ಸೌಲ್

ಸೌಲ್ (ಕೇಳಿ  ) ದಕ್ಷಿಣ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರವಾಗಿದೆ. ೧೦ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೌಲ್ ನಗರವು ವಿಶ್ವದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂಚಿಯಾನ್ ಮತ್ತು ಗ್ಯಾಂಗಿ-ದೊ ಪ್ರದೇಶಗಳನ್ನು ಒಳಗೊಂಡಿರುವ ಸೌಲ್ ರಾಜಧಾನಿ ಪ್ರದೇಶವು ೨೩ ದಶಲಕ್ಷ ಜನರನ್ನು ಹೊಂದ್ದಿದು, ವಿಶ್ವದ ೨ನೆಯ ಅತ್ಯಂತ ದೊಡ್ಡ ಮಹಾನಗರ ಪ್ರದೇಶವಾಗಿದೆ.[೧] ದಕ್ಷಿಣ ಕೊರಿಯಾದ ಅರ್ಧದಷ್ಟು ಜನರು ಸೌಲ್ ರಾಜಧಾನಿ ಪ್ರದೇಶದಲ್ಲಿ ವಾಸಿಸುತ್ತಾರೆ. ಸೌಲ್ ನಗರವು ದಕ್ಷಿಣ ಕೊರಿಯಾದ ಮುಖ್ಯ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಸೌಲ್ ನಗರವನ್ನು ವಿಶೇಷ ನಗರವೆಂದು ಪರಿಗಣಿಸಿ ಇದರ ಆಡಳಿತವನ್ನು ದಕ್ಷಿಣ ಕೊರಿಯಾದ ಕೇಂದ್ರ ಸರ್ಕಾರವೆ ನಡೆಸುತ್ತದೆ.

ಸೌಲ್
서울
ಸೌಲ್ ವಿಶೇಷ ನಗರ
Flag of ಸೌಲ್
Official logo of ಸೌಲ್
ದಕ್ಷಿಣ ಕೊರಿಯಾದ ಭೂಪಟದಲ್ಲಿ ಸೌಲ್‌ನ ಸ್ಥಾನ
ದಕ್ಷಿಣ ಕೊರಿಯಾದ ಭೂಪಟದಲ್ಲಿ ಸೌಲ್‌ನ ಸ್ಥಾನ
ದೇಶದಕ್ಷಿಣ ಕೊರಿಯಾದಕ್ಷಿಣ ಕೊರಿಯಾ
ಪ್ರದೇಶಸೌಲ್ ರಾಜಧಾನಿ ಪ್ರದೇಶ
ಜಿಲ್ಲೆಗಳು೨೫
Government
 • Typeಸೌಲ್ ಸರ್ಕಾರ
 • ಮೇಯರ್ಓಹ್ ಸೇ-ಹೂನ್
Area
 • City೬೦೫.೨೫ km (೨೩೩.೬೯ sq mi)
Population
 (೨೦೦೭)
 • City೧,೦೪,೨೧,೭೮೨
 • Density೧೭,೨೧೯/km (೪೪,೬೦೦/sq mi)
 • Metro
೨,೪೪,೭೨,೦೬೩
ಹೂವುಫೋರ್ಸಿಥಿಯಾ
ಮರಗಿಂಕ್ಗೊ ಬಿಲೊಬ
ಪಕ್ಷಿಮ್ಯಾಗ್ಪೈ
Websiteseoul.go.kr

ಉಲ್ಲೇಖಗಳು

ಹೊರಗಿನ ಸಂಪರ್ಕಗಳು