಯು ಮೂಲಭೂತವಾಗಿ ನಿಗಮನಾತ್ಮಕವಾಗಿದೆ. ಇದು ಪ್ರಾಯೋಗಿಕವಾದ ವೈಜ್ಞಾನಿಕ ನಿಯಮದ ಕಲ್ಪನೆಯಿಂದ ಭಿನ್ನವಾಗಿದೆ.

ಪೈತಾಗೊರಸ್‍ನ ಪ್ರಮೇಯಕ್ಕೆ ತಿಳಿದಂತೆ ಕನಿಷ್ಠಪಕ್ಷ ೩೭೦ ನಿಗಮನ ಪ್ರಕ್ರಿಯೆಗಳಿವೆ.[೧]

ಟಿಪ್ಪಣಿಗಳು