ಸುಂದರ್ ಪಿಚೈ

ಪಿಚೈ ಸುಂದರರಾಜನ್ [೩] ಅಥವಾ ಹೆಚ್ಚು ಪರಿಚಿತವಾಗಿ ಸುಂದರ್ ಪಿಚೈ ಮಾಹಿತಿ ತಂತ್ರಜ್ಞಾನದ ಕಾರ್ಯನಿರ್ವಹಣಾಧಿಕಾರಿ.[೪][೫][೬] ಇವರು ಈಗ ಪ್ರಸಿದ್ಧ ಗೂಗಲ್ ಸಂಸ್ಥೆಯ ಮುಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.[೭]

ಸುಂದರ್ ಪಿಚೈ
Born
ಪಿಚೈ ಸುಂದರ್‌ರಾಜನ್

(1972-07-12) ೧೨ ಜುಲೈ ೧೯೭೨ (ವಯಸ್ಸು ೫೧)
Nationalityಭಾರತೀಯ[೧]
Citizenshipಅಮೇರಿಕ [೨]
Educationಬಿ.ಟೆಕ್, ಎಂಎಸ್, ಎಂಬಿಎ
Alma materಐಐಟಿ ಖರಗಪುರ
ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯ
ವಾರ್ಟನ್ ಸ್ಕೂಲ್ ವಿಶ್ವವಿದ್ಯಾಲಯ
Employerಗೂಗಲ್
Spouseಅಂಜಲಿ ಪಿಚೈ

ಬಾಲ್ಯ ಮತ್ತು ವಿದ್ಯಾಭ್ಯಾಸ

ಪಿಚೈ ಮಧುರೆಯಲ್ಲಿ ೧೯೭೨ರಲ್ಲಿ ಜನಿಸಿದರು.[೮] ತಂದೆ ರಘುನಾಥ ಪಿಚೈ ಬ್ರಿಟಿಷ್ ಕಂಪನಿ ಜಿ.ಇ.ಸಿ ಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು.[೯][೧೦][೧೧]ಪಿಚೈ ಮದ್ರಾಸಿನಲ್ಲಿ ತನ್ನ ಬಾಲ್ಯ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಉನ್ನತ ವ್ಯಾಸಂಗಕ್ಕಾಗಿ ಖರಗ್‌ಪುರಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸೇರಿದರು[೧೨].ಅಲ್ಲಿಂದ ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರಸಿದ್ಧ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯವನ್ನು ಆಯ್ದುಕೊಂಡು ಅಲ್ಲಿ ಎಮ್.ಎಸ್. ಪದವಿಯನ್ನು ಪಡೆದರು. ಎಮ್.ಬಿ.ಎ ಪದವಿಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಸಿದ್ಧ ವಾರ್ಟನ್ ಸ್ಕೂಲ್‍ನಲ್ಲಿ ಪಡೆದರು[೧೩].ಅಲ್ಲಿ ಅವರು ಸಿಬೆಲ್ ಸ್ಕಾಲರ್[೧೪][೧೫] ಹಾಗೂ ಪಾಲ್ಮರ್ ಸ್ಕಾಲರ್ ಆಗಿ ಆಯ್ಕೆಯಾಗಿದ್ದರು.ಮೆಕಿನ್ಸೆ ಮತ್ತು ಕಂಪನಿ ಸಂಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನ ನಿರ್ವಹಣಾಧಿಕಾರಿಯಾಗಿ ತನ್ನ ವೃತ್ತಿ ಬದುಕನ್ನು ಪ್ರಾರಂಭಿಸಿದರು.[೧೬]

ಸುಂದರ್ ಪಿಚೈ ಮುಖ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು

ಈ ಬೆಳವಣಿಗೆ ಲಾರಿ ಪೇಜ್ ಮತ್ತು ಸರ್ಜಿ ಬ್ರಿನ್ ತಮ್ಮ ಪದವಿಯಿಂದ ಹೊರಗೆ ಬಂದಮೇಲೆ ಪಿಚೈ ಅವರಿಗೆ ಅಧಿಕಾರವನ್ನು ವಹಿಸಿಕೊಡಲಾಯಿತು.[೧೭]

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು