ವೃಷಣ

ವೃಷಣವು (ತರಡು, ಬೀಜ) ಮಾನವ ಸೇರಿದಂತೆ ಎಲ್ಲ ಪ್ರಾಣಿಗಳಲ್ಲಿನ ಗಂಡು ಸಂತಾನೋತ್ಪತ್ತಿ ಗ್ರಂಥಿಯಾಗಿದೆ. ಇದು ಹೆಣ್ಣಿನ ಅಂಡಾಶಯಕ್ಕೆ ಸಮಾನರೂಪಿಯಾಗಿದೆ. ವೃಷಣಗಳ ಕ್ರಿಯೆಗಳೆಂದರೆ ವೀರ್ಯಾಣು ಮತ್ತು ಪುಂಜನಕಗಳು (ಟೆಸ್ಟೊಸ್ಟರೋನ್) ಎರಡನ್ನೂ ಉತ್ಪತ್ತಿಮಾಡುವುದು.

ವೃಷಣದ ಒಳಗಿನ ರಚನೆ

ಗಂಡುಗಳು ಸಮಾನ ಗಾತ್ರದ ಎರಡು ವೃಷಣಗಳನ್ನು ವೃಷಣ ಕೋಶದೊಳಗೆ ಹೊಂದಿರುತ್ತವೆ. ವೃಷಣ ಕೋಶವು ಉದರದ ಗೋಡೆಯ ವಿಸ್ತರಣೆಯಾಗಿರುತ್ತದೆ. ವೃಷಣ ಕೋಶದ ಅಸಮಾನತೆಯು ಅಸಾಮಾನ್ಯವಲ್ಲ: ರಕ್ತನಾಳ ವ್ಯವಸ್ಥೆಯ ರಚನೆಯಲ್ಲಿನ ವ್ಯತ್ಯಾಸಗಳ ಕಾರಣ ಒಂದು ವೃಷಣವು ಮತ್ತೊಂದಕ್ಕಿಂತ ಮತ್ತಷ್ಟು ಕೆಳಗೆ ವಿಸ್ತರಿಸಿರುತ್ತದೆ.

ವೃಷಣಗಳು ಟ್ಯುನಿಕಾ ಆಲ್ಬುಜಿನಿಯಾ ಎಂದು ಕರೆಯಲ್ಪಡುವ ಗಟ್ಟಿಯಾದ ಪೊರೆಯಂಥ ಕವಚದಿಂದ ಆವೃತವಾಗಿರುತ್ತವೆ. ವೃಷಣಗಳ ಒಳಗೆ ವೀರ್ಯವಾಹಕ ನಳಿಕೆಗಳು ಎಂದು ಕರೆಯಲ್ಪಡುವ ಬಹಳ ನಯವಾದ ಸುರುಳಿ ಸುತ್ತಿಕೊಂಡಿರುವ ನಳಿಕೆಗಳಿವೆ. ಈ ನಳಿಕೆಗಳು ಜೀವಕೋಶಗಳ (ಜಂಪತಿಗಳು) ಪದರವನ್ನು ಹೊಂದಿರುತ್ತವೆ. ಇವು ಪ್ರೌಢಾವಸ್ಥೆಯಿಂದ ವೃದ್ಧಾಪ್ಯದವರೆಗೆ ವೀರ್ಯಾಣು ಕೋಶಗಳಾಗಿ ವಿಕಸನಗೊಳ್ಳುತ್ತವೆ.

ಬಾಹ್ಯ ಕೊಂಡಿಗಳು