ಹಾರ್ವರ್ಡ್ ವಿಶ್ವವಿದ್ಯಾನಿಲಯ

ಹಾರ್ವರ್ಡ್ ವಿಶ್ವವಿದ್ಯಾನಿಲಯ' (ಅಧಿಕೃತವಾಗಿ ದಿ ಪ್ರೆಸಿಡೆಂಟ್ ಅಂಡ್ ಫೆಲೋಸ್ ಆಫ್ ಹಾರ್ವರ್ಡ್ ಕಾಲೇಜ್ ) ಎಂಬುದು ಕೇಂಬ್ರಿಡ್ಜ್, ಮಸಾಚ್ಯೂಸೆಟ್ಸ್' ನಲ್ಲಿ ನೆಲೆಯಾಗಿರುವ ಒಂದು ಖಾಸಗಿ ವಿಶ್ವವಿದ್ಯಾಲಯ, ಜೊತೆಗೆ ಇದು ಐವಿ ಲೀಗ್ ನ ಸದಸ್ಯ. ಮಸಾಚ್ಯೂಸೆಟ್ಸ್ ವಸಾಹತು ಶಾಸನ ಸಭೆಯಿಂದ 1636ರಲ್ಲಿ ಸ್ಥಾಪನೆಗೊಂಡ ಹಾರ್ವರ್ಡ್ ಅಮೆರಿಕ ಸಂಯುಕ್ತ ಸಂಸ್ಥಾನದ ಮೊದಲ ಕಾರ್ಪೋರೇಶನ್ ಆಗಿರುವುದರ ಜೊತೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಉನ್ನತ ಶಿಕ್ಷಣಕ್ಕಿರುವ ಅತ್ಯಂತ ಹಳೆಯ ಸಂಸ್ಥೆಯಾಗಿದೆ.[೫]

Harvard University
ಧ್ಯೇಯVeritas[೧]
Motto in English
Truth
ಪ್ರಕಾರPrivate
ಸ್ಥಾಪನೆSeptember 8, 1636 (OS)
September 18, 1636 (NS)[೨]
ಧನ ಸಹಾಯUSD $25.62 billion[೩]
ಅಧ್ಯಕ್ಷರುDrew Gilpin Faust
ಶೈಕ್ಷಣಿಕ ಸಿಬ್ಬಂಧಿ
2,107[೪]
ಆಡಳಿತಾತ್ಮಕ ಸಿಬ್ಬಂಧಿ
2,497 non-medical
10,674 medical
ವಿದ್ಯಾರ್ಥಿಗಳು21,125
ಪದವಿ ಶಿಕ್ಷಣ7,181 total
6,655 College
526 Extension
ಸ್ನಾತಕೋತ್ತರ ಶಿಕ್ಷಣ14,044
ಸ್ಥಳCambridge, Massachusetts, U.S.
ಆವರಣUrban
380 acres (1.5 km2)
NewspaperThe Harvard Crimson
ColorsCrimson  
ಕ್ರೀಡಾಪಟುಗಳು41 Varsity Teams
Ivy League
NCAA Division I
Harvard Crimson
MascotCrimson
ಜಾಲತಾಣwww.harvard.edu
Harvard University logo

ವಿಶ್ವವಿದ್ಯಾಲಯವು ಪ್ರಸಕ್ತ ಹತ್ತು ಪ್ರತ್ಯೇಕ ಶೈಕ್ಷಣಿಕ ಘಟಕಗಳನ್ನು ಒಳಗೊಂಡಿದೆ.[೬] ಹಾರ್ವರ್ಡ್ ವಿಶ್ವದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಿಂತ ಅತ್ಯಂತ ಹೇರಳವಾಗಿ ಹಣಕಾಸಿನ ದತ್ತಿಯನ್ನು ಹೊಂದಿದೆ. ಇದು ಸೆಪ್ಟೆಂಬರ್ 2009ರ ಹೊತ್ತಿಗೆ $26 ಶತಕೋಟಿಯಷ್ಟಿತ್ತು.[೭] ಹಾರ್ವರ್ಡ್ ಹಲವಾರು ಮಾಧ್ಯಮಗಳು ಹಾಗೂ ಶೈಕ್ಷಣಿಕ ಶ್ರೇಯಾಂಕಗಳಲ್ಲಿ ಒಂದು ಪ್ರಮುಖ ಶೈಕ್ಷಣಿಕ ಸಂಸ್ಥೆಯೆಂದು ಸುಸಂಗತವಾಗಿ ಅಗ್ರಸ್ಥಾನವನ್ನು ಗಳಿಸಿದೆ.[೮][೯]

ಇತಿಹಾಸ

ವಸಾಹತು

ಹಾರ್ವರ್ಡ್‌ನ್ನು ಮಸಾಚ್ಯೂಸೆಟ್ಸ್ ಬೇ ಕಾಲೋನಿಯ ಗ್ರೇಟ್ ಹಾಗೂ ಜನರಲ್ ಕೋರ್ಟ್‌ನ ಸರ್ವಾನುಮತದಿಂದ 1636ರಲ್ಲಿ ಸ್ಥಾಪಿಸಲಾಯಿತು, ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಉನ್ನತ ಶಿಕ್ಷಣಕ್ಕಿರುವ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಯಾಗಿದೆ. ಆರಂಭದಲ್ಲಿ "ನ್ಯೂ ಕಾಲೇಜ್" ಅಥವಾ "ದಿ ಕಾಲೇಜ್ ಅಟ್ ನ್ಯೂ ಟೌನೆ" ಎಂದು ಕರೆಯಲಾಗಿದ್ದ ಸಂಸ್ಥೆಯನ್ನು ಹಾರ್ವರ್ಡ್ ಕಾಲೇಜ್ ಎಂದು ಮಾರ್ಚ್ 13, 1639ರಲ್ಲಿ ಮರುನಾಮಕರಣ ಮಾಡಲಾಯಿತು. ಸಂಸ್ಥೆಗೆ ಸೌತ್ವಾರ್ಕ್, ಸರ್ರಿಯ ಒಬ್ಬ ಯುವ ಇಂಗ್ಲಿಷ್ ದೀಕ್ಷಿತಪಾದ್ರಿ ಜಾನ್ ಹಾರ್ವರ್ಡ್ ಹೆಸರನ್ನು ಇರಿಸಲಾಗಿದೆ, ಈತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದ(ನಂತರ ಇದಕ್ಕೆ ಕೇಂಬ್ರಿಡ್ಜ್, ಮಸಾಚ್ಯೂಸೆಟ್ಸ್ ಎಂದು ಹೆಸರಿಸಲಾಯಿತು), ಈತ ಕಾಲೇಜಿಗೆ ತನ್ನ ಸಂಗ್ರಹದಿಂದ ನಾನೂರು ಪುಸ್ತಕಗಳನ್ನು ಹಾಗೂ £779 ಪೌಂಡ್ಸ್ ಸ್ಟರ್ಲಿಂಗ್ ನ್ನು ಉಯಿಲು ಬರೆದ, ಇದು ಆತನ ಎಸ್ಟೇಟ್ ನ ಅರ್ಧ ಭಾಗದಷ್ಟಿತ್ತು.[೧೦]

 ಹಾರ್ವರ್ಡ್ ಕಾಲೇಜಿನ ಕಾರ್ಪೋರೇಶನ್ ಅನ್ನು ರೂಪಿಸುವ ಸನ್ನದು 1650ರಲ್ಲಿ ಹೊರಬಿದ್ದಿತು.  ಆರಂಭಿಕ ವರ್ಷಗಳಲ್ಲಿ, ಕಾಲೇಜು ಹಲವು  ಪ್ಯೂರಿಟನ್ ಮಂತ್ರಿಗಳಿಗೆ ತರಬೇತಿ ನೀಡಿತು.[೧೧] ಕಾಲೇಜು ಇಂಗ್ಲಿಷ್ ವಿಶ್ವವಿದ್ಯಾಲಯದ ಮಾದರಿಯನ್ನು ಆಧರಿಸಿದ ಒಂದು ಸಾಂಪ್ರದಾಯಿಕ ಶೈಕ್ಷಣಿಕ ಕ್ರಮವನ್ನು ಒದಗಿಸಿಕೊಟ್ಟಿತು --ವಸಾಹತಿನ ಹಲವು ನಾಯಕರುಗಳು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಲಿತರು --ಆದರೆ ಅವರ ಶಿಕ್ಷಣವು ಸಾಮಾನ್ಯ ಬಳಕೆಯಲ್ಲಿದ್ದ ಪ್ಯುಅರಿಟನ್ (ಶುದ್ಧ ಸುಧಾರಕ) ತತ್ತ್ವದ ಜೊತೆಗೆ ಸಂಗತವಾಗಿತ್ತು. ಕಾಲೇಜು ಯಾವುದೇ ನಿರ್ದಿಷ್ಟ ಧಾರ್ಮಿಕ ಪಂಥದೊಂದಿಗೆ ಸಂಬಂಧವನ್ನು ಹೊಂದಿರಲಿಲ್ಲ, ಆದರೆ ಇಲ್ಲಿಂದ ಆರಂಭದಲ್ಲಿ ಪದವಿ ಪಡೆದ ಹಲವರು ನ್ಯೂ ಇಂಗ್ಲೆಂಡ್ ಉದ್ದಕ್ಕೂ ಇದ್ದ ಕಾಂಗ್ರಿಗೇಷನಲ್(ಸ್ಥಳೀಯ ಸ್ವಾಯತ್ತತೆಯ) ಹಾಗೂ ಯೂನಿಟೇರಿಅನ್ (ಏಕಮೂರ್ತಿವಾದದ) ಚರ್ಚುಗಳಲ್ಲಿ ದೀಕ್ಷಿತ ಪಾದ್ರಿಗಳಾದರು.[೧೨] ಇಸವಿ 1643ರಲ್ಲಿ ಪ್ರಕಟವಾದ ಒಂದು ಮೊದಲ ಕಿರುಹೊತ್ತಿಗೆಯು ಕಾಲೇಜಿನ ಅಸ್ತಿತ್ವದ ಬಗ್ಗೆ ಸಮರ್ಥನೆಯನ್ನು ನೀಡಿತು: "ಚರ್ಚ್‌ಗೆ ಅನಕ್ಷರಸ್ಥ ಮೇಲಧಿಕಾರಿಗಳು ಸಿಗಬಹುದೆಂಬ ಭಯದೊಂದಿಗೆ,ಕಲಿಕೆ ಯನ್ನು ಅಭಿವೃದ್ಧಿಪಡಿಸುವ ಮೂಲಕ ಅದನ್ನು ಭವಿಷ್ಯದ ಪೀಳಿಗೆಗೆ ಶಾಶ್ವತಗೊಳಿಸುವುದು;[೧೩]
ಪಾಲ್ ರೆವೆರೆ, 1767ರಲ್ಲಿ ಕೆತ್ತನೆ ಮಾಡಿದ ಹಾರ್ವರ್ಡ್ ಕಾಲೇಜು

ಪ್ರಮುಖ ಬಾಸ್ಟನ್ ದೈವಾಪಿತ ಇನ್ಕ್ರೀಸ್ ಮಥೆರ್ 1685 ರಿಂದ 1701ರವರೆಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ದೀಕ್ಷಿತ ಪಾದ್ರಿ ಸಹ ಆಗಿರದ ಜಾನ್ ಲೆವೆರೆಟ್ ಇಸವಿ 1708ರಲ್ಲಿ ಮೊದಲ ಅಧ್ಯಕ್ಷರಾದರು. ಇದು ಕಾಲೇಜಿಗೆ ಪ್ಯುಅರಿಟನಿಸಮ್(ಧಾರ್ಮಿಕ ವಿಷಯಗಳಲ್ಲಿ ಅತಿನಿಷ್ಠೆ)ನಿಂದ ಬೌದ್ಧಿಕ ಸ್ವಾತಂತ್ರ್ಯದೆಡೆಗೆ ತಿರುವು ನೀಡಿತು.

19ನೇ ಶತಮಾನ

ಧರ್ಮ ಹಾಗೂ ತತ್ತ್ವಚಿಂತನೆ

ಇಸವಿ 1805ರಲ್ಲಿ ಯೂನಿಟೇರಿಅನ್ ಗಳು ಹಾರ್ವರ್ಡ್ ನ ಒಡೆತನ ಸಂಪಾದಿಸಿದ್ದರ ಪರಿಣಾಮವಾಗಿ ಅಮೆರಿಕನ್ ಕಾಲೇಜ್‌ನಲ್ಲಿ ಲೌಕಿಕತೆಯು ಪರಿಣಾಮ ಬೀರಿತು. ಇಸವಿ 1850ರ ಹೊತ್ತಿಗೆ ಹಾರ್ವರ್ಡ್ "ಯೂನಿಟೇರಿಯನ್ ವ್ಯಾಟಿಕನ್" ಆಗಿ ಪರಿವರ್ತನೆ ಹೊಂದಿತ್ತು. "ಪ್ರಗತಿಪರ"ರು (ಯೂನಿಟೇರಿಯನ್‌ಗಳು) ಶ್ರೇಷ್ಠ ಸಂಯುಕ್ತತಾವಾದಿಗಳೊಂದಿಗೆ ಒಟ್ಟುಗೂಡುವುದರ ಜೊತೆಗೆ ತಮ್ಮ ಸಾಂಸ್ಕೃತಿಕ ಹಾಗೂ ರಾಜಕೀಯ ಅಧಿಕಾರಕ್ಕೆ ಆಧಾರವನ್ನು ಒದಗಿಸುವ ಸಲುವಾಗಿ ಖಾಸಗಿ ಸಮಾಜ ಹಾಗೂ ಸಂಸ್ಥೆಗಳ ಗುಂಪನ್ನು ರೂಪಿಸಲು ಪ್ರಾರಂಭಿಸಿದರು, ಈ ಚಳವಳಿಯು ಬಾಸ್ಟನ್ ಬ್ರಾಹ್ಮಿನ್ ವರ್ಗದ ಹುಟ್ಟನ್ನು ಪೂರ್ವಭಾವಿಯಾಗಿ ಕಲ್ಪಿಸಿತು. ಮತ್ತೊಂದು ಭಾಗದಲ್ಲಿ, ಮತಧರ್ಮಶಾಸ್ತ್ರದ ಸಂಪ್ರದಾಯವಾದಿಗಳು ಬಹುವಿಧದ ಸಾರ್ವಜನಿಕ ರಂಗದ ಮೂಲಕ ಮುಕ್ತ ಚರ್ಚೆ ಮತ್ತು ಪ್ರಜಾಪ್ರಭುತ್ವದ ಆಡಳಿತ ನಿರ್ವಹಣೆ ಕುರಿತು ವಾದಿಸಲು ಪತ್ರಿಕಾ ಮಾಧ್ಯಮವನ್ನು ಬಳಸಿಕೊಂಡಿತು. ಪ್ರಗತಿಪರರ ಈ ಚಳವಳಿಯನ್ನು ಕಾಂಗ್ರೆಗೇಷನಲಿಸ್ಟ್(ಸ್ಥಳೀಯ ಸಭಾಪದ್ಧತಿ) ಸಂಪ್ರದಾಯ ಹಾಗೂ ಗಣರಾಜ್ಯ ರಾಜಕೀಯ ತತ್ತ್ವಗಳಿಗೆ ವಿರುದ್ಧವಾದ ಒಂದು ಸಾಂಸ್ಕೃತಿಕ ಮಿತಜನತಂತ್ರವನ್ನು ರೂಪಿಸುವ ಒಂದು ಪ್ರಯತ್ನವೆಂಬ ದೃಷ್ಟಿಕೋನದಲ್ಲಿ ನೋಡಲಾಯಿತು.[೧೪]

ಇಸವಿ 1846ರಲ್ಲಿ, ಲೂಯಿಸ್ ಅಗಸ್ಸಿಜ್‌ನ ಪ್ರಕೃತಿ ಚರಿತ್ರೆಯ ಉಪನ್ಯಾಸಗಳು ನ್ಯೂಯಾರ್ಕ್ ಹಾಗೂ ಹಾರ್ವರ್ಡ್ ಕಾಲೇಜ್‌ನ ಆವರಣ ಎರಡರಲ್ಲೂ ಪ್ರಶಂಸೆಗೆ ಪಾತ್ರವಾಯಿತು. ಅಗಸ್ಸಿಜ್ ಮಾರ್ಗವು ನಿಸ್ಸಂಶಯವಾಗಿ ಆದರ್ಶವಾದದಿಂದ ಕೂಡಿತ್ತು ಹಾಗೂ ಅಮೆರಿಕನ್ನರು 'ಡಿವೈನ್ ನೇಚರ್ ನಲ್ಲಿನ ಪಾಲ್ಗೊಳ್ಳುವಿಕೆಯ' ಜೊತೆಗೆ 'ಬೌದ್ಧಿಕ ಅಸ್ತಿತ್ವಗಳ' ತಿಳಿವಳಿಕೆಯ ಸಾಧ್ಯತೆಯನ್ನು ನಿಜವೆಂದು ಭಾವಿಸಿದರು. ಅಗಸ್ಸಿಜ್ ನ ವಿಜ್ಞಾನದ ಎಡೆಗಿನ ದೃಷ್ಟಿಕೋನವು ಅಂತರ್ಜ್ಞಾನದ ಅವಲೋಕನದಿಂದ ಕಲೆತಿತ್ತು ಜೊತೆಗೆ ವ್ಯಕ್ತಿಯು ಎಲ್ಲ ವಿದ್ಯಮಾನಗಳಲ್ಲಿ 'ದೈವಿಕ ಯೋಜನೆ'ಯನ್ನು ಗ್ರಹಿಸುವ ಬಗ್ಗೆ ಕಲ್ಪನೆಯನ್ನು ಹೊಂದಿತ್ತು. ಜೀವ-ಸ್ವರೂಪಗಳನ್ನು ವಿವರಿಸುವ ವಿಷಯಕ್ಕೆ ಬಂದಾಗ, ಅಗಸ್ಸಿಜ್ ತನ್ನ ಸಾಕ್ಷ್ಯಾಧಾರಕ್ಕಾಗಿ ಮೂಲರೂಪವೊಂದರ ಆಧಾರದ ಮೇಲೆ ವಸ್ತುಗಳ ಆಕಾರವನ್ನು ಅವಲಂಬಿಸಿದ್ದರು. ಜ್ಞಾನದ ಬಗೆಗಿನ ಈ ದ್ವಂದ್ವ ದೃಷ್ಟಿಕೋನವು, ಸ್ಕಾಟಿಷ್ ತತ್ತ್ವಜ್ಞಾನಿಗಳಾದ ಥಾಮಸ್ ರೀಡ್ ಹಾಗೂ ದುಗಲ್ಡ್ ಸ್ಟೀವರ್ಟ್ ರ ಕಾಮನ್ ಸೆನ್ಸ್ ರಿಯಾಲಿಸಂನ ಬೋಧನೆಗಳಿಗೆ ಹೊಂದಿಕೊಂಡಿದೆ. ಇವರ ಕೃತಿಗಳು ಆ ಅವಧಿಯಲ್ಲಿ ಹಾರ್ವರ್ಡ್ ಪಠ್ಯಕ್ರಮದ ಒಂದು ಭಾಗವಾಗಿತ್ತು. ಪ್ಲೇಟೊಗೆ ಸರಿಸಮನಾಗಿ ಎತ್ತರಕ್ಕೇರುವ ಅಗಾಸಿಜ್ ಪ್ರಯತ್ನಗಳ ಜನಪ್ರಿಯತೆಯು ಬಹುಶಃ ಹಾರ್ವರ್ಡ್ ವಿದ್ಯಾರ್ಥಿಗಳು ಒಡ್ಡಿಕೊಂಡ ಇತರ ಬರವಣಿಗೆಗಳಿಂದ ಹುಟ್ಟಿಕೊಂಡಿರಬಹುದು, ಈ ಬರವಣಿಗೆಗಳಲ್ಲಿ ರಾಲ್ಫ್ ಕುಡ್ವರ್ತ್, ಜಾನ್ ನೋರ್ರಿಸ್ ಹಾಗೂ ಒಂದು ಭಾವಪ್ರಧಾನ ಶೈಲಿಯಲ್ಲಿ ಸ್ಯಾಮ್ಯುಯೆಲ್ ಕಾಲೆರಿಡ್ಜ್‌ನ ಪ್ಲೇಟೊ ಕುರಿತ ಬರಹಗಳು ಸೇರಿವೆ. ಹಾರ್ವರ್ಡ್‌ನ ಗ್ರಂಥಾಲಯ ದಾಖಲೆಗಳು ಪ್ಲೇಟೊನ ಹಾಗೂ ಅವನ ಪೂರ್ವ ಆಧುನೀಕತೆ ಹಾಗೂ ಭಾವಪ್ರಧಾನ ಶೈಲಿಯ ಅನುಯಾಯಿಗಳ ಬರವಣಿಗೆಯನ್ನು ಸುಮಾರು 19ನೇ ಶತಮಾನದ ಸಂದರ್ಭದಲ್ಲಿ ಬಹುತೇಕ ನಿಯಮಿತವಾಗಿ ಹೆಚ್ಚು ಪ್ರಾಯೋಗಿಕ ಹಾಗೂ ಹೆಚ್ಚು ತಾರ್ಕಿಕ ದೈವವಾದಿ ಸ್ಕಾಟಿಷ್ ಶಾಲೆಯಲ್ಲಿ 'ಅಧಿಕೃತ ತತ್ತ್ವಚಿಂತನೆ'ಯಾಗಿ ಅಭ್ಯಾಸ ಮಾಡಿದ್ದರೆಂದು ಬಹಿರಂಗ ಪಡಿಸುತ್ತದೆ.[೧೫]

ಚಾರ್ಲ್ಸ್ W. ಎಲಿಯಟ್, ಅಧ್ಯಕ್ಷ 1869-1909, ಕ್ರೈಸ್ತ ಧರ್ಮದ ಅನುಕೂಲಕರ ಸ್ಥಾನವನ್ನು ಪಠ್ಯಕ್ರಮದಿಂದ ನಿವಾರಿಸಿ, ವಿದ್ಯಾರ್ಥಿಯ ಸ್ವ-ಮಾರ್ಗದರ್ಶನಕ್ಕೆ ಮುಕ್ತಗೊಳಿಸಿದರು. ಅಮೆರಿಕನ್ ಉನ್ನತ ಶಿಕ್ಷಣದ ಲೌಕಿಕತೆಯಲ್ಲಿ ಎಲಿಯಟ್ ಅತ್ಯಂತ ನಿರ್ಣಾಯಕ ವ್ಯಕ್ತಿಯೆನಿಸಿದ್ದರೂ, ಅವರು ಶಿಕ್ಷಣವನ್ನು ಲೌಕಿಕಗೊಳಿಸುವ ಇಚ್ಛೆಯಿಂದಷ್ಟೇ ಅಲ್ಲದೆ ದಾರ್ಶನಿಕ ಯೂನಿಟೇರಿಯನ್ ನಂಬಿಕೆಗಳಿಂದಲೂ ಪ್ರೇರೇಪಿತರಾಗಿದ್ದರು. ವಿಲ್ಲಿಯಮ್ ಎಲ್ಲೆರಿ ಚಾನ್ನಿಂಗ್ ಹಾಗೂ ರಾಲ್ಫ್ ವಾಲ್ಡೋ ಎಮರ್ಸನ್ ರಿಂದ ಹುಟ್ಟಿಕೊಂಡ ಈ ನಂಬಿಕೆಗಳು ಮಾನವ ಪ್ರಕೃತಿಯ ಯೋಗ್ಯತೆ ಹಾಗೂ ಘನತೆಯ ಮೇಲೆ, ಸತ್ಯವನ್ನು ಗ್ರಹಿಸುವ ಪ್ರತಿ ವ್ಯಕ್ತಿಯ ಸಾಮರ್ಥ್ಯ ಹಾಗೂ ಅವನ ಹಕ್ಕು, ಜೊತೆಗೆ ಪ್ರತಿ ವ್ಯಕ್ತಿಯಲ್ಲಿ ಅಂತಸ್ಥವಾಗಿರುವ ದೇವರ ಬಗ್ಗೆ ಕೇಂದ್ರೀಕರಿಸಿತ್ತು.[೧೬]

20ನೇ ಶತಮಾನ

ಇಪ್ಪತ್ತನೆ ಶತಮಾನದ ಅವಧಿಯಲ್ಲಿ, ಹಾರ್ವರ್ಡ್‌ನ ಅಂತಾರಾಷ್ಟ್ರೀಯ ಖ್ಯಾತಿಯು ಅಂಕುರಿಸಿದ ಒಂದು ಶಕ್ತಿಯಂತೆ ಬೆಳೆಯಿತು ಜೊತೆಗೆ ಪ್ರಖ್ಯಾತ ಪ್ರಾಧ್ಯಾಪಕರುಗಳು ವಿಶ್ವವಿದ್ಯಾಲಯದ ಭವಿಷ್ಯವನ್ನು ವಿಸ್ತರಿಸಿದರು. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬಾಹುಳ್ಯವು ಹೊಸ ಪದವಿ ಶಾಲೆಗಳ ಸೇರ್ಪಡಿಕೆಯಿಂದ ಹಾಗೂ ಪದವಿಪೂರ್ವ ಯೋಜನೆಗಳ ವಿಸ್ತರಣೆಯಿಂದ ಮುಂದುವರೆಯಿತು. ರಾಡ್‌ಕ್ಲಿಫ್ ಕಾಲೇಜ್ ನ್ನು 1879ರಲ್ಲಿ ಹಾರ್ವರ್ಡ್ ಕಾಲೇಜ್ ನ ಸಹೋದರ ಶಾಲೆಯಾಗಿ ಸ್ಥಾಪಿಸಲಾಯಿತು, ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಹಿಳೆಯರ ಒಂದು ಪ್ರಮುಖ ಶಾಲೆಯಾಗಿತ್ತು.

ಅರ್ಹತಾಶಾಹಿ

ಜೇಮ್ಸ್ ಬ್ರಯಂಟ್ ಕಾನಂಟ್ (ಅಧ್ಯಕ್ಷ, 1933–1953) ಸೃಜನಾತ್ಮಕತೆ ವಿದ್ಯಾರ್ಥಿ ವೇತನವನ್ನು ಪುನಶ್ಚೇತನಗೊಳಿಸಿ ಸಂಶೋಧನಾ ಸಂಸ್ಥೆಗಳ ನಡುವೆ ಅದರ ಪ್ರಾಮುಖ್ಯತೆಗೆ ಖಾತರಿ ನೀಡಲು ಉದ್ದೇಶಿಸಿದರು. ಅವರು ಉನ್ನತ ಶಿಕ್ಷಣವನ್ನು ಶ್ರೀಮಂತರಿಗೆ ನೀಡುವ ಒಂದು ಅರ್ಹತೆಗಿಂತ ಹೆಚ್ಚಾಗಿ ಪ್ರತಿಭಾವಂತರಿಗೆ ನೀಡುವ ಅವಕಾಶದ ಒಂದು ಸಾಧನವಾಗಿ ಮನಗಂಡರು, ಈ ರೀತಿಯಾಗಿ ಕಾನಂಟ್ ಪ್ರತಿಭಾವಂತ ಯುವಜನರನ್ನು ಗುರುತಿಸುವ, ನೇಮಕ ಮಾಡುವ, ಅವರಿಗೆ ಸಹಾಯ ಮಾಡುವಂತಹ ಯೋಜನೆಗಳನ್ನು ರೂಪಿಸಿದರು. ಇಸವಿ 1943ರಲ್ಲಿ, ಮಾಧ್ಯಮಿಕ ಹಾಗೂ ಕಾಲೇಜು ಮಟ್ಟದಲ್ಲಿ ಸಾಮಾನ್ಯ ಶಿಕ್ಷಣವು ಹೇಗಿರಬೇಕೆಂಬ ಒಂದು ಪ್ರಮಾಣಭೂತ ಹೇಳಿಕೆಯನ್ನು ನೀಡುವಂತೆ ಬೋಧಕವರ್ಗವನ್ನು ಕೋರಿಕೊಂಡರು. ಪ್ರತಿಕ್ರಿಯೆಯಾಗಿ ಬಂದ ವರದಿ ಯನ್ನು 1945ರಲ್ಲಿ ಪ್ರಕಟಿಸಲಾಯಿತು, ಇದು 20ನೇ ಶತಮಾನದ ಅಮೆರಿಕನ್ ಶಿಕ್ಷಣ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಪ್ರಣಾಳಿಕೆಗಳಲ್ಲಿ ಒಂದೆನಿಸಿದೆ.[೧೭]

1945-1960ರ ನಡುವಿನ ಪ್ರವೇಶಾತಿ ನೀತಿಗಳನ್ನು ಹೆಚ್ಚು ವೈವಿಧ್ಯದ ಅಭ್ಯರ್ಥಿಗಳ ಗುಂಪುಗಳಿಂದ ವಿದ್ಯಾರ್ಥಿಗಳನ್ನು ಸೆಳೆಯಲು ಮುಕ್ತಗೊಳಿಸಲಾಯಿತು. ನ್ಯೂ ಇಂಗ್ಲೆಂಡ್ ಪ್ರಾಥಮಿಕ ಶಾಲೆಗಳ ಹಳೆಯ ಶ್ರೀಮಂತ ವಿದ್ಯಾರ್ಥಿಗಳಿಂದ ಬಹುತೇಕವಾಗಿ ಸೆಳೆಯದೇ ಪದವಿ ಪೂರ್ವ ಕಾಲೇಜನ್ನು ಸಾರ್ವಜನಿಕ ಶಾಲೆಗಳ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮುಕ್ತವಾಗಿರಿಸಲಾಯಿತು; ಹೆಚ್ಚಿನ ಸಂಖ್ಯೆಯಲ್ಲಿ ಯಹೂದಿಗಳು ಹಾಗೂ ಕ್ಯಾಥೊಲಿಕ್ ಪಂಥದವರಿಗೆ ಪ್ರವೇಶ ನೀಡಲಾಯಿತು, ಆದರೆ ಕಡಿಮೆ ಸಂಖ್ಯೆಯಲ್ಲಿ ನಿಗ್ರೋಗಳು, ಹಿಸ್ಪಾನಿಕರು ಅಥವಾ ಏಶಿಯನ್ ಜನರಿಗೆ ಪ್ರವೇಶವನ್ನು ಕಲ್ಪಿಸಿ ಕೊಡಲಾಯಿತು.[೧೮]

ಮಹಿಳೆಯರು

ಮಹಿಳೆಯರು ರಾಡ್‌ಕ್ಲಿಫ್‌ನಲ್ಲಿ ಪ್ರತ್ಯೇಕವಾಗಿ ಉಳಿದರು. ಆದಾಗ್ಯೂ ಹೆಚ್ಚೆಚ್ಚು ವಿದ್ಯಾರ್ಥಿಗಳು ಹಾರ್ವರ್ಡ್ ತರಗತಿಗಳಲ್ಲಿ ಅಭ್ಯಾಸ ಮಾಡಿದರು. ಅದೇನೇ ಇದ್ದರೂ, ಹಾರ್ವರ್ಡ್ ನ ಪದವಿ ಪೂರ್ವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಿನವರು ಪುರುಷರಾಗಿದ್ದರು, ರಾಡ್‌ಕ್ಲಿಫ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ಮಹಿಳೆಗೆ ಸಮನಾಗಿ ನಾಲ್ಕು ಪುರುಷರು ಹಾರ್ವರ್ಡ್ ಕಾಲೇಜ್‌ನಲ್ಲಿ ಅಭ್ಯಸಿಸುತ್ತಿದ್ದರು. ಕಳೆದ 1977ರಲ್ಲಿ ಹಾರ್ವರ್ಡ್ ಹಾಗೂ ರಾಡ್‌ಕ್ಲಿಫ್ ಪ್ರವೇಶಾತಿಗಳ ವಿಲೀನತೆಗೆ ಅನುಸಾರವಾಗಿ ಪದವಿಪೂರ್ವ ಮಹಿಳಾ ವಿದ್ಯಾರ್ಥಿಗಳ ಪ್ರಮಾಣವು ಏಕಪ್ರಕಾರವಾಗಿ ಅಧಿಕಗೊಂಡಿತು, ಇದು ಅಮೆರಿಕ ಸಂಯುಕ್ತ ಸಂಸ್ಥಾನದ ಉನ್ನತ ಶಿಕ್ಷಣದುದ್ದಕ್ಕೂ ಇದ್ದ ಪ್ರವೃತ್ತಿಯನ್ನು ಪ್ರತಿಬಿಂಬಿಸಿತು. ಕಾಲೇಜು ಆರಂಭವಾಗುವ ಮೊದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಇತರ ಗುಂಪುಗಳಿಗೆ ಪ್ರವೇಶಾನುಮತಿ ನೀಡಿದ ಹಾರ್ವರ್ಡ್‌ನ ಪದವಿ ಶಾಲೆಗಳು, ಯುದ್ಧಾನಂತರದ ಅವಧಿಯಲ್ಲಿ ಹೆಚ್ಚಿನ ವೈವಿಧ್ಯತೆಗೆ ಒಳಪಟ್ಟಿತು.

ಇಸವಿ 1879ರಲ್ಲಿ "ಹಾರ್ವರ್ಡ್ ಅನೆಕ್ಸ್ ಫಾರ್ ವಿಮೆನ್" ಎಂಬ ಹೆಸರಿನಲ್ಲಿ ಸ್ಥಾಪನೆಯಾದ ರಾಡ್‌ಕ್ಲಿಫ್ ಕಾಲೇಜ್,[೧೯]ಕಳೆದ 1999ರಲ್ಲಿ, ಅಧಿಕೃತವಾಗಿ ಹಾರ್ವರ್ಡ್ ವಿಶ್ವವಿದ್ಯಾನಿಲಯದೊಂದಿಗೆ ಲೀನವಾಗಿ, ರಾಡ್‌ಕ್ಲಿಫ್ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್‌ಡ್ ಸ್ಟಡಿ ಹೆಸರಿಂದ ಪರಿಚಿತವಾಯಿತು.

ರಾಡ್‌ಕ್ಲಿಫ್‌ನ ಮುಖ್ಯಸ್ಥರಾಗಿರುವ ದ್ರೆವ್ ಗಿಲ್ಪಿನ್ ಫೌಸ್ಟ್ (1947- ), 2007ರಲ್ಲಿ ಮೊದಲ ಮಹಿಳಾ ಅಧ್ಯಕ್ಷೆಯಾದರು.

ಹೊಲ್ಯೋಕೆ ಸೆಂಟರ್‌ನಿಂದ ಕಂಡುಬರುವ ಹಾರ್ವರ್ಡ್‌ನ ಪ್ರಾಂಗಣ

ಉದಾರವಾದಿ ಸಿದ್ಧಾಂತ

ಹಾರ್ವರ್ಡ್ ಹಾಗೂ ಅದರ ಅಂಗ ಸಂಸ್ಥೆಗಳು, ಇತರ ಹಲವು ಅಮೆರಿಕನ್ ವಿಶ್ವವಿದ್ಯಾಲಯಗಳಂತೆ,[೨೦][೨೧] ರಾಜಕೀಯವಾಗಿ ಉದಾರವಾದಿಗಳೆಂದು ಪರಿಗಣಿಸಲಾಗುತ್ತದೆ (ಕೇಂದ್ರದ ಎಡಕ್ಕೆ).[೨೨] ಕನ್ಸರ್ವೇಟಿವ್ ಬರಹಗಾರ ವಿಲ್ಲಿಯಮ್ F. ಬಕ್ಲೆಯ್, Jr., ತಾವು ಹಾರ್ವರ್ಡ್ ಬೋಧಕ ವರ್ಗಕ್ಕಿಂತ ಹೆಚ್ಚಾಗಿ ಬಾಸ್ಟನ್ ಫೋನ್ ಪುಸ್ತಕದಲ್ಲಿರುವ ಮೊದಲ 2000 ಹೆಸರುಗಳ ನಿಯಂತ್ರಣಕ್ಕೆ ಒಳಪಡುವುದಾಗಿ ಕುಹಕವಾಡುತ್ತಾರೆ,[೨೩] ರಿಚರ್ಡ್ ನಿಕ್ಸನ್, 1970ರ ಸುಮಾರಿಗೆ ಹಾರ್ವರ್ಡ್ ನ್ನು "ಕ್ರೆಮ್ಲಿನ್ ಆನ್ ದಿ ಚಾರ್ಲ್ಸ್" ಎಂದು ಸೂಚಿಸುತ್ತಾರೆ,[೨೪] ಹಾಗೂ ಉಪಾಧ್ಯಕ್ಷ ಜಾರ್ಜ್ H.W. ಬುಶ್ ಹಾರ್ವರ್ಡ್‌ನ ಉದಾರವಾದಿ ನೀತಿಯ ಬಗ್ಗೆ 1988ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟೀಕಿಸಿದರು.[೨೫] ಬೋಧಕವರ್ಗದಲ್ಲಿ ರಿಪಬ್ಲಿಕನ್ ಪಕ್ಷದವರು ಒಂದು ಸಣ್ಣ ಪ್ರಮಾಣದಲ್ಲಿದ್ದರು, ಜೊತೆಗೆ ವಿಶ್ವವಿದ್ಯಾಲಯವು ರಿಸರ್ವ್ ಆಫೀಸರ್ಸ್' ಟ್ರೇನಿಂಗ ಕಾರ್ಪ್ಸ್ ನ (ROTC) ಯೋಜನೆಗೆ ಅಧಿಕೃತವಾಗಿ ಮಾನ್ಯತೆ ನೀಡಲು ನಿರಾಕರಿಸುತ್ತದೆ - ಇದರಿಂದ ವಿದ್ಯಾರ್ಥಿಗಳು ಸಮೀಪವಿರುವ MITಯ ಮೂಲಕ ಅಧಿಕೃತ ದಾಖಲೆಯನ್ನು ಪಡೆಯುವಂತಾಯಿತು.[೨೬] ದಿ ಹಾರ್ವರ್ಡ್ ಕಾಲೇಜ್ ಹ್ಯಾಂಡ್ ಬುಕ್ ವಿವರಿಸುವಂತೆ, "ತಿಳಿದ ಸಲಿಂಗಕಾಮಿನಿಯರು, ಸಲಿಂಗಕಾಮಿಗಳು ಹಾಗೂ ಉಭಯಲಿಂಗಿ ವ್ಯಕ್ತಿಗಳಿಗೆ ROTCಗೆ ಪ್ರವೇಶಾತಿಯನ್ನು ನೀಡದಿರುವ ಹಾಗೂ ಅವರನ್ನು ಸೇವೆಯಿಂದ ವಜಾಗೊಳಿಸುವ ಪ್ರಸ್ತುತ ಫೆಡರಲ್ ನೀತಿಯು ಹಾರ್ವರ್ಡ್‌ನ ಮೌಲ್ಯಕ್ಕೆ ಅಸಂಗತವಾಗಿದೆ. ಇದನ್ನು ತಾರತಮ್ಯ ಕುರಿತ ತನ್ನ ನೀತಿಯಲ್ಲಿ ವಿವರಿಸಿದೆ." [೨೭]

ಅಧ್ಯಕ್ಷ ಲಾರೆನ್ಸ್ ಸಮ್ಮರ್ಸ್ 2006ರಲ್ಲಿ ತಮ್ಮ ಅಧ್ಯಕ್ಷಗಿರಿಗೆ ರಾಜಿನಾಮೆ ನೀಡಿದರು. ಅವರು ರಾಜಿನಾಮೆಯನ್ನು, ಹಾರ್ವರ್ಡ್ ಫ್ಯಾಕಲ್ಟಿ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಯೋಜಿಸಿದ್ದ ಎರಡನೇ ಅವಿಶ್ವಾಸ ಮತ ಗೊತ್ತುವಳಿಗೆ ಒಂದು ವಾರ ಮುಂಚೆಯೇ ಪ್ರಕಟಿಸಿದರು. ಮಾಜಿ ಅಧ್ಯಕ್ಷ ಡೆರೆಕ್ ಬೊಕ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. GSASನಲ್ಲಿ ಪದವಿ ತರಗತಿಗಳಿಗೆ ಹಾಗೂ ಪದವಿಪೂರ್ವ ತರಗತಿಗಳಿಗೆ ಬೋಧಿಸುವ ಹಾರ್ವರ್ಡ್ ನ ಕಲಾ ಹಾಗೂ ವಿಜ್ಞಾನ ವಿಭಾಗಗಳ ಬೋಧಕವರ್ಗದ ಸದಸ್ಯರು, ಸಮ್ಮರ್ಸ್ ನಾಯಕತ್ವದಲ್ಲಿ ಮಾರ್ಚ್ 15, 2005ರಲ್ಲಿ 218-185 ಮತಗಳೊಂದಿಗೆ, 18 ಜನರ ಗೈರುಹಾಜರಿಯಲ್ಲಿ "ಲ್ಯಾಕ್ ಆಫ್ ಕಾನ್ಫಿಡೆನ್ಸ್" ಗೊತ್ತುವಳಿಗೆ ಈ ಮುಂಚೆ ಅನುಮೋದನೆ ನೀಡಿದ್ದರು. 2005ನೇ ಗೊತ್ತುವಳಿಯಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಲಿಂಗ ಅಂಕಿಅಂಶಗಳನ್ನು ರಹಸ್ಯ ಶೈಕ್ಷಣಿಕ ಸಭೆಯಲ್ಲಿ ನಡೆಸಿ ನಂತರ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದರಿಂದ ಉಂಟಾದ ಪರಿಣಾಮಗಳ ಬಗ್ಗೆ ಟೀಕೆಗಳಿಂದ ಆವರಿಸಿತ್ತು.[೨೮] ಇದಕ್ಕೆ ಪ್ರತಿಕ್ರಿಯೆಯಾಗಿ, ಸಮ್ಮರ್ಸ್ ಈ ವಿಷಯದ ಅಧ್ಯಯನಕ್ಕೆ ಎರಡು ಸಮಿತಿಗಳನ್ನು ಕರೆದರು: ದಿ ಟಾಸ್ಕ್ ಫೋರ್ಸ್ ಆನ್ ವಿಮೆನ್ ಫ್ಯಾಕಲ್ಟಿ ಹಾಗೂ ದಿ ಟಾಸ್ಕ್ ಫೋರ್ಸ್ ಆನ್ ವಿಮೆನ್ ಇನ್ ಸೈನ್ಸ್ ಅಂಡ್ ಇಂಜಿನಿಯರಿಂಗ್. ಅವರ ಶಿಫಾರಸುಗಳು ಹಾಗೂ ಇತರ ಉದ್ದೇಶಿತ ಸುಧಾರಣೆಗಳಿಗೆ $50 ದಶಲಕ್ಷ ಹಣದ ಭರವಸೆಯನ್ನು ಸಹ ಸಮ್ಮರ್ಸ್ ನೀಡಿದರು. ದ್ರೆವ್ ಗಿಲ್ಪಿನ್ ಫೌಸ್ಟ್ ಹಾರ್ವರ್ಡ್ ನ 28ನೇ ಅಧ್ಯಕ್ಷೆ. ಒಬ್ಬ ಅಮೆರಿಕನ್ ಇತಿಹಾಸಜ್ಞೆ, ರಾಡ್‌ಕ್ಲಿಫ್ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿಯ ಮಾಜಿ ಮುಖ್ಯಸ್ಥೆ, ಹಾಗೂ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಲಿಂಕನ್ ಪ್ರೊಫೆಸರ್ ಆಫ್ ಹಿಸ್ಟರಿ ಆಗಿದ್ದ ಫೌಸ್ಟ್, ವಿಶ್ವವಿದ್ಯಾಲಯದ ಇತಿಹಾಸದ ಮೊದಲ ಮಹಿಳಾ ಅಧ್ಯಕ್ಷೆ.[೨೯][೩೦]

ಆಡಳಿತ ಮತ್ತು ಸಂಘಸಂಸ್ಥೆಗಳು

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಆವರಣ (ಸುಮಾರು 1938)

ಪ್ರಾಧ್ಯಾಪಕರುಗಳು, ಉಪನ್ಯಾಸಕರು, ಹಾಗೂ ಶಿಕ್ಷಕರನ್ನು ಒಳಗೊಂಡಂತೆ ಸರಿಸುಮಾರು 2,110 ಸಂಖ್ಯೆಯ ಬೋಧಕವರ್ಗವು 2008-09ರ ಶೈಕ್ಷಣಿಕ ವರ್ಷದಲ್ಲಿದ್ದರು,[೩೧] ಜೊತೆಗೆ 6,715 ಪದವಿಪೂರ್ವ ಹಾಗೂ 12,424 ಪದವಿ ವಿದ್ಯಾರ್ಥಿಗಳಿದ್ದರು.[೩೨] ಶಾಲೆಯ ಸಮವಸ್ತ್ರವು ಕ್ರಿಮ್ಸನ್ (ಕಡುಗೆಂಪು) ಬಣ್ಣದ್ದಾಗಿದ್ದು, ಈ ಬಣ್ಣದ ಹೆಸರನ್ನು ಹಾರ್ವರ್ಡ್ ಕ್ರೀಡಾ ತಂಡವು ಇರಿಸಿಕೊಂಡಿದೆ ಹಾಗೂ ದಿನಪತ್ರಿಕೆ, ದಿ ಹಾರ್ವರ್ಡ್ ಕ್ರಿಮ್ಸನ್ ಎಂಬುದಾಗಿದೆ. ಈ ಬಣ್ಣವನ್ನು ಅನಧಿಕೃತವಾಗಿ ಒಂದು ವಿದ್ಯಾರ್ಥಿ ಘಟಕವು 1857ರಲ್ಲಿ ಮತದಾನದ ಮೂಲಕ ಅಳವಡಿಸಿಕೊಂಡಿತು.(ಮಜೆಂಟ(ಕೆನ್ನೇರಿಳೆ ಬಣ್ಣ)ಬಣ್ಣಕ್ಕೆ ಆದ್ಯತೆಯಾಗಿ), ಆದಾಗ್ಯೂ ಕೆಂಪು ಬಣ್ಣದ ಛಾಯೆನ್ನು ಉಳ್ಳ ಬಣ್ಣವನ್ನು 1858ರಷ್ಟು ಹಿಂದೆ ವಿದ್ಯಾರ್ಥಿ ಸಂಘದಲ್ಲಿ ಕಂಡುಬಂದಿತ್ತು. ಚಾರ್ಲ್ಸ್ ವಿಲ್ಲಿಯಮ್ ಎಲಿಯಟ್, ಕಾಲೇಜಿನ ಯುವ ಪದವೀಧರ ನಂತರದಲ್ಲಿ ಹಾರ್ವರ್ಡ್ ನ 21ನೇ ಹಾಗೂ ಅತ್ಯಂತ ದೀರ್ಘಾವಧಿಗೆ ಸೇವೆಯನ್ನು ಸಲ್ಲಿಸಿದ ಅಧ್ಯಕ್ಷರಾದರು (1869–1909), ಇವರು ತಮ್ಮ ವಿದ್ಯಾರ್ಥಿಗಳಿಗೆ ಕೆಂಪು ಬಣ್ಣದ ಬಂಡಾನಾವನ್ನು ಖರೀದಿಸಿದರು, ಇದರಿಂದಾಗಿ ವಿಹಾರನೌಕಾಪಂದ್ಯದಲ್ಲಿ ವೀಕ್ಷಕರು ಇವರನ್ನು ಸುಲಭವಾಗಿ ಗುರುತಿಸಬಹುದಿತ್ತು.

ಹಾರ್ವರ್ಡ್ ಪ್ರಾಂಗಣದಲ್ಲಿ ಕಂಡುಬರುವ ಜಾನ್ ಹಾರ್ವರ್ಡ್ ಪ್ರತಿಮೆಯು ಸಾಂದರ್ಭಿಕವಾಗಿ ಹಾಸ್ಯಾತ್ಮಕ ಅಲಂಕರಣಕ್ಕೆ ಗುರಿಯಾಗುತ್ತದೆ, ಉದಾಹರಣೆಗೆ ಮೇಲಿನ ಕಂಡುಬರುವ ವರ್ಣಾತ್ಮಕ ಹೂಮಾಲೆ.

ಹಾರ್ವಡ್ ಮಸಾಚ್ಯೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗೆ ಒಂದು ಸ್ನೇಹಪರ ಸ್ಪರ್ಧೆಯನ್ನು ಹೊಂದಿತ್ತು. ಇದು ಎರಡು ಶಾಲೆಗಳ ವಿಲೀನವನ್ನು ಸತತವಾಗಿ ಚರ್ಚಿಸಿದ ಸಂದರ್ಭ ಅಂದರೆ 1900ರಷ್ಟು ಹಿಂದಿನದ್ದಾಗಿದೆ. ಜೊತೆಗೆ ಒಂದು ಹಂತದಲ್ಲಿ ಇದಕ್ಕೆ ಅಧಿಕೃತವಾಗಿ ಒಪ್ಪಿಗೆ ನೀಡಲಾಯಿತು (ಅಂತಿಮವಾಗಿ ಮಸಾಚ್ಯೂಸೆಟ್ಸ್ ನ್ಯಾಯಾಲಯವು ಇದನ್ನು ರದ್ದುಪಡಿಸಿತು). ಇಂದು, ಎರಡು ಶಾಲೆಗಳು ಎಷ್ಟು ಸ್ಪರ್ಧಿಸುತ್ತವೆಯೋ ಅಷ್ಟೇ ಸಹಕಾರಿಯಾಗಿವೆ. ಜಂಟಿಯಾಗಿ ಹಲವು ಸಮ್ಮೇಳನಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ, ಇದರಲ್ಲಿ ಹಾರ್ವರ್ಡ್-MIT ಡಿವಿಷನ್ ಆಫ್ ಹೆಲ್ತ್ ಸೈನ್ಸಸ್ ಅಂಡ್ ದಿ ಟೆಕ್ನಾಲಜಿ, ದಿ ಬೋರ್ಡ್ ಇನ್‌ಸ್ಟಿಟ್ಯೂಟ್, ದಿ ಹಾರ್ವರ್ಡ್-ಮಿತ ಡಾಟಾ ಸೆಂಟರ್ ಹಾಗೂ ಡಿಬ್ನೆರ್ ಇನ್‌ಸ್ಟಿಟ್ಯೂಟ್ ಫಾರ್ ದಿ ಹಿಸ್ಟರಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಗಳು ಸೇರಿವೆ. ಇದಲ್ಲದೆ, ಎರಡೂ ಶಾಲೆಯ ವಿಧ್ಯಾರ್ಥಿಗಳು ಪದವಿಪೂರ್ವ ಅಥವಾ ಪದವಿ ತರಗತಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರತಿ-ನೋಂದಣಿಯನ್ನು ಮಾಡಬಹುದಾಗಿದೆ ಜೊತೆಗೆ ತಮ್ಮ ಶಾಲೆಯಿಂದ ಪಡೆದ ಪದವಿಗೂ ಸಹ ಮನ್ನಣೆ ದೊರಕುತ್ತಿತ್ತು.

ಸಂಸ್ಥೆಗಳು

ಆಡಳಿತ ಮಂಡಳಿಗಳು

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಆಡಳಿತವನ್ನು ಎರಡು ಮಂಡಳಿಗಳು ನಿರ್ವಹಿಸುತ್ತವೆ, ಮೊದಲನೆಯದು 1650ರಲ್ಲಿ ಸ್ಥಾಪನೆಯಾದ ಹಾರ್ವರ್ಡ್ ಕಾರ್ಪೋರೇಶನ್ ಎಂದು ಕರೆಸಿಕೊಳ್ಳುವ ಪ್ರೆಸಿಡೆಂಟ್ ಅಂಡ್ ಫೆಲೋಸ್ ಆಫ್ ಹಾರ್ವರ್ಡ್ ಕಾಲೇಜ್ ಹಾಗೂ ಮತ್ತೊಂದು ಹಾರ್ವರ್ಡ್ ಬೋರ್ಡ್ ಆಫ್ ಓವರ್ ಸೀರ್ಸ್ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಕ್ಷರು ಹಾರ್ವರ್ಡ್ ನ ದಿನನಿತ್ಯದ ಕಾರ್ಯಭಾರವನ್ನು ನಿರ್ವಹಿಸುತ್ತಾರೆ ಹಾಗೂ ಇವರನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಹಾರ್ವರ್ಡ್ ಕಾರ್ಪೋರೇಶನ್ ಹೊಂದಿರುತ್ತದೆ. ವಿಶ್ವವಿದ್ಯಾಲಯದಲ್ಲಿ ನೌಕರರು ಹಾಗೂ ಬೋಧಕವರ್ಗವನ್ನು ಒಳಗೊಂಡಂತೆ 16,000 ಮಂದಿಯಿದ್ದಾರೆ.[೩೩]

ಬೋಧನಾಂಗಗಳು ಹಾಗೂ ಶಿಕ್ಷಣಸಂಸ್ಥೆಗಳು

ಹಾರ್ವರ್ಡ್ ಇಂದು ಒಂಬತ್ತು ಬೋಧನಾಂಗಗಳನ್ನು ಹೊಂದಿದೆ, ಕೆಳಗೆ ನೀಡಿರುವ ಪಟ್ಟಿಯು ಸ್ಥಾಪನೆಯಾದ ಕ್ರಮದಲ್ಲಿದೆ:

ಚಳಿಗಾಲದಲ್ಲಿ ಕಂಡುಬರುವ ಹಾರ್ವರ್ಡ್ ನ ಪ್ರಾಂಗಣ, ಹಿನ್ನೆಲೆಯಲ್ಲಿ ಕಂಡುಬರುವ ಹೊಸ ವಿದ್ಯಾರ್ಥಿಗಳ ವಸತಿನಿಲಯ
  • ಕಲೆ ಹಾಗೂ ವಿಜ್ಞಾನಗಳ ಬೋಧನಾಂಗ ಹಾಗೂ ಅದರ ಉಪ-ಬೋಧನಾಂಗ, ದಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಅಂಡ್ ಅಪ್ಲೈಡ್ ಸೈನ್ಸಸ್, ಜಂಟಿಯಾಗಿ:
    • ಹಾರ್ವರ್ಡ್ ಕಾಲೇಜ್, ವಿಶ್ವದ್ಯಾಲಯದ ಪದವಿಪೂರ್ವ ವಿಭಾಗ (1636)
    • ದಿ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ (ಸ್ಥಾಪನೆ 1872)
    • ಹಾರ್ವರ್ಡ್ ಸಮ್ಮರ್ ಸ್ಕೂಲ್ (1871) ಹಾಗೂ ಹಾರ್ವರ್ಡ್ ಎಕ್ಸ್ಟೆನ್ಶನ್ ಸ್ಕೂಲ್ (1910) ನ್ನು ಒಳಗೊಂಡ ದಿ ಹಾರ್ವರ್ಡ್ ಡಿವಿಷನ್ ಆಫ್ ಕಂಟಿನ್ಯೂಯಿಂಗ್ ಎಜುಕೇಶನ್
  • ದಿ ಹಾರ್ವರ್ಡ್ ಮೆಡಿಕಲ್ ಸ್ಕೂಲ್(1782)
  • ದಿ ಹಾರ್ವರ್ಡ್ ಸ್ಕೂಲ್ ಆಫ್ ಡೆಂಟಲ್ ಮೆಡಿಸಿನ್(1867).
  • ಹಾರ್ವರ್ಡ್ ಡಿವಿನಿಟಿ ಸ್ಕೂಲ್ (1816)
  • ಹಾರ್ವರ್ಡ್ ಲಾ ಸ್ಕೂಲ್ (1817)
  • ಹಾರ್ವರ್ಡ್ ಬಿಸ್ನಿಸ್ ಸ್ಕೂಲ್ (1908)
  • ದಿ ಗ್ರ್ಯಾಜುಯೆಟ್ ಸ್ಕೂಲ್ ಆಫ್ ಡಿಸೈನ್ (1914)
  • ದಿ ಹಾರ್ವರ್ಡ್ ಗ್ರ್ಯಾಜುಯೆಟ್ ಸ್ಕೂಲ್ ಆಫ್ ಎಜುಕೇಶನ್ (1920)
  • ದಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ (1922)
  • ಹಾರ್ವರ್ಡ್ ಕೆನ್ನೆಡಿ ಸ್ಕೂಲ್ ಆಫ್ ಗವರ್ನಮೆಂಟ್ (1936)

ಕಳೆದ 1999ರಲ್ಲಿ, ಹಿಂದಿನ ರಾಡ್‌ಕ್ಲಿಫ್ ಕಾಲೇಜನ್ನು ರಾಡ್‌ಕ್ಲಿಫ್ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಎಂದು ಪುನಸ್ಸಂಘಟಿಸಲಾಯಿತು.

ಫೆಬ್ರವರಿ 2007ರಲ್ಲಿ, ಹಾರ್ವರ್ಡ್ ಕಾರ್ಪೋರೇಶನ್ ಅಂಡ್ ಓವರ್ ಸೀಸ್ ಹಾರ್ವರ್ಡ್ ಡಿವಿಷನ್ ಆಫ್ ಇಂಜಿನಿಯರಿಂಗ್ ಅಂಡ್ ಅಪ್ಲೈಡ್ ಸೈನ್ಸಸ್‌‌ಗೆ ಔಪಚಾರಿಕ ಅಂಗೀಕಾರ ನೀಡುವುದರ ಜೊತೆಗೆ ಇದು ಹಾರ್ವರ್ಡ್ ನ 14ನೇ ಶಿಕ್ಷಣ ಸಂಸ್ಥೆಯಾಯಿತು (ಹಾರ್ವರ್ಡ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಅಂಡ್ ಅಪ್ಲೈಡ್ ಸೈನ್ಸಸ್).[೩೪][೩೫]

ದತ್ತಿ

ಡಿಸೆಂಬರ್ 2008ರಲ್ಲಿ, ಹಾರ್ವರ್ಡ್ ತನ್ನ ದತ್ತಿಯಲ್ಲಿ, 2008ರ ಜುಲೈನಿಂದ ಅಕ್ಟೋಬರ್ ಅವಧಿಗೆ 22% ನಷ್ಟವಾಗಿದೆಯೆಂದು ಪ್ರಕಟಿಸಿತು. (ಸರಿಸುಮಾರು $8 ಶತಕೋಟಿ) ಇದರಿಂದಾಗಿ ಬಜೆಟ್ ಕಡಿತವನ್ನು ಮಾಡುವುದು ಅನಿವಾರ್ಯವಾಗಿತ್ತು.[೩೬] ನಂತರದ ವರದಿಯು[೩೭] ವಾಸ್ತವವಾಗಿ ನಷ್ಟವು ಈ ಸಂಖ್ಯೆಯ ದುಪ್ಪಟ್ಟಾಗಿತ್ತೆಂದು ಸೂಚಿಸಿತು, (ಫೋರ್ಬ್ಸ್[೩೮] ಮಾರ್ಚ್ 2009ರಲ್ಲಿ ನಷ್ಟದ ಪ್ರಮಾಣವು $12 ಶತಕೋಟಿಯಷ್ಟಾಗಬಹುದೆಂದು ಸೂಚಿಸಿತ್ತು) ಇದರಂತೆ ಹಾರ್ವರ್ಡ್ ಮೊದಲ ನಾಲ್ಕು ತಿಂಗಳಲ್ಲೇ ತನ್ನ ದತ್ತಿಯಲ್ಲಿ ಸುಮಾರು 50% ನಷ್ಟವನ್ನು ಅನುಭವಿಸಿತು. ಹಾರ್ವರ್ಡ್ ತನ್ನ ಬಜೆಟ್ ಮತ್ತೆ ಸಮತೂಗಿಸಲು ಮಾಡಿದ ಒಂದು ಬಹಿರಂಗವಾದ ಪ್ರಯತ್ನದ ಫಲವಾಗಿ, 2011ರಲ್ಲಿ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಬೇಕಿದ್ದ $1.2 ಶತಕೋಟಿ ವೆಚ್ಚದ ಆಲ್ಸ್ಟನ್ ಸೈನ್ಸ್ ಕಾಂಪ್ಲೆಕ್ಸ್‌ನ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿತು[೩೭], ಇದರ ಪರಿಣಾಮವಾಗಿ ಸ್ಥಳೀಯ ನಿವಾಸಿಗಳ ವಿರೋಧವನ್ನು ಎದುರಿಸಬೇಕಾಯಿತು.

ಕ್ಯಾಂಪಸ್

ಚಿತ್ರ:Harvard architects.png
ಕಳೆದ 2005ರಂತೆ ಹಾರ್ವರ್ಡ್ ಚೌಕದ ಸಮೀಪವಿರುವ ಪ್ರಮುಖ ಕಾಲೇಜು ಕ್ಯಾಂಪಸ್‌ನ ಕಟ್ಟಡಗಳ ನಿರ್ಮಾಣದ ದಿನಾಂಕ ಹಾಗೂ ಅದರ ವಿನ್ಯಾಸಗಳನ್ನು ಪ್ರದರ್ಶಿಸುತ್ತಿರುವ ನಕ್ಷೆ. ಸಮೀಪದ ಇತರ ಗಮನಾರ್ಹ ಕಟ್ಟಡಗಳ ಬಗೆಗಿನ ಮಾಹಿತಿಯನ್ನೂ ಸೇರಿಸಲಾಗಿದೆ.

ಕಾಲೇಜಿನ ಪ್ರಮುಖ ಕ್ಯಾಂಪಸ್ ಕೇಂಬ್ರಿಡ್ಜ್ ನ ಮಧ್ಯಭಾಗದ ಹಾರ್ವರ್ಡ್ ಪ್ರಾಂಗಣದಲ್ಲಿರುವುದರ ಜೊತೆಗೆ ನೆರೆಯ ಹಾರ್ವರ್ಡ್ ಸ್ಕ್ವೇರ್ ನ ಸುತ್ತಮುತ್ತಲಿನ ಪ್ರದೇಶಗಳಲ್ಲೂ ವ್ಯಾಪಿಸಿದೆ. ಹಾರ್ವರ್ಡ್ ಬಿಸ್ನೆಸ್ ಸ್ಕೂಲ್ ಹಾಗೂ ಹಾರ್ವರ್ಡ್ ಕ್ರೀಡಾಂಗಣವನ್ನು ಒಳಗೊಂಡ ವಿಶ್ವವಿದ್ಯಾಲಯದ ಹಲವು ಅಥ್ಲೆಟಿಕ್ಸ್ ಸೌಲಭ್ಯಗಳು, ಬಾಸ್ಟನ್ ನಗರದ ನೆರೆ ಪ್ರದೇಶ ಆಲ್ಸ್ಟನ್ ನಲ್ಲಿ ನೆಲೆಯಾಗಿದೆ. ಇದು ಹಾರ್ವರ್ಡ್ ಸ್ಕ್ವೇರ್ ನಿಂದ ಚಾರ್ಲ್ಸ್ ನದಿಯ ಇನ್ನೊಂದು ಭಾಗದಲ್ಲಿ ಸ್ಥಾಪಿತವಾಗಿದೆ. ದಿ ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಹಾರ್ವರ್ಡ್ ಸ್ಕೂಲ್ ಆಫ್ ಡೆಂಟಲ್ ಮೆಡಿಸಿನ್, ಹಾಗೂ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಬಾಸ್ಟನ್ ನ ಲಾಂಗ್ ವುಡ್ ವೈದ್ಯಕೀಯ ಹಾಗೂ ಶೈಕ್ಷಣಿಕ ಪ್ರದೇಶದಲ್ಲಿ ನೆಲೆಯಾಗಿದೆ.

ಸ್ವತಃ ಹಾರ್ವರ್ಡ್ ಪ್ರಾಂಗಣವು ವಿಶ್ವವಿದ್ಯಾಲಯದ ಪ್ರಧಾನ ಆಡಳಿತ ಕಚೇರಿಗಳನ್ನು ಹಾಗೂ ಪ್ರಧಾನ ಗ್ರಂಥಾಲಯಗಳನ್ನು ಹೊಂದಿದೆ, ಇದರೊಂದಿಗೆ ಸೆವೆರ್ ಹಾಲ್ ಹಾಗೂ ಯೂನಿವರ್ಸಿಟಿ ಹಾಲ್, ಮೆಮೋರಿಯಲ್ ಚರ್ಚ್, ಹಾಗೂ ಬಹುತೇಕ ಹೊಸವಿದ್ಯಾರ್ಥಿಗಳ ವಸತಿನಿಲಯಗಳನ್ನು ಒಳಗೊಂಡಿದೆ. ವಿಶ್ವವಿದ್ಯಾಲಯದ ಎರಡನೇ ವರ್ಷ ವಿದ್ಯಾರ್ಥಿಗಳು, ಮೊದಲ ವರ್ಷದ ವಿದ್ಯಾರ್ಥಿಗಳು, ಹಾಗೂ ಅಂತಿಮ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳು ಹನ್ನೆರಡು ವಸತಿ ನಿಲಯಗಳಲ್ಲಿ ವಾಸಿಸುತ್ತಾರೆ, ಇದರಲ್ಲಿ ಒಂಬತ್ತು ವಸತಿ ನಿಲಯಗಳು ಹಾರ್ವರ್ಡ್ ಪ್ರಾಂಗಣದ ದಕ್ಷಿಣ ಭಾಗದುದ್ದಕ್ಕೂ ಅಥವಾ ಚಾರ್ಲ್ಸ್ ನದಿಯ ಸಮೀಪದಲ್ಲಿದೆ. ಉಳಿದ ಮೂರು ವಸತಿ ನಿಲಯಗಳು ಪ್ರಾಂಗಣದ ನೈಋತ್ಯ ದಿಕ್ಕಿಗೆ ಅರ್ಧ ಮೈಲಿ ದೂರವಿರುವ ನೆರೆಯ ಕ್ವಾಡ್ರಾನ್ಗಲ್ ಪ್ರದೇಶದಲ್ಲಿ ನೆಲೆಯಾಗಿದೆ (ಸಾಮಾನ್ಯವಾಗಿ ಕ್ವಾಡ್ ಎಂದು ಕರೆಯಲಾಗುತ್ತದೆ). ರಾಡ್‌ಕ್ಲಿಫ್ ಹಾರ್ವರ್ಡ್ ನೊಂದಿಗೆ ತನ್ನ ವಸತಿ ವ್ಯವಸ್ಥೆಯನ್ನು ವಿಲೀನಗೊಳಿಸುವ ಮುಂಚೆ ರಾಡ್‌ಕ್ಲಿಫ್ ಕಾಲೇಜ್ ನ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿತ್ತು.

ಪ್ರತಿಯೊಂದು ವಸತಿ ನಿಲಯವು ಪದವಿ ಪೂರ್ವ ವಿದ್ಯಾರ್ಥಿಗಳಿಗೆ, ಹೌಸ್ ಮಾಸ್ಟರ್ ಗಳಿಗೆ(ಬೋರ್ಡಿಂಗ್ ಸ್ಕೂಲಿನ ಭೋಜನಗೃಹದ ಪಾರುಪತ್ಯ ಮಾಡುವ ಉಪಾಧ್ಯಾಯ) ಹಾಗೂ ನಿವಾಸಿ ಅಧ್ಯಾಪಕರಿಗೆ ಕೋಣೆಗಳಿರುತ್ತವೆ, ಜೊತೆಗೆ ಭೋಜನಶಾಲೆ, ಗ್ರಂಥಾಲಯ, ಹಾಗೂ ಇತರ ಹಲವು ವಿದ್ಯಾರ್ಥಿ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಈ ಸೌಕರ್ಯಗಳನ್ನು ಯೇಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಎಡ್ವರ್ಡ್ ಹಾರ್ಕ್ನೆಸ್ಸ್ ನೀಡಿದ ಕೊಡುಗೆಯ ಪರಿಣಾಮವಾಗಿದೆ.[೩೯]

ಚಳಿಗಾಲದಲ್ಲಿ ಕಂಡುಬರುವ ಮೆಮೋರಿಯಲ್ ಚರ್ಚ್

ಹಿಂದಿನ ರಾಡ್‌ಕ್ಲಿಫ್ ಕಾಲೇಜ್ ಆವರಣದ ಕೇಂದ್ರ ಭಾಗವಾದ ರಾಡ್‌ಕ್ಲಿಫ್ ಪ್ರಾಂಗಣವು, (ಇದೀಗ ಇದು ರಾಡ್‌ಕ್ಲಿಫ್ ಇನ್‌ಸ್ಟಿಟ್ಯೂಟ್ ನ ತವರಾಗಿದೆ) ಗ್ರ್ಯಾಜುಯೆಟ್ ಸ್ಕೂಲ್ ಆಫ್ ಎಜುಕೇಶನ್ ಹಾಗೂ ಕೇಂಬ್ರಿಡ್ಜ್ ಕಾಮನ್ ಗೆ ಮಗ್ಗುಲಲ್ಲಿದೆ.

2006 - 2008ರವರೆಗೂ, ಹಾರ್ವರ್ಡ್ ವಿಶ್ವವಿದ್ಯಾನಿಲಯವು ಆವರಣದೊಳಗೆ ಸಂಭವಿಸಿದ ಅಪರಾಧದ ಅಂಕಿ ಅಂಶಗಳನ್ನು ವರದಿ ಮಾಡಿತು, ಇದರಲ್ಲಿ 48 ಬಲಾತ್ಕಾರ ಲೈಂಗಿಕ ಪ್ರಕರಣಗಳು, 10 ದರೋಡೆಗಳು, 15 ತೀವ್ರತರವಾದ ಹಲ್ಲೆಗಳು, 750 ಕನ್ನಗಳ್ಳತನಗಳು, ಹಾಗೂ ಮೋಟಾರು ವಾಹನಗಳ ಕಳ್ಳತನದ 12 ಪ್ರಕರಣಗಳು ಸೇರಿವೆ.[೪೦]

ಉಪ ಸೌಲಭ್ಯಗಳು

ತನ್ನ ಪ್ರಮುಖ ಕೇಂಬ್ರಿಡ್ಜ್/ಆಲ್‌ಸ್ಟನ್ ಹಾಗೂ ಲಾಂಗ್ ವುಡ್ ವಿಶ್ವವಿದ್ಯಾಲಯದ ಆವರಣಗಳಲ್ಲದೆ, ಹಾರ್ವರ್ಡ್ಬಾಸ್ಟನ್ ನ ಜಮೈಕಾ ಪ್ಲೈನ್ ಪ್ರದೇಶದ ಆರ್ನಾಲ್ಡ್ ಆರ್ಬೋರೆಟಂ;ವಾಶಿಂಗ್ಟನ್, D.C.ಯ ದುಂಬಾರ್ಟನ್ ಓಕ್ಸ್ ರಿಸರ್ಚ್ ಲೈಬ್ರರಿ ಅಂಡ್ ಕಲೆಕ್ಷನ್ ; ಪೀಟರ್ಶಾಮ್, ಮಸಾಚ್ಯೂಸೆಟ್ಸ್ ನ ಹಾರ್ವರ್ಡ್ ಫಾರೆಸ್ಟ್; ಹಾಗೂ ಇಟಲಿಯ ಫ್ಲಾರೆನ್ಸ್ ನಲ್ಲಿರುವ ವಿಲ್ಲಾ ಐ ತಟ್ಟಿ ರಿಸರ್ಚ್ ಸೆಂಟರ್[೪೧] ಗಳ ಒಡೆತನ ಹೊಂದಿರುವುದರ ಜೊತೆಗೆ ಅದರ ಆಡಳಿತ ಕಾರ್ಯಭಾರವನ್ನು ನಿರ್ವಹಿಸುತ್ತದೆ.

ಕ್ಯಾಂಪಸ್ ಪ್ರಮುಖ ವಿಸ್ತರಣೆ

ಕಳೆದ ಹಲವಾರು ವರ್ಷಗಳಿಂದಲೂ, ದಕ್ಷಿಣದಲ್ಲಿ ಶೈಕ್ಷಣಿಕ ಆವರಣವನ್ನು ವಿಸ್ತರಿಸುವ ಉದ್ದೇಶದಿಂದ ಹಾರ್ವರ್ಡ್ ಆಲ್ಸ್ಟನ್ ನಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ಖರೀದಿಸಿದೆ, ಇದು ಕೇಂಬ್ರಿಡ್ಜ್ ನಿಂದ ಚಾರ್ಲ್ಸ್ ನದಿಯವರೆಗೂ ವ್ಯಾಪಿಸಿದೆ.[೪೨] ವಿಶ್ವವಿದ್ಯಾಲಯವು ಇದೀಗ ಕೇಂಬ್ರಿಡ್ಜ್ ಗಿಂತ ಸರಿಸುಮಾರು ಐವತ್ತು ಶೇಕಡಾ ಅಧಿಕ ಭೂಮಿಯನ್ನು ಆಲ್ಸ್ಟನ್‌ನಲ್ಲಿ ಹೊಂದಿದೆ. ಸಾಂಪ್ರದಾಯಿಕ ಕೇಂಬ್ರಿಡ್ಜ್ ಆವರಣದ ಜೊತೆಗೆ ಹೊಸ ಆಲ್ಸ್ಟನ್ ಆವರಣಕ್ಕೆ ಸಂಪರ್ಕ ಕಲ್ಪಿಸುವ ಹಲವಾರು ಪ್ರಸ್ತಾಪಗಳಲ್ಲಿ ಹೊಸ ಹಾಗೂ ವಿಸ್ತಾರವಾದ ಸೇತುವೆಗಳು, ಸಂಚಾರ ವ್ಯವಸ್ಥೆ/ಅಥವಾ ಒಂದು ಟ್ರ್ಯಾಮ್ ಒಳಗೊಂಡಿದೆ. ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಉದ್ಯಾನ ಪ್ರದೇಶದ ನಿರ್ಮಾಣ ಹಾಗೂ ಚಾರ್ಲ್ಸ್ ನದಿಗೆ ಸುಲಭವಾಗಿ ಕ್ರಮಿಸಲು ಪಾದಚಾರಿ ಮಾರ್ಗಗಳಿಗಾಗಿಸ್ಟಾರ್ರೊವ್ ಡ್ರೈವ್‌ನ ಒಂದು ಭಾಗದ ಮಟ್ಟವನ್ನು ತಗ್ಗಿಸುವುದು ಸೇರಿದೆ. ಇದಲ್ಲದೆ ದ್ವಿಚಕ್ರ ವಾಹನಗಳ ಫಥಗಳು ಹಾಗೂ ಆಲ್ಸ್ಟನ್ ಕ್ಯಾಂಪಸ್‌‍ನುದ್ದಕ್ಕೂ ಆಸಕ್ತಿಯಿಂದ ಯೋಜಿಸಲಾದ ಕಟ್ಟಡಗಳು ಸೇರಿವೆ. ಶಿಕ್ಷಣ ಸಂಸ್ಥೆಯು ಇಂತಹ ವಿಸ್ತರಣೆಯು ವಿದ್ಯಾಸಂಸ್ಥೆಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಸಮುದಾಯಕ್ಕೂ ಲಾಭದಾಯಕವಾಗಿದೆ ಎಂದು ಸಮರ್ಥಿಸುತ್ತದೆ. ಸಂಚಾರದ ಮೂಲಸೌಲಭ್ಯಗಳನ್ನು ಅಧಿಕಗೊಳಿಸುವುದು, ಸಾರ್ವಜನಿಕರಿಗೆ ಮುಕ್ತವಾದ ಸಂಚಾರ ವ್ಯವಸ್ಥೆ, ಹಾಗೂ ಸಾರ್ವಜನಿಕರಿಗೆ ಮುಕ್ತವಾಗಿರುವ ಉದ್ಯಾನವನದ ಪ್ರದೇಶ ಮುಂತಾದ ಲಕ್ಷಣಗಳ ಬಗ್ಗೆ ಗಮನಸೆಳೆಯುತ್ತದೆ.

ಹಾರ್ವರ್ಡ್‌ನ ಬಾಕಿಯಿರುವ ವಿಸ್ತರಣೆಗೆ ಇರುವ ಅತಿಮುಖ್ಯ ಚಾಲಕಶಕ್ತಿಗಳಲ್ಲಿ ಒಂದೆಂದರೆ ಅದರ ವಿಜ್ಞಾನ ಹಾಗೂ ತಾಂತ್ರಿಕ ಕಾರ್ಯಕ್ರಮಗಳ ಧ್ಯೇಯ ಹಾಗೂ ಬಲವನ್ನು ಗಣನೀಯವಾಗಿ ಅಧಿಕಗೊಳಿಸುವ ಗುರಿಯಾಗಿದೆ. ವಿಶ್ವವಿದ್ಯಾಲಯವು 500,000 ಚದರ ಅಡಿಯ (50,000 m²) ಎರಡು ಸಂಶೋಧನಾ ಸಂಕೀರ್ಣಗಳನ್ನು ಆಲ್ಸ್ಟನ್‌ನಲ್ಲಿ ನಿರ್ಮಿಸಲು ಯೋಜಿಸಿದೆ, ಇದು ಹಲವಾರು ಅಂತರಶಿಕ್ಷಣ ಕಾರ್ಯಕ್ರಮಗಳಿಗೆ ತವರಾಗಲಿದೆ. ಇದರಲ್ಲಿ ಹಾರ್ವರ್ಡ್ ಸ್ಟೆಮ್ ಇನ್‌ಸ್ಟಿಟ್ಯೂಟ್ ಹಾಗೂ ವಿಸ್ತೃತ ಇಂಜಿನಿಯರಿಂಗ್ ವಿಭಾಗ ಕೂಡ ಸೇರಿವೆ.

ಇದಲ್ಲದೆ, ಹಾರ್ವರ್ಡ್, ಹಾರ್ವರ್ಡ್ ಗ್ರ್ಯಾಜುಯೆಟ್ ಸ್ಕೂಲ್ ಆಫ್ ಎಜುಕೇಶನ್ ಹಾಗೂ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ್ನು ಆಲ್ಸ್ಟನ್‌ಗೆ ಸ್ಥಳಾಂತರಿಸಲು ಉದ್ದೇಶಿಸುತ್ತಿದೆ. ವಿಶ್ವವಿದ್ಯಾಲಯವು ಪದವಿಪೂರ್ವ ಹಾಗೂ ಪದವಿಯ ಹೊಸ ವಿದ್ಯಾರ್ಥಿಗಳಿಗೆ ಹಲವಾರು ವಸತಿ ನಿಲಯಗಳನ್ನು ಆಲ್ಸ್ಟನ್‌ನಲ್ಲಿ ನಿರ್ಮಿಸಲೂ ಸಹ ಯೋಜಿಸುತ್ತಿದೆ. ಜೊತೆಗೆ ದೊಡ್ಡ ಪ್ರಮಾಣದ ವಸ್ತು ಸಂಗ್ರಹಾಲಯಗಳು ಹಾಗೂ ಪ್ರದರ್ಶನ ಕಲೆಗಳ ಸಂಕೀರ್ಣಗಳ ನಿರ್ಮಾಣವನ್ನೂ ಸಹ ಯೋಜಿಸುತ್ತಿದೆ. ದುರದೃಷ್ಟವಶಾತ್ ದತ್ತಿ ನೀಡಿಕೆಯಲ್ಲಾದ ದೊಡ್ಡ ಮಟ್ಟದ ಇಳಿತದಿಂದಾಗಿ ಈ ಯೋಜನೆಗಳು ಸದ್ಯಕ್ಕೆ ಸ್ಥಗಿತಗೊಂಡಿದೆ.

ತಾಳಿಕೆ ಸಾಮರ್ಥ್ಯ

ಕಳೆದ 2000ದಲ್ಲಿ, ಹಾರ್ವರ್ಡ್, ಪೂರ್ಣಾವಧಿಯ ಕ್ಯಾಂಪಸ್‌ ಸಸ್ಟೈನೆಬಿಲಿಟಿ ವೃತ್ತಿಪರರನ್ನು ನೇಮಕ ಮಾಡಿಕೊಂಡಿದ್ದು, ಜೊತೆಗೆ ಹಾರ್ವರ್ಡ್ ಗ್ರೀನ್ ಕ್ಯಾಂಪಸ್ ಇನಿಶಿಯೇಟಿವ್ ನ್ನು ಆರಂಭಿಸಿತು,[೪೩] ಏಕೆಂದರೆ ಇದನ್ನು ಆಫೀಸ್ ಫಾರ್ ಸಸ್ಟೈನಬಿಲಿಟಿ (OFS) ಎಂದು ಸಾಂಸ್ಥೀಕರಣಗೊಳಿಸಲಾಗಿತ್ತು.[೪೪] 25 ಜನ ಪೂರ್ಣಕಾಲಿಕ ನೌಕರರು, ಡಜನ್ ಗಟ್ಟಲೆ ಪ್ರಾಯೋಗಿಕ ವಿದ್ಯಾರ್ಥಿಗಳು, ಹಾಗೂ ಶಕ್ತಿ ಹಾಗೂ ಜಲ ಸಂರಕ್ಷಣಾ ಯೋಜನೆಗಳಿಗೆ $12 ದಶಲಕ್ಷ ಸಾಲ ನಿಧಿಯೊಂದಿಗೆ, OFS ರಾಷ್ಟ್ರದಲ್ಲಿ ಅತ್ಯಂತ ಮುಂದುವರಿದ ಕ್ಯಾಂಪಸ್ ಸಾಮರ್ಥ್ಯ ನೀಡುವ ಕಾರ್ಯಕ್ರಮಗಳಲ್ಲಿ ಒಂದಾಗಿದೆ.[೪೫] 26 ಶೈಕ್ಷಣಿಕ ಶಾಲೆಗಳಲ್ಲಿ "A-" ಗ್ರೇಡ್ ಪಡೆದ ಶಾಲೆಗಳಲ್ಲಿ ಹಾರ್ವರ್ಡ್ ಒಂದೆನಿಸಿದೆ. ಇದು ಕಾಲೇಜ್ ಸಸ್ಟೈನಬಿಲಿಟಿ ರಿಪೋರ್ಟ್ ಕಾರ್ಡ್ 2010ನ್ನು ಆಧರಿಸಿ ಸಸ್ಟೈನಬಲ್ ಎಂಡೋಮೆಂಟ್ಸ್ ಇನ್‌ಸ್ಟಿಟ್ಯೂಟ್ ಈ ಅತ್ಯಂತ ಉನ್ನತ ಗ್ರೇಡ್ ನೀಡಿದೆ.[೪೬]

ಶೈಕ್ಷಣಿಕ ಸ್ವರೂಪಗಳು

ಟೆಂಪ್ಲೇಟು:Infobox US university ranking/Nationalಟೆಂಪ್ಲೇಟು:Infobox US university ranking/Globalಟೆಂಪ್ಲೇಟು:Infobox US university ranking/LiberalArtsಟೆಂಪ್ಲೇಟು:Infobox US university ranking/Baccalaureateಟೆಂಪ್ಲೇಟು:Infobox US university ranking/Regionalಟೆಂಪ್ಲೇಟು:Infobox US university ranking/Masters
University rankings

ಕಳೆದ 2009ರಲ್ಲಿ U.S. ನ್ಯೂಸ್ & ವರ್ಲ್ಡ್ ರಿಪೋರ್ಟ್ ಶ್ರೇಣೀಕರಣವು ಹಾರ್ವರ್ಡ್ ಅನ್ನು ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲೇ ಮೊದಲೆಂದು ಶ್ರೇಣೀಕರಿಸಿದೆ.[೪೭] 2009ರಲ್ಲಿದ್ದಂತೆ,QS ವರ್ಲ್ಡ್ ಯೂನಿವರ್ಸಿಟಿ ರಾಂಕಿಂಗ್ಸ್ [೪೮](ಇದು 2010ರಿಂದ QS ವರ್ಲ್ಡ್ ಯೂನಿವರ್ಸಿಟಿ ರ‌್ಯಾಂಕಿಂಗ್ಸ್ ಎಂದು ಹೆಸರಾಗಿದೆ)ಮತ್ತು ಅಕ್ಯಾಡೆಮಿಕ್ ರ‌್ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್ ಪ್ರಕಟಣೆಗಳು ಆರಂಭವಾದಾಗಿನಿಂದ ಪ್ರತಿ ಬಾರಿ ವರ್ಲ್ಡ್ ಯೂನಿವರ್ಸಿಟಿಗಳ ಪೈಕಿ ಅಗ್ರ ಶ್ರೇಣಿಯನ್ನು ಕಾಯ್ದುಕೊಂಡಿದೆ. THE - QS ವರ್ಲ್ಡ್ ಯೂನಿವರ್ಸಿಟಿ ರಾಂಕಿಂಗ್ಸ್ ನ ಪ್ರತ್ಯೇಕ ಅಧ್ಯಯನ ವಿಭಾಗದ ಕೋಷ್ಟಕದಲ್ಲಿ, ಹಾರ್ವರ್ಡ್ ಕಲೆ ಹಾಗೂ ಮಾನವಿಕಶಾಸ್ತ್ರ, ಬಯೋಮೆಡಿಸಿನ್, ಹಾಗೂ ಸಮಾಜ ವಿಜ್ಞಾನ ವಿಭಾಗದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನವನ್ನು, ಹಾಗೂ ನಿಸರ್ಗ ವಿಜ್ಞಾನದಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನವನ್ನು ಗಳಿಸಿತ್ತು.

ದಿ ಕಾರ್ನೆಜಿ ಫೌಂಡೆಶನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಟೀಚಿಂಗ್, ದಿ ನ್ಯೂ ಯಾರ್ಕ್ ಟೈಮ್ಸ್ , ಹಾಗೂ ಕೆಲವು ವಿದ್ಯಾರ್ಥಿಗಳು ಹಾರ್ವರ್ಡ್ ಅನ್ನು ಪದವಿಪೂರ್ವ ಶಿಕ್ಷಣದ ಕೆಲವೊಂದು ಅಂಶಗಳಲ್ಲಿ ಬೋಧಕ ಫೆಲೋಗಳ ಮೇಲಿನ ಅದರ ಅವಲಂಬನೆ ಕುರಿತು ಟೀಕಿಸುತ್ತಾರೆ; ಇದು ಶಿಕ್ಷಣ ಗುಣಮಟ್ಟಕ್ಕೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆಂದು ಭಾವಿಸುತ್ತಾರೆ.[೪೯][೫೦] ದಿ ನ್ಯೂ ಯಾರ್ಕ್ ಟೈಮ್ಸ್ ನ ಒಂದು ಲೇಖನವು, ಈ ಸಮಸ್ಯೆಯು ಐವಿ ಲೀಗ್ ನ ಕೆಲವು ಇತರ ಶಾಲೆಗಳಲ್ಲೂ ಚಾಲ್ತಿಯಲ್ಲಿದೆ ಎಂದು ವಿವರಿಸಿತು.

ಇತರ ವಿಶ್ವವಿದ್ಯಾಲಯಗಳೊಂದಿಗೆ, ಹಾರ್ವರ್ಡ್ ಸಹ ಗ್ರೇಡ್ ಇನಫ್ಲೇಶನ್ (ಗುಣಾಂಕದ ಹೆಚ್ಚಳ) ಮಾಡುತ್ತದೆಂಬ ಆಪಾದನೆಯನ್ನು ಎದುರಿಸುತ್ತಿದೆ.[೫೧]

ಹಿಂದಿನ ಎರಡು ದಶಕಗಳಲ್ಲಿ ಹಾರ್ವರ್ಡ್‌ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ SATನ ಅಂಕಗಳ ಒಂದು ಪುನರ್ವಿಮರ್ಶೆಯು, GPAಗಳ ಏರಿಕೆಯು,ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಮೌಖಿಕ ಹಾಗೂ ಗಣಿತದ SAT ಅಂಕಗಳ ರೇಖೀಯ ವರ್ಧನೆಗೆ ಹೊಂದಿಕೆಯಾಗಿತ್ತು. (1990ರ ದಶಕದ ಮಧ್ಯಭಾಗದಲ್ಲಿ ಪರೀಕ್ಷಾ ಪದ್ಧತಿ ಸುಧಾರಣೆಯನ್ನು ಸರಿಪಡಿಸಿದ ನಂತರವೂ), ಇದು ವಿದ್ಯಾರ್ಥಿ ಘಟಕ ಹಾಗೂ ಅದರ ಪ್ರೇರಣೆಯ ಗುಣಮಟ್ಟವೂ ಸಹ ಅಧಿಕಗೊಂಡಿದೆ ಎಂಬುದನ್ನು ಸೂಚಿಸುತ್ತಿತ್ತು.[೫೨] ಹಾರ್ವರ್ಡ್ ಕಾಲೇಜು ಲ್ಯಾಟಿನ್ ಆನರ್ಸ್ ಅನ್ನು ಪಡೆಯುವ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯನ್ನು 2004ರಲ್ಲಿ 90%ನಿಂದ 2005ರಲ್ಲಿ 60%ಗೆ ಇಳಿಸಿತು. ಅಷ್ಟೇ ಅಲ್ಲದೆ, ಪ್ರತಿಷ್ಟಿತ ಆನರ್ಸ್ ಗಳಾದ "ಜಾನ್ ಹಾರ್ವರ್ಡ್ ಸ್ಕಾಲರ್" ಹಾಗೂ "ಹಾರ್ವರ್ಡ್ ಕಾಲೇಜ್ ಸ್ಕಾಲರ್" ಇದೀಗ ಕೇವಲ ಶೇಕಡ 5ರಷ್ಟು ಅಗ್ರ ವಿದ್ಯಾರ್ಥಿಗಳಿಗೆ ಹಾಗೂ ಮತ್ತೆ ಶೇಕಡ 5ರಷ್ಟು ಪ್ರತಿ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.[೫೩][೫೪][೫೫][೫೬]

ಬೋಧನಾವರ್ಗ ಹಾಗೂ ಸಂಶೋಧನೆ

ಪ್ರಮುಖ ಸಂಪ್ರದಾಯಶೀಲ ಹಾಗೂ ಪ್ರಮುಖ ಪ್ರಗತಿಪರ ಅಭಿಪ್ರಾಯಗಳು ವಿವಿಧ ಶಾಲೆಗಳ ಬೋಧನಾವರ್ಗದವರಲ್ಲಿದೆ, ಉದಾಹರಣೆಗೆ ಮಾರ್ಟಿನ್ ಫೆಲ್ಡ್ ಸ್ಟೇಯಿನ್, ಹಾರ್ವೆ ಮ್ಯಾನ್ಸ್ಫೀಲ್ಡ್ ಗ್ರೇಡ್ ಮನ್ಕಿವ್, ಬ್ಯಾರನೆಸ್ ಶಿರ್ಲೆಯ್ ವಿಲ್ಲಿಯಂಸ್, ಹಾಗೂ ಅಲನ್ ಡೆರ್ಶೋವಿಟ್ಸ್ ಎಡಪಂಥೀಯರೀದ ಮೈಕಲ್ ವಾಲ್ಜರ್ ಹಾಗೂ ಸ್ಟೀಫನ್ ಥರ್ನ್ ಸ್ಟ್ರೋಮ್ ಹಾಗೂ ಪ್ರಗತಿಪರರಾದ ರಾಬರ್ಟ್ ನೋಜಿಕ್ ಹಿಂದೆ ವಿಶ್ವವಿದ್ಯಾಲಯದ ಬೋಧಕವರ್ಗಕ್ಕೆ ಘನತೆ ತಂದಿದ್ದಾರೆ. 1964 ಹಾಗೂ 2009ರ ನಡುವೆ,ಹಾರ್ವರ್ಡ್‌ನ ಜೊತೆ ಅಥವಾ ಅದರ ಬೋಧನಾ ಆಸ್ಪತ್ರೆಗಳ ಜತೆ ನಿಕಟ ಸಂಪರ್ಕವನ್ನು ಹೊಂದಿದ ಒಟ್ಟು 38 ಬೋಧಕವರ್ಗ ಹಾಗೂ ಸಿಬ್ಬಂದಿ ವರ್ಗಕ್ಕೆ ನೋಬಲ್ ಪುರಸ್ಕಾರವನ್ನು ನೀಡಲಾಗಿದೆ (ಶತಮಾನದ ಕಡೆಯ ಚತುರ್ಥ ಭಾಗದಲ್ಲಿ 17 ನೋಬಲ್ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದೆ).[೫೭]

ಸಂಶೋಧನಾ ಸಂಸ್ಥೆಗಳು ಹಾಗೂ ಕೇಂದ್ರಗಳು

ಸಂಶೋಧನಾ ಸಂಸ್ಥೆಗಳು
  • ಬೋರ್ಡ್ ಇನ್‌ಸ್ಟಿಟ್ಯೂಟ್ ಆಫ್ MIT ಅಂಡ್ ಹಾರ್ವರ್ಡ್
  • ಹಾರ್ವರ್ಡ್ ಕ್ಲಿನಿಕಲ್ ರಿಸರ್ಚ್ ಇನ್ಸ್‌ಟಿಟ್ಯೂಟ್
  • ಹಾರ್ವರ್ಡ್ ಇನ್ಸ್ ಆಫ್ ಇಕನಾಮಿಕ್ ರಿಸರ್ಚ್
  • ಹಾರ್ವರ್ಡ್ ಉಕ್ರೇನಿಯನ್ ರಿಸರ್ಚ್ ಇನ್‌ಸ್ಟಿಟ್ಯೂಟ್
  • ಇನ್‌ಸ್ಟಿಟ್ಯೂಟ್ ಫಾರ್ ಕ್ವಾನ್ಟಿಟೇಟಿವ್ ಸೋಶಿಯಲ್ ಸೈನ್ಸ್[೫೮]
  • ರಾಡ್‌ಕ್ಲಿಫ್ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ (ಹಾರ್ವರ್ಡ್ ನ 14 ಶಾಲೆಗಳಲ್ಲಿ ಒಂದು)
  • ಲ್ಯಾಬೋರೇಟರಿ ಫಾರ್ ನ್ಯಾನೋಮೆಡಿಸಿನ್ (ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಲ್ಲಿ-ಬ್ರಿಘಾಂ ಹಾಗೂ ವಿಮೆನ್ಸ್ ಹಾಸ್ಪಿಟಲ್ ನ ಅಂಗ ಸಂಸ್ಥೆಯಾಗಿದೆ)
  • ಸ್ಚೆಪೆನ್ಸ್ ಐ ರಿಸರ್ಚ್ ಇನ್‌ಸ್ಟಿಟ್ಯೂಟ್
  • W. E. B. ಡು ಬೋಯಿಸ್ ಇನ್‌ಸ್ಟಿಟ್ಯೂಟ್ ಫಾರ್ ಆಫ್ರಿಕನ್ ಅಂಡ್ ಆಫ್ರಿಕನ್-ಅಮೇರಿಕನ್ ರಿಸರ್ಚ್
  • ವೈಸ್ ಇನ್‌ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲಿ ಇನ್‌ಸ್ಪೈರಡ್ ಇಂಜಿನಿಯರಿಂಗ್
ಶಿಕ್ಷಣ ಸಂಸ್ಥೆಗಳು ಹಾಗೂ ಅದರ ವಿಭಾಗಗಳಿಗೆ ಹೊಂದಿಕೊಂಡಿರುವ ಸಂಶೋಧನಾ ಕೇಂದ್ರಗಳು
  • ಗ್ರ್ಯಾಜುಯೆಟ್ ಸ್ಕೂಲ್ ಆಫ್ ಡಿಸೈನ್:[೫೯] ಸೆಂಟರ್ ಫಾರ್ ಆಲ್ಟರ್ನೇಟಿವ್ ಫ್ಯೂಚರ್ಸ್, ಜಾಯಿಂಟ್ ಸೆಂಟರ್ ಫಾರ್ ಹೌಸಿಂಗ್ ಸ್ಟಡೀಸ್, ಸೆಂಟರ್ ಫಾರ್ ಟೆಕ್ನಾಲಜಿ & ದಿ ಎನ್ವಿರಾನ್ಮೆಂಟ್
  • ಹಾರ್ವರ್ಡ್ ಲಾ ಸ್ಕೂಲ್:[೬೦] ಬರ್ಕ್ಮನ್ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ, ಚಾರ್ಲ್ಸ್ ಹ್ಯಾಮಿಲ್ಟನ್ ಹೌಸ್ಟನ್ ಇನ್‌ಸ್ಟಿಟ್ಯೂಟ್ ಫಾರ್ ರೇಸ್ ಅಂಡ್ ಜಸ್ಟಿಸ್, ಯುರೋಪಿಯನ್ ಲಾ ರಿಸರ್ಚ್ ಸೆಂಟರ್, ಜಾನ್ M. ಓಲಿನ್ ಸೆಂಟರ್ ಆಫ್ ಲಾ, ಇಕನಾಮಿಕ್ಸ್ ಅಂಡ್ ಬಿಸ್ನೆಸ್
  • ಡಿಪಾರ್ಟ್ಮೆಂಟ್ ಆಫ್ ಸೈಕಾಲಜಿ: ಪ್ರೋಸೊಪಗ್ನೋಸಿಯ ರಿಸರ್ಚ್ ಸೆಂಟರ್ಸ್ ಅಟ್ ಹಾರ್ವರ್ಡ್ ಯೂನಿವರ್ಸಿಟಿ ಅಂಡ್ ಯೂನಿವರ್ಸಿಟಿ ಕಾಲೇಜ್ ಲಂಡನ್ [೬೧]
ವಿಶ್ವವಿದ್ಯಾಲಯದೊಡನೆ ಸಂಯೋಜನೆಯನ್ನು ಹೊಂದಿರುವ ಸ್ವತಂತ್ರ ಸಂಸ್ಥೆಗಳು
  • ದಿ ಫಾರ್ಸಿತ್ ಇನ್‌ಸ್ಟಿಟ್ಯೂಟ್

ಪ್ರವೇಶಾತಿಗಳು

ಬರುವ 2014ರ ಶೈಕ್ಷಣಿಕ ವರ್ಷಕ್ಕೆ ಹಾರ್ವರ್ಡ್ ಕಾಲೇಜು 6.9% ಅಭ್ಯರ್ಥಿಗಳ ಪ್ರವೇಶಕ್ಕೆ ಅಂಗೀಕಾರ ನೀಡಿದೆ, ಇದು ಶಾಲೆಯ ಸಮಗ್ರ ಇತಿಹಾಸದಲ್ಲೇ ಕಡಿಮೆ ಸಂಖ್ಯೆಯೆಂದು ದಾಖಲಾಗಿದೆ.[೬೨] ಬರುವ 2013ರ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾನುಮತಿಗಳು ಕಡಿಮೆಯಾಗಿವೆ. ಆಂಶಿಕವಾಗಿ ವಿಶ್ವವಿದ್ಯಾನಿಲಯವು 2008ರಲ್ಲಿ ಹಣಕಾಸಿನ ಅಧಿಕ ನೆರವನ್ನು ಪ್ರಕಟಿಸಿದ್ದರಿಂದ ಪ್ರವೇಶಾತಿಯ ಪ್ರಮಾಣದಲ್ಲಿ ಏರಿಕೆಯಾಗಬಹುದೆಂದು ವಿಶ್ವವಿದ್ಯಾಲಯವು ನಿರೀಕ್ಷಿಸಿತು. ಕಳೆದ 2011ರ ಶೈಕ್ಷಣಿಕ ವರ್ಷಕ್ಕೆ, ಹಾರ್ವರ್ಡ್ 9%ಕ್ಕಿಂತ ಕಡಿಮೆ ಪ್ರಮಾಣದ ಅಭ್ಯರ್ಥಿಗಳ ಪ್ರವೇಶಾತಿಯನ್ನು ಅಂಗೀಕರಿಸಿತು, ಆ ವರ್ಷದ ಫಲಿತಾಂಶವು 80% ಆಗಿತ್ತು. US ನ್ಯೂಸ್ ಅಂಡ್ ವರ್ಲ್ಡ್ ರಿಪೋರ್ಟ್ ನ "2009ರ ಅಮೆರಿಕದ ಅತ್ಯುತ್ತಮ ಕಾಲೇಜು"ಗಳ ಪಟ್ಟಿಯು ಹಾರ್ವರ್ಡ್ ಗೆ ಆಯ್ಕೆಗೆ ಸಂಬಂಧಿಸಿದಂತೆ #2 ನೇ ಸ್ಥಾನ ನೀಡಿದೆ (ಯೇಲ್, ಪ್ರಿನ್ಸ್ಟನ್ ಹಾಗೂ MITಗೆ ಸಮನಾಗಿ, ಕಾಲ್ಟೆಕ್ ಗೆ ಹಿಂದಿನ ಸ್ಥಾನದಲ್ಲಿ), ಹಾಗೂ ಅತ್ಯುತ್ತಮ ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಮೊದಲನೇ ಸ್ಥಾನವನ್ನು ಗಳಿಸಿದೆ.[೬೩]

US ನ್ಯೂಸ್ ಅಂಡ್ ವರ್ಲ್ಡ್ ರಿಪೋರ್ಟ್ 2006ರ ಶೈಕ್ಷಣಿಕ ಅವಧಿಗೆ ಸ್ಕೂಲ್ ಆಫ್ ಬಿಸ್ನೆಸ್‌ಗೆ 14.3%, ಸಾರ್ವಜನಿಕ ಆರೋಗ್ಯ 4.5%, ಇಂಜಿನಿಯರಿಂಗ್ 12.5%, ಕಾನೂನು ಶಾಸ್ತ್ರ 11.3%, ಶಿಕ್ಷಣ ಶಾಸ್ತ್ರ 14.6% , ಹಾಗೂ ವೈದ್ಯ ಶಾಸ್ತ್ರಕ್ಕೆ 4.9% ಪ್ರವೇಶಾತಿ ಶೇಕಡಾವಾರುಗಳನ್ನು ಪಟ್ಟಿ ಮಾಡಿದೆ.[೬೪] ಸೆಪ್ಟೆಂಬರ್ 2006ರಲ್ಲಿ, ಹಾರ್ವರ್ಡ್ ಕಾಲೇಜ್ 2007ರಲ್ಲಿದ್ದ ಆರಂಭಿಕ ಪ್ರವೇಶಾತಿ ಕಾರ್ಯಕ್ರಮವನ್ನು ರದ್ದುಪಡಿಸುವುದಾಗಿ ಪ್ರಕಟಿಸಿತು. ಇದರಿಂದಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಕಡಿಮೆ-ವರಮಾನ ಹಾಗೂ ಕಡಿಮೆಪ್ರಾತಿನಿಧ್ಯತೆಯ ಅಲ್ಪಸಂಖ್ಯಾತ ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಲು ಎದುರಿಸುವ ಸ್ಪರ್ಧೆಯಲ್ಲಿನ ಅನನುಕೂಲವು ಕಡಿಮೆಯಾಗುತ್ತದೆಂದು ಸಮರ್ಥಿಸುತ್ತಾರೆ.[೬೫]

ಪದವಿಪೂರ್ವ ಪ್ರವೇಶಾತಿ ಕಚೇರಿಯಲ್ಲಿ ಹಳೆಯ ವಿದ್ಯಾರ್ಥಿಗಳ ಮಕ್ಕಳಿಗೆ ಆದ್ಯತೆನೀತಿಗಳು ಸಮಗ್ರ ಪರಿಶೀಲನೆ ಹಾಗೂ ಚರ್ಚೆಯ ವಿಷಯವಾಗಿತ್ತು.[೬೬] ಹಣಕಾಸಿನ ನೆರವಿನ ಹೊಸ ಮಾರ್ಗದರ್ಶನ ಸೂತ್ರದಡಿಯಲ್ಲಿ, $60,000ಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಪೋಷಕರು ತಮ್ಮ ಮಕ್ಕಳಿಗೆ ವಸತಿ ಮತ್ತು ಊಟ ಸೇರಿದಂತೆ ಹಾರ್ವರ್ಡ್ ಕಾಲೇಜಿಗೆ ಹಾಜರಿಯಾಗುವ ವೆಚ್ಚಕ್ಕೆ ಯಾವುದೇ ಶುಲ್ಕವನ್ನು ನಿರೀಕ್ಷಿಸಲಾಗುವುದಿಲ್ಲ. $60,000ದಿಂದ $80,000 ಆದಾಯವನ್ನು ಹೊಂದಿರುವ ಕುಟುಂಬಗಳು ವಾರ್ಷಿಕವಾಗಿ ಕೆಲವೇ ಕೆಲವು ಸಾವಿರ ಡಾಲರ್ ಗಳನ್ನು ಪಾವತಿಸಬೇಕಿತ್ತು. ಡಿಸೆಂಬರ್ 2007ರಲ್ಲಿ, ಹಾರ್ವರ್ಡ್, $120,000 ಹಾಗೂ $180,000 ನಡುವಿನ ಆದಾಯವನ್ನು ಹೊಂದಿರುವ ಕುಟುಂಬಗಳು ತಮ್ಮ ವಾರ್ಷಿಕ ವರಮಾನದಲ್ಲಿ 10%ನಷ್ಟು ಹಣವನ್ನು ಮಾತ್ರ ಶಿಕ್ಷಣ ಶುಲ್ಕವಾಗಿ ನೀಡಬೇಕೆಂದು ಪ್ರಕಟಣೆ ನೀಡಿತು.[೬೭]

ಗ್ರಂಥಾಲಯ ವ್ಯವಸ್ಥೆ ಹಾಗೂ ವಸ್ತುಸಂಗ್ರಹಾಲಯಗಳು

ಹ್ಯಾರಿ ಎಲ್ಕಿನ್ಸ್ ವೈಡೆನರ್ ಮೆಮೋರಿಯಲ್ ಗ್ರಂಥಾಲಯ

ಹಾರ್ವರ್ಡ್ ವಿಶ್ಯವಿದ್ಯಾಲಯ ಗ್ರಂಥಾಲಯ ವ್ಯವಸ್ಥೆಯು ಹಾರ್ವರ್ಡ್ ಪ್ರಾಂಗಣದ ವೈಡೆನರ್ ಗ್ರಂಥಾಲಯದಲ್ಲಿ ಕೇಂದ್ರೀಕೃತವಾಗಿದೆ ಹಾಗೂ 80 ಪ್ರತ್ಯೇಕ ಗ್ರಂಥಾಲಯಗಳು ಹಾಗೂ 15 ದಶಲಕ್ಷಕ್ಕೂ ಅಧಿಕ ಸಂಪುಟಗಳನ್ನು ಒಳಗೊಂಡಿದೆ.[೬೮] ಅಮೆರಿಕನ್ ಲೈಬ್ರರಿ ಅಸೋಸಿಯೇಶನ್ ಪ್ರಕಾರ, ಇದು ಅಮೆರಿಕ ಸಂಯುಕ್ತ ಸಂಸ್ಥಾನದ ಅತ್ಯಂತದ ದೊಡ್ಡ ಶೈಕ್ಷಣಿಕ ಗ್ರಂಥಾಲಯವೆನಿಸುವುದರ ಜೊತೆಗೆ ರಾಷ್ಟ್ರದ ಎರಡನೇ ಅತಂತ್ಯ ದೊಡ್ಡ ಗ್ರಂಥಾಲಯವಾಗಿದೆ (ಲೈಬ್ರರಿ ಆಫ್ ಕಾಂಗ್ರೆಸ್ಸ್ ನಂತರ).[೬೯] ಹಾರ್ವರ್ಡ್ ತನ್ನ ಗ್ರಂಥಾಲಯವನ್ನು "ವಿಶ್ವದ ಅತ್ಯಂತ ದೊಡ್ಡ ಶೈಕ್ಷಣಿಕ ಗ್ರಂಥಾಲಯವೆಂದು" ವಿವರಿಸುತ್ತದೆ.[೭೦]

ಕಾಬೊಟ್ ಸೈನ್ಸ್ ಗ್ರಂಥಾಲಯ, ಲಮೊಂಟ್ ಗ್ರಂಥಾಲಯ, ಹಾಗೂ ವೈಡೆನರ್ ಗ್ರಂಥಾಲಯವು ಪದವಿಪೂರ್ವ ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರೆಯುವ ಹಾಗೂ ಕೇಂದ್ರ ಸ್ಥಳದಲ್ಲಿದ್ದು ಉಪಯುಕ್ತವಾಗಿರುವ ಮೂರು ಅತ್ಯಂತ ಜನಪ್ರಿಯ ಗ್ರಂಥಾಲಯಗಳೆನಿಸಿವೆ. ಹಾರ್ವರ್ಡ್ ಗ್ರಂಥಾಲಯದುದ್ದಕ್ಕೂ ಅಪರೂಪವೆನಿಸುವ ಪುಸ್ತಕಗಳು, ಹಸ್ತಪ್ರತಿಗಳು ಹಾಗೂ ಇತರ ವಿಶೇಷ ಸಂಗ್ರಹಗಳಿವೆ;[೭೧] ಹೌಟನ್ ಗ್ರಂಥಾಲಯ, ಹಿಸ್ಟರಿ ಆಫ್ ವುಮೆನ್ ಇನ್ ಅಮೆರಿಕ ಕುರಿತ ಆರ್ಥರ್ ಅಂಡ್ ಎಲಿಜಬಥ್ ಸ್ಕ್ಲೆಸಿಂಗರ್ ಗ್ರಂಥಾಲಯ, ಹಾಗೂ ಹಾರ್ವರ್ಡ್ ಯೂನಿವರ್ಸಿಟಿ ಆರ್ಚಿವ್ಸ್ ಪ್ರಮುಖವಾಗಿ ಅಪರೂಪದ ಹಾಗೂ ವಿಶಿಷ್ಟ ಪುಸ್ತಕಗಳನ್ನು ಒಳಗೊಂಡಿದೆ. ಅಮೆರಿಕಾದ ಅತ್ಯಂತ ಹಳೆಯ ನಕ್ಷೆಗಳು, ಗೆಸೆಟಿಯರುಗಳ ಸಂಗ್ರಹ ಹಾಗೂ ಹಳೆಯ ಮತ್ತು ಹೊಸದು ಎರಡೂ ಇರುವ ಅಟ್ಲಾಸುಗಳು ಪುಸಿ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿದ್ದು ಸಾರ್ವಜನಿಕರಿಗೆ ಮುಕ್ತವಾಗಿದೆ.

ಪೂರ್ವ ಏಷಿಯಾದ ಭಾಷಾ ವಿಷಯಕಗಳ ಅತೀ ದೊಡ್ಡ ಸಂಗ್ರಹವು ಪೂರ್ವ ಏಷಿಯಾದ ಹೊರಗಿನ ಹಾರ್ವರ್ಡ್-ಯೆಂಚಿಂಗ್ ಲೈಬ್ರರಿಯಲ್ಲಿದೆ.

ಕೇಂಬ್ರಿಡ್ಜ್, ಮಸಾಚ್ಯೂಸೆಟ್ಸ್ ನಲ್ಲಿರುವ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯ (1971ರ ಛಾಯಾಚಿತ್ರ)
ಹೆನ್ರಿ ಮೂರೇ ಅವರ ಲಾರ್ಜ್ ಫೋರ್ ಪೀಸ್ ರಿಕ್ಲೈನಿಂಗ್ ಫಿಗರ್ ಶಿಲ್ಪಾಕೃತಿಯು ಹಾರ್ವರ್ಡ್ ಪ್ರಾಂಗಣದ ಆಚೆಗೆ ನೆಲೆಯಾಗಿದೆ

ಹಾರ್ವರ್ಡ್ ಹಲವಾರು ಕಲೆ, ಸಂಸ್ಕೃತಿ, ಹಾಗೂ ವೈಜ್ಞಾನಿಕ ವಸ್ತುಸಂಗ್ರಹಾಲಯಗಳ ಕಾರ್ಯಭಾರವನ್ನು ನಿರ್ವಹಿಸುತ್ತದೆ:

  • ಹಾರ್ವರ್ಡ್ ಆರ್ಟ್ ಮ್ಯೂಸಿಯಂ , ಇದರಲ್ಲಿ:
    • ದಿ ಫಾಗ್ಗ್ ಮ್ಯೂಸಿಯಂ ಆಫ್ ಆರ್ಟ್ , ಪಾಶ್ಚಿಮಾತ್ಯ ಕಲೆಯ ಇತಿಹಾಸವನ್ನು ಮಧ್ಯಯುಗದಿಂದ ಇಂದಿನವರೆಗೂ ಪ್ರದರ್ಶಿಸುವ ಚಿತ್ರಶಾಲೆಗಳನ್ನು ಒಳಗೊಂಡಿದೆ. ಇಟಾಲಿಯನ್ ಆರಂಭಿಕ ನವೋದಯದ ಕಲೆ, ಬ್ರಿಟಿಶ್ ಪ್ರಿ-ರಾಫಲೈಟ್ ಕಲೆ, ಹಾಗೂ 19ನೇ ಶತಮಾನದ ಫ್ರೆಂಚ್ ಆರ್ಟ್‌ನಲ್ಲಿ ನಿರ್ದಿಷ್ಟ ಸಂಗ್ರಹಗಳಿವೆ.
    • ದಿ ಬೂಸ್ಚ್-ರೆಯಿಸಿಂಗರ್ ಮ್ಯೂಸಿಯಂ , ಹಿಂದಿನ ಜರ್ಮನಿಕ್ ಮ್ಯೂಸಿಯಂ, ಕೇಂದ್ರ ಮತ್ತು ಉತ್ತರ ಯುರೋಪ್ ಕಲೆಗಳನ್ನು ಒಳಗೊಂಡಿವೆ.
    • ದಿ ಆರ್ಥರ್ M. ಸಾಕ್ಲರ್ ಮ್ಯೂಸಿಯಂ , ಇದರಲ್ಲಿ ಪುರಾತನ, ಏಶಿಯನ್, ಇಸ್ಲಾಮಿಕ್ ಹಾಗೂ ನಂತರದ ಭಾರತೀಯ ಕಲೆಯನ್ನು ಒಳಗೊಂಡಿದೆ.
  • ದಿ ಪೀಬಾಡಿ ಮ್ಯೂಸಿಯಂ ಆಫ್ ಆರ್ಕಿಯಾಲಜಿ ಅಂಡ್ ಎತ್ನಾಲಜಿ , ಪಶ್ಚಿಮ ಖಗೋಳಾರ್ಧದ ಸಾಂಸ್ಕೃತಿಕ ಇತಿಹಾಸ ಹಾಗೂ ನಾಗರೀಕತೆಗಳಲ್ಲಿ ಪರಿಣತಿ ಹೊಂದಿದೆ.
  • ದಿ ಸೆಮಿಟಿಕ್ ಮ್ಯೂಸಿಯಂ .
  • ದಿ ಹಾರ್ವರ್ಡ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಸಂಕೀರ್ಣ, ಇದರಲ್ಲಿ:
    • ದಿ ಹಾರ್ವರ್ಡ್ ಯೂನಿವರ್ಸಿಟಿ ಹರ್ಬರಿಯ , ಇಲ್ಲಿ ಪ್ರಸಿದ್ಧ ಬ್ಲಾಸ್ಚ್‌ಕಾ ಗಾಜಿನ ಹೂವು ಗಳನ್ನು ಪ್ರದರ್ಶಿಸಲಾಗಿದೆ.
    • ದಿ ಮ್ಯೂಸಿಯಂ ಆಫ್ ಕಂಪ್ಯಾರಿಟಿವ್ ಜುವಾಲಜಿ
    • ದಿ ಹಾರ್ವರ್ಡ್ ಮಿನೆರಲಾಜಿಕಲ್ ಮ್ಯೂಸಿಯಂ
  • ಲೇ ಕಾರ್ಬುಸಿಯೇರ್ ವಿನ್ಯಾಸಗೊಳಿಸಿದ ದಿ ಕಾರ್ಪೆಂಟರ್ ಸೆಂಟರ್ ಫಾರ್ ದಿ ವಿಷ್ಯುವಲ್ ಆರ್ಟ್ಸ್ , ವಿಶ್ವವಿದ್ಯಾಲಯದ ಚಲನಚಿತ್ರ ದಾಖಲೆ ಹಾಗೂ ವಿಷ್ಯುವಲ್ ಅಂಡ್ ಎನ್‌ವೈರಾನ್‌ಮೆಂಟಲ್ ಸ್ಟಡೀಸ್ ವಿಭಾಗದ ತವರಾಗಿದೆ.

ವಿದ್ಯಾರ್ಥಿ ಚಟುವಟಿಕೆಗಳು

ಕಳೆದ 2005ರಲ್ಲಿ, ದಿ ಬಾಸ್ಟನ್ ಗ್ಲೋಬ್ ಪದವಿಪೂರ್ವ ವಿದ್ಯಾರ್ಥಿ ತೃಪ್ತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ 21-ಪುಟಗಳ ಹಾರ್ವರ್ಡ್ ಆಂತರಿಕ ಟಿಪ್ಪಣಿಯನ್ನು ಪಡೆದಿರುವುದಾಗಿ ವರದಿ ಮಾಡಿತು. 2002ರ ಕನ್ಸೋರ್ಟಿಯಂ ಆನ್ ಫೈನಾನ್ಸಿಂಗ್ ಹೈಯರ್ ಎಜುಕೇಶನ್ (COFHE) ಅಗ್ರ 31 ವಿಶ್ವವಿದ್ಯಾಲಯಗಳ ಸಮೀಕ್ಷೆಯನ್ನು ಇದು ಆಧರಿಸಿತ್ತು.[೭೨] ಗ್ಲೋಬ್ COFHE ಸಮೀಕ್ಷೆಯ ಫಲಿತಾಂಶಗಳು ಹಾಗೂ ಹಾರ್ವರ್ಡ್ ವಿದ್ಯಾರ್ಥಿಗಳ ಉಲ್ಲೇಖಗಳನ್ನು ಮಂಡಿಸಿತು. ಇದರಲ್ಲಿ ಬೋಧಕವರ್ಗದೊಂದಿಗಿನ ಸಮಸ್ಯೆಗಳು, ಬೋಧನೆಯ ಗುಣಮಟ್ಟ, ಸಲಹೆಯ ಗುಣಮಟ್ಟ, ಕಾಲೇಜು ಕ್ಯಾಂಪಸ್ ಸಾಮಾಜಿಕ ಜೀವನ, ಹಾಗೂ ಸಮುದಾಯ ಪ್ರಜ್ಞೆ ಕುರಿತು ಕಡೆ ಪಕ್ಷ 1994ರಿಂದ ಸಮಸ್ಯೆಗಳಿವೆ ಎಂದು ದೂರಿದ್ದರು. ಹಾರ್ವರ್ಡ್ ಕ್ರಿಮ್ಸನ್ ನ ನಿಯತಕಾಲಿಕದ ವಿಭಾಗವು ಇದೆ ರೀತಿಯ ಶೈಕ್ಷಣಿಕ ಹಾಗೂ ಸಾಮಾಜಿಕ ಟೀಕೆಗಳನ್ನು ಪ್ರತಿಧ್ವನಿಸಿತು.[೭೩][೭೪] ಈ ಎಲ್ಲ ಸಮಸ್ಯೆಗಳ ಬಗ್ಗೆ ಅರಿವನ್ನು ಹೊಂದಿರುವುದರ ಜೊತೆಗೆ COFHE ಸಮೀಕ್ಷೆಯು ಎತ್ತಿ ಹಿಡಿದ ಸಮಸ್ಯೆಗಳನ್ನು ಸುಧಾರಿಸಲು ಬದ್ಧರಾಗಿರುವುದಾಗಿ ಹಾರ್ವರ್ಡ್ ಕಾಲೇಜಿನ ಮುಖ್ಯಸ್ಥ ಬೆನೆಡಿಕ್ಟ್ ಗ್ರೋಸ್ಸ್ ಹೇಳಿಕೆಯನ್ನು ಉಲ್ಲೇಖಿಸಿ ದಿ ಹಾರ್ವರ್ಡ್ ಕ್ರಿಮ್ಸನ್ ಹೇಳಿದೆ.[೭೫]

ಹಾರ್ವರ್ಡ್ ಕಾಲೇಜಿನಲ್ಲಿ, ಹಾರ್ವರ್ಡ್ ವಿದ್ಯಾರ್ಥಿ ಗುಂಪುಗಳ ಒಂದು ದೊಡ್ಡ ಪಟ್ಟಿಯೇ ಕಂಡುಬರುತ್ತದೆ.

  • ದಿ ಹಾರ್ವರ್ಡ್ ಕ್ರಿಮ್ಸನ್ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಅಮೆರಿಕಾದ ಅತ್ಯಂತ ಹಳೆಯ ಕಾಲೇಜು ದಿನಪತ್ರಿಕೆಯಾಗಿದೆ. 1873ರಲ್ಲಿ ಸ್ಥಾಪನೆಗೊಂಡು, ಇದು ತನ್ನ ಹಲವು ಸಂಪಾದಕರ ಪಟ್ಟಿಯಲ್ಲಿ ಹಲವಾರು ಪುಲಿಟ್ಜರ್ ಪ್ರಶಸ್ತಿ ವಿಜೇತರು ಹಾಗೂ ಇಬ್ಬರು U.S. ಅಧ್ಯಕ್ಷರುಗಳಾದ ಜಾನ್ F. ಕೆನೆಡಿ ಹಾಗೂ ಫ್ರ್ಯಾಂಕ್ಲಿನ್ D. ರೂಸೆವೆಲ್ಟ್ಅವರನ್ನು ಹೊಂದಿದೆ.
  • ದಿ ಹಾರ್ವರ್ಡ್ ಯೂನಿವರ್ಸಿಟಿ ಬ್ಯಾಂಡ್(ಸ್ಥಾಪನೆ 1919) ಒಂದು ಸಾಂಪ್ರದಾಯಿಕವಲ್ಲದ, ವಿದ್ಯಾರ್ಥಿಗಳು ನಡೆಸುವ ಮೆರವಣಿಗೆಯ ವಾದ್ಯಮೇಳವಾಗಿದೆ. ಇದು ಒಂದು ಸ್ಕ್ರಾಂಬಲ್ ಬ್ಯಾಂಡ್ಎಂದು ಹೆಸರಾಗಿದೆ. ದಿ ಹಾರ್ವರ್ಡ್ ವಿಂಡ್ ಎನ್ಸೆಂಬಲ್, ದಿ ಹಾರ್ವರ್ಡ್ ಸಮ್ಮರ್ ಪಾಪ್ಸ್ ಬ್ಯಾಂಡ್, ಹಾಗೂ ದಿ ಹಾರ್ವರ್ಡ್ ಜಾಜ್ಜ್ ಬ್ಯಾಂಡ್ ಸಹ HUB ಸಂಸ್ಥೆಯ ಆಶ್ರಯದಲ್ಲಿದೆ.
  • ದಿ ಹಾರ್ವರ್ಡ್ ಇಂಟರ್ನ್ಯಾಷನಲ್ ರಿಲೇಶನ್ಸ್ ಕೌನ್ಸಿಲ್ ಹಲವಾರು ಪ್ರಸಿದ್ಧ ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡಿದೆ, ಇದರಲ್ಲಿ ಹಾರ್ವರ್ಡ್ ಇಂಟರ್ನ್ಯಾಷನಲ್ ರಿವ್ಯೂ , ಹಾರ್ವರ್ಡ್ ಮಾಡೆಲ್ ಯುನೈಟೆಡ್ ನೇಶನ್ಸ್, ಹಾಗೂ ಅದರ ಹಾರ್ವರ್ಡ್ ನ್ಯಾಷನಲ್ ಮಾಡೆಲ್ ಯುನೈಟೆಡ್ ನೇಶನ್ಸ್ ಸೇರಿವೆ. HIR 70ಕ್ಕೂ ಅಧಿಕ ರಾಷ್ಟ್ರಗಳಲ್ಲಿ 35,000 ಓದುಗರನ್ನು ಹೊಂದಿದೆ. ಜೊತೆಗೆ ಇದು ನಿಯಮಿತವಾಗಿ ವಿಶ್ವಾದ್ಯಂತ ಪ್ರಮುಖ ವಿದ್ವಾಂಸರು ಹಾಗೂ ನೀತಿನಿರೂಪಕರ ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸುತ್ತದೆ. HMUN ವಿಶ್ವದಲ್ಲೇ ಅತ್ಯಂತ ಹಳೆಯ ಪ್ರೌಢಶಾಲಾ ಮಟ್ಟದ ಮಾಡೆಲ್ ಯುನೈಟೆಡ್ ನೇಶನ್ಸ್ ನ ಅನುಕರಣೆಯಾಗಿದೆ, ಇದು 1920ರ ದಶಕದಲ್ಲಿ ಲೀಗ್ ಆಫ್ ನೇಶನ್ಸ್ ನ ಅನುಕರಣೆಯಾಗಿ ಆರಂಭಗೊಂಡಿತ್ತು. HNMUN ಇದೇ ರೀತಿಯಾಗಿ ವಿಶ್ವದಲ್ಲಿ ಅತ್ಯಂತ ದೀರ್ಘಾವಧಿಯ ಕಾಲೇಜು ಮಟ್ಟದ ಅನುಕರಣೆಯಾಗಿರುವುದರ ಜೊತೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ದೊಡ್ಡ ಮಟ್ಟದ ಸಂಘಟನೆಯಾಗಿದೆ. ಹಾರ್ವರ್ಡ್ ನ ಯಾವುದೇ ವಿದ್ಯಾರ್ಥಿ ಸಂಘಟನೆಗಿಂತ IRC ಹೆಚ್ಚಿನ ಸದಸ್ಯರನ್ನು ಹೊಂದಿದೆ.
  • ದಿ ಹಾರ್ವರ್ಡ್ ಲ್ಯಾಂಪೂನ್ ಒಂದು ಪದವಿಪೂರ್ವ ವಿದ್ಯಾರ್ಥಿಗಳ ಹಾಸ್ಯಪ್ರಜ್ಞೆಯ ಸಂಸ್ಥೆಯಾಗಿದೆ ಹಾಗೂ ಸಂಸ್ಥೆಯ ಪ್ರಕಟಣೆಯನ್ನು 1876ರಲ್ಲಿ ಸ್ಥಾಪಿಸಲಾಗಿದೆ.

ಇದು ದಿ ಕ್ರಿಮ್ಸನ್ ನೊಂದಿಗೆ ಒಂದು ದೀರ್ಘಾವಧಿಯ ಸ್ಪರ್ಧೆಯನ್ನು ಹೊಂದಿದೆ ಜೊತೆಗೆ ಇದರ ಮಾಜಿ ಸದಸ್ಯರುಗಳಲ್ಲಿ ರಾಬರ್ಟ್ ಬೆಂಚ್‌ಲಿ, ಜಾನ್ ಅಪ್ ಡೈಕ್, ಜಾರ್ಜ್ ಪ್ಲಿಂಪ್‌ಟನ್, ಸ್ಟೀವ್ ಓ' ಡೋನ್ನೆಲ್, ಕೋನನ್ ಓ'ಬ್ರಿಯೇನ್, ಮಾರ್ಕ್ ಓ' ಡೋನ್ನೆಲ್, ಹಾಗೂ ಆಂಡಿ ಬೋರೊವಿಟ್ಜ್ ಸೇರಿದ್ದಾರೆ. ವಿರಳವಾಗಿ ಪ್ರಕಟವಾಗುವ ಪತ್ರಿಕೆಯು ಬ್ರಿಟಿಶ್‌ನ ವಿಡಂಬನಾತ್ಮಕ ನಿಯತಕಾಲಿಕ, ಪಂಚ್‌ನ ಮೂಲತಃ ಮಾದರಿಯಾಗಿದ್ದು, ಈಗ ಅದನ್ನು ಮೀರಿಸಿದೆ. ಇದು ವಿಶ್ವದಲ್ಲೇ ಯೇಲ್ ರೆಕಾರ್ಡ್ ಗಿಂತ ಎರಡನೇ ಅತ್ಯಂತ ಹಳೆಯ ಹಾಸ್ಯಪ್ರಜ್ಞೆ ನಿಯತಕಾಲಿಕವಾಗಿದೆ. ಕೋನನ್ ಓ'ಬ್ರಿಯೇನ್ ತಮ್ಮ ಪದವಿಪೂರ್ವ ಶೈಕ್ಷಣಿಕ ಅವಧಿಯ ಕಡೆಯ ಎರಡು ವರ್ಷಗಳಲ್ಲಿ ಲ್ಯಾಂಪೂನ್ ನ ಅಧ್ಯಕ್ಷರಾಗಿದ್ದರು. ದಿ ನ್ಯಾಷನಲ್ ಲ್ಯಾಂಪೂನ್ 1970ರಲ್ಲಿ ಹಾರ್ವರ್ಡ್‌ನ ಪ್ರಕಟಣೆಯ ಒಂದು ಉಪಪತ್ರಿಕೆಯಾಗಿ ಸ್ಥಾಪಿತವಾಯಿತು.)

