ಹಾಯಿ ಹಡಗು

ಹಾಯಿ ಹಡಗು ಗಾಳಿಯ ಶಕ್ತಿಯನ್ನು ಬಳಸಲು ಮತ್ತು ಹಡಗನ್ನು ಮುನ್ನೂಕಲು ಒಂದು ಅಥವಾ ಹೆಚ್ಚು ಪಟಸ್ತಂಭಗಳ ಮೇಲೆ ಕಟ್ಟಿದ ಹಾಯಿಗಳನ್ನು ಬಳಸುತ್ತದೆ. ಹಾಯಿ ಹಡಗುಗಳನ್ನು ಮುನ್ನೂಕುವ ಅನೇಕ ಹಾಯಿ ಯೋಜನೆಗಳಿವೆ ಮತ್ತು ಇವು ಚೌಕಾಕಾರದ ಸಜ್ಜುವಿನ್ಯಾಸಗಳು ಅಥವಾ ಉದ್ದ ಸಾಲಿನಲ್ಲಿನ ಹಾಯಿಗಳನ್ನು ಬಳಸುತ್ತವೆ. ಕೆಲವು ಹಡಗುಗಳು ಪ್ರತಿ ಪಟಸ್ತಂಭದ ಮೇಲೆ ಚೌಕಾಕಾರದ ಹಾಯಿಗಳನ್ನು ಹೊರುತ್ತವೆ—ಇಕ್ಕೂವೆಯಿರುವ ಹಾಗೂ ಚೌಕವಾದ ಹಾಯಿಯುಳ್ಳ ಮತ್ತು ಮೂರು ಅಥವಾ ಹೆಚ್ಚು ಪಟಸ್ತಂಭಗಳಿರುವ ಚೌಕವಾದ ಹಾಯಿಯುಳ್ಳ ಹಡಗುಗಳು.[೧] ಇತರ ಹಡಗುಗಳು ಪ್ರತಿ ಕೂವೆಯ ಮೇಲೆ ಕೇವಲ ಚೌಕವಾದ ಹಾಯಿಗಳನ್ನು ಹೊಂದಿರುತ್ತವೆ—ಸ್ಕೂನರ್‌ಗಳು. ಏಷ್ಯಾದಲ್ಲಿ ಹಾಯಿ ಹಡಗುಗಳು ವಿಭಿನ್ನವಾಗಿ ಅಭಿವೃದ್ಧಿಯಾದವು. ಇಲ್ಲಿ ಜಂಕ್ ಮತ್ತು ಢೌ ಹಡಗುಗಳು ಪ್ರಮುಖವಾದವು—ಈ ನೌಕೆಗಳು ಆ ಸಮಯದ ಐರೋಪ್ಯ ಹಡಗುಗಳಲ್ಲಿಲ್ಲದ ನಾವೀನ್ಯಗಳನ್ನು ಒಳಗೂಡಿಸಿಕೊಂಡವು.

ಬಾರ್ಕ್—ಮೂರು ಕೂವೆಗಳ ಹಾಯಿ ಹಡಗು

ಉಲ್ಲೇಖಗಳು