ತನ್ನ ವಿಶಿಷ್ಟ ಚಾವಣಿ ಐಬಿಸ್ ಹಾಗೂ ಅದರ ನೇರಳೆ ಹಾಗೂ ಹಳದಿ ಬಣ್ಣದ ಬಾಗಿಲನ್ನು ಹೊಂದಿರುವ ಹಾರ್ವರ್ಡ್ ಲ್ಯಾಂಪೂನ್ "ಕೋಟೆ"
  • ದಿ ಹಾರ್ವರ್ಡ್ ಅಡ್ವೋಕೇಟ್ (ಸ್ಥಾಪನೆ 1866) ರಾಷ್ಟ್ರದ ಅತ್ಯಂತ ಹಳೆಯ ಕಾಲೇಜು ಸಾಹಿತ್ಯಕ ನಿಯತಕಾಲಿಕವಾಗಿದೆ. ಹಿಂದಿನ ಸದಸ್ಯರುಗಳಲ್ಲಿ ಥಿಯೋಡೋರ್ ರೂಸ್ವೆಲ್ಟ್, T. S. ಎಲಿಯಟ್, ಹಾಗೂ ಮೇರಿ ಜೋ ಸಾಲ್ಟರ್ ಸೇರಿದ್ದಾರೆ.
  • ದಿ ಹಾರ್ವರ್ಡ್ ಸೇಲಿಯಂಟ್[೪] Archived 2014-01-03 ವೇಬ್ಯಾಕ್ ಮೆಷಿನ್ ನಲ್ಲಿ. ಕ್ಯಾಂಪಸ್‌ನ ವಾರಕ್ಕೆ ಎರಡು ಬಾರಿ ಪ್ರಕಟಗೊಳ್ಳುವ ಸಾಂಪ್ರದಾಯಿಕ ನಿಯತಕಾಲಿಕವಾಗಿದೆ, ಇದರ ಹಿಂದಿನ ಸಂಪಾದಕರುಗಳಲ್ಲಿ ಹಲವು ಪ್ರಮುಖ ಸಂಪ್ರದಾಯಶೀಲ ಚಿಂತಕರು ಹಾಗೂ ಪತ್ರಕರ್ತರು ಸೇರಿದ್ದಾರೆ.
  • ದಿ ಹಾರ್ವರ್ಡ್ ಗ್ಲೀ ಕ್ಲಬ್ (ಸ್ಥಾಪನೆ 1858) ರಾಷ್ಟ್ರದಲ್ಲಿ ಅತ್ಯಂತ ಹಳೆಯ ಕಾಲೇಜಿನ ಗಾಯಕ ಮೇಳವಾಗಿದೆ; ಹಾರ್ವರ್ಡ್ ಯುನಿವರ್ಸಿಟಿ ಚಾಯಿರ್ ರಾಷ್ಟ್ರದಲ್ಲಿ ಅತ್ಯಂತ ಹಳೆಯ ವಿಶ್ವವಿದ್ಯಾಲಯ-ಸಂಯೋಜಿತ ಗಾಯಕ ವೃಂದವಾಗಿದೆ; ಜೊತೆಗೆ ಹಾರ್ವರ್ಡ್ - ರಾಡ್‌ಕ್ಲಿಫ್ ಆರ್ಕೆಸ್ಟ್ರಾ (ಸ್ಥಾಪನೆ 1808), ನ್ಯೂ ಯಾರ್ಕ್ ಫಿಲ್ಹಾರ್ಮೋನಿಕ್ ಗಿಂತ ತಾಂತ್ರಿಕವಾಗಿ ಹಳೆಯದೆನಿಸಿದೆ, ಆದಾಗ್ಯೂ ಅದರ ಅಸ್ತಿತ್ವದ ಸುಮಾರು ಅರ್ಧದಷ್ಟು ಭಾಗ ಕೇವಲ ಒಂದು ಸಿಂಫನಿ ವಾದ್ಯಮೇಳವಾಗಿತ್ತು. ದಿ ಬಾಚ್ ಸೊಸೈಟಿ ಆರ್ಕೆಸ್ಟ್ರಾ ಆಫ್ ಹಾರ್ವರ್ಡ್ ಯುನಿವರ್ಸಿಟಿಚೇಂಬರ್ ಆಕ್ರೆಸ್ಟ್ರಾ ಆಗಿದ್ದು, ಸಂಪೂರ್ಣವಾಗಿ ವಿದ್ಯಾರ್ಥಿಗಳೇ ಸಿಬ್ಬಂದಿಗಳಾಗಿ,ನಿರ್ವಹಣೆ ಹಾಗೂ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.
  • ದಿ ಹೇಸ್ಟಿ ಪುಡ್ಡಿಂಗ್ ಥಿಯೇಟರಿಕಲ್ಸ್ (ಸ್ಥಾಪನೆ 1844) ರಂಗಭೂಮಿ ಸೊಸೈಟಿಯಾಗಿದ್ದು, ತನ್ನ ಅಣಕ ಸಂಗೀತಗಳಿಗೆ ಅಲ್ಲದೇ ವಾರ್ಷಿಕ "ಮ್ಯಾನ್ ಆಫ್ ದಿ ಇಯರ್" ಹಾಗೂ "ವುಮನ್ ಆಫ್ ದಿ ಇಯರ್" ಸಮಾರಂಭಗಳಿಗೆ ಹೆಸರಾಗಿದೆ.ಸಂಸ್ಥೆಯ ಹಿಂದಿನ ಸದಸ್ಯರುಗಳಲ್ಲಿ ಅಲನ್ ಜೇ ಲರ್ನರ್, ಜ್ಯಾಕ್ ಲೆಮ್ಮೊನ್, ಹಾಗೂ ಜಾನ್ ಲಿಥ್ಗೌ ಸೇರಿದ್ದಾರೆ.
  • WHRB (95.3 FM ಕೇಂಬ್ರಿಡ್ಜ್), ಕ್ಯಾಂಪಸ್ ಬಾನುಲಿ ಕೇಂದ್ರವನ್ನು ವಿಶೇಷವಾಗಿ ಹಾರ್ವರ್ಡ್ ವಿದ್ಯಾರ್ಥಿಗಳು, ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳ ವಸತಿನಿಲಯವಾದ ಪೆನ್ನಿಪ್ಯಾಕರ್ ಹಾಲ್‌ನ ನೆಲಮಾಳಿಗೆಯಲ್ಲಿ ನಡೆಸುತ್ತಾರೆ. ಬಾಸ್ಟನ್ ಮೆಟ್ರೋಪಾಲಿಟನ್ ಪ್ರದೇಶದ ಉದ್ದಕ್ಕೂ ತನ್ನ ಸಾಂಪ್ರದಾಯಿಕ, ಜಾಝ್, ಅಸಾಂಪ್ರದಾಯಿಕ ರಾಕ್ ಹಾಗೂ ಹಿಪ್-ಹಾಪ್, ಬ್ಲೂಸ್ ಕಾರ್ಯಕ್ರಮಗಳಿಂದ ಪರಿಚಿತವಾಗಿದೆ. ವಿಶೇಷವಾಗಿ ಅದರ ವಾಚನಾವಧಿಯ "ಆರ್ಗೀಸ್‌" ಒಬ್ಬ ನಿರ್ದಿಷ್ಟ ಸಂಗೀತರಚನೆಕಾರ, ಆರ್ಕೇಸ್ಟ್ರಾ, ವಾದ್ಯಮೇಳ ಅಥವಾ ಕಲಾವಿದನ ಸಂಪೂರ್ಣ ಕೆಲಸವನ್ನು ಜಾಹೀರಾತಿನ ವಿರಾಮವಿಲ್ಲದೇ ಅನೇಕ ದಿನಗಳವರೆಗೆ ನಿರಂತರವಾಗಿ ಪ್ರಸಾರ ಮಾಡಲಾಗುತ್ತದೆ. ಬಾನುಲಿ ಕೇಂದ್ರದ DJಗಳಿಗೆ ತಮ್ಮ ಸೆಮೆಸ್ಟರ್ ಅಂತಿಮ ಪರೀಕ್ಷೆಗಳಿಗೆ ಮುಂಚೆ ಅಧ್ಯಯನಕ್ಕೆ ಗಮನ ಹರಿಸಲು ಅವಕಾಶ ಸಿಗುತ್ತದೆ.
  • ದಿ ಹಾರ್ವರ್ಡ್ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಧ್ಯಕ್ಷ ಕೆನೆಡಿಯ ಒಂದು ಜೀವಂತ ಸ್ಮಾರಕವಾಗಿದೆ. ಇದು ಪದವಿಪೂರ್ವ ವಿದ್ಯಾರ್ಥಿಗಳಿಗೆ ಮನ್ನಣೆರಹಿತ ಪಠ್ಯಕ್ರಮಗಳು ಹಾಗೂ ಕಾರ್ಯಾಗಾರಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಇಂಟರ್ನ್ಶಿಪ್ ಮೂಲಕ ಸಾರ್ವಜನಿಕ ಸೇವೆಯನ್ನು ಉತ್ತೇಜಿಸುತ್ತದೆ.
  • ದಿ ಫಿಲ್ಲಿಪ್ಸ್ ಬ್ರೂಕ್ಸ್ ಹೌಸ್ ಅಸೋಸಿಯೇಶನ್(PBHA)[೭೬] ಒಂದು 501(c)(3) ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ. ಇದು ಹಾರ್ವರ್ಡ್‌ನಲ್ಲಿ ಡಜನ್ ಗಟ್ಟಲೆ ಸಮುದಾಯ ಸೇವೆ ಹಾಗೂ ಸಾಮಾಜಿಕ ಬದಲಾವಣೆ ಕಾರ್ಯಕ್ರಮಗಳಿಗೆ ಆಶ್ರಯ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತದೆ. PBHA 1600 ಸ್ವಯಂಸೇವಕರನ್ನು ಒಳಗೊಳ್ಳುವುದರ ಜೊತೆಗೆ ಗ್ರೇಟರ್ ಬಾಸ್ಟನ್ ಪ್ರದೇಶದಲ್ಲಿ 10,000 ಜನರಿಗೆ ತನ್ನ ಸೇವೆಯನ್ನು ಒದಗಿಸುತ್ತದೆ. ಹಳೆಯ ವಿದ್ಯಾರ್ಥಿಗಳಲ್ಲಿ ಪ್ರಮುಖರೆಂದರೆ ಫ್ರ್ಯಾಂಕ್ಲಿನ್ ಡೆಲಾನೋ ರೂಸೆವೆಲ್ಟ್, ರೋಜರ್ ನ್ಯಾಶ್ ಬಾಲ್ಡವಿನ್, ರಾಬರ್ಟ್ ಕೋಲ್ಸ್, ಹಾಗೂ ಡೇವಿಡ್ ಸೌಟರ್ ಸೇರಿದ್ದಾರೆ.
  • ಹಾರ್ವರ್ಡ್ ಸ್ಟೂಡೆಂಟ್ ಏಜೆನ್ಸೀಸ್ [೭೭] ವಿಶ್ವದಲ್ಲೇ ಅತ್ಯಂತ ದೊಡ್ಡ ವಿದ್ಯಾರ್ಥಿಗಳು ನಡೆಸುವ ನಿಗಮವಾಗಿದೆ. ಇದು 2006ರಲ್ಲಿ $6 ದಶಲಕ್ಷ ವರಮಾನವನ್ನು ಹೊಂದಿತ್ತು.[೭೮] ಹಳೆಯ ವಿದ್ಯಾರ್ಥಿಗಳಲ್ಲಿ ಪ್ರಮುಖರೆಂದರೆ ಸ್ಟೇಪಲ್ಸ್, Inc.ನ ಸ್ಥಾಪಕ ಥಾಮಸ್ ಸ್ಟೆಂಬರ್ಗ್ ಹಾಗೂ ಲಂಡನ್‌ನ ಡ್ಯೂಚೆ ಬ್ಯಾಂಕ್‌ನ ಒಬ್ಬ ಮಂಡಳಿ ಸದಸ್ಯ ಮೈಕಲ್ ಕಾಹರ್ಸ್ ಸೇರಿದ್ದಾರೆ.
  • ಹಾರ್ವರ್ಡ್ ಮಾಡೆಲ್ ಕಾಂಗ್ರೆಸ್ಸ್ ರಾಷ್ಟ್ರದ ಅತ್ಯಂತ ಹಳೆಯ ಹಾಗೂ ಅತ್ಯಂತ ದೊಡ್ಡ ಕಾಂಗ್ರೆಸ್ ಅನುಕರಣೆಯ ಸಮಾವೇಶವಾಗಿದೆ.ಇದರಲ್ಲಿ U.S. ಹಾಗೂ ವಿದೇಶದಿಂದ ಸಾವಿರಾರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಮೇರಿಕನ್ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವ ಅನುಭವವನ್ನು ನೇರವಾಗಿ ಹೊಂದುವ ಅವಕಾಶ ಸಿಗುತ್ತದೆ.
  • ದಿ ಹಾರ್ವರ್ಡ್ ಇಚುಸ್ ಕ್ರಿಶ್ಚಿಯನ್ ಚಿಂತನೆಯ ಮೊದಲ ಕಾಲೇಜು ಪತ್ರಿಕೆಯಾಗಿದೆ, ಇದು ಅಗಸ್ಟಿನ್ ಪ್ರಾಜೆಕ್ಟ್ ಮೂಲಕ ಈಶಾನ್ಯ ದಿಕ್ಕಿನುದ್ದಕ್ಕೂ ಇಂತಹ 20ಕ್ಕೂ ಹೆಚ್ಚು ಪತ್ರಿಕೆಗಳ ಸ್ಥಾಪನೆಗೆ ಸ್ಫೂರ್ತಿಯಾಯಿತು.[೭೯] ಇದರಲ್ಲಿ ಪ್ರಮುಖ ಮತಧರ್ಮಶಾಸ್ತ್ರಜ್ಞರು ಹಾಗೂ ವಿದ್ಯಾರ್ಥಿಗಳು ತಮ್ಮ ಲೇಖನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರಲ್ಲಿ Fr. ರಿಚರ್ಡ್ ಜಾನ್ ನ್ಯೂಹೌಸ್, ಸ್ಟ್ಯಾನ್ಲೆಯ್ ಹುಯೇರ್ವಾಸ್, ಗ್ಲೆನ್ ಸ್ಟಾಸ್ಸೇನ್, ಹಾಗೂ Fr. ರಿಚರ್ಡ್ ಸ್ಕಾಲ್ ಸೇರಿದ್ದಾರೆ.
  • ದಿ ಹಾರ್ವರ್ಡ್ ಚೆಸ್ ಕ್ಲಬ್ ರಾಷ್ಟ್ರದ ಅತ್ಯಂತ ಹಳೆಯ ಕಾಲೇಜು ಚೆಸ್ ಕ್ಲಬ್ ಆಗಿದೆ, ಇದು 1874ರಲ್ಲಿ ಸ್ಥಾಪನೆಯಾಯಿತು.[೮೦]

ಯೇಲ್ ವಿರುದ್ಧದ ಹಾರ್ವರ್ಡ್ - ಯೇಲ್ ಫುಟ್ಬಾಲ್ ಪಂದ್ಯಾವಳಿಯು ವಾರ್ಷಿಕವಾಗಿ 1906ರಿಂದಲೂ ನಡೆಯುತ್ತಿದೆ.[೮೧] ಹಾರ್ವರ್ಡ್ ಹಳೆಯ ವಿದ್ಯಾರ್ಥಿಗಳಿಂದ ಹಲವಾರು ಅಂತರ ಕಾಲೇಜು ರಾಷ್ಟ್ರೀಯ ಚೆಸ್ಸ್ ಚಾಂಪಿಯನ್‌ಶಿಪ್‌ಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಹಾಗೂ ಎರಡು ಬಾರಿ ಅಮೆರಿಕ ಸಂಯುಕ್ತ ಸಂಸ್ಥಾನದ ಚಾಂಪಿಯನ್ ಪ್ಯಾಟ್ರಿಕ್ ವೊಲ್ಫ್ಸೇರಿವೆ.

  • ಹಾರ್ವರ್ಡ್/MIT ಕೋಆಪರೇಟಿವ್ ಸೊಸೈಟಿ ಒಂದು ಸಹಕಾರಿ ಪುಸ್ತಕದಂಗಡಿಯಾಗಿದೆ. ಇದು ತನ್ನ ನಿರ್ದೇಶಕರುಗಳ ಮಂಡಳಿಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳನ್ನು ಒಳಗೊಂಡಿದೆ.
  • ದಿ ಹಾರ್ವರ್ಡ್ ವೈರ್ಲೆಸ್ ಕ್ಲಬ್ ರಾಷ್ಟ್ರದ ಅತ್ಯಂತ ಹಳೆಯ ಹವ್ಯಾಸಿ ರೇಡಿಯೋ ಕ್ಲಬ್ ಆಗಿದೆ, ಇದನ್ನು 1909ರಲ್ಲಿ ಸ್ಥಾಪನೆ ಮಾಡಲಾಯಿತು. ಅವರ ಬಾನುಲಿ ಕೇಂದ್ರದ ಕರೆಯ ಸಂಕೇತವು W1AF ಆಗಿದೆ."ಪ್ರೊಫೆಸರ್ ಜಾರ್ಜ್ W. ಪಿಯೇರ್ಸ್ ಮೊದಲ ಅಧ್ಯಕ್ಷರಾಗಿದ್ದರು, ಜೊತೆಗೆ ನಿಕೋಲ ತೆಲ್ಸ, ಥಾಮಸ್ A. ಎಡಿಸನ್, ಗುಗ್ಲಿಯೇಲ್ಮೋ ಮಾರ್ಕೋನಿ, ಗ್ರೀನ್ ಲೀಫ್ W. ಪಿಕಾರ್ಡ್ ಹಾಗೂ R. A. ಫೆಸ್ಸೇನ್ಡೆನ್ ಇದರ ಗೌರವ ಸದಸ್ಯರಾಗಿದ್ದರು."[೮೨]

ಹಳೆಯ ವಿದ್ಯಾರ್ಥಿಗಳು

ಬರಾಕ್ ಒಬಾಮ, ಅಮೆರಿಕ ಸಂಯುಕ್ತ ಸಂಸ್ಥಾನದ ಇಂದಿನ ಅಧ್ಯಕ್ಷ, ಇವರು ಹಾರ್ವರ್ಡ್ ಲಾ ಸ್ಕೂಲ್ ನಿಂದ ಪದವಿಯನ್ನು ಗಳಿಸುವುದರ ಜೊತೆಗೆ 1991ರಲ್ಲಿ ಜೂರಿಸ್ ಡಾಕ್ಟರ್ (J.D.)ನ್ನು ಪಡೆದರು.

ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಪ್ರಮುಖರಲ್ಲಿ ಅಮೆರಿಕದ ರಾಜಕೀಯ ಮುಖಂಡರುಗಳಾದ ಜಾನ್ ಹ್ಯಾನ್ಕಾಕ್, ಜಾನ್ ಆಡಮ್ಸ್, ಜಾನ್ ಕ್ವಿನ್ಸಿ ಆಡಮ್ಸ್, ಥಿಯೋಡೋರ್ ರೂಸೆವೆಲ್ಟ್, ಫ್ರ್ಯಾಂಕ್ಲಿನ್ ರೂಸೆವೆಲ್ಟ್, ಜಾನ್ F. ಕೆನೆಡಿ, ಜಾರ್ಜ್ W. ಬುಷ್, ಆಲ್ ಗೋರೆ ಹಾಗೂ ಬರಾಕ್ ಒಬಾಮ, ಕೆನಡಾದ ಪ್ರಧಾನ ಮಂತ್ರಿಗಳಾದ ಮ್ಯಾಕೆನ್ಜಿ ಕಿಂಗ್, ಹಾಗೂ ಪಿಯೇರ್ರೆ ಟ್ರೂಡೆಯು, ಕೆನಡಾದ ರಾಜಕೀಯ ಮುಖಂಡ ಮೈಕಲ್ ಇಗ್ನಾಟಿಯೆಫ್, ವಸತಿ ಹಾಗೂ ನಗರಾಭಿವೃದ್ಧಿ ಕಾರ್ಯದರ್ಶಿ ಶೌನ್ ಡೋನೋವ್ಯಾನ್, ಧಾರ್ಮಿಕ ಮುಖಂಡ, ವ್ಯಾಪಾರಿ ಹಾಗೂ ಲೋಕೋಪಕಾರಿ ಆಘ ಖಾನ್ IV, ಲೋಕೋಪಕಾರಿ ಹಂಟಿಂಗ್ಟನ್ ಹಾರ್ಟ್ಫೋರ್ಡ್, ಪೆರು ದೇಶದ ಅಧ್ಯಕ್ಷ ಅಲೆಜಾನ್ಡ್ರೋ ಟೋಲೆಡೋ, ಕೊಲಂಬಿಯಾದ ಅಧ್ಯಕ್ಷ ಅಲ್ವರೋ ಉರಿಬೆ, ಮೆಕ್ಸಿಕನ್ ಅಧ್ಯಕ್ಷ ಫೆಲಿಪೆ ಕಾಲ್ಡೆರಾನ್,[೮೩] UN ಸೆಕ್ರೆಟರಿ ಜನರಲ್ ಬಾನ್ ಕಿ ಮೂನ್, ತತ್ತ್ವ ಚಿಂತಕ ಹೆನ್ರಿ ಡೇವಿಡ್ ತೋರು ಹಾಗೂ ಲೇಖಕರಾದ ರಾಲ್ಫ್ ವಾಲ್ಡೋ ಎಮರ್ಸನ್ ಹಾಗೂ ವಿಲ್ಲಿಯಮ್ S. ಬೋರೊಗ್ಸ್, ಶಿಕ್ಷಣತಜ್ಞ ಹಾರ್ಲನ್ ಹಾನ್ಸನ್, ಕವಿಗಳಾದ ವಾಲೇಸ್ ಸ್ಟೀವನ್ಸ್, T.S. ಎಲಿಯಟ್, ಹಾಗೂ E. E. ಕಮಿಂಗ್ಸ್ ಸಂಯೋಜಕ ಲಿಯೋನಾರ್ಡ್ ಬರ್ನ್ಸ್ಟೇಯಿನ್, ಚೆಲೋವಾದಕ ಯೋ ಯೋ ಮಾ, ವಿಧೂಷಕ ಹಾಗೂ ದೂರದರ್ಶನ ಕಾರ್ಯಕ್ರಮದ ನಿರೂಪಕ ಹಾಗೂ ಬರಹಗಾರ ಕಾನನ್ ಓ' ಬ್ರಿಯೇನ್, ನಟರಾದ ಜ್ಯಾಕ್ ಲೆಮ್ಮೊನ್, ನತಾಲಿ ಪೋರ್ಟ್ಮನ್, ಮೀರಾ ಸೋರ್ವಿನೋ, ತತ್ಯಾನ ಅಲಿ, ಎಲಿಜಬಥ್ ಶು, ರಶೀದ ಜೋನೆಸ್ ಹಾಗೂ ಟಾಮಿ ಲೀ ಜೋನೆಸ್, ಚಲನಚಿತ್ರ ನಿರ್ದೇಶಕರುಗಳಾದ ಡಾರ್ರೆನ್ ಆರೋನೋಫ್ಸ್ಕಿ, ನೆಲ್ಸನ್ ಆನ್ಟೋನಿಯೋ ಡೆನಿಸ್, ಮೀರಾ ನಾಯರ್ ಹಾಗೂ ಟೆರೆನ್ಸ್ ಮಲಿಕ್, ವಿನ್ಯಾಸಗಾರ ಫಿಲಿಪ್ ಜಾನ್ಸನ್, ಗಿಟಾರ್ ವಾದಕ ಟಾಂ ಮೊರೆಲ್ಲೋ, ಗಾಯಕ ರಿವರ್ಸ್ ಕ್ಯೋಮೋ, ಹಾಡುಗಾರ ರಿವರ್ಸ್ ಕ್ಯೂಮೊ,ಸಂಗೀತಗಾರ ನಿರ್ಮಾಪಕ ಹಾಗೂ ಸಂಯೋಜಕ ರಯಾನ್ ಲೆಸ್ಲಿ, ಅನ್ಅಬಾಂಬರ್ ಟೆಡ್ ಕಾಜಿನ್‌ಸ್ಕಿ, ಕಾರ್ಯಕ್ರಮ ಸಂಯೋಜಕ ಹಾಗೂ ಕಾರ್ಯಕರ್ತ ರಿಚರ್ಡ್ ಸ್ಟಾಲ್ಮ್ಯಾನ್ ಹಾಗೂ ಪೌರ ಹಕ್ಕುಗಳ ಮುಖಂಡ W. E. B. ಡು ಬೋಯಿಸ್ ಸೇರಿದ್ದಾರೆ.

ಅದರ ಅತ್ಯಂತ ಪ್ರಮುಖ ಪ್ರಸಕ್ತ ಬೋಧನಾವರ್ಗದಲ್ಲಿ ಜೀವವಿಜ್ಞಾನಿ E. O. ವಿಲ್ಸನ್, ವಿಚಾರಣೀಯ ವಿಜ್ಞಾನಿ ಸ್ಟೀವನ್ ಪಿಂಕರ್, ಭೌತವಿಜ್ಞಾನಿಗಳಾದ ಲೀಸ ರಾನ್ಡಲ್ ಹಾಗೂ ರಾಯ್ ಗ್ಲೌಬರ್, ಶೇಕ್ಸಪಿಯರ್ ವಿದ್ವಾಂಸ ಸ್ಟೀಫನ್ ಗ್ರೀನ್ಬ್ಲಾಟ್, ಲೇಖಕ ಲೂಯಿಸ್ ಮೇನಂಡ್, ವಿಮರ್ಶಕಿ ಹೆಲೆನ್ ವೆಂಡ್ಲಾರ್, ಇತಿಹಾಸಜ್ಞ ನಿಯಲ್ ಫೆರ್ಗೂಸನ್, ಅರ್ಥಶಾಸ್ತ್ರಜ್ಞರಾದ ಅಮಾರ್ತ್ಯ ಸೇನ್, N. ಗ್ರೆಗರಿ ಮನ್ಕಿವ್, ರಾಬರ್ಟ್ ಬರ್ರೋ, ಸ್ಟೀಫನ್ A. ಮರ್ಗ್ಲಿನ್, ಡಾನ್ M. ವಿಲ್ಸನ್ III ಹಾಗೂ ಮಾರ್ಟಿನ್ ಫೆಲ್ಡ್‌ಸ್ಟೈನ್, ರಾಜಕೀಯ ತತ್ತ್ವ ಚಿಂತಕರಾದ ಹಾರ್ವೆ ಮಾನ್ಸ್ಫೀಲ್ಡ್ ಹಾಗೂ ಮೈಕಲ್ ಸಾಂಡೆಲ್, ರಾಜಕೀಯ ವಿಜ್ಞಾನಿಗಳಾದ ರಾಬರ್ಟ್ ಪುಟ್ನಂ, ಜೋಸೆಫ್ ನಯೇ, ಸ್ಟಾನ್ಲೇಯ್ ಹೋಫ್ಮನ್, ಹಾಗೂ ದಿವಂಗತ ರಿಚರ್ಡ್ E. ನ್ಯೂಸ್ಟಡ್ಟ್, ವಿದ್ವಾಂಸ/ಸಂಯೋಜಕರಾದ ರಾಬರ್ಟ್ ಲೆವಿನ್ ಹಾಗೂ ಬರ್ನಾರ್ಡ್ ರಾಂಡ್ಸ್ಸೇರಿದ್ದಾರೆ.

ಎಪ್ಪತ್ತೈದು ನೋಬಲ್ ಪ್ರಶಸ್ತಿ ಪುರಸ್ಕೃತರು ವಿಶ್ವವಿದ್ಯಾಲಯದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಕಳೆದ 1974ರಿಂದೀಚೆಗೆ, 19 ನೋಬಲ್ ಪ್ರಶಸ್ತಿ ಪುರಸ್ಕೃತರು ಹಾಗೂ ಅಮೆರಿಕನ್ ಸಾಹಿತ್ಯ ಪ್ರಶಸ್ತಿ ಪುಲಿಟ್ಜರ್ ಪ್ರಶಸ್ತಿಯ 15 ಮಂದಿ ಪುರಸ್ಕೃತರು ಹಾರ್ವರ್ಡ್ ಬೋಧನಾವರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ಕ್ರೀಡಾಸ್ಪರ್ಧೆಗಳು

ಹಾರ್ವರ್ಡ್ ಕ್ರೀಡಾಂಗಣ, ಹಾರ್ವರ್ಡ್ ಕ್ರಿಮ್ಸನ್ ಹಾಗೂ ಬಾಸ್ಟನ್ ಕ್ಯಾನನ್ ಗೆ ತವರಾಗಿದೆ.

ಹಾರ್ವರ್ಡ್ ಹಲವಾರು ಕ್ರೀಡಾ ಸೌಲಭ್ಯಗಳನ್ನು ಹೊಂದಿದೆ, ಉದಾಹರಣೆಗೆ, ಹಾರ್ವರ್ಡ್ ಬ್ಯಾಸ್ಕೆಟ್ ಬಾಲ್ ತಂಡಗಳಿಗೆ ಆಶ್ರಯವಾದ ಒಂದು ವಿವಿಧೋದ್ದೇಶದ ಕ್ರೀಡಾ ಸ್ಪರ್ಧೆಗಳ ಸ್ಥಳವಾದ ಲಾವಿಯೇಟೆಸ್ ಪೆವಿಲಿಯನ್ ಹೊಂದಿದೆ. "MAC" ಎಂಬ ಹೆಸರಿನಿಂದ ಪರಿಚಿತವಾಗಿರುವ ದಿ ಮಾಲ್ಕಿನ್ ಅಥ್ಲೆಟಿಕ್ ಸೆಂಟರ್,ವಿಶ್ವವಿದ್ಯಾಲಯದ ಪ್ರಾಥಮಿಕ ಮನೋರಂಜನಾ ಸೌಲಭ್ಯ ಹಾಗೂ ಹಲವಾರು ವಾರ್ಸಿಟಿ ಕ್ರೀಡೆಗಳಿಗೆ ಉಪ ನೆಲೆಯಾಗಿ ಸೇವೆ ಸಲ್ಲಿಸುತ್ತದೆ. ಐದು ಅಂತಸ್ತಿನ ಕಟ್ಟಡವು ಎರಡು ಕಾರ್ಡಿಯೋ ಕೋಣೆಗಳು, ಒಂದು ಒಲಂಪಿಕ್-ಗಾತ್ರದ ಈಜು ಕೊಳ, ಆಕ್ವಾಏರೋಬಿಕ್ಸ್ ಹಾಗೂ ಇತರ ಚಟುವಟಿಕೆಗಳಿಗಾಗಿ ಒಂದು ಸಣ್ಣ ಈಜು ಕೊಳ, ದಿನದ ಎಲ್ಲ ಅವಧಿಯಲ್ಲೂ ಎಲ್ಲ ವಿಧದ ತರಬೇತಿಗಳನ್ನು ನಡೆಸುವ ಒಂದು ಮಧ್ಯದಂತಸ್ತು, ಹಾಗೂ ಒಂದು ಒಳಾಂಗಣ ಸೈಕ್ಲಿಂಗ್ ಕೊಠಡಿ, ಮೂರು ಭಾರ ಎತ್ತುವ ಕ್ರೀಡೆಗಳ ಕೊಠಡಿಗಳು ಹಾಗೂ ಬ್ಯಾಸ್ಕೆಟ್ ಬಾಲ್ ಆಡಲು ಮೂರು-ಕೋರ್ಟ್ ಜಿಮ್ ಮೈದಾನ ಒಳಗೊಂಡಿದೆ. MAC ವೈಯಕ್ತಿಕ ತರಬೇತುದಾರರ ಹಾಗೂ ವಿಶೇಷ ತರಗತಿಗಳನ್ನು ನಡೆಸುತ್ತದೆ. MAC ಹಾರ್ವರ್ಡ್ ವಾಲಿಬಾಲ್, ಕತ್ತಿವರಸೆ, ಹಾಗೂ ಕುಸ್ತಿಗೆ ಆಶ್ರಯತಾಣವಾಗಿದೆ. ಶಾಲೆಯ ಹಲವಾರು ವಾರ್ಸಿಟಿ ಕೋಚ್‌ಗಳ ಕಚೇರಿಗಳು ಕೂಡ MACನಲ್ಲಿವೆ.

ವೆಲ್ಡ್ ಬೋಟ್ ಹೌಸ್ ಹಾಗೂ ನೆವೆಲ್ ಬೋಟ್ ಹೌಸ್ ಗಳು ಕ್ರಮವಾಗಿ ಮಹಿಳೆಯರು ಹಾಗೂ ಪುರುಷರ ಹುಟ್ಟು ದೋಣಿ ತಂಡಗಳಾಗಿವೆ. ಪುರುಷರ ತಂಡವು ಕನೆಕ್ಟಿಕಟ್, ಲೆಡ್ಯಾರ್ಡ್‌ನ ರೆಡ್ ಟಾಪ್ ಸಂಕೀರ್ಣವನ್ನು ತಮ್ಮ ವಾರ್ಷಿಕ ಹಾರ್ವರ್ಡ್-ಯೇಲ್ ವಿಹಾರನೌಕಾ ಪಂದ್ಯಕ್ಕಾಗಿ ತರಬೇತಿ ಶಿಬಿರವಾಗಿ ಕೂಡ ಬಳಸಿಕೊಳ್ಳುತ್ತದೆ. ದಿ ಬ್ರೈಟ್ ಹಾಕಿ ಸೆಂಟರ್ ಹಾರ್ವರ್ಡ್ ಹಾಕಿ ತಂಡಗಳನ್ನು ಪ್ರಾಯೋಜಿಸುತ್ತದೆ, ಹಾಗೂ ಮುರ್ರ್ ಸೆಂಟರ್, ಹಾರ್ವರ್ಡ್ ನ ಸ್ಕ್ವಾಶ್ ಹಾಗೂ ಟೆನಿಸ್ ತಂಡ ಎರಡಕ್ಕೂ ತಾಣವಾಗಿರುವ ಜೊತೆಗೆ ಎಲ್ಲ ದೈಹಿಕ ಕ್ರೀಡೆಗಳಿಗೆ ಸ್ನಾಯುಬಲ ಹೆಚ್ಚಳದ ತರಬೇತಿ ಕೇಂದ್ರವಾಗಿದೆ.

ಕಳೆದ 2006ರ ಹೊತ್ತಿಗೆ, ಹಾರ್ವರ್ಡ್ ನಲ್ಲಿ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಡಿವಿಷನ್ Iನ 41 ಅಂತರಕಾಲೇಜು ವಾರ್ಸಿಟಿ ಕ್ರೀಡಾತಂಡಗಳಿದ್ದವು, ಇದು ರಾಷ್ಟ್ರದ ಯಾವುದೇ NCAA ಡಿವಿಷನ್ Iಗಿಂತ ಅಧಿಕವಾಗಿದೆ. ಇತರ ಐವಿ ಲೀಗ್ ವಿಶ್ವವಿದ್ಯಾಲಯಗಳಂತೆ, ಹಾರ್ವರ್ಡ್ ದೈಹಿಕ ಕ್ರೀಡೆಗಳಿಗೆ ಯಾವುದೇ ವಿದ್ಯಾರ್ಥಿವೇತನವನ್ನು ನೀಡುವುದಿಲ್ಲ.[೮೪]

ಯೇಲ್ ನೊಂದಿಗಿನ ಹಾರ್ವರ್ಡ್ ನ ಕ್ರೀಡಾ ಪೈಪೋಟಿಯು ಅವರು ಎದುರಾಗುವ ಪ್ರತಿ ಕ್ರೀಡೆಯಲ್ಲೂ ತೀವ್ರವಾಗಿರುತ್ತದೆ, ಪ್ರತಿ ಶರತ್ಕಾಲದಲ್ಲಿ ವಾರ್ಷಿಕ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಇದು ತುತ್ತತುದಿಯನ್ನು ಮುಟ್ಟುತ್ತದೆ. ಇದು1875ರಿಂದಲೂ ನಡೆದು ಬರುತ್ತಿದ್ದು, ಸಾಮಾನ್ಯವಾಗಿ ಕೇವಲ ದಿ ಗೇಂ ಎಂದು ಕರೆಯಲಾಗುತ್ತದೆ. ಹಾರ್ವರ್ಡ್ ನ ಫುಟ್ಬಾಲ್ ತಂಡವು ಇಂದು ರಾಷ್ಟ್ರದ ಅತ್ಯುತ್ತಮ ತಂಡವಾಗಿ ಉಳಿದಿಲ್ಲ, ಇದು ಫುಟ್ಬಾಲ್ ನ ಆರಂಭಿಕ ದಿನಗಳಲ್ಲಿ ಒಂದು ಶತಮಾನದ ಕೆಳಗೆ ಇದೊಂದು ಅತ್ಯುತ್ತಮ ತಂಡವೆನಿಸಿತ್ತು (ಇದು 1920ರಲ್ಲಿ ರೋಸ್ ಬೌಲ್ ನ್ನು ಗೆದ್ದುಕೊಂಡಿತ್ತು), ಹಾರ್ವರ್ಡ್ ಹಾಗೂ ಯೇಲ್ ಎರಡೂ ತಂಡಗಳು ಇಂದು ಆಡಲಾಗುವ ಫುಟ್ಬಾಲ್ ವಿಧಾನದ ಮೇಲೆ ಪ್ರಭಾವವನ್ನು ಬೀರಿವೆ. ಕಳೆದ 1903ರಲ್ಲಿ, ಹಾರ್ವರ್ಡ್ ಕ್ರೀಡಾಂಗಣವು ರಾಷ್ಟ್ರದಲ್ಲೇ ಮೊದಲೆನಿಸಿಕೊಂಡ ಶಾಶ್ವತ ಬಲವರ್ಧಿತ ಕಾಂಕ್ರೀಟ್ ಕ್ರೀಡಾಂಗಣವನ್ನು ನಿರ್ಮಿಸುವುದರ ಮೂಲಕ ಫುಟ್ಬಾಲ್ ಇತಿಹಾಸದಲ್ಲಿ ಒಂದು ಹೊಸ ಶಕೆಯನ್ನು ಪರಿಚಯಿಸಿತು. ಕ್ರೀಡಾಂಗಣದ ವಿನ್ಯಾಸವು ವಾಸ್ತವವಾಗಿ ಕಾಲೇಜು ಪಂದ್ಯಾವಳಿಗಳ ವಿಕಾಸದಲ್ಲಿ ಪಾತ್ರವನ್ನು ವಹಿಸಿದೆ. ಕ್ರೀಡೆಯಿಂದ ಉಂಟಾಗುವ ಅಪಾಯಕಾರಿ ಸಂಖ್ಯೆಯ ಸಾವುಗಳು ಹಾಗೂ ಗಂಭೀರ ಗಾಯಗಳನ್ನು ತಗ್ಗಿಸಲು, ಫುಟ್ಬಾಲ್ ನ ಪಿತಾಮಹ ವಾಲ್ಟರ್ ಕ್ಯಾಂಪ್ (ಯೇಲ್ ಫುಟ್ಬಾಲ್ ತಂಡದ ಮಾಜಿ ನಾಯಕ), ಕ್ರೀಡೆಗಾಗಿ ಮೈದಾನವನ್ನು ಅಗಲಗೊಳಿಸಬೇಕೆಂದು ಸೂಚಿಸಿದರು. ಆದರೆ ಪ್ರತಿಷ್ಠಿತ ಹಾರ್ವರ್ಡ್ ಕ್ರೀಡಾಂಗಣದಲ್ಲಿ ಮೈದಾನವನ್ನು ವಿಸ್ತಾರಗೊಳಿಸಲು ಸ್ಥಳವು ಇಕ್ಕಟ್ಟಾಗಿತ್ತು. ಆ ಪ್ರಕಾರವಾಗಿ, ಇತರ ಕ್ರಮಗಳನ್ನು ಕೈಗೊಳ್ಳಲಾಯಿತು. ಶಿಬಿರವು ಇದಕ್ಕೆ ಬದಲಿಯಾಗಿ 1906ರ ಕ್ರೀಡಾಋತುವಿನಲ್ಲಿ ಹೊಸ ಕ್ರಾಂತಿಕಾರಿ ನಿಯಮಗಳಿಗೆ ಬೆಂಬಲವನ್ನು ನೀಡಿತು. ಇದರಲ್ಲಿ ಫಾರ್ವರ್ಡ್ ಪಾಸ್ ನ್ನು ಕಾನೂನುಬದ್ಧಗೊಳಿಸಿದ್ದು ಸೇರಿಕೊಂಡಿತ್ತು, ಇದು ಬಹುಶಃ ಕ್ರೀಡೆಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ನಿಯಮ ಬದಲಾವಣೆ ಎನಿಸಿಕೊಂಡಿತ್ತು.[೮೫][೮೬]

ಹಾರ್ವರ್ಡ್ v ಬ್ರೌನ್, ಸೆಪ್ಟೆಂಬರ್ 25, 2009

ದಿ ಗೇಂ ಗಿಂತಲೂ 23 ವರ್ಷಗಳಷ್ಟು ಹಳೆಯದಾದ ಹಾರ್ವರ್ಡ್-ಯೇಲ್ ವಿಹಾರನೌಕಾಪಂದ್ಯವು ಎರಡೂ ಶಾಲೆಗಳ ನಡುವಿನ ಕ್ರೀಡಾ ಪೈಪೋಟಿಗೆ ಮೂಲಾಧಾರವಾಗಿತ್ತು. ಇದನ್ನು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಪೂರ್ವ ಕನೆಕ್ಟಿಕಟ್ ನ ಥೇಮ್ಸ್ ನದಿಯಲ್ಲಿ ಆಯೋಜಿಸಲಾಗುತ್ತಿತ್ತು. ಹಾರ್ವರ್ಡ್ ತಂಡವನ್ನು ರಾಷ್ಟ್ರದ ಹುಟ್ಟುದೋಣಿ ತಂಡಗಳಲ್ಲಿ ಅತ್ಯುತ್ತಮ ತಂಡವೆಂದು ಪರಿಗಣಿಸಲಾಗಿದೆ. ಇಂದು, ಹಾರ್ವರ್ಡ್ ಇತರ ಹಲವಾರು ಕ್ರೀಡೆಗಳಲ್ಲಿ ಅಗ್ರ ಸ್ಥಾನಗಳನ್ನು ಪಡೆದ ತಂಡಗಳನ್ನು ಹೊಂದಿದೆ, ಉದಾಹರಣೆಗೆ ಐಸ್ ಹಾಕಿ (ಕಾರ್ನೆಲ್ ತಂಡದೊಂದಿಗೆ ತೀವ್ರತರವಾದ ಪೈಪೋಟಿಯನ್ನು ಹೊಂದಿದೆ), ಸ್ಕ್ವಾಶ್, ಹಾಗೂ ಇತ್ತೀಚಿಗೆ ಪುರಷರ ಹಾಗೂ ಮಹಿಳೆಯರ ವಿಭಾಗದ ಕತ್ತಿವರಸೆಯಲ್ಲಿ NCAA ಪ್ರಶಸ್ತಿಗಳನ್ನು ಗಳಿಸಿದೆ. ಹಾರ್ವರ್ಡ್ 2003ರಲ್ಲಿ ಇಂಟರ್ಕಾಲೇಜಿಯೇಟ್ ಸೈಲಿಂಗ್ ಅಸೋಸಿಯೇಶನ್ ನ್ಯಾಷನಲ್ ಚಾಂಪಿಯನ್ ಶಿಪ್ಸ್ ಅನ್ನು ಸಹ ಗೆದ್ದುಕೊಂಡಿದೆ.

ಹಾರ್ವರ್ಡ್ ನ ಪುರುಷರ ಐಸ್ ಹಾಕಿ ತಂಡವು ಯಾವುದೇ ತಂಡ ಕ್ರೀಡೆಯಲ್ಲಿ ಶಾಲೆಗೆ ಮೊದಲ NCAA ಚಾಂಪಿಯನ್ ಶಿಪ್ ಅನ್ನು 1989ರಲ್ಲಿ ಗೆದ್ದುಕೊಟ್ಟಿದೆ. ಹಾರ್ವರ್ಡ್ ಮಹಿಳಾ ಕ್ರೀಡಾ ವಿಭಾಗದಲ್ಲಿ NCAA ಚಾಂಪಿಯನ್ ಶಿಪ್ ಅನ್ನು ಗಳಿಸಿದ ಮೊದಲ ಐವಿ ಲೀಗ್ ಸಂಸ್ಥೆಯಾಗಿದೆ. ಶಾಲೆಯ ಮಹಿಳಾ ಲಕ್ರಾಸ್ (ಹಾಕಿ ಆಟದಂತಹ ಚೆಂಡಾಟ) ತಂಡವು 1990ರಲ್ಲಿ NCAA ಚಾಂಪಿಯನ್ ಶಿಪ್ ಅನ್ನು ಗಳಿಸಿತು.

ಹಾರ್ವರ್ಡ್ ಅಂಡರ್‌ಗ್ರಾಜ್ಯುಯೇಟ್ ಟೆಲಿವಿಶನ್ 2005ರಲ್ಲಿ ಹಾರ್ವರ್ಡ್-ಯೇಲ್ ಪಂದ್ಯಾವಳಿಗೆ ಮುಂಚಿತವಾಗಿ ನಡೆದ ಪೆಪ್ ರ‌್ಯಾಲಿಯನ್ನು ಒಳಗೊಂಡಂತೆ ಐತಿಹಾಸಿಕ ಪಂದ್ಯಾವಳಿಗಳು ಹಾಗೂ ದೈಹಿಕ ಕ್ರೀಡಾ ಪಂದ್ಯಾವಳಿಗಳ ದೃಶ್ಯಾವಳಿಗಳನ್ನು ಹೊಂದಿದೆ. ಹಾರ್ವರ್ಡ್ ನ ಅಧಿಕೃತ ದೈಹಿಕ ಕ್ರೀಡಾ ವೆಬ್ಸೈಟ್, ಹಾರ್ವರ್ಡ್ ನ ದೈಹಿಕ ಕ್ರೀಡಾ ಸೌಲಭ್ಯಗಳ ಬಗ್ಗೆ ವ್ಯಾಪಕ ಮಾಹಿತಿಯನ್ನು ಒಳಗೊಂಡಿದೆ.

ಹಾಡು

ಹಾರ್ವರ್ಡ್ ಹಲವಾರು ಫೈಟ್ ಸಾಂಗ್‌ಗಳನ್ನೂ ಹೊಂದಿದೆ. ವಿಶೇಷವಾಗಿ ಫುಟ್ಬಾಲ್ ತಂಡಗಳಲ್ಲಿ ಬಹುತೇಕ ನುಡಿಸುವ "ಟೆನ್ ಥೌಸಂಡ್ ಮೆನ್ ಆಫ್ ಹಾರ್ವರ್ಡ್" ಹಾಗೂ "ಹಾರ್ವರ್ಡಿಯಾನ" ಹಾಡುಗಳು ಕೇಳಿಬರುತ್ತವೆ. ಫೇರ್ ಹಾರ್ವರ್ಡ್ ವಾಸ್ತವವಾಗಿ ಶಾಲೆಯ ಹಾಡಾಗಿದ್ದರೆ, "ಟೆನ್ ಥೌಸಂಡ್ ಮೆನ್" ವಿಶ್ವವಿದ್ಯಾಲಯದ ಆಚೆಗೂ ಕೇಳಿಬರುತ್ತದೆ. ದಿ ಹಾರ್ವರ್ಡ್ ಯೂನಿವರ್ಸಿಟಿ ಬ್ಯಾಂಡ್ ಈ ಫೈಟ್ ಸಾಂಗ್ ಗಳನ್ನು ನುಡಿಸುತ್ತದೆ ಜೊತೆಗೆ ಫುಟ್ಬಾಲ್ ಹಾಗೂ ಹಾಕಿ ಪಂದ್ಯಾವಳಿಗಳಲ್ಲಿ ಇತರರು ಹರ್ಷೋದ್ಗಾರದ ಮೂಲಕ ತಂಡಗಳಿಗೆ ಉತ್ತೇಜನವನ್ನು ನೀಡುತ್ತಾರೆ.

ಕಾಲ್ಪನಿಕ ಕಥೆಗಳಲ್ಲಿ ಹಾಗೂ ಜನಪ್ರಿಯ ಸಂಸ್ಕೃತಿಯಲ್ಲಿ ಹಾರ್ವರ್ಡ್

ಅಮೆರಿಕದ ಗಣ್ಯ ವಲಯಗಳಲ್ಲಿ ಹಾರ್ವರ್ಡ್ ನ ಪ್ರಮುಖ ಸ್ಥಾನದಿಂದಾಗಿ ಅದನ್ನು ಹಲವು ಕಾದಂಬರಿಗಳು, ನಾಟಕಗಳು, ಚಲನಚಿತ್ರಗಳು ಹಾಗೂ ಇತರ ಸಾಂಸ್ಕೃತಿಕ ಕಾರ್ಯಗಳಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿದೆ.

"ಜಾನ್ ಫಿಲ್ಲಿಪ್ಸ್" ರ (ಜಾನ್ P. ಮಾರ್ಕ್ವಾಂಡ್ Jr.) "ದಿ ಸೆಕೆಂಡ್ ಹ್ಯಾಪಿಯೆಸ್ಟ್ ಡೇ" ವಿಶ್ವ ಸಮರ IIರ ಪೀಳಿಗೆಯ ಹಾರ್ವರ್ಡ್ ಅನ್ನು ವಿವರಿಸುತ್ತದೆ.

ಹಾರ್ವರ್ಡ್‌ನ ಹಳೆಯ ವಿದ್ಯಾರ್ಥಿ (ಹಾಗೂ ಯೇಲ್ ಕ್ಲಾಸಿಕ್ಸ್ ಪ್ರಾಧ್ಯಾಪಕ) ಎರಿಚ್ ಸೇಗಲ್ 1970ರಲ್ಲಿ ಬರೆದ ಲವ್ ಸ್ಟೋರಿ ಯು, ಹಾರ್ವರ್ಡ್ ನ ಶ್ರೀಮಂತ ಪ್ರಿ-ಲಾ ಹಾಕಿ ಆಟಗಾರ (ರಯಾನ್ ಓ' ನೀಲ್) ಹಾಗೂ ಸಂಗೀತಶಾಸ್ತ್ರದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯುತ್ತಿರುವ ಒಬ್ಬ ಬುದ್ದಿವಂತ ರಾಡ್ಕ್ಲಿಫ್ ವಿದ್ಯಾರ್ಥಿನಿ (ಅಲಿ ಮ್ಯಾಕ್ ಗ್ರವ್) ನಡುವಿನ ಪ್ರೇಮ ಪ್ರಸಂಗವನ್ನು ವಿವರಿಸುತ್ತದೆ. ಕಾದಂಬರಿ ಹಾಗೂ ಚಲನಚಿತ್ರ ಎರಡೂ ಕೇಂಬ್ರಿಡ್ಜ್‌ನ ಬಣ್ಣದೊಂದಿಗೆ ಆಳವಾಗಿ ತುಂಬಿದೆ.[೮೭] ಇತ್ತೀಚಿನ ವರ್ಷಗಳಲ್ಲಿ ಅಸ್ತಿತ್ವದಲ್ಲಿರುವ ಹಾರ್ವರ್ಡ್‌ನ ಒಂದು ಸಂಪ್ರದಾಯದಂತೆ ಹೊಸ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಲವ್ ಸ್ಟೋರಿ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಈ ಅವಧಿಯಲ್ಲಿ ಕ್ರಿಮ್ಸನ್ ಕೀ ಸೊಸೈಟಿ, ಪ್ರವಾಸವನ್ನು ಆಯೋಜಿಸುವ ಕ್ಯಾಂಪಸ್ ಸಂಘಟನೆ ಸೀಟಿ ಹಾಕುವುದು ಹಾಗೂ ಇತರ ಅಣಕು ದೂಷಣೆಯನ್ನು ಮಾಡುತ್ತವೆ. ಎರಿಚ್ ಸೇಗಲ್ ರ ಇತರ ಕೃತಿಗಳಾದ ದಿ ಕ್ಲಾಸ್ (1985) ಹಾಗೂ ಡಾಕ್ಟರ್ಸ್ (1988) ನಲ್ಲೂ ಸಹ ಹಾರ್ವರ್ಡ್‌ನ ವಿದ್ಯಾರ್ಥಿಗಳ ಮುಖ್ಯ ಪಾತ್ರಗಳನ್ನು ವಹಿಸಲಾಗಿದೆ.

ಹಾರ್ವರ್ಡ್ ಹಲವು U.S. ಚಲನಚಿತ್ರ ಹಾಗೂ ದೂರದರ್ಶನ ನಿರ್ಮಾಣಗಳಲ್ಲಿ ಚಿತ್ರಿಸಲಾಗಿದೆ, ಇದರಲ್ಲಿ ಸ್ಟೀಲಿಂಗ್ ಹಾರ್ವರ್ಡ್ , ಲೀಗಲಿ ಬ್ಲಾಂಡ್ , ಗಿಲ್ಮೋರ್ ಗರ್ಲ್ಸ್ , ಕ್ವೀರ್ ಆಸ್ ಫೋಕ್ , ದಿ ಫರ್ಮ್ , ದಿ ಪೇಪರ್ ಚೇಸ್ , ಗುಡ್ ವಿಲ್ ಹಂಟಿಂಗ್ , ವಿಥ್ ಹಾನರ್ಸ್ , ಹೌ ಹೈ , ಶುಗರ್ ಅಂಡ್ ಸ್ಪೈಸ್ , ಸೋಲ್ ಮ್ಯಾನ್ , 21 (2008ರ ಚಲನಚಿತ್ರ) , ಹಾರ್ವರ್ಡ್ ಮ್ಯಾನ್ ಗಳು ಸೇರಿವೆ. ಕಳೆದ 1960ರ ದಶಕದಲ್ಲಿ ಲವ್ ಸ್ಟೋರಿ ಯ ಚಿತ್ರೀಕರಣದ ನಂತರ, 2007ರ ಬೇಸಿಗೆಯಲ್ಲಿ ಚಿತ್ರೀಕರಣಗೊಂಡ ದಿ ಗ್ರೇಟ್ ಡಿಬೇಟರ್ಸ್ ವರೆಗೆ ವಿಶ್ವವಿದ್ಯಾಲಯವು ಕ್ಯಾಂಪಸ್ ಕಟ್ಟಡಗಳಲ್ಲಿ ಯಾವುದೇ ಚಲನಚಿತ್ರಗಳನ್ನು ಚಿತ್ರೀಕರಿಸಲು ಅನುಮತಿಯನ್ನು ನೀಡಿರಲಿಲ್ಲ; ಹೆಚ್ಚಿನ ಚಿತ್ರಗಳು ಅದೇ ಮಾದರಿಯ ನಗರಗಳು, ಉದಾಹರಣೆ ಟೊರೊಂಟೊ, ಹಾಗೂ ಕಾಲೇಜುಗಳು ಉದಾಹರಣೆಗೆ UCLA, ವೀಟನ್ ಹಾಗೂ ಬ್ರಿಡ್ಜ್ ವಾಟರ್ ಸ್ಟೇಟ್ ಗಳಲ್ಲಿ ಚಿತ್ರಿಸಲಾಗುತ್ತಿತ್ತು, ಆದಾಗ್ಯೂ ಹಾರ್ವರ್ಡ್ ನ ಕೇಂಬ್ರಿಡ್ಜ್ ಕ್ಯಾಂಪಸ್‌ನ ಹೊರಾಂಗಣ ಹಾಗೂ ವೈಮಾನಿಕ ದೃಶ್ಯಗಳನ್ನು ಮಾತ್ರ ಸಾಮಾನ್ಯವಾಗಿ ಬಳಸಿಕೊಳ್ಳಲಾಗುತ್ತಿತ್ತು.[೮೮] ವಿಥ್ ಹಾನರ್ಸ್ ನ ಗ್ರ್ಯಾಜುಯೇಶನ್ ದೃಶ್ಯವನ್ನು ಅರ್ಬಾನ-ಚಂಪೈನ್‌ನ ಯೂನಿವರ್ಸಿಟಿ ಆಫ್ ಇಲ್ಲಿನಾಯಿಸ್ ನ ಫೋಯೆಲ್ಲಿಂಗರ್ ಆಡಿಟೋರಿಯಂನ ಮುಂಭಾಗದಲ್ಲಿ ಚಿತ್ರೀಕರಿಸಲಾಗಿತ್ತು.

ಹಲವಾರು ಕಾದಂಬರಿಗಳನ್ನು ಹಾರ್ವರ್ಡ್ ಮೇಲೆ ಹೆಣೆಯಲಾಗಿದೆ ಅಥವಾ ಹಾರ್ವರ್ಡ್‌ನೊಂದಿಗೆ ಸಂಬಂಧಿಸಿದ ಪಾತ್ರಗಳ ಮೇಲೆ ಹೆಣೆಯಲಾಗಿದೆ. ಡಾನ್ ಬ್ರೌನ್ ನ ಕಾದಂಬರಿಗಳಾದ ದಿ ಡಾ ವಿಂಚಿ ಕೋಡ್ ಹಾಗೂ ಏಂಜಲ್ಸ್ ಅಂಡ್ ಡೆಮಾನ್ಸ್ ನಲ್ಲಿ ಬರುವ ಮುಖ್ಯ ಪಾತ್ರ ರಾಬರ್ಟ್ ಲಾಂಗ್ಡನ್‌ನನ್ನು ಹಾರ್ವರ್ಡ್ ನ "ಸಂಕೇತಶಾಸ್ತ್ರಗಳ ಪ್ರಾಧ್ಯಾಪಕ" ಎಂದು ವಿವರಿಸಲಾಗುತ್ತದೆ, (ಆದಾಗ್ಯೂ "ಸಂಕೇತಶಾಸ್ತ್ರ" ಎಂಬುದು ವಾಸ್ತವವಾಗಿ ಯಾವುದೇ ಒಂದು ಶೈಕ್ಷಣಿಕ ವಿಭಾಗವಲ್ಲ).[೮೯] ಪಮೇಲ ಥಾಮಸ್-ಗ್ರಹಾಮ್ ರ ಪತ್ತೇದಾರಿ ಕಾದಂಬರಿಗಳ ಸರಣಿಯ (ಬ್ಲೂ ಬ್ಲಡ್ , ಆರೆಂಜ್ ಕ್ರಷ್ಡ್ , ಹಾಗೂ ಏ ಡಾರ್ಕರ್ ಶೇಡ್ ಆಫ್ ಕ್ರಿಮ್ಸನ್ ) ಮುಖ್ಯ ಪಾತ್ರಧಾರಿ ಒಬ್ಬ ಆಫ್ರಿಕನ್-ಅಮೆರಿಕನ್ ಹಾರ್ವರ್ಡ್ ಪ್ರಾಧ್ಯಾಪಕ. ಹಾರ್ವರ್ಡ್ ವಿದ್ಯಾರ್ಥಿಗಳನ್ನು ಮುಖ್ಯ ಭೂಮಿಕೆಯಲ್ಲಿ ಅಳವಡಿಸಿಕೊಂಡ ಪ್ರಮುಖ ಕಾದಂಬರಿಗಳಲ್ಲಿ ವಿಲಿಯಂ ಫಾಲ್ಕ್‌ನರ್ ರ ದಿ ಸೌಂಡ್ ಅಂಡ್ ದಿ ಫರಿ ಹಾಗೂ ಎಲಿಜಬತ್ ವುರ್ಟ್ಜೆಲ್ ರ ಪ್ರೊಜಾಕ್ ನೇಷನ್ ಗಳು ಒಳಗೊಂಡಿವೆ. ಡೌಗ್ಲಾಸ್ ಪ್ರೆಸ್ಟನ್ ರ ಮಾಜಿ-CIA ಏಜೆಂಟ್ ವೈಮಾನ್ ಫೋರ್ಡ್ ಹಾರ್ವರ್ಡ್‌ನ ಒಬ್ಬ ಹಳೆಯ ವಿದ್ಯಾರ್ಥಿ. ಫೋರ್ಡ್ ಟೈರನ್ನೋಸಾರ್ ಕಾನ್ಯೋನ್ ಹಾಗೂ ಬ್ಲಾಸ್ಫೇಮಿ ಕಾದಂಬರಿಗಳಲ್ಲಿ ಕಂಡುಬರುತ್ತಾನೆ. ಮಾರ್ಗರೆಟ್ ಆಟ್ವುಡ್ ರ ಭವಿಷ್ಯದ್ದರ್ಶನ ನಂತರದ ಕಾದಂಬರಿ ದಿ ಹ್ಯಾಂಡ್ ಮೇಡ್'ಸ್ ಟೇಲ್ ನಲ್ಲಿ ಹೆಚ್ಚಿನ ಘಟನೆಗಳು ಕೇಂಬ್ರಿಡ್ಜ್ ನಲ್ಲಿ ನಡೆಯುತ್ತವೆ, ಹಾರ್ವರ್ಡ್ ನ ಅಸ್ಪಷ್ಟವಾಗಿ ಗುರುತಿಸಲ್ಪಡುವ ಹೆಗ್ಗುರುತುಗಳು ಸಾಂದರ್ಭಿಕವಾಗಿ ನಿರೂಪಕನ ಸ್ಥಳದ ವಿವರಣೆಗಳಲ್ಲಿ ಕಂಡುಬರುತ್ತದೆ. ಮ್ಯಾಜಿಕ್ ಯೂನಿವರ್ಸಿಟಿ ಸರಣಿ ಎಂದು ಕರೆಯಲ್ಪಡುವ ಸೆಸಿಲಿಯ ಟಾನ್ ರ ಪ್ರೇಮ ಕಥಾನಕ ಸರಣಿ ಹಾಗೂ ಜತೆಗೆ ಪುಸ್ತಕಗಳುದಿ ಸಿರೆನ್ ಅಂಡ್ ದಿ ಸ್ವೊರ್ಡ್ ಹಾಗೂ ದಿ ಟವರ್ ಅಂಡ್ ದಿ ಟಿಯರ್ಸ್ ವಿದ್ಯಮಾನಗಳು ಹಾರ್ವಡ್‌ನೊಳಗೆ ಅಡಗಿಕೊಂಡ "ವೆರಿಟಸ್" ಎಂದು ಹೆಸರಾದ ಮಾಂತ್ರಿಕ ವಿಶ್ವವಿದ್ಯಾಲಯದೊಳಗೆ ನಡೆಯುತ್ತವೆ.

ಕೊರಿಯನ್ ಜನಪ್ರಿಯ TV ಸರಣಿ ಲವ್ ಸ್ಟೋರಿ ಇನ್ ಹಾರ್ವರ್ಡ್ ಸಹ ಹಾರ್ವರ್ಡ್ ನ ಹಿನ್ನೆಲೆಯ ಚಿತ್ರೀಕರಣ ಹೊಂದಿದೆ[೯೦] ಇದನ್ನು ಯೂನಿವರ್ಸಿಟಿ ಆಫ್ ಸದರನ್ ಕ್ಯಾಲಿಫೋರ್ನಿಯನಲ್ಲಿ ಚಿತ್ರೀಕರಿಸಲಾಗಿತ್ತು. ಅಮೆರಿಕನ್ ದೂರದರ್ಶನದ ಕಾಲ್ಪನಿಕ ಹಾರ್ವರ್ಡ್ ಪದವೀಧರರಲ್ಲಿ ಸೆಕ್ಸ್ ಅಂಡ್ ದಿ ಸಿಟಿ ಯಲ್ಲಿ ಬರುವ ಪಾತ್ರಧಾರಿಮಿರಾಂಡ ಹೊಬ್ಬೆಸ್; ಗಿಲ್ಲಿಗನ್ಸ್ ಐಲ್ಯಾಂಡ್‌ನ ಸ್ಥಳೀಯ ಅರಿಸ್ಟೋಕ್ರಾಟ್ ಥರ್ಸ್ಟನ್ ಹೋವೆಲ್, III, ಈ ಪಾತ್ರವನ್ನು ಜಿಮ್ ಬೇಕಸ್ ನಿರ್ವಹಿಸಿದ್ದಾರೆ; M*A*S*Hನ ಸ್ವಪ್ರತಿಷ್ಠೆಯ ಬಾಸ್ಟನ್ ಬ್ರಾಹ್ಮಿನ್, ಡೇವಿಡ್ ಆಗ್ಡೆನ್ ಸ್ಟಿಯೆರ್ಸ್ ನಿರ್ವಹಿಸಿದ ಮೇಜರ್ ಚಾರ್ಲ್ಸ್ ಎಮರ್ಸನ್ ವಿನ್ಚೆಸ್ಟರ್ III(ಹಾರ್ವರ್ಡ್ ಕಾಲೇಜು ಹಾಗೂ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಎರಡರ ಪದವೀಧರ)ಪಾತ್ರ; ಚೀರ್ಸ್ ಹಾಗೂ ಫ್ರೇಸಿಯರ್ ನ Dr. ಫ್ರೇಸಿಯರ್ ಕ್ರೇನ್; ಹಾಗೂ ಕಾಲ್ಪನಿಕ ಹಾರ್ವರ್ಡ್ ಕಾನೂನು ಪದವೀಧರರುಗಳಾದ ಮ್ಯಾಟ್ಲಾಕ್ ನ ಬೆನ್ ಮ್ಯಾಟ್ಲಾಕ್ ಹಾಗೂ ನಾಮಸೂಚಕ ಸರಣಿಯ ಆಲಿ ಮ್ಯಾಕ್ಬೀಲ್.

ಐವರಿ ಟವರ್ ಎಂಬುದು ಕಾಲ್ಪನಿಕ ಹಾರ್ವರ್ಡ್ ವಿದ್ಯಾರ್ಥಿಗಳ ಬಗ್ಗೆ ವಿದ್ಯಾರ್ಥಿಗಳು ನಿರ್ಮಾಣಮಾಡಿದ ಹಾರ್ವರ್ಡ್ ಅಂಡರ್‌ಗ್ರಾಜ್ಯುಯೇಟ್ ಟೆಲಿವಿಶನ್ ಕಾರ್ಯಕ್ರಮವಾಗಿದೆ[೯೧].

ವಿಶ್ವವಿದ್ಯಾಲಯವು ಪ್ರಮುಖವಾಗಿ 2008ರ ದೂರದರ್ಶನದ ಪ್ರಾಯೋಗಿಕ ಸರಣಿ ಫ್ರಿಂಜ್ ಹಾಗೂ ದೂರದರ್ಶನ ಕಾರ್ಯಕ್ರಮ ಗಾಸಿಪ್ ಗರ್ಲ್ ನ ಎರಡನೇ ಸರಣಿಯಲ್ಲಿ ಕಂಡುಬಂದಿದೆ. ವಿಶ್ವವಿದ್ಯಾಲಯ ಹಾಗೂ ಅದರ ಹಲವಾರು ಕಟ್ಟಡಗಳು ಕ್ಯಾಥರೀನ್ ಹೊವೆ ಅವರ 2009ರ ಜನಪ್ರಿಯ ಕಾದಂಬರಿ ದಿ ಫಿಸಿಕ್ ಬುಕ್ ಆಫ್ ಡೆಲಿವರೆನ್ಸ್ ಡಾನೆ ಯಲ್ಲಿ ಪ್ರಮುಖವಾಗಿ ಕಂಡುಬಂದಿದೆ.

ಪ್ರಾಧ್ಯಾಪಕರುಗಳಾದರಾಮ್ ದಾಸ್ಸ್ ಎಂದು ನಂತರ ಹೆಸರಾದ Dr. ರಿಚರ್ಡ್ ಆಲ್ಪರ್ಟ್ ಹಾಗೂ Dr. ತಿಮೋತಿ ಲೇಯರಿ ಅವರುಗಳನ್ನು ಮೇ 1963ರಲ್ಲಿ ಹಾರ್ವರ್ಡ್‌ನಿಂದ ವಜಾಗೊಳಿಸಲಾಯಿತು. ಅವರು ಭ್ರಾಂತಿಜನಕ ಕ್ರಿಯಾವಾದದಲ್ಲಿ ತೊಡಗಿಸಿಕೊಂಡ ಕಾರಣದಿಂದಾಗಿ ಅವರುಗಳನ್ನು ವಜಾಗೊಳಿಸಲಾಯಿತೆಂದು ಸಾರ್ವಜನಿಕ ಅಭಿಪ್ರಾಯಗಳು ಕಾರಣನೀಡುತ್ತವೆ. ಜೊತೆಗೆ ವಿದ್ಯಾರ್ಥಿಗಳಿಗೆ ಸಿಲಸೈಬಿನ್ (ಭ್ರಾಂತಿಜನಕ ಆಲ್ಕಲೈಡ್) ನ ಹಂಚಿಕೆ ಹಾಗೂ ಅದನ್ನು ಜನಪ್ರಿಯಗೊಳಿಸಿದ್ದು ಕಾರಣವಾಗಿತ್ತು.[೯೨]

ಮರಿಯಾ ಕ್ಯಾರೆ ತನ್ನ 2009ರ ಗೀತೆ "ಅಪ್ ಔಟ್ ಮೈ ಫೇಸ್" ನಲ್ಲಿ: "ಹಾರ್ವರ್ಡ್ ವಿಶ್ವವಿದ್ಯಾಲಯದಿಂದ 2010ರಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳೂ ಸಹ ನಮ್ಮನ್ನು ಮತ್ತೆ ಒಂದುಗೂಡಿಸಲು ಸಾಧ್ಯವಿಲ್ಲ" ಎಂದು ಹಾಡುತ್ತಾಳೆ.[೯೩]

ಇಸವಿ 1948ರ ದ್ರ ಸೇಯುಸ್ಸ್ ಬುಕ್ ತಿಡ್ವಿಕ್ ದಿ ಬಿಗ್-ಹಾರ್ಟೆಡ್ ಮೂಸ್ "ಹಾರ್ವರ್ಡ್ ಕ್ಲಬ್ ವಾಲ್" ಬಗ್ಗೆ ಪ್ರತಿಕ್ರಿಯಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಹೆಚ್ಚಿನ ಮಾಹಿತಿಗಾಗಿ

  • ಅಬೆಲ್ಮ್ಯಾನ್, ವಾಲ್ಟರ್ H., ಸಂಪಾದಕರು. ದಿ ಹಾರ್ವರ್ಡ್-MIT ಡಿವಿಷನ್ ಆಫ್ ಹೆಲ್ತ್ ಸೈನ್ಸಸ್ ಅಂಡ್ ಟೆಕ್ನಾಲಜಿ: ದಿ ಫಾರ್ಸ್ಟ್ 25 ಇಯರ್ಸ್, 1970-1995 (2004). 346 ಪುಟಗಳು.
  • ಬೀಚರ್, ಹೆನ್ರಿ K. ಹಾಗೂ ಆಲ್ಟ್ ಸ್ಚುಲೇ, ಮಾರ್ಕ್ D. ಮೆಡಿಸಿನ್ ಅಟ್ ಹಾರ್ವರ್ಡ್: ದಿ ಫಾರ್ಸ್ಟ್ 300 ಇಯರ್ಸ್ (1977). 569 ಪುಟಗಳು.
  • ಬೆನ್ಟಿನ್ಕ್-ಸ್ಮಿತ್, ವಿಲ್ಲಿಯಮ್, ಸಂಪಾದಕರು.

ದಿ ಹಾರ್ವರ್ಡ್ ಬುಕ್: ಸೆಲೆಕ್ಷನ್ಸ್ ಫ್ರಮ್ ತ್ರೀ ಸೆಂಚುರೀಸ್ (2ನೇ ಆವೃತ್ತಿ 1982). 499 ಪುಟಗಳು.

ಬೆಥೆಲ್, ಜಾನ್ T. ಹಾರ್ವರ್ಡ್ ಅಬ್ಸರ್ವ್ಡ್: ಆನ್ ಇಲ್ಲಸ್ಟ್ರೆಟೆಡ್ ಹಿಸ್ಟರಿ ಆಫ್ ದಿ ಯೂನಿವರ್ಸಿಟಿ ಇನ್ ದಿ ಟ್ವೇನ್ಟೀಯಥ್ ಸೆಂಚುರಿ , ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 1998, ISBN 0-674-37733-8

  • ಬಂಟಿಂಗ್, ಬೈನ್ ಬ್ರಿಡ್ಜ್. ಹಾರ್ವರ್ಡ್: ಆನ್ ಆರ್ಕಿಟೆಕ್ಚರಲ್ ಹಿಸ್ಟರಿ (1985). 350 ಪುಟಗಳು.
  • ಕಾರ್ಪೆಂಟರ್, ಕೆನ್ನೆತ್ E. ದಿ ಫಸ್ಟ್ 350 ಇಯರ್ಸ್ ಆಫ್ ದಿ ಹಾರ್ವರ್ಡ್ ಯೂನಿವರ್ಸಿಟಿ ಲೈಬ್ರರಿ: ಡಿಸ್ಕ್ರಿಪ್ಶನ್ ಆಫ್ ಆನ್ ಎಕ್ಸಿಬಿಶನ್ (1986). 216 ಪುಟಗಳು.
  • ಕುನೋ, ಜೇಮ್ಸ್ et al. ಹಾರ್ವರ್ಡ್ಸ್ ಆರ್ಟ್ ಮ್ಯೂಸಿಯಮ್ಸ್: 100 ಇಯರ್ಸ್ ಆಫ್ ಕಲೆಕ್ಟಿಂಗ್ (1996). 364 ಪುಟಗಳು.
  • ಎಲ್ಲಿಯಟ್, ಕ್ಲಾರ್ಕ್ A. ಹಾಗೂ ರಾಸಿಟೆರ್, ಮಾರ್ಗರೆಟ್ W., ಸಂಪಾದಕರುಗಳು. ಸೈನ್ಸ್ ಅಟ್ ಹಾರ್ವರ್ಡ್ ಯೂನಿವರ್ಸಿಟಿ: ಹಿಸ್ಟಾರಿಕಲ್ ಪೆರ್ಸ್ಪೆಕ್ಟೀವ್ಸ್ (1992). 380 ಪುಟಗಳು.
  • ಹಾಲ್, ಮ್ಯಾಕ್ಸ್. ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್: ಏ ಹಿಸ್ಟರಿ (1986). 257 ಪುಟಗಳು.
  • ಹಯ್, ಇದಾ. ಸೈನ್ಸ್ ಇನ್ ದಿ ಪ್ಲೆಸ್ಹರ್ ಗ್ರೌಂಡ್: ಏ ಹಿಸ್ಟರಿ ಆಫ್ ದಿ ಆರ್ನಾಲ್ಡ್ ಆರ್ಬೋರೆಟಂ (1995). 349 ಪುಟಗಳು.
  • ಹೊಯೇರ್ರ್, ಜಾನ್, ವೀ ಕಾಂಟ್ ಈಟ್ ಪ್ರೆಸ್ಟೀಜ್: ದಿ ವುಮನ್ ಹೂ ಆರ್ಗನೈಸ್ಡ್ ಹಾರ್ವರ್ಡ್; ಟೆಂಪಲ್ ಯೂನಿವರ್ಸಿಟಿ ಪ್ರೆಸ್, 1997, ISBN 1-56639-535-6
  • ಹೊವೆಲ್ಲ್ಸ್, ಡೊರೋಥಿ ಎಲಿಯ. ಏ ಸೆಂಚುರಿ ಟು ಸೆಲೆಬ್ರೇಟ್: ರಾಡ್‌ಕ್ಲಿಫ್ ಕಾಲೇಜ್, 1879-1979 (1978). 152 ಪುಟಗಳು.
  • ಕೆಲ್ಲರ್, ಮಾರ್ಟನ್, ಹಾಗೂ ಫಿಲ್ಲಿಸ್ ಕೆಲ್ಲರ್. ಮೇಕಿಂಗ್ ಹಾರ್ವರ್ಡ್ ಮಾಡ್ರನ್: ದಿ ರೈಸ್ ಆಫ್ ಅಮೇರಿಕಾಸ್ ಯೂನಿವರ್ಸಿಟಿ (2001), ಮೇಜರ್ ಹಿಸ್ಟರಿ ಕವರ್ಸ್ 1933 ಟು 2002 ಆನ್ಲೈನ್ ಆವೃತ್ತಿ
  • ಲೆವಿಸ್, ಹ್ಯಾರಿ R. ಎಕ್ಸಲೆನ್ಸ್ ವಿಥೌಟ್ ಏ ಸೋಲ್: ಹೌ ಏ ಗ್ರೇಟ್ ಯೂನಿವರ್ಸಿಟಿ ಫಾರ್ಗಾಟ್ ಎಜುಕೇಶನ್ (2006) ISBN 1-58648-393-5
  • ಮೋರಿಸನ್, ಸ್ಯಾಮ್ಯುಯೆಲ್ ಎಲಿಯಟ್. ತ್ರೀ ಸೆಂಚುರೀಸ್ ಆಫ್ ಹಾರ್ವರ್ಡ್, 1636-1936 (1986) 512 ಪುಟಗಳು; ಎಕ್ಸರ್ಪ್ಟ್ ಅಂಡ್ ಟೆಕ್ಸ್ಟ್ ಸರ್ಚ್
  • ಪೋವೆಲ್, ಆಥರ್ G. ದಿ ಅನ್ಸರ್ಟನ್ ಪ್ರೊಫೆಶನಲ್: ಹಾರ್ವರ್ಡ್ ಅಂಡ್ ದಿ ಸರ್ಚ್ ಫಾರ್ ಎಜುಕೇಶನಲ್ ಅಥಾರಿಟಿ (1980). 341 ಪುಟಗಳು.
  • ರೆಯಿಡ್, ರಾಬರ್ಟ್. ಇಯರ್ ಒನ್: ಆನ್ ಇಂಟಿಮೇಟ್ ಲುಕ್ ಇನ್ಸೈಡ್ ಹಾರ್ವರ್ಡ್ ಬಿಸ್ನೆಸ್ ಸ್ಕೂಲ್ (1994). 331 ಪುಟಗಳು.
  • ರೊಸೋವ್ಸ್ಕಿ, ನಿಟ್ಜ. ದಿ ಜ್ಯೂಯಿಶ್ ಎಕ್ಸ್ಪೀರಿಯನ್ಸ್ ಅಟ್ ಹಾರ್ವರ್ಡ್ ಅಂಡ್ ರಾಡ್‌ಕ್ಲಿಫ್ (1986). 108 ಪುಟಗಳು.
  • ಸೇಲಿಗ್ಮನ್, ಜೋಯೆಲ್. ದಿ ಹೈ ಸಿಟಡೆಲ್: ದಿ ಇನ್ಫ್ಲೂಯೆನ್ಸ್ ಆಫ್ ಹಾರ್ವರ್ಡ್ ಲಾ ಸ್ಕೂಲ್ (1978). 262 ಪುಟಗಳು.
  • ಸೋಲ್ಲೋರ್ಸ್, ವೆರ್ನೆರ್; ಟಿಟ್ಕಾಂಬ್, ಕಾಲ್ಡ್ ವೆಲ್; ಹಾಗೂ ಅಂಡರ್ವುಡ್, ಥಾಮಸ್ A., ಸಂಪಾದಕರುಗಳು. ಬ್ಲಾಕ್ಕ್ಸ್ ಅಟ್ ಹಾರ್ವರ್ಡ್: ಏ ಡಾಕ್ಯುಮೆಂಟರಿ ಹಿಸ್ಟರಿ ಆಫ್ ಆಫ್ರಿಕನ್-ಅಮೆರಿಕನ್ ಎಕ್ಸ್ಪೀರಿಯನ್ಸ್ ಅಟ್ ಹಾರ್ವರ್ಡ್ ಅಂಡ್ ರಾಡ್‌ಕ್ಲಿಫ್ (1993). 548 ಪುಟಗಳು.
  • , ಹೌ ಹಾರ್ವರ್ಡ್ ರೂಲ್ಸ್. ರೀಸನ್ ಇನ್ ದಿ ಸರ್ವೀಸ್ ಆಫ್ ಎಂಪೈರ್ , ಬಾಸ್ಟನ್: ಸೌತ್ ಎಂಡ್ ಪ್ರೆಸ್, 1989, ISBN 0-89608-283-0
  • ಉಲ್ರಿಚ್, ಲೌರೆಲ್ ಥ್ಯಾಚರ್, ಸಂಪಾದಕ. ಯಾರ್ಡ್ಸ್ ಅಂಡ್ ಗೇಟ್ಸ್: ಜೆಂಡರ್ ಇನ್ ಹಾರ್ವರ್ಡ್ ಅಂಡ್ ರಾಡ್‌ಕ್ಲಿಫ್ ಹಿಸ್ಟರಿ (2004). 337 ಪುಟಗಳು.
  • ವಿನ್ಸರ್, ಮೇರಿ P. ರೀಡಿಂಗ್ ದಿ ಶೇಪ್ ಆಫ್ ನೇಚರ್: ಕಂಪ್ಯಾರಿಟಿವ್ ಸೂಆಲಜಿ ಅಟ್ ದಿ ಅಗಸ್ಸಿಜ್ ಮ್ಯೂಸಿಯಂ (1991). 324 ಪುಟಗಳು.
  • ರೈಟ್, ಕಾನಾರ್ಡ್ ಎಡಿಕ್. ರೆವೆಲ್ಯೂಶನರಿ ಜನರೇಶನ್: ಹಾರ್ವರ್ಡ್ ಮೆನ್ ಅಂಡ್ ದಿ ಕಾನ್ಸಿಕ್ವೆನ್ಸಸ್ ಆಫ್ ಇಂಡಿಪೆನ್ಡೆನ್ಸ್ (2005). 298 ಪುಟಗಳು.

ಇವನ್ನೂ ನೋಡಿ

  • ಹಾರ್ವರ್ಡ್ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಮವಸ್ತ್ರ
  • ಹಾರ್ವರ್ಡ್ ವಿಶ್ವವಿದ್ಯಾನಿಲಯ ಪೋಲಿಸ್ ಇಲಾಖೆ
  • ಸೀಕ್ರೆಟ್ ಕೋರ್ಟ್ ಆಫ್ 1920

ಉಲ್ಲೇಖಗಳು

ಬಾಹ್ಯ ಕೊಂಡಿಗಳು

42°22′28″N 71°07′01″W / 42.37444°N 71.11694°W / 42.37444; -71.11